Nalvadi Krishnaraja Wodeyar Information in Kannada | ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ

Nalvadi Krishnaraja Wodeyar Information in Kannada | ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ

Nalvadi Krishnaraja Wodeyar Information in Kannada, ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ, nalvadi krishnaraja wadiyar information in kannada,PDF,10TH

Nalvadi Krishnaraja Wodeyar Information in Kannada

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ 24ನೇ ರಾಜರು. ಇವರ ಆಳ್ವಿಕೆ 1902 ರಿಂದ 1940 ರವರೆಗೆ ನಡೆಯಿತು.

ನಾಲ್ವಡಿ ಕೃಷ್ಣರಾಜ ಒಡೆಯರು 1895ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ 10 ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನ ದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು.

ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು.

ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯದಲ್ಲಿ ಉತ್ತರಿಸಿ :

ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಕ್ತರಾದರು .

ಉ . ನಾಲ್ವಡಿ ಕೃಷ್ಣರಾಜ ಒಡೆಯರು 1895 ರಲ್ಲಿ ಪಟ್ಟಾಭಿಷಕ್ತರಾದರು

ನಾಲ್ವಡಿ ಕೃಷ್ಣರಾಜ ಒಡೆಯರು ಯಾವುದಕ್ಕಾಗಿ ಕಂಕಣ ಬದ್ಧರಾದರು ?

ಉ . ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾದರು .

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ ಯಾವುದು ?

ಉ . ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲ ವಿದ್ಯುತ್ ಕೇಂದ್ರ ಪ್ರಾರಂಭವಾಯಿತು .

ಆ . ಕೊಟ್ಟಿರುವ ಪ್ರಶ್ನೆಗಳಿಗೆ ಮೂರು – ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ :

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು ?

ಉ . ಗ್ರಾಮ ನಿರ್ಮಲೀಕರಣ , ವೈದ್ಯ ಸಹಾಯ , ವಿದ್ಯಾ ಪ್ರಚಾರ , ನೀರಿನ ಸೌಕರ್ಯ , ಪ್ರಯಾಣ ಸೌಲಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು .

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು ?

ಉ . 1900 ರಲ್ಲಿ ಶಿವನ ಸಮುದ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಕೇಂದ್ರ ಪ್ರಾರಂಭವಾಯಿತು . ಇದು ಭಾರತ ಮಾತ್ರವಲ್ಲದೆ ಏಷ್ಯಾ ಖಂಡದಲ್ಲೇ ಮೊದಲ ಜಲವಿದ್ಯುತ್ ಯೋಜನೆ .

1907 ರಲ್ಲಿ ವಾಣಿವಿಲಾಸ ಸಾಗರ ( ಮಾರಿಕಣಿವೆ ) ಕಟ್ಟಲ್ಪಟ್ಟಿತು . 1911 ರಲ್ಲಿ ಕೃಷ್ಣರಾಜ ಸಾಗರ ಇವರ ಮುಂಗಾಣೆಯ ಕೊಡುಗೆ .

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು – ಹತ್ತು ವಾಕ್ಯಗಳಲ್ಲಿ ಉತ್ತರಿಸಿ :

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಮಾದರಿ ಮೈಸೂರು ರಾಜ್ಯ ಹೇಗಾಯಿತು ?

ಉ . ನಾಲ್ವಡಿ ಕೃಷ್ಣರಾಜ ಒಡೆಯರು ದಿವಾನ್ ಕೆ . ಶೇಷಾದ್ರಿ ಅಯ್ಯರ್ , ದಿವಾನ್ ಸಿ . ರಂಗಾಚಾರ್ಲು ,

ದಿವಾನ್ ಸರ್ . ಎಂ . ವಿಶ್ವೇಶ್ವರಯ್ಯ ಮುಂತಾದವರ ಸಹಕಾರದೊಂದಿಗೆ ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ , ಪ್ರಜಾ ಪ್ರತಿನಿಧಿ ಸಭೆ ಜಾರಿಗೊಳಿಸಿದರು .

ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದರು . ಸ್ಥಳೀಯ ಸಂಸ್ಥೆಗಳು ಸ್ವಯಂ ಆಡಳಿತ ಕ್ಷೇತ್ರಗಳಾಗಿ ಜಾರಿಗೊಳಿಸಿದರು .

ಅನೇಕ ರೈಲು ಮಾರ್ಗಗಳನ್ನು ಪೂರೈಸಿದರು . ಅನೇಕ ಅಣೆಕಟ್ಟುಗಳನ್ನು ನೀರಾವರಿ ನಾಲೆಗಳನ್ನೂ , ಜಲ ವಿದ್ಯುತ್ ಕೇಂದ್ರಗಳನ್ನು ಸ್ಥಾಪಿಸಿದರು .

ಶಿಕ್ಷಣ ಕ್ಷೇತ್ರದಲ್ಲಿ ಉಚಿತ ವಿದ್ಯಾಭ್ಯಾಸ ಸೌಲಭ್ಯ , ಉಚಿತ ಆರೋಗ್ಯ ಸೌಲಭ್ಯ , ಸಾಮಾಜಿಕ ಪಿಡುಗುಗಳಲ್ಲಿ ಸ್ತ್ರೀ ಶೋಷಣೆ ತಡೆಗಟ್ಟಲು ಅನೇಕ ಸಾಮಾಜಿಕ ಕಾನೂನುಗಳನ್ನು ಜಾರಿಗೊಳಿಸಿದರು . ಹೀಗೆ ಇವರ ಕಾಲದಲ್ಲಿ ಇಡೀ ಭರತ

ಈ ಸಂದರ್ಭ ಸಹಿತ ಸ್ವಾರಸ್ಯವನ್ನು ವಿವರಿಸಿ

“ ಸಾಮಾಜಿಕ ಕಾನೂನುಗಳ ಹರಿಕಾರ . ”

ಉ , ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಎಂಬ ಪಾಠದಿಂದ ಆರಿಸಲಾಗಿದೆ . ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಮೈಸೂರು ಸಂಸ್ಥಾನವು ಸರ್ವತೋಮುಖ ಅಭಿವೃದ್ಧಿ ಸಾಧಿಸಿ ಮಾದರಿ ಮೈಸೂರು ಎಂಬ ಕೀರ್ತಿ ಪಡೆದಾಗ ಈ ಮಾತು ಬಂದಿದೆ .

“ ಅವರ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು . ”

ಉ . ಈ ವಾಕ್ಯವನ್ನು ಡಿ . ಎಸ್ . ಜಯಪ್ಪರವರು ಬರೆದಿರುವ ‘ ದಿವಾನ್ ಸರ್ . ಎಂ . ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ.

ಭಾಗ್ಯಶಿಲ್ಪಿ ಸರ್ . ಎಂ . ವಿಶ್ವೇಶ್ವರಯ್ಯ ಎಂಬ ಪಾಠದಿಂದ ಆರಿಸಲಾಗಿದೆ . ಪೂನಾದ ಮುಥಾ ಕಾಲುವೆಗೆ ನೀರಿನ ನೆಲೆಯಾಗಿದ್ದ ಪೀಪ್ ‘ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು .

ಇದರ ಅನ್ವೇಷಣೆ ಅವರ ಸಾಧನೆ ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿತು ಎಂದು ಲೇಖಕರು ಹೇಳಿದ್ದಾರೆ .

“ ಆದರ್ಶ ಪುರುಷರೊಬ್ಬರು ದಿವಾನರಾದದ್ದು ಮೈಸೂರು ಸಂಸ್ಥಾನದ ಪುಣ್ಯ ವಿಶೇಷವೇ ಸರಿ . ”

ಉ . ಈ ವಾಕ್ಯವನ್ನು ಡಿ . ಎಸ್ . ಜಯಪ್ಪರವರು ಬರೆದಿರುವ ‘ ದಿವಾನ್ ` ಸರ್ . ಎಂ . ವಿಶ್ವೇಶ್ವರಯ್ಯನವರ ಕಾರ್ಯ ಸಾಧನೆಗಳು ‘ ಎಂಬ ಕೃತಿಯಿಂದ ಆರಿಸಲಾಗಿದೆ .

ಭಾಗ್ಯಶಿಲ್ಪಿ ಸರ್ . ಎಂ . ವಿಶ್ವೇಶ್ವರಯ್ಯ ಎಂಬ ಪಾಠದಿಂದ ಆರಿಸಲಾಗಿದೆ . ವಿಶ್ವೇಶ್ವರಯ್ಯನವರು ದಿವಾನ್‌ರಾಗಿ ಆಡಳಿತದಲ್ಲಿ ಸುಧಾರಣೆ ತಂದು ಮೈಸೂರನ್ನು ಮಾದರಿಯಾಗಿ ಮಾಡಿದ್ದನ್ನು ಕಂಡ ಜನರು ಈ ಮಾತನ್ನು ಹಾಡಿ ಹೊಗಳಿದ್ದಾರೆ .

“ ಮೊಟ್ಟ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ”

ಉ . ಈ ವಾಕ್ಯವನ್ನು ಭಾಗ್ಯಶಿಲ್ಪಿಗಳು ಪಾಠದಿಂದ ಆರಿಸಲಾಗಿದೆ . ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಜಾರಿಯಾದ ಸಾಮಾಜಿಕ ಕಾನೂನುಗಳ ಬಗ್ಗೆ ತಿಳಿಸುತ್ತಾ ಸ್ತ್ರೀಯರ ಏಳಿಗೆಗಾಗಿ ಜಾರಿ ಮಾಡಿದ ಕಾನೂನುಗಳ ಬಗ್ಗೆ ತಿಳಿಸುವಾಗ ಈ ವಾಕ್ಯ ಬಂದಿದೆ .

ಉ . ಬಿಟ್ಟ ಸ್ಥಳಗಳನ್ನು ಸರಿಯಾದ ಪದದಿಂದ ತುಂಬಿ .

1 : ನಾಲ್ವಡಿ ಕೃಷ್ಣರಾಜ ಒಡೆಯರ್‌ರವರಿಗೆ ಏಜೆಂಟರಾಗಿ ಕಾರ್ಯ ನಿರ್ವಹಿಸಿದವರು

ಮಹಾರಾಣಿ ವಾಣಿವಿಲಾಸ

1914 ರಲ್ಲಿ ಶಾಲಾ ಪ್ರವೇಶಕ್ಕೆ ………… ನಿಷೇದವಾಯಿತು

ಜಾತಿ ಪರಿಗಣನೆ

ಸರ್‌.ಎಂ. ವಿಶ್ವೇಶ್ವರಯ್ಯನವರ ಬಗ್ಗೆ

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *