ಮೂಲಭೂತ ಕರ್ತವ್ಯಗಳು | Fundamental Duties in Kannada

ಮೂಲಭೂತ ಕರ್ತವ್ಯಗಳು | Fundamental Duties in Kannada | Mulabhutha Kartavya Galu in Kannada

Mulabhutha Kartavya Galu in Kannada, Fundamental Duties in Kannada, Fundamental Duties in Kannada pdf, 11 fundamental duties in kannada language, 11 fundamental duties kannada, 11 ಮೂಲಭೂತ ಕರ್ತವ್ಯಗಳು ಯಾವುವು, ಮೂಲಭೂತ ಕರ್ತವ್ಯಗಳು ಪ್ರಶ್ನೆ ಉತ್ತರ, fundamental duties questions in kannada

Mulabhutha Kartavya Galu in Kannada

Spardhavani Telegram

ಭಾರತೀಯ ಸಂವಿಧಾನದಲ್ಲಿ ಉಲ್ಲೇಖಿಸಲಾದ ಮೂಲಭೂತ ಕರ್ತವ್ಯಗಳು ಸಂವಿಧಾನದ ಅವಿಭಾಜ್ಯ ಅಂಗವಾಗಿದೆ. ಮೂಲಭೂತ ಕರ್ತವ್ಯಗಳು ದೇಶದ ನಾಗರಿಕರಿಗೆ ನೈತಿಕವಾಗಿ ಬಾಧ್ಯತೆಗಳನ್ನು ನಿರ್ಣಯಿಸುವ ಸಾಧನಗಳಾಗಿವೆ. ದೇಶಪ್ರೇಮವನ್ನು ಉತ್ತೇಜಿಸಲು ಮತ್ತು ಭಾರತದ ಸಾರ್ವಭೌಮತೆಯನ್ನು ಉನ್ನತೀಕರಿಸುವ ಸಲುವಾಗಿ ಅವುಗಳನ್ನು ಲಭ್ಯಗೊಳಿಸಲಾಗಿದೆ.

ಈ ಕರ್ತವ್ಯಗಳನ್ನು ಸಂವಿಧಾನದ 42 ನೇ ಮತ್ತು 86 ನೇ ತಿದ್ದುಪಡಿಗಳಲ್ಲಿ ಸಂವಿಧಾನವು ಒದಗಿಸಿದೆ. ಕರ್ತವ್ಯಗಳು ಯಾವುದೇ ಕಾನೂನು ವಿವಾದಗಳನ್ನು ಹೊಂದಿರುವುದಿಲ್ಲ ಆದರೆ ಪ್ರತಿಯೊಬ್ಬ ನಾಗರಿಕನು ಅನುಸರಿಸಬೇಕಾದ ಉದ್ದೇಶವನ್ನು ಹೊಂದಿದೆ.

ಮೂಲಭೂತ ಕರ್ತವ್ಯಗಳು | Fundamental Duties in Kannada | Mulabhutha Kartavya Galu in Kannada
ಮೂಲಭೂತ ಕರ್ತವ್ಯಗಳು | Fundamental Duties in Kannada questions and answers

ಮೂಲಭೂತ ಕರ್ತವ್ಯಗಳು ನೋಟ್ಸ್

  • ಭಾರತದ ಸಂವಿಧಾನಕ್ಕೆ ‘ 4ಎ ‘ ಭಾಗವನ್ನು ಸೇರ್ಪಡೆ ಮಾಡಿ 5I ಎ ವಿಧಿಯ ಅಡಿಯಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರ್ಪಟ ಮಾಡಲಾಯಿತು .
  • 1976 42 ನೇ ತಿದ್ದುವ ಮೂಲಕ ಭಾರತದ ಸಂವಿಧಾನಕ್ಕೆ 4 ಎ ವಿಧಿಯನ್ನು ಸೇರಿಸಿ 51ಎ ವಿಧಿ ಅಡಿಯಲ್ಲಿ 10 ಮೂಲಭೂತ ಕರ್ತವ್ಯಗಳನ್ನು ಸೇಪ್ರಡೆ ಮಾಡಲಾಯಿತು .
  • ಮೂಲಭೂತ ಕರ್ತವನ್ನು ರಷ್ಯಾದ ವಿಧಾನದಿಂದ ಎರವಲು ಪಡೆಯಲಾಗಿದೆ .
  • ಭಾರತ ದೇಶವು ಮೂಲಭೂತ ಕರ್ತವ್ಯಗಳನ್ನು ಸ್ವರ್ಣಸಿಂಗ್ ಸಮಿತಿಯನ್ನು ನೇಮಕ ಮಾಡಿ ಅದರ ಶಿಫಾರಸ್ಸಿನಂತೆ ಅಳವಡಿಸಿಕೊಂಡಿತು .
  • ಪ್ರಸ್ತುತವಾಗಿ ಮೂಲಭೂತ ಕರ್ತವ್ಯಗಳು 11 ಇವೆ .
  • 6-14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕೊಡಿಸುವುದು ಪೋಷಕರ ಕರ್ತವ್ಯವನ್ನಾಗಿಸಿ 86 ನೇ ತಿದ್ದುಪಡಿ 2002 ರಲ್ಲಿ 11 ನೇ ಮೂಲಭೂತ ಕರ್ತವ್ಯವನ್ನಾಗಿ ಸೇರ್ಪಡೆಮಾಡಲಾಯಿತು.
  • ಮೂಲಭೂತ ಕರ್ತವ್ಯಗಳನ್ನು ಭಾರತದಲ್ಲಿ ಅಳವಡಿಸಿಕೊಳ್ಳಬೇಕೆಂದು ಆಂತರಿಕ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾಗಾಂಧಿಯವರಿಗೆ ಮನವರಿಕೆಯಾಯಿತು ಅದಕ್ಕಾಗಿ ಅವರು ಮೂಲಭೂತ ಕರ್ತವ್ಯಗಳನ್ನು ಸೇರಿಸಲು ಸ್ವರ್ಣ ಸಿಂಗ್‌ರವರ ಸಮಿತಿಯನ್ನು ನೇಮಿಸಿದ್ದರು .

ಸಂವಿಧಾನವು ಸೂಚಿಸಿದ ಮೂಲಭೂತ ಕರ್ತವ್ಯಗಳು.

1 ) ಸಂವಿಧಾನವನ್ನು ಅನುಸರಿಸುವುದು ಹಾಗೂ ಅದರ ಆದರ್ಶಗಳನ್ನು ಮತ್ತು ಸಂಸ್ಥೆಗಳನ್ನು , ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆಯನ್ನು ಗೌರವಿಸುವುದು.

2 ) ನಮ್ಮ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸ್ಫೂರ್ತಿದಾಯಕವಾಗಿದ್ದ ಉದಾತ್ತ ಆದರ್ಶಗಳನ್ನು ಗೌರವಿಸುವುದು ಮತ್ತು ಅನುಸರಿಸುವುದು.

3 ) ಭಾರತದ ಸಾರ್ವಭೌಮತ್ವವನ್ನು ಐಕ್ಯತೆಯನ್ನು ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದು ಹಾಗೂ ಸಂರಕ್ಷಿಸುವುದು.

4 ) ದೇಶವನ್ನು ರಕ್ಷಿಸುವುದು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ಕರೆ ಬಂದಾಗ ಹಾಗೆ ಮಾಡುವುದು.

5 ) ಧಾರ್ಮಿಕ , ಭಾಷಾ ಮತ್ತು ಪ್ರಾದೇಶಿಕ ಅಥವಾ ಜಾತಿ ಪಂಗಡಗಳ ಭಿನ್ನತೆಗಳಿಂದ ಅತೀತವಾಗಿ , ಭಾರತದ ಎಲ್ಲಾ ಜನತೆಯಲ್ಲಿ ಸಾಮರಸ್ಯವನ್ನು ಮತ್ತು ಸಮಾನ ಭ್ರಾತೃತ್ವದ ಸ್ತ್ರೀಯರ ಗೌರವಕ್ಕೆ ಕುಂದುಂಟು ಮಾಡುವ ಆಚರಣೆಗಳನ್ನು ಬಿಟ್ಟುಬಿಡುವುದು.

6 ) ನಮ್ಮ ಸಮ್ಮಿಶ್ರ ಸಂಸ್ಕೃತಿಯ ಭವ್ಯ ಪರಂಪರೆಯನ್ನು ಗೌರವಿಸುವುದು ಹಾಗೂ ಕಾಪಾಡುವುದು.

7 ) ಅರಣ್ಯಗಳು , ಸರೋವರಗಳು , ನದಿಗಳು ಮತ್ತು ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ಸಂರಕ್ಷಿಸುವುದು ಹಾಗೂ ಅಭಿವೃದ್ಧಿಗೊಳಿಸುವುದು ಮತ್ತು ಪ್ರಾಣಿಗಳಿಗೆ ಅನುಕಂಪ ತೋರಿಸುವುದು.

8 ) ವೈಜ್ಞಾನಿಕ ಮನೋಭಾವನೆ , ಮಾನವೀಯತೆ , ಜಿಜ್ಞಾಸೆಯ ಮತ್ತು ಸುಧಾರಣೆಯ ಪ್ರವೃತ್ತಿ- ಇವುಗಳನ್ನು ಅಭಿವೃದ್ಧಿಗೊಳಿಸುವುದು.

9 ) ಸಾರ್ವಜನಿಕ ಸ್ವತ್ತನ್ನು ರಕ್ಷಿಸುವುದು ಮತ್ತು ಹಿಂಸೆಯನ್ನು ತ್ಯಜಿಸುವುದು.

10 ) ರಾಷ್ಟ್ರವು ನಿರಂತರವಾಗಿ ಸಾಧನೆಯ ಮತ್ತು ಸಿದ್ಧಿಯ ಉನ್ನತ ಮಟ್ಟಗಳನ್ನು ತಲುಪಲು ವೈಯಕ್ತಿಕ ಹಾಗೂ ಸಾಮೂಹಿಕ ಚಟುವಟಿಕೆಯ ಎಲ್ಲಾ ಕಾರ್ಯಕ್ಷೇತ್ರಗಳಲ್ಲಿ ಉನ್ನತಿಗಾಗಿ ಶ್ರಮಿಸುವುದು.

11 ) 6 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯವಾಗಿದೆ.

ಭಾರತದಲ್ಲಿ ಎಷ್ಟು ಮೂಲಭೂತ ಕರ್ತವ್ಯಗಳಿವೆ?

ಭಾರತೀಯ ಸಂವಿಧಾನದಲ್ಲಿ ಒಟ್ಟು 11 ಮೂಲಭೂತ ಕರ್ತವ್ಯಗಳನ್ನು ಉಲ್ಲೇಖಿಸಲಾಗಿದೆ.

ಯಾವ ವರ್ಷದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು?

ಯಾವ ವರ್ಷದಲ್ಲಿ ಮೂಲಭೂತ ಕರ್ತವ್ಯಗಳನ್ನು ಸೇರಿಸಲಾಯಿತು?

ಇತರೆ ವಿಷಯಗಳು

Leave a Reply

Your email address will not be published. Required fields are marked *