ಸಂವಿಧಾನದ ಪ್ರಮುಖ ಲಕ್ಷಣಗಳು | Key Features Of The Constitution

ಭಾರತದ ಸಂವಿಧಾನ ಲಕ್ಷಣಗಳು ಪ್ರಶ್ನೋತ್ತರಗಳು । Bharatada Samvidhana Lakshanagalu in Kannada

ಭಾರತದ ಸಂವಿಧಾನ ಲಕ್ಷಣಗಳು, bharatada samvidhana lakshanagalu in kannada, salient features of indian constitution in kannada pdf, Essay, notes, prabandha, indian constitution in kannada notes

Bharatada samvidhana lakshanagalu in kannada

Spardhavani Telegram
 • ಫ್ರೆಂಚ್ ಕ್ರಾಂತಿಯಿಂದ ( ಫ್ರೆಂಚ್.ಸ ) ( 1789-1799ರಲ್ಲಿ ಪ್ರಸ್ತಾವನೆಯಲ್ಲಿರುವ ಗಣರಾಜ್ಯ , ಸ್ವಾತಂತ್ರ್ಯ , ಸಮಾನತೆ , ಬಾತೃತ್ವ ಎಂಬ ಪದವನ್ನು ಎರವಲು ಪಡೆಯಲಾಗಿದೆ
 • 1917 ರ ರಷ್ಯಾದ ಕ್ರಾಂತಿಯಿಂದ ಪ್ರಸ್ತಾವನೆಯ ನ್ಯಾಯ ( ರಾಜಕೀಯ ಆರ್ಥಿಕ ಸಮಾಜಿಕ ) ಎಂಬ ಧೈಯಗಳನ್ನು ಎರವಲು ಪಡೆಯಲಾಯಿತು .
 • ಅಮೆರಿಕಾ ಸಂವಿಧಾನವು ಕೇವಲ 7 ವಿಧಿಗಳನ್ನು ಒಳಗೊಂಡಿದ್ದು , ಜಗತ್ತಿನ ಅತ್ಯಂತ ಸಣ್ಣ ಲಿಖಿತ ಸಂವಿಧಾನವೆಂದು , ಸೆ .17,1787 ರಲ್ಲಿ ಅಳವಡಿಸಿಕೊಂಡಿತು .
 • ಧರ್ಮ ನಿರಪೇಕ್ಷಿತ ಎಂದರೆ ಯಾವ ಧರ್ಮವು ಹೆಚ್ಚು , ಯಾವ ಧರ್ಮವು ಕಡಿಮೆಯಲ್ಲ , ಎಲ್ಲವೂ ಸಮಾನ ಎಂಬ ಭಾವನೆ .
 • ಜರ್ಮನಿಯ ವೈಮರ್ ಸಂವಿಧಾನದಿಂದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳ ವಚಾ ಮಾಡುವುದು ಎರವಲು ಪಡೆಯಲಾಗಿದೆ .

ಭಾರತದ ಸಂವಿಧಾನ ಲಕ್ಷಣಗಳು

 • ರಷ್ಯಾಸಂವಿಧಾನದಿಂದ ಮೂಲಭೂತ ಕರ್ತವ್ಯಗಳು , ಪ್ರಸ್ತಾವನೆಯಲ್ಲಿರುವ ರಾಜಕೀಯ ಸಮಾಜಿಕ ನ್ಯಾಯದ ಧೈಯಗಳು ಎರವಲು ಪಡೆಯಲಾಗಿದೆ .
 • ದಕ್ಷಿಣ ಆಫ್ರಿಕಾದ ಸಂವಿಧಾನದಿಂದ ಸಂವಿಧಾನದ ತಿದ್ದುಪಡಿ ವಿಧಾನ ಹಾಗೂ ರಾಜ್ಯಸಭೆ ಸದಸ್ಯರ ಚುನಾವಣೆಗಳನ್ನು ಎರವಲು ಪಡೆಯಲಾಗಿದೆ .
 • ಕೆನಡಾ ದೇಶದ ಸಂವಿಧಾನದಿಂದ ಪ್ರಬಲಗೊಂಡ ಕೇಂದ್ರಕೇಂದ್ರದ ಶೇಷಾಧಿಕಾರ ಕೇಂದ್ರದಿಂದ ರಾಜ್ಯಪಾಲರ ನೇಮಕ , ಎರವಲು ಪಡೆಯಲಾಗಿದೆ .
 • ಜಪಾನ್ ಸಂವಿಧಾನದಿಂದ ಸುಪ್ರೀಂಕೋರ್ಟಿನ ನ್ಯಾಯಾಧೀಕರಣ ಸಲಹೆ ಕಾನೂನಿನಿಂದ ರಚಿಸಿದ ವಿಧಾನಗಳನ್ನು ಎರವಲು ಪಡೆಯಲಾಗಿದೆ .
 • ಬ್ರಿಟನ್ನಿನ ಪಾರ್ಲಿಮೆಂಟನ್ನು ‘ ವೆಸ್ಟ್ ಮಿನಿಸ್ಟರ್ ‘ ಪಾರ್ಲಿಮೆಂಟ್ ಎನ್ನುವರು . ಕಾರಣ ಅದು ವೆಸ್ಟ್ ಮಿನಿಸ್ಟರ್ ನಗರದಲ್ಲಿದೆ .

Bharatada Samvidhana Lakshanagalu in Kannada

ಸಂವಿಧಾನದ ಪ್ರಮುಖ ಲಕ್ಷಣಗಳು | Key Features Of The Constitution
ಸಂವಿಧಾನದ ಪ್ರಮುಖ ಲಕ್ಷಣಗಳು | Key Features Of The Constitution
 • ರಷ್ಯಾದ ಕ್ರಾಂತಿಯು ಗ್ರೆಗೊರಿಯನ್ ಕ್ಯಾಲೆಂಡರ್ ಪ್ರಕಾರ 1917 ರ ಮಾರ್ಚ್‌ನಲ್ಲಿ ಜರುಗಿತು .
 • ಲಿಖಿತವಲ್ಲದ ಸಂವಿಧಾನಗಳನ್ನು ಹೊಂದಿರುವ ದೇಶ – ನ್ಯೂಜಿಲೆಂಡ್ , ಯು.ಕೆ , ಇಸ್ರೇಲ್ ,
 • ಕುದ್ದಿಯಾ ಅಜುಲ್ಲಾ ರಸುಲ್ಲಾ ಸಂವಿಧಾನದ ರಚನಾ ಸಭೆಯಲ್ಲಿದ್ದ ಏಕೈಕ ಮುಸ್ಲಿಂ ಮಹಿಳೆ ,
 • ಭಾರತದ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಆಂಧ್ರಪ್ರದೇಶ ಪಿಂಗಾಲಿ ವೆಂಕಯ್ಯ .
 • 1600 ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾಯಿತು .
 • 1600 ಡಿ .31 ರಂದು ಬ್ರಿಟನ್ ರಾಣಿ ಎಲಿಜಬೆತ್ ರವರು ಭಾರತ ಹಾಗೂ ಇತರ ಪೂರ್ವ ದೇಶಗಳೊಂದಿಗೆ ವ್ಯಾಪಾರ ಮಾಡಲು ಸನ್ನದ್ದು ನೀಡಿದರು .
 • ಭಾರತಕ್ಕೆ ವ್ಯಾಪಾರಕ್ಕೆ ಬಂದವರಲ್ಲಿ , ಪೂರ್ಚುಗೀಸರು ಮೊದಲಿಗರು , ಎರಡನೇಯವರು ಹಾಲೆಂಡಿನ ಡಚ್ಚರು ಮೂರನೇಯವರು ಬ್ರಿಟೀಷರು, ನಾಲ್ಕನೇಯವರು ಫ್ರೆಂಚರು .
 • ಬ್ರಿಟಿಷರು ಜಾರಿಗೆ ತಂದ ಕಾಯ್ದೆಗಳೆಂದರೆ
ಭಾರತದ ಸಂವಿಧಾನ ಲಕ್ಷಣಗಳು ಪ್ರಶ್ನೋತ್ತರಗಳು । Bharatada Samvidhana Lakshanagalu in Kannada
Bharatada Samvidhana Lakshanagalu in Kannada Questions and answers

1 ) 1773 ರ ರೆಗ್ಯೂಲೇಟಿಂಗ್ ಕಾಯ್ದೆ

2 ) 1784 ರ ಪಿಟ್ಸ್ ಇಂಡಿಯಾ ಕಾಯ್ದೆಗಳು

3 ) 1813 ರ ಚಾರ್ಟರ್ ಕಾಯ್ದೆ

4 ) 1833 ರ ಚಾರ್ಟರ್ ಕಾಯ್ದೆ

5 ) 1853 ರ ಚಾರ್ಟರ್ ಕಾಯ್ದೆ

6 ) 1858 ರ ಭಾರತ ಸರ್ಕಾರ ಕಾಯ್ದೆ

7 ) 1861 , ಕಾಯ್ದೆ ,1892 ರ ಭಾರತ ಕೌನ್ಸಿಲ್ ಕಾಯ್ದೆ

8 ) 1909 ರ ಮಿಂಟೋ – ಮಾರ್ಲೆ ಕಾಯ್ದೆ

9 ) 1919 ರ ಮಾಂಟೆಗೊ ಚೇಮ್‌ಫರ್ಡ್

10 ) 1935 ರ ಭಾರತ ಸರ್ಕಾರ ಕಾಯ್ದೆ ,

Bharatada Samvidhana Lakshanagalu in Kannada

 • ಸರ್ ಎಡ್ರಿನ್ ಮಾಂಟೆಗೊರವರು ಭಾರತಕ್ಕೆ ಸೆಕ್ರೆಟರಿ ಆಗಿದ್ದರು . ಲಾರ್ಡ್ ಚೇಮ್ಸ್‌ಫರ್ಡ್‌ರವರು ಭಾರತದ ವೈಸ್‌ರಾಯ್ ಆಗಿದ್ದರು .
 • ಮೊದಲ ಮಹಾಯುದ್ಧವು 28 , ಜುಲೈ , 1914 ರಿಂದ 11.ನ , 1918 ರವರೆಗೆ ನಡೆಯಿತು .
 • 1919 ಜೂ .28 ರಂದು ವರ್ಸೇಲ್ಸ್ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮೊದಲ ಮಹಾಯುದ್ಧವು ನಿಂತು ಹೋಯಿತು .
 • 1919 ರ ಮಾಂಟೆಗೊ ಚೇಮ್ಸ್‌ಫರ್ಡ್ ಕಾಯ್ದೆ ಪ್ರಕಾರ “ ದ್ವಿ ಸರ್ಕಾರ ” ಪದ್ಧತಿ ಜಾರಿಗೆ ಬಂದಿತು .
 • ಸೈಮನ್ ಆಯೋಗವು 1927 ಫೆಬ್ರವರಿ 3 ರಂದು ಬಾಂಬೆಗೆ ಬಂದಿಳಿಯಿತು .
 • ಲಾಲಲಜಪತ ರಾಯ್‌ರವರು ಈ ಪ್ರತಿಭಟನೆಯಲ್ಲಿ ಬ್ರಿಟಿಷ್ ಪೋಲಿಸ್ ಅಧಿಕಾರಿ ಸ್ಯಾಂಡರ್ಸ್ ಮಾಡಿಸಿದ ಲಾಠಿ ಪ್ರಹಾರದಿಂದ 1928 ನವಂಬರ್ 17 ರಂದು ನಿಧನರಾದರು .
 • ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857 ಮೇ 10 ರಂದು ಮೀರತ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಜರುಗಿತು .
 • 1885 ರಲ್ಲಿ ರಾಷ್ಟ್ರೀಯ ಕಾಂಗ್ರೇಸ್ ಸ್ಥಾಪನೆಯಾಯಿತು .
 • ಸುಪ್ರೀಂಕೋರ್ಟ್ 26.ಮಾರ್ಚ್ , 1774 ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಯಾಯಿತು .
 • 1773 ರಿಂದ 1858 ರವರೆಗಿನ ಬ್ರಿಟಿಷರು ಜಾರಿಗೆ ತಂದ ಕಾಯ್ದೆಗಳನ್ನು ಕಂಪನಿ ಕಾಯ್ದೆಗಳು ಎನ್ನುತ್ತಾರೆ .
 • 1773 , ಅ .20 ರಂದು ವಾರನ್ ಹೇಸ್ಟಿಂಗ್‌ರವರು ಬಂಗಾಳದ ಮೊದಲ ಗೌರ್‌ರ್ ಜನರಲ್ ಆಗಿದ್ದರು .
 • 1774 ರಿಂದ 1833 ರವರೆಗಿನ ಗೌರ‌ ಜನರಲ್‌ಗಳನ್ನು ಗೌರ‌ ಆಫ್‌ ದಿ ಪ್ರೆಸಿಡೆನ್ಸ್ ಆಫ್ ಪೋರ್ಟ್‌ವಿಲಿಯಂ ( ಬಂಗಾಳ ) ಎಂದು ಕರೆಯುತ್ತಿದ್ದರು .
 • 1833 ರಿಂದ 1858 ರವರೆಗೆ ಗೌರರ್ ಜನರಲ್ ಆಫ್ ಇಂಡಿಯಾ ಎಂದು ಕರೆಯುತ್ತಿದ್ದರು .
 • ವಿಲಿಯಂ ಬೆಂಟಿಕ್‌ರವರು ( 1833 ರಿಂದ 1835 ರವರೆಗೆ ) ಮೊಟ್ಟ ಮೊದಲ ಭಾರತದ ಗೌರರ್ ಜನರಲ್ ಆಗಿ ನೇಮಕವಾಗಿದ್ದರು .
 • 1858 ರಿಂದ 1947 ರವರೆಗಿನ ಬ್ರಿಟಿಷರು ಮಾಡಿದ ಕಾಯ್ದೆಗಳನ್ನು ಬ್ರಿಟಿಷ್ ಸರ್ಕಾರದ ಕಾಯ್ದೆ ” ಗಳೆಂದು ಕರೆಯುತ್ತಾರೆ .

Bharatada Samvidhana Lakshanagalu in Kannada

 • ಆ .2 , 1858 ರಂದು ಬ್ರಿಟಿಷ್ ಸಂಸತ್ತಿನಲ್ಲಿ ಕಾಯ್ದೆಯನ್ನು ಅಂಗೀಕರಿಸಿ ಭಾರತಕ್ಕೆ 1858 ರ ಭಾರತ ಸರ್ಕಾರ ಕಾಯ್ದೆಯನ್ನು ಜಾರಿಗೊಳಿಸಿದರು .
 • ಬ್ರಿಟಿಷ್ ರಾಣಿ ವಿಕ್ಟೋರಿಯಾರವರು ನ .1 , 1858 ರಲ್ಲಿ ಒಂದು ಘೋಷಣೆಯನ್ನು ಹೊರಡಿಸಿದರು ಆ ಘೋಷಣೆಯನ್ನೇ ವಿಕ್ಟೋರಿಯಾ ಘೋಷಣೆ ಎನ್ನುವರು .
 • 1858 ರಿಂದ ಕಂಪನಿ ಆಡಳಿತವು ಬ್ರಿಟನ್‌ಗೆ ವರ್ಗಾವಣೆ ಆಯಿತು .
 • ಭಾರತದ ಮೊಟ್ಟ ಮೊದಲ ವೈಸರಾಯ್ ಆಗಿ “ ಲಾರ್ಡ್ ಕ್ಯಾನಿಂಗ್ ನೇಮಕಗೊಂಡರು .
 • 1909 ರಲ್ಲಿ ಜಾರಿಗೆ ತಂದ ಕಾಯ್ದೆಯನ್ನು ‘ ಮಿಂಟೋ – ಮಾರ್ಲೆ ಸುಧಾರಣೆ ‘ ( ಭಾರತದ ಕೌನ್ಸಿಲ್ ಆಕ್ಸ್ ) ಎನ್ನುವರು .
 • ಮುಸ್ಲಿಂರಿಗೆ 1909 ರ ಕಾಯ್ದೆಯಲ್ಲಿ ಮುಸ್ಲಿಂರಿಗೆ ಪ್ರತ್ಯೇಕ ಚುನಾವಣಾ ಪ್ರಾತಿನಿಧ್ಯವನ್ನು ನೀಡುವ ‘ ಪ್ರತ್ಯೇಕ ಚುನಾವಣಾ ಮತಗಟ್ಟೆ ‘ ಜಾರಿಗೆ ತರಲಾಯಿತು .
 • ಮಿಂಟೋರವರನ್ನು “ Father of communal Electrorate ” ಎನ್ನುವರು . ಸತ್ಯೇಂದ್ರ ಪ್ರಸಾದ್ ಸಿನ್ಹಾರವರು ಮೊದಲ ಭಾರತೀಯ ವೈಸ್‌ರಾಯ್ ಕಾರ್ಯಕಾರಿ ಮಂಡಳಿಗೆ ಕಾನೂನು ಸದಸ್ಯರಾಗಿ ಸೇರ್ಪಡೆಯಾದರು .
 • 1919 ರ ಭಾರತ ಸರ್ಕಾರ ಕಾಯ್ದೆಯನ್ನು ಮಾಂಟೊ – ಚೇಮ್ಸ್ಫರ್ಡ್ ಸುಧಾರಣೆ ಎನ್ನುವರು .
 • ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ 1920 , ಅಕ್ಟೋಬರ್ .31 ರಂದು ಮುಂಬೈನಲ್ಲಿ ನಡೆದ ಮೊದಲ ಅಧಿವೇಶನದ ಅಧ್ಯಕ್ಷತೆಯನ್ನು ಲಾಲಲಜಪತರಾಯ್‌ರವರು ವಹಿಸಿದ್ದರು .
 • ಸೈಮನ್ ಆಯೋಗವು 1929 ಏ .14 ರಂದು ಇಂಗ್ಲೆಂಡಿಗೆ ವಾಪಸ್ಸಾಯಿತು .
 • ಜಲಿಯನ್ ವಾಲಾಬಾಗ್ ದುರಂತವು ಏ .13 , 1919 ರಲ್ಲಿ ಪಂಜಾಬ್‌ನ ಅಮೃತ ಸರದ ಬಳಿ ಜರುಗಿತು .
 • ಏಪ್ರಿಲ್ .1 , 1935 ರಲ್ಲಿ ಭಾರತದ ರಿಸರ್ವ್ ಬ್ಯಾಂಕ್‌ನ್ನು ಸ್ಥಾಪಿಸಲಾಯಿತು .
 • Hilton young Commission ನೀಡಿದ ವರದಿ ಆಧರಿಸಿ ರಿಸರ್ವ್ ಬ್ಯಾಂಕ್‌ನ್ನು ಭಾರತದಲ್ಲಿ ಸ್ಥಾಪಿಸಲಾಯಿತು .
 • 1930 , 1931 , 1932 ರಲ್ಲಿ ಲಂಡನ್ನಿನಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದವು .
 • ಮೂರು ದುಂಡು ಮೇಜಿನ ಸಮ್ಮೇಳನಗಳಲ್ಲಿ ಭಾಗವಹಿಸಿದ್ದವರು – ಡಾ.ಬಿ.ಆರ್.ಅಂಬೇಡ್ಕರ್‌ರವರು .
 • ಮೊದಲ ದುಂಡು ಮೇಜಿನ ಸಮ್ಮೇಳನವನ್ನು ಉದ್ಘಾಟಿಸಿದವರು ಬ್ರಿಟನ್ ದೊರೆ ಜಾರ್ಜ್‌
 • ಮೊದಲ ದುಂಡು ಮೇಜು ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದವರು -ಬ್ರಿಟನ್ ಪ್ರಧಾನಿ ರಾಮ್‌ಸೇ ಮ್ಯಾಕ್ ಡೊನಾಲ್ಡ್
 • ಲಾಲಲಜಪತರಾಯ್‌ರವರನ್ನು ‘ ಪಂಜಾಬ್ ಕೇಸರಿ ‘ ಎಂದು ಕರೆಯುತ್ತಿದ್ದರು . ಇವರು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸ್ಥಾಪಕರು .

Bharatada Samvidhana Lakshanagalu in Kannada

 • ಲಾಲಲಜಪತ್‌ರಾಯ್‌ರವರು ಸರ್ವೆಂಟ್ಸ್ ಆಫ್ ದಿ ಪೀಪಲ್ ಸೊಸೈಟಿ ಎಂಬ ಸಂಘಟನೆಯನ್ನು ಸ್ಥಾಪಿಸಿದರು .
 • 1931 ಮಾರ್ಚ್ 5 ರಂದು ಗಾಂಧಿ – ಇಲ್ಡನ್ ನಡುವೆ ಒಪ್ಪಂದ ನಡೆಯಿತು .
 • ಜೂನ್ 3 , 1947 ರಂದು ಭಾರತದ ವೈಸ್‌ರಾಯ್ ಮೌಂಟ್ ಬ್ಯಾಟನ್‌ರವರು ವಿಭಜನೆ ಸೂತ್ರವನ್ನು ಮುಂದಿಟ್ಟರು . ಈ ಸೂತ್ರವನ್ನು “ ಜೂನ್ ಸೂತ್ರ ‘ ಎನ್ನುವರು .
 • ಗೌರರ್ ಜನರಲ್ , ಇವರ ಪೂರ್ಣ ಹೆಸರು ಲೂಯಿಸ್ ಫಾನ್ಸಿಸ್ ಅಲ್ಬರ್ಟ್ ವಿಕ್ಟರ್ ನಿಕೋಲಸ್ ಮೌಂಟ್ ಲಾರ್ಡ್ ಮೌಂಟ್‌ಬ್ಯಾಟನ್‌ರವರು ಭಾರತದ ಕೊನೆಯ ವೈಸರಾಯ್ ಹಾಗೂ ಸ್ವತಂತ್ರ ಭಾರತದ ಮೊಟ್ಟ ಮೊದಲ ನಡೆಸಲಾಯಿತು . ಬ್ಯಾಟನ್ .
 • 1951 ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಲಾಯಿತು . 1952 ರಲ್ಲಿ ಚುನಾವಣೆಯನ್ನು ನಡೆಸಿದರು.
 • ಸಂವಿಧಾನ ರಚನೆಗೆ ಮೊಟ್ಟ ಮೊದಲ ಬಾರಿಗೆ 1934 ರಲ್ಲಿ ಒತ್ತಾಯಿಸಿದವರು ಸಮಾಜವಾದಿ ಎಂ.ಎನ್.ರಾಯ್‌ರವರು ,
 • ಎಂ.ಎನ್.ರಾಯ್‌ರವರು ಮೆಕ್ಸಿಕೋ ಮತ್ತು ಭಾರತದಲ್ಲಿ ಕಮ್ಯೂನಿಸ್ಟ್ ಪಕ್ಷವನ್ನು ಕಟ್ಟಿದವರು .
 • 2 ನೇ ಮಹಾಯುದ್ದ ಬಳಿಕ ಸಂವಿಧಾನ ರಚನಾ ಸಭೆ ರಚಿಸಲು ಅವಕಾಶ ಕಲ್ಪಿಸಲು ಆ .8 , 1940 ರಂದು ಬಿಟ ಒಪ್ಪಿಕೊಂಡಿತು . ಇದನ್ನು “ ಆಗಸ್ಟ್ ಕೊಡುಗೆ ” ಎನ್ನುವರು .
 • ಸಂವಿಧಾನ ರಚನಾ ಸಭೆ ಬೇಡಿಕೆ ಈಡೇರಿಸಲು ಮಾರ್ಚ್ , 22 , 1942 ರಲ್ಲಿ ಕ್ರಿಪ್ಸ್ ಆಯೋಗವನ್ನು ಬ್ರಿಟನ್ ಭಾರತಕ್ಕೆ ಕಳುಹಿಸಿತು .
 • ” ಸರ್.ಸ್ಟ್ಯಾಫೋರ್ಡ್ ಕಿಪ್ಸ್ ” ರವರು ಕ್ರಿಪ್ಸ್ ಆಯೋಗದ ಅಧ್ಯಕ್ಷತೆ ವಹಿಸಿದ್ದರು .
 • ಸರ್.ಸ್ಟ್ಯಾಮೋರ್ಡ್ ಕಿಪ್ಪರವರು ಬ್ರಿಟನ್‌ನ ಪ್ರಧಾನ ಮಂತ್ರಿ ಎನ್ಸ್‌ಟನ್ ಚರ್ಚಿಲ್ ರವರ ಸಂಪುಟದ ಸದಸ್ಯರು ,

Bharatada Samvidhana Lakshanagalu in Kannada

 • ಕ್ರಿಪ್ಸ್ ಆಯೋಗದ ಸಲಹೆಗಳನ್ನು ಮುಸ್ಲಿಂಲೀಗ್ ತಿರಸ್ಕರಿಸಿ ಪ್ರತ್ಯೇಕ ಮುಸ್ಲಿಂ ರಾಜ್ಯವನ್ನು ಸ್ಥಾಪಿಸಿ ಎರಡು ಸಂವಿಧಾನರಚನಾ ಸಭೆಯನ್ನು ರಚಿಸಬೇಕೆಂದು ಒತ್ತಾಯಿಸಿತು .
 • ಸಂವಿಧಾನ ರಚನಾ ಸಭೆಯ ಬೇಡಿಕೆ ಈಡೇರಿಸಲು 1946 , ಮಾರ್ಚ್ 23 ರಂದು ಆಟ್ಲರವರ ಅಧ್ಯಕ್ಷತೆಯಲ್ಲಿ ಲಾರ್ಡ್ ಪೆತಿಕ್ ಲಾರೆನ್ಸ್ ಸ್ಪ್ಯಾಮೋರ್ಡ್ ಕ್ರಿಪ್ಸ್ ಮತ್ತು ಎ.ವಿ. ಅಲೆಕ್ಸಾಂಡರ್ ಒಳಗೊಂಡ ಕ್ಯಾಬಿನೆಟ್ ಆಯೋಗವು ಭಾರತಕ್ಕೆ ಕಳುಹಿಸಲಾಯಿತು .
 • ಕ್ಯಾಬಿನೆಟ್ ಆಯೋಗವು 1946 , ನವಂಬರ್‌ನಲ್ಲಿ ಒಂದು ಯೋಜನೆಯನ್ನು ರೂಪಿಸಿ ಭಾರತದ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿತು . ಕ್ಯಾಬಿನೆಟ್ ಆಯೋಗವು ಸಂವಿಧಾನ ರಚನಾ ಸಭೆಗೆ ಒಟ್ಟು ಸದಸ್ಯರ ಸಂಖ್ಯೆಯನ್ನು 389 ಕ್ಕೆ ನಿಗಧಿಪಡಿಸಿತು .
 • 389 ಸದಸ್ಯರಲ್ಲಿ 296 ಸ್ಥಾನಗಳು ಬ್ರಿಟೀಷ್ ಇಂಡಿಯಾ ಹಾಗೂ 93 ಸ್ಥಾನಗಳು ದೇಶೀಯ ರಾಜ್ಯಗಳಿಗೂ ಅವಕಾಶ ಕಲ್ಪಿಸಿತು . 296 ಬ್ರಿಟೀಷ್ ಸ್ಥಾನಗಳಲ್ಲಿ , 292 ಸ್ಥಾನಗಳನ್ನು !! ಗೌರರ್ ಪ್ರಾಂತ್ಯಗಳಿಂದಲೂ ಉಳಿದ ನಾಲ್ಕ ಸ್ಥಾನಗಳನ್ನು ನಾಲ್ಕು ಚೀಫ್ ಕಮೀಷನರ್‌ಗಳ ಪ್ರಾಂತ್ಯ ಗಳಿಂದ ತಲಾ ಒಂದರಂತೆ ಆಯ್ಕೆ ಮಾಡಬೇಕೆಂದು 11 ನಿಗಧಿಪಡಿಸಿತು .

Bharatada Samvidhana Lakshanagalu in Kannada

 • ಸಂವಿಧಾನ ರಚನಾ ಸಭೆಯಲ್ಲಿ ವಿವಿಧ ಸಮುದಾಯದಿಂದ ಪ್ರತಿನಿಧಿಸಿದ ಪ್ರಮುಖರು ಆಂಗ್ಲೋ ಇಂಡಿಯನ್ ಫ್ರಾಂಕ್ ಆಂಥೋನಿ , ಕಮ್ಯೂನಿಸ್ಟ್ – ಸೋಮನಾಥ ಲಹರಿ , ಪರಿಶಿಷ್ಟ ಜಾತಿ- ಡಾ | ಬಿ.ಆರ್.ಅಂಬೇಡ್ಕರ್‌
 • ಮೊದಲ ಸಂವಿಧಾನ ರಚನಾ ಸಭೆಯು 1946 ಡಿಸೆಂಬರ್ 9 , ಸೋಮವಾರ ಬೆಳಿಗ್ಗೆ 11 ಗಂಟೆಗೆ ದೆಹಲಿಯ ಪಾರ್ಲಿಮೆಂಟಿನ ಸೆಂಟ್ರಲ್ ಹಾಲ್‌ನಲ್ಲಿ ಡಾ.ಸಚ್ಚಿದಾನಂದ ಸಿನ್ಹಾರವರ ಹಂಗಾಮಿ ಅಧ್ಯಕ್ಷತೆಯಲ್ಲಿ ಸಂವಿಧಾನ ರಚನಾ ಸಭೆಯು ಸಭೆ ಸೇರಿತು .
 • ಸಂವಿಧಾನ ರಚನೆಯ 2 ನೇ ಸಭೆಯು ಡಿಸೆಂಬರ್ 11 , 1946 ರಲ್ಲಿ ಸೇರಿತು .
 • ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಸೇರಿದ 2 ನೇ ಸಭೆಯಲ್ಲಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಡಾಬಾಬು ರಾಜೇಂದ್ರ ಪ್ರಸಾದ್‌ರವರನ್ನು , ಉಪಾಧ್ಯಕ್ಷರಾಗಿ ಡಾ | ಎಚ್.ಸಿ.ಮುಖರ್ಜಿಯವರನ್ನು , ಸಲಹೆಗಾರರನ್ನಾಗಿ ಬಿ.ಎನ್.ರಾಯ್‌ರವರನ್ನು ಆಯ್ಕೆ ಮಾಡಲಾಯಿತು .
 • 1947 ಆ .14 ರಂದು ಸಂವಿಧಾನ ವಿವಿಧ ಸಮಿತಿಗಳನ್ನು ಸಂವಿಧಾನ ರಚನೆಗೆ ರಚಿಸಲಾಯಿತು .
 • ಭಾರತದ ಸಂವಿಧಾನ ರಚನಾ ಒಟ್ಟು ಸಮಿತಿಗಳು -22 ಸಮಿತಿಗಳನ್ನು ರಚಿಸಲಾಯಿತು . ಅವುಗಳಲ್ಲಿ 10 ಪ್ರಮುಖ ಸಮಿತಿಗಳು , 12 ಉಪಸಮಿತಿಗಳು ,
 • 1947 ಆಗಸ್ಟ್ 29 ರಂದು ಭಾರತದ ಸಂವಿಧಾನ ರಚಿಸಲು ಕರಡು ಸಮಿತಿಯನ್ನು ರಚಿಸಲಾಯಿತು .
 • ಸಂವಿಧಾನ ರಚನಾ ಸಭೆಯ ಕರಡು ಸಮಿತಿ ಅಧ್ಯಕ್ಷರು- ಡಾ | ಬಿ.ಆರ್ . ಅಂಬೇಡ್ಕರ್ , ಸಂವಿಧಾನ ರಚನಾ ಸಭೆಯ ಮೂಲಭೂತ ಹಕ್ಕುಗಳ , ಅಲ್ಪಸಂಖ್ಯಾತರ , ಬುಡಕಟ್ಟು ವರ್ಗದವರ ಸಮಿತಿ ಅಧ್ಯಕ್ಷರು – ಸರ್ದಾರ್ ವಲ್ಲಭ ಪಟೇಲ್ .
 • ಭಾರತದ ಮೊದಲ ಸಂಸತ್ ಸಾರ್ವತ್ರಿಕ ಚುನಾವಣೆ ನಂತರ ಏ .17 , 1952 ರಂದು ಅಸ್ಥಿತ್ವಕ್ಕೆ ಬಂದಿತು .
 • ಭಾರತದ ಮೂಲ ಸಂವಿಧಾನವು 22 ಭಾಗಗಳನ್ನು ಒಳಗೊಂಡಿದ್ದು , 395 ವಿಧಿಗಳನ್ನು ಒಳಗೊಂಡಿದ್ದು , 8 ಅನುಸೂಚಿಗಳನ್ನು ಒಳಗೊಂಡಿದ್ದು , 1,17,369 ಪದಗಳಿಂದಕೂಡಿದೆ .
 • ಭಾರತದ ಸಂವಿಧಾನವು 1951 ಜೂನ್ 18 ರಂದು ಮೊದಲ ಬಾರಿಗೆ ತಿದ್ದುಪಡಿಯಾಗಿತ್ತು .
 • ಇತ್ತೀಚೆಗೆ 2012 ರಲ್ಲಿ ಆದ 98 ನೇ ಸಂವಿಧಾನ ತಿದ್ದುಪಡಿಗಳಿಂದಾಗಿದೆ .

Bharatada Samvidhana Lakshanagalu in Kannada

 • ಪ್ರಸ್ತುತ ಭಾರತದ ಸಂವಿಧಾನದಲ್ಲಿ ಒಟ್ಟು 25 ಭಾಗಗಳು ( ಮೂಲ ಸಂಖ್ಯೆ ಬದಲಾವಣೆಯಾಗದೆ 7 ನೇ ಭಾಗವನ್ನು ತೆಗೆದುಹಾಕಿ 4 ಎ , 9 ಎ , 14 ಎ , 9 ಬಿ ಸೇರ್ಪಡೆಯಾಗಿವೆ ) 12 ಅನುಸೂಚಿಗಳು ( 9,10,11,12 ನೇ ಅನುಸೂಚಿ ಸೇರ್ಪಡೆ ) , 450 ವಿಧಿ ( 20 ವಿಧಿಗಳನ್ನು ತೆಗೆದು ಹಾಕಿ 76 ವಿಧಿಗಳನ್ನು ಸೇರಿಸಲಾಗಿದೆ ) ಒಳಗೊಂಡಿದೆ .
 • ಭಾರತದ ಸಂವಿಧಾನವು ವಿಶ್ವದಲ್ಲೇ ಅತಿ ದೊಡ್ಡ ರಾಷ್ಟ್ರೀಯ ಸಂವಿಧಾನವಾಗಿದೆ .
 • ಭಾರತ ಸರ್ಕಾರ ಕಾಯ್ದೆ ( 1935 ) ರಿಂದ ಸಂಯುಕ್ತ ಪದ್ಧತಿ , ರಾಜ್ಯಪಾಲರ ಕಛೇರಿ ತುರ್ತುಪರಿಸ್ಥಿತಿ , ಸಾರ್ವಜನಿಕ ಸೇವೆಗಳು ನ್ಯಾಯಾಂಗ ಪದ್ಧತಿಗಳನ್ನು ಎರವಲು ಪಡೆಯಲಾಯಿತು .
 • ಬ್ರಿಟನ್ ಸಂವಿಧಾನದಿಂದ ಸಂಸದೀಯ ಪದ್ಧತಿ , ಕಾನೂನಿನ ಪದ್ಧತಿ , ಶಾಸಕಾಂಗೀಯ ಪದ್ಧತಿ , ಏಕಪೌರತ್ವ , ಕ್ಯಾಬಿನೇಟ್ ಪದ್ಧತಿ , ರಿಟ್‌ಗಳು , ಸಂಸದೀಯ ಸವಲತ್ತು , ದ್ವಿಸದನ ಪದ್ಧತಿಗಳನ್ನು ಎರವಲು ಪಡೆಯಲಾಯಿತು .
 • ಅಮೆರಿಕಾದ ಸಂವಿಧಾನದಿಂದ ಮೂಲಭೂತ ಹಕ್ಕುಗಳು , ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ , ನ್ಯಾಯಾಂಗ ಪರಾಮರ್ಶೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಸುಪ್ರೀಂಕೋಟ್‌ ಹಾಗೂ ಹೈಕೋರ್ಟ್ ನ್ಯಾಯಾಧೀಶರ ಮಹಾಭಿಯೋಗಗಳನ್ನುಎರವಲು ಪಡೆಯಲಾಯಿತು .
 • ಆಸ್ಟ್ರೇಲಿಯಾ ಸಂವಿಧಾನದಿಂದ ಸಮವರ್ತಿಪಟ್ಟಿ ಮುಕ್ತ ವ್ಯಾಪಾರ , ವಾಣಿಜ್ಯ & ಅಂತರಸಂಬಂಧ ಸಂಸತ್ತಿನ ಜಂಟಿ ಸದನದಿಂದ ಎರವಲು ಪಡೆಯಲಾಯಿತು .
 • ಐರಿಷ್ ಸಂವಿಧಾನದಿಂದ ರಾಜ್ಯ ನಿರ್ದೇಶಕ ತತ್ವಗಳು , ರಾಜ್ಯಸಭೆಗೆ ಸದಸ್ಯರ ನೇಮಕ , ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಎರವಲು ಪಡೆಯಲಾಗಿದೆ .
 • ಸಂವಿಧಾನ ರಚನಾ ಸಭೆಯು ಒಟ್ಟು 11 ಅಧಿವೇಶನಗಳಲ್ಲಿ 2 ವರ್ಷ 11 ತಿಂಗಳು 18 ದಿನಗಳ ಅವಧಿಯಲ್ಲಿ ಸಂವಿಧಾನ ರಚಿಸಿತು .

Bharatada Samvidhana Lakshanagalu in Kannada

 • ಭಾರತದ ಸಂವಿಧಾನದ ಬಹುತೇಕ ಅಂಶಗಳು 1935 ರ ಭಾರತ ಸರ್ಕಾರ ಕಾಯ್ದೆಯನ್ನು ಆಧರಿಸಿ ರಚಿಸಲಾಗಿದೆ .
 • ಭಾರತದ ಸಂವಿಧಾನವನ್ನು ಸಂವಿಧಾನ ರಚನಾ ಸಭೆಯಿಂದ ನ .26 , 1949 ರಂದು ಅಂಗೀಕರಿಸಲಾಯಿತು . ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ಜ .26 , 1950 ರಂದು ಜಾರಿಗೆ ತರಲಾಯಿತು .
 • ಭಾರತವು ಕಾಮನ್ ವೆಲ್ತ್‌ಗೆ ಸೇರ್ಪಡೆಯಾದುದ್ದು ಆಗಸ್ಟ್ 15,1947 ಅದರ ಸದಸ್ಯತ್ವವನ್ನು ಮತ್ತೆ ನವೀಕರಿಸಿದ್ದು ಮೇ 1950 ರಲ್ಲಿ .
 • ಭಾರತವು ರಾಷ್ಟ್ರೀಯ ಧ್ವಜವನ್ನು ಅಳವಡಿಸಿಕೊಂಡಿದ್ದು ಜುಲೈ 22 , 1947 ರಲ್ಲಿ .
 • ಭಾರತವು ರಾಷ್ಟ್ರ ಗೀತೆಯನ್ನು ಅಳವಡಿಸಿಕೊಂಡಿದ್ದು ಜ .24 , 1950 ರಲ್ಲಿ .
 • ಭಾರತವು ನಾಡಗೀತೆಯನ್ನು ಅಳವಡಿಸಿಕೊಂಡಿದ್ದು ಜ .24 , 1950

ಭಾರತ ಸಂವಿಧಾನದ ಪಿತಾಮಹ ಯಾರು?

ಡಾ ಅಂಬೇಡ್ಕರ್

ಭಾರತದ ಸಂವಿಧಾನದ ಬಹುತೇಕ ಅಂಶಗಳು ……..ನ್ನು ಆಧರಿಸಿ ರಚಿಸಲಾಗಿದೆ .

1935 ರ ಭಾರತ ಸರ್ಕಾರ ಕಾಯ್ದೆ

Bharatada Samvidhana Lakshanagalu in Kannada

ಇತರೆ ವಿಷಯಗಳು

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು-04

Karnataka GK Questions in Kannada-05

ಜನರಲ್ ಪ್ರಶ್ನೆಗಳು 2022-06

Leave a Reply

Your email address will not be published. Required fields are marked *