ಕನ್ನಡದಲ್ಲಿ ಲೋಪ ಸಂಧಿ | Lopa Sandhi in Kannada

Lopa Sandhi in Kannada, lopa sandhi 10 examples in kannada, ಲೋಪ ಸಂಧಿ, ಲೋಪ ಸಂಧಿ 10 ಉದಾಹರಣೆಗಳು, ಲೋಪ ಸಂಧಿಗೆ 100 ಉದಾಹರಣೆಗಳು, 20 ಲೋಪ ಸಂಧಿ 50 ಉದಾಹರಣೆ, Lopa Sandhi in Kannada, ಕನ್ನಡದಲ್ಲಿ ಲೋಪ ಸಂಧಿ, lopa sandhi examples in kannada, lopa sandhi information in kannada, ಲೋಪ ಸಂಧಿ 50 ಉದಾಹರಣೆ

Lopa Sandhi in Kannada Examples

ಲೋಪ ಸಂಧಿ ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ . ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ . ಈ ಸಂಧಿಗೆ ‘ ಲೋಪಸಂಧಿ ‘ ಎನ್ನುವರು.

ಉದಾ : – ಊರು + ಅಲ್ಲಿ = ಊರಲ್ಲಿ ( ಉ ಕಾರ ಲೋಪ )

1 ) ಊರು + ಅನ್ನು = ಊರನ್ನು

2 ) ಬೇರೊಬ್ಬ = ಬೇರೆ + ಒಬ್ಬ

3 ) ಊರೂರು = ಊರು + ಊರು

4 ) ಮೇಲೆಸೆ = ಮೇಲೆ + ಎಸೆ

5 ) ಊರೊಳಗೆ = ಊರ + ಒಳಗೆ

6 ) ಹುಚ್ಚೆದ್ದು = ಹುಚ್ಚು + ಎದ್ದು

7 ) ನಾವೆಲ್ಲ = ನಾವು + ಎಲ್ಲ

8 ) ಮಾತನ್ನು = ಮಾತು + ಅನ್ನು

lopa sandhi in kannada ಮೇಲಿನ ಉದಾಹರಣೆಗಳಲ್ಲೆಲ್ಲಾ , ಎರಡು ಸ್ವರಗಳು ಸಂಧಿಸುವಾಗ ಮೊದಲನೆಯ ಸ್ವರವು ಇಲ್ಲದಂತಾಗುವುದು ( ಲೋಪವಾಗುವುದು ) ಕಂಡು ಬರುತ್ತದೆ . ಆದರೆ ಕೆಲವು ಕಡೆಗೆ ಸ್ವರದ ಮುಂದೆ ಸ್ವರವು ಬಂದಾಗ ಲೋಪ ಮಾಡಿದರೆ ಅರ್ಥವು ಕೆಡುವುದು .

Lopa Sandhi in Kannada

ಲೋಪ ಸಂಧಿ 20 ಉದಾಹರಣೆಗಳು:

ಮನೆ + ಇಂದ – ಇಲ್ಲಿ ಲೋಪಮಾಡಿದರೆ ‘ ಮನಿಂದ ‘ ಎಂದಾಗುವುದು

ಗುರು + ಅನ್ನು ಇಲ್ಲಿ ಲೋಪಮಾಡಿದರೆ ‘ ಗುರು ‘ ಆಗುವುದು

( ಉ + ಅ )

ಹಾಗಾದರೆ ಅರ್ಥವು ಹಾಳಾಗುವಲ್ಲಿ ಲೋಪ ಮಾಡಬಾರದು . ಅಲ್ಲಿ ಬೇರೆ ವಿಧಾನವನ್ನು ( ಮಾರ್ಗವನ್ನು ಅನುಸರಿಸಬೇಕಾಗುವುದು . ಹಾಗಾದರೆ ಒಟ್ಟಿನಲ್ಲಿ ಲೋಪಸಂಧಿಗೆ ಸೂತ್ರವನ್ನು ಹೀಗೆ ಹೇಳಬಹುದು :

( 16 ) ಸ್ವರದ ಮುಂದೆ ಸ್ವರವು ಬಂದು ಸಂಧಿಯಾಗುವಾಗ ಪೂರ್ವದಲ್ಲಿರುವ ಸ್ವರವು ಅರ್ಥವು ಕೆಡದಿದ್ದ ಪಕ್ಷದಲ್ಲಿ ಮಾತ್ರ ಲೋಪವಾಗುವುದು . ಇದಕ್ಕೆ ಲೋಪಸಂಧಿಯೆಂದು ಹೆಸರು .

ಉದಾಹರಣೆಗೆ :

ಊರು + ಅಲ್ಲಿ = ಊರಲ್ಲಿ ( ಉಕಾರ ಲೋಪ )

( ಉ + ಅ )

ದೇವರು + ಇಂದ = ದೇವರಿಂದ ( ಉಕಾರ ಲೋಪ ) 

( ಉ + ಇ )

ಬಲ್ಲೆನು + ಎಂದು = ಬಲ್ಲೆನೆಂದು ( ಉಕಾರ ಲೋಪ ) 

( ಉ + ಎ )

ಏನು + ಆದುದು = ಏನಾದುದು ( ಉಕಾರ ಲೋಪ )

( ಉ + ಎ )

ಇಲ್ಲಿ “ಅರ್ಥವು ಕೆಡದಿದ್ದ ಪಕ್ಷದಲ್ಲಿ” ಎಂದು ಹೇಳುವಾಗ, ಸಂಧಿ ಮಾಡುವವರು ಅರ್ಥ ಕೆಡುವುದೇ ಇಲ್ಲವೇ ಎಂದು ಹೇಳಲು ಹಲವು ಸರತಿ ಆಗುವುದಿಲ್ಲ.
ಬಾಳನ್ನು = ಬಾಳೆ + ಅನ್ನು ? ಇಲ್ಲವೆ ಬಾಳು + ಅನ್ನು ?
ಒಂದು ವೇಳೆ ಬಾಳೆ + ಅನ್ನು = ಬಾಳನ್ನು ಅಂದರೆ ಇಲ್ಲಿ ಅರ್ಥ ಹೇಗೆ ಕಟ್ಟಿದೆ, ಹೇಳಲು ಸಾಧ್ಯವಿಲ್ಲ.
ಆದುದರಿಂದ ಇಂತಹ ಹಲವು ಸನ್ನಿವೇಶಗಳಲ್ಲಿ ರೂಢಿಯಲ್ಲಿ ಇರುವ ಅರ್ಥವೇ ಸರಿಯೆಂದು ತಿಳಿವುದು.
ಹಾಗೆ
ಬಾಲೆ + ಅನ್ನು = ಬಾಲನ್ನು ತಪ್ಪು ಎಂದು ತಿಳಿವುದು.
“ಬಾಲನ್ನು = ಬಾಲು + ಅನ್ನು” ಎಂದೇ ರೂಢಿ.

Lopa Sandhi in Kannada

ಲೋಪ ಸಂಧಿ ಎಂದರೇನು?

ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ . ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ . ಈ ಸಂಧಿಗೆ ‘ ಲೋಪಸಂಧಿ ‘ ಎನ್ನುವರು.

ಲೋಪ ಸಂಧಿ ಉದಾಹರಣೆ ಕೊಡಿ?

ಊರು+ಅಲ್ಲಿ=ಊರಲ್ಲಿ

ಇವುಗಳನ್ನು ಓದಿ :

ಸಂಧಿ ಪ್ರಕರಣ ಪ್ರಶ್ನೋತ್ತರಗಳು

ಯಣ್ ಸಂಧಿ

ವಿಸರ್ಗಸಂಧಿ

ಅನುನಾಸಿಕ ಸಂಧಿ

ಷ್ಟುತ್ವ ಸಂಧಿ

Leave a Reply

Your email address will not be published. Required fields are marked *