ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು | President of India in Kannada

ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು | Rashtrapati in Kannada 52-78

Rashtrapati in Kannada, rashtrapati information in kannada, president of india information in kannada, ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ, ರಾಷ್ಟ್ರಪತಿ ಚುನಾವಣೆ ಬಗ್ಗೆ ಮಾಹಿತಿ, ರಾಷ್ಟ್ರಪತಿ ಅರ್ಹತೆಗಳು, ರಾಷ್ಟ್ರಪತಿ ಬಗ್ಗೆ ಮಾಹಿತಿ, ಭಾರತದ ರಾಷ್ಟ್ರಪತಿ 2022 in kannada

Rashtrapati in Kannada

Spardhavani Telegram

ಭಾರತದ ಅಧ್ಯಕ್ಷರು ರಾಜ್ಯದ ಮುಖ್ಯಸ್ಥರಾಗಿದ್ದಾರೆ ಮತ್ತು ಅವರನ್ನು ಭಾರತದ ಪ್ರಥಮ ಪ್ರಜೆ ಎಂದೂ ಕರೆಯುತ್ತಾರೆ. ಅವರು ಯೂನಿಯನ್ ಎಕ್ಸಿಕ್ಯೂಟಿವ್‌ನ ಭಾಗವಾಗಿದ್ದಾರೆ, ಅದರ ನಿಬಂಧನೆಗಳನ್ನು ಅಧ್ಯಕ್ಷರಿಗೆ ಸಂಬಂಧಿಸಿದ ಲೇಖನಗಳನ್ನು ಒಳಗೊಂಡಂತೆ ಆರ್ಟಿಕಲ್ 52-78 ರೊಂದಿಗೆ ವ್ಯವಹರಿಸಲಾಗಿದೆ (ಲೇಖನ 52-62).

ಈ ಲೇಖನಗಳ ಅಡಿಯಲ್ಲಿ, ಅಧ್ಯಕ್ಷರು ಹೇಗೆ ಆಯ್ಕೆಯಾಗುತ್ತಾರೆ, ಅವರ ಅಧಿಕಾರಗಳು ಮತ್ತು ಕಾರ್ಯಗಳು ಮತ್ತು ಅವರ ದೋಷಾರೋಪಣೆ ಪ್ರಕ್ರಿಯೆಯ ಮಾಹಿತಿಯನ್ನು ನೀಡಲಾಗಿದೆ.

ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು | Rashtrapati in Kannada 52-78

Rashtrapati Information in Kannada Notes

  • ಭಾರತದ ಸಂವಿಧಾನದ 5 ನೇ ಭಾಗದ 52 ನೇ ವಿಧಿಯಿಂದ 151 ನೇ ವಿಧಿವರೆಗೆ ಕೇಂದ್ರ ಸರ್ಕಾರದ ಬಗ್ಗೆ ವಿವರಿಸುತ್ತದೆ.
  • ಕೇಂದ್ರ ಸರ್ಕಾರವು ರಾಷ್ಟ್ರಪತಿ , ಉಪರಾಷ್ಟ್ರಪತಿ , ಪ್ರಧಾನ ಮಂತ್ರಿ ಕೇಂದ್ರ ಸಚಿವ ಸಂಪುಟ , ಅಟಾರ್ನಿಜನರು ಸಂಸತ್ತು ಹಾಗೂ ಸುಪ್ರೀಂಕೋರ್ಟ್‌ನ್ನು ಒಳಗೊಂಡಿದೆ .
  • ಭಾರತದ ಗಣತಂತ್ರ ವ್ಯವಸ್ಥೆಯಲ್ಲಿ ಅತ್ಯುನ್ನತ ಸ್ಥಾನವೇ ರಾಷ್ಟ್ರಪತಿ ಹುದ್ದೆಯಾಗಿದೆ .
  • ಭಾರತದ ರಾಷ್ಟ್ರಪತಿಯು ದೇಶದ ಮೊದಲ ಪ್ರಜೆಯಾಗಿದ್ದಾರೆ .
  • ಭಾರತದ ರಾಷ್ಟ್ರಪತಿಗಳು ಮೂರು ರಕ್ಷಣಾ ಪಡೆಯ ಮಹಾ ದಂಡನಾಯಕರಾಗಿದ್ದಾರೆ .
  • ಭಾರತದ ರಾಷ್ಟ್ರಪತಿಗಳ ಹೆಸರಿನಲ್ಲಿ ದೇಶದ ಎಲ್ಲಾ ಕಾರ್ಯಂಗದ ಕಾರ್ಯಗಳು ನಡೆಯುತ್ತವೆ .
  • ಭಾರತದ ಸಂವಿಧಾನದ 52 ನೇ ವಿಧಿಯು ಭಾರತದಲ್ಲಿ ರಾಷ್ಟ್ರಪತಿ ಹುದ್ದೆಗೆ ಅವಕಾಶ ಕಲ್ಪಿಸಿದೆ .
  • ಭಾರತದಲ್ಲಿ ರಾಷ್ಟ್ರಪತಿ ಹುದ್ದೆಯು ಬ್ರಿಟನ್ನಿನ ದೊರೆಯ ಹುದ್ದೆಯನ್ನು ಹೋಲುತ್ತದೆ .
  • ಸಂವಿಧಾನದ 53 ನೇ ವಿಧಿ ಅನ್ವಯ ಭಾರತದ ರಾಷ್ಟ್ರಪತಿಗಳು ಕಾರ್ಯಾಂಗೀಯ ಅಧಿಕಾರಿಯಾಗಿದ್ದಾರೆ .
  • ರಾಷ್ಟ್ರಪತಿಗಳನ್ನು ಸಂಸತ್ತಿನ ಚುನಾಯಿತ ಪ್ರತಿನಿಧಿಗಳು , ರಾಜ್ಯಗಳ ಚುನಾಯಿತ ಸದಸ್ಯರು ಹಾಗೂ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಯ ವಿಧಾನ ಸಭೆಯ ಚುನಾಯಿತ ಸದಸ್ಯರುಗಳನ್ನು ಒಳಗೊಂಡ ವಿಶೇಷ ಮತದಾರರ ವರ್ಗ ಆಯ್ಕೆ ಮಾಡುತ್ತದೆ .

Rashtrapati in Kannada

  • ಕೇಂದ್ರಾಡಳಿತ ರಾಷ್ಟ್ರಪತಿ ಚುನಾವಣೆಯಲ್ಲಿ ಓಟಿನ ಮೌಲ್ಯವು ಒಂದು ರಾಜ್ಯದ ವಿಧಾನ ಸಭಾ ಸದಸ್ಯರಿಂದ ಮತ್ತೊಂದು ರಾಜ್ಯದ ವಿಧಾನ ಸಭಾ ಸದಸ್ಯರಿಗೆ ವ್ಯತ್ಯಾಸವಾಗುತ್ತದೆ .
  • ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಹೊಂದಿರುವ ರಾಜ್ಯ ಎಂದರೆ ಉತ್ತರ ಪ್ರದೇಶ .
  • ರಾಷ್ಟ್ರಪತಿ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳನ್ನು ಹೊಂದಿರುವ ರಾಜ್ಯ ಎಂದರೆ ಸಿಕ್ಕಿಂ .
  • ಭಾರತದಲ್ಲಿ 2012 ರವರೆಗೆ 14 ಬಾರಿ ರಾಷ್ಟ್ರಪತಿ ಚುನಾವಣೆ ನಡೆದಿವೆ .
  • ರಾಷ್ಟ್ರಪತಿಗಳ ಅಧಿಕಾರವಧಿಯು ಐದು ವರ್ಷಗಳಾಗಿರುತ್ತದೆ .
  • ರಾಷ್ಟ್ರಪತಿಗಳ ಪ್ರಸ್ತುತ ( 2012 ) ವೇತನವು ತಿಂಗಳಿಗೆ 1.5 ಲಕ್ಷ ರೂ ಆಗಿದೆ .
  • ರಾಷ್ಟ್ರಪತಿಗಳಿಗೆ ಪ್ರಮಾಣ ವಚನವನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು ಬೋಧಿಸುತ್ತಾರೆ .
  • ರಾಷ್ಟ್ರಪತಿಗಳು ರಾಜ್ಯಸಭೆಗೆ 12 ಮಂದಿ ಸದಸ್ಯರನ್ನು ವಿವಿಧ ಕ್ಷೇತ್ರದಿಂದ ನಾಮಕರಣ ಮಾಡುವ ಅಧಿಕಾರ ಹೊಂದಿದ್ದಾರೆ .

Rashtrapati in Kannada

  • ಸಂವಿಧಾನದ 331 ನೇ ವಿಧಿ ಅನ್ವಯ ರಾಷ್ಟ್ರಪತಿಗಳು ಲೋಕಸಭೆಗೆ ಇಬ್ಬರು ಆಂಗ್ಲೋ ಇಂಡಿಯನ್‌ರನ್ನು ನೇಮಕ ಮಾಡುತ್ತಾರೆ .
  • ಸಂವಿಧಾನದ 76 ನೇ ವಿಧಿ ಅನ್ವಯ ಅಟಾರ್ನಿ ಜನರಲ್‌ನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ .
  • ಭಾರತದ ರಾಷ್ಟ್ರಪತಿಗಳು 280 ನೇ ವಿಧಿ ಅನ್ವಯ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಮಾಡುತ್ತಾರೆ .
  • ಭಾರತದ ರಾಷ್ಟ್ರಪತಿಗಳು 148 ನೇ ವಿಧಿ ಅನ್ವಯ ಕಂಟ್ರೋಲರ್ ಮತ್ತು ಅಡಿಟರಲ್ ಜನರಲ್‌ನ್ನು ನೇಮಕ ಮಾಡುತ್ತಾರೆ .
  • 155 ನೇ ವಿಧಿ ಅನ್ವಯ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಕ ಮಾಡುತ್ತಾರೆ .
  • ಸಂವಿಧಾನ 217 ನೇ ವಿಧಿ ಅನ್ವಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರು ಹಾಗೂ ನ್ಯಾಯಾಧೀಶರನ್ನು ನೇಮಕ ಮಾಡುವ ಅಧಿಕಾರ ಇದೆ
  • ಸಂವಿಧಾನದ 290 ( 1 ) ನೇ ಹಣಕಾಸು ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ,
  • ಸಂವಿಧಾನದ 316 ( 1 ) ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ ಮಾಡುವ ಅಧಿಕಾರ

Rashtrapati in Kannada

  • ಸಂವಿಧಾನ 324 ( 2 ) ಮುಖ್ಯ ಚುನಾವಣಾ ಆಯುಕ್ತರು ಹಾಗೂ ಚುನಾವಣಾಧಿಕಾರಿ ನೇಮಕ
  • ಸಂವಿಧಾನ 338 ( 3 ) ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ರಾಷ್ಟ್ರೀಯ ಆಯೋಗ ನೇಮಕ ,
  • ಸಂವಿಧಾನದ 340 ನೇ ವಿಧಿ ಹಿಂದುಳಿದ ವರ್ಗಗಳ ಅಧ್ಯಯನ ಸಮಿತಿ ನೇಮಕ ಮಾಡುತ್ತಾರೆ .
  • ಸಂವಿಧಾನದ 344 ( 1 ) ಅಧಿಕೃತ ಭಾಷಾ ಸಮಿತಿಗಳ ನೇಮಕ ಮಾಡುತ್ತಾರೆ .
  • ರಾಷ್ಟ್ರಪತಿಗಳು 123 ನೇ ವಿಧಿ ಅನ್ವಯ ಅಧಿವೇಶನಗಳು ಜಾರಿಯಲ್ಲಿ ಇಲ್ಲದಿದ್ದಾಗ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು .
  • ಅಧಿವೇಶನವು ಸೇರಿದ ಆರು ವಾರದೊಳಗಾಗಿ ಸುಗ್ರೀವಾಜ್ಞೆಗೆ ಸಂಸತ್ತು ಅಂಗೀಕಾರ ನೀಡಬೇಕು .
  • ರಾಷ್ಟ್ರಪತಿಗಳು 352 ರ ವಿಧಿ ಅನ್ವಯ ರಾಷ್ಟ್ರತುರ್ತುಪರಿಸ್ಥಿತಿ , 356 ರ ವಿಧಿ ಅನ್ವಯ ರಾಜ್ಯ ತುರ್ತುಪರಿಸ್ಥಿತಿ ಮತ್ತು 360 ನೇ ವಿಧಿ ಆನ್ವಯ ಆರ್ಥಿಕ ತುರ್ತುಪರಿಸ್ಥಿತಿಯನ್ನು ಹೇರುವ ಅಧಿಕಾರವಿದೆ .
  • ರಾಷ್ಟ್ರಪತಿಗಳು 72 ನೇ ವಿಧಿ ಅನ್ವಯ ಅಪರಾಧಿಗಳಿಗೆ ಜೀವದಾನ ಅಥವಾ ಕ್ಷಮೆ ಹಾಗೂ ಶಿಕ್ಷೆ ಕಡಿಮೆ ಮಾಡುವ ಅಧಿಕಾರ ಹೊಂದಿದ್ದಾರೆ .
  • 124 ನೇ ವಿಧಿ ಅನ್ವಯ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಮತ್ತು ನ್ಯಾಯಾಧೀಶರುಗಳನ್ನು ನೇಮಕ ಮಾಡುವ ಅಧಿಕಾರ ಹೊಂದಿದ್ದಾರೆ .
  • ರಾಷ್ಟ್ರಪತಿಗಳು ಸಂವಿಧಾನ ಬಾಹಿರವಾಗಿ ನಡೆದು ಕೊಂಡರೆ ಅವರನ್ನು ಮಹಾಭಿಯೋಗ ವಿಧಾನ ಮೂಲಕ ತೆಗೆದು ಹಾಕಬಹುದು ಎಂದು ಸಂವಿಧಾನದ 61 ನೇ ವಿಧಿ ತಿಳಿಸುತ್ತದೆ .
  • ಸಂವಿಧಾನದ 87 ನೇ ವಿಧಿ ಪ್ರಕಾರ ಸಾರ್ವತ್ರಿಕ ಚುನಾವಣೆಗಳು ಮುಗಿದ ನಂತರ ಸೇರಿದ ಮೊದಲ ಮತ್ತು ಪ್ರತಿ ವರ್ಷದ ಮೊದಲ ಸಂಸತ್ತನ್ನು ರಾಷ್ಟ್ರಪತಿಗಳು ಉದ್ದೇಶಿಸಿ ಮಾತನಾಡುತ್ತಾರೆ .
  • ಸಂವಿಧಾನದ 85 ನೇ ವಿಧಿ ಪ್ರಕಾರ ಸಂಸತ್ತಿನ ಅಧಿವೇಶನ ಕರೆಯುವ ಮುಂದೂಡುವ , ವಿಸರ್ಜಿಸುವ ಅಧಿಕಾರ ಹೊಂದಿದ್ದಾರೆ .

Rashtrapati in Kannada

  • ರಾಷ್ಟ್ರಪತಿಗಳ ಹಂಗಾಮಿ ಉಪಸಭಾಪತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ.
  • ರಾಷ್ಟ್ರಪತಿಗಳು ಪ್ರಧಾನಿ ನೇತೃತ್ವದ ಮಂತ್ರಿ ಮಂಡಲವು ಸಲಹೆ ನೀಡಲು ಮಂತ್ರಿ ಮಂಡಲವಿರಬೇಕೆಂದು ಸಂವಿಧಾನದ 74 ನೇ ವಿಧಿ ತಿಳಿಸುತ್ತದೆ .
  • ಸಂವಿಧಾನದ 274 ನೇ ವಿಧಿ ಅನ್ವಯ ರಾಷ್ಟ್ರಪತಿ ಅನುಮತಿ ಇಲ್ಲದೆ ಯಾವುದೇ ತೆರಿಗೆಗೆ ಸಂಬಂಧಿಸಿದ ಮಸೂದೆ ಜಾರಿಗೆ ಬರುವಂತಿಲ್ಲ

Rashtrapati in Kannada

  • ರಾಷ್ಟ್ರಪತಿಯ ಅಧಿಕಾರವಧಿಯಲ್ಲಿ ಯಾವುದೇ ಕ್ರಿಮಿನಲ್ ಮೊಕದ್ದಮೆಗಳನ್ನು ಹೂಡುವಂತಿಲ್ಲ .
  • ಲೋಕಸಭೆಯಲ್ಲಿ ಹಣಕಾಸು ಮಸೂದೆಯನ್ನು ಮಂಡಿಸಲು ರಾಷ್ಟ್ರಪತಿಗಳ ಅನುಮತಿ ಬೇಕಾಗುತ್ತದೆ.
  • ಭಾರತದಲ್ಲಿ ಇದುವರೆಗೂ 12 ಮಂದಿ ರಾಷ್ಟ್ರಪತಿಗಳು ಆಳ್ವಿಕೆ ಮಾಡಿದ್ದಾರೆ .
  • ರಾಷ್ಟ್ರಪತಿಗಳ ಅಧಿಕೃತ ನಿವಾಸ ರಾಷ್ಟ್ರಪತಿ ಭವನ . ಇದು ಮೊದಲು ವೈಸ್‌ರಾಯ್‌ರವರ ನಿವಾಸವಾಗಿತ್ತು . ರಾಷ್ಟ್ರಪತಿ ಭವನವನ್ನು ಎಡ್ವರ್ಡ್ ಲೂಟಿನ್ಸ್ ವಾಸ್ತುಶಿಲ್ಪದ ಪ್ರಕಾರ ಕಟ್ಟಲಾಗಿದೆ .
  • ರಾಷ್ಟ್ರಪತಿಗಳ ಅಧಿಕೃತ ನಿವಾಸಗಳು ಹೈದ್ರಾಬಾದ್ ಮತ್ತು ಸಿಮ್ಲಾದಲ್ಲಿವೆ

ಇತರೆ ವಿಷಯಗಳು

Leave a Reply

Your email address will not be published. Required fields are marked *