Dadasaheb Phalke Award in Kannada | ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Dadasaheb Phalke Award in Kannada | ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

Dadasaheb Phalke Award in Kannada, Dada saheb Phalke award 2022, dada saheb phalke award winners, dada saheb phalke puraskar, winners list

Dadasaheb Phalke Award in Kannada

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಭಾರತೀಯ ಚಿತ್ರರಂಗದಲ್ಲಿನ ಜೀವಮಾನದ ಸಾಧನೆಗಾಗಿ ಭಾರತ ಸರ್ಕಾರವು ನೀಡುವ, ವಾರ್ಷಿಕ ಪ್ರಶಸ್ತಿ.

ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದ ದಾದಾಸಾಹೇಬ್ ಫಾಲ್ಕೆ, ‘(ದುಂಡಿರಾಜ್ ಗೋವಿಂದ ಫಾಲ್ಕೆ)’ ಯವರ, ‘ಜನ್ಮ ಶತಾಬ್ದಿಯ ವರ್ಷ’ವಾದ 1969ರಲ್ಲಿ ಈ ಪ್ರಶಸ್ತಿಯನ್ನು ನೀಡುವ ಪರಂಪರೆ, ಉಗಮಗೊಂಡಿತು. ‘ಪ್ರತಿ ವರ್ಷದ ಪ್ರಶಸ್ತಿ’ಯನ್ನು ಅದರ ಮುಂದಿನ ವರ್ಷದ ಕೊನೆಯಲ್ಲಿ ನಡೆಯುವ ‘ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನದ ಸಂದರ್ಭ’ದಲ್ಲಿ ನೀಡಲಾಗುತ್ತದೆ.

ಇದು ಭಾರತೀಯ ಸಿನಿಮಾ ರಂಗದ ಅತ್ಯಂತ ಪ್ರಮುಖ ಪ್ರಶಸ್ತಿಯಾಗಿದೆ .

ಪ್ರಶಸ್ತಿಯನ್ನು ಭಾರತೀಯ ಸಿನಿಮಾ ರಂಗದ ಪಿತಾಮಹಾ ದುಂಡಿರಾಜ್ ದಾವಾ ಸಾಹೇಬ್ ಫಾಲ್ಕೆಯವರ ಹೆಸರಿನಲ್ಲಿ ನೀಡಲಾಗುತ್ತದೆ .

ಭಾರತೀಯ ಸಿನಿಮಾ ಕ್ಷೇತ್ರದ ವಿವಿಧ ವಿಭಾಗದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಪ್ರತಿವರ್ಷ ನೀಡಲಾಗುತ್ತದೆ .

ಸ್ಥಾಪನೆ – 1969

ಕ್ಷೇತ್ರ : ಜೀವಮಾನ ಸಾಧನೆಗಾಗಿ ( ಸಿನಿಮಾ )

ನೀಡುವವರು – ಭಾರತ ಸರ್ಕಾರ

ಮೊತ್ತ – 10 ಲಕ್ಷ ರೂಪಾಯಿ

ಪದಕ – – ಸ್ವರ್ಣ ಕಮಲ

ಮೊದಲ ಪ್ರಧಾನ – 1969 ಮಾಡಿದ್ದು

ಪ್ರಧಾನ ಮಾಡುವವರು – ರಾಷ್ಟ್ರಪತಿಗಳು

ಈ ಪ್ರಶಸ್ತಿಯನ್ನು ವಿಶೇಷವಾಗಿ ರಾಷ್ಟ್ರೀಯ ಚಲನ ಚಿತ್ರೋತ್ಸವ ಸಂದರ್ಭದಲ್ಲಿ ಪ್ರಧಾನ ಮಾಡಲಾಗುತ್ತದೆ .

1969 ರಲ್ಲಿ ಈ ಪ್ರಶಸ್ತಿಯನ್ನು ಪ್ರಥಮವಾಗಿ ಹಿಂದಿ ಹೆಸರಿನಲ್ಲಿ ಸಿನಿಮಾದ ನಟನೆಗಾಗಿ ದೇವಿಕಾ ರಾಣಿಗೆ ನೀಡಲಾಯಿತು . ( ಮಹಾರಾಷ್ಟ್ರ )

ಈ ಪ್ರಶಸ್ತಿ ಪಡೆದ ಮೊದಲ ಛಾಯಾ ಚಿತ್ರಗ್ರಾಹಕ – ವಿ.ಕೆ. ಮೂರ್ತಿ ( 2008 )

ಇತ್ತೀಚಿಗೆ ಪ್ರಶಸ್ತಿ ಪಡೆದವರು 2013 – ಪ್ರಾಣ್ ಕಿಶನ್ ಸಿಂಗ್ ನಟನೆ ( ಹಿಂದಿ )

2014 – ಶಶಿ ಕಪೂರ್‌ ನಟನೆ ( ಹಿಂದಿ )

2015 – ಮನೋಜ ಕುಮಾರ . ( ಹಿಂದಿ )

2016 – – ಕೆ . ವಿಶ್ವನಾಥ ( ತೆಲುಗು )

2017 – ವಿನೋದ ಖನ್ನಾ ( ಹಿಂದಿ )

2019 – – ಅಮಿತಾಬ್ ಬಚ್ಚನ್ ( ಹಿಂದಿ )

ಪ್ರಶಸ್ತಿ ಪಡೆದ ಕನ್ನಡಿಗರು 1995 ಡಾ || ರಾಜಕುಮಾರ ( ನಟನೆ )

ವಿ.ಕೆ ಮೂರ್ತಿ ( ಛಾಯಾಗ್ರಹಣ ) 2008

ದಾದಾಸಾಹೇಬ್ ಫಾಲ್ಕೆ ಬಗ್ಗೆ ಮಾಹಿತಿ

ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, ‘ದುಂಡಿರಾಜ್ ಗೋವಿಂದ ಫಾಲ್ಕೆ’ಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು.

ಅವರು ಗತಿಸಿ 12 ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ.

ಭಾರತದಲ್ಲಿ ಚಲನಚಿತ್ರ ಲೋಕವನ್ನು ಸೃಷ್ಟಿಸಿದ ಅವರ ಮನೆಯಲ್ಲಿ ಇಟ್ಟ ಹೆಸರು, ‘ಧುಂಡಿರಾಜ್ ಗೋವಿಂದ ಫಾಲ್ಕೆ’ಯೆಂದು.

ಧುಂಡಿರಾಜರು, ಬರೋಡದ, ‘ಕಲಾಭವನ’ದ ಶಿಕ್ಷಣ ಮುಗಿಸಿ, ‘ಸರಕಾರಿ ಪ್ರಾಚ್ಯವಸ್ತು ಇಲಾಖೆ’ಯಲ್ಲಿ ‘ಚಿತ್ರಕಾರ’ರಾಗಿ, ‘ಛಾಯಾಚಿತ್ರಗಾರ’ರಾಗಿ 1903 ರಲ್ಲಿ ‘ಖಾಯಂ ನೌಕರಿ’ಯಲ್ಲಿ ಭರ್ತಿಯಾದರು.

ಧುಂಡಿರಾಜರು ‘ಫೋಟೋ-ಕೆಮಿಕಲ್ ರಂಗ’ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಚಲನಚಿತ್ರರಂಗದ ಮಾಯಾಲೋಕವನ್ನು ಈ ‘ಹರಿಶ್ಚಂದ್ರ ಚಿತ್ರ’ದ ಮುಖಾಂತರ, ಭಾರತೀಯ ಜನತೆಗೆ ಇತ್ತವರು, ‘ದಾದಾಸಾಹೇಬ್ ಫಾಲ್ಕೆ’ಯವರು.

ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ, ‘ದಾದಾ ಸಾಹೇಬ್ ಫಾಲ್ಕೆ’.

ಜನನ ಹಾಗೂ ಬಾಲ್ಯ

‘ಧುಂಡಿರಾಜ್’, ಜನಿಸಿದ್ದು ಮಹಾರಾಷ್ಟ್ರದ ‘ನಾಸಿಕ್’ ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ ‘ತ್ರ್ಯಂಬಕೇಶ್ವರ’ದ ವೈದಿಕ ಮನೆತನದಲ್ಲಿ.

ಜನನ : ೧೮೭೦ , ಏಪ್ರಿಲ್ ೩೦.

ತಂದೆ : ಜಿಶಾಸ್ತ್ರಿ ಫಾಲ್ಕೆ- ಸಂಸ್ಕೃತ ಶಿಕ್ಷಕರಾಗಿದ್ದರು.

ಚಿಕ್ಕಂದಿನಿಂದಲೂ ಧುಂಡಿರಾಜ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು.

ತ್ರ್ಯಂಬಕೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು, ರಂಗಸಜ್ಜಿಕೆಗಳು, ವೇಷಭೂಷಣಗಳು ಚಿಕ್ಕ ಬಾಲಕನಮೇಲೆ ಅಪಾರ ಪರಿಣಾಮವನ್ನು ಬೀರಿತ್ತು.

ನಟನೆ, ಹಾವ-ಭಾವಗಳ ಕಂಡಾಗ ಅವರ ಮೈ ರೋಮಾಂಚನಗೊಳ್ಳುತ್ತಿತ್ತು. ತಂದೆಯವರು ಹೇಳಿಕೊಡುತ್ತಿದ್ದ ವೈದಿಕ, ಸಂಸ್ಕೃತ ಪಾಠಗಳಲ್ಲಿ ಮುಂದಿದ್ದರೂ ನಾಟಕ, ನೃತ್ಯ, ಚಿತ್ರಕಲೆ ಇವುಗಳಲ್ಲಿ ಧುಂಡಿರಾಜನ ಆಸಕ್ತಿ ಗಮನಿಸಿದ ಅವರ ತಂದೆಯವರು ಸ್ವಲ್ಪ ಚಿಂತಿತರಾದರು.

ಲಲಿತ ಕಲೆಯ ಈ ಆಸಕ್ತಿಯಲ್ಲಿ ಪ್ರಬುದ್ಧಮಾನಕ್ಕೆ ಬರಲು, ತ್ಯ್ರಂಬಕೇಶ್ವರದಂತಹ ಚಿಕ್ಕ ಜಾಗ ಉತ್ತಮವಾದದ್ದಲ್ಲವೆಂದು, ಅರಿತರೂ, ದೂರವೆನಿಸಿದ್ದ ಮುಂಬಯಿಗೆ ಒಬ್ಬನೇ ಮಗನನ್ನು ಕಳಿಸಲು ಅವರಿಗೆ ಮನಸ್ಸು ಬರಲಿಲ್ಲ.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಯಾವ ಕ್ಷೇತ್ರಕ್ಕೆ ನೀಡಲಾಗುತ್ತದೆ ?

ಚಲನಚಿತ್ರ

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರಾರಂಭವಾದ ವರ್ಷ ?

1969

ಇನ್ನಷ್ಟು ವಿಷಯಗಳನ್ನು ಓದಿ :

ಕನ್ನಡದ ಪ್ರಥಮಗಳು

ಕನ್ನಡ ಗಾದೆ ಮಾತುಗಳು

ನಾಲ್ವಡಿ ಕೃಷ್ಣರಾಜ ಒಡೆಯರ ಬಗ್ಗೆ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published.