ಯಣ್ ಸಂಧಿ ಕನ್ನಡ ವ್ಯಾಕರಣ | Yan Sandhi in Kannada Examples
yan sandhi in kannada, yan sandhi in kannada examples, ಯಣ್ ಸಂಧಿ, yan sandhi 20 examples in kannada please answer, ಯಣ್ ಸಂಧಿ 20 ಉದಾಹರಣೆ
Yan Sandhi in Kannada
ಯಣ್ ಸಂಧಿ ಕನ್ನಡ ವ್ಯಾಕರಣವನ್ನು ಉದಾಹರಣೆಯೊಂದಿಗೆ ವಿವರಿಸಲಾಗಿದೆ
ಯಣ್ ಸಂಧಿ:
ಸಂಧಿ ಮಾಡುವಾಗ ಇ, ಈ, ಉ, ಊ, ಋ ಕಾರಗಳಿಗೆ ಸವರ್ಣವಲ್ಲದ ಸ್ವರ ಪರವಾದರೆ ಇ, ಈ, ಕಾರಗಳಿಗೆ ‘ಯ್’ ಕಾರವು, ಉ, ಊ, ಕಾರಗಳಿಗೆ ‘ವ್’ ಕಾರವು, ಋ ಕಾರಕ್ಕೆ ‘ರ್’ ವು ಆದೇಶವಾಗಿ ಬರುತ್ತವೆ. ಇದಕ್ಕೆ ಯಣ್ ಸಂಧಿಯೆಂದು ಹೆಸರು.
ಅತಿ + ಅವಸರ = ಅತ್ಯವಸರ
ಜಾತಿ + ಅತೀತ = ಜಾತ್ಯಾತೀತ
ಮನು + ಆದಿ = ಮನ್ವಾದಿ
ಕೋಟಿ + ಅಧೀಶ = ಕೋಟ್ಯಾಧೀಶ
ಗತಿ + ಅಂತರ = ಗತ್ಯಂತರ
ಪ್ರತಿ + ಉತ್ತರ = ಪ್ರತ್ಯುತ್ತರ
ಅತಿ + ಆಸೆ = ಅತ್ಯಾಸೆ
ಗುರು + ಆಜ್ಞೆ = ಗುರ್ವಾಜ್ಞೆ
yan sandhi 20 examples in kannada
ಸಂಸ್ಕೃತ ವ್ಯಾಕರಣದಲ್ಲಿ ಕೆಲವು ಸಂಜ್ಞೆಗಳನ್ನು ಮಾಡಿಕೊಂಡಿದ್ದಾರೆ . ಅದರ ಪ್ರಕಾರ ‘ ಯಣ್ ‘ ಎಂದರೆ “ ಯ ವ ರ ಲ ” ಈ ನಾಲ್ಕು ವ್ಯಂಜನಗಳು . ‘ ಯಣ್ ‘ ಸಂಧಿಯೆಂದರೆ ಈ ನಾಲ್ಕು ಅಕ್ಷರಗಳು ಆದೇಶವಾಗಿ ಬರುವುದೇ ಆಗಿದೆ . ಈ ಅಕ್ಷರಗಳು ಯಾವ ಅಕ್ಷರಕ್ಕೆ ಆದೇಶವಾಗಿ ಬರುತ್ತವೆಂಬುದನ್ನು ನೋಡಿರಿ :
ಅವನು ಅತ್ಯಂತ ಪರಾಕ್ರಮಿ .
ಈ ಮನ್ವಂತರದಲ್ಲಿ ನಡೆಯಿತು .
ನಮ್ಮದು ಪಿತ್ರಾರ್ಜಿತವಾದ ಆಸ್ತಿ .
ಯಣ್ ಸಂಧಿ 20 ಉದಾಹರಣೆ
yan sandhi 20 examples in kannada
ಈ ಮೂರು ವಾಕ್ಯಗಳಲ್ಲಿ ಬಂದಿರುವ ‘ ಅತ್ಯಂತ ‘ ‘ ಮನ್ವಂತರ ‘ ‘ ಪಿತ್ರಾರ್ಜಿತ ‘ ಈ ಶಬ್ದಗಳನ್ನು ಬಿಡಿಸಿ ಬರೆದರೆ :
( 1 ) ಅತಿ + ಅಂತ = ಆತ್ + ಮ್ + ಅಂತ = ಅತ್ಯಂತ ( ಇ + ಆ = ಯ್ಅ )
ಇಲ್ಲಿ ಇಕಾರದ ಸ್ಥಳದಲ್ಲಿ ‘ ಯ್ ‘ ಕಾರಾದೇಶವಾಗಿದೆ .
( 2 ) ಮನು + ಅಂತರ = ಮನ್ವ್ + ಅಂತರ = ಮನ್ವಂತರ ( ಉ + ಅ = ವ್ಅ )
ಇಲ್ಲಿ ಉಕಾರದ ಸ್ಥಾನದಲ್ಲಿ ‘ ವ್ ‘ ಕಾರಾದೇಶವಾಗಿದೆ .
( 3 ) ಪಿತೃ + ಆರ್ಜಿತ = ಒತ್ + ಆರ್ಜಿತ = – ಪಿತ್ರಾರ್ಜಿತ ( ಋ + ಆ = ರ್ ಆ )
ಇಲ್ಲಿ ಋಕಾರದ ಸ್ಥಾನದಲ್ಲಿ ‘ ಈ ‘ ಕಾರಾದೇಶವಾಗಿದೆ.
samskrutha sandhi examples in kannada ।। ಸಂಸ್ಕೃತ ಸ್ವರ ಸಂಧಿಗಳು
ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು.
ನಾವು ದೇಶೀಯ ಶಬ್ದಗಳೊಂದಿಗೆ ಸಂಸ್ಕೃತ ಶಬ್ದಗಳನ್ನು ಬಳಸುತ್ತೇವೆ . ಪೂರ್ವಪದ ಮತ್ತು ಉತ್ತರಪದಗಳೆರಡೂ ಸಂಸ್ಕೃತ ಪದಗಳೇ ಇದ್ದ ಸಂಧಿಗಳನ್ನು ‘ ಸಂಸ್ಕೃತ ಸಂಧಿ ‘ ಎಂದು ಹೆಸರು . ಸಂಸ್ಕೃತ ಸಂಧಿಗಳಲ್ಲಿ ಸ್ವರ , ವ್ಯಂಜನ ಸಂಧಿಗಳಿವೆ.
ಸಂಸ್ಕೃತ ಸ್ವರ ಸಂಧಿಗಳು:
ಸವರ್ಣಧೀರ್ಘ ಸಂಧಿ
ಗುಣ ಸಂಧಿ
ವೃದ್ಧಿಸಂಧಿ
ಯಣ್ ಸಂಧಿ
ಸವರ್ಣಧೀರ್ಘ ಸಂಧಿ:
ಸವರ್ಣಸ್ವರಗಳು ಒಂದರ ಮುಂದೊಂದು ಬಂದಾಗ ಅವೆರಡರ ಸ್ಥಾನದಲ್ಲಿ ಒಂದೇ ದೀರ್ಘಸ್ವರವು ಆದೇಶವಾಗಿ ಬರುವುದು. ಇದಕ್ಕೆ ಸವರ್ಣದೀರ್ಘಸಂಧಿಯೆಂದು ಹೆಸರು.
ಉದಾಹರಣೆ :
ಲಕ್ಷೀ + ಈಶ = ಲಕ್ಷ್ಮೀಶ
ದೇವ + ಅಸುರ = ದೇವಾಸುರ
ಸುರ + ಅಸುರ = ಸುರಾಸುರ
ಕವಿ + ಇಂದ್ರ = ಕವೀಂದ್ರ
ಗಿರಿ + ಈಶ = ಗಿರೀಶ
ಮಹಾ + ಆತ್ಮ = ಮಹಾತ್ಮ
ಗುಣ ಸಂಧಿ:
ಅ, ಆ ಕಾರಗಳಿಗೆ ಇ, ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಏ’ ಕಾರವು, ಉ, ಊ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ಓ’ ಕಾರವು, ಋ ಕರವು ಪರವಾದರೆ ಅವೆರಡರ ಸ್ಥಾನದಲ್ಲಿ ‘ಆರ್’ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ‘ಗುಣಸಂಧಿ’ ಎಂದು ಹೆಸರು.
ಉದಾಹರಣೆ :
ಸುರ + ಇಂದ್ರ = ಸುರೇಂದ್ರ
ಮಹಾ + ಋಷಿ = ಮಹರ್ಷಿ
ಧರಾ + ಇಂದ್ರ = ಧರೇಂದ್ರ
ಧರಾ + ಇಂದ್ರ = ಧರೇಂದ್ರ
ಮಹಾ + ಈಶ್ವರ = ಮಹೇಶ್ವರ
ದೇವ + ಋಷಿ = ದೇವರ್ಷಿ
ಚಂದ್ರ + ಉದಯ = ಚಂದ್ರೋದಯ
ವೃದ್ಧಿಸಂಧಿ:
ಅ, ಆ ಕಾರಗಳಿಗೆ ಏ, ಐ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ಐ ಕಾರವು, ಓ, ಔ ಕಾರಗಳು ಪರವಾದರೆ ಅವೆರಡರ ಸಾಧನೆದಲ್ಲಿ ಔ ಕಾರವು ಆದೇಶಗಳಾಗಿ ಬರುತ್ತವೆ. ಇದಕ್ಕೆ ವೃದ್ಧಿಸಂಧಿಯೆನ್ನುವರು.
ಲೋಕ + ಏಕವೀರ = ಲೋಕೈಕವೀರ
ಜನ + ಐಕ್ಯ = ಜನೈಕ್ಯ
ವಿದ್ಯಾ + ಐಶ್ವರ್ಯ = ವಿದ್ಯೈಶ್ವರ್ಯ
ಘನ + ಔದಾರ್ಯ = ಘನೌದಾರ್ಯ
ಮಹಾ + ಔದಾರ್ಯ = ಮಹೌದಾರ್ಯ