Vibhakti Pratyaya Chart | Kannada Vibhakti Pratyaya | Vibhakti Pratyaya Galu | ವಿಭಕ್ತಿ ಪ್ರತ್ಯಯಗಳು
vibhakti pratyaya chart | kannada vibhakti pratyaya | vibhakti pratyaya galu | ವಿಭಕ್ತಿ ಪ್ರತ್ಯಯಗಳು, vibhakti pratyaya in kannada, pdf, notesವಿಭಕ್ತಿ ಪ್ರತ್ಯಯಗಳು
ನಾಮ ಪದಗಳ ಮೂಲ ರೂಪಕ್ಕೆ ನಾಮ ಪುಕೃತಿ ಎಂದು ಹೇಳುತ್ತೇವೆ.ನಾಮ ಪ್ರಕೃತಿಗಳ ಜೊತೆ ಪ್ರತ್ಯಯಗಳು ಸೇರಿ ನಾಮಪದಗಳಾಗುತ್ತವೆ . ಈ ರೀತಿ “ ನಾಮ ಪ್ರಕೃತಿಗಳ ಜೊತೆ ಸೇರುವ ಅಕ್ಷರಗಳಿಗೆ ವಿಭಕ್ತಿ ಪ್ರತ್ಯಯವೆಂದು ಹೆಸರು ಅಥವಾ ” ನಾಮ ಪ್ರಕೃತಿಗಳಿಗೆ ಇರುವ ಸಂಭಂಧವನ್ನು ತಿಳಿಸಲುಸೇರಿರುವ ಪ್ರತ್ಯಯಕ್ಕೆ ವಿಭಕ್ತಿ ಪ್ರತ್ಯಯವೆಂದುಹೆಸರು . ಅಥವಾ ಕ್ರಿಯಾಪದದೊಂದಿಗೆ ನಾಮಪದಗಳ ಸಮಭಂಧವನ್ನು ತಿಳಿಸುವ ಕರ್ತೃ , ಕರ್ಮ , ಕರಣ , ಸಂಪುಧಾನ , ಅಪಾದಾನ , ಅಧಿಕರಣ , ಮುಂತಾದ ಕಾರಕಾರ್ಥಗಳನ್ನು ವಿಭಜಿಸಿ ಹೇಳುವ ಪ್ರತ್ಯಯಗಳನ್ನು ವಿಭಜಿಸಿ ಪ್ರತ್ಯಯ ‘ ಎಂದು ಕರೆಯಲಾಗಿದೆ .
” ವಿಭಕ್ತಿಗಳಿಗೆ ಪ್ರತ್ಯಯಗಳು ಸೇರಿ ಒಂದು ಪೂರ್ಣ ನಾಮಪದವಾಗುತ್ತದೆ.ಈ ವಿಭಕ್ತಿ ಪ್ರತ್ಯಯಗಳನ್ನು ಪುಲಿಂಗ , ಸ್ತ್ರೀಲಿಂಗ , ನಪುಂಸಕಲಿಂಗ , ಹಾಗೂ ಸರ್ವನಾಮ ಪದಗಳಿಗೆ ಅಳವಡಿಸಿ ಬರೆಯಬಹುದು ….
ಮೊದಮೊದಲು 8 ವಿಭಕ್ತಿ ಪ್ರತ್ಯಯಗಳು ಇದ್ದವು. ಆದರೆ ಈಗ ಸಂಬೋಧನಾ ವಿಭಕ್ತಿ ಯನ್ನು ಬಿಟ್ಟು 7 ವಿಭಕ್ತಿಗಳನ್ನು ಕಾಣಬಹುದು.
ಅವುಗಳೆಂದರೆ: ಪ್ರಥಮ, ದ್ವಿತೀಯ, ತೃತೀಯ, ಚತುರ್ಥಿ, ಪಂಚಮಿ, ಷಷ್ಠಿ, ಸಪ್ತಮೀವಿಭಕ್ತಿ ಗಳೆಂದು.
ಹಳೆಗನ್ನಡ ಪ್ರತ್ಯಗಳು: ಕ್ರಮವಾಗಿ:- ಮ್, ಅಮ್, ಇಮ್,ಗೆ(ಕೆ),
ಅತ್ತಣಿಂ, ಅ, ಒಳ್.
ಹೊಸಗನ್ನಡ ಪ್ರತ್ಯಯಗಳು: ಕ್ರಮವಾಗಿ:- ಉ,ಅನ್ನು,ಇಂದ,ಗೆ(ಕೆ),ದೆಸೆಯಿಂದ, ಅ,ಅಲ್ಲಿ
vibhakti pratyaya chart
ಸಂಖ್ಯೆ | ವಿಭಕ್ತಿ | ಅರ್ಥ (ಕಾರಾಕಾರ್ಥ) | ಹೊಸಗನ್ನಡ ಪ್ರತ್ಯಯ | ಹಳಗನ್ನಡ ಪ್ರತ್ಯಯ |
---|---|---|---|---|
೧ | ಪ್ರಥಮ | ಕರ್ತೃರ್ಥ/ಮಾಡುಗ(ಕೆಲಸ ಮಾಡುವ ನಾಮಪದ) | ಉ | ಮ್ |
೨ | ದ್ವಿತೀಯಾ | ಕರ್ಮಾರ್ಥ/ಕೆಲಸವು ಈ ನಾಮಪದದ ಮೇಲೆ ನಡೆಯುವುದು | ಅನ್ನು | ಅಂ |
೩ | ತೃತಿಯಾ | ಕರಣಾರ್ಥ (ಸಾಧನಾರ್ಥ)/ಕೆಲಸಕ್ಕೆ ಕಾರಣ/ಇದನ್ನು ಬಳಸಿ ಬೇರೊಂದು ನಾಮಪದ ಕೆಲಸ ನಡೆಸುವುದು | ಇಂದ | ಇಂ, ಇಂದಂ, ಇಂದೆ, ಎ |
೪ | ಚತುರ್ಥೀ | ಸಂಪ್ರದಾನ (ಕೊಡುವಿಕೆ)/ತಲುಪುವ ಜಾಗ | ಗೆ, ಇಗೆ, ಕ್ಕೆ, ಆಕ್ಕೆ | ಗೆ, ಕೆ, ಕ್ಕೆ |
೫ | ಪಂಚಮೀ | ಅಪಾದಾನ (ಅಗಲಿಕೆ)/ಪ್ರೇರಣೆ | ದೆಸೆಯಿಂದ | ಅತ್ತಣಿಂ, ಅತ್ತಣಿಂದಂ, ಅತ್ತಣಿಂದೆ |
೬ | ಷಷ್ಠೀ | ಸಂಬಂಧ/ನಂಟು/ಬೆಸುಗೆ | ಅ | ಅ |
೭ | ಸಪ್ತಮೀ | ಅಧಿಕರಣ/ಜಾಗ | ಅಲ್ಲಿ, ಒಳು, ಆಗೆ | ಒಳ್ |
ಮನೆ ಎಂಬ ನಾಮಪದಕ್ಕೆ ಏ೦ಟು ವಿಭಕ್ತಿ ಪ್ರತ್ಯಯಗಳನ್ನು ಸೇರಿಸುವುದು ಹೇಗೆಂದು ಕೆಳಗೆ ಕೊಡಲಾಗಿದೆ.
- ಪ್ರಥಮ ವಿಭಕ್ತಿ: ಮನೆ + ಉ = ಮನೆಯು
- ದ್ವಿತೀಯ ವಿಭಕ್ತಿ: ಮನೆ + ಅನ್ನು = ಮನೆಯನ್ನು
- ತೃತೀಯ ವಿಭಕ್ತಿ: ಮನೆ + ಇಂದ = ಮನೆಯಿಂದ
- ಚತುರ್ಥೀ ವಿಭಕ್ತಿ: ಮನೆ + ಗೆ = ಮನೆಗೆ
- ಪಂಚಮೀ ವಿಭಕ್ತಿ: ಮನೆ + ದೆಸೆಯಿಂದ = ಮನೆಯ ದೆಸೆಯಿಂದ
- ಷಷ್ಠೀ ವಿಭಕ್ತಿ: ಮನೆ + ಅ = ಮನೆಯ
- ಸಪ್ತಮೀ ವಿಭಕ್ತಿ: ಮನೆ + ಅಲ್ಲಿ = ಮನೆಯಲ್ಲಿ, ಮನೆಯೊಳು, ಮನೆಯಾಗ
- ಸಂಭೋದನ ವಿಭಕ್ತಿ: ಮನೆ + ಆ = ಮನೆಯಾ
ಪ್ರಬಂಧಗಳ ಪಟ್ಟಿ
- ಶಬ್ದ ಮಾಲಿನ್ಯ ಕುರಿತು ಪ್ರಬಂಧ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ