ವೈಯಕ್ತಿಕ ಪತ್ರ ಕನ್ನಡ | Personal Letter Writing In Kannada

Vaiyaktika Patra in Kannada | ಖಾಸಗಿ ಪತ್ರ ಕನ್ನಡ

Vaiyaktika Patra in Kannada, Personal Letter Writing in Kannada, Letter writing in kannada, ಕನ್ನಡ ಪತ್ರ ಲೇಖನ, easy letter writing in kannada

Vaiyaktika Patra in Kannada

ಖಾಸಗಿ ಪತ್ರ ಬರೆಯುವ ವಿಧಾನದ ಕುರಿತು ಈ ಲೇಖನದಲ್ಲಿ ನೀಡಲಾಗಿದೆ

Spardhavani Telegram

ಖಾಸಗಿ ಪತ್ರ ಉದಾಹರಣೆ

kasagi patra in kannada

ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing
ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing

ಶಿವಮೊಗ್ಗ ಪ್ರೌಢ ಶಾಲೆಯಲ್ಲಿ ಓದುತ್ತಿರುವ ಮಹೇಂದ್ರ ಎಂದು ಭಾವಿಸಿ ಸಾಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ತಮ್ಮನಾದ ವಿನಾಯಕನಿಗೆ ನಿನ್ನ ಹುಟ್ಟುಹಬ್ಬಕ್ಕೆ ಬರುವಂತೆ ತಿಳಿಸಿ ಒಂದು ಪತ್ರ ಬರೆಯಿರಿ .

ಕ್ಷೇಮ

ದಿನಾಂಕ :

ಮಹೇಂದ್ರ

ಹತ್ತನೇ ತರಗತಿ , ‘ ಎ ‘ ವಿಭಾಗ

ಸರ್ಕಾರಿ ಪ್ರೌಢಶಾಲೆ 20-09-2021

ಶಿವಾಜಿ ಕಾಲೋನಿ ,

ಶಿವಮೊಗ್ಗ .

ಪ್ರೀತಿಯ ತಮ್ಮ ಚಿ || ವಿನಾಯಕನಿಗೆ ನಿನ್ನ ಅಣ್ಣನಾದ ಮಹೇಂದ್ರ ನ ಆಶೀರ್ವಾದಗಳು , ನಾನು ಇಲ್ಲಿ ಕ್ಷೇಮ , ಅಲ್ಲಿ ನಿನ್ನ ಕ್ಷೇಮ ಸಮಾಚಾರಕ್ಕೆ ಪತ್ರ ಬರೆ . ನೀನು ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿಚಾರ ತೀರ್ಥರೂಪರ ಪತ್ರದಿಂದ ತಿಳಿದು ತುಂಬ ಸಂತೋಷವಾಯಿತು . ರಾಜ್ಯಮಟ್ಟದ ಸ್ಪರ್ಧೆಯಲ್ಲೂ ನಿನಗೆ ಯಶಸ್ಸು ಲಭಿಸಲಿ . ಇದೇ ಅಕ್ಟೋಬರ್ 2 ರಂದು ನನ್ನ ಹುಟ್ಟುಹಬ್ಬವಿದೆ . ನನ್ನ ಎಲ್ಲಾ ಸ್ನೇಹಿತರನ್ನೂ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದೇನೆ . ನೀನೂ ತಪ್ಪದೆ ಬರಬೇಕು . ಮಾತೃಶ್ರೀಯವರಿಗೆ ಸಾದರಪೂರ್ವಕ ಪ್ರಣಾಮಗಳನ್ನು ತಿಳಿಸು .

ಆಶೀರ್ವಾದಗಳೊಂದಿಗೆ

ನಿನ್ನ ಪ್ರೀತಿಯ ಅಣ್ಣ

ಮಹೇಂದ್ರ

ಹೊರ ವಿಳಾಸ :

ಇವರಿಗೆ ,

ವಿನಾಯಕ

೫ ನೇ ತರಗತಿ , ‘ ಬಿ ‘ ವಿಭಾಗ

ಸರ್ಕಾರಿ ಪ್ರೌಢಶಾಲೆ

ಸಾಗರ

ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing
ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing

Personal Letter Writing In Kannada

ನೀವು ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಓದುತ್ತಿರುವ ‘ ರಾಜೇಂದ್ರ ‘ ಎಂದು ಭಾವಿಸಿ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು 10000 ರೂ ಹಣ ಕಳುಹಿಸಿ ಕೊಡುವಂತೆ ಸಾಗರದಲ್ಲಿರುವ ನಿಮ್ಮ ತಂದೆಯವರಿಗೊಂದು ಪತ್ರ ಬರೆಯಿರಿ .

ಕ್ಷೇಮ ದಿನಾಂಕ : ನವೆಂಬರ್ 11 , 2021

ರಾಜೇಂದ್ರ

ಪ್ರಥಮ ಪಿ.ಯು.ಸಿ.

ಸರ್ಕಾರಿ ಪದವಿ ಪೂರ್ವ ಕಾಲೇಜು ,

ಶಿವಮೊಗ್ಗ

ತೀರ್ಥರೂಪರವರಿಗೆ ನಿಮ್ಮ ಮಗನಾದ ರಾಜೇಂದ್ರನು ಮಾಡುವ ದೀರ್ಘದಂಡ ಪ್ರಣಾಮಗಳು . ನಾನು ಇಲ್ಲಿ ಕ್ಷೇಮವಾಗಿದ್ದೇನೆ . ನಿಮ್ಮ ಕ್ಷೇಮ ಸಮಾಚಾರದ ಬಗ್ಗೆ ಪತ್ರ ಬರೆಯಿರಿ .

ನಾನು ನಿಮಗೆ ತಿಳಿಸುವುದೇನೆಂದರೆ ನಮ್ಮ ಕಾಲೇಜಿನಲ್ಲಿ ಇದೇ ತಿಂಗಳು 26 , 27 ರಂದು ಬೇಲೂರು , ಹಳೇಬೀಡು , ಶ್ರವಣಬೆಳಗೋಳ ಮುಂತಾದ ಐತಿಹಾಸಿಕ ಸ್ಥಳಗಳಿಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಿದ್ದಾರೆ .

ನನ್ನ ಗೆಳೆಯರೆಲ್ಲರೂ ಪ್ರವಾಸಕ್ಕೆ ಹೊರಟಿದ್ದಾರೆ . ನೀವು ಒಪ್ಪಿಗೆ ನೀಡಿ 10000 ರೂಪಾಯಿಗಳನ್ನು ಅಂಚೆಯ ಮೂಲಕ ಕಳುಹಿಸಿಕೊಟ್ಟರೆ ನಾನು ಹೋಗಿಬರುತ್ತೇನೆ .

ಮಾತೃಶ್ರೀಯವರಿಗೆ ನನ್ನ ಅನಂತ ನಮಸ್ಕಾರಗಳು .

ನಿಮ್ಮ ಉತ್ತರಕ್ಕಾಗಿ ಕಾಯುತ್ತೇನೆ .

ಇಂತಿ ನಿಮ್ಮ ಪ್ರೀತಿಯ ಮಗ

ರಾಜೇಂದ್ರ

ಹೊರ ವಿಳಾಸ :

ಇವರಿಗೆ ,

ಅಣ್ಣಪ್ಪ

ಕುವೆಂಪು ನಗರ , ೫ ನೇ ಅಡ್ಡ ರಸ್ತೆ ,

ಸಾಗರ -577-418

ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing
ವೈಯಕ್ತಿಕ ಪತ್ರ ಲೇಖನಗಳು | Vaiyaktika Patra in Kannada Best No1 Letter Writing

ತಂದೆಗೆ ವೈಯಕ್ತಿಕ ಪತ್ರ ಲೇಖನ

ವಿದ್ಯಾಭ್ಯಾಸದ ಪ್ರಗತಿಯನ್ನು ಕುರಿತು ತಂದೆಗೆ ಬರೆದ ಪತ್ರ

ದಿನಾಂಕ : ಜನೇವರಿ 8/2021

ನಾಗರಾಜ

ಹತ್ತನೆಯ ತರಗತಿ , ‘ ಎ ‘ ವಿಭಾಗ

ಶಿವಮೊಗ್ಗ ಪ್ರೌಢಶಾಲೆ

ಶಿವಮೊಗ್ಗ

ಪೂಜ್ಯ ತಂದೆಯವರಿಗೆ ನಿಮ್ಮ ಮಗನಾದ ನಾಗರಾಜನು ಮಾಡುವ ಸಾಷ್ಟಾಂಗ ನಮಸ್ಕಾರಗಳು . ನಾನು ತಮ್ಮ ಆಶೀರ್ವಾದದಿಂದ ಕ್ಷೇಮವಾಗಿದ್ದೇನೆ . ತಮ್ಮ ಕ್ಷೇಮ ಸಮಾಚಾರದ ಬಗ್ಗೆ ಪತ್ರ ಬರೆಯಿರಿ .

ನನ್ನ ಅಭ್ಯಾಸ ಇಲ್ಲಿ ಉತ್ತಮ ರೀತಿಯಲ್ಲಿ ಸಾಗಿದೆಯೆಂದು ತಿಳಿಸಲು ಸಂತೋಷವಾಗುತ್ತಿದೆ . ಎಲ್ಲಾ ವಿಷಯಗಳ ಪಾಠಗಳೂ ಮುಕ್ತಾಯದ ಹಂತಕ್ಕೆ ಬಂದಿವೆ . ನನ್ನ ಅದೃಷ್ಟಕ್ಕೆ ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ .

ಅರ್ಥವಾಗುವ ರೀತಿಯಲ್ಲಿ ಬೋಧಿಸುತ್ತಾರೆ . ತಿಳಿಯದಿದ್ದರೆ , ಕೇಳಿದರೆ ಬೇಸರವಿಲ್ಲದೆ ತಿಳಿಸಿ ಹೇಳುತ್ತಾರೆ . ಹೀಗಾಗಿ ನನಗೆ ಯಾವ ವಿಷಯಗಳೂ ಕಷ್ಟವೆನಿಸುತ್ತಿಲ್ಲ .

ಇದೇ ತಿಂಗಳ ಕೊನೆಯಲ್ಲಿ ಮೊದಲ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ . ಹೆಚ್ಚಿನ ಅಂಕಗಳನ್ನು ಪಡೆಯುವ ಪ್ರಯತ್ನ ಮಾಡುತ್ತೇನೆ . ಅದಕ್ಕೆ ತಮ್ಮ ಆಶೀರ್ವಾದವನ್ನು ಬಯಸುತ್ತೇನೆ .

ಮಾತೃಶ್ರೀಯವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿರಿ . ತಂಗಿಗೆ ನನ್ನ ಸವಿನೆನಪುಗಳನ್ನು ತಿಳಿಸಿರಿ . ನಿಮ್ಮ ಪತ್ರದ ದಾರಿ ಕಾಯುತ್ತೇನೆ .

ಇಂತಿ ನಿಮ್ಮ ಪ್ರೀತಿಯ ಮಗ

ನಾಗರಾಜ

ಹೊರ ವಿಳಾಸ :

ಇವರಿಗೆ ,

ಅಣ್ಣಪ್ಪ

‘ಕಮಲನಗರ ,

6 ನೇ ಕ್ರಾಸ , ಸಾಗರ

ಖಾಸಗಿ ಪತ್ರ ಕನ್ನಡ ತಂದೆಗೆ

ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಗೆಳೆಯ / ಗೆಳತಿಯನ್ನು ಆಹ್ವಾನಿಸಿ ಬರೆದ ಪತ್ರ

ಕ್ಷೇಮ

ದಿನಾಂಕ ಜನೇವರಿ 18/2021

ಸಂಚಿತ

ಸರ್ಕಾರಿ ಪ್ರೌಢಶಾಲೆ

ಅಂಬೇಡ್ಕರ್ ಕಾಲೋನಿ , ಶಿವಮೊಗ್ಗ 577201

ಪ್ರೀತಿಯ ಗೆಳತಿಯಾದ ರಮ್ಯಾಗೆ ನಿನ್ನ ಗೆಳತಿಯಾದ ಸಂಚಿತ ಮಾಡುವ ವಂದನೆಗಳು . ನಾನು ಇಲ್ಲಿ . ನನ್ನ ಅಭ್ಯಾಸದೊಂದಿಗೆ ಆರಾಮದಿಂದ ಇರುವೆನು , ನೀನು ಕೂಡಾ ಆರಾಮದಿಂದ ಇರುವೆ ಎಂದು ಭಾವಿಸಿರುವೆನು . ನಿನಗೂ ಮತ್ತು ಉಳಿದ ಎಲ್ಲ ಗೆಳೆಯರಿಗೂ ಮಕರ ಸಂಕ್ರಾಂತಿಯ ಶುಭಾಶಯಗಳು .

ಈಗ ಪತ್ರ ಬರೆಯಲು ಕಾರಣವೇನೆಂದರೆ ನಮ್ಮ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನವು ಬರುವ 23/11/2021 ರಂದು ನಡೆಯಲಿದೆ . ಅಂದು ಸಾಯಂಕಾಲ 6 ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಖ್ಯಾತ ವಾಗ್ನಿಗಳಾದ ಸೂಲಿಬೆಲೆ ಚಕ್ರವರ್ತಿಗಳು ಆಗಮಿಸಲಿದ್ದಾರೆ .

ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಬಹುಮಾನ ವಿತರಣೆ ನಡೆಯಲಿದೆ . ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿವೆ . ನಾನೂ ಕೂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆ . ನಮ್ಮ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ನೀನು ತಪ್ಪದೇ ಬರಬೇಕೆಂದು ವಿನಂತಿಸುವೆನು .

ಇಂತಿ ನಿನ್ನ ಗೆಳೆಯ

ಸಂಚಿತ

ಹೊರ ವಿಳಾಸ :

ಇವರಿಗೆ

ವಾಗೀಶ ಎಂ .

೯ ನೇ ತರಗತಿ ,

ಸರಕಾರಿ ಪ್ರಾಥಮಿಕ ಶಾಲೆ ,

ಬೈಚಬಾಳ , ತಾ | ಹುಣಸಗಿ , ಜಿ ಯಾದಗಿರಿ

ವೈಯಕ್ತಿಕ ಪತ್ರ ಎಂದರೇನು?

ವೈಯಕ್ತಿಕ ಪತ್ರ ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ (ವೃತ್ತಿಪರ ಕಾಳಜಿಗಿಂತ) ಸಂಬಂಧಿಸಿದ ಒಂದು ವಿಧದ ಪತ್ರ (ಅಥವಾ ಅನೌಪಚಾರಿಕ ರಚನೆ ) ಮತ್ತು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಕಳುಹಿಸಲಾಗುತ್ತದೆ.

ಖಾಸಗಿ ಪತ್ರ ಉದಾಹರಣೆ

ತಂದೆ , ತಾಯಿ ,ಗೆಳೆಯೆಯರಿಗೆ ಬರೆಯುವ ಪತ್ರ

ಇತರ ಕನ್ನಡ ಗಾದೆ ಮಾತುಗಳ ಲಿಂಕ್

ಗಾದೆಗಳು

ಕ್ರಿಯಾಪದಗಳು

ಪ್ರಬಂಧಗಳ ಪಟ್ಟಿ

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *