kriya padagalu in kannada examples, kriya padagalu in kannada grammar, kriya padagalu in kannada examples, kriya padagalu in kannada, 10 kriya padagalu in kannada, kaatru karma kriya padagalu in kannada, karthru karma kriya padagalu in kannada, 50 ಕ್ರಿಯಾಪದಗಳು, 10 ಕ್ರಿಯಾಪದಗಳು, ಸಂಭಾವನಾರ್ಥಕ ಕ್ರಿಯಾಪದ ಉದಾಹರಣೆ, ಕ್ರಿಯಾಪದ ವಿಧಗಳು, ವಿದ್ಯರ್ಥಕ ಕ್ರಿಯಾಪದ ಉದಾಹರಣೆ, ವಿದ್ಯರ್ಥಕ ಕ್ರಿಯಾಪದ ಎಂದರೆ
Kriya Padagalu In Kannada Examples
ಕ್ರಿಯಾಪದಗಳ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಪರಿವಿಡಿ
ಕ್ರಿಯಾಪ್ರಕೃತಿ ( ಧಾತು )
ಪದವೆಂದರೆ ಪ್ರಕೃತಿಗೆ ಪ್ರತ್ಯಯ ಸೇರಿ ಆದ ಶಬ್ದರೂಪವೆಂದು ನಿಮಗೆ ತಿಳಿದಿದೆ ,
( 1 ) ಅಣ್ಣ ಊಟವನ್ನು ಮಾಡುವನು .
( 2 ) ತಂದೆಯು ಕೆಲಸವನ್ನು ಮಾಡಿದನು .
(3 ) ಅವನು ನಾಳೆಯದಿನ ಮಾಡಾನು ( ಮಾಡಿಯಾನು .
( 4 ) ದೇವರು ಒಳ್ಳೆಯದನ್ನು ಮಾಡಲಿ .
( 5 ) ತಾಯಿಯು ಅಡಿಗೆಯನ್ನು ಮಾಡುತ್ತಾಳೆ .
ಅವನು ಊಟವನ್ನು ಮಾಡಿದನುನು:
ಮೇಲೆ ಇರುವ ವಾಕ್ಯಗಳಲ್ಲಿ ಗೆರೆ ಎಳೆದಿರುವ ಪದಗಳಾದ- ಮಾಡುತ್ತಾಳೆ , ಮಾಡಿದನು , ಮಾಡುವನು , ಮಾಡಲಿ , ಮಾಚಾನು ( ಮಾರಿಯಾನು ) , ಮಾಡನು -ಇವೆಲ್ಲ ಒಂದೊಂದು ಕ್ರಿಯೆಯು ಪೂರ್ಣಗೊಂಡ ಅರ್ಥಕೊಡುವಂಥ ಪದಗಳಾಗಿವೆ . ಆದುದರಿಂದ ಹೀಗೆ ಪೂರ್ಣಗೊಂಡ ಒಂದು ಕ್ರಿಯೆಯ ಅರ್ಥಕೊಡುವ – ಪದಗಳನ್ನು ಸಾಮಾನ್ಯವಾಗಿ ಕ್ರಿಯಾಪದ ಎನ್ನುತ್ತೇವೆ .
ಕ್ರಿಯಾಪದಗಳು ಕನ್ನಡ ವ್ಯಾಕರಣ
ಮೇಲೆ ಹೇಳಿದ ಆರು ಕ್ರಿಯಾಪದಗಳಿಗೆಲ್ಲ ಮೂಲ ‘ ಮಾಡು ‘ ಎಂಬ ಶಬ್ದವಾಗಿದೆ . ಇದು ಕ್ರಿಯೆಯ ಅರ್ಥವನ್ನು ಕೊಡುವ ಮೂಲ ‘ ರೂಪವೇ ಆಗಿದೆ .
ಮಾಡುತ್ತಾನೆ ಮಾಡಿದನು ಮಾಡುವನು
ಮಾಡಲಿ ಮಾಡು ಮಾಡಾನು ಮಾಡನು
ಮಾಡು ‘ ಎಂಬ ಈ ಮೂಲರೂಪಕ್ಕೆ ಅನೇಕ ಪ್ರತ್ಯಯಗಳು ಸೇರಿದ ಮೇಲೆ ಆರು ವಿವಿಧ ರೂಪಗಳನ್ನು ಹೊಂದಿ ವಿವಿಧವಾದ ಕ್ರಿಯೆಯನ್ನು ಸೂಚಿಸುವ ಕ್ರಿಯಾಪದವಾಗುವುದು . ಇಂಥ ಕ್ರಿಯಾಪದದ ಮೂಲರೂಪವನ್ನು ಕ್ರಿಯಾಪ್ರಕೃತಿ ‘ ಅಥವಾ ‘ ಧಾತು ‘ ಎನ್ನುವರು . ಇದರ ಸೂತ್ರವನ್ನು ಮುಂದಿನಂತೆ ಹೇಳಬಹುದು .
ಕ್ರಿಯಾರ್ಥವನ್ನು ಕೊಡುವುದಾಗಿಯೂ , ಪ್ರತ್ಯಯವನ್ನು ಹೊಂದದೆಯೂ ಇರುವ ಶಬ್ದಕ್ಕೆ ಕ್ರಿಯಾಪ್ರಕೃತಿ ‘ ಅಥವಾ ‘ ಧಾತು ‘ ಎನ್ನುವರು.
( 1 ) ಮೂಲಧಾತುಗಳು
ಉದಾಹರಣೆಗೆ : – ಮಾಡು , ತಿನ್ನು , ಹೋಗು , ಬರು , ಮಲಗು , ಏಳು , ನಡೆ , ನೋಡು , ಓಡು , ನಿಲ್ಲು , ಓದು , ಆಗು , ಹೊಳೆ , ಬದುಕು , ಇಕ್ಕು , ಮುಗಿ , ತೂಗು , ಹಿಗ್ಗು , ನಡುಗು , ಮಿಂಚು , ಮೆಟ್ಟು , ಹಂಚು , ಅಂಜು , ಈಜು , ಉಜ್ಜು , ದಾಟು , ಹುಟ್ಟು , ಒಕ್ಕು , ತುಂಬು , ಮುಚ್ಚು , ಹಿಡಿ , ಕೊಡು , ಹರಡು , ಇಡು , ಪಡೆ , ಕುಣಿ , ಕಾಣು , ಸುತ್ತು , ಒತ್ತು , ಎತ್ತು , ಬಿತ್ತು , ತೆರು , ಒದೆ , ತಿದ್ದು , ಹೊಡೆ , ಬಡಿ , ಬರೆ , ನೆನೆ , ಎನ್ನು , ಒಪ್ಪು , ತಪ್ಪು , ನಂಬು , ಉಬ್ಬು , ಕಾ , ಬೇ
( 2 ) ಸಾಧಿತ ಧಾತು ( ಪ್ರತ್ಯಯಾಂತ ಧಾತು )
ಒಮ್ಮೊಮ್ಮೆ ನಾವು ನಾಮಪ್ರಕೃತಿಗಳನ್ನೇ ಧಾತುಗಳನ್ನಾಗಿ ಮಾಡಿಕೊಂಡು ಕ್ರಿಯಾಪ್ರಕೃತಿಗಳಿಗೆ ಹತ್ತುವ ಪ್ರತ್ಯಯ ಹಚ್ಚಿ ಕ್ರಿಯಾಪದಗಳ ನ್ನಾಗಿ ಮಾಡಿ ಹೇಳುತ್ತೇವೆ .
ಉದಾಹರಣೆಗೆ : –
ಅವನು ಆ ಗ್ರಂಥವನ್ನು ಕನ್ನಡಿಸಿದನು . ‘ ಕನ್ನಡ ‘ ಎಂಬುದು ನಾಮಪ್ರಕೃತಿಯಾಗಿದೆ . ಇದು ಧಾತುವಲ್ಲ . ಇದರ ಮೇಲೆ ‘ ಇಸು ‘ ಪ್ರತ್ಯಯ ಹಚ್ಚಿ ‘ ಕನ್ನಡಿಸು ‘ ಎಂದು ಆಗುವುದಿಲ್ಲವೆ ? ಹೀಗೆ ‘ ಕನ್ನಡಿಸು ‘ ಎಂದಾದ ಮೇಲೆ ಇದು ಧಾತುವೆನಿಸುತ್ತದೆ .
ಇದರ ಮೇಲೆ ಧಾತುಗಳ ಮೇಲೆ ಸೇರಬೇಕಾದ ಎಲ್ಲ ಪ್ರತ್ಯಯಗಳು ಸೇರಿ – ಕನ್ನಡಿಸುತ್ತಾನೆ , ಕನ್ನಡಿಸಿದನು , ಕನ್ನಡಿಸುವನು , ಕನ್ನಡಿಸಲಿ , ಕನ್ನಡಿಸಾನು , ಕನ್ನಡಿಸನು – ಇತ್ಯಾದಿ ಕ್ರಿಯಾಪದಗಳಾಗಿ ಬಳಸಲ್ಪಡುತ್ತವೆ . ಇಂಥ ಧಾತುಗಳನ್ನೇ ನಾವು ಸಾಧಿತಧಾತು ಅಥವಾ ಪ್ರತ್ಯಯಾಂತಧಾತು ಗಳೆಂದು ಕರೆಯುತ್ತೇವೆ.