ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು | Uparashtrapathi in Kannada

ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು | Uparashtrapathi in Kannada

ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು, vice president of india in kannada, vice president in kannada, vice president of india essay in kannada, about vice president of india in kannada, vice president of india information in kannada

Uparashtrapathi in Kannada

Spardhavani Telegram
  • ಭಾರತದ ಉಪರಾಷ್ಟ್ರಪತಿಗಳ ಪ್ರಸ್ತುತ ( 2010 ) ವೇತನ ತಿಂಗಳಿಗೆ 1.25 ಲಕ್ಷವಾಗಿದೆ .
  • ಉಪರಾಷ್ಟ್ರಪತಿಗಳನ್ನು ಸಂಸತ್ತಿನ ಎರಡು ಸದನಗಳ ಸದಸ್ಯರುಗಳು ಆಯ್ಕೆ ಮಾಡುತ್ತಾರೆ .
  • ರಾಷ್ಟ್ರಪತಿ & ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಟ 35 ವರ್ಷ ವಯಸ್ಸಾಗಿರಬೇಕು .
  • ರಾಷ್ಟ್ರಪತಿ & ಉಪರಾಷ್ಟ್ರಪತಿಗಳ ಅಧಿಕಾರವಧಿ ಐದು ವರ್ಷಗಳಾಗಿದೆ .
  • ಉಪರಾಷ್ಟ್ರಪತಿಗಳ ಚುನಾವಣೆಯನ್ನು ಎರಡು ಸದನದ ಸದಸ್ಯರು ಗುಪ್ತ ಮತದಾನದ ಮೂಲಕ ವರ್ಗಾಯಿಸುವ ಪ್ರಮಾಣಾನುಗುಣ ಪದ್ಧತಿ ಅನುಗುಣವಾಗಿ ಚುನಾಯಿಸುತ್ತಾರೆ .
  • ಭಾರತದ ಸಂವಿಧಾನ . . . ಉಪರಾಷ್ಟ್ರಪತಿಗಳು ರಾಜೀನಾಮೆಯನ್ನು ರಾಷ್ಟ್ರಪತಿಗೆ ನೀಡಿ ಹುದ್ದೆ ಖಾಲಿ ಮಾಡಬಹುದು .
  • ಉಪರಾಷ್ಟ್ರಪತಿ ಹುದ್ದೆಯು ಭಾರತದ 2 ನೇ ಅತ್ಯುನ್ನತ ಹುದ್ದೆಯಾಗಿದೆ .

Uparashtrapathi in Kannada

  • ಉಪರಾಷ್ಟ್ರಪತಿಗಳ ಹುದ್ದೆಯು ಖಾಲಿಯಾದರೆ ಆ ಹುದ್ದೆಗೆ ತಕ್ಷಣ ಚುನಾವಣೆ ನಡೆಸಿ ಹೊಸ ಉಪರಾಷ್ಟ್ರಪತಿಗಳನ್ನು ನೇಮಕ ಮಾಡಬೇಕೆಂದು ಸಂವಿಧಾನದ 68 ನೇ ವಿಧಿ ತಿಳಿಸುತ್ತದೆ .
  • ಉಪರಾಷ್ಟ್ರಪತಿಗಳ ಅಧಿಕಾರವಧಿಯು ಅಧಿಕಾರ ಸ್ವೀಕರಿಸಿದ ದಿನದಿಂದ ಐದು ವರ್ಷಗಳಾಗಿರುತ್ತದೆ .
  • 1997 ರ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣಾ ಕಾಯ್ದೆ ಅನ್ವಯ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಯನ್ನು ನಡೆಸಲಾಗುತ್ತದೆ .
ಭಾರತದ ಉಪ ರಾಷ್ಟ್ರಪತಿ ಪ್ರಶ್ನೋತ್ತರಗಳು | Uparashtrapathi in Kannada
Uparashtrapathi in Kannada ಜಿಕೆ

ಓದಿ :- ಭಾರತದ ರಾಷ್ಟ್ರಪತಿ ಬಗ್ಗೆ ಮಾಹಿತಿ ಪ್ರಶ್ನೋತ್ತರಗಳು

  • ಉಪರಾಷ್ಟ್ರಪತಿಗಳ ಪದಚ್ಯುತಿ ಬಗ್ಗೆ ಸಂವಿಧಾನದಲ್ಲಿ ವಿವರಣೆ ನೀಡಲಾಗಿಲ್ಲ .
  • ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎರಡು ಸದನದ ಸದಸ್ಯರು ಜಂಟಿ ಸದನ ಸೇರಿ ಆಯ್ಕೆ ಮಾಡುತ್ತಿದ್ದರು , ಆದರೆ 1961 ರ ಸಂವಿಧಾನದ 11 ನೇ ತಿದ್ದುಪಡಿಯಲ್ಲಿ ಜಂಟಿ ಸದನದ ಅವಶ್ಯಕತೆ ಇಲ್ಲವೆಂದು ಪ್ರತ್ಯೇಕವಾಗಿ ಚುನಾವಣೆ ನಡೆಸಿ ಆಯ್ಕೆ ಮಾಡಲಾಯಿತು .
  • ಭಾರತದ ಉಪರಾಷ್ಟ್ರಪತಿಗಳು ನವದೆಹಲಿಯಲ್ಲಿ ಅಧಿಕೃತವಾದ ನಿವಾಸ ಹೊಂದಿದ್ದು , ನಿವೃತ್ತರಾದ ನಂತರ ಪಿಂಚಣಿ ಯನ್ನು ಕೂಡ ಪಡೆಯುತ್ತಾರೆ .
  • ಇದು ಅಮೇರಿ ಸಂಯುಕ್ತ ಸಂಸ್ಥಾನದ ಉಪಾಧ್ಯಕ್ಷರ ಹುದ್ದೆಯನ್ನು ಹೋಲುತ್ತದೆ .
  • ಉಪರಾಷ್ಟ್ರಪತಿಗಳು ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರಾಗಿದ್ದಾರೆ .
  • ರಾಷ್ಟ್ರಪತಿಗಳ ಹುದ್ದೆ ಖಾಲಿಯಾದ ಸಂದರ್ಭದಲ್ಲಿ ಉಪರಾಷ್ಟ್ರಪತಿಗಳ ಅಧಿಕಾರವನ್ನು ಚಲಾಯಿಸುತ್ತಾರೆ ‘ ಎಂದು ಸಂವಿಧಾನದ 65 ನೇ ವಿಧಿ ತಿಳಿಸುತ್ತದೆ .

ಓದಿ :- ಮೂಲಭೂತ ಹಕ್ಕುಗಳು

  • ಉಪರಾಷ್ಟ್ರಪತಿಗಳಿಗೆ ರಾಷ್ಟ್ರಪತಿಗಳು ಪ್ರಮಾಣ ವಚನ ಬೋಧಿಸುತ್ತಾರೆ .
  • ಉಪರಾಷ್ಟ್ರಪತಿಗಳನ್ನು ಪದಚ್ಯುತಿಗೊಳಿಸುವ ಅಧಿಕಾರವು ರಾಜ್ಯಸಭೆಗಿದೆ .
  • ಉಪರಾಷ್ಟ್ರಪತಿಗಳು ರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುವಾಗ ರಾಷ್ಟ್ರಪತಿಗಳ ವೇತನ ಪಡೆಯುತ್ತಾರೆ .
  • ರಾಷ್ಟ್ರಪತಿ & ಉಪರಾಷ್ಟ್ರಪತಿ ಹುದ್ದೆಗೆ ಸಂಬಂಧಿಸಿದ ಚುನಾವಣಾ ಸಂಶಯಗಳನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ತೀರ್ಪ ನೀಡುತ್ತದೆ .
  • ಉಪರಾಷ್ಟ್ರಪತಿಗಳನ್ನು ಪದಚ್ಯುತಿಗೊಳಿಸಲು ರಾಜ್ಯಸಭೆಯು 15 ದಿನ ಮೊದಲೇ ನೋಟಿಸ್‌ ನೀಡಬೇಕು .
  • ಉಪರಾಷ್ಟ್ರಪತಿಗಳು ರಾಜ್ಯಸಭೆಯ ಕಲಾಪಗಳನ್ನು ನಡೆಸಿಕೊಂಡು ಹೋಗುತ್ತಾರೆ .
  • ಉಪರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು 15,000 ರೂ ಠೇವಣಿ ಹಣ ಹಾಗೂ 20 ಜನ ಸೂಚಕರು ಮತ್ತು ಅನುಮೋದಕರು ಅನುಮೋದಿಸಬೇಕಾಗುತ್ತದೆ .
  • 2012 ರವರೆಗೆ 14 ಬಾರಿ ಉಪರಾಷ್ಟ್ರಪತಿ ಚುನಾವಣೆಗಳು ನಡೆದಿವೆ .

Uparashtrapathi in Kannada

ಉಪರಾಷ್ಟ್ರಪತಿ ಅಧಿಕಾರ ಅವಧಿ?

ಉಪರಾಷ್ಟ್ರಪತಿಯ ಅಧಿಕಾರವಧಿ 5 ವರ್ಷಗಳು ಆಗಿರುತ್ತವೆ.

ರಾಷ್ಟ್ರಪತಿ & ಉಪರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಕನಿಷ್ಟ … ವಯಸ್ಸಾಗಿರಬೇಕು .

35 ವರ್ಷ

ಇತರೆ ವಿಷಯಗಳು

Uparashtrapathi in Kannada

Leave a Reply

Your email address will not be published. Required fields are marked *