kannada ogatugalu । ಕನ್ನಡ ಒಗಟುಗಳು | ogatugalu in kannada

download

ಕನ್ನಡ ಒಗಟುಗಳು

kannada ogatugalu, ಕನ್ನಡ ಒಗಟುಗಳು, ogatu in kannada for marriage with answer, ogatu in kannada, quiz in kannada, ogatugalu in kannada

kannada ogatugalu

ಒಗಟುಗಳು ಎಂದರೇನು? 

ಒಗಟು ಎಂದರೆ ಒಬ್ಬರು ಮತ್ತೊಬ್ಬರಿಗೆ ಒಡ್ಡಿದ ಸವಾಲು, ಸಮಸ್ಯೆ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಮೂಲಕ  ಚಮತ್ಕಾರವಾಗಿ ವರ್ಣಿಸಿ ಆ ಅವ್ಯಕ್ತ ವಸ್ತುವನ್ನು ಕಂಡುಹಿಡಿಯುವಂತೆ ಹೇಳುವುದು ಇದರ ಕ್ರಮ

ಒಗಟುಗಳೆಂದರೆ ರೂಪಕಗಳು ಅಥವಾ ಪ್ರತಿಮೆಗಳು ಎಂದು ಸಹ ಹೇಳಬಹುದು. ಇವುಗಳಲ್ಲಿ ಕೆಲವಂತೂ ಸುಂದರವಾದ ಕಾವ್ಯಗಳೇ. ಲೋಕಾನುಭವ, ಸೂಕ್ಷ್ಮ ಸಂವೇದನೆ, ಕಲ್ಪನಾಶಕ್ತಿಗಳು ಉತ್ತಮವಾದ ಒಗಟುಗಳಲ್ಲಿ ಕಂಡುಬರುತ್ತವೆ.

ವಸ್ತುಗಳ ಯಥಾರ್ಥ ಚಿತ್ರಗಳನ್ನು ಸಂಕ್ಷಿಪ್ತವಾಗಿ ಕೊರೆದು ನಿಲ್ಲಿಸುವ ಶಕ್ತಿ ಒಗಟುಗಳಲ್ಲಿ  ನೀವು ನೋಡಬಹುದು . ಇವುಗಳಿಗೆ ವಿಷಯವಾಗದ ಪದಾರ್ಥವೇ ಜಗತ್ತಿನಲ್ಲಿಲ್ಲ.

ಎಷ್ಟೋ ವೇಳೆ, ಒಗಟುಗಳ ಅಂತರಾರ್ಥ ಸುಲಭವಾಗಿ ಹೊಳೆಯದಿದ್ದರೂ ಅವುಗಳ ಬಾಹ್ಯರೂಪ ಮಾತ್ರ ಆಕರ್ಷಕವಾಗಿ ಕುತೂಹಲ ಕೆರಳಿಸುವಂತಿರುತ್ತದೆ. ಒಗಟುಗಳಲ್ಲಿ ಹಲವು ಬಗೆಗಳಿವೆ. ಕೆಲವು ಪದ್ಯರೂಪದಲ್ಲಿದ್ದರೆ ಮತ್ತೆ ಕೆಲವು ಲಯಬದ್ಧ ಗದ್ಯದಲ್ಲಿರುತ್ತವೆ.

ಮಾನವಕುಲದ ಬಾಲ್ಯದಲ್ಲೆ ಒಗಟು ಹುಟ್ಟಿತೆಂದು ಹೇಳಬಹುದಾಗಿದೆ . ಮಾತಿನ ಸಂಪ್ರದಾಯದಲ್ಲಿ ಒಗಟೆಯೇ ಎಲ್ಲಕಿಂತ ಮೊದಲಿನದೆಂಬ ಅಭಿಪ್ರಾಯವೂ ಉಂಟು. ಆದಿಮಾನವ ಪ್ರಕೃತಿಯ ವಸ್ತುಗಳಲ್ಲಿ ಗುರುತಿಸಿದ ಸಾದೃಶ್ಯವೆ ಒಗಟುಗಳ ನಿರ್ಮಾಣಕ್ಕೆ ತಳಹದಿ. ಅವನು ಸಾದೃಶ್ಯಜ್ಞಾನದಿಂದುಂಟಾದ ವಿಸ್ಮಯದಲ್ಲೆ ನಿಲ್ಲದೆ, ಅದನ್ನು ಹಾಸ್ಯ ಮತ್ತು ಮನೋರಂಜನೆಗಾಗಿ ಬಳಸಿಕೊಳ್ಳಲು ಮಾಡಿದ ಪ್ರಯತ್ನವೆ ಒಗಟಿನ ರೂಪ ತಳೆಯಿತು. ಈಗ ನಮಗೆ ಗೊತ್ತಿರುವ ಹಾಸ್ಯದ ಪ್ರಕಾರಗಳಲ್ಲಿ ಒಗಟೇ ಅತ್ಯಂತ ಪ್ರಾಚೀನವೆಂದೂ ಸಾದೃಶ್ಯಪ್ರಜ್ಞೆಯೆ ಇದಕ್ಕೆ ಮೂಲಕಾರಣವೆಂದೂ ವಿದ್ವಾಂಸರ ಅಭಿಪ್ರಾಯವಾಗಿದೆ.

ಕಾಲಿಲ್ಲದೆ ನಡೆಯುವುದು , ಬಾಯಿಲ್ಲದೆ ನುಡಿಯುವುದು, ಇದರ ಹೊಟ್ಟೆ ಹಲವಕ್ಕೆ ಮನೆಯಾಗಿರುವುದು

ನದಿ
ಹೊಳೆ
ಹಳ್ಳ
ಬಾವಿ

ಕುಡಿಕೆಯಲ್ಲಿ ಮೆಣಸು

ಕಿತ್ತಳೆ ಹಣ್ಣು
ಸೇಬು ಹಣ್ಣು
ಪರಂಗಿ ಹಣ್ಣು
ಮಾವಿನ ಹಣ್ಣು

ogatugalu in kannada

ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ

ನೀರು
ದೀಪ
ಬೆರಳು
ಗಾಳಿ

ಮೇಲೆ ಹಸಿರು , ಒಳಗೆ ಕೆಂಪು , ತಿಂದರೆ ತಂಪು

ಕಲ್ಲಂಗಡಿ
ಮೆಣಸು
ಬಾಳೆ ಹಣ್ಣು
ಹಲಸು
kannada ogatugalu

ಹಾರಿದರೆ ಹನುಮಂತ , ಕೂಗಿದರೆ ರಾವಣ , ಕುಳಿತರೆ ಮುನಿರಾಮ

ಕಪ್ಪೆ
ಮೀನು
ಹಾವು
ಕೋಳಿ

ಚಿಕ್ಕ ಮನೇಲಿ ಚಕ್ಕೆ ತುಂಬಿವೆ

ಹಲ್ಲು
ದನ
ಕಟ್ಟಿಗೆ
ಓಲೆ

ಉದ್ದ ಮರದಲ್ಲಿ ಕೆಂಪು ಸನ್ಯಾಸಿ

ತೇಗಿನಕಾಯಿ
ಅಮಟೆಕಾಯಿ
ಪೇರಳೆಕಾಯಿ
ಅಡಿಕೆ ಕಾಯಿ

ಚಿಕ್ಕ ಚಿಕ್ಕ ಪೆಟ್ಟಿಗೆ , ಚಿನ್ನದ ಪೆಟ್ಟಿಗೆ , ಮುಚ್ಚಿ ತೆಗೆದರೆ ಮುನ್ನೂರು ಪೆಟ್ಟಿಗೆ

ದ್ರಾಕ್ಷಿ
ಅಡಿಕೆ ಕಾಯಿ
ನಿಂಬೆ ಹಣ್ಣು
ದಾಳಿಂಬೆ ಹಣ್ಣು

ಸಾಯೋವರೆಗೂ ಹೂವಿಲ್ಲ , ಹಣ್ಣು ಮಾತ್ರ ಬಿಡ್ತದೆ

ಹತ್ತಿಹಣ್ಣು
ಸೀಬೆಹಣ್ಣು
ಗೇರು ಹಣ್ಣು
ಹುಣಸೆಹಣ್ಣು

ಕಿರೀಟವುಂಟು ರಾಜನಲ್ಲ , ಗಡ್ಡವುಂಟು ತುರುಕನಲ್ಲ

ಟೋಪಿ
ಹೆಂಟೆ
ನವಿಲು
ಹುಂಜ
ಅಂಕು ಡೊಂಕಾದ ಬಾವಿ ,ಬಗ್ಗಿ ನೋಡಿದರೆ ಗುಬ್ಬಿ ಕುಡಿಯುವಷ್ಟು ನೀರಿಲ್ಲ. – ಉ: ಕಿವಿ.
ಬರೆಯುವುದಕ್ಕಾಗದೆ ಇರೊ ನುಡಿ ಯಾವುದು ? — “ಮುನ್ನುಡಿ”
ಅಮ್ಮನ ಸೀರೆ ಮಡಿಸೋಕಾಗಲ್ಲ ; ಅಪ್ಪನ ದುಡ್ಡು ಎಣಿಸೋಕಾಗಲ್ಲ — ಉ: ಆಕಾಶ, ನಕ್ಷತ್ರ
ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ — ಉ: ಹಣೆ, ಕುಂಕುಮ
ಚಿಕ್ಕ ಮನೆ ತುಂಬಾ ಚಕ್ಕೆ ತುಂಬಿದೆ– ಉ: ಬಾಯಿ, ಹಲ್ಲು
ಅಟ್ಟದ ಮೇಲಿರೋ ಗಿಡ್ಡ ಗೋಪಾಲ, ನಿನಗ್ಯಾರಿಟ್ಟರೋ ಸಾದಿನ ಬೊಟ್ಟು? — ಉ: ಗುಲಗಂಜಿ
ಬಾವೀಲಿ ಬೆಳ್ಳಿ ಬಟ್ಟಲು ಬಿದ್ದಿದೆ. – ಉ: ಚಂದ್ರ
ಹಸುರು ಗಿಡದ ಮೇಲೆ ಮೊಸರು ಚೆಲ್ಲಿದೆ. – ಉ: ಮಲ್ಲಿಗೆ ಹೂ.

Leave a Reply

Your email address will not be published.