ಸಮಕಾಲೀನ ರಾಜಕೀಯ ವಿದ್ಯಮಾನಗಳು | 2nd PUC Political Science Chapter 7 Notes in Kannada

ಸಮಕಾಲೀನ ರಾಜಕೀಯ ವಿದ್ಯಮಾನಗಳು | 2nd PUC Political Science Chapter 7 Notes in Kannada

Political Science Chapter 7 Contemporary Political Trends Questions and Answers, Notes Pdf, 2nd PUC Political Science, ಸಾಮಾಜಿಕ ಪಿಡುಗುಗಳು ಬಗ್ಗೆ ಪ್ರಬಂಧ ಕನ್ನಡದಲ್ಲಿ, Samajika Pidugu Galu Prabandha in Kannada, Samajika Pidugu Galu Essay in Kannada ಸಾಮಾಜಿಕ ಪಿಡುಗುಗಳು essay in kannada

2nd PUC Political Science Chapter 7 Notes in Kannada

Spardhavani Telegram
Spardhavani.com

ಒಂದು ಅಂಕದ ಪ್ರಶ್ನೆಗಳು

1 . ಉದಾರೀಕರಣ ಎಂದರೇನು ?

ಆರ್ಥಿಕ ವಲಯಗಳನ್ನು ಆರ್ಥಿಕವಾಗಿ ಅನೇಕ ನಿಬಂಧನೆಗಳಿಂದ ಮುಕ್ತಗೊಳಿಸುವ ಮತ್ತು ಅವುಗಳಿಗೆ ತೆರಿಗೆ , ಸು೦ಕಗಳಿ೦ದ ವಿನಾಯಿತಿ ನೀಡುವುದೇ ಉದಾರೀಕರಣವಾಗಿದೆ .

2. ಲೇಸಸ್‌ಫೇರ್‌ ಎಂದರೇನು ?

ಲೇಸಸ್ ಫೇರ್ ಎನ್ನುವುದು ಮುಕ್ತ ವ್ಯಾಪಾರ ಎಂಬರ್ಥವಾಗಿದ್ದು , ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು ಕೆಲವು ನಿಯಂತ್ರಣಗಳನ್ನು ತೆಗೆದುಹಾಕುವುದಾಗಿದೆ.

3. ಭಾರತದಲ್ಲಿಉದಾರೀಕರಣ ಯಾವಾಗ ಪ್ರಾರಂಭವಾಯಿತು ?

ಭಾರತದಲ್ಲಿ ಉದಾರೀಕರಣ 1991 ರಲ್ಲಿ ಪ್ರಾರಂಭವಾಯಿತು.

2nd PUC Political Science Chapter 7 Notes in Kannada

4. ಖಾಸಗೀಕರಣ ಎಂದರೇನು ?

ಸರ್ಕಾರದ ಒಡೆತನದಲ್ಲಿರುವ ಕೈಗಾರಿಕೆಗಳನ್ನು ಖಾಸಗಿ ಸಂಸ್ಥೆಗಳ ನಿಯಂತ್ರಣಕ್ಕೆ ಒಳಪಡಿಸುವುದನ್ನು ಖಾಸಗೀಕರಣ ಎನ್ನುವರು

5. ಖಾಸಗೀಕರಣವು ಯಾವ ದೇಶದಲ್ಲಿ ಮೊದಲು ಪ್ರಾರಂಭವಾಯಿತು ?

ಖಾಸಗೀಕರಣವು ಮೊದಲು 1980 ರಲ್ಲಿ ಅಮೇರಿಕಾ ದೇಶದಲ್ಲಿ ಪ್ರಾರಂಭವಾಯಿತು .

6.ಬಹುರಾಷ್ಟ್ರೀಯ ಕಂಪನಿ ಎಂದರೇನು ?

ಜಾಗತೀಕರಣದಡಿಯಲ್ಲಿ , ಒಂದು ಕಂಪನಿ ಬೇರೆ ಬೇರೆ ರಾಷ್ಟ್ರಗಳಲ್ಲಿ ತನ್ನ ವ್ಯಾಪಾರ ಸಂಪರ್ಕ ಹೊಂದಿದ್ದರೆ , ಆ ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿ ಎನ್ನಲಾಗುತ್ತದೆ .

7. ಭಾರತದಲ್ಲಿ ಯಾವುದಾದರೊಂದು ಖಾಸಗಿ ಕಂಪನಿಯನ್ನು ಹೆಸರಿಸಿ .

ಭಾರತದಲ್ಲಿನ ಒಂದು ಖಾಸಗಿ ಕಂಪನಿ ಇನ್ಫೋಸಿಸ್ [ Infosys ]

2nd PUC Political Science Chapter 7 Notes in Kannada

8. ಜಾಗತೀಕರಣ ಎಂದರೇನು ?

ವಿಶ್ವದ ಆರ್ಥಿಕತೆಯೊಂದಿಗೆ ದೇಶಿಯ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯನ್ನು ಜಾಗತೀಕರಣ ಎನ್ನುವರು .

9.ಭಾರತದಲ್ಲಿ ಜಾಗತೀಕರಣವು ಯಾವಾಗ ಪ್ರಾರಂಭವಾಯಿತು ?

1990 ರಲ್ಲಿ ಭಾರತದಲ್ಲಿ ಜಾಗತೀಕರಣವು ಪ್ರಾರಂಭವಾಯಿತು.

10.ಆಪ್ತಸ್ನೇಹಿ ಬಂಡವಾಳಶಾಹಿ ಎಂದರೇನು ?

ಆರ್ಥಿಕ ವ್ಯವಸ್ಥೆಯಲ್ಲಿ ವ್ಯಾಪಾರ ವಾಣಿಜ್ಯಗಳಲ್ಲಿ ಯಶಸ್ವಿ ಕಾಣಲು ವಾಣಿಜ್ಯೋದ್ಯಮಿಗಳು ಮತ್ತು ಸರ್ಕಾರಿ ಅಧಿಕಾರಿ ವೃಂದದ ನಡುವೆ ಇರುವ ಸಂಬಂಧವೇ ಆಪ್ತಸ್ನೇಹಿ ಬಂಡವಾಳಶಾಹಿ ,

2nd PUC Political Science Chapter 7 Notes in Kannada

11. ಪ್ರಜಾಸತಾತ್ಮಕ ಚಳುವಳಿ ಎಂದರೇನು ?

ಈಜಿಪ್ಟ್ , ಸಿರಿಯಾ , ಲಿಬ್ಯಾ ಮತ್ತು ಇತರೆ ರಾಷ್ಟ್ರಗಳಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪ್ರತಿಪಾದಿಸಲು ನಡೆದ ಪಬಲವಾದ ಹೋರಾಟವೇ ಪ್ರಜಾಸತ್ತಾತ್ಮಕ ಚಳುವಳಿ , ಇದು 21 ನೇ ಶತಮಾನದಲ್ಲಿ ಆರಂಭವಾಯಿತು .

12. ನೇಪಾಳದಲ್ಲಿ ಪ್ರಜಾಸತಾತ್ಮಕ ಚಳುವಳಿಯನ್ನು ಯಾರು ಪ್ರಾರಂಭಿಸಿದರು ?

ನೇಪಾಳದಲ್ಲಿ ಪ್ರಜಾಸತಾತ್ಮಕ ಚಳುವಳಿಯನ್ನು ಕಮ್ಯುನಿಸ್ಟ್ ಪಕ್ಷದವರು ( ಮಾವೋವಾದಿ ) ಆರಂಭಿಸಿದರು . ಇವರ ನೇತೃತ್ವವನ್ನು ಕೊಯಿರಾಲಾ ವಹಿಸಿದ್ದರು .

13. ನೇಪಾಳದಲ್ಲಿ ಮಾತ್ನಾಕಾರ್ಟ್ ಎಂದು ಯಾವುದನ್ನು ಕರೆಯಲಾಗಿದೆ ?

ಮೇ . 18 , 2006 ರಲ್ಲಿ , ನೇಪಾಳದಲ್ಲಿ ಜನಾಂದೋಲನ ಉದ್ದೇ ಳನ್ನು ಈಡೇರಿಸಲು ಜಾರಿಗೊಳಿಸಿದ ಕಾನೂನುಗಳನ್ನು ನೇಪಾಳದ ಮಾಗ್ನಾಕಾರ್ಟ್ ಎಂದು ಕರೆಯಲಾಗಿದೆ .

14. ಭೂತಾನ್‌ನಲ್ಲಿ ಯಾವ ಮಾದರಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ ?

ಭೂತಾನ್‌ನಲ್ಲಿ ಬಹುಪಕ್ಷೀಯ ಪ್ರಜಾಪ್ರಭುತ್ವ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ .

2nd PUC Political Science Chapter 7 Notes in Kannada

15. ಭೂತಾನ್‌ನಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಪ್ರಾರಂಭವಾಗಲು ಸ್ಫೂರ್ತಿ ಯಾರು ?

ಭೂತಾನ್‌ನಲ್ಲಿ ಪ್ರಜಾಸತ್ತಾತ್ಮಕ ಚಳುವಳಿ ಪ್ರಾರಂಭವಾಗಲು ಸ್ಫೂರ್ತಿ ನೀಡಿದವರು ರಾಂಗ್‌ತೊಂಗ್ ಕುನಲಿ ದೊರಜಿ .

16. ಭೂತಾನ್‌ನಲ್ಲಿ ಪ್ರಥಮ ಪ್ರಜಾಸತಾತ್ಮಕ ಚುನಾವಣೆ ಯಾವಾಗ ನಡೆಯಿತು ?

ಭೂತಾನ್‌ನಲ್ಲಿ ಪ್ರಥಮ ಪ್ರಜಾಸತಾತ್ಮಕ ಚುನಾವಣೆ ಮಾರ್ಚ್ 24 , 2008 ರಲ್ಲಿ ನಡೆಯಿತು .

17. ಭೂತಾನ್ ಸಂವಿಧಾನವನ್ನು ಯಾವಾಗ ರಚಿಸಲಾಯಿತು ?

ಭೂತಾನ್ ಸಂವಿಧಾನವನ್ನು 18-7-2007 ರಂದು ರಚಿಸಲಾಯಿತು .

18. ಅಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಯಾವ ಚುನಾವಣೆಗಳು ನಡೆದವು?

ಅಫ್ಘಾನಿಸ್ಥಾನದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಸಭೆಗೆ ಅಕ್ಟೋಬರ್ 2004 ರಲ್ಲಿ ಚುನಾವಣೆಗಳು ನಡೆದವು .

2nd PUC Political Science Chapter 7 Notes in Kannada

19.ಅಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ .

ಅಫ್ಘಾನಿಸ್ಥಾನದ ಪ್ರಸ್ತುತ ಅಧ್ಯಕ್ಷರು ಹಮೀದ್ ಖರ್ಜಾಯಿ .

20 , ಈಜಿಪ್‌ನಲ್ಲಿ ಸಂವಿಧಾನವನ್ನು ಯಾವಾಗ ಜಾರಿಗೊಳಿಸಲಾಯಿತು ?

ಈಜಿಪ್ಟ್ನಲ್ಲಿ ಸಂವಿಧಾನವನ್ನು 1956 ರಲ್ಲಿ ಜಾರಿಗೊ -ಸಲಾಯಿತು

21. ಈಜಿಪ್‌ನಲ್ಲಿ ಬದಲಾವಣೆಯ ಪ್ರಥಮ ಚಳುವಳಿ ಯಾವಾಗ ಪ್ರಾರಂಭವಾಯಿತು ?

ಈಜಿಪ್ಟ್ನಲ್ಲಿ ಬದಲಾವಣೆಯ ಪ್ರಥಮ ಚಳುವಳಿ 195 ರವರೆಗೆ ನಡೆಯಿತು . ಇದು 1923 ರಲ್ಲಿ ಪ್ರಾರಂಭವಾ ಯಿತು .

22. ಲಿಬ್ಯಾದ ನಿರಂಕುಶಾಧಿಕಾರಿಯನ್ನು ಹೆಸರಿಸಿ .

ಲಿಬ್ಯಾದ ನಿರಂಕುಶಾಧಿಕಾರಿ ಗಡಾಫಿ ,

23 , ಯಾರ ಅಧಿಕಾರಾವಧಿಯಲ್ಲಿ ಲಿಬ್ಯಾದ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು ?

ಗಡಾಫಿ ಅಧಿಕಾರಾವಧಿಯಲ್ಲಿ ಲಿಬ್ಯಾದ ರಾಜಕೀಯ ಪಕ್ಷಗಳನ್ನು ನಿಷೇಧಿಸಲಾಯಿತು

2nd PUC Political Science Chapter 7 Notes in Kannada

24. ಲಿಬ್ಯಾದಲ್ಲಿ ಪ್ರಜಾಸತಾತ್ಮಕ ಚಳುವಳಿಗಳು ಯಾವಾಗ ಪ್ರಾರಂಭವಾಯಿತು ?

ಫೆಬ್ರವರಿ 27 , 2011 ರಲ್ಲಿ ಲಿಬ್ಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಗಳು ಪ್ರಾರಂಭವಾಯಿತು .

25. ಸಿರಿಯಾ ದೇಶವು ಫ್ರಾನ್ಸ್‌ನಿಂದ ಯಾವಾಗ ಮುಕ್ತಿ ಪಡೆಯಿತು ?

1946 ರಲ್ಲಿ ಸಿರಿಯಾ ದೇಶವು ಫ್ರಾನ್ಸ್‌ನಿಂದ ಮುಕ್ತಿ ಪಡೆಯಿತು .

26. ಸಿರಿಯಾ ದೇಶದ ಪ್ರಸ್ತುತ ಅಧ್ಯಕ್ಷರನ್ನು ಹೆಸರಿಸಿ .

ಸಿರಿಯಾ ದೇಶದ ಪ್ರಸ್ತುತ ಅಧ್ಯಕ್ಷರು ಬಸರ್‌ , ಅಲ್ ಅಸಾದ್ .

ಎರಡು ಅಂಕದ ಪ್ರಶ್ನೆಗಳು

1. ಉದಾರೀಕರಣದ ಅರ್ಥವೇನು ?

ಉದಾರೀಕರಣ ಎನ್ನುವುದು ಆರ್ಥಿಕವಾಗಿ ಅನೇಕ ನಿಬಂಧನೆಗಳಿಂದ ಮುಕ್ತಗೊಳಿಸುವ ಪದ್ಧತಿಯಾಗಿದ್ದು ಮತ್ತು ತೆರಿಗೆ , ಸುಂಕಗಳಿಂದ ವಿನಾಯಿತಿ ನೀಡುವ ಪ್ರಕ್ರಿಯೆಯಾಗಿದೆ . ಇದು ಖಾಸಗಿ ವಲಯಗಳಿಗೆ ಹೆಚ್ಚಿನ ಅವಕಾಶ ನೀಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಸಾಮರ್ಥ್ಯ ಒದಗಿಸುವಂತದ್ದಾಗಿದೆ .

2nd PUC Political Science Chapter 7 Notes in Kannada

2 . ಐ.ಎಂ.ಎಫ್.ನ್ನು ವಿಸ್ತರಿಸಿ , ಇದು ಯಾವಾಗ ಸ್ಥಾಪನೆಯಾಯಿತು ?

International Monetary Fund . [ ಅಂತರ ರಾಷ್ಟ್ರೀಯ ಹಣಕಾಸು ಸಂಸ್ಥೆ ) ಎಂಬುದು ಐ.ಎಂ.ಎಫ್ ನ ವಿಕೃತ ರೂಪವಾಗಿದೆ .

3. ನವ ಉದಾರಾವಾದಿ ಚಿಂತನೆಗಳೆಂದು ಯಾವುದನ್ನು ಕರೆಯಲಾಗುತ್ತದೆ ?

1991 ರಲ್ಲಿ ಭಾರತದ ಜಾರಿಗೊಳಿಸಲಾದ ಆರ್ಥಿಕ 11 ಸುಧಾರಣೆಗಳನ್ನು ನವ ಉದಾರವಾದಿ ಚಿಂತನೆಗಳೆಂದು ಕರೆಯಲಾಗುತ್ತದೆ . ಇವು ಮುಕ್ತ ಮಾರುಕಟ್ಟೆ , ಖಾಸಗೀಕರಣ , ತೆರಿಗೆ ಸುಧಾರಣಾ ಅಂಶಗಳನ್ನು ಹೊಂದಿತ್ತು .

4. ಮುಕ್ತ ಮಾರುಕಟ್ಟೆ ಎಂದು ಯಾವುದನ್ನು ಕರೆಯಲಾಗುತ್ತದೆ ?

ಮುಕ್ತ ಮಾರುಕಟ್ಟೆ ಎಂದು ಉದಾರೀಕರಣವನ್ನು ಕರೆಯಲಾಗುತ್ತದೆ . ಇದು ಮುಕ್ತ ವ್ಯಾಪಾರ ಮತ್ತು ವಾಣಿಜ್ಯಕರಣಗೊಳಿಸುವುದರ ಮೂಲಕ ಖಾಸಗಿ ಕಂಪನಿಗಳಿಗೆ ಮುಕ್ತ ವಾತಾವರಣ ಕಲ್ಪಿಸಿರುತ್ತದೆ

5. ಆಧುನಿಕ ಜಗತ್ತಿನಲ್ಲಿ ಉದಾರೀಕರಣ ಏಕೆ ಮಹತ್ವವನ್ನು ಈ ಪಡೆದಿದೆ ?

ಉದಾರೀಕರಣದಿಂದಾಗಿ ಅತ್ಯುತ್ತಮ ಗುಣಮಟ್ಟದ ಸರಕು ಮತ್ತು ಸೇವೆಯನ್ನು ಉತ್ಪಾದಿಸುವ ಮತ್ತು ವಿತರಿಸುವ ವ್ಯವಸ್ಥೆ ಇರುವುದರಿಂದ , ತಂತ್ರಜ್ಞಾನ ಅಳವಡಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸುವುದರಿಂದ ಮಹತ್ವವಿದೆ .

6. ವ್ಯಾಪಾರದಲ್ಲಿ ಏಕಸ್ವಾಮ್ಯವೆಂದು ಯಾವುದನ್ನು ಕರೆಯಲಾಗಿದೆ ?

ವ್ಯಾಪಾರದಲ್ಲಿ ಏಕಸ್ವಾಮ್ಯವೆಂದು ಖಾಸಗೀಕರಣವನ್ನು ಕರೆಯಲಾಗುತ್ತದೆ .

2nd PUC Political Science Chapter 7 Notes in Kannada

7.ಯಾವ ದೇಶದಲ್ಲಿ ಮತ್ತು ಯಾವಾಗ ಖಾಸಗೀಕರಣ ಪ್ರಾರಂಭವಾಯಿತು ?

1980 ರಲ್ಲಿ , ಬ್ರಿಟನ್ ಮತ್ತು ಅಮೇರಿಕಾ ದೇಶದಲ್ಲಿ ಖಾಸಗೀಕರಣ ಪ್ರಾರಂಭವಾಯಿತು .

8. ಖಾಸಗೀಕರಣದಲ್ಲಿ ಸಂಪತ್ತಿನ ಕೇಂದ್ರೀಕರಣ ಎಂದರೇನು ?

ವಿವಿಧ ಬೃಹತ್ ಕಂಪನಿಗಳ ಸಮೂಹದ ಕೈಯಲ್ಲಿ ಸಂಪತ್ತು ಕೇಂದ್ರೀಕರಣವಾಗಿರುವುದನ್ನು ಸಂಪತ್ತಿನ ಕೇಂದ್ರೀಕರಣ ಎನ್ನುತ್ತಾರೆ .

9. ಮಾರುಕಟ್ಟೆಯಾಧಾರಿತ ಆರ್ಥಿಕತೆಯ ಬಗ್ಗೆ ನಿಮಗೇನು ತಿಳಿದಿದೆ ?

ಇಂದಿನ ಆರ್ಥಿಕ ವ್ಯವಸ್ಥೆ ಮಾರುಕಟ್ಟೆಯ ಸ್ಥಿತಿಗತಿ ಅವಲಂಬಿಸಿದೆ . ಆದ್ದರಿಂದಲೇ ಸರ್ಕಾರವು ಉದಾರೀಕರಣ , ಖಾಸಗೀಕರಣ ಮತ್ತು ಜಾಗತೀಕರಣ ನೀತಿಯನ್ನು ಜಾರಿಗೊಳಿಸಿದ್ದು ಇದು ಮಾರುಕಟ್ಟೆ ಸ್ನೇಹಿ ಸರ್ಕಾರವಾಗಿದೆ . ಆರ್ಥಿಕತೆಯು ಸುಲಲಿತ ಕಾರ್ಯಾಚರಣೆಯ ಧೈಯ ಹೊಂದಿದೆ.

10. ಪ್ರತಿಭಾಪಲಾಯನ ಎಂದರೇನು ?

ಉದಾರೀಕರಣ ನೀತಿಯ ಪರಿಣಾಮವಾಗಿ ಪ್ರತಿಭಾವಂತ ವಿದ್ಯಾರ್ಥಿ ಸಮೂಹ ಹೆಚ್ಚಿನ ಹಣ , ಸೌಲಭ್ಯ ಮತ್ತು ಪ್ರತಿಷ್ಠೆಗಳಿಗಾಗಿ ವಿದೇಶಗಳಿಗೆ ಹೋಗುವುದನ್ನು ಪ್ರತಿಭಾ ಪಲಾಯನ ಎನ್ನುವರು .

11 , ಜಾಗತೀಕರಣದ ಅರ್ಥವೇನು ?

ಜಾಗತೀಕರಣ ಎಂಬುದು ವಿಶ್ವದ ಆರ್ಥಿಕತೆಯೊಂದಿಗೆ , ರಾಷ್ಟ್ರದ ಆರ್ಥಿಕತೆಯನ್ನು ಒಂದುಗೂಡಿಸುವ ಪ್ರಕ್ರಿಯೆಯಾಗಿದೆ . ರಾಷ್ಟ್ರ ರಾಷ್ಟ್ರಗಳ ನಡುವೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆಯಲ್ಲಿ ಒಂದುಗೂಡಿಸುವ ಪ್ರಕ್ರಿಯೆಯಾಗಿರುತ್ತದೆ .

2nd PUC Political Science Chapter 7 Notes in Kannada

12 , ಡಬ್ಲ್ಯೂಟಿಒ , ಬಗ್ಗೆ ಬರೆಯಿರಿ ,

ವಿಶ್ವ ವ್ಯಾಪಾರ ಸಂಘಟನೆಯಾಗಿದೆ . ಇದು 1995 ಜನವರಿ 1 ರಂದು ಅಸ್ತಿತ್ವಕ್ಕೆ ಬಂದಿದೆ . ವಿಶ್ವವ್ಯಾಪಾರ ಸಂಘಟನೆಗೆ 134 ದೇಶಗಳು ಸಹಿ ಹಾಕಿದ್ದವು . 153 ದೇಶಗಳು ಈಗ ಸದಸ್ಯತ್ವ ಹೊಂದಿದೆ . ಕೇಂದ್ರ ಕಛೇರಿ ಸ್ವಿಝರ್ ಲ್ಯಾಂಡಿನ ಜಿನೇವಾದಲ್ಲಿದೆ . ವಿಶ್ವ ವ್ಯಾಪಾರಕ್ಕೆ ಸಂಬಂಧಿಸಿದ ಆಡಳಿತ ವಿಷಯಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದೆ .

13. ಕಾರ್ಮಿಕರ ಚಲನಶೀಲತೆ ಎಂದರೇನು ?

ಕಾರ್ಮಿಕರು ಉದ್ಯೋಗ ಅರಸಿ , ಒಂದು ರಾಷ್ಟ್ರದಿಂದ ಮತ್ತೊಂದು ರಾಷ್ಟ್ರಕ್ಕೆ ಸಂಚರಿಸುವುದನ್ನು ಕಾರ್ಮಿಕರ ಚಲನಶೀಲತೆ ಎನ್ನುವರು . ಜಾಗತೀಕರಣವು ಮುಕ್ತ ಸಂಚಾರಕ್ಕೆ ಅವಕಾಶ ನೀಡಿದುದರ ಫಲವಾಗಿದೆ .

14. ಜಾಗತಿಕ ಯುಗದಲ್ಲಿ ಆಪ್ತಸ್ನೇಹಿ ಬಂಡವಾಳಶಾಹಿಯ ಉಗಮಕ್ಕೆ ಕಾರಣವೇನು ?

ಆರ್ಥಿಕ ವ್ಯವಸ್ಥೆಯಲ್ಲಿ ವಾಣಿಜ್ಯ ವ್ಯಾಪಾರಗಳಲ್ಲಿ ವಾಣಿಜ್ಯೋದ್ಯಮಿಗಳು ಮತ್ತು ಸರ್ಕಾರಿ ವೃಂದದವರು ಲಾಭಗಳಿಸಲು ಈ ವ್ಯವಸ್ಥೆಯನ್ನು ಜಾರಿಗೆ ತಂದರು . ಖಾಸಗೀಕರಣ , ಜಾಗತೀಕರಣಗಳಿಂದುಂಟಾಗುವ ಸಮಸ್ಯೆಗಳನ್ನು ಬಗೆಹರಿಸಲು ಈ ಸಿದ್ಧಾಂತ ಉಗಮಗೊಂಡಿತು .

15. ಪ್ರಪಂಚದ ಇಬ್ಬರು ಅಧಿಕಾರಯುತ ಆಡಳಿತಗಾರರನ್ನು ಹೆಸರಿಸಿ .

  • ಲಿಬ್ಯಾದ ಗಡಾಫಿ
  • ನೇಪಾಳದ ದೊರೆ ಬೀರೇಂದ್ರ ಬೀರ್ ಬಿಕ್ರಮ್ ಷಾ ದೇವ

2nd PUC Political Science Chapter 7 Notes in Kannada

16. ಲೋಕತಾಂತ್ರಿಕ್ ದಿನವನ್ನು ನೇಪಾಳದಲ್ಲಿ ಏಕೆ ಆಚರಿಸಲಾಗುತ್ತದೆ ?

ಮೇ 18 ನ್ನು ಲೋಕತಾಂತ್ರಿಕ ದಿನವೆ ೦ ದು ಕರೆಯಲಾಗುತ್ತದೆ . ಏಕೆಂದರೆ ಮೇ 18 , 2006 ರಲ್ಲಿ ಲೋಕತಾಂತ್ರಿಕ ಆಂದೋಲನವು ದೊರೆಯ ಆಡಳಿತವನ್ನು ಅಂತ್ಯಗೊಳಿಸಿ ಹೊಸ ಕಾನೂನುಗಳನ್ನು ಜಾರಿಗೊಳಿಸಿತು .

17. ನೇಪಾಳದ ಮೊದಲ ಅಧ್ಯಕ್ಷ ಮತ್ತು ಪ್ರಧಾನಿಯನ್ನು ಹೆಸರಿಸಿ .

ನೇಪಾಳದ ಮೊದಲ ಅಧ್ಯಕ್ಷ ರಾಮ್ ಬರನ್‌ ಯಾದವ್ , ಪ್ರಧಾನಿ ಪುಷ್ಪ ಕಮಲ್‌ಫಾಲ್

18. ಭೂತಾನ್‌ನ ಸಂವಿಧಾನದ ಬಗ್ಗೆ ಬರೆಯಿರಿ .

ಭೂತಾನ್ ಸಂವಿಧಾನವನ್ನು 18 ಜುಲೈ 2007 ರಂದು ಜಾರಿಗೆ ತರಲಾಯಿತು . ಭೂತಾನ್ ರಾಜನಿಗೆ ಯಾವುದೇ ಸಂದರ್ಭದಲ್ಲಿ ಚುನಾಯಿತ ಪ್ರಧಾನಮಂತ್ರಿ ಮತ್ತು ಆತನ ಮಂತ್ರಿಮಂಡಲವನ್ನು ಅಮಾನತ್ತಿನಲ್ಲಿರುವ ಮತ್ತು ರದ್ದುಗೊಳಿಸುವ ಅಧಿಕಾರ ನೀಡಿದೆ . ಹಾಗೆಯೇ ಸಂವಿಧಾನ 2 ನೇ ವಿಧಿಯನ್ವಯ ಸಂವಿಧಾನದ ಯಾವುದೇ ತಿದ್ದುಪಡಿ ಮಾಡುವ ಅಧಿಕಾರ ಸಂಸತ್ತಿಗೆ ಇರುವುದಿಲ್ಲ ಎಂದು ಹೇಳಲಾಗಿದೆ .

19 , ಆಫ್ಘಾನಿಸ್ಥಾನದಲ್ಲಿ ಪ್ರಜಾಸತಾತ್ಮಕ ರಾಜಕೀಯ ಪಕ್ಷಗಳು ಯಾವಾಗ ಪ್ರಾರಂಭವಾದವು ?

ಆಫ್ಘಾನಿಸ್ಥಾನದಲ್ಲಿ ಪ್ರಜಾಸತ್ತಾತ್ಮಕ ರಾಜಕೀಯ ಪಕ್ಷಗಳು 2001 ರಲ್ಲಿ ಪ್ರಾರಂಭವಾದವು .

20. ಈಜಿಪ್ಟ್ನಲ್ಲಿ ನಡೆದ ಎರಡನೇ ಕ್ರಾಂತಿಕಾರಕ ಬದಲಾವಣೆ ಯಾವುದು ?

2011 ರಲ್ಲಿ ಹೊಸದಾಗಿ ಪ್ರಜಾಪ್ರಭುತ್ವದ ಅಲೆ ಆರಂಭವಾಗಿ , ವಿವಿಧ ರಾಜಕೀಯ ನಾಯಕರು ಮತ್ತು ಜನರ ಗುಂಪುಗಳು ಪ್ರಜಾಸತ್ತಾತ್ಮಕ ಸರ್ಕಾರದ ಸ್ಥಾಪನೆಗಾಗಿ ಹೋರಾಟಕ್ಕೆ ಇಳಿದರು . ಇದುವೆ ಈಜಿಪ್ಟ್ನಲ್ಲಿ ನಡೆದ ಎರಡನೇ ಕ್ರಾಂತಿಕಾರಕ ಬದಲಾವಣೆ ,

21. ಈಜಿಪ್ಟ್ ಸಂವಿಧಾನವನ್ನು ಯಾರು ರದ್ದು ಪಡಿಸಿದರು ? ಮತ್ತು ಯಾವಾಗ ?

ಈಜಿಪ್ಟ್ ಸಂವಿಧಾನವನ್ನು ಅಬ್ದುಲ್ ಫತಾ ಅಲೀ ರವರು ಜೂನ್ 2013 ರಲ್ಲಿ ರದ್ದುಗೊಳಿಸಿದರು .

22. ಲಿಬ್ಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಯಾರು ಪ್ರಾರಂಭಿಸಿದರು ? ಮತ್ತು ಯಾವಾಗ ?

ಲಿಬ್ಯಾದಲ್ಲಿ ಪ್ರಜಾಸತ್ತಾತ್ಮಕ ಆಂದೋಲನವನ್ನು ಅಭ್ಯಾದ ಜನತೆ ಮತ್ತು NTC ಸಂಘಟನೆ 2011 ರಲ್ಲಿ ಆರಂಭಿಸಿದರು . [ 27.2.2011 ] .

2nd PUC Political Science Chapter 7 Notes in Kannada

23. ಸಿರಿಯಾದ ಯಾವುದಾದರೂ ಎರಡು ಜನಾಂಗೀಯ ಗುಂಪುಗಳನ್ನು ಹೆಸರಿಸಿ .

ಸಿರಿಯಾದ ಎರಡು ಜನಾಂಗೀಯ ಗುಂಪುಗಳು :

1. ಅರ್‌ಮೇನಿಯನ್ಸ್ ,

2. ಟರ್ಕಮೇನಿಸ್

24. ಸಿರಿಯಾದಲ್ಲಿನ ಬಾತ್ ಪಕ್ಷವನ್ನು ಕುರಿತು ಬರೆಯಿರಿ .

ಸಿರಿಯಾ 1946 ರಲ್ಲಿ ಗಣತಂತ್ರವಾಯಿತು . ಆದರೆ 1963 ರಲ್ಲಿ ಬಾತ್‌ ಪಕ್ಷವು ಏಕಪಕ್ಷದ ಸರ್ವಾಧಿಕಾರವನ್ನು ಸ್ಥಾಪಿಸಿತು . ಇದರ ದಬ್ಬಾಳಿಕೆಯಿಂದ 2012 ರಲ್ಲಿ ಚಳುವಳಿ ನಡೆದವು . ಇಷ್ಟಾದರೂ ಬಾತ್ ಪಕ್ಷ ಇಂದಿಗೂ ಅಧಿಕಾರದಲ್ಲಿದ್ದು , ಬಾತ್ ಪಕ್ಷದ ಅಧ್ಯಕ್ಷ ಬಸರ್‌ ಅಲ್ ಅಸಾದ್ ಮತ್ತು ನದಿಲ್ ಆಲ್ ಅಕಜಿ ಪ್ರಧಾನಮಂತ್ರಿಯಾಗಿ ಸರ್ಕಾರ ನಡೆಸುತ್ತಿದ್ದಾರೆ .

25. ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿತ ಯಾವುದಾದರೂ ಎರಡು ಉದ್ದೇಶಗಳನ್ನು ತಿಳಿಸಿ .

ಸಿರಿಯಾದಲ್ಲಿ ಪ್ರಜಾಸತ್ತಾತ್ಮಕ ಚಳುವಳಿಯ ಎರಡು ಉದ್ದೇಶಗಳು

  • 1963 ರಿಂದ ಅಸ್ತಿತ್ವದಲ್ಲಿದ್ದ ಮಿಲಿಟರಿ ಸರ್ವಾಧಿಕಾರಿ ಆಳ್ವಿಕೆ ರದ್ದುಪಡಿಸುವುದು .
  • ಉದಾರತಾ ಪ್ರಜಾಪ್ರಭುತ್ವ ತತ್ವಗಳಿಗನುಗುಣವಾಗಿ ಸರ್ಕಾರ ರಚಿಸುವುದು .

26. ಸೈಯರ್‌ ಕ್ರಾಂತಿ ಎಂದರೇನು ?

ಏಪ್ರಿಲ್ 27 , 1978 ರಲ್ಲಿ ಪಿ.ಎ.ಪಿ.ಎ ಪಕ್ಷದ ನೂರ್ ಮಹಮದ್ ತರಾಸಿ , ಬಾಬಾಕ್ ಕಮಾಲ್ ಮತ್ತು ಅಮಿನ್ ಪಾಂಡೆ ನಾಯಕರು ಜೊತೆಗೂಡಿ ಮಹಮದ್ ದಾವೂದ್ ಸರ್ಕಾರವನ್ನು ಕೆಳಗಿಳಿಸಿ ಆತನ ಕುಟುಂಬದವರನ್ನು ಮಿಲಿಟರಿ ದಂಗೆಯ ಮೂಲಕ ಹತ್ಯೆ ಮಾಡಿಸಿದರು . ಈ ಮಿಲಿಟರಿ ದಂಗೆಯನ್ನು ಸೈಯರ್ ಕ್ರಾಂತಿ ಎನ್ನಲಾಗಿದೆ .

ಸಮಕಾಲೀನ ರಾಜಕೀಯ ವಿದ್ಯಮಾನಗಳು | 2nd PUC Political Science Chapter 7 Notes in Kannada
ಸಮಕಾಲೀನ ರಾಜಕೀಯ ವಿದ್ಯಮಾನಗಳು | 2nd PUC Political Science Chapter 7 Notes in Kannada

27 , ಆಧುನಿಕ ಯುಗದಲ್ಲಿ ಉದಾರೀಕರಣ ಏಕೆ ಮಹತ್ವ ಪಡೆದಿದೆ ?

ಉದಾರೀಕರಣ ನೀತಿಯಿಂದಾಗಿ ವಿದೇಶಿ ವಿನಿಮಯ ಹೆಚ್ಚಿ , ರಾಷ್ಟ್ರ ರಾಷ್ಟ್ರಗಳ ನಡುವೆ ವ್ಯಾಪಾರ – ವಹಿವಾಟುಗಳ ಮೂಲಕ ಸಂಬಂಧ ಬೆಳೆಯುವುದರಿಂದ ಮುಖ್ಯವಾಗಿದೆ .

* ಗ್ರಾಹಕ ಸ್ನೇಹಿ

* ತಂತ್ರಜ್ಞಾನವನ್ನು ಆಧುನಿಕತೆಗೆ ಉನ್ನತಿಕರಿಸುತ್ತಾರೆ .

28 , W.T.O ವಿಸ್ತರಿಸಿ .

World Trade Orginisation .

ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್

ಅಧ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಅಧ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ

ಅಧ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes

ಅಧ್ಯಾಯ :- 05 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

ಅಧ್ಯಾಯ :- 06 – ಭಾರತದ ರಾಜಕೀಯ ನೂತನ ಪ್ರವೃತ್ತಿಗಳು

Leave a Reply

Your email address will not be published. Required fields are marked *