ಭಾರತದ ರಾಜಕೀಯ ನೂತನ ಪ್ರವೃತ್ತಿಗಳು | 2nd PUC Political Science Chapter 6 Notes in Kannada

ಭಾರತದ ರಾಜಕೀಯ ನೂತನ ಪ್ರವೃತ್ತಿಗಳು | 2nd PUC Political Science Chapter 6 Notes in Kannada

2nd puc political science chapter 6 question answer in kannada, 2nd puc political science chapter 6 notes in kannada, Download Political Science Chapter 6 Emerging Trends of Indian Politics Questions and Answers, Notes Pdf, 2nd PUC Political

2nd PUC Political Science Chapter 6 Notes in Kannada

Spardhavani Telegram
Spardhavani.com

ಈ ಲೇಖನದಲ್ಲಿ ದ್ವಿತೀಯ ಪಿಯುಸಿ ಗೆ ಸಂಬಂದಿಸಿದ ರಾಜ್ಯಶಾಸ್ತ್ರ ಪಠ್ಯದ ೬ ನೇ ಅಧ್ಯಾಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಇತರ ವಿದ್ಯಾರ್ಥಿಗಳಿಗೂ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಅವರಿಗೂ ಉಪಯುಕ್ತ ಆಗುವಂತೆ ಸಹಕರಿಸಿ.

ಒಂದು ಅಂಕದ ಪ್ರಶ್ನೆಗಳು

1. ಕೊಯಲಿಶನ್’ನ ಮೂಲಪದ ಯಾವುದು ?

ಕೊಯಲಿಶನ್ ಲ್ಯಾಟಿನ್ ಪದವಾದ ‘ ಕೊಯಲಿಷಿಯ ಎಂಬುದರಿಂದ ಬಂದಿದೆ . ಕೊಯಿಲೆಷನ್ ಎಂದರೆ ಒಟ್ಟಿಗೆ ಅಟಿಸಿಯರ್‌ ಎಂದರೆ ಬೆಳೆಯುವುದು ಎಂದರ್ಥ .

2. CMP ಯನ್ನು ವಿಸ್ತರಿಸಿ .

Common Minimum Programme [ಸಮಾನ ಕನಿಷ್ಠ ಕಾರ್ಯಯೋಜನೆ ]

3. ಸಮ್ಮಿಶ್ರ ಸರ್ಕಾರದ ಅರ್ಥವೇನು ?

ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ .

4.ಚುನಾವಣಾ ಪೂರ್ವ ಮೈತ್ರಿ ಎಂದರೇನು ?

ಯಾವ ನಿರ್ದಿಷ್ಟ ರಾಜಕೀಯ ಪಕ್ಷವೂ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಪಡೆಯದಿದ್ದಾಗ ವಿವಿಧ ರಾಜಕೀಯ ಪಕ್ಷಗಳು ಬಂದಾಗಿ ಸರ್ಕಾರ ರಚನೆ ಮಾಡುತ್ತದೆ . ಇಂತಹ ಮೈತ್ರಿಗೆ ಚುನಾವಣಾ ಪೂರ್ವ ಮೈತ್ರಿ ಎನ್ನುವರು .

2nd PUC Political Science Chapter 6 Notes in Kannada

5. ಚುನಾವಣೋತ್ತರ ಮೈತ್ರಿ ಎಂದರೇನು ?

ಯಾವುದೇ ಪ್ರಬಲ ರಾಜಕೀಯ ಪಕ್ಷವು ಇನ್ನೊಂದು ಪ್ರಬಲ ರಾಜಕೀಯ ಪಕ್ಷದ ಜೊತೆ ಮೈತ್ರಿಯನ್ನು ಬಯಸುವುದಿಲ್ಲ . ಬದಲಾಗಿ ಚಿಕ್ಕ ಪುಟ್ಟ ರಾಜಕೀಯ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗುವುದಕ್ಕೆ ಚುನಾವಣೋತ್ತರ ಮೈತ್ರಿ ಎನ್ನುವರು .

6. ಅಸ್ಮಿತೆ ರಾಜಕಾರಣದ ಜನಕ ಯಾರು ?

ಅಸ್ಮಿತೆ ರಾಜಕಾರಣದ ಜನಕ ಎಲ್.ಎ. ಕಾಫ್‌ಮಾನ್ .

7.ಯಾವ ಚಳುವಳಿ ಮೂಲಕ ಅಸ್ಮಿತೆ ಯಾವ ಚಳುವಳಿಯ ಶಾಸನಬದ್ಧವಾಯಿತು ?

ಸಲಿಂಗಿಗಳ ಹಕ್ಕುಗಳ ಚಳುವಳಿಯ ಮೂಲಕ ಅಸ್ಮಿತೆ ರಾಜಕಾರಣ ಶಾಸನಬದ್ಧವಾಯಿತು.

8. LGBT ಯನ್ನು ವಿಸ್ತರಿಸಿ .

Lesbian Gay Bisexual Transgender . ಸಲಿಂಗಗಳ ಹಕ್ಕುಗಳ ಚಳುವಳಿ .

9 . ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸುಧಾರಕರನ್ನು ಹೆಸರಿಸಿ .

ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸುಧಾರಕರೆಂದರೆ ಬುದ್ದ , ಬಸವಣ್ಣ , ಕನಕದಾಸ , ಕಬೀರದಾಸ , ರಾಮದಾಸ , ತುಕಾರಾಮ್ , ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ ಮತ್ತಿತರು .


10. ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಒಂದು ಹೋರಾಟವನ್ನು ಹೆಸರಿಸಿ .

ಅಸ್ಸಾಂನ ಬೋಡೋಲ್ಯಾಂಡ್ ಬೇಡಿಕೆಗಳ ಹೋರಾಟಗಳು ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಒಂದು ಹೋರಾಟವಾಗಿದೆ .

11. ಯಾವ ದಿನವನ್ನು ಮತದಾರರ ದಿನವೆಂದು ಆಚರಿಸಲಾಗುತ್ತಿದೆ ?

ಜನವರಿ 25 , 1950 ನ್ನು ಮತದಾರರ ಮತದಾರರ ದಿನವೆಂದು ಆಚರಿಸಲಾಗುತ್ತಿದೆ .

12 , AASU ವನ್ನು ವಿಸ್ತರಿಸಿ .

All Assam Students Union .

13. ನೀವು ಗುರ್ತಿಸಿದ ಒಂದು ರಾಷ್ಟ್ರೀಯ ಸಮಸ್ಯೆಯನ್ನು ತಿಳಿಸಿ?

ಭ್ರಷ್ಟಾಚಾರ ರಾಷ್ಟ್ರೀಯ ಸಮಸ್ಯೆಗಳಲ್ಲಿ ಒಂದಾಗಿದೆ .

14. ಆಯಾತ ಮತ್ತು ನಿರ್ಯಾತ | ಆಮದು ರಫ್ತು ಮೇಲೆ ರಾಜ್ಯ ತೆರಿಗೆ ವಿಧಿಸಬಹುದೇ ?

ಆಯಾತ ಮತ್ತು ನಿರ್ಯಾತ / ಅಮದು , ರಫ್ತು ಮೇಲೆ ರಾಜ್ಯ ತೆರಿಗೆ ವಿಧಿಸಬಹುದು .

15. ಹಣಕಾಸು ಆಯೋಗವನ್ನು ಯಾರು ರಚಿಸುತ್ತಾರೆ ?

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸು ಆಯೋಗವನ್ನು ರಚಿಸುತ್ತಾರೆ .

16. ಅಂತರರಾಜ್ಯ ವ್ಯಾಪಾರ ಮತ್ತು ವಾಣೀಜ್ಯ ಯಾರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ?

ಅಂತರರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ .

17. ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ?

ಭಾರತದಲ್ಲಿ 3 ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ .

2nd PUC Political Science Chapter 6 Notes in Kannada

18. ರಾಜ್ಯಪಾಲರ ಆಳ್ವಿಕೆಯ ಸಂಧರ್ಭದಲ್ಲಿ ರಾಜ್ಯಪಟ್ಟಿಯ ಮೇಲಿನ ಶಾಸನಾಧಿಕಾರವನ್ನು ಯಾರು ಚಲಾಯಿಸುತ್ತಾರೆ ?

ರಾಜ್ಯಪಾಲರ ಆಳ್ವಿಕೆಯ ಸಂಧರ್ಭದಲ್ಲಿ ರಾಜ್ಯಪಟ್ಟಿಯ ಮೇಲಿನ ಶಾಸನಾಧಿಕಾರವನ್ನು ರಾಷ್ಟ್ರಪತಿ ಚಲಾಯಿಸುತ್ತಾರೆ .

19. ರಾಜ್ಯ ಪಟ್ಟಿಯಲ್ಲಿನ ವಿಷಯಗಳನ್ನು ಒಂದು ವರ್ಷದ ಮಟ್ಟಿಗೆ ಕೇಂದ್ರಪಟ್ಟಿಗೆ ವರ್ಗಾಯಿಸುವ ಅಧಿಕಾರ ಯಾರಿಗಿದೆ ?

ಕೇಂದ್ರ ಸ ೦ ಸತ್ತು ಮಾತ್ರ ರಾಜ್ಯ ಪಟ್ಟಿಯಲ್ಲಿನ ವಿಷಯಗಳನ್ನು ಒಂದು ವರ್ಷದ ಮಟ್ಟಿಗೆ ಕೇಂದ್ರಪಟ್ಟಿಗೆ ವರ್ಗಾಯಿಸುವ ಅಧಿಕಾರವಿದೆ .

20. ಸಮವರ್ತಿ ಪಟ್ಟಿಯಲ್ಲಿನ ಒಂದು ವಿಷಯವನ್ನು ತಿಳಿಸಿ .

ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿನ ಒಂದು ಶಿಷಯವಾಗಿದೆ .

21. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣಕಾಸಿನ ಅಧಿಕಾರಗಳು ಯಾರಲ್ಲಿರುತ್ತದೆ ?

ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣಕಾಸಿನ ಅಧಿಕಾರಗಳು ರಾಷ್ಟ್ರಪತಿಗಳ ಕೈಯಲ್ಲಿರುತ್ತದೆ .

22 . ಭಯೋತ್ಪಾದನೆಯ ಮೂಲಪದ ಯಾವುದು ?

ಭಯೋತ್ಪಾದನೆಯ ಮೂಲಪದ ವಿಶೇಷ ರೀತಿಯ ರಾಜಕೀಯ ಹಿಂಸೆಯಾಗಿದೆ .

23 , ಭ್ರಷ್ಟಾಚಾರದ ಮೂಲಪದ ಯಾವುದು ?

ಭ್ರಷ್ಟಾಚಾರ ಅಥವಾ ” ಕರ ‘ ಎಂಬ ಪದ ಲ್ಯಾಟೀನ್ ಭಾಷೆಯ ” ಹಪಿಯರ್ ” ಎಂಬ ಮೂಲಪದದಿಂದ ಬಂದಿದ್ದು ‘ ಬೈಕ್ ‘ ಅಥವಾ ಛಿದ್ರಗೊಳಿಸು ಎಂಬ ಅರ್ಥವಾಗಿದೆ .

24. IAC ಯನ್ನು ವಿಸ್ತರಿಸಿ .

India Against Corruption ಭ್ರಷ್ಟಾಚಾರದ ವಿರುದ್ಧ ಭಾರತ .

25. ‘ ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೂ ಸಾಲುವಷ್ಟು ಇದೆಯೇ ಹೊರತು ದುರಾಸೆಗಲ್ಲ ‘ ಎಂದು ಹೇಳಿದವರು ಯಾರು ?

ಗಾಂಧೀಜಿಯವರು .

2nd PUC Political Science Chapter 6 Notes in Kannada

ಎರಡು ಅಂಕದ ಪ್ರಶ್ನೆಗಳು

1. ಜಗತ್ತಿನಲ್ಲಿ ಅಸ್ಥಿತ ಹೋರಾಟಕ್ಕೆ ಮುಖ್ಯ ಕಾರಣವೇನು ?

  • ದುರಾಡಳಿತವೆಂಬುದು ಒಂದು ಪ್ರದೇಶದ ಆರ್ಥಿಕ , ಹಿಂದುಳಿದಿರುವಿಕೆಗೆ ಕಾರಣವಾಗಿ ಆ ಜನರ ಮತ್ತು ಪ್ರದೇಶದ ಆಧಾರದ ಅಸ್ಥಿತಿಯ ಉಗಮಕ್ಕೆ ಅವಕಾಶವಾಗುತ್ತದೆ .
  • ಪ್ರಾದೇಶಿಕ ಪಕ್ಷಗಳ ಉಗಮ ಭಾಷೆ ಮತ್ತು ಪ್ರದೇಶಾದ್ಯಂತ ಸ್ಥಳೀಯ ಅರಿವನ್ನು ಮೂಡಿಸುತ್ತದೆ .
  • ಅತಿಯಾದ ಬಡತನ , ಶೋಷಣೆ , ಅವಕಾಶಗಳ ವಂಚನೆ ಮತ್ತು ಕೆಲವು ಜನಾಂಗಗಳಿಗೆ ಇರುವ ಸೌಲಭ್ಯಗಳನ್ನು ಮೊಟಕುಗೊಳಿಸುವ ಪ್ರಯತ್ನ .
  • ಜನಾ ೦ ಗಗಳ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಳುಮಾಡಬಹುದೆಂಬ ಭೀತಿ
  • ಸಾಕ್ಷರತೆ ಮತ್ತು ಆಸೆಗಳು , ಸಾಮಾಜಿಕ , ರಾಜಕೀಯ , ಜಾಗೃತಿ , ಅಸ್ಮಿತೆ ರಾಜಕೀಯಕ್ಕೆ ದಾರಿಮಾಡಿಕೊಡುತ್ತವೆ .
  • ನೈಸರ್ಗಿಕ ಸ ೦ ಪತ್ತಿನ ಅಸಮಾನ ಹಂಚಿಕೆ , ಭೂಮಿಯನ್ನು ಕಳೆದುಕೊಳ್ಳುವ ಭೀತಿ , ರಾಜಕೀಯ ಶಕ್ತಿ ಮತ್ತು ಆರ್ಥಿಕ ಬೆಳವಣಿಗೆಗಳ ಕೊರತೆ ,
  • ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಭೀತಿ .
  • ಭಾಷೆ , ಸಂಸ್ಕೃತಿಯನ್ನಾಧರಿಸಿದ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿ .

2nd PUC Political Science Chapter 6 Notes in Kannada

2. ಅಸ್ಮಿತೆ ರಾಜಕಾರಣದ ಅರ್ಥವನ್ನು ಬರೆಯಿರಿ .

ಅಸ್ಮಿತ ರಾಜಕೀಯವೆಂಬುದು ಒಂದು ರೀತಿಯಲ್ಲಿ ಸ್ವಂತಿಕೆ ವಿಧಾನ , ಸೌಖ್ಯದ ಹುಡುಕಾಟ , ಸಮುದಾಯವನ್ನು ತಲುಪುವುದು ಎನ್ನಲಾಗಿದೆ . ಇದು ಬಲಶಾಲಿಯಾಗಲು , ಪ್ರಾತಿನಿಧ್ಯ ಪಡೆಯಲು ಮತ್ತು ಸಾಮಾಜಿಕ ಗುಂಪನ್ನು ಗುರುತಿಸಲು ಸದಾ ಪ್ರಯತ್ನಿಸುತ್ತಿರುತ್ತದೆ .

ಅಸ್ಥಿತ ರಾಜಕೀಯವೆಂಬುದು ಜನಾಂಗ , ಭಾಷೆ , ಧರ್ಮ , ಅಂಶವನ್ನು ಆಧರಿಸಿದ ಒಬ್ಬ ವ್ಯಕ್ತಿಯ ವೈಯಕ್ತಿಕ ಅರ್ಥ ನೀಡುತ್ತದೆ . ಇದೊಂದು ಗುರುತಿಸಿಕೊಳ್ಳುವಿಕೆಯ ರಾಜಕೀಯವಾಗಿದ್ದು ಅದಕ್ಕಾಗಿ ಪ್ರಯತ್ನಿಸಲಾಗುತ್ತಿರುತ್ತದೆ .

3. ಸಮ್ಮಿಶ್ರ ಸರ್ಕಾರ ಎಂದರೇನು ?

ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ ,

ಎಫ್.ಎ.ಆಗ್ ರವರ ಅಭಿಪ್ರಾಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದುಗೂಡಿ ಸರ್ಕಾರ ಅಥವಾ
ಮಂತ್ರಿಮಂಡಲವನ್ನು ರಚಿಸುವ ಒಂದು ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ ಎನ್ನುವರು .

2nd PUC Political Science Chapter 6 Notes in Kannada

4. ಸಮ್ಮಿಶ್ರ ಸರ್ಕಾರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಉದಾಹರಣೆ ಕೊಡಿ .

ಭಾರತ , ಫ್ರಾನ್ಸ್ .

5.ಸಾಮೂಹಿಕ ನಾಯಕತ್ವ ಎಂದರೇನು ?

ಒಂದು ರಾಷ್ಟ್ರದ ಆಡಳಿತಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವಾಗ ಆಡಳಿತದ ಎಲ್ಲಾ ಮುಖ್ಯಸ್ಥರ ಜೊತೆ ವಿಚಾರ ವಿನಿಮಯ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ . ಇದನ್ನು ಸಾಮೂಹಿಕ ನಾಯಕತ್ವ ಎನ್ನುವರು .

6. ಸಮ್ಮಿಶ್ರ ಸರ್ಕಾರ ರಚನೆಯಾಗುವ ಎರಡು ಸಂದರ್ಭಗಳಾವುವು ?

  • ಸಮ್ಮಿಶ್ರ ಸರ್ಕಾರ ರಚನೆಯಾಗುವ ಈ ವ್ಯವಸ್ಥೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿಯ ಫಲ ಯಾವ ನಿರ್ದಿಷ್ಟ ರಾಜಕೀಯ ಪಕ್ಷವೂ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಪಡೆಯದಿದ್ದಾಗ ವಿವಿಧ ರಾಜಕೀಯ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡುತ್ತದೆ .
  • ಯಾವುದೇ ಪ್ರಬಲ ರಾಜಕೀಯ ಪಕ್ಷವು ಇನ್ನೊಂದು ಪ್ರಬಲ ರಾಜಕೀಯ ಪಕ್ಷದ ಜೊತೆ ಮೈತ್ರಿಗೆ ಮುಂದಾಗುತ್ತದೆ

2nd PUC Political Science Chapter 6 Notes in Kannada

7. ಸಮ್ಮಿಶ್ರ ಸರ್ಕಾರವನ್ನು ವ್ಯಾಖ್ಯಾನಿಸಿ .

  • ಪಕ್ಷಗಳ ಒ೦ದುಗೂಡುವಿಕೆ ಅಥವಾ ಪಕ್ಷಗಳ ಒಕ್ಕೂಟವಾಗಿದೆ . ವಿವಿಧ ರಾಜಕೀಯ ಶಕ್ತಿಗಳು ಒಂದುಗೂಡಿದಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ .
  • ಎಫ್ . ಎ . ಆಗ್ ರವರ ಅಭಿಪ್ರಾಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದುಗೂಡಿ ಸರ್ಕಾರ ಅಥವಾ ಮಂತ್ರಿಮಂಡಲವನ್ನು ರಚಿಸುವ ಒಂದು ವ್ಯವಸ್ಥೆ ,
  • ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ .

8. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎಂದರೇನು ?

ಸುಗಮ ಹಾಗೂ ದಕ್ಷ ಆಡಳಿತಕ್ಕೆ ಅಂಗ ಪಕ್ಷಗಳು ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದು ಸಾಮಾನ್ಯವಾಗಿದೆ . 2004 ರಲ್ಲಿ ಯು.ಪಿ.ಎ ಮೈತ್ರಿಕೂಟ “ ನ್ಯಾಷನಲ್ ಕಾಮನ್ ಮಿನಿಮಮ್ ಪ್ರೋಗ್ರಾಮ್ ” ನ್ನು ಅಂಗೀಕರಿಸುವುದಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎನ್ನುವರು .

ಸಾಮಾಜಿಕ ಸಾಮರಸ್ಯ , ರಕ್ಷಣೆ , ಕಾನೂನು ಅನುಷ್ಠಾನ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವವರಿಗೆ ಶಿಕ್ಷೆ ನೀಡುವ ಕಾರ್ಯಕ್ರಮವನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎನ್ನುವರು .

9 . NDA ಯ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ

  • ಶಿವಸೇನಾ ಪಕ್ಷ
  • ತೆಲುಗು ದೇಶಂ

10. UPA ಯ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ.

  • ಉತ್ತರ ಪ್ರದೇಶದ B.S.P ( ಪಕ್ಷ )
  • ಬಿಹಾರದ R.J.D ( ಪಕ್ಷ

2nd PUC Political Science Chapter 6 Notes in Kannada

11. ರಾಜ್ಯ ಪ್ರೇರಿತ ಭಯೋತ್ಪಾದನೆ ಎಂದರೇನು ?

ರಾಜ್ಯ ಪ್ರೇರಿತ ಬಯೋತ್ಪಾದನೆ ಎಂದರೆ ಪ್ರಪಂಚದಾದ್ಯಂತ , ಭಯೋತ್ಪಾದನೆ ಸಂಘಟನೆಗಳಿಗೆ ತರಬೇತಿ ಕೇಂದ್ರಗಳಿಗೆ ಆಶ್ರಯ ನೀಡಿದೆ . ಇಲ್ಲಿನ ಆತಂಕವಾದಿಗಳನ್ನು ಸಮರ ಸೇನಾನಿಗಳೆಂದು ಬಿಂಬಿಸಲಾಗುತ್ತದೆ . ಬಡತನ , ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರನ್ನು ವಿವಿಧ ಆಸೆ ಆಮಿಷಗಳನ್ನು ತೋರಿಸಿ ತಲೆಕೆನ್ನು ಬಳಸಿಕೊಳ್ಳುತ್ತಿರುವುದು ಈ ಭಯೋತ್ಪಾದನೆಯ ಬೆಳವಣಿಗೆ ಪ್ರಮುಖ ಕಾರಣವಾಗಿದೆ .

12. ಸಾಮಾನ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವ ವಿಷಯದಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಬಹುದು.

ರಾಷ್ಟ್ರದ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ , ರಾಜ್ಯಗ ರೈಲ್ವೆ , ಆಸ್ತಿ , ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಬಹುದು .

2nd PUC Political Science Chapter 6 Notes in Kannada

13. ಭ್ರಷ್ಟಾಚಾರ ಎಂದರೇನು ?

ಸ್ಪಷ್ಟ ಮತ್ತು ಉದ್ದೇಶಪೂರ್ವಕವಾಗಿ ಒಬ್ಬನ ಸ್ಥಾನವನ್ನು ಅಧಿಕಾರವನ್ನು ಅಥವಾ ಸಂಪನ್ಮೂಲಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೈಯಕ್ತಿಕ ಉಪಯುಕ್ತತೆಗೆ ಶೋಷಣೆ ಮಾಡುವುದೇ ಭ್ರಷ್ಟಾಚಾರ ಎಂದು ಕರೆಯುವರು .

14. ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಇರುವ ಎರಡು ಅಡಚಣೆಗಳಾವುವು ?

ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡು ಇರುವ ಎರಡು ಅಡಚಣೆಗಳೆಂದರೆ ಆಡಳಿತದಲ್ಲಿ ಅದಕ್ಷತೆ ಪ್ರಜಾತಂತ್ರದ ಮೌಲ್ಯಗಳ ಕುಸಿತ .

15. ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ನಡೆದ ಒಂದು ಆಂದೋಲನವನ್ನು ಹೆಸರಿಸಿ .

ಆಂದೋಲನವೆಂದರೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಪ್ರಬಲವಾದ ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ನಡೆದ ಒಂದು ಜನಾಂದೋಲನ ಭ್ರಷ್ಟಾಚಾರದ ವಿರುದ್ಧ ಭಾರತ .

2nd PUC Political Science Chapter 6 Notes in Kannada

ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್

ಅದ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಅದ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ

ಅದ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes

ಅದ್ಯಾಯ :- 03 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು

2nd puc political science 5th chapter notes in kannada

Leave a Reply

Your email address will not be published. Required fields are marked *