ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ | Chunavanegalu Mattu Baratadalli Paksha Paddati

2nd puc political science chapter 2 notes in kannada

1985 ಏಪ್ರಿಲ್ 1 ರಂದು ಶ್ರೀ ರಾಜೀವ್ ಗಾಂಧಿಯವರು ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂದರು .

2nd puc political science chapter 2 notes in kannada

ಪಕ್ಷಾಂತರ ನಿಷೇಧ ಕಾಯಿದೆಯನ್ನು ಸಂವಿಧಾನದ 52 ನೇ ತಿದ್ದುಪಡಿಯ ಮೂಲಕ ಸಂವಿಧಾನದ 10 ನೇ ಅನುಸೂಚಿಯಲ್ಲಿ ಅಳವಡಿಸಲಾಗಿದೆ .

ಭಾರತದಲ್ಲಿ ಪಕ್ಷಾಂತರ ಎಂಬ ಪದವು ಇಂಗ್ಲೀಷಿನ ‘ Defection ‘ ಎಂಬ ಪದದ ಅನುವಾದವಾಗಿದೆ . Defection ಎಂಬ ಪದವು ಲ್ಯಾಟಿನ್ ಭಾಷೆಯ ‘ Defectio ‘ ಪದದಿಂದ ಬಂದಿದೆ .

2003 ರಲ್ಲಿ 91 ನೇ ತಿದ್ದುಪಡಿಯ ಮೂಲಕ 1985 ರ ಪಕ್ಷಾಂತರ ನಿಷೇಧ ಕಾಯ್ದೆಗೆ ಕೆಲವು ಬದಲಾವಣೆಗಳನ್ನು ಮಾಡಲಾಯಿತು .

ಕೇಂದ್ರ ಮತ್ತು ರಾಜ್ಯ ಮಂತ್ರಿ ಮಂಡಲದ ಗಾತ್ರವು ತನ್ನ ಸದಸ್ಯರ 15 % ರಷ್ಟನ್ನು ಮೀರುವಂತಿಲ್ಲ .

ಪಕ್ಷಾಂತರ ನಿಷೇಧ ಕಾಯ್ದೆಯಿಂದ ಸದಸ್ಯತ್ವವನ್ನು ಕಳೆದುಕೊಂಡ ಸದಸ್ಯರು ಸ್ಪೀಕರ್‌ ಅವರ ಆದೇಶದ ವಿರುದ್ಧ ಉನ್ನತ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಲು ಅವಕಾಶವಿದೆ .

2nd puc political science chapter 2 notes in kannada

ಒಂದು ಅಂಕದ ಪ್ರಶ್ನೆಗಳು

ಚುನಾವಣೆ ಪದದ ಮೂಲಪದ ಯಾವುದು ?

ಚುನಾವಣೆ ಎಂಬ ಪದವು ಲ್ಯಾಟಿನ್ ಭಾಷೆಯ “ Eligere ಎಂಬ ಪದದಿಂದ ಬಂದಿದೆ . “ Eligere ‘ ಎಂದರೆ ಆರಿಸು ಎಂದು ಅರ್ಥ.

ಚುನಾವಣೆ ಎಂದರೇನು ?

ದೇಶದಲ್ಲಿನ ಎಲ್ಲಾ ಮತದಾರರು ತಮ್ಮನ್ನಾಳುವ ಪ್ರತಿನಿಧಿಗಳನ್ನು ತಾವೇ ಆಯ್ಕೆ ಮಾಡುವ ಪದ್ಧತಿಯೇ ಚುನಾವಣೆಯಾಗಿದೆ.

ಸಾರ್ವತ್ರಿಕ ಚುನಾವಣೆ ಎಂದರೇನು ?

ದೇಶದ ಶಾಸನ ಸಭೆಗಳಿಗೆ ಜನ ಪ್ರತಿನಿಧಿಗಳನ್ನು ಆರಿಸಲು ದೇಶಗಳ ಎಲ್ಲಾ ಮತದಾರರು ಮತದಾನ ಮಾಡುವ ಚುನಾವಣೆಯೇ ಸಾರ್ವತ್ರಿಕ ಚುನಾವಣೆಯಾಗಿದೆ.

ಉಪ ಚುನಾವಣೆ ಎಂದರೇನು ?

ರಾಜೀನಾಮೆ , ಮರಣ ಮುಂತಾದ ಕಾರಣಗಳಿಂದ ಖಾಲಿಯಾದ ಸ್ಥಾನಗಳಿಗೆ ನಡೆಯುವ ಚುನಾವಣೆಯೇ ಉಪಚುನಾವಣೆ.

ಮರು ಚುನಾವಣೆ ಎಂದರೇನು ?

ಅವ್ಯವಹಾರ ನಡೆದಿರುವ ಚುನಾವಣೆಗಳನ್ನು ರದ್ದು ಪಡಿಸಿ ಪುನಃ ಚುನಾವಣೆಗಳನ್ನು ನಡೆಸಿದರೆ ಅದಕ್ಕೆ ಮರು ಚುನಾವಣೆ ಎನ್ನುವರು .

2nd puc political science chapter 2 notes in kannada

ಮಧ್ಯಂತರ ಚುನಾವಣೆ ಎಂದರೇನು ?

ಒಂದು ನಿರ್ಧಿಷ್ಟ ಅವಧಿಗೆ ಆಯ್ಕೆಯಾದ ಸರ್ಕಾರ ತನ್ನ ಪೂರ್ತಿ ಅಧಿಕಾರಾವಧಿ ಮುಗಿಯುವ ಮುನ್ನವೇ ನಾನಾ ಕಾರಣಗಳಿಂದಾಗಿ ಅಧಿಕಾರದಿಂದ ಕೆಳಗಿಳಿದಾಗ ಅಥವಾ ಶಾಸನಸಭೆಯ ಕೆಳಸದನ ವಿಸರ್ಜಿಸಲ್ಪಟ್ಟಾಗ ನಡೆಯುವ ಚುನಾವಣೆಯೇ ಮಧ್ಯಂತರ ಚುನಾವಣೆ.

ಪ್ರತ್ಯಕ್ಷ ಚುನಾವಣೆ ಎಂದರೇನು ?

ವಯಸ್ಕ ಮತದಾರರು ತಾವೇ ನೇರವಾಗಿ ಮತಗಟ್ಟೆಗೆ ಹೋಗಿ , ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸುವ ಪದ್ಧತಿಯೇ ಪ್ರತ್ಯಕ್ಷ ಚುನಾವಣೆ.

ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ .

ಪ್ರತ್ಯಕ್ಷ ಚುನಾವಣೆಗೆ ಭಾರತದಲ್ಲಿನ ಲೋಕಸಭಾ ಚುನಾವಣೆಯು ಉತ್ತಮ ಉದಾಹರಣೆಯಾಗಿದೆ.

ಪರೋಕ್ಷ ಚುನಾವಣೆ ಎಂದರೇನು ?

ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಪಾಲ್ಗೊಳ್ಳದೆ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಧಾನವನ್ನು ಪರೋಕ್ಷ ಚುನಾವಣೆ ಎನ್ನುವರು.

ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.

ಭಾರತದ ರಾಷ್ಟ್ರಪತಿ ಆಯ್ಕೆಯ ಚುನಾವಣೆಯು ಪರೋಕ್ಷ ಚುನಾವಣೆಗೆ ಒಂದು ಉತ್ತಮ ಉದಾಹರಣೆಯಾಗಿದೆ .

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ?

ಲಿಂಗ ಧರ್ಮ , ಜಾತಿ , ಬುಡಕಟ್ಟು ಮತ್ತು ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ ಮುಂತಾದವುಗಳ ತಾರತಮ್ಯವಿಲ್ಲದೆ ಮತದಾನದಲ್ಲಿ ಪಾಲ್ಗೊಂಡು ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ . ಇದೇ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.

2nd puc political science chapter 2 notes in kannada

ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ ಎಷ್ಟು ?

ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ 18 ವಯಸ್ಸು.

ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ ?

ಭಾರತದ ಚುನಾವಣಾ ಆಯೋಗದಲ್ಲಿ 3 ಜನ ಸದಸ್ಯರಿದ್ದಾರೆ.

ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ ?

ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ ಎಷ್ಟು ?

ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರಾವಧಿ 6 ವರ್ಷ.

EVM ಅನ್ನು ವಿಸ್ತರಿಸಿ.

ವಿದ್ಯುನ್ಮಾನ ಮತಯಂತ್ರ ‘ – Electronic Voting Machine.

EPIC ಅನ್ನು ವಿಸ್ತರಿಸಿ .

ಮತದಾರರ ಗುರುತಿನ ಚೀಟಿ ” – Electors Photo Identity Card.

ಮತದಾರರ ಗುರುತಿನ ಚೀಟಿ ಎಂದರೇನು ?

ಚುನಾವಣೆಯಲ್ಲಿ ನಡೆಯುವ ಅಕ್ರಮ ಭ್ರಷ್ಟಾಚಾರ ಮತ್ತು ನಕಲಿ ಮತದಾನವನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು ಮತದಾರರಿಗೆ ನೀಡುವ ಗುರುತಿನ ಚೀಟಿಯೇ ಮತದಾರರ ಗುರುತಿನ ಚೀಟಿಯಾಗಿದೆ.

2nd puc political science chapter 2 notes in kannada

ವಿದ್ಯುನ್ಮಾನ ಮತಯಂತ್ರ ಎಂದರೇನು ?

ವಿದ್ಯುನ್ಮಾನ ಮತಯಂತ್ರ ಎಂದರೆ ಚುನಾವಣೆಯಲ್ಲಿ ಮತದಾನ ಮಾಡಲು ಬಳಸುವ ಆಧುನಿಕ ವಿದ್ಯುನ್ಮಾನ ಯಂತ್ರವನ್ನು ವಿದ್ಯುನ್ಮಾನ ಮತಯಂತ್ರ ಎಂದು ಕರೆಯುವರು.

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ?

ಸಾಮಾನ್ಯ ಸಿದ್ಧಾಂತದ ಆಧಾರದ ಮೇಲೆ ನಿರ್ಧಿಷ್ಟ ಉದ್ದೇಶಗಳಿಂದ ಕನಿಷ್ಠ ಸಂಘಟಿತ ಸಮುದಾಯಗಳೇ ರಾಜಕೀಯ ಪಕ್ಷಗಳು ಎನ್ನುವರು.

ಭಾರತದಲ್ಲಿ ಎಂತಹ ಪಕ್ಷಪದ್ಧತಿ ಇದೆ ?

ಭಾರತದಲ್ಲಿ ಬಹು ಪಕ್ಷಪದ್ಧತಿ ಇದೆ.

ರಾಷ್ಟ್ರೀಯ ಪಕ್ಷ ಎಂದರೇನು ?

ಲೋಕಸಭಾ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಶೇ . 6 ರಷ್ಟು ಚಲಾಯಿಸಿದ ಉಚಿತ ಮತಗಳನ್ನು ಪಡೆದಿರುವ ಪಕ್ಷವು ರಾಷ್ಟ್ರೀಯ ಪಕ್ಷವಾಗಿದೆ.

2nd puc political science chapter 2 notes in kannada

ಪ್ರಾದೇಶಿಕ ಪಕ್ಷ ಎಂದರೇನು ?

ರಾಜ್ಯದ ಒಟ್ಟು ವಿಧಾನ ಸಭಾ ಸ್ಥಾನಗಳಲ್ಲಿ ಶೇ . 3 ರಷ್ಟು ಸ್ಥಾನಗಳನ್ನು ಅಥವಾ ಕನಿಷ್ಟ 3 ಸ್ಥಾನಗಳನ್ನು ಗೆದ್ದಿರುವ ಪಕ್ಷವನ್ನು ‘ ಪ್ರಾದೇಶಿಕ ಪಕ್ಷ ‘ ಎನ್ನುವರು.

ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು ಯಾರು ?

ಏ.ಓ. ಹೂಮ್ ಅವರು ಭಾರತದ ರಾಷ್ಟ್ರೀಯ ಕಾಂಗ್ರೆಸ್‌ನ ಸ್ಥಾಪಕರು.

ಭಾರತ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಅಸ್ತಿತ್ವಕ್ಕೆ ಬಂದಿತು ?

ಡಿಸೆಂಬರ್ 24 , 1985 ರಂದು ಭಾರತದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಅಸ್ತಿತ್ವಕ್ಕೆ ಬಂದಿತು.

2nd puc political science chapter 2 notes in kannada

NDA ಅನ್ನು ವಿಸ್ತರಿಸಿ .

National Democratic Alliance.

UPA ಅನ್ನು ವಿಸ್ತರಿಸಿ .

United Progressive Alliance.

ಬಿ.ಜೆ.ಪಿ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1980 ಏಪ್ರಿಲ್ 6 ರಂದು ಬಿ.ಜೆ.ಪಿ ಪಕ್ಷವು ಅಸ್ತಿತ್ವಕ್ಕೆ ಬಂದಿತು.

ಕಮ್ಯುನಿಸ್ಟ್ ಪಕ್ಷ ಯಾವಾಗ ಅಸ್ತಿತ್ವಕ್ಕೆ ಬಂದಿತು ?

1925 ಡಿಸೆಂಬರ್ 26 ರಂದು ಕಮ್ಯುನಿಸ್ಟ್ ಪಕ್ಷವು ಅಸ್ತಿತ್ವಕ್ಕೆ ಬಂದಿತು.

ಪಕ್ಷಾಂತರ ಎಂದರೇನು ?

ಪಕ್ಷಾಂತರ ಎಂದರೆ ಶಾಸನ ಸಭೆಯ ಸದಸ್ಯರು ತಮ್ಮ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಸೇರುವುದು .

ಪಕ್ಷಾಂತರ ನಿಷೇಧ ಕಾಯ್ದೆ ಯಾವಾಗ ಜಾರಿಗೆ ಬಂದಿತು ?

ಪಕ್ಷಾಂತರ ನಿಷೇಧ ಕಾಯ್ದೆಯು 1985 ಏಪ್ರಿಲ್ 1 ರಂದು ಜಾರಿಗೆ ಬಂದಿತು.

2nd puc political science chapter 2 notes in kannada

ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು ?

ಶಾಸನ ಸಭೆಯ ಸದಸ್ಯರು ತಾವು ಚುನಾವಣೆಯಲ್ಲಿ ಆಯ್ಕೆಯಾಗಿ ಬಂದ ಪಕ್ಷವನ್ನು ಬಿಟ್ಟು ಬೇರೊಂದು ಪಕ್ಷಕ್ಕೆ ಹೋಗುವುದನ್ನು ನಿರ್ಧರಿಸಲು ಜಾರಿಗೆ ಬಂದ ಕಾಯಿದೆಯೇ ಪಕ್ಷಾಂತರ ನಿಷೇಧ ಕಾಯಿದೆ ಎನ್ನುವರು.

ಪಕ್ಷಾಂತರಕ್ಕೆ ಇರುವ ಇತರ ಹೆಸರುಗಳೇನು ?

1. ಫ್ಲೋರ್ ಕ್ರಾಸಿಂಗ್ ( ಇಂಗ್ಲೆಂಡ್ )

2. ಕಾರ್ಪೆಟ್ ಕ್ರಾಸಿಂಗ್ ( ನೈಜೀರಿಯಾ )

3 . ಪೊಲಿಟಿಕಲ್ ಟರ್ನ್ ಕೋಟಿಸಂ ( ಅಮೆರಿಕಾ )

4. ಡಿಫೆಕ್ಷನ್ ( ಭಾರತ ).

ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾರು ಜಾರಿಗೆ ತಂದರು ?

ರಾಜೀವ್ ಗಾಂಧಿಯವರು ಜಾರಿಗೆ ತಂದರು.

NOTA ವನ್ನು ವಿಸ್ತರಿಸಿ . 78u

None of the Above .

2nd puc political science chapter 2 notes in kannada

ಎರಡು ಅಂಕದ ಪ್ರಶ್ನೆಗಳು

ಪ್ರತ್ಯಕ್ಷ ಚುನಾವಣೆ ಎಂದರೇನು ? ಉದಾಹರಣೆ ಕೊಡಿ .

ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ವಯಸ್ಕ ಮತದಾರರು ನೇರವಾಗಿ ತಾವೇ ಮತಗಟ್ಟೆಗೆ ಹೋಗಿ ತಮಗೆ ಬೇಕಾದ ಅಭ್ಯರ್ಥಿಗಳಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸುವ ಪದ್ಧತಿಯೇ ಪ್ರತ್ಯಕ್ಷ ಚುನಾವಣೆ . ಇದನ್ನು ನೇರ ಚುನಾವಣೆ ಎಂದೂ ಸಹ ಕರೆಯುವರು .

ಪ್ರತಿನಿಧಿಗಳನ್ನು ಪ್ರಜೆಗಳೇ ನೇರವಾಗಿ ಆಯ್ಕೆ ಮಾಡುವ ಅವಕಾಶವಿರುತ್ತದೆ.

ಉದಾ :

  • ಅಮೇರಿಕಾದ ಕಾಂಗ್ರೆಸ್ಸಿನ ಕೆಲಸದವರು ಪ್ರತಿನಿಧಿ ಸಭೆ .
  • ಭಾರತದಲ್ಲಿಯ ಲೋಕಸಭಾ ಚುನಾವಣೆ.

ಪರೋಕ್ಷ ಚುನಾವಣೆ ಎಂದರೇನು ? ಉದಾಹರಣೆ ಕೊಡಿ.

ಒಂದು ರಾಷ್ಟ್ರದ ಚುನಾವಣಾ ವ್ಯವಸ್ಥೆಯಲ್ಲಿ ಮತದಾರರು ನೇರವಾಗಿ ಮತದಾನದಲ್ಲಿ ಪಾಲ್ಗೊಳ್ಳದೇ ಪ್ರಜೆಗಳಿಂದ ಆಯ್ಕೆಯಾದ ಪ್ರತಿನಿಧಿಗಳು ರಾಷ್ಟ್ರದ ಮುಖ್ಯಸ್ಥರನ್ನು ಆಯ್ಕೆ ಮಾಡುವ ವಿಧಾನವನ್ನು ಪರೋಕ್ಷ ಚುನಾವಣೆ ಎನ್ನುವರು .

ಉದಾ :

  • ಭಾರತದ ರಾಷ್ಟ್ರಪತಿ ಚುನಾವಣೆ
  • ರಾಜ್ಯಸಭಾ ಸದಸ್ಯರ ಚುನಾವಣೆ .

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು ? ಉದಾಹರಣೆ ಕೊಡಿ.

ಲಿಂಗ , ಧರ್ಮ , ಜಾತಿ , ಬುಡಕಟ್ಟು ಆರ್ಥಿಕ ಸಾಮಾಜಿಕ ಸ್ಥಾನಮಾನ ಮುಂತಾದವುಗಳ ಭೇದ ಭಾವವಿಲ್ಲದೇ ಒಂದು ನಿರ್ಧಿಷ್ಟ ವಯಸ್ಸನ್ನು ಮೀರಿದ ಪ್ರಜೆಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತದಾನ ಮಾಡುತ್ತಾರೆ ಇದಕ್ಕೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು .

ಉದಾ : ಭಾರತದಲ್ಲಿ 18 ವರ್ಷಗಳ ವಯಸ್ಸನ್ನು ನಿಗಧಿಪಡಿಸಲಾಗಿದೆ .

2nd puc political science chapter 2 notes in kannada

ಚುನಾವಣಾ ಆಯೋಗ ಎಂದರೇನು ?

ಸಂವಿಧಾನದ 324 ರಿಂದ 329 ರವರೆಗಿನ ವಿಧಿಯ ಪ್ರಕಾರ ಭಾರತದಲ್ಲಿ ಮುಕ್ತ ಕ್ಷಪಾತವಾದ ಚುನಾವಣೆಗಳನ್ನು ನಡೆಸುವ ಅಧಿಕಾರವನ್ನು ಸಂವಿಧಾನದಿಂದ ಪಡೆದಿರುವ ಆಯೋಗವೇ ಚುನಾವಣಾ ಆಯೋಗ . ಇದು ಒಂದು ತ್ರಿಸದಸ್ಯ ಆಯೋಗವಾಗಿದೆ . ಇದು ಒಂದು ಸ್ವಾಯತ್ವ ಸಂಸ್ಥೆಯಾಗಿದೆ.

ಚುನಾವಣಾ ಆಯೋಗದ ಎರಡು ಕಾರ್ಯಗಳನ್ನು ಬರೆಯಿರಿ .

ಚುನಾವಣಾ ಆಯೋಗದ ಎರಡು ಕಾರ್ಯಗಳು ಯಾವುವೆಂದರೆ

  • ಮತದಾರರ ಪಟ್ಟಿಗಳನ್ನು ಸಿದ್ಧಪಡಿಸಿ ಅವುಗಳ ಪರಿಷ್ಕರಣವನ್ನು ವೀಕ್ಷಿಸಿ ನಿರ್ದೇಶನ ನೀಡುವುದು .
  • ಸಂಸತ್ತಿಗೆ , ರಾಜ್ಯ ಶಾಸಕಾಂಗಗಳಿಗೆ , ರಾಷ್ಟ್ರಪತಿ , ಉಪರಾಷ್ಟ್ರಪತಿ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು .

6. ಚುನಾವಣಾ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯು ಕಡ್ಡಾಯವಾಗಿ ಘೋಷಿಸುವ ಯಾವುದಾದರೂ ಎರಡು ಅಂಶಗಳಾವುವು ?

  • ತಮ್ಮ ಎಲ್ಲಾ ಅಪರಾಧಿ ವಿವರಗಳನ್ನು ಹಾಗೂ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳ ವಿವರಗಳು .
  • ಶೈಕ್ಷಣಿಕ ಅರ್ಹತೆಗಳ ವಿವರಗಳನ್ನು ಸಲ್ಲಿಸುವುದು .

ವಿದ್ಯುನ್ಮಾನ ಮತಯಂತ್ರದಿಂದಾಗುವ ಎರಡು ಅನುಕೂಲಗಳನ್ನು ತಿಳಿಸಿ .

  • ವಿದ್ಯುನ್ಮಾನ ಮತಯಂತ್ರವನ್ನು ಸುಲಭವಾಗಿ ಬಳಕೆ ಮಾಡಬಹುದು .ಇದರಿಂದ ಸಮಯ ಉಳಿತಾಯವಾಗುತ್ತದೆ .
  • ಈ ವ್ಯವಸ್ಥೆಯಲ್ಲಿ ಮತದಾರ ಮತದಾನವನ್ನು ತುಂಬಾ ಸುಲಭವಾಗಿ ಚಲಾಯಿಸಬಹುದು.

ಮತದಾರರ ಗುರುತಿನ ಚೀಟಿಯ ಎರಡು ಅನುಕೂಲಗಳನ್ನು ‘ ತಿಳಿಸಿ .

  • ಗುರುತಿನ ಚೀಟಿಯನ್ನು ಬಳಸುವುದರಿಂದ ನಕಲಿ ಮತದಾರರನ್ನು ತಡೆಗಟ್ಟಿ ನಿಜವಾದ ಮತದಾರರನ್ನು ಮತ ಚಲಾಯಿಸಲು ಅವಕಾಶ ಮಾಡಲಾಗುತ್ತದೆ .
  • ಮತದಾರರ ಗುರುತಿನ ಚೀಟಿಯಿಂದ ಸರಕಾರದ ಹಲವಾರು ಯೋಜನೆಗಳಿಂದ ಸಿಗುವ ಲಾಭ ಪಡೆಯಬಹುದು.

ರಾಜ್ಯ ಹಣಕಾಸು ನೆರವು ಕುರಿತು ಬರೆಯಿರಿ.

ಕಪ್ಪು ಹಣದ ಹಾವಳಿ ತಡೆಯಲು ಜನಸಾಮಾನ್ಯರು ಚುನಾವಣೆಗಳಲ್ಲಿ ಸ್ಪರ್ಧಿಸಲು ಅವಕಾಶವನ್ನು ನೀಡುವ ಉದ್ದೇಶದಿಂದ ಸ್ಪರ್ಧಿಗಳ ಚುನಾವಣಾ ವೆಚ್ಚವನ್ನು ರಾಜ್ಯ ಸರಕಾರದಿಂದಲೇ ಭರಿಸುವುದಾಗಿದೆ . ಚುನಾವಣಾ ವೆಚ್ಚಕ್ಕೆ ರಾಜ್ಯ ಸರಕಾರ ನೀಡುವ ಹಣವು ವಸ್ತುಗಳ ರೂಪದಲ್ಲಿರಬೇಕು.

ಚುನಾವಣಾ ಸುಧಾರಣೆಗಳಿಗೆ ಶಿಫಾರಸ್ಸು ಮಾಡಿದ ಯಾವುದಾದರೂ ಎರಡು ಸಮಿತಿಗಳು ಯಾವುವು.

1. ಎ.ಕೆ.ತಾರ್ಕುಂಡೆ ಸಮಿತಿ ,

2. ನ್ಯಾಯಮೂರ್ತಿ ಕುಲದೀಪ್‌ಸಿಂಗ್ ಸಮಿತಿ.

ಸರ್ಕಾರವೇ ಚುನಾವಣಾ ವೆಚ್ಚವನ್ನು ಭರಿಸಲು ಶಿಫಾರಸ್ಸು ಮಾಡಿದ ಸಮಿತಿಗಳು ಯಾವುವು ?

ಚುನಾವಣಾ ವೆಚ್ಚವನ್ನು ಸರಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕೆಂದು

  • ವಿ.ಕೆ.ತಾರ್ಕುಂತೆ ಸಮಿತಿ ಮತ್ತು
  • ವಾಂಛಿ ಸಮಿತಿಗಳು ಶಿಫಾರಸ್ಸು ಮಾಡಿದ್ದವು.

ರಾಜಕೀಯ ಪಕ್ಷದ ಒಂದು ವ್ಯಾಖ್ಯೆ ಬರೆಯಿರಿ .

ಗಿಲ್‌ಕ್ರಿಸ್ಟ್ ರವರ ಪ್ರಕಾರ ರಾಜಕೀಯ ಪಕ್ಷ ಎಂದರೆ ಸಮಾನ ರಾಜಕೀಯ ಗುರಿಗಳನ್ನು ಹೊಂದಿ ಸಂಘಟನೆಯ ಮೂಲಕ ಅಧಿಕಾರ ಪಡೆದು ತಮ್ಮ ಪಕ್ಷದ ಧೈಯ ಗುರಿಗಳಿಗನುಗುಣವಾಗಿ ರಾಷ್ಟ್ರದ ಆಡಳಿತವನ್ನು ನಡೆಸುವ ಗುಂಪೇ ರಾಜಕೀಯ ಪಕ್ಷ.

2nd puc political science chapter 2 notes in kannada

ಏಕ ಪಕ್ಷಪದ್ಧತಿ ಎಂದರೇನು ? ಉದಾಹರಣೆ ಕೊಡಿ .

ಕೇವಲ ಒಂದೇ ಪಕ್ಷ ಅಸ್ತಿತ್ವದಲ್ಲಿದ್ದರೆ ಅದನ್ನು ಏಕ ಪಕ್ಷ ಪದ್ಧತಿ ಎಂದು ಕರೆಯುತ್ತೇವೆ

ಉದಾ : ಕಮ್ಯುನಿಸ್ಟ್ ಪಕ್ಷ .

ದ್ವಿಪಕ್ಷ ಪದ್ಧತಿ ಎಂದರೇನು ? ಉದಾಹರಣೆ ಕೊಡಿ.

ದ್ವಿಪಕ್ಷ ಪದ್ಧತಿ ಎಂದರೆ ಎರಡು ಪಕ್ಷಗಳು ಮಾತ್ರ ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ .

ಉದಾ : ಅಮೇರಿಕಾ ಸಂಯುಕ್ತ ಸಂಸ್ಥಾನ.

ಬಹುಪಕ್ಷ ಪದ್ಧತಿ ಎಂದರೇನು ? ಉದಾಹರಣೆ ಕೊಡಿ .

ಬಹುಪಕ್ಷ ಪದ್ಧತಿ ಎಂದರೆ ಎರಡಕ್ಕಿಂತ ಹೆಚ್ಚು ಪಕ್ಷಗಳು ಅಸ್ತಿತ್ವದಲ್ಲಿರುತ್ತದೆ .

ಉದಾ : ಭಾರತ , 16.

ರಾಜಕೀಯ ಪಕ್ಷಗಳ ಎರಡು ಕಾರ್ಯಗಳನ್ನು ಬರೆಯಿರಿ.

  • ಚುನಾವಣಾ ಪ್ರಣಾಳಿಕೆಯನ್ನು ಸಿದ್ಧಪಡಿಸುವುದು .
  • ಅಭ್ಯರ್ಥಿಯ ಆಯ್ಕೆ ,

ಇದನ್ನು ಓದಿ : ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ನೋಟ್ಸ್

ಸಮ್ಮಿಶ್ರ ಸರ್ಕಾರ ಎಂದರೇನು ?

ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡು ರಚನೆ ಮಾಡುವ ಸರ್ಕಾರವನ್ನು ಸಮ್ಮಿಶ್ರ ಸರ್ಕಾರ ಎನ್ನುವರು.

2nd puc political science chapter 2 notes in kannada
2nd puc political science chapter 2 notes in kannada

ಸಮ್ಮಿಶ್ರ ಸರ್ಕಾರ ಯಾವಾಗ ರಚನೆಯಾಗುತ್ತದೆ ?

ಚುನಾವಣೆಗಳು ನಡೆದು ಫಲಿತಾಂಶಗಳು ಪ್ರಕಟವಾದಾಗ ಯಾವುದೇ ಒಂದು ನಿರ್ಧಿಷ್ಟ ರಾಜಕೀಯ ಪಕ್ಷ ಸರ್ಕಾರ ರಚನೆ ಮಾಡುವಷ್ಟು ಸ್ಪಷ್ಟ ಬಹುಮತ ಪಡೆಯದಿದ್ದಾಗ ಹಲವಾರು ರಾಜಕೀಯ ಪಕ್ಷಗಳು ಸೇರಿ ಮೈತ್ರಿಕೂಟ ಮಾಡಿಕೊಂಡಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ .

ಉದಾ : NDA S.P.A

ರಾಷ್ಟ್ರೀಯ ಪಕ್ಷಗಳನ್ನು ಹೆಸರಿಸಿ .

ರಾಷ್ಟ್ರೀಯ ಕಾಂಗ್ರೆಸ್ ಪಕ್ಷ , ಭಾರತೀಯ ಜನತಾ ಪಕ್ಷ , ಕಮ್ಯೂನಿಸ್ಟ್ ಪಕ್ಷ , ಮುಸ್ಲಿಂ ಲೀಗ್ , ಸೋಷಿಯಲಿಸ್ಟ್ ಪಕ್ಷ , ಜನಸಂಘ , ಭಾರತೀಯ ಜನತಾ ಪಾರ್ಟಿ , ಬಹುಜನ ಸಮಾಜ ಪಕ್ಷ , ಜನತಾದಳ ,

2nd puc political science chapter 2 notes in kannada

ಪ್ರಮುಖ ಪ್ರಾಂತೀಯ ಪಕ್ಷಗಳಾವುವು ?

  • ಡಿ.ಎಂ.ಕೆ , ಎ.ಐ.ಎ.ಡಿ.ಎಂ.ಕೆ [ ತಮಿಳುನಾಡು ]
  • ಆರ್.ಜೆ.ಡಿ [ ಬಿಹಾರ್ ]
  • ಬಿಜು ಜನತಾದಳ [ ಒರಿಸ್ಸಾ ]
  • ಎಸ್.ಜೆ.ಡಿ [ ಉತ್ತರ ಪ್ರದೇಶ ]
  • ನ್ಯಾಷನಲ್ ಕಾನ್ಸರೆನ್ಸ್ [ ಜಮ್ಮು ಮತ್ತು ಕಾಶ್ಮೀರ ] ಇವು ಪ್ರಾಂತೀಯ ಪಕ್ಷಗಳು.

2nd puc political science chapter 2 notes in kannada

2 thoughts on “ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ | Chunavanegalu Mattu Baratadalli Paksha Paddati

Leave a Reply

Your email address will not be published. Required fields are marked *