ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು । 2nd puc political science 5th chapter notes in kannada

ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು । 2nd puc political science 5th chapter notes in kannada

2nd puc political science 5th chapter notes in kannada,ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು, Students can Download Political Science Chapter 5 Nation Building and Challenges to Indian Democracy Questions and Answers, Notes Pdf

2nd puc political science 5th chapter notes in kannada

Spardhavani Telegram
Spardhavani.com

ಒಂದು ಅಂಕದ ಪ್ರಶ್ನೆಗಳು

1. ರಾಷ್ಟ್ರ – ರಾಜ್ಯ ಎಂದರೇನು ?

ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪರರ ಅಧೀನದಲ್ಲಿರುವ ರಾಜಕೀಯ ಗುರಿಗಳ ಸಾಧನೆಗಾಗಿ ಶಾಶ್ವತವಾಗಿ ರೂಪಗೊಂಡ ಜನಸಮೂಹವೇ ರಾಷ್ಟ್ರ – ರಾಜ್ಯ

2. ರಾಷ್ಟ್ರೀಯತೆ ಎಂದರೇನು ?

ಪರಕೀಯರ ದಬ್ಬಾಳಿಕೆಗೊಳಗಾದ . ಜನರು ಭಿನ್ನಾಭಿಪ್ರಾಯಗಳನ್ನು ಮರೆತು ರಾಷ್ಟ್ರ ನಿರ್ಮಾಣಕ್ಕಾಗಿ ಒಗ್ಗಟ್ಟಿನಿಂದ ಹೋರಾಡುವಂತೆ ಪ್ರೇರೇಪಿಸುವುದೇ ರಾಷ್ಟ್ರೀಯತೆ .

3. ರಾಷ್ಟ್ರ ನಿರ್ಮಾಣ ಎಂದರೇನು ?

ಜನರನ್ನು ಸಂಘಟಿಸಿ ಅವರಲ್ಲಿ ಸಾಮರಸ್ಯ ಸಾಧಿಸಿ ಎಲ್ಲರೂ ಒಪ್ಪಿಕೊಳ್ಳುವ ವ್ಯವಸ್ಥೆಯನ್ನು ರಾಷ್ಟ್ರ ನಿರ್ಮಾಣ ಎನ್ನುವರು .

4. ರಾಷ್ಟ್ರ ರಾಜ್ಯ ಪ್ರಕ್ರಿಯೆಯು ಯಾವ ಒಪ್ಪಂದದಿಂದ ಮೂಡಿಬಂದಿತು ?

ರಾಷ್ಟ್ರ ರಾಜ್ಯ ಪ್ರಕ್ರಿಯೆಯು ವೆಸ್ಟ್ಫಾಲಿಯಾ ಒಪ್ಪಂದದಿಂದ ಮೂಡಿಬಂದಿತು .

5. ರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ ವೆಸ್ಟ್ ಫಾಲಿಯಾ ಒಪ್ಪಂದ ಯಾವಾಗ ಸಹಿ ಮಾಡಲ್ಪಟ್ಟಿತು ?

ರಾಷ್ಟ್ರ ರಾಜ್ಯಕ್ಕೆ ಸಂಬಂಧಿಸಿದಂತೆ ವೆಸ್ಟ್ ಫಾಲಿಯಾ ಒಪ್ಪಂದ 1648 ರಲ್ಲಿ ಸಹಿ ಮಾಡಲ್ಪಟ್ಟಿತು .

6. ಯಾವ ರಾಷ್ಟ್ರವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ ?

ಭಾರತವನ್ನು ಸಾಂಸ್ಕೃತಿಕ ವೈವಿಧ್ಯತೆಗಳ ನಾಡು ಎಂದು ಕರೆಯಲಾಗಿದೆ .

7. ಯಾವ ರಾಷ್ಟ್ರವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ ?

ಆಫ್ರಿಕಾವನ್ನು ಜನಾಂಗೀಯತೆ ನಾಡು ಎಂದು ಕರೆಯಲಾಗಿದೆ .

Nation Building and Challenges to Indian Democracy in kannada notes

8. ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಯಾವುದಾದರೂ ಒಂದು ಅಡಚಣೆಯನ್ನು ತಿಳಿಸಿ .

ರಾಷ್ಟ್ರ ನಿರ್ಮಾಣದಲ್ಲಿ ಎದುರಾಗುವ ಅಡಚಣೆ ಬಡತನ .

9.ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಒಂದು ಪರಿಹಾರವನ್ನು ತಿಳಿಸಿ .

ರಾಷ್ಟ್ರ ನಿರ್ಮಾಣದ ಸಮಸ್ಯೆಗೆ ಪರಿಹಾರ ರಾಜಕೀಯ ಸ್ಥಿರತೆ ,

10. ಅಸಮಾನತೆ ಎಂದರೇನು ?

ಜಾತಿ , ಧರ್ಮ , ಲಿಂಗ , ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ತಾರತಮ್ಯಕ್ಕೆ ಒಳಪಡಿಸುವುದನ್ನು ಅಸಮಾನತೆ ಎನ್ನುವರು .

11. ಜಾತಿ ಆಧಾರಿತ ಅಸಮಾನತೆ ಎಂದರೇನು ?

ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದೇ ಜಾತಿ ಆಧಾರಿತ ಅಸಮಾನತೆ ,

12. ಜಾತಿ ಆಧಾರಿತ ಅಸಮಾನತೆಗೆ ಒಂದು ಕಾರಣ ಕೊಡಿ .

ವರ್ಣಾಶ್ರಮ ವ್ಯವಸ್ಥೆ .

13. ಲಿಂಗಾಧಾರಿತ ಅಸಮಾನತೆ ಎಂದರೇನು ?

ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆ .

2nd puc political science 5th chapter notes in kannada

14. ಲಿಂಗಾಧಾರಿತ ಅಸಮಾನತೆಗೆ ಒಂದು ಕಾರಣ ಕೊಡಿ .

ಪುರುಷ ಪ್ರಾಬಲ್ಯ .

15. ಅನಕ್ಷರತೆಯ ವ್ಯಾಖ್ಯೆಯನ್ನು ಕೊಡಿ .

ಅಮರ್ತ್ಯಸೇನ್‌ರವರ ಪ್ರಕಾರ “ ಅನಕ್ಷರತೆಯು ಒಂದು ಅಸ್ವಾತಂತ್ರ್ಯ ” ಎಂದಿದ್ದಾರೆ .

16. ಅನಕ್ಷರತೆ ಎಂದರೇನು ?

ವ್ಯಕ್ತಿ ಯಾವುದೇ ಭಾಷೆಯಲ್ಲಿ ಓದಲು ಮತ್ತು ಬರೆಯಲು ಮತ್ತು ಅರ್ಥಮಾಡಿಕೊಳ್ಳಲು ಬಾರದಿರುವ ಸ್ಥಿತಿಯನ್ನು ಅನಕ್ಷರತೆ ಎನ್ನುವರು .

17. ಕರ್ನಾಟಕದಲ್ಲಿ ಶೇಕಡಾವಾರು ಸಾಕ್ಷರಸ್ಥರ ಸಂಖ್ಯೆ ಎಷ್ಟು ?

ಕರ್ನಾಟಕದಲ್ಲಿ ಶೇಕಡಾವಾರು ಸಾಕ್ಷರಸ್ಥರ ಸಂಖ್ಯೆ 75.36 % ರಷ್ಟು .

2nd puc political science 5th chapter notes in kannada

18. ಅನಕ್ಷರತೆಗೆ ಒಂದು ಕಾರಣ ಕೊಡಿ .

ಜನಸಂಖ್ಯಾ ಸ್ಫೋಟ .

19. 86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಯಾವಾಗ ಅಂಗೀಕರಿಸಲ್ಪಟ್ಟಿತು ?

86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ 2002 ರಲ್ಲಿ ಅಂಗೀಕರಿಸಲ್ಪಟ್ಟಿತು .

20.86 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಯಾವ ಕಲಂ ಹೊಸದಾಗಿ ಸೇರಿಸಲ್ಪಟ್ಟಿತು ?

86 ನೇ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ 21 ಎ ಕಲಂ ಹೊಸದಾಗಿ ಸೇರಿಸಲ್ಪಟ್ಟಿತು .

2nd puc political science 5th chapter notes in kannada

21. ಯಾವ ವಯೋಮಿತಿಯ ಮಕ್ಕಳು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಬರುತ್ತಾರೆ ?

6-14 ವರ್ಷದೊಳಗಿನ ಮಕ್ಕಳು ಕಡ್ಡಾಯ ಶಿಕ್ಷಣದ ಅಡಿಯಲ್ಲಿ ಬರುತ್ತಾರೆ .

22. R.T.E ಯನ್ನು ವಿಸ್ತರಿಸಿ ?

Right To Education

23. ಕೋಮುವಾದ ಎಂದರೇನು ?

ಸಂಕುಚಿತ ರಾಜಕೀಯ ಗುರಿಗಳು ಮತ್ತು ನಿರ್ದಿಷ್ಟ ಕೋಮಿನ ಹಿತಾಸಕ್ತಿಗಳನ್ನು ಸಾಧಿಸುವುದಕ್ಕಾಗಿ ಧರ್ಮ ಮತ್ತು ಸಾಂಸ್ಕೃತಿಕ ವೈರುಧ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದನ್ನು ಕೋಮುವಾದ ಎನ್ನುವರು .

24. ಕೋಮುವಾದಕ್ಕೆ ಒಂದು ಕಾರಣ ಕೊಡಿ .

ಕೋಮುಗಲಭೆಗಳು .

25 , Terrorism ನ ಮೂಲ ಪದ ಯಾವುದು ?

ಲ್ಯಾಟೀನ್ ಭಾಷೆಯ Terrere

26. ಭಯೋತ್ಪಾದನೆ ಎಂದರೇನು ?

ಒಂದು ಸಂಘಟಿತ ಗುಂಪು ಅಥವಾ ಪಕ್ಷ ವ್ಯವಸ್ಥಿತವಾದ ಹಿಂಸೆಯನ್ನು ಉಪಯೋಗಿಸಿ ತನ್ನ ಮುಖ್ಯ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ವಿಧಾನವೇ ಭಯೋತ್ಪಾದನೆ

27. ಭಯೋತ್ಪಾದನೆಗೆ ಒಂದು ಕಾರಣ ಕೊಡಿ .

ದುರ್ಬಲ ರಾಜಕೀಯ ವ್ಯವಸ್ಥೆ .

28. ಯಾವುದಾದರೂ ಒಂದು ಭಯೋತ್ಪಾದನಾ ಸಂಘಟನೆಯನ್ನು ಹೆಸರಿಸಿ .

ಹುರಿಯತ್ ಕಾನ್ಸರೆನ್ಸ್ .

29 , MISA ವಿಸ್ತರಿಸಿ .

ಆಂತರಿಕ ಭದ್ರತಾ ನಿರ್ವಹಣಾ ಕಾಯ್ದೆ .

30. NSA ವಿಸ್ತರಿಸಿ .

ರಾಷ್ಟ್ರೀಯ ಭದ್ರತಾ ಕಾಯ್ದೆ ,

2nd puc political science 5th chapter notes in kannada

31. TADA ವಿಸ್ತರಿಸಿ ,

ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ನಿಗ್ರಹ ಕಾಯ್ದೆ .

32.POTA ವಿಸ್ತರಿಸಿ .

The Prevention of Terrorism Act ( ಭಯೋತ್ಪಾದನಾ ನಿಗ್ರಹ ಕಾಯ್ದೆ )

33 , UAPA ವಿಸ್ತರಿಸಿ .

ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆ .

34. ಭ್ರಷ್ಟಾಚಾರ ಎಂದರೇನು ?

ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಬ್ಬನ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ದುರುಪಯೋಗ ಪಡಿಸಿಕೊಳ್ಳುವುದೇ ಭ್ರಷ್ಟಾಚಾರ .

35. ಭ್ರಷ್ಟಾಚಾರದ ಒಂದು ರೂಪವನ್ನು ತಿಳಿಸಿ .

ಅನಧಿಕೃತ ಶುಲ್ಕಗಳು .

2nd puc political science 5th chapter notes in kannada

36 , ಭ್ರಷ್ಟಾಚಾರ ನಿಷೇಧ ಕಾಯ್ದೆ ಯಾವಾಗ ಅಂಗೀಕರಿಸಲ್ಪಟ್ಟಿತು ?

ಭ್ರಷ್ಟಾಚಾರ ನಿಷೇಧ ಕಾ 1988 ರಲ್ಲಿ ಅಂಗೀಕರಿಸ -ಲ್ಪಟ್ಟಿತು .

37. ಸ್ವೀಡನ್‌ನ ಭ್ರಷ್ಟಾಚಾರದ ವಿರೋಧಿ ಸಂಸ್ಥೆಯನ್ನು ಏನೆಂದು ಕರೆಯುತ್ತಾರೆ ?

ಒಂಬಡಮನ್ .

38. ಲೋಕಪಾಲರನ್ನು ಯಾರು ನೇಮಿಸುತ್ತಾರೆ ?

ರಾಷ್ಟ್ರಪತಿಗಳು .

39. ಲೋಕಪಾಲ್ ಸಂಸ್ಥೆ ಯಾವಾಗ ಅಸ್ತಿತ್ವಕ್ಕೆ ಬಂದಿತು ?

ಜನವರಿ , 1 , 2014 .

40. ಲೋಕಪಾಲರ ಅಧಿಕಾರಾವಧಿ ಎಷ್ಟು ವರ್ಷಗಳು ?

5 ವರ್ಷಗಳು .

41. ಲೋಕಾಯುಕ್ತರನ್ನು ಯಾರು ನೇಮಿಸುತ್ತಾರೆ ?

ರಾಜ್ಯಪಾಲರು ,

2nd puc political science 5th chapter notes in kannada

42. ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ ಯಾವಾಗ ಜಾರಿಗೆ ಬಂದಿತು ?

ಕರ್ನಾಟಕದಲ್ಲಿ ಲೋಕಾಯುಕ್ತ ವ್ಯವಸ್ಥೆ 1984 ರಲ್ಲಿ ಜಾರಿಗೆ ಬಂದಿತು .

43. ಲೋಕಾಯುಕ್ತರ ಅಧಿಕಾರ ಅವಧಿ ಎಷ್ಟು ವರ್ಷಗಳು ?

ಲೋಕಾಯುಕ್ತರ ಅಧಿಕಾರ ಅವಧಿ 5 ವರ್ಷಗಳು .

44. ಪ್ರಸ್ತುತ ಕರ್ನಾಟಕದ ಲೋಕಾಯುಕ್ತರನ್ನು ಹೆಸರಿಸಿ .

ವೈ.ಬಾಸ್ಕರ್‌ರಾವ್ .

45. ಪ್ರಸ್ತುತ ಕರ್ನಾಟಕದ ಉಪಲೋಕಾಯುಕ್ತರನ್ನು ಹೆಸರಿಸಿ .

ಸುಭಾಷ್ ಬಿ . ಆಡಿ ಮತ್ತು ಶಶಿಧರ್ ಭೀಮ್‌ರಾವ್‌ ಮಜಗೆ .

II . ಎರಡು ಅಂಕದ ಪ್ರಶ್ನೆಗಳು

1. ರಾಷ್ಟ್ರ – ರಾಜ್ಯದ ಅರ್ಥವನ್ನು ತಿಳಿಸಿ ?

ರಾಷ್ಟ್ರ ಎಂಬುದು , ಒಂದೇ ಧರ್ಮ , ಸಂಪ್ರದಾಯ ಹಿನ್ನೆಲೆಯಿಂದು ಕೂಡಿದ ಒಂದು ನಿರ್ದಿಷ್ಟ ಭೂ ಪ್ರದೇಶದಲ್ಲಿ ನೆಲೆಸಿರುವ ಸಮಾನ ಮನುಷ್ಯರಿಂದ ಕೂಡಿರುವ ಜನಸಮುದಾಯವೇ ರಾಷ್ಟ್ರ ,

2nd puc political science 5th chapter notes in kannada

ರಾಜ್ಯ ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವ್ಯವಸ್ಥಿತ ಸರ್ಕಾರಕ್ಕಾಗಿ ಸಂಘಟಿತವಾದ ಹಾಗೂ ಪರಮಾಧಿಕಾರ ಹೊಂದಿರುವ ಜನಸಮುದಾಯವೇ ರಾಜ್ಯ .

2. ರಾಷ್ಟ್ರ ನಿರ್ಮಾಣ “ ವನ್ನು ತಿಳಿಸಿ .

ರಾಷ್ಟ್ರ ನಿರ್ಮಾಣ ಎಂಬುದು , ರಾಷ್ಟ್ರೀಯ ವಾದದಿಂದ ಕೂಡಿರುವ ಜನರಲ್ಲಿ ನಾವೆಲ್ಲರೂ ಒಂದು ಎಂಬ ಏಕತಾ ಭಾವನೆಯ ಪ್ರತಿಬಿಂಬವಾಗಿದೆ . ಇದು ರಾಷ್ಟ್ರೀಯ ಶಕ್ತಿಯನ್ನು ಗಳಿಸುವ ಮೂಲಕ ದೇಶದಲ್ಲಿ ಸಾಮಾಜಿಕ , ಆರ್ಥಿಕ , ಶೈಕ್ಷಣಿಕ ಮತ್ತು ವೈಜ್ಞಾನಿಕ ಪ್ರಗತಿ ಸಾಧಿಸುವ ಗುರಿ ಹೊಂದಿದೆ .

3. ರಾಷ್ಟ್ರ ನಿರ್ಮಾಣದ ಒಂದು ವ್ಯಾಖ್ಯೆಯನ್ನು ಕೊಡಿ .

ಕೆ.ಕೆ.ಫಾರ್‌ರವರ ಪ್ರಕಾರ ರಾಷ್ಟ್ರ ನಿರ್ಮಾಣವೆಂಬುದು ಓಮ್ಮಿಬಸ್ ಪ್ರಕ್ರಿಯೆಯಾಗಿದ್ದು ಇದು ರಾಜ್ಯಗಳ ನಿರ್ಮಾಣ ಪ್ರಜಾಪ್ರಭುತ್ವದ ನಿರ್ಮಾಣ , ಆರ್ಥಿಕ ವ್ಯವಸ್ಥೆಯ ನಿರ್ಮಾಣ , ಸಾಮಾಜಿಕ ರಚನೆಯ ನಿರ್ಮಾಣಗಳೆಲ್ಲವನ್ನೂ ಒಳಗೊಂಡಿದೆ .

4. ಉತ್ತಮ ಆಡಳಿತ ಎಂದರೇನು ?

ಆಡಳಿತವು ನಿಯಂತ್ರಣ , ಪಾರದರ್ಶಕತೆ , ಜವಾಬ್ದಾರಿತನ ಮತ್ತು ಸ್ಪಂದನೆ ಇವುಗಳಿಂದ ಕೂಡಿದ್ದರೆ ಅದನ್ನು ಉತ್ತಮ ಆಡಳಿತ ಎನ್ನುವರು .

5. ಅಸಮಾನತೆ ಎಂದರೇನು ?

ಜಾತಿ , ಧರ್ಮ , ಲಿಂಗ , ಜನ್ಮಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ಅವಕಾಶಗಳು ಮತ್ತು ಸೌಲಭ್ಯಗಳಿಂದ ವಂಚಿತರನ್ನಾಗಿ , ತಾರತಮ್ಯ ಮಾಡುವುದೇ ಅಸಮಾನತೆ .

6.ಜಾತಿ ಆಧಾರಿತ ಅಸಮಾನತೆ ಎಂದರೇನು ?

ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದನ್ನು ಜಾತಿ ಆಧಾರಿತ ಅಸಮಾನತೆ ಎನ್ನಲಾಗಿದೆ.

2nd puc political science 5th chapter notes in kannada

7. ಲಿಂಗಾಧಾರಿತ ಅಸಮಾನತೆಯನ್ನು ಹೇಗೆ ಗುರುತಿಸುವಿರಿ ?

ಇದು ಬಹಳ ಕಾಲದಿಂದಲೂ ಪುರುಷ ಪ್ರಾಧಾನ್ಯತೆಗೆ ಅವಕಾಶ ಕಲ್ಪಿಸಿದ್ದು ಲಿಂಗ ಪಕ್ಷಪಾತಕ್ಕೆ ಕಾರಣವಾಗಿದೆ ಕೌಟುಂಬಿಕ , ಆರ್ಥಿಕ , ಸಾಂಸ್ಕೃತಿಕ , ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಾರತಮ್ಯ ಕಂಡುಬರುತ್ತದೆ .

ಉದಾ : ಶಿಕ್ಷಣದ ನಿರಾಕರಣೆ ,

8. ಅಸಮಾನತೆ ಅರ್ಥವನ್ನು ತಿಳಿಸಿ .

ಸ್ತ್ರೀ ಪುರುಷರ ನಡುವೆ ಸಾಮಾಜಿಕ,ರಾಜಕೀಯ ,ಸಾಂಸ್ಕೃತಿಕ , ಅರ್ಥಿಕ ಮುಂತಾದವುಗಳಲ್ಲಿ ಲಿಂಗ ಆಧಾರದ ಮೇಲೆ ಸಮಾನತೆ ಇರುವುದಿಲ್ಲ.

9. ಬಾಲಕಾರ್ಮಿಕ ಅರ್ಥವನ್ನು ತಿಳಿಸಿ .

ದುರ್ಬಲ , ಸಾಮಾಜಿಕ , ಆರ್ಥಿಕ ಪರಿಸ್ಥಿತಿಯಿಂದಾಗಿ , ಅವರು ಹೋಟೆಲ್‌ಗಳು , ಕೈಗಾರಿಕೆಗಳು , ನೇಯ್ದೆ , ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುವುದರಿಂದ ಶಿಕ್ಷಣದಿಂದ ವಂಚಿತರಾಗಿದ್ದರಿಂದ ಅನಕ್ಷರತೆಗೆ ಕಾರಣವಾಗಿದೆ

10 , ಅನಕ್ಷರತೆಯ ವ್ಯಾಖ್ಯೆಯನ್ನು ಬರೆಯಿರಿ

ಅಮರ್ಥ್ಯಸೇನ್‌ರವರ ಪ್ರಕಾರ – ಅನಕ್ಷರತೆಯನ್ನು ಒಂದು ಅಸ್ವಾತಂತ್ರ್ಯ ‘ ಎಂದು ಹೇಳಿದ್ದಾರೆ . 2001 ರ ಜನಗಣತಿ ಪ್ರಕಾರ- ‘ ಯಾವುದೇ ಭಾಷೆಯಲ್ಲಿ ಒಬ್ಬ ವ್ಯಕ್ತಿ ಓದಲು ಮತ್ತು ಬರೆಯಲು ಸಾಮರ್ಥ್ಯ ಹೊಂದಿರದಿದ್ದರೆ ಅದನ್ನು ಅನಕ್ಷರತೆ ಎನ್ನಲಾಗುತ್ತದೆ .

11. ಕಡ್ಡಾಯ ಶಿಕ್ಷಣ ಎಂದರೇನು ?

6-14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದೇ ಕಡ್ಡಾಯ ಶಿಕ್ಷಣ .

12. ಅನಕ್ಷರತೆಗೆ ಯಾವುದಾದರೂ ಎರಡು ಕಾರಣಗಳನ್ನು ತಿಳಿಸಿ .

  • ಬಡತನ
  • ಸಾಮಾಜಿಕ ಹಿಂದುಳಿದಿರುವಿಕೆ

13. ಕೋಮುವಾದ ಎಂದರೇನು ?

ಒಂದು ನಿರ್ದಿಷ್ಟ ವರ್ಗದ ಗುಂಪು ತಮ್ಮ ಧರ್ಮದ ಬಗ್ಗೆ ಅಪರಿಮಿತ ಅಭಿಮಾನ ಹೊಂದಿದ್ದು , ಇತರೆ ಧರ್ಮಗಳ ಬಗ್ಗೆ ಕೀಳರಿಮೆಯನ್ನು ಮೂಡಿಸಿ ತಮ್ಮ ಧರ್ಮವೇ ಶ್ರೇಷ್ಠ , ಇತರೆ ಧರ್ಮಗಳು ಕನಿಷ್ಠ ಎಂಬ ಪ್ರವೃತ್ತಿಯನ್ನು ಬಿತ್ತುವುದನ್ನು ಕೋಮುವಾದ ಎನ್ನುವರು .

2nd puc political science 5th chapter notes in kannada

14. ಕೋಮುವಾದಕ್ಕೆ ಯಾವುದಾದರೂ ಎರಡು ಕಾರಣಗಳನ್ನು ಕೊಡಿ .

1. ಧಾರ್ಮಿಕ ಹಿತಾಸಕ್ತಿ ಸಂಘಟನೆ

2. ಹಿಂದೂ – ಮುಸ್ಲಿಂ ರಾಷ್ಟ್ರೀಯವಾದ

15. ಭಯೋತ್ಪಾದಕತೆಯ ಅರ್ಥವನ್ನು ತಿಳಿಸಿ .

ಸಾಮಾನ್ಯ ಜನರಲ್ಲಿ ಭಯವನ್ನು ಸೃಷ್ಟಿಸಿ ತಮ್ಮ ಸೈದ್ಧಾಂತಿಕ ಗುರಿಗಳನ್ನು ಈಡೇರಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ದೇಶದಲ್ಲಿ ಆತಂಕದ ವಾತಾವರಣವನ್ನು ನಿರ್ಮಿಸುವುದೇ ಭಯೋತ್ಪಾದನೆಯಾಗಿದೆ .

16. ಭಯೋತ್ಪಾದನೆಯ ಒಂದು ವ್ಯಾಖ್ಯೆಯನ್ನು ಬರೆಯಿರಿ .

ಭಯೋತ್ಪಾದನೆಯು ಪೂರ್ವ ಯೋಜಿತವಾಗಿ ಉತ್ತಮವಾಗಿ ಸಂಘಟಿತವಾದ ತರಬೇತಿ ಹೊಂದಿದ ಗುಂಪುಗಳು ಕಾನೂನು ವಿರೋಧಿ ಸಶಸಜ್ಜಿತ ಮತ್ತು ಹಿಂಸೆಯ ಮೂಲಕ ತಮ್ಮ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ಕೃತ್ಯವಾಗಿದೆ .

2nd puc political science 5th chapter notes in kannada

ಸಮಾಜವಿಜ್ಞಾನ ವಿಶ್ವಕೋಶ :

ಒಂದು ಸಂಘಟಿತ ಗುಂಪು ಅಥವಾ ಪಕ್ಷ ವ್ಯವಸ್ಥಿತವಾದ ಹಿಂಸೆಯನ್ನು ಉಪಯೋಗಿಸಿ ತನ್ನ ಮುಖ್ಯ ಗುರಿ ಸಾಧಿಸಿಕೊಳ್ಳಲು ಅನುಸರಿಸುವ ವಿಧಾನವಾಗಿದೆ .

17. ಭಯೋತ್ಪಾದಕತೆ ಧಾರ್ಮಿಕ ಮೂಲಭೂತವಾದಕ್ಕೆ ಹೇಗೆ ಕಾರಣವಾಗಿದೆ ?

ಹಿಂದೂ – ಮುಸ್ಲಿಂ , ಕ್ರಿಶ್ಚಿಯನ್ , ಸಿಖ್ ಧರ್ಮಗಳಿಗೆ ಸೇರಿದ ಕೆಲವು ಮೂಲಭೂತವಾದಿ ಸಂಘಟನೆಗಳು ತಮ್ಮ ಧೀರ್ಘಕಾಲದ ರಾಜಕೀಯ ಗುರಿ – ಉದ್ದೇಶಗಳ ಲಾಭಕ್ಕೋಸ್ಕರ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸಿ ಸಹಾಯ ನೀಡುತ್ತದೆ .

2nd puc political science 5th chapter notes in kannada

18.ಭಯೋತ್ಪಾದಕರು ಚುನಾವಣೆಗಳನ್ನು ಏಕೆ ಬಹಿಷ್ಕರಿಸುತ್ತಾರೆ ?

ರಾಷ್ಟ್ರದ ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡಿ , ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಅಸ್ಥಿರಗೊಳಿಸುವುದಕ್ಕಾಗಿ ಬಹಿಷ್ಕರಿಸುತ್ತಾರೆ .

19. ಭ್ರಷ್ಟಾಚಾರದ ಅರ್ಥವನ್ನು ಬರೆಯಿರಿ .

ಖಾಸಗಿ ಉದ್ದೇಶಗಳಿಗಾಗಿ , ಸಾರ್ವಜನಿಕ ಕರ್ತವ್ಯಗಳ ಔಪಚಾರಿಕ ಮಾರ್ಗವನ್ನು ಬದಲಿಸುವುದೇ ಭ್ರಷ್ಟಾಚಾರ , ಒಟ್ಟಾರೆ ,ಸಾರ್ವಜನಿಕ ಅಧಿಕಾರವನ ದುರುಪಯೋಗಪಡಿಸಿ ಕೊಳ್ಳುವುದಾಗಿದೆ .

20. ಭ್ರಷ್ಟಾಚಾರದ ಒಂದು ವ್ಯಾಖ್ಯೆಯನ್ನು ಬರೆಯಿರಿ .

ಡೆವಿಡ್ ಹೆಚ್ ಬೆಯ “ ವೈಯಕ್ತಿಕ ಲಾಭಕ್ಕಾಗಿ ಕ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದೇ ಭ್ರಷ್ಟಾಚಾರ ಎಂದು ಹೇಳಿದ್ದಾರೆ.

21. ನೈತಿಕತೆಯ ಕೊರತೆಯು ಭ್ರಷ್ಟಾಚಾರಕ್ಕೆ ಹೇಗೆ ಅವಕಾಶ ಮಾಡಿಕೊಡುತ್ತದೆ ?

ನೈತಿಕತೆಯ ಕೊರತೆಯಿಂದಾಗಿ ಅಧಿಕಾರಿಗಳು ಸಮಾಜದ ಅಭಿವೃದ್ಧಿ ಕಡೆಗಣಿಸಿ , ತಮ್ಮ ಲಾಭಕ್ಕಾಗಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ . ಅದರಂತೆ ಸಾಮಾನ್ಯ ಜನರಲ್ಲಿನ ನೈತಿಕ ಕೊರತೆಯಿಂಬಾಗಿ ಭ್ರಷ್ಟ ಅಧಿಕಾರಗಳ ಬಗ್ಗೆ ಇರುವ ಉದಾಸೀನ ಭಾವನೆಯು ಅವಕಾಶ ಮಾಡಿಕೊಟ್ಟಿದೆ .

22. ಲೋಕಪಾಲ ಎಂದರೇನು ?

ಆಡಳಿತದಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಲು ಕೇಂದ್ರದಲ್ಲಿ ಸ್ಥಾಪನೆಯಾದ ಸಂಸ್ಥೆ ಅಥವಾ ಮಂಡಳಿಯೇ ಲೋಕಪಾಲ .

23. ಲೋಕಾಯುಕ್ತ ಎಂದರೇನು ?

ಆಡಳಿತದಲ್ಲಿನ ಭ್ರಷ್ಟಾಚಾರ , ಅಧಿಕಾರ ದುರುಪಯೋಗ ತಡೆಗಟ್ಟಲು ರಾಜ್ಯದಲ್ಲಿ ಸ್ಥಾಪನೆಗೊಂಡ ಸಂಸ್ಥೆ ಅಥವಾ ಹುದ್ದೆಯೇ ಲೋಕಾಯುಕ್ತ .

2nd puc political science 5th chapter notes in kannada

ಎರಡು ಅಂಕದ ಪ್ರಶ್ನೆಗಳು :

1. ರಾಷ್ಟ್ರ ನಿರ್ಮಾಣದ ಅಗತ್ಯಾಂಶಗಳನ್ನು ಕುರಿತು ಬರೆಯಿರಿ .

ಭಾರತ ಸ್ವಾತಂತ್ರ್ಯ ಪಡೆಯುವುದರ ಜೊತೆ ಜೊತೆಯಲ್ಲಿಯೇ ರಾಷ್ಟ್ರ ನಿರ್ಮಾಣದ ಪ್ರ ಪ್ರಾರಂಭವಾಯಿತು . ಆಧುನಿಕ ಭಾರತದ ನೇತಾರರು ಈ ,ಕಾರ್ಯ ಕೈಗೊಂಡಿದ್ದರು . ಇದಕ್ಕಾಗಿ ಹಲವಾರು ಅಗತ್ಯ ಅಂಶಗಳನ್ನು ಕೂಢೀಕರಿಸಲಾಗಿದೆ . ಅವುಗಳು ಈ ಕೆಳಗಿನಂತಿವೆ:

1.ಜನತೆಯ ಬೆಂಬಲ : ರಾಷ್ಟ್ರ ನಿರ್ಮಾಣದಲ್ಲಿ ಜನರ ಶಿಸ್ತು , ಕರ್ತವ್ಯ ನಿಷ್ಠೆ ಹಾಗೂ ರಾಷ್ಟ್ರಾಭಿಮತ ಪ್ರಮುಖ ಪಾತ್ರ ವಹಿಸುತ್ತದೆ . ಪ್ರಜಾಪ್ರಭುತ್ವದಲ್ಲಿ ಜನರೇ ಅಂತಿಮ ಪರಮಾಧಿಕಾರ ಪ್ರಭುಗಳು . ನಿರಂತರ ಜಾಗರೂಕತೆಯೇ ಪ್ರಜಾಪ್ರಭುತ್ವಕ್ಕೆ ನೀಡುವ ಬೆಲೆಯಾಗಿದೆ ಎಂದು ಜೆ.ಎಸ್‌ ಮಿಲ್‌ರವರು ಅಭಿಪ್ರಾಯ ಪಟ್ಟಿದ್ದಾರೆ .

2. ಉತ್ತಮ ಆಡಳಿತ : ಉತ್ತಮ ಆಡಳಿತವು ಆಡಳಿತದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಅಗತ್ಯ , ಆಡಳಿತದಲ್ಲಿ ಪಾರದರ್ಶಕತೆ , ಜವಾಬ್ದಾರಿತನ ಮತ್ತು ಸ್ಪಂದನೆ ಬಹಳ ಮುಖ್ಯವಾಗಿ ಪಾತ್ರ ವಹಿಸುತ್ತದೆ .

3. ಸಮರ್ಥ ನಾಯಕತ್ವ : ಬದ್ಧತೆಯಿಂದ ಕೂಡಿರುವ ನಾಯಕತ್ವಕ್ಕೆ ಇತಿಹಾಸದಲ್ಲಿ ಹಲವಾರು ನಿದರ್ಶನಗಳನ್ನು ಕಾಣಬಹುದು . ಭಾರತದಲ್ಲಿ ನೆಹರೂರವರ ನಾಯಕತ್ವವು ರಾಷ್ಟ್ರ ನಿರ್ಮಾಣದ ಪ್ರಕ್ರಿಯೆಯಲ್ಲಿ ಯಶಸ್ಸನ್ನು ಸಾಧಿಸಲು ಸಾಕಷ್ಟು * ಅಡುಗೆಗಳನ್ನು ನೀಡಿತು . ಆ ಕಾರಣದಿಂದಲೇ ನೆಹರೂರವರನ್ನು ‘ ಆಧುನಿಕ ಭಾರತದ ಶಿಲ್ಪಿ ‘ ಎನ್ನಲಾಗಿದೆ .

4. ರಾಜಕೀಯ ಸಂಸ್ಕೃತಿ : ರಾಜಕೀಯ ಸಂಸ್ಕೃತಿ ಎಂಬುದು ರಾಜಕೀಯ ವ್ಯವಸ್ಥೆಗೆ ಅಗತ್ಯವಾದ ಮೌಲ್ಯಗಳು , ಪ್ರವೃತ್ತಿಗಳು ಮತ್ತು ನಡವಳಿಕೆಗಳನ್ನು ಸೂಚಿಸುತ್ತದೆ . ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಉದಾತ್ತ ರಾಜಕೀಯ ನಡವಳಿಕೆಗಳು ಅವಶ್ಯಕವಾಗಿವೆ .

5. ಅಧಿಕಾರ ಹಂಚಿಕೆ : ರಾಷ್ಟ್ರ ನಿರ್ಮಾಣದ ಗುರಿಯನ್ನು ಸಾಧಿಸಲು ರಾಜಕೀಯ ಅಧಿಕಾರವನ್ನು ಸಮಾಜದ ಎಲ್ಲಾ ವರ್ಗಗಳಲ್ಲಿ ಹಂಚಿಕೆ ಮಾಡುವ ಅಗತ್ಯವಿದೆ . ರಾಜಕೀಯದಿಂದ ಅಧಿಕಾರವು ಕೆಲವೇ ವ್ಯಕ್ತಿಗಳ ಕೈಯಲ್ಲಿ ಮತ್ತು ಕುಟುಂಬಗಳಲ್ಲಿ ಕೇಂದ್ರೀಕರಣವಾಗಿದೆ .

ಈ ರೀತಿಯಾಗಿ ಹಲವಾರು ಅಗತ್ಯ ಅಂಶಗಳನ್ನು ಕೇಂದ್ರೀಕರಿಸಿಕೊಂಡು ರಾಷ್ಟ್ರ ನಿರ್ಮಾಣದ ಕಾರ್ಯ ‘ ಸ್ತಿಯಾಗುವಂತೆ ಮಾಡಲಾಗಿದೆ .

2nd puc political science 5th chapter notes in kannada

2. ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಉಂಟಾಗುವ ಮುಖ್ಯ ಅಡಚಣೆಗಳಾವುವು ? ವಿವರಿಸಿ .

ಭಾರತದ ನೇತಾರರು ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಅತ್ಯಂತ ರಚನಾತ್ಮಕವಾಗಿ ಮತ | ಸುವ್ಯವಸ್ಥಿತವಾಗಿ ಕೈಗೊಂಡರು . ಆದರೆ ಇದರ ಅನುಷ್ಠಾನದ ಅಡಚಣೆಗಳನ್ನು ಹಂತದಲ್ಲಿ ಇವರು ಹಲವಾರು ಎದುರಿಸಬೇಕಾಯಿತು . ಅವು ಈ ರೀತಿಯಲ್ಲಿವೆ .

1.ಬಡತನ : ಭಾರತದಲ್ಲಿರುವ ಬಹುತೇಕ ಜನಸಮುದಾಯಗಳು ಹಳ್ಳಿಗಳಲ್ಲಿ ನೆಲೆಸಿದ್ದು ಅವರ ಪ್ರಮುಖ ವೃತ್ತಿ ಕೃಷಿಯಾಗಿದೆ . ಇವರು ಅನಿರ್ದಿಷ್ಟವಾಗಿ ಬರುವ ಮುಂಗಾರು ಮಳೆಯ ಮೇಲೆ ಹೆಚ್ಚು ಅವಲಂಭಿತವಾಗಿರುತ್ತಾರೆ . ರೈತರು ಕೃಷಿಯಲ್ಲಿ ಅತ್ಯಂತ ಕಡಿಮೆ ಇಳುವರಿಯನ್ನು ಪಡೆಯುತ್ತಿದ್ದಾರೆ . ಹೀಗಾಗಿ 1/5 ರಷ್ಟು ಮಂದಿ ಬಡತನ ರೇಖೆಗಿಂತ ಕೆಳಗಿದ್ದಾರೆ .

2. ಜನಸಂಖ್ಯಾ ಸ್ಫೋಟ : ಭಾರತವು ಜನಸಂಖ್ಯೆ ಬೆಳವಣಿಗೆಯಲ್ಲಿ ಅತ್ಯಂತ ವೇಗವಾಗಿ ಮುನ್ನುಗ್ಗುತ್ತಿದೆ . ಮಾನವೀಯ ಶಕ್ತಿಯ ಉತ್ತಮ ಸ ೦ ಪನ್ಮೂಲವಾಗಿದ್ದರೂ ಕೂಡ ರಾಷ್ಟ್ರವನ್ನು ಬಲಿಷ್ಠಗೊಳಿಸಲು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ .

3. ಪ್ರಾದೇಶಿಕ ಅಸಮತೋಲನ : ದೇಶದ ಎಲ್ಲಾ ರಾಜ್ಯಗಳು ಒಂದೇ ತೆರನ್ನಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ . ಆದ್ದರಿಂದ ಪ್ರಜೆಗಳಲ್ಲಿ ಪ್ರತ್ಯೇಕತೆ ಮನೋಭಾವನೆಗಳು ಬೆಳೆದು ರಾಷ್ಟ್ರದ ಅಭಿವೃದ್ಧಿಯು ಕುಂಠಿತಗೊಳ್ಳುತ್ತದೆ.

2nd puc political science 5th chapter notes in kannada

ಉದಾ : ಮಹಾರಾಷ್ಟ್ರದಲ್ಲಿ ಮರಾಠವಾಡಾ ಮತ್ತು ವಿಧರ್ಭ , ಆಂಧ್ರ ಪ್ರದೇಶದಲ್ಲಿ ತೆಲಾಂಗಣ ಮುಂತಾದ ಪ್ರದೇಶದಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಚಳುವಳಿಗಳು ಇದಕ್ಕೆ ಸ್ಪಷ್ಟ ನಿದರ್ಶನಗಳಾಗಿವೆ .

4. ಸಾಮಾಜಿಕ ಮತ್ತು ರಾಜಕೀಯ ಕೋಭೆ :

ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಕೋಭೆಯು ಇತ್ತೀಚೆಗೆ ಸರ್ವೇಸಾಮಾನ್ಯವಾಗಿದ್ದು ಇದರಿಂದ ಉದ್ವೇಗಕಾರಿ ವಾತಾವರಣ ಸೃಷ್ಟಿಯಾಗಿದೆ . ಕೇಂದ್ರ – ರಾ | ಮತ್ತು ಅಂತರ್ – ರಾಜ್ಯ ವಿವಾದಗಳು ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿವೆ .

5. ರಾಜಕೀಯ ಬಿಕ್ಕಟ್ಟು :

ಸಮ್ಮಿಶ್ರ ಸರಕಾರ ಪದ್ಧತಿ , ಹಲವು ಪಕ್ಷಗಳ ಉಗಮ , ಪ್ರಾದೇಶಿಕ ಮತ್ತು ಪ್ರತ್ಯೇಕತಾ ಭಾವನೆಗಳು ಹಲವಾರು ಸಂದರ್ಭಗಳಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಸೃಷ್ಟಿಸಿವೆ . ರಾಜಕೀಯ ವ್ಯವಸ್ಥೆ ಆದರ್ಶ ತತ್ವ ಹಾಗೂ ಮೌಲ್ಯಗಳಿಂದ ದೂರವಾಗಿದೆ . ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಈ ಮೇಲ್ಕಂಡ ಅಡಚಣೆಗಳು ಕಂಡು ಬಂದರೂ ಸಹ ಅವುಗಳನ್ನು ಎದುರಿಸಿ ರಾಷ್ಟ್ರ ನಿರ್ಮಾಣದ ಕಾರ್ಯ ಯಶಸ್ವಿಯಾಗುವಂತೆ ಮಾಡಲು ಹಲವಾರು ನಾಯಕರು ಪಣತೊಟ್ಟಿದ್ದಾರೆ .

2nd puc political science 5th chapter notes in kannada

3. ಅಸಮಾನತೆ ಪ್ರಜಾಪ್ರಭುತ್ವಕ್ಕೆ ಹೇಗೆ ಒಂದು ತೊಡಕಾಗಿ ಪರಿಣಮಿಸಿದೆ ? ವಿವರಿಸಿ .

ಅಸಮಾನತೆ ಎಂದರೆ ಜಾತಿ , ಧರ್ಮ , ಲಿಂಗ , ಜನ್ಮ ಸ್ಥಳ ಮುಂತಾದವುಗಳ ಆಧಾರದ ಮೇಲೆ ಕೆಲವು ವರ್ಗಗಳನ್ನು ಅವಕಾಶಗಳು ಮತ್ತು ಸೌಲಭ್ಯಗಳಿಂದ ವಂಚಿತರನ್ನಾಗಿಸಿ , ತಾರತಮ್ಯ ಮಾಡುವುದೇ ಆಗಿದೆ . ಪುರಾತನ ಕಾಲದಿಂದಲೂ ಭಾರತೀಯ ಸಮಾಜದಲ್ಲಿ ಅಸಮಾನತೆಯು ಪ್ರಧಾನ ಪಾತ್ರವನ್ನು ವಹಿಸುತ್ತಲೇ ಬಂದಿದೆ . ಭಾರತದ ಪ್ರಜಾಪ್ರಭುತ್ವಕ್ಕೆ ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯಗಳು ಸವಾಲಾಗಿ ಪರಿಣಮಿಸಿವೆ . ಈ ಅಸಮಾನತೆಯನ್ನು ಹೋಗಲಾಡಿಸಲು ಭಾರತ ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ .

4. ಜಾತಿ ಆಧಾರಿತ ಅಸಮಾನತೆಗೆ ಕಾರಣಗಳಾವುವು ?

ಜಾತಿಯನ್ನೇ ಆಧರಿಸಿ ಜನರನ್ನು ತಾರತಮ್ಯದಿಂದ ನೋಡುವುದನ್ನು ಸಾಮಾನ್ಯವಾಗಿ ಜಾತಿ ಆಧಾರಿತ ಅಸಮಾನತೆ ಎನ್ನಬಹುದು . ಈ ಅಸಮಾನತೆಗೆ ಹಲವಾರು ಬಗೆಯ ಕಾರಣಗಳನ್ನು ಕಾಣಬಹುದು .

1. ವರ್ಣಾಶ್ರಮ ವ್ಯವಸ್ಥೆ : ಮನುಸ್ಮೃತಿಯು ಹಿಂದೂ ಸಮಾಜವನ್ನು ನಾಲ್ಕು ವರ್ಣಗಳನ್ನಾಗಿ ವಿಂಗಡಿಸಿದ್ದಾನೆ . ಅವುಗಳೆಂದರೆ ಬ್ರಾಹ್ಮಣ , ಕ್ಷತ್ರಿಯ , ವೈಶ್ಯ , ಶೂದ್ರ ಎಂಬುದಾಗಿ ; ಈ ರೀತಿ ಜಾತಿ ವ್ಯವಸ್ಥೆ ರೂಪುಗೊಂಡು ಸಮಾಜದಲ್ಲಿ ಮತ್ತು ಮನುವಿನ ಕಾನೂನಿನ ಆಧಾರದಲ್ಲಿ ತಾರತಮ್ಯಕ್ಕೆ ಅವಕಾಶ ಮಾಡಿಕೊಟ್ಟಿದೆ .

2. ಸಾಮಾಜಿಕ ಅಂತರ : ವಿವಿಧ ಜಾತಿಗಳ ನಡುವೆ ಚಲನಶೀಲತೆಯ ಕೊರತೆ , ಸಂಸ್ಕೃತಿ ಪದ್ಧತಿಗಳು , ನೈತಿಕ ನಿಯಮಗಳು , ಆಹಾರ ಪದ್ಧತಿ ಸಾಮಾಜಿಕ ಒಡನಾಟ ಮುಂತಾದವುಗಳು ಸಾಮಾಜಿಕ ಅಂತರಕ್ಕೆ ಕಾರಣವಾಗಿದೆ . ಆದ್ದರಿಂದ ಇದು ‘ ಮುಚ್ಚಿದ ಸಮಾಜ ‘ ವೆಂದು ಕರೆಯಲ್ಪಟ್ಟಿತು .

3. ಅನಕ್ಷರತೆ ಮತ್ತು ಸಂಪ್ರದಾಯ : ಅನಕ್ಷರತೆ ಮತ್ತು ಮೌಡ್ಯತೆಯು ಜನರನ್ನು ಗೊಡ್ಡು ಸಂಪ್ರದಾಯವಾದಿಗಳನ್ನಾಗಿ ರೂಪಿಸಿದೆ . ಇದು ಜನರಲ್ಲಿ ಸಂಕುಚಿತ ಮನೋಭಾವ ಮತ್ತು ಮೌಡ್ಯಗಳ ಕಡೆಗೆ ಉತ್ತೇಜಿಸುತ್ತದೆ . ಇವರು ಹಳೆಯ ಸಂಪ್ರದಾಯ ಮತ್ತು ಕಂದಾಚಾರಗಳಿಗೆ ಅಂಟಿಕೊಂಡಿರುತ್ತಾರೆ . ತಾವು ಮಾತ್ರ ಮೇಲು ಇತರರು ಕೀಳು ಎಂಬುದಾಗಿ ಭಾವಿಸುವುದು ಇನ್ನೊಂದು ಕಾರಣವಾಗಿದೆ .

4 . ಮೇಲರಿಮೆ : ಸಮಾಜ ಶ್ರೇಷ್ಠ ಜಾತಿ ಎಂದು ಪರಿಗಣಿಸಲ್ಪಟ್ಟಿರುವ ಕೆಲವು ಜಾತಿಗೆ ಸೇರಿದ ಜನರು ಮುಖ್ಯವಾಗಿ ಜಾತಿಯನ್ನೇ ಆಧರಿಸಿ ತಮ್ಮ ಪ್ರಾಬಲ್ಯತೆ ಸಾಧಿಸುವ ಪ್ರಯತ್ನದಲ್ಲಿದ್ದಾರೆ ಸಮಾಜದಲ್ಲಿನ ಅನುಕೂಲತೆಗಳನ್ನು ಪಡೆದುಕೊಳ್ಳುತ್ತಾರೆ .

5. ವೈವಾಹಿಕ ನಿರ್ಬಂಧಗಳು : ಮುಚ್ಚಿದ ಸಮಾಜದಲ್ಲಿ ಒಂದು ಜಾತಿಗೆ ಸೀಮಿತವಾಗಿ ಆ ಜಾತಿಯಲ್ಲಿಯೇ ನಡೆಯುವ ವಿವಾಹವನ್ನು ಮಾತ್ರ ಮಾನ್ಯ ಮಾಡಲಾಗುತ್ತದೆ . ಜಾತಿಯ ಹೊರಗಡೆ ನಡೆಯುವ ವಿವಾಹವನ್ನು ವಿರೋಧಿಸುತ್ತಾರೆ . ಭಾರತವು ಹಲವಾರು ಜಾತಿಗಳನ್ನು ಹೊಂದಿದ್ದು ಇಲ್ಲಿ ಹಲವಾರು ಸಮಸ್ಯೆ ಮತ್ತು ಅಸಮಾನತೆಯಿಂದ ಕೂಡಿದ ಜನರನ್ನು ಕಾಣಬಹುದಾಗಿದೆ .

5. ಲಿಂಗಾಧಾರಿತ ಅಸಮಾನತೆಗೆ ಕಾರಣಗಳಾವುವು ?

ವಿವರಿಸಿ . ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆಯಾಗಿದೆ . ಬಹಳ ಕಾಲದಿಂದಲೂ ಪುರುಷ ಪ್ರಾಧಾನ್ಯತೆಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದೆ . ಹೀಗಾಗಿ ಲಿಂಗದ ಆಧಾರದಿಂದಾಗಿ ಹಲವಾರು ಅಸಮಾನತೆ ಕಂಡುಬಂದಿವೆ ಅವುಗಳಿಗೆ ಕಾರಣಗಳು ಹೀಗಿವೆ

2nd puc political science 5th chapter notes in kannada

1. ಮನುಸ್ಮೃತಿ : ಜೀವನದ ಎಲ್ಲಾ ಸ್ತರಗಳಲ್ಲಿಯೂ ಮಹಿಳೆ ಪುರುಷನ ಅಧೀನದಲ್ಲಿರಬೇಕು ಎಂದು ಮನುಸ್ಮೃತಿಯ ಅಭಿಪ್ರಾಯವಾಗಿದೆ . ಮನುವಿನ ಪ್ರಕಾರ ಮಹಿಳೆಯನ್ನು,ಸಿನಿ ಸ್ಟಡಿ ಪ್ಯಾಕೇಜ್ ಕೌಟುಂಬಿಕ ಜೀವನಕ್ಕೆ ಮಾತ್ರ ಸೀಮಿತಗೊಳಿಸಿ ಸಮಾಜದ ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದು ತಾರತಮ್ಯಕ್ಕೆ ಪ್ರಮುಖ ಕಾರಣವಾಗಿದೆ .

2. ಪುರುಷ ಪ್ರಾಬಲ್ಯ : ಸಮಾಜವು ಪುರುಷನ ದೈಹಿಕ ಸಾಮರ್ಥ್ಯವನ್ನಾಧರಿಸಿ ಮಹಿಳೆಯ ಮೇಲೆ ಪುರುಷನ ಪ್ರಾಬಲ್ಯಕ್ಕೆ ಪ್ರಾಮುಖ್ಯತೆ ನೀಡುತ್ತದೆ . ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಮಹಿಳೆ ಯಾವುದೇ ರೀತಿಯ ಜವಾಬ್ದಾರಿಯ ನಿರ್ವಹಣೆಯನ್ನು ಒಪ್ಪಿಕೊಳ್ಳದಿರುವುದು ಇನ್ನೊಂದು ಕಾರಣವಾಗಿದೆ .

3. ಶಿಕ್ಷಣದ ನಿರಾಕರಣೆ : ಪುರುಷ ಪ್ರಾಬಲ್ಯ ಶಿಕ್ಷಣ ಕ್ಷೇತ್ರದಲ್ಲಿಯೂ ತಾರತಮ್ಯಕ್ಕೆ ಕಾರಣವಾಗಿದೆ . ಶತಮಾನಗಳಿಂದ ಮಹಿಳೆಯನ್ನು ಅಬಲೆ ಎಂದು ಪರಿಗಣಿಸಿ ಶಿಕ್ಷಣದ ಅವಕಾಶಗಳಿಂದ ವಂಚಿಸಲಾಗಿತ್ತು . ಉತ್ತಮ ಶಿಕ್ಷಣ ಮತ್ತು ಉನ್ನತ ಉದ್ಯೋಗಗಳನ್ನು ಹೊಂದಲು ಮಹಿಳೆಗೆ ಅವಕಾಶವನ್ನು ನಿರಾಕರಿಸಲಾಗಿದೆ .

4. ವರದಕ್ಷಿಣೆ ಪದ್ಧತಿ : ವರದಕ್ಷಿಣೆ ಆಚರಣೆ ಲಿಂಗಾಧಾರಿತ ಅಸಮಾನತೆಗೆ ಇನ್ನೊಂದು ಕೊಡುಗೆಯಾಗಿದೆ . ಮಗನನ್ನು ಕುಟುಂಬದ ಅಸ್ತಿ ಎಂತಲೂ , ಹೆಣ್ಣು ಮಗಳನ್ನು ಅನಾವಶ್ಯಕ ಹೊರೆ ಎಂತಲೂ ಭಾವಿಸಿ , ಇವರಿಬ್ಬರ ನಡುವೆ ಅಗಾಧ ತಾರತಮ್ಯಕ್ಕೆ ಎಡೆ ಮಾಡಿಕೊಟ್ಟಿದೆ .

2nd puc political science 5th chapter notes in kannada

5. ಸೂಕ್ತ ಪ್ರಾತಿನಿಧ್ಯ ನೀಡದಿರುವುದು : ರಾಜಕೀಯ ಅಧಿಕಾರ ಮತ್ತು ಕ್ಷೇತ್ರಗಳಲ್ಲಿ ಮಹಿಳೆಗೆ ಸೂಕ್ತ ಪ್ರಾತಿನಿಧ್ಯ ನಿರಾಕರಿಸಲಾಗಿದೆ . ಮಹಿಳೆ ಪುರುಷರಷ್ಟೇ ಸಾಮರ್ಥ್ಯವನ್ನು ಹೊಂದಿದ್ದರೂ ಅವರಿಗೆ ಪ್ರಾತಿನಿಧ್ಯವನ್ನು ನೀಡಿಲ್ಲ .

ಈ ರೀತಿಯಾಗಿ ಲಿಂಗ ಆಧಾರಿತ ಅಸಮಾನತೆಗೆ ವಿವಿಧ ಕಾರಣಗಳನ್ನು ನೋಡಬಹುದಾಗಿದೆ . ಅಸಮಾನತೆ ಎಂಬುದನ್ನು ತೊಡೆದು ಹಾಕಿ ಎಲ್ಲರೂ ಸಮಾನತೆಯ ತತ್ವದಡಿಯಲ್ಲಿ ಬಾಳಬೇಕೆಂದು ಹಲವಾರು ಶಾಸನ ಮತ್ತು ಕಾನೂನುಗಳನ್ನು ರೂಪಿಸಲಾಗಿದೆ .

6. ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳನ್ನು ತಿಳಿಸಿ ,

ಜಾತಿ ಆಧಾರಿತ ಅಸಮಾನತೆಯು ಸಮಾಜವನ್ನು ವಿಭಜಿಸಿ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯನ್ನುಂಟು ಮಾಡಿ ಭಾರತದ ಆಡಳಿತ ವ್ಯವಸ್ಥೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ . ಸಮಾಜದಲ್ಲಿ ಜಾತಿ ವ್ಯವಸ್ಥೆ ಎಂಬುದು ಮೇಲ್ದಾತಿ , ಕೆಳಜಾತಿ ಮತ್ತು ಆದ್ದರಿಂದ ಜಾತಿ ಆಧಾರಿತ ಅಸಮಾನತೆಗೆ ಪರಿಹಾರಗಳು ಹೀಗಿವೆ .

1. ಮೀಸಲಾತಿ:ಭಾರತದಲ್ಲಿ ಜಾತಿ ಆಧಾರಿತ ಅಸಮಾನತೆಗಳು ಅಸ್ತಿತ್ವದಲ್ಲಿರುವುದರಿಂದ ಪರಿಶಿಷ್ಟ ಜಾತಿ , ಪರಿಶಿಷ್ಟ ವಗ್ರಗುರಿಯಾಗಿವೆ . ಈ ಜನಾಂಗವನ್ನು ಸಮಾ ಮತ್ತು ಇತರೇ ಹಿಂದುಳಿದ ವರ್ಗಗಳು ಅಗಾಧವ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ , ಭಾಗ ಸಂವಿಧಾನ ರಚನಾಕಾರರು ಸಂವಿಧಾನದ III , W XVI ನೇ ಭಾಗಗಳಲ್ಲಿ ಕೆಲವು ಸಂವಿಧಾನಾತ್ಮ ನಿಯಮಗಳನ್ನು ರೂಪಿಸಿದ್ದಾರೆ . ವಿಧಿ 15 , 16 , 17 ವ 46 ರಲ್ಲಿ ಕ್ರಾಂತಿಕಾರಕ ಅವಕಾಶಗಳನ್ನು ಕ ಸಾಮಾಜಿಕವಾಗಿ ಸರ್ವರ ಏಳಿಗೆ ಪೂರಕವಾದ ಅಂಶಗಳನ್ನ ಸೇರಿಸಲಾಗಿದೆ . ಮೀಸಲಾತಿ ನೀಡುವ ಮೂಲಕ ಸಮಾನ ಸಮಾಜವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ,

2. ಶಿಕ್ಷಣ : ಸಂವಿಧಾನದ ವಿಧಿ 15 ರಲ್ಲಿ ಪರಿಶಿಷ್ಠ ಜಾತಿ , ಪರಿಶಿ ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೈಕ್ಷಣಿ ಸಂಸ್ಥೆಗಳಲ್ಲಿ ಸೂಕ್ತ ಮೀಸಲಾತಿಯನ್ನು ಕಲ್ಪಿಸಲಾಯಿತು ಖಾಸಗಿ ಅನಿದಾನಿತ ಸಂಸ್ಥೆಗಳು ಮತ್ತು ಅನುದಾನರ ಸಂಸ್ಥೆಗಳಲ್ಲಿಯೂ ಈ ವರ್ಗಗಳಿಗೆ ಸೇರಿದವರಿಗೆ ಸಚಿ ಮೀಸಲಾತಿ ಸ್ಥಾನಗಳನ್ನು ಕಾಯ್ದಿರಿಸುವಂತೆ 86 1 ಸಂವಿಧಾನ ತಿದ್ದುಪಡಿ ಕಾಯ್ದೆ ಮೂಲಕ ಅವಕಾ ಕಲ್ಪಿಸಲಾಗಿದೆ . ಕಡ್ಡಾಯ ಶಿಕ್ಷಣ ಕಾಯ್ದೆಯ ಹಕ್ಕು ಸಮುದಾಯಗಳಿಗೆ ಸೂಕ್ತ ಮೀಸಲಾತಿಯ ಬಗೆಗೆ ಸ್ಪಷ್ಟವ ಜಾರಿಗೊಳಿಸಿದೆ .

2nd puc political science 5th chapter notes in kannada

3.ಉದ್ಯೋಗ : ಸಂವಿಧಾನದ 16 ನೇ ವಿಧಿಯು ಉದ್ಯೋಗ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸುತ್ತದೆ . ವಿ 335 ರಲ್ಲಿ ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳಿಗೆ ಕೇ ಮತ್ತು ರಾಜ್ಯ ಸರ್ಕಾರಗಳೆರಡರಲ್ಲೂ ಸಾರ್ವಜನಿ ಸೇವೆಗಳಲ್ಲಿ ಮೀಸಲಾತಿಯನ್ನು ನೀಡುತ್ತಿದೆ . ಪ್ರಸ್ತುತ ಕೇ 15 ರಷ್ಟು ಮತ್ತು ಪರಿಶಿಷ್ಟ ವರ್ಗಗಳಿಗೆ ಶೇ 3 ರ ಮತ್ತು ರಾಜ್ಯ ಸೇವೆಗಳೆರಡರಲ್ಲೂ ಪರಿಶಿಷ್ಟ ಜಾತಿಗೆ ಮೀಸಲಾತಿಗೆ ಅವಕಾಶವಿದೆ.

4.ಶಾಸನ ಸಭೆಗಳಲ್ಲಿ : ವಿಧಿ 330 ಮತ್ತು 332 ರಲ್ಲಿ ಭಾರತ ಸಂವಿಧಾನವು , ಸಂಸತ್ತಿನ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಸೂಕ್ತ ಮೀಸಲು ಸ್ಥಾನಗಳನ್ನು ಕಾಯ್ದಿರಿಸಲಾಗಿದೆ . 5. ಸ್ಥಳೀಯ ಸಂಸ್ಥೆಗಳಲ್ಲಿ : ಭಾರತ ಸಂವಿಧಾನದ ವಿಧಿ 243 ಡಿಯಲ್ಲಿ ಪ.ಜಾತಿ , ಪ.ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಗ್ರಾಮೀಣ ಸ್ಥಳೀಯ ಸ ೦ ಸ್ಥೆಗಳಲ್ಲಿ ಮೀಸಲಾತಿ ಸ್ಥಾನ ಕಾಯ್ದಿರಿಸಲಾಯಿತು.

2nd puc political science 5th chapter notes in kannada

5.ಸ್ಥಳೀಯ ಸಂಸ್ಥೆಗಳಲ್ಲಿ .ಭಾರತ ಸಂವಿದಾನ ವಿಧಿ 243 ಟಿಯಲ್ಲಿ ನಗರ ಈ ವರ್ಗಗಳಿಗೆ ಮೀಸಲಾತಿ ಸ್ಥಾನಗಳನ್ನು ಕಲ್ಪಿಸಿದೆ . ಈ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳ ಸ್ಥಾನಗಳಲ್ಲಿಯೂ ರಾಜ್ಯ ಸರ್ಕಾರವು ರಚಿಸುವ ನಿಯಮಗಳ ಅನುಸಾರ ಮೀಸಲಾತಿಯನ್ನು ನಿಗಧಿಪಡಿಸಲಾಗುತ್ತದೆ .

. ಜಾತಿ ಆಧಾರಿತ ಅಸಮಾನತೆಯು ಈ ಮೇಲ್ಕಂಡ ಪರಿಹಾರ ಕ್ರಮಗಳನ್ನು ಒಳಗೊಂಡು ಅಸಮಾನತೆಯನ್ನು ತೊಡೆದು ಹಾಕುವ ಕಾರ್ಯದಲ್ಲಿ ಮುನ್ನುಗ್ಗುತ್ತಿವೆ .

7. ಲಿಂಗಾಧಾರಿತ ಅಸಮಾನತೆಯ ನಿರ್ಮೂಲನೆಗೆ ಪರಿಹಾರೋಪಾಯಗಳನ್ನು ತಿಳಿಸಿ .

ಗಂಡು ಮತ್ತು ಹೆಣ್ಣು ಎಂಬ ತಾರತಮ್ಯದಿಂದ ಸಮಾನ ಅವಕಾಶಗಳನ್ನು ನಿರಾಕರಿಸುವುದು ಲಿಂಗಾಧಾರಿತ ಅಸಮಾನತೆಯಾಗಿದೆ . ಇದನ್ನು ನಿರ್ಮೂಲನೆ ಮಾಡಲು ಸರಕಾರವು ಹಲವು ಪರಿಹಾರ ಕ್ರಮಗಳನ್ನು ಕೈಗೊಂಡಿದೆ . ಅವುಗಳೆಂದರೆ

1. ಮಹಿಳಾ ಮೀಸಲಾತಿ : ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ , ಇನ್ನುಳಿದ ವರ್ಗಗಳ ಜನರನ್ನು ಒಂದು ಮುಖ್ಯವಾಹಿನಿಗೆ ತರುವುದರ ಮೂಲಕ ಅಸಮಾನತೆಯನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ . ಇದರ ಕಾರಣದಿಂದಾಗಿ ಮಹಿಳೆಯರಿಗೆ ಈ ಕೆಳಕಂಡ ವಿಷಯದಲ್ಲಿ ವಿಶೇಷ ಮೀಸಲಾತಿ ನೀಡಲಾಗಿದೆ . ಅವುಗಳೆಂದರೆ

2nd puc political science 5th chapter notes in kannada

ಶಿಕ್ಷಣ :ಮಹಿಳೆಯರನ್ನು ಶೈಕ್ಷಣಿಕವಾಗಿ ಸಬಲೀಕರಣ ಗೊಳಿಸುವುದು , ಲಿಂಗಾಧಾರಿತ ಹೋಗಲಾಡಿಸುವಲ್ಲಿ , ಪ್ರಾತಿನಿಧ್ಯವನ್ನು ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಕೇಂದ್ರ ಸರ್ಕಾರವು 2001 ರಲ್ಲಿ ‘ ಸರ್ವ ಶಿಕ್ಷಾ ಅಭಿಯಾನ್ ‘ ಯೋಜನೆಯನ್ನು ರಾಷ್ಟ್ರಾದ್ಯಂತ ಜಾರಿಗೊಳಿಸಿದೆ . ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯಗಳನ್ನು ಸ್ಥಾಪಿಸಿ ಶೇ 75 ರಷ್ಟು ಸ್ಥಾನಗಳನ್ನು ಪ.ಜಾತಿ , ಪ.ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಬಾಲಕಿಯರಿಗೆ ಶೇ 25 ರಷ್ಟು ಸ್ಥಾನಗಳನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಬಾಲಕಿಯರಿಗೆ ಮೀಸಲಿರಿಸಲಾಗಿದೆ . ಕರ್ನಾಟಕದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳನ್ನು ಸ್ಥಾಪಿಸಲಾಗಿದೆ . ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸಿ ಪದವಿ ತರಗತಿಗಳವರೆಗೆ ಶುಲ್ಕ ವಿನಾಯಿತಿ ನೀಡಲಾಗಿದೆ . ವಿದ್ಯಾರ್ಥಿ ವೇತನ , ಬೈಸಿಕಲ್ ವಿತರಣೆಯಂತಹ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ .

ಉದ್ಯೋಗ : ಮಹಿಳೆಯರು ಸ್ವತಂತ್ರ ಮತ್ತು ಗೌರವಾನ್ವಿತ ಜೀವನ ನಡೆಸಲು ಅನುವಾಗುವಂತೆ ಆರ್ಥಿಕವಾಗಿ ಸಬಲರಾಗುವಂತೆ ಮಾಡಲು ಉದ್ಯೋಗಗಳಲ್ಲಿ ಮೀಸಲಾತಿಯನ್ನು ಕಲ್ಪಿಸಲಾಗಿದೆ . ರಾಜ್ಯ ಸೇವೆಗಳಲ್ಲಿ ಶೇ 33 ರಷ್ಟು ಉದ್ಯೋಗ ಮೀಸಲಾತಿ ನೀಡಲಾಗಿದೆ . ಬ್ಯಾಂಕಿಂಗ್ , ಶಿಕ್ಷಕರಾಗಿ , ವಿಜ್ಞಾನಿಗಳಾಗಿ , ಕೈಗಾರಿಕೋದ್ಯಮಿಗಳು , ಪೈಲೆಟ್‌ಗಳು , ರಾಜಕೀಯ ನಾಯಕಿಯರಾಗಿ ಮತ್ತು ಸಮಾಜ ಸುಧಾರಕರಾಗಿ ಮಹಿಳೆಯರು ಪ್ರಾಬಲ್ಯ ಮೆರೆದಿದ್ದಾರೆ .

ಭಾರತದ ಹೆಸರಾಂತ ಮಹಿಳೆಯರಾದ ಸಾವಿತ್ರಿಬಾಯಿ , ಸರೋಜಿನಿ ನಾಯ್ಡು , ವಿಜಯಲಕ್ಷ್ಮೀ ಪಂಡಿತ್ , ಮದರ್ ತೆರೇಸಾ , ಇಂಧಿರಾಗಾಂದಿ , ವಿ.ಎಸ್.ರಮಾದೇವಿ , ಶಕುಂತಲಾದೇವಿ , ಗಂಗೂಬಾಯಿ ಹಾನಗಲ್ , ಕಲ್ಪನಾ ಚಾವ ಮಹಾದೇವಿ ವರ್ಮ ಮತ್ತಿತ್ತರರು .

ಪ್ರಾತಿನಿಧಿಕ ಸಂಸ್ಥೆಗಳು : ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ರಾಜಕೀಯ ಸಬಲೀಕರಣಕ್ಕಾಗಿ ಸ್ಥಳೀಯ ಸಂಸ್ಥೆಗಳಲ್ಲಿ 73 ಮತ್ತು 74 ನೇ ಸಂವಿಧಾನ ತಿದ್ದುಪಡಿ ಕಾಯ್ದೆಗಳ ಮೂಲಕ ಮೀಸಲಾತಿ ಕಲ್ಪಿಸಲಾಗಿದೆ . ಕರ್ನಾಟಕದಲ್ಲಿ ಶೇ 50 % ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ .

2nd puc political science 5th chapter notes in kannada

ಲಿಂಗಾಧಾರಿತ ಅಸಮಾನತೆ ಹೋಗಲಾಡಿಸಲು ಸಂವಿಧಾನದಲ್ಲಿರುವ ಅವಕಾಶಗಳು :

1. ಲಿಂಗಾಧಾರಿತ ತಾರತಮ್ಯವನ್ನು ನಿರ್ಮೂಲನೆ ಮಾಡುವುದು ( ವಿಧಿ 15 ).

2.ಸಾರ್ವಜನಿಕ ಸೇವೆಗಳಲ್ಲಿ ಸಮಾನ ಅವಕಾಶ ( ವಿಧಿ 16 )

3. ಶೋಷಣೆಯ ವಿರುದ್ಧ ರಕ್ಷಣೆಯ ಹಕ್ಕು ( ವಿಧಿ 23 ಮತ್ತು 24 )

4. ಸಮಾನ ಕೆಲಸಕ್ಕೆ ಸಮಾನ ವೇತನ ( ವಿಧಿ 39 ಡಿ )

5. ಮಹಿಳೆಯರನ್ನು ಗೌರವದಿಂದ ನೋಡುವುದು . ವಿಧಿ 51 ಎ ( ಇ )

6. ಮತದಾನದ ಹಕ್ಕು ( ವಿಧಿ 236 )

1992 ಜನಸಂಖ್ಯೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವನ್ನು ರಚಿಸುವ ಮೂಲಕ ಮಹಿಳಾ ಹಿತಾಸಕ್ತಿಯನ್ನು ರಕ್ಷಿಸುವ ಸಲುವಾಗಿ ಕೇಂದ್ರ , ರಾಜ್ಯ ಸರ್ಕಾರಗಳು ಈ ಮಹಿಳಾ ಆಯೋಗಗಳನ್ನು ರಚಿಸಿದೆ . ಭಾರತವು ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ 30 ನೇ ಜುಲೈ 1980 ರಲ್ಲಿ ಸಹಿ ಮಾಡಿದ್ದು 1993 ಜುಲೈ 9 ರಂದು ಮಾನ್ಯ ನೀಡಿತು .

8. ಅನಕ್ಷರತೆಗೆ ಕಾರಣಗಳನ್ನು ಪಟ್ಟಿ ಮಾಡಿ ,

ಪ್ರಜಾಪ್ರಭುತ್ವದ ಯಶಸ್ಸಿಗೆ ವಿದ್ಯಾವಂತ ಮತ್ತು ಜಾಗೃತ ಪ್ರಜೆಗಳು ಅತ್ಯಾವಶ್ಯಕ ಕಡ್ಡಾಯ ಶಿಕ್ಷಣ ಮತ್ತು ಸಾರ್ವತ್ರಿಕ ಶಿಕ್ಷಣವೆಂಬುದು ಭಾರತ ಮಾತ್ರವಲ್ಲದೇ ಪ್ರಜಾಸತ್ತಾತ್ಮಕ ಸರ್ಕಾರವನ್ನು ನಡೆಸುವ ಜಗತ್ತಿನ ಯಾವುದೇ ಭಾಗದಲ್ಲಾದರೂ ಪ್ರೋತ್ಸಾಹಿಸಬೇಕಾಗಿದೆ . ಆದರೆ ಇಂದಿಗೂ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ . ಇದಕ್ಕೆ ಹಲವಾರು ಕಾರಣಗಳೆವೆ .

2nd puc political science 5th chapter notes in kannada

ಅನಕ್ಷರತೆಗೆ ಕಾರಣಗಳು:

1. ಜನಸಂಖ್ಯಾ ಸ್ಫೋಟ : ಭಾರತವು ಇಡೀ ಜಗತ್ತಿನಲ್ಲೇ 2 ನೇ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ . ಇದು ಜಗತ್ತಿನ ಜನಸಂಖ್ಯೆಯ ಶೇ 17.5 ರಷ್ಟು ಹೊಂದಿದೆ . ಕರ್ನಾಟಕದ ಜನಸಂಖ್ಯೆ ಈಗ 6.11 ಕೋಟಿಯನ್ನು ದಾಟಿದೆ . ಹೀಗಾಗಿ ಸಾಕ್ಷರತೆಯನ್ನು ಸಾಧಿಸಲು ಸರ್ಕಾರವು ದೊಡ್ಡ ಸವಾಲನ್ನು ಎದುರಿಸಬೇಕಾಗಿದೆ .

2. ಬಡತನ : ಬಡತನದ ಬೇಗೆಯಿಂದ ಬಹುತೇಕ ಮಕ್ಕಳು ಅಪೌಷ್ಠಿಕತೆ ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದಾರೆ . ಹೀಗಾಗಿ ಬಡತನ ಮತ್ತು ಕಡಿಮೆ ಆದಾಯವಿರುವ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವಲ್ಲಿ ವಿಫಲರಾಗಿದ್ದಾರೆ .

3 . ಸಾಮಾಜಿಕ ಹಿಂದುಳಿದಿರುವಿಕೆ : ಸಾಮಾಜಿಕ ಜಾತಿ ಶ್ರೇಣಿ ಪದ್ಧತಿ , ಜನರಲ್ಲಿನ ಕೀಳರಿಮೆ , ಶಿಕ್ಷಣದ ಬಗೆಗಿನ ಜನರ ನಿರುತ್ಸಾಹ ಹಾಗೂ ನಿರ್ಬಂಧಗಳಿಂದ ಬಹುತೇಕ ಜನರು ಶಿಕ್ಷಣದಿಂದ ವಂಚಿತರಾಗಿರುವರು . ಅಲ್ಲದೇ ಬಹುತೇಕ ಹೆಣ್ಣು ಮಕ್ಕಳಿಗೆ ಅದರಲ್ಲಿಯೂ ಗ್ರಾಮೀಣ ಪ್ರದೇಶಗಳಲ್ಲಿ ರೂಢಿ ಸಂಪ್ರದಾಯಗಳು ಮತ್ತು ಲಿಂಗ ತಾರತಮ್ಯದ ಆಚರಣೆಯಿಂದ ಪ್ರಾಥಮಿಕ ಶಿಕ್ಷಣವನ್ನು ನಿರಾಕರಿಸಲಾಗುತ್ತಿದೆ .

4. ಬಾಲಕಾರ್ಮಿಕ ಪದ್ಧತಿ : ದುರ್ಬಲ ಸಾಮಾಜಿಕ , ಆರ್ಥಿಕ ಪರಿಸ್ಥಿತಿಯಿಂದ ಬಾಲಕಾರ್ಮಿಕ ಪದ್ಧತಿ ದೇಶಾದ್ಯಂತ ಆಚರಣೆಯಲ್ಲಿದೆ ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ ಪ್ರಕಾರ 2011 ರಲ್ಲಿ ಭಾರತದಾದ್ಯಂತ 2 ಕೋಟಿ ಬಾಲ ಕಾರ್ಮಿಕರಿದ್ದಾರೆ . ಅವರು ಹೋಟೆಲ್‌ಗಳು , ಸಣ್ಣ ಪ್ರಮಾಣದ ಕೈಗಾರಿಕೆಗಳು , ನೇಯ್ದೆ ಮತ್ತು ಪಟಾಕಿ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸಿ ಶಿಕ್ಷಣದಿಂದ ವಂಚಿತರಾಗಿದ್ದಾರೆ .

5. ಕಳಪೆ ಗುಣಮಟ್ಟದ ಮೂಲಭೂತ ಸೌಕರ್ಯಗಳು : ದೇಶದಾದ್ಯಂತ ಬಹುತೇಕ ಶಾಲೆಗಳು ಸಮರ್ಪಕವಾದ ಕಟ್ಟಡಗಳನ್ನು , ಅಗತ್ಯಕ್ಕನುಗುಣವಾಗಿ ಶಿಕ್ಷಕರು ಮತ್ತು ಅಧ್ಯಯನ ಸಾಮಗ್ರಿಗಳನ್ನು ಹೊಂದಿರುವುದಿಲ್ಲ . ಶಾಲಾ ವಾತಾವರಣವು ಕಲಿಕೆ ಮತ್ತು ಗ್ರಹಿಕೆಗೆ ಪೂರಕವಾಗಿರುವುದಿಲ್ಲ . ಗ್ರಾಮಾಂತರ ಪ್ರದೇಶಗಳಲ್ಲಿ ಮಕ್ಕಳು ಶಾಲೆಗಳಿಗೆ ಹೋಗಲು ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇರುವುದಿಲ್ಲ . ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಾಗಿದೆ .

2nd puc political science 5th chapter notes in kannada

9. 86 ನೇ ಸಂವಿಧಾನ ತಿದ್ದುಪಡಿ ಕಾಯಿದೆಯ ಪ್ರಕಾರ ಅನಕ್ಷರತಾ ನಿವಾರಣೆಗೆ ಸಂವಿಧಾನ ಕೈಗೊಂಡಿರುವ ಕ್ರಮಗಳಾವುವು ?

ಸಂವಿಧಾನದ 45 ನೇ ವಿಧಿಯು ಎಲ್ಲಾ ರಾಜ್ಯಗಳಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಜಾರಿಗೊಳಿಸುವ ಅವಕಾಶ ನೀಡಿದೆ . ಆದರೆ ಇದು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ . ಆದ್ದರಿಂದ ಸಂವಿಧಾನದ 86 ನೇ ತಿದ್ದುಪಡಿಯ ಮೂಲಕ ಇದನ್ನು ಕಡ್ಡಾಯಗೊಳಿಸಲಾಗಿದೆ .

ಭಾರತದ ಸಂಸತ್ತು 2002 ರಲ್ಲಿ 86 ನೇ ಸಂವಿಧಾನ ತಿದ್ದುಪಡಿಯನ್ನು ಪಾಸು ಮಾಡಿತ್ತು . ಸಂವಿಧಾನದಲ್ಲಿ ಸೇರಿಸಿರುವ 21 ಎ ಪ್ರಕಾರ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಮಾಡಲಾಗಿದೆ . ಈ ತಿದ್ದುಪಡಿ ಮೂಲಕ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯಗೊಳಿಸುವುದರ ಮೂಲಕ , ಶಿಕ್ಷಣವನ್ನು ಪ್ರಚಾರಪಡಿಸಲಾಗಿದೆ .

86 ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಅನಕ್ಷರತೆ ನಿವಾರಣೆಗೆ ಕೈಗೊಂಡ ಕ್ರಮಗಳು ಅಥವಾ ಈ ಕಾಯ್ದೆಯ ಮುಖ್ಯಾಂಶಗಳು ಈ ಕೆಳಗಿನಂತಿವೆ .

1. ಕಡ್ಡಾಯ ಶಿಕ್ಷಣ ಎಂದರೆ 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು . ಮತ್ತು ಉಚಿತ ದಾಖಲಾತಿ , ಹಾಜರಾತಿ ನೀಡಿ ಅವರ ಶಿಕ್ಷಣ ಪೂರ್ತಿಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ .

2. ಪೋಷಕರು ಮತ್ತು ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಕಡ್ಡಾಯ .

3 . ಈ ಗುರಿಯನ್ನು ಸಾಧಿಸಲು ಶಾಲೆಗಳು ವಿದ್ಯಾರ್ಥಿಗಳ ಪ್ರಮಾಣಕ್ಕೆ ಅನುಗುಣವಾಗಿ ಶಿಕ್ಷಕರು , ತರಬೇತಿ ಪಡೆದ ನುರಿತ ಶಿಕ್ಷಕರು , ಮೂಲಭೂತ ಸೌಕರ್ಯಗಳು ಮತ್ತು ಆಟದ ಮೈದಾನ ಮುಂತಾದವುಗಳನ್ನು ಹೊಂದಿರಬೇಕು .

2nd puc political science 5th chapter notes in kannada

4. ಕೇಂದ್ರಸರ್ಕಾರ ಮತ್ತು ರಾಜ್ಯಸರ್ಕಾರಗಳೆರಡು ಒಪ್ಪಿದ ಸೂತ್ರದನ್ವಯ ಇದಕ್ಕೆ ತಗಲುವ ಖರ್ಚು ನಿಭಾಯಿಸಬೇಕು . ( 2013 ರಲ್ಲಿ ಇದು 65:35 ರಷ್ಟಿತ್ತು )

5. ಶಾಲೆಯ ಆಡಳಿತ ಮಂಡಳಿ ಅಥವಾ ಸ್ಥಳೀಯ ಪ್ರಾಧಿಕಾರವು ಶಾಲೆಯಿಂದ ಹೊರ ಹೋದ ಮಕ್ಕಳನ್ನು ಗುರುತಿಸುವುದು ಮತ್ತು ಅವರ ವಯಸ್ಸಿಗೆ ಅನುಗುಣವಾಗಿ ತರಗತಿಗಳಲ್ಲಿ ಸೇರಿಸುವುದು ಆದ್ಯ ಕರ್ತವ್ಯವಾಗಿದೆ . ಶಾಲೆಗೆ ದಾಖಲಾತಿ ಮಾಡುವುದಕ್ಕಿಂತ ಮೊದಲು ಅವರಿಗೆ ಸೂಕ್ತ ತರಬೇತಿ ನೀಡಬೇಕಾಗಿದೆ .

6.ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12 ( 1 ) ಸಿ ಪ್ರಕಾರ ಖಾಸಗಿ ಅನುದಾನಿತ ಮತ್ತು ಅಲ್ಪಸಂಖ್ಯಾತರ ಅನುದಾನರಹಿತ ಶಾಲೆಗಳು , ಹಿಂದುಳಿದ ವರ್ಗಗಳ ಮತ್ತು ದುರ್ಬಲ ವರ್ಗಗಳಿಗೆ ಸೇರಿದ ಮಕ್ಕಳಿಗೆ ಶೇಕಡಾ 25 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ( 7.5 % ಪ.ಜಾ , 1.5 % ಪ.ಪಂ. 16 % ಇತರೆ ಹಿಂದುಳಿದ ಮಕ್ಕಳಿಗೆ ಮೀಸಲಿಡಲಾಗಿದೆ )

2nd puc political science 5th chapter notes in kannada

ಈ ರೀತಿಯಾಗಿ ಅನಕ್ಷರತೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ಸಂವಿಧಾನದ 86 ನೇ ತಿದ್ದುಪಡಿಯು ಜಾರಿಗೊಳಿಸುವುದರ ಮೂಲಕ ಹಲವು ಕ್ರಮಗಳನ್ನು ಕೈಗೊಂಡಿದೆ .

10. ‘ ಭಾರತದ ಪ್ರಜಾಪ್ರಭುತ್ವಕ್ಕೆ ಕೋಮುವಾದ ಒಂದು ದೊಡ್ಡ ತೊಡಕಾಗಿದೆ ‘ ಹೇಗೆ ? ವಿವರಿಸಿ .

ಕೋಮುವಾದ ಎಂಬುದು ಸಂಕುಚಿತ ರಾಜಕೀಯ ಗುರಿಗಳು ಮತ್ತು ಒಂದು ನಿರ್ಧಿಷ್ಟ ಕೋಮಿನ ಹಿತಾಸಕ್ತಿಗಳನ್ನು ಸಾಧಿಸುವುದಕ್ಕಾಗಿ ಧರ್ಮ ಮತ್ತು ಸಾಂಸ್ಕೃತಿಕ ವೈರುಧ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಎಂಬುದಾಗಿಯೂ ಅರ್ಥೈಸಬಹುದಾಗಿದೆ .

ಕೋಮುವಾದವು ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ವಿವಿಧ ಹಂತಗಳಲ್ಲಿ ಕಾರ್ಯಾಚರಣೆ ಯಲ್ಲಿದ್ದು ಭಾರತದ ಪ್ರಜಾಸತ್ತೆ ಮತ್ತು ರಾಜಕೀಯ ವ್ಯವಸ್ಥೆಗೆ ಬೃಹತ್ ಸವಾಲಾಗಿದೆ .

ಭಾರತ ಪ್ರಜಾಪ್ರಭುತ್ವಕ್ಕೆ ಕೋಮುವಾದ ಒಂದು ದೊಡ್ಡ ತೊಡಕು.

2nd puc political science 5th chapter notes in kannada

1. ರಾಷ್ಟ್ರೀಯ ಏಕತೆಗೆ ಧಕ್ಕೆ : ಭಾರತದಲ್ಲಿ ಹಲವು ಧರ್ಮಗಳಲ್ಲಿರುವ ಧಾರ್ಮಿಕ ವೈರುಧ್ಯಗಳಿಂದ ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ಗಂಭೀರವಾದ ವ್ಯತಿರಿಕ್ತ ಪರಿಣಾಮಗಳುಂಟಾಗಿವೆ . ಧಾರ್ಮಿಕ ಭಿನ್ನತೆಗಳಿಂದ 1947 ರಲ್ಲಿ ಉಪಖಂಡದಲ್ಲಾದ ದೇಶ ವಿಭಜನೆಯಿಂದ ಭಾರತದಲ್ಲಿ ಸಾಮಾಜಿಕ ಸಾಮರಸ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಯಿತು . ಇದರಿಂದ ಎರಡೂ ಕೋಮುಗಳ ನಡುವೆ ಭಿನ್ನಾಭಿಪ್ರಾಯ ಮೂಡಲಾರಂಭಿಸಿತು .

2. ರಾಷ್ಟ್ರೀಯವಾದ ಮತ್ತು ದೇಶಾಭಿಮಾನಕ್ಕೆ ಧಕ್ಕೆ: ಕೋಮುವಾದವು ನಾನಾ ರೀತಿಯ ಧಾರ್ಮಿಕ ಮೂಲಭೂತವಾದ ಮತ್ತು ಸಂಪ್ರದಾಯಗಳಿಗೆ ದಾರಿ ಮಾಡಿಕೊಡುತ್ತದೆ . ಧಾರ್ಮಿಕ ಮೂಲಭೂತವಾದಿಗಳು ತಮ್ಮ ಜನರನ್ನು ಧಾರ್ಮಿಕ ಅಸ್ಥಿರತೆಯ ಹೆಸರಿನಲ್ಲಿ ಶೋಷಣೆ ಮಾಡಿ ಅವರನ್ನು ಅಂಧಕಾರದ ಕೂಪಕ್ಕೆ ದೂಡುತ್ತಾರೆ .ಇಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಮತ್ತು ದೇಶಾಭಿಮಾನದ ಚಿಂತನೆಗಳು ಸಂಪೂರ್ಣವಾಗಿ ತಮ್ಮ ಮಹತ್ವ ಕಳೆದುಕೊಳ್ಳುತ್ತವೆ .

2nd puc political science 5th chapter notes in kannada

3. ರಾಷ್ಟ್ರೀಯ ಅಭಿವೃದ್ಧಿಗೆ ತೊಡಕು : ರಾಷ್ಟ್ರೀಯ ದೂರದೃಷ್ಟಿತನದ ಕೊರತೆಯಿಂದ ಕೆಲವು ಧಾರ್ಮಿಕ ನಾಯಕರು ಜಾತ್ಯಾತೀತ ಮೌಲ್ಯಗಳನ್ನು ಗಾಳಿಗೆ ತೂರಿ ಧಾರ್ಮಿಕ ಅಸಹಿಷ್ಣುತೆಗೆ ದಾರಿ ಮಾಡಿಕೊಡುವರು . ತಮ್ಮ ಉದ್ರೇಕಕಾರಿ ಭಾಷಣಗಳು ಮತ್ತು ಲೇಖನಗಳಿಂದ ಜನಸಾಮಾನ್ಯರಲ್ಲಿ ಕೋಮು ಸಂಘರ್ಷ ಭಾವನೆ ಮೂಡುವುದರಿಂದ ಸಹಜವಾಗಿ ರಾಷ್ಟ್ರೀಯ ಅಭಿವೃದ್ಧಿ ಕಾರ್ಯಕ್ರಮಗಳ ಮೇಲೆ ದುಷ್ಪರಿಣಾಮ ಬೀರುತ್ತದೆ .

4. ಅಸಮರ್ಥ ರಾಜಕೀಯ ನಾಯಕತ್ವ : ಭಾರತದಲ್ಲಿ ರಾಜಕೀಯ ಪಕ್ಷಗಳು ಮತ್ತು ನಾಯಕರು ಕೋಮು ಭಾವನೆಗಳನ್ನು ಜನರಲ್ಲಿ ನಿವಾರಿಸಿ ಕೋಮು ಸೌಹಾರ್ದವನ್ನು ಮೂಡಿಸುವಲ್ಲಿ ವಿಫಲರಾಗಿದ್ದಾರೆ . ಚುನಾವಣೆಗಳಲ್ಲಿ ವೋಟ್ ಬ್ಯಾಂಕ್ ರಾಜಕೀಯ ಮಾಡುವುದಕ್ಕಾಗಿ ರಾಜಕೀಯ ಪಕ್ಷಗಳು ಜಾತಿ ಮತ್ತು ಕೋಮು ಆಧಾರಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳಲು ಪ್ರಯತ್ನಿಸುತ್ತಾರೆ . ಅಂತಿಮವಾಗಿ ಇದು ಅಸಮರ್ಥ ರಾಜಕೀಯ ನಾಯಕತ್ವಕ್ಕೆ ಎಡೆ ಮಾಡಿಕೊಡುತ್ತದೆ .

5. ರಾಷ್ಟ್ರೀಯ ಸಾರ್ವಭೌಮಾಧಿಕಾರಕ್ಕೆ ಗಂಡಾಂತರ : ಯಾವುದೇ ದೇಶವು ಸಾಮಾಜಿಕ – ಧಾರ್ಮಿಕ ಭಿನ್ನತೆಗಳನ್ನಾಧರಿಸಿ ಆಂತರಿಕ ಸಮಸ್ಯೆಗಳಿಂದ ಕೂಡಿದ್ದಾಗ ಅದು ಜಾಗತಿಕ ಮಟ್ಟದಲ್ಲಿ ದುರ್ಬಲ ರಾಷ್ಟ್ರವಾಗಿ ಗೋಚರಿಸುತ್ತದೆ . ಕ್ರಮೇಣ ಇದು ವಿದೇಶಿ ಆಕ್ರಮಣಕ್ಕೆ ಒಳಗಾಗುವ ಸಂಭವವಿರುತ್ತದೆ . ಏಕತೆಯಿಂದ ಇದ್ದರೆ ಮಾತ್ರ ರಾಷ್ಟ್ರ ನಿರ್ಮಾಣ ಮಾಡಬಲ್ಲೆವು . ಇಲ್ಲದಿದ್ದರೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿ , ರಾಷ್ಟ್ರೀಯ ಸಾರ್ವಭೌಮತ್ವ ಗಂಡಾಂತರ ಸ್ಥಿತಿಗೆ ತಲುಪುತ್ತದೆ .

2nd puc political science 5th chapter notes in kannada

ಹೀಗೆ ಕೋಮುವಾದವು ಭಾರತದ ಪ್ರಜಾಸತಾತ್ಮಕ ವ್ಯವಸ್ಥೆ , ರಾಜಕೀಯ ವ್ಯವಸ್ಥೆಗೆ ಒಂದು ಬೃಹತ್ ಗಂಡಾಂತರವಾಗಿದೆ ಎಂದು ಈ ಮೇಲಿನ ಅಂಶಗಳ ಮೂಲಕ ತಿಳಿಯಬಹುದು .

11.ಕೋಮುವಾದದ ವಿರುದ್ಧದ ಪರಿಹಾರೋಪಾಯಗಳನ್ನು ವಿವರಿಸಿ .

ಕೋಮುವಾದ ಎಂದರೆ ಬಹುಸಂಖ್ಯಾತ ಧರ್ಮವು ಇಡೀ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿದ್ದುಕೊಂಡು ರಾಜ್ಯ ನಡೆಸುವ ವ್ಯವಸ್ಥೆ . ಇದು ದೇಶದ ಸಾಮಾಜಿಕ , ಆರ್ಥಿಕ , ಸಾಂಸ್ಕೃತಿಕ ಮತ್ತು ರಾಜಕೀಯ ರಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ . ಆದ್ದರಿಂದ ಇದನ್ನು ತಡೆಗಟ್ಟುವಲ್ಲಿ ಪರಿಹಾರಗಳನ್ನು ಕಂಡುಕೊಳ್ಳುವುದು ಅವಶ್ಯವಾಗಿದೆ .

2nd puc political science 5th chapter notes in kannada

ಪರಿಹಾರೋಪಾಯಗಳು

1. ಜಾತ್ಯಾತೀತತೆ : ಭಾರತದಲ್ಲಿ ವಿವಿಧ ಧಾರ್ಮಿಕ ಗುಂಪುಗಳ ನಡುವೆ ಏಕತೆ ಮತ್ತು ಸಮಾನತೆಯ ಮನೋಭಾವನೆಯನ್ನು ಮೂಡಿಸುವುದಕ್ಕಾಗಿ ಸಂವಿಧಾನ ರಚನಾಕಾರರು ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡಿದ್ದಾರೆ . ರಾಜ್ಯವೂ ಸಹ ಪ್ರಜೆಗಳ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅನುಸರಿಸಿದೆ . ಸಂವಿಧಾನದ 26 ನೇ ? ದೇಶದ ಎಲ್ಲಾ ಪ್ರಜೆಗಳಿಗೂ ಧಾರ್ಮಿಕ ಸ್ವತಂತ್ರ್ಯ ನೀಡಿ ತಮಗೆ ಇಷ್ಟ ಬಂದ ಧರ್ಮವನ್ನು ಅನುಸರಿಸುವ , ಧಾರ್ಮಿಕ ತತ್ವಗಳನ್ನು ಪ್ರಚಾರ ಮಾಡುವ ಮತ್ತು ಸಂಸ್ಥೆಗಳನ್ನು ಅಸ್ತಿತ್ವಕ್ಕೆ ಅವಕಾಶ ಕಲ್ಪಿಸಿತು . ಕೇಂದ್ರ ಸಚಿವ ಸಂಪುಟವು ಡಿಸೆಂಬರ್ 2013 ರಲ್ಲಿ ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಅನುಮೋದಿಸಿತು .

2. ರಾಷ್ಟ್ರೀಯ ಭಾವೈಕ್ಯತೆ : ಭಾರತವು ವೈವಿಧ್ಯಮಯ ಸಂಸ್ಕೃತಿಯಿಂದ ಕೂಡಿದ್ದು , ಹಲವಾರು ಧರ್ಮ , ಭಾಷೆ , ಜಾತಿ ಮತ್ತು ಸಂಸ್ಕೃತಿಗಳಿಂದ ಕೂಡಿದೆ . ಇದನ್ನು ಸಂಕುಚಿತ ಅರ್ಥದಲ್ಲಿ ಮಿತಿಗೊಳಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ರಾಷ್ಟ್ರೀಯ ಭಾವೈಕ್ಯತೆ ಅತ್ಯಗತ್ಯವಾಗಿದೆ . ಇದನ್ನು ಸಾಧಿಸಲು ನಮ್ಮ ಸಂವಿಧಾನದಲ್ಲಿ ಹಲವು ಅಂಶಗಳನ್ನು ಸೇರಿಸಲಾಯಿತು .

3. ನೆರೆಹೊರೆಯ ಶಾಂತಿ ಸಮಿತಿಗಳು : ವಿವಿಧ ಕೋಮುಗಳಿಗೆ ಸೇರಿದ ಸಮಾಜದ ಪ್ರಮುಖ . ಮತ್ತು ಉನ್ನತ ವ್ಯಕ್ತಿಗಳು ಸದಸ್ಯರಾಗಿರುವ ನೆರೆಹೊರೆ ಶಾಂತಿಸಮಿತಿಗಳನ್ನು ರಚಿಸಲಾಯಿತು .

ಇವುಗಳ ಮುಖ್ಯ ಧೈಯವೆಂದರೆ ,

  • ನೆರೆಹೊರೆ ಪ್ರದೇಶಗಳಲ್ಲಿ ಸಾಮಾಜಿಕ ಶೋಭೆಗಳಿಗೆ ಕಾರಣವಾಗುವ ಶಕ್ತಿಗಳನ್ನು ಪಡೆಯುವುದು .
  • ಕೋಮು ಹಿಂಸಾಚಾರ ನಡೆಯದ ಹಾಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು .
  • ಕೋಮು ಹಿಂಸಾಚಾರ ನಡೆದ ಸ್ಥಳಗಳಲ್ಲಿ ಶಾಂತಿ ಕಾಪಾಡುವುದು .
  • ಕೋಮುಗಳ ನಡುವೆ ಸೌಹಾರ್ದತೆ ಮೂಡಿಸುವುದು , ಮೊಟ್ಟಮೊದಲ ನೆರೆಹೊರೆ ಶಾಂತಿಸಮಿತಿ ಮುಂಬೈನ ಧಾರವಿ ಎಂಬಲ್ಲಿ 1986 ರಲ್ಲಿ ನಡೆಯಿತು .

ಇಂದು ಹೆಚ್ಚುತ್ತಿರುವ ಕೋಮುವಾದ ನಿಯಂತ್ರಿಸಲು ಇಂತಹ ಹಲವು ಕ್ರಮಗಳ ಮೂಲಕ ಪ್ರಯತ್ನಿಸಿ , ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕಾಗಿದೆ .

2nd puc political science 5th chapter notes in kannada

12. ಭಾರತದಲ್ಲಿ ಭಯೋತ್ಪಾದನೆಯ ಉಗಮಕ್ಕೆ ಕಾರಣಗಳೇನು ? ವಿವರಿಸಿ .

ಭಯೋತ್ಪಾದನೆಯು ಒಂದು ಪ್ರತೀಕಾರಕ ಕೃತ್ಯವಾಗಿದ್ದು , ಭಯದ ಮೂಲಕ ಜನರಲ್ಲಿ ಆತಂಕಗಳನ್ನು ಮೂಡಿಸಿ ಸಾಮೂಹಿಕ ಹಿಂಸಾಚಾರಕ್ಕೆ ಇಳಿಯುವುದಾಗಿದೆ . ಇದು ಭಾರತದಲ್ಲಿ ಉದ್ಭವಗೊಳ್ಳಲು ಹಲವಾರು ಅಂಶಗಳು ಕಾರಣವಾಗಿವೆ .

ಕಾರಣಗಳು:

1 ಪ್ರತ್ಯೇಕತಾವಾದಿ ಚಳುವಳಿಗಳು

ದೇಶ ವಿಭಜನೆಯಾದಂದಿನಿಂದಲೂ ಕೋಮುವಾದಿ ಶಕ್ತಿಗಳು ಪ್ರತ್ಯೇಕತಾ ಚಟುವಟಿಕೆಗಳಲ್ಲಿ ನಿರತವಾಗಿವೆ . ಮೂಲಭೂತವಾದಿಗಳು , ಪಂಜಾಬ್‌ನಲ್ಲಿ ( 1980 ) ಧಾರ್ಮಿಕತೆಯ ಆಧಾರದ ಮೇಲೆ ಈ ಚಳುವಳಿ ಆರಂಭಿಸಿದರು . ಇವುಗಳಲ್ಲಿ ಹುರಿಯತ್ ಕಾನ್ಸ್ರೆನ್ಸ್ , ಅಲ್‌ಕೈದಾ ಪ್ರಮುಖವಾಗಿವೆ .

2nd puc political science 5th chapter notes in kannada

2. ಧಾರ್ಮಿಕ ಮೂಲಭೂತವಾದ

ಹಿಂದೂ – ಮುಸ್ಲಿಂ , ಕ್ರಿಶ್ಚಿಯನ್ , ಸಿಖ್ ಧರ್ಮಗಳಿಗೆ ಸೇರಿದ ಕೆಲವು ಮೂಲಭೂತವಾದಿ ಧಾರ್ಮಿಕ ಸಂಘಟನೆಗಳು ತಮ್ಮ ಧೀರ್ಘಕಾಲದ ರಾಜಕೀಯ ಗುರಿ ಉದ್ದೇಶಗಳ ಲಾಭಕ್ಕೋಸ್ಕರ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸಿ ಸಹಾಯ ನೀಡುತ್ತಾ ಬಂದಿವೆ .

3. ಈಶಾನ್ಯ ಭಾಗದ ಜನಾಂಗೀಯ ಸಮಸ್ಯೆ

ಜನಾಂಗೀಯ ಮತ್ತು ಪ್ರಾದೇಶಿಕ ಅಸ್ಮಿತೆಯ ಆಧಾರದ ಮೇಲೆ ಹಲವಾರು ಸ್ವಹಿತಾಸಕ್ತಿ ಮೂಲಭೂತವಾದಿಗಳು ಈಶಾನ್ಯ ಭಾಗದಲ್ಲಿ ಸಂಘಟಿತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿವೆ . ಉದಾ- ಮಿಜೋರಾಂನಲ್ಲಿ [ 1970-80 ] ಮೀಜೋ ನ್ಯಾಶನಲ್ ಫಂಟ್ .

4. ದುರ್ಬಲ ರಾಜಕೀಯ ವ್ಯವಸ್ಥೆ

ಭಾರತದಲ್ಲಿ ಬಹುಪಕ್ಷಪದ್ಧತಿಯು ದಾರಿ ಮಾಡಿಕೊಟ್ಟಿದ್ದು , ಇಡೀ ವ್ಯವಸ್ಥೆಯನ್ನೇ ದುರ್ಬಲಗೊಳಿಸಿವೆ . ಸಮ್ಮಿಶ್ರ ಸರ್ಕಾರದಲ್ಲಿರುವ ವಿವಿಧ ರಾಜಕೀಯ ಪಕ್ಷಗಳು ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿವೆ . ಇವು ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳದೆ ತಮ್ಮ ಗುರಿ ಈಡೇರಿಸಿಕೊಳ್ಳುವ ಸನ್ನಾಹದಲ್ಲಿರುತ್ತದೆ .

2nd puc political science 5th chapter notes in kannada

5. ಆರ್ಥಿಕ ತಾರತಮ್ಯ

ಅಸಮರ್ಪಕ ಆರ್ಥಿಕ ಬೆಳವಣಿಗೆಗಳು ಮತ್ತು ಬಡವರ ಮೇಲೆ ಶ್ರೀಮಂತರ ಶೋಷಣೆ ಉಳ್ಳವರು ಮತ್ತು ಇಲ್ಲದವರ ನಡುವೆ ಅಗಾಧ ಅಂತರವನ್ನುಂಟು ಮಾಡಿದೆ . ನಕ್ಸಲರು , ಮಾವೋವಾದಿಗಳು ಈ ನೆಪದಲ್ಲಿಯೇ ಭಯೋತ್ಪಾದಕ ಕೃತ್ಯ ಕೈಗೊಳ್ಳಲು ಕಾರಣವಾಗಿವೆ .

ಭಯೋತ್ಪಾದನೆಯು ಉಗಮಗೊಳ್ಳಲು ಈ ಕಾರಣಗಳಾಗಿದ್ದು , ಇವುಗಳ ನಿವಾರಣೋಪಾಯಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ .

13. ‘ ಪ್ರಜಾಪ್ರಭುತ್ವಕ್ಕೆ ಭಯೋತ್ಪಾದನೆ ಹೇಗೆ ಮಾರಕವಾಗಿದೆ ‘ ವಿವರಿಸಿ .

ಭಯೋತ್ಪಾದಕರು ಭಯದ ವಾತಾವರಣ ನಿರ್ಮಿಸಿ ಪ್ರಜೆಗಳಲ್ಲಿ ಪ್ರಜಾಪ್ರಭುತ್ವದ ಕಲ್ಪನೆ ಹಾಳುಮಾಡಲು ಪ್ರಯತ್ನಿಸುತ್ತಾರೆ . ಅವರು ಕೈಗೊಳ್ಳುವ ಕೃತ್ಯಗಳಿಂದ ಪ್ರಜಾಪ್ರಭುತ್ವಕ್ಕೆ ಮಾರಕ ಉಂಟಾಗುತ್ತದೆ .

1. ಆಡಳಿತ ಯಂತ್ರಕ್ಕೆ ಅಡ್ಡಿ

ಭಯೋತ್ಪಾದಕ ಸಂಘಟನೆಗಳು ರಾಷ್ಟ್ರದ ಪ್ರಜಾಸತಾತ್ಮಕ ಆಡಳಿತದಲ್ಲಿ ಅಸ್ತವ್ಯಸ್ತತೆಯನ್ನುಂಟು ಮಾಡುತ್ತದೆ . ಸರ್ಕಾರ , ಉನ್ನತ ರಾಜಕೀಯ ನಾಯಕರನ್ನು ಮತ್ತು ಮತ್ತಿತ್ತರನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಕೃತ್ಯಗಳಲ್ಲಿ ಭಯೋತ್ಪಾದಕರು ತೊಡಗಿರುತ್ತಾರೆ .

2nd puc political science 5th chapter notes in kannada

2. ಸಂವಿಧಾನಕ್ಕೆ ಗೌರವವಿಲ್ಲ : ಸ ೦ ವಿಧಾನವು ರಾಷ್ಟ್ರದ ಮೂಲಭೂತ ಕಾನೂನಾಗಿದ್ದರೂ ಭಯೋತ್ಪಾದಕ ಗುಂಪುಗಳು ಮತ್ತು ಸಂಘಟನೆಗಳು ತಮ್ಮ ಭಯೋತ್ಪಾದಕ ಚಟುವಟಿಕೆಗಳ ಮೂಲಕ ಸಂವಿಧಾನದ ಚೌಕಟ್ಟನ್ನು ಮೀರಿ ವರ್ತಿಸುತ್ತಾರೆ . ಕೆಲವು ವೇಳೆ ಸರ್ಕಾರಗಳು ಇವುಗಳ ಬೇಡಿಕೆಗಳಿಗೆ ಮಣಿದು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿದೆ .

3.ಮಾನವ ಹಕ್ಕುಗಳ ಉಲ್ಲಂಘನೆ :

ಭಯೋತ್ಪಾದಕರು , ನೆಲದ ಕಾನೂನು ಮತ್ತು ಪ್ರಜಾಸತಾತ್ಮಕ ನೀತಿಗಳಿಗೆ ಯಾವುದೇ ರೀತಿಯ ಮನ್ನಣೆ ಗೌರವ ನೀಡುವುದಿಲ್ಲ . ಮಾನವ ಹಕ್ಕುಗಳನ್ನು ಉಲ್ಲಂಘಿಸುವುದರ ಮೂಲಕ ಮುಗ್ಧ ಸಾಮಾನ್ಯ ಜನರನ್ನು ಗಾಯಗೊಳಿಸಿ ಕೊಲ್ಲುತ್ತಾರೆ .

4. ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆಗಳು :

ಭಯೋತ್ಪಾದಕರು ಸಾಮಾನ್ಯವಾಗಿ ಮತದಾನ ಕಾರ್ಯಕ್ಕೆ ನಿಯೋಜಿತ ಅಧಿಕಾರಿಗಳು , ಮತದಾರರು ಮತ್ತು ಅಭ್ಯರ್ಥಿಗಳನ್ನು ಅಪಹರಿಸುವುದರ ಮೂಲಕ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವ ಮೂಲಕ ಚುನಾವಣೆಯಲ್ಲಿ ಕಾನೂನು ವಿರೋಧಿ ಕೃತ್ಯ ಎಸಗುತ್ತಾರೆ .

2nd puc political science 5th chapter notes in kannada

5. ಆರ್ಥಿಕ ಬೆಳವಣಿಗೆ ಅಡ್ಡಿ :

ಭಯೋತ್ಪಾದನೆಯನ್ನು ತಡೆದು ಹತ್ತಿಕ್ಕುವ ಸಲುವಾಗಿ ಸರ್ಕಾರಗಳು ಅನಾವಶ್ಯಕವಾಗಿ , ಸೇನೆ , ಪೋಲಿಸ್ ವ್ಯವಸ್ಥೆ ಮುಂತಾದವುಗಳಿಗೆ ಅಪಾರ ಹಣ ವೆಚ್ಚ ಮಾಡುವುದರಿಂದ , ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುತ್ತವೆ . ಪ್ರವಾಸೋದ್ಯಮದ ಮೇಲೆಯೂ ಕೆಟ್ಟ ಪರಿಣಾಮ ಬೀರುತ್ತದೆ . ಈ ರೀತಿಯಾಗಿ ಪ್ರಜಾಸತಾತ್ಮಕ ವ್ಯವಸ್ಥೆಗೆ ಭಯೋತ್ಪಾದನೆ ಮಾರಕವಾಗಿದೆ ಎಂದು ಹೇಳಬಹುದು .

14. 2008 ರಲ್ಲಿ ಅಂಗೀಕೃತವಾದ UAPA ದ ವಿವಿಧ ನಿಯಮಗಳನ್ನು ತಿಳಿಸಿ .

ದೇಶದಲ್ಲಿ ಭಯೋತ್ಪಾದನೆಯನ್ನು ತಡೆಯಲು ಸರ್ಕಾರವು ಹಲವಾರು ಶಾಸನೀಯ ಕ್ರಮಗಳನ್ನು ಕೈಗೊಂಡಿದೆ . ಅದರಂತೆ 2008 ರಲ್ಲಿ UAPA ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆಯನ್ನು ಅಂಗೀಕರಿಸಲಾಯಿತು .

2nd puc political science 5th chapter notes in kannada

ಇದು ಈ ಕೆಳಕಂಡ ನಿಯಮಗಳನ್ನು ಒಳಗೊಂಡಿದೆ . UAPA ಕಾನೂನು ವಿರೋಧಿ ಚಟುವಟಿಕೆಗಳ ನಿಗ್ರಹ ಕಾಯ್ದೆ

1. ‘ ಭಯೋತ್ಪಾದಕ ಕಾಯ್ದೆ ‘ ಎಂಬ ಪದವನ್ನು ಕಾಯ್ದೆಯ 15 ನೇ ಸೆಕ್ಷನ್‌ನಲ್ಲಿ ವ್ಯಾಖ್ಯಾನಿಸಲಾಗಿದೆ . ಭಾರತದಲ್ಲಿ ಏಕತೆ , ಸಮಗ್ರತೆ , ಮತ್ತು ಪರಮಾಧಿಕಾರಕ್ಕೆ ಧಕ್ಕೆಯುಂಟಾಗುತ್ತಿದ್ದರೆ ಅಥವಾ ಜನರಲ್ಲಿ ಭಯೋತ್ಪಾದಕ ಭೀತಿಯನ್ನುಂಟು ಮಾಡುವಂತಿದ್ದರೆ ಅದು ಭಯೋತ್ಪಾದಕ ಕೃತ್ಯವಾಗುತ್ತದೆ .

2. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ , ಯಾವುದೇ ಯೋಚನೆಯುಳ್ಳ ರೀತಿಯ ಸಹಾಯ ಮಾಡುವ ವ್ಯಕ್ತಿಗಳನ್ನು 10 ವರ್ಷ ಸೆರೆವಾಸ ಮತ್ತು ದಂಡ ವಿಧಿಸುವ ಮೂಲಕ ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ .

3. ಭಯೋತ್ಪಾದನೆಯ ಪ್ರೋತ್ಸಾಹ , ವಂತಿಗೆ ಸಂಗ್ರಹಿಸುವುದು ಅಫರಾಧವಾಗಿದ್ದು 5 ವರ್ಷಗಳ ಸೆರೆವಾಸ , ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವಿದೆ .

2nd puc political science 5th chapter notes in kannada

4. ಭಯೋತ್ಪಾದಕ ಕೃತ್ಯಕ್ಕೆ ವ್ಯಕ್ತಿಗಳನ್ನು ನೇಮಿಸುವುದು , ಅದಕ್ಕೆ ಪೂರಕ ತರಬೇತಿ ನೀಡುವುದು ಅಕ್ಷಮ್ಯ ಅಪರಾಧವಾಗಿದ್ದು 5 ವರ್ಷಗಳವರೆಗೆ ಸೆರೆವಾಸ ಮುಂದುವರೆದು ಜೀವಾವಧಿ ಶಿಕ್ಷೆ ಜೊತೆಗೆ ದಂಡ ವಿಧಿಸುವ ಅವಕಾಶವಿದೆ .

ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು । 2nd puc political science 5th chapter notes in kannada
ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು । 2nd puc political science 5th chapter notes in kannada

5 . ಈ ಕಾಯ್ದೆಯ ಪ್ರಕಾರ ಪ್ರತಿಯೊಂದು ಕೃತ್ಯವು ದಂಡಾರ್ಹ ಅಪರಾಧವಾಗಿದ್ದು , 90 ದಿನಗಳೊಳಗೆ ತನಿಖೆ ಪೂರ್ಣಗೊಳ್ಳದಿದ್ದರೆ ನ್ಯಾಯಾಂಗ ಬಂಧನದ ಅವಧಿಯನ್ನು 180 ದಿನಗಳವರೆಗೆ ವಿಸ್ತರಿಸಲು ನ್ಯಾಯಾಲಯಕ್ಕೆ ಅವಕಾಶವಿದೆ .

6 . ಈ ಕಾಯ್ದೆಯ ಪ್ರಕಾರ ಕೃತ್ಯವೆಸಗಿರುವ ವ್ಯಕ್ತಿಯ ವಿರುದ್ಧ ಸಾಕಷ್ಟು ಸಾಕ್ಷಾಧಾರಗಳಿದ್ದರೆ ಜಾಮೀನು ನೀಡಲು ಅವಕಾಶ ವಿರುವುದಿಲ್ಲ . ಸೂಕ್ತ ಅನುಮತಿಯಿಲ್ಲದೆ ಮತ್ತು ವಿಶೇಷ ಕಾರಣಗಳಿಲ್ಲದೇ ಕಾನೂನು ಬಾಹಿರವಾಗಿ ದೇಶ ಪ್ರವೇಶಿಸುವ ವಿದೇಶಿ ವ್ಯಕ್ತಿಗೆ ಈ ಕಾಯ್ದೆಯಲ್ಲಿ ಜಾಮೀನಿಗೆ ಅವಕಾಶವಿಲ್ಲ .

7. ಭಯೋತ್ಪಾದಕ ಗುಂಪುಗಳಿಗೆ ಸಂಬಂಧಿಸಿದ ಆಸ್ತಿಗಳು , ಹಣಕಾಸಿನ ಮೂಲಗಳು , ಆರ್ಥಿಕ ಸಂಪನ್ಮೂಲಗಳನ್ನು ಅಥವಾ ಇತರೆ ವಂತಿಗೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ , ವಶಪಡಿಸಿಕೊಳ್ಳುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ .

15. ‘ ಭಯೋತ್ಪಾದಕತೆಗೆ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಒಂದು ಪರಿಹಾರವಾಗಿದೆ ‘ ಚರ್ಚಿಸಿ ,

ಭಯೋತ್ಪಾದನೆಯಿಂದ ಭಾದಿತ ಪ್ರದೇಶಗಳಲ್ಲಿ ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಒದಗಿಸಬಹುದು .

2nd puc political science 5th chapter notes in kannada

ಸಾಮಾಜಿಕ ಜೀವನಕ್ಕೆ ಅವಕಾಶ :

ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿದ್ದವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಸಾಮಾಜಿಕ ಜೀವನ ನಡೆಸಲು ಅನುವು ಮಾಡಿಕೊಡುವುದು , ಭಯೋತ್ಪಾದನೆ ಹಿನ್ನೆಲೆಯುಳ್ಳವರೆಂದು ಪರಿಗಣಿಸಬಾರದು .

2nd puc political science 5th chapter notes in kannada

ಶಿಕ್ಷಣ :

ಯುವಕರಿಗೆ ಚಿಕ್ಕ ವಯಸ್ಸಿನಲ್ಲಿ ನೈತಿಕ ಮತ್ತು ರಾಷ್ಟ್ರೀಯ ಅರಿವನ್ನು ಮೂಡಿಸುವ ಶಿಕ್ಷಣದ ಕೊರತೆಯು ಯುವಕರನ್ನು ಭಯೋತ್ಪಾದನೆಯಂತಹ ಕೃತ್ಯಗಳಲ್ಲಿ ತೊಡಗಲು ಮಾಡುತ್ತದೆ . ಉತ್ತಮವಾದ ನೈತಿಕ ಮತ್ತು ರಾಷ್ಟ್ರಪ್ರೇಮದ ಶಿಕ್ಷಣ ನೀಡುವ ಮೂಲಕ ಅರಿವನ್ನು ಮೂಡಿಸುವುದು .

ಉದ್ಯೋಗ ಅವಕಾಶಗಳು :

ಯುವ ಜನತೆಗೆ ಸೂಕ್ತ ವಯಸ್ಸಿನಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸಿಕೊಡುವ ಮೂಲಕ ಯಾವುದೇ ರೀತಿಯ ಪ್ರಜಾಸತಾತ್ಮಕ ವಿರೋಧಿ ಅಥವಾ ದೇಶ ವಿರೋಧಿ ಕೃತ್ಯದಲ್ಲಿ ತೊಡಗದಂತೆ ನಿಯಂತ್ರಿಸುವುದು . ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗ ಅವಕಾಶಗಳನ್ನು ಒದಗಿಸಿಕೊಡುವ ಮೂಲಕ ಭಯೋತ್ಪಾದಕ ಕೃತ್ಯಗಳಲ್ಲಿ ಯುವಜನತೆ ತೊಡಗದಂತೆ ಮಾಡುವುದು .

2nd puc political science 5th chapter notes in kannada

ಹಣಕಾಸಿನ ಸಹಾಯ : ಬ್ಯಾಂಕುಗಳು , ಹಣಕಾಸು ಸಂಸ್ಥೆಗಳ ಮೂಲಕ ಯುವ ಜನರಿಗೆ ಹಣಕಾಸಿನ ಸಹಾಯ ಒದಗಿಸುವುದರಿಂದ ಸ್ವಯಂ ಉದ್ಯೋಗಗಳಲ್ಲಿ ತೊಡಗಿ ಉದ್ಯಮಿಗಳಾಗಿ ರೂಪುಗೊಳ್ಳಲು ಅವಕಾಶವಿದೆ . ಇದರಿಂದ ಉದ್ಯೋಗನಿರತ ಯುವಜನರನ್ನು ಭಯೋತ್ಪಾದನೆಗೆ ಒಳಪಡಿಸಿಕೊಳ್ಳಲು ಸಾಧ್ಯವಿಲ್ಲ .

ಆರ್ಥಿಕ ಸಮಾನತೆ : ಬಡತನ ಮತ್ತು ಶೋಷಣೆಯಂತಹ ಅಸಮಾನತೆಯನ್ನು ಹೋಗಲಾಡಿಸಿ ಆರ್ಥಿಕ ಸಮಾನತೆಯನ್ನು ಸಾಧಿಸುವ ಮಹತ್ತರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮೂಲಕ ಸರ್ಕಾರಗಳು ಕ್ರಮ ಕೈಗೊಳ್ಳಬೇಕು .

2nd puc political science 5th chapter notes in kannada

ಪುನರ್ವಸತಿ : ರಾಷ್ಟ್ರೀಯ ಮಟ್ಟದ ಬೃಹತ್ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವಾಗ , ಸಂತ್ರಸ್ತರಾದಂತಹ ಸಾಮಾನ್ಯ ಜನರಿಗೆ ಪುನರ್ವಸತಿ ಒದಗಿಸಬೇಕು . ಈ ರೀತಿಯಾಗಿ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಳಡಿಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ .

16.ಭ್ರಷ್ಟಾಚಾರದ ಅರ್ಥ ಮತ್ತು ವ್ಯಾಖ್ಯೆಗಳನ್ನು ಬರೆಯಿರಿ .

ಭ್ರಷ್ಟಾಚಾರವು ಅನಧಿಕೃತ ಶುಲ್ಕಗಳು , ಕೊಡುಗೆಗಳು , ಲಂಚ – ರುಷುವತ್ತು , ಹಸ್ತಾ , ಅನ್ಯಮಾರ್ಗದ ದಲ್ಲಾಳಿ ಕಮಿಷನ್‌ಗಳು ಮುಂತಾದ ಎಲ್ಲಾ ಅನಧಿಕೃತ ಮೊತ್ತಗಳನ್ನು ಒಳಗೊಂಡಿದೆ . ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಒಬ್ಬನ ಅಧಿಕಾರವನ್ನು , ವೈಯಕ್ತಿಕ ಲಾಭಕ್ಕಾಗಿ ಹಣದ ರೂಪದಲ್ಲಿ ಅಥವಾ ವಸ್ತು ರೂಪದಲ್ಲಿ ದುರುಪಯೋಗ ಪಡಿಸಿಕೊಳ್ಳುವುದನ್ನು ಭ್ರಷ್ಟಾಚಾರ ಎನ್ನಲಾಗಿದೆ ‘ .

17. ಭ್ರಷ್ಟಾಚಾರಕ್ಕೆ ಕಾರಣಗಳನ್ನು ತಿಳಿಸಿ .

ಭ್ರಷ್ಟಾಚಾರವೆಂಬುದು ಮಾನವನ ಇತಿಹಾಸದಷ್ಟೇ ಪುರಾತನವಾದುದ್ದಾಗಿದ್ದು , ಇದು ಒಂದಲ್ಲ ಒಂದು ರೀತಿಯಲ್ಲಿ ಮಾನವ ಸಮಾಜದಲ್ಲಿ ಅಸ್ತಿತ್ವದಲ್ಲಿದೆ . ಇದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ .

1. ದುರಾಸೆ :

ಮಾನವ ಸಾಮಾನ್ಯವಾಗಿ ಅಧಿಕಾರ ಮತ್ತು ಅಂತಸ್ತಿಗಾಗಿ ಹಪಿತಪಸುತ್ತಿರುತ್ತಾನೆ . ಮುಖ್ಯವಾಗಿ ಬಹುತೇಕ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದಕ್ಕಾಗಿ ಕಾನೂನು ಬಾಹಿರ ಭ್ರಷ್ಟಾಚಾರ ಕೃತ್ಯಗಳಲ್ಲಿ ತೊಡಗಿದ್ದಾರೆ . ಸ್ವಜನ ಪಕ್ಷಪಾತ , ಸ್ವಾರ್ಥಪರತೆ ಸಾರ್ವಜನಿಕ ಆಡಳಿತದಲ್ಲಿ ನಿರಂತರವಾಗಿರುವುದರಿಂದ ಹಣ ಮತ್ತು ಆಸ್ತಿಯ ದುರಾಸೆ ಪ್ರಮುಖ ಕಾರಣವಾಗಿದೆ .

2nd puc political science 5th chapter notes in kannada

2. ಸ್ವಾರ್ಥಪರತೆ : ‘ ಜನಸೇವೆಯೇ ಜನಾರ್ಧನ ಸೇವೆ ‘ ಎಂಬುದು ಅಧಿಕಾರದಲ್ಲಿರುವುದರಿಂದ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದೆ . ಇವರು ತಮ್ಮ ಲಾಭಕ್ಕಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಯೇ ವಿನಃ ಸಮಾಜದ ಉದ್ದೇಶವನ್ನು ಒಳಗೊಂಡಿಲ್ಲ . ಇಲ್ಲಿ ಸ್ವಾರ್ಥಪರತೆ ಎಂಬುದು ಪ್ರತಿ ಹಂತದಲ್ಲೂ ಕಂಡುಬರುತ್ತಿದೆ .

3. ಭ್ರಷ್ಟ ರಾಜಕಾರಣಿಗಳು : ಚುನಾವಣಾ ವ್ಯವಸ್ಥೆ ಎಷ್ಟೇ ಉತ್ತಮವಾಗಿದ್ದರೂ ಅದು ಸೂಕ್ತವಾಗಿ ಕಾರ್ಯರೂಪಕ್ಕೆ ಬಂದಿಲ್ಲ . ಮತಗಳನ್ನು ಖರೀದಿಸಲಾಗುತ್ತಿದೆ . ವಿವಿಧ ಆಮಿಶಗಳನ್ನು ತೋರುವ ಮೂಲಕ ಮತದಾರರನ್ನು ದಿಕ್ಕು ತಪ್ಪಿಸಲಾಗುತ್ತಿದೆ . ಇದು ಭ್ರಷ್ಟ ರಾಜಕೀಯ ವ್ಯಕ್ತಿಗಳು ಅಧಿಕಾರಕ್ಕೆ ಬರಲು ಅವಕಾಶ ಕಲ್ಪಿಸುತ್ತದೆ .

2nd puc political science 5th chapter notes in kannada

ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್

ಅದ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ

ಅದ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ

ಅದ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes

2nd puc political science 5th chapter notes in kannada

1 thoughts on “ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು । 2nd puc political science 5th chapter notes in kannada

Leave a Reply

Your email address will not be published. Required fields are marked *