ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಥಮ ಪಿ.ಯು.ಸಿ | 1st Puc History Chapter 1 Notes Question & Answer

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಥಮ ಪಿ.ಯು.ಸಿ | 1st Puc History Chapter 1 Notes Question & Answer

1st Puc History Notes In Kannada Chapter 1 , ಪ್ರಥಮ ಪಿ.ಯು.ಸಿ. ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಶ್ನೋತ್ತರಗಳು, 1st Puc History Chapter 1 Notes Question Answer Pdf Downbload 2023 Kseeb Solutions For Class 11 Chapter 1 Notes Pdf ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ, 1st puc history chapter 1 notes in kannada pdf download, 1st puc history notes in kannada

Spardhavani Telegram

1st Puc History Notes In Kannada Chapter 1

ಈ ಲೇಖನದಲ್ಲಿ ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ಪ್ರಶ್ನೋತ್ತರಗಳನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದ್ದು ಇದನ್ನು ಇನ್ನಷ್ಟು ಜನ ವಿದ್ಯಾರ್ಥಿಗಳಿಗೆ ಶೇರ್ ಮಾಡಿ.

1st Puc History Notes In Kannada Chapter 1

ಒಂದು ಅಂಕದ ಪ್ರಶ್ನೆಗಳು ಮತ್ತು ಉತ್ತರಗಳು 1st Puc History Notes In Kannada Chapter 1

ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?

ಇತಿಹಾಸದ ಪಿತಾಮಹ ಎಂದು ‘ಹೆರೊಡೋಟಸ್’ನನ್ನು ಕರೆಯಲಾಗಿದೆ.

‘ಹಿಸ್ಟರಿ’ ಪದದ ಅರ್ಥವೇನು?

ಹಿಸ್ಟರಿ ಪದದ ಅರ್ಥ ವಿಚಾರಣೆ ಅಥವಾ ತನಿಖೆ.

ಹೆರೊಡೋಟಸ್ ಯಾವ ದೇಶಕ್ಕೆ ಸೇರಿದವನು?

ಹೆರೊಡೋಟಸ್ ‘ಗ್ರೀಕ್’ ದೇಶಕ್ಕೆ ಸೇರಿದವನು.

‘ಹಿಸ್ಟರಿ’ ಪದವು ಯಾವ ಭಾಷೆಯಿಂದ ಬಂದಿದೆ ?

‘ಹಿಸ್ಟರಿ’ ಎಂಬ ಇಂಗ್ಲಿಷ್ ಪದವು ಎಂಬ ಗ್ರೀಕ್ ಪದದಿಂದ ಬಂದಿದೆ.

ದಿಸಿಟಿ ಆಫ್ ಗಾಡ್’ ಕೃತಿಯನ್ನು ಬರೆದವರು ಯಾರು?

ಸಂತ ಅಗಸ್ಟೈನ್ ‘ದ ಸಿಟಿ ಆಫ್ ಗಾಡ್‌’ (The City of God) ಕೃತಿಯನ್ನು ಬರೆದರು.

ಹೆರೊಡೋಟಸ್‌ನು ರಚಿಸಿದ ಕೃತಿ ಯಾವುದು?

ಹೆರೊಡೋಟಸ್‌ನು ರಚಿಸಿದ ಕೃತಿ ‘ಪರ್ಷಿಯನ್ ಕದನಗಳ ಇತಿಹಾಸ” (ದಿ ಹಿಸ್ಟರಿ ಆಫ್ ಪರ್ಷಿಯನ್ ವಾರ್ಸ್).

ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದವರು ಯಾರು?

ಕಾರ್ಲ್‌ಮಾರ್ಕ್ಷು ಇತಿಹಾಸದ ಆರ್ಥಿಕ ಅರ್ಥ ವಿವರಣೆಯನ್ನು ನೀಡಿದ್ದಾನೆ. ವಿವರಣೆಯನ್ನು ನೀಡಿದ್ದಾನೆ

ಕಾರ್ಲ್ ಮಾರ್ಕ್ಸ್ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ ?

ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವೇ. ಇತಿಹಾಸ” ಎಂಬುದು ಕಾರ್ಲ್‌ ಮಾರ್ಕ್ಸ್ನ ವ್ಯಾಖ್ಯಾನವಾಗಿದೆ.

ಇತಿಹಾಸವನ್ನು ‘ನಾಗರಿಕತೆಗಳ ಏಳು ಬೀಳಿನ ಕಥೆ’ ಎಂದು ವ್ಯಾಖ್ಯಾನಿಸಿದ್ದು ಯಾರು?

ಇತಿಹಾಸವನ್ನು ‘ನಾಗರಿಕತೆಗಳ ಏಳು ಬೀಳಿನ ಕಥೆ’ ಎಂದು ವ್ಯಾಖ್ಯಾನಿಸಿದವರು ‘ಆರ್ನಾಲ್ಡ್ ಟಾಯಿ’.

ಆರ್ನಾಲ್ಡ್ ಟಾಯಿ ರಚಿಸಿದ ಕೃತಿ ಯಾವುದು?

ಎ ಸ್ಟಡಿ ಆಫ್ ಹಿಸ್ಟರಿ

ಇತಿಹಾಸಕ್ಕೆ ಸಂಬಂಧಿಸಿದಂತೆ ಜೆ.ಬಿ. (J.B, Bury) ಯ ವ್ಯಾಖ್ಯೆ ಯಾವುದು?

ಇತಿಹಾಸ ಒಂದು ವಿಜ್ಞಾನ; ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ.”

ಇತಿಹಾಸಕ್ಕೆ ಜವಾಹ‌ಲಾಲ್ ನೆಹರು ನೀಡಿದ ವ್ಯಾಖ್ಯೆ ಏನು?

ನೆಹರು ಪ್ರಕಾರ – “ಅನಾಗರಿಕತೆಯಿಂದ ನಾಗರಿಕತೆಯಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ.”

ಇತಿಹಾಸದ ಉದ್ದೇಶವೇನು?

ಇತಿಹಾಸದ ಉದೇಶ ಸತ್ಯಾನ್ವೇಷಣೆ

ಇತಿಹಾಸ ಎಂದರೇನು?

ಗತಕಾಲದ ಘಟನೆಗಳ ದಾಖಲೆಯೇ ಇತಿಹಾಸ.

ಇತಿಹಾಸವನ್ನು ಮೊದಲಿಗೆ ವೈಜ್ಞಾನಿಕವಾಗಿ ಇತಿಹಾಸವನ ಬರೆಯುವ ಕಲೆಯನ್ನು ವಿಕಸನಗೊಳಿಸಿದವರು ಯಾರು?

ಇತಿಹಾಸವನ್ನು ಮೊದಲಿಗೆ ವೈಜ್ಞಾನಿಕವಾಗಿ ಬರೆಯುವ ಕಲೆಯನ್ನು ಗ್ರೀಕರು ವಿಕಸನಗೊಳಿಸಿದರು.

ಸಂತ ಅಗಸ್ಟೆನ್ ಯಾರು?

ಸಂತ ಅಗಸ್ಟೆನ್ ಒಬ್ಬ ಶೇಷ್ಠ ಕ್ರಿಶ್ಚಿಯನ್ ಸಂತ, ಇತಿಹಾಸಕಾರ ಮತ್ತು ಚಿಂತಕ.

ಪ್ರಪಂಚದ ಪ್ರಥಮ ಶೇಷ್ಠ ಇತಿಹಾಸ ತಜ್ಞನೆಂದು ಯಾರನ್ನು ಪರಿಗಣಿಸಲಾಗಿದೆ?

‘ಗ್ರೀಕ್ ದೇಶದ ಹೆರೊಡೋಟಸ್’ನನ್ನು ಪ್ರಪಂಚದ ಪ್ರಥಮ ಶೇಷ್ಠ ಇತಿಹಾಸ ತಜ್ಞನೆಂದು ಪರಿಗಣಿಸಲಾಗಿದೆ.

ಸಂತ ಅಗಸ್ಟೆನ್‌ನ ಇತಿಹಾಸದ ವ್ಯಾಖ್ಯೆಯನ್ನು ಬರೆಯಿರಿ?

ಅಗಸ್ಸೆನ್ ಪ್ರಕಾರ ಇತಿಹಾಸವೆಂದರೆ “ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆಯಾಗಿದ್ದು, ಅಂತಿಮವಾಗಿ ದೇವರು (ಶಿಷ್ಟ್ಯ), ಸೈತಾನನ (ದುಪ) ಮೇಲೆ ಸಾಧಿಸುವ ವಿಜಯದ ಕಥೆಯೇ ಇತಿಹಾಸ” ಎಂದಿದ್ದಾನೆ.

ನೆಹರುರವರು ರಚಿಸಿದ ‘ದಿ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ’ ಕೃತಿಯ ಪ್ರಾಮುಖ್ಯತೆ ಏನು?

ಈ ಕೃತಿಯು ನೆಹರುರವರು ರಾಜಕೀಯ ಬಂಧಿಯಾಗಿದ್ದಾಗ ತಮ್ಮ ಮಗಳು ಇಂದಿರಾಗಾಂಧಿಯವರಿಗೆ ಬರೆದ ಪತ್ರಗಳ ಸಂಗ್ರಹವಾಗಿದೆ.

Arnold Toynbee ಇತಿಹಾಸಕಾರ ಯಾವ ದೇಶದವನು?

ಆರ್ನಾಲ್ಡ್ ಟಾಯಿ ಎಂಬ ಇತಿಹಾಸಕಾರ ‘ಇಂಗ್ಲೆಂಡ್ ದೇಶದವನು.

‘ದಾಸ್ ಕ್ಯಾಪಿಟಲ್’ ಕೃತಿಯನ್ನು ಬರೆದವರು ಯಾರು?

ಕಾರ್ಲ್‌ ಮಾಕ್ರ್ರು

1st Puc History Notes In Kannada Chapter 1

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Notes In Kannada Chapter 1
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Notes In Kannada Chapter 1

1st Puc History Chapter 1 Notes Question & Answer

ಎರಡು ಅಂಕದ ಪ್ರಶ್ನೆಗಳು ಮತ್ತು ಉತ್ತರಗಳು 1st Puc History Notes In Kannada Chapter 1

ಕಾರ್ಲ್ರ ಮಾರ್ಕ್ಸ್ ರಚಿಸಿದ ಎರಡು ಕೃತಿಗಳನ್ನು ಹೆಸರಿಸಿ ?

(ಎ) ದಾಸ್ ಕ್ಯಾಪಿಟಲ್.
(ಬಿ) ಕಮ್ಯುನಿಸ್ಟ್ ಮ್ಯಾನಿಫೆಸ್ಟೋ

ಇತಿಹಾಸದ ಯಾವುದಾದರೂ ಎರಡು ವ್ಯಾಖ್ಯೆಗಳನ್ನು ಬರೆಯಿರಿ.

(ಎ) ಕಾರ್ಲ್‌ ಮಾರ್ಕ್ಸ್ ಪ್ರಕಾರ : ಇತಿಹಾ ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟ.
(ಬಿ) ಆರ್ನಾಲ್ಡ್ ಟಾಯಿ ಪ್ರಕಾರ : ಇತಿಹಾಸವು ನಾಗರಿಕತೆಗಳ ಏಳುಬೀಳಿನ ಕಥೆಯಾಗಿದೆ.

ಜವಾಹರ್‌ಲಾಲ್ ನೆಹರು ರಚಿಸಿದ ಪ್ರಸಿದ್ದ ಎರಡು ಕೃತಿಗಳನ್ನು ಬರೆಯಿರಿ.

(ಎ) ಡಿಸ್ಕವರಿ ಆಫ್ ಇಂಡಿಯಾ.
(ಬಿ) ದಿ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ.

ಇತಿಹಾಸ ಅಧ್ಯಯನದ ಎರಡು ಮಹತ್ವಗಳನ್ನು ತಿಳಿಸಿ ?

(ಎ) ಇತಿಹಾಸವು ಗತಕಾಲದ ಘಟನೆಗಳ ಸ್ತರಣೆಯಾಗಿದೆ. (ಬಿ) ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತದೆ. ಇತಿಹಾಸವು ಸ್ಫೂರ್ತಿಯ ಮೂಲವಾಗಿದೆ

ಇತಿಹಾಸದ ಪಿತಾಮಹನೆಂದು ಯಾರನ್ನು ಕರೆಯಲಾಗಿದೆ? ಅವನ ಕೃತಿಯನ್ನು ಹೆಸರಿಸಿ.

ಹೆರೊಡೋಟಸ್‌ನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗಿದೆ. ಇವರು “ಪರ್ಷಿಯನ್ ಕದನಗಳ ಇತಿಹಾಸ” ಎಂಬ ಕೃತಿಯನ್ನು ಬರೆದರು.

ಇತಿಹಾಸದ ಎರಡು ವೃತ್ತಿಪರ ಉಪಯೋಗಗಳನ್ನು ಬರೆಯಿರಿ.?

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇತಿಹಾಸ ಐಚ್ಛಿಕ ವಿಷಯವಾಗಿದೆ. ಆಡಳಿತ ಸುಧಾರಣೆಗಾಗಿ ರಾಜಕಾರಣಿಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಐತಿಹಾಸಿಕ ಜ್ಞಾನವನ್ನು ಒದಗಿಸುತ್ತದೆ. ಇತಿಹಾಸವು ಗತಕಾಲದ ವರದಿಯಾಗಿರುವುದರಿಂದ ಪತ್ರಿಕೋದ್ಯಮಿಗಳಿಗೆ, ವಕೀಲರಿಗೆ ಐತಿಹಾಸಿಕ ಜ್ಞಾನವನ್ನು ಒದಗಿಸುತ್ತದೆ.

1st Puc History Notes In Kannada Chapter 1 PDF

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಥಮ ಪಿ.ಯು.ಸಿ | 1st Puc History Chapter 1 Notes Question & Answer
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Notes In Kannada Chapter 1

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ ಪ್ರಥಮ ಪಿ.ಯು.ಸಿ

ಐದು ಅಂಕದ ಪ್ರಶ್ನೆಗಳು ಮತ್ತು ಉತ್ತರಗಳು 1st Puc History Notes In Kannada Chapter 1

ಇತಿಹಾಸದ ಅಧ್ಯಯನದ ಯಾವುದಾದರೂ ಐದು ಪ್ರಾಮುಖ್ಯತೆಗಳನ್ನು ವಿವರಿಸಿ.

ಇತಿಹಾಸದ ಅಧ್ಯಯನವು ಅನಾದಿಕಾಲದಿಂದ ಇಂದಿನವರೆಗಿನ ಮಾನವ ಜನಾಂಗದ ಸಂಸ್ಕೃತಿಯ ಬೆಳವಣಿಗೆಯ ವಿವರಣೆಗಳನ್ನು ನೀಡುತ್ತದೆ. ಮಾನಸಿಕ ಶಿಸ್ತನ್ನು ನೀಡುತ್ತದೆ. ಆದ್ದರಿಂದ ಇತಿಹಾಸದ ಅಧ್ಯಯನವು ಮಾನವನಿಗೆ ಅತಿ ಅವಶ್ಯಕವಾಗಿದೆ.


(1) ಇತಿಹಾಸವು ಗತಕಾಲದ ಘಟನೆಗಳ ಸ್ತರಣೆಯಾಗಿದೆ : ಇತಿಹಾಸದ ಅಧ್ಯಯನವು ವಿಶ್ವದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ ಮತ್ತು ಘಟನಾವಳಿಗಳನ್ನು ತಿಳಿಸುತ್ತದೆ. ಇದು ಮಾನವನ com
ಹೋರಾಟ, ಅವನ ಏಳಿಗೆ ಮತ್ತು ವೈಫಲ್ಯಗಳ ಬಗೆಗೆ ಮಾಹಿತಿ ನೀಡುತ್ತದೆ.’ ವಿಲ್ ಡ್ಯುರೆಂಟ್ ಪ್ರಕಾರ- “ಓಂದು ದೇಶದ ಗತಕಾಲವು ಒಬ್ಬ ವ್ಯಕ್ತಿಯ ಸ್ಮೃತಿಯಿದಂತೆ. ಶೃತಿ ಹೋದರೆ, ಅದರೊಂದಿಗೆ ಚಿತ್ರಸ್ಯಾಸ್ಯವೂ ಹೋಗುತ್ತದೆ” ಎಂದಿದ್ದಾರೆ. ಹೇಸ್ ಮತ್ತು ಮೂನ್‌ರವರು ಇತಿಹಾಸ ಕುರಿತು ಬರೆಯುತ್ತಾ “ವ್ಯಕ್ತಿಗೆ ನೆನಪು ಇದಂತೆ ಮನುಕುಲಕ್ಕೆ ಇತಿಹಾಸ ಅತಿ ಅವಶ್ಯಕ’ ಎಂದು ತಿಳಿಸಿದ್ದಾರೆ.


(2) ಇತಿಹಾಸವು ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತದೆ : ಧಾರ್ಮಿಕ ಸಹಿಷ್ಣುತೆಯ
ಬೆಳವಣಿಗೆಗೆ ಇತಿಹಾಸದ ಜ್ಞಾನತುಂಬಾ ಅಗತ್ಯವಾಗಿದೆ. ಆರ್ನಾಲ್ಡ್ ಟಾಯಿ ಮಾತಿನಲ್ಲಿ ಹೇಳುವುದಾದರೆ “ಭಾರತದ ಧರ್ಮ ಸಹಿಷ್ಣುತೆ ಮಾನವ ಜನಾಂಗದ ಉಳುವಿಗೆ ಏಕೈಕ ಮಾರ್ಗವಾಗಿದೆ”, ಧಾರ್ಮಿಕ ಸುಧಾರಕರಾದ ಕಬೀರ್, ಜೀಸಸ್ ಕ್ರೈಸ್ತ, ಗುರುನಾನಕ್, ಬಸವೇಶ್ವರ, ರಾಮಕೃಷ್ಣ ಪರಮಹಂಸರು ಮೊದಲಾದವರು ಸಮಾಜದಲ್ಲಿ ಧಾರ್ಮಿಕ ಸಾಮರಸ್ಯವನ್ನು ಪ್ರಚಾರ ಮಾಡಿದರು. ಸಮಾಜದಲ್ಲಿಯ ಶಾಂತಿ ಮತ್ತು ಸೌಹಾರ್ದತೆಗೆ ಧಾರ್ಮಿಕ ಸಹಿಷ್ಣುತೆ ಅವಶ್ಯಕವಾಗಿದೆ.


(3) ಇತಿಹಾಸವು ಸ್ಫೂರ್ತಿಯ ಮೂಲವಾಗಿದೆ : ಇತಿಹಾಸವು ಮಾನವನ ಅನುಭವಗಳ ಸಾಗರವಿದಂತೆ.
ಇತಿಹಾಸವು ಅಸಾಧಾರಣ ಸ್ತ್ರೀ-ಪುರುಷರ ಸಾಹಸ, ಸಾಧನೆ, ತ್ಯಾಗ ಮತ್ತು ಚಿಂತನೆಗಳ ಬಗ್ಗೆ ತಿಳಿಸುತ್ತದೆ. ಇಂದಿನ ಜನಾಂಗಕ್ಕೆ ಸ್ಪೂರ್ತಿ, ಬದುಕಿಗೆ ಒಂದು ಅರ್ಥವನ್ನು ಅದು ನೀಡುತ್ತದೆ. ಮಹಾವೀರ, ಬುದ್ಧ, ವಿವೇಕಾನಂದ, ನೆಲ್ಸನ್ ಮಂಡೇಲರ ಆದರ್ಶಗಳು ಮತ್ತು ಅವರ ಬೋಧನೆಗಳು, ಉಪದೇಶಗಳು ಜನರ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಥಾಮಸ್‌ ಕಾರ್ಲೈಲ್ ಪ್ರಕಾರ – “ಮಹಾಪುರುಷರು ಇಂದಿಲ್ಲ. ಆದರೆ ಪ್ರಪಂಚದ ಇತಿಹಾಸ ಮತ್ತು ಮಹಾನ್ ಪುರುಷರ ಆತ್ಮಚರಿತ್ರೆಗಳು ಮಾತ್ರ ಇನ್ನೂ ಉಳಿದಿವೆ” ಎಂದು ವ್ಯಾಖ್ಯಾನಿಸಿದ್ದಾರೆ.


(4) ಇತಿಹಾಸವು ದೇಶಾಭಿಮಾನವನ್ನು ಮೂಡಿಸುತ್ತದೆ : ಒಂದು ದೇಶದ ಸಾಂಸ್ಕೃತಿಕ
ಅಂಶಗಳು ರಾಷ್ಟ್ರೀಯತೆಯ ಅಡಿಗಲ್ಲುಗಳಾಗಿವೆ. ಪರಂಪರೆಯ ಅರಿವು ವ್ಯಕ್ತಿಯನ್ನು ಹೆಮ್ಮೆಪಡುವಂತೆ ಮಾಡುತ್ತದೆ. ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಪಟಂತೆ 19ನೇ ಶತಮಾನದಲ್ಲಿ ನಡೆದ

ಸಂಶೋಧನೆಗಳು ಭಾರತದ ರಾಷ್ಟ್ರೀಯತೆಗೆ ತಳಪಾಯ ಹಾಕಿದವು, ಕಿತ್ತೂರು ಚೆನ್ನಮ್ಮ, ಲಕ್ಷ್ಮೀಬಾಯಿ, ತಿಲಕ್, ಭಗತ್‌ಸಿಂಗ್‌, ಸುಭಾಷ್ ಚಂದ್ರ ಬೋಸ್ ಮತ್ತು ಗಾಂಧೀಜಿಯವರ ಜೀವನ ಮತ್ತು ಸಾಧನೆಗಳು ನಮ್ಮಲ್ಲಿ ರಾಷ್ಟ್ರಾಭಿಮಾನವನ್ನು ಮೂಡಿಸುತ್ತದೆ. ಹೀಗೆ ದೇಶಾಭಿಮಾನವನ್ನು ಮೂಡಿಸುವಲ್ಲಿ ಇತಿಹಾಸದ ಅಧ್ಯಯನ ಪ್ರಮುಖವಾಗಿದೆ.

(5) ಇತಿಹಾಸವು ಸಮಾಜ ವಿಜ್ಞಾನಗಳ ಪ್ರಯೋಗಶಾಲೆ : ಇತಿಹಾಸವು ಎಲ್ಲಾ ಸಮಾಜ
ವಿಜ್ಞಾನಗಳ ಬೇರು, ಅವುಗಳಿಗೆ ಬೇಕಾದ ಐತಿಹಾಸಿಕ ಮಾಹಿತಿಯನ್ನು ಒದಗಿಸುತ್ತದೆ. ಇತಿಹಾಸವು ಅವುಗಳಿಗೆ ಜ್ಞಾನವನ್ನು ಒದಗಿಸುವ ಪ್ರಯೋಗಶಾಲೆಯಂತಿದೆ. ವಿಶ್ವಸಂಸ್ಥೆಯ ಬಹುಪಾಲು ರಾಜಕೀಯ ತೀರ್ಮಾನಗಳು ಇತಿಹಾಸದಿಂದ ಕಲಿತ ಪಾಠಗಳ ಮೇಲೆ ಅವಲಂಬಿತವಾಗಿವೆ.

(6) ಇತಿಹಾಸವು ಉದಾತ್ತ ಧೈಯಗಳನ್ನು
ಬೆಳೆಸುತ್ತದೆ : ಉದಾತ್ತ ಆದರ್ಶಗಳನ್ನು
ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಲು ಇತಿಹಾಸದ ಅಧ್ಯಯನವು ಸಹಕಾರಿಯಾಗಿದೆ. ಅಶೋಕ, ಜೀಸಸ್ ಕ್ರೈಸ್ತ, ಪ್ರವಾದಿ ಮಹಮ್ಮದ್, ಕನಕದಾಸ, ಡಾ. ಬಿ.ಆ‌ರ್. ಅಂಬೇಡ್ಕರ್, ಮದರ್ ಥೆರೆಸಾ ಮೊದಲಾದ ಮಹಾನ್ ಆದರ್ಶವ್ಯಕ್ತಿಗಳ ಬಗೆಗೆ ಇತಿಹಾಸ ವಿವರಣೆ ನಿಡುತ್ತದೆ. ಉದಾತ್ತ ಧೈಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸತ್ಯಸಂಧತೆ, ಅಹಿಂಸೆ, ಪ್ರೀತಿ,

ಕ್ಷಮಾಗುಣ, ಧಾರ್ಮಿಕ ಸಹಿಷ್ಣುತೆ ಇವುಗಳನ್ನು ಇತಿಹಾಸವು ಆಧುನಿಕ ಪೀಳಿಗೆಗೆ ಬಳುವಳಿಯಾಗಿ ನೀಡಿದೆ. “ಇತಿಹಾಸವು ಉದಾತ್ತ ಧೈಯಗಳ ಗಣಿಯಾಗಿದೆ ಮತ್ತು ಸನ್ಮಾರ್ಗ ತೋರುವ ದಾರಿದೀಪವಾಗಿದೆ” ಎಂದು ಇತಿಹಾಸಕಾರ ಜಾರ್ಜ್ ಸಂತಯನು ಅಭಿಪ್ರಾಯಪಟ್ಟಿದ್ದಾರೆ.’

(7) ಇತಿಹಾಸವು ನಮ್ಮ ದೃಷ್ಟಿಕೋನವನ್ನು
ವಿಸ್ತರಿಸುತ್ತದೆ : ಇತಿಹಾಸದ ಅಧ್ಯಯನವು ನಮಗೆ ಬೇರೆ ಬೇರೆ ದೇಶಗಳ ಜನರು, ಸಂಪ್ರದಾಯ, ಸಂಸ್ಕೃತಿ ಮತ್ತು ನಾಗರಿಕತೆಗಳ ಬಗ್ಗೆ ಹೆಚ್ಚು ಜ್ಞಾನವನ್ನು ಸಂಪಾದಿಸಲು ಸಹಕಾರಿಯಾಗಿದೆ ಮತ್ತು ಮನುಕುಲದ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ಇತಿಹಾಸದಲ್ಲಿ ದಾಖಲಾದ ಕಲೆ, ವಾಸ್ತುಶಿಲ್ಪ, ಸಾಹಿತ್ಯ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸುತ್ತದೆ.

(8) ಇತಿಹಾಸವು ವಿಶ್ವಶಾಂತಿಯನ್ನು ಬೆಳೆಸುತ್ತದೆ :
ಜಗತ್ತು ಎರಡು ಮಹಾಯುದ್ಧಗಳ ದುಷ್ಪರಿಣಾಮಗಳನ್ನು ಕಂಡಿದೆ. ಮೂರನೇ ಮಹಾಯುದ್ಧವಾದರೆ ಪ್ರಪಂಚದ ವಿನಾಶವಾಗುವುದು ಖಚಿತ. ಸಂಸ್ಕೃತಿ ಅರಿವಿಲ್ಲದಿರುವುದು ಮತ್ತು ಸಂಕುಚಿತ ರಾಷ್ಟ್ರೀಯತೆಯು ಯುದ್ಧಗಳಿಗೆ ಕಾರಣ ಎಂದು ಇತಿಹಾಸ ತೋರಿಸಿದೆ. ಅಣ್ವಸ್ತ್ರಗಳು ಮತ್ತು ಯುದ್ಧ ಸಂಬಂಧಿತ ಉಪಕರಣ ಸಂವಹಕ್ಕೆ ವಿಶ್ವದ ರಾಷ್ಟ್ರಗಳ ನಡುವೆ ಪೈಪೋಟಿ ನಡೆಯುತ್ತಿದೆ.

1st Puc History Notes In Kannada Chapter 1 Notes Kannada

ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Notes In Kannada Chapter 1
ಇತಿಹಾಸದ ಅರ್ಥ ಮತ್ತು ವ್ಯಾಖ್ಯೆ ಪಾಠದ ನೋಟ್ಸ್ | 1st Puc History Notes In Kannada Chapter 1

ಇತಿಹಾಸಕಾರರು ನೀಡಿದ ಇತಿಹಾಸದ ವ್ಯಾಖ್ಯೆಗಳನ್ನು ಬರೆಯಿರಿ.

ಗತಕಾಲದ ಘಟನೆಗಳ ದಾಖಲೆಯೇ ಇತಿಹಾಸ. ಆದರೆ ಅಮೆರಿಕಾದ ಇತಿಹಾಸಕಾರ ವಿಲ್ ಡ್ಯುರೆಂಟ್‌ರವರಿಗೆ ಹಲವಾರು ಇತಿಹಾಸಕಾರರು ಇತಿಹಾಸವನ್ನು ಕುರಿತು ತಮ್ಮದೇ ಆದ ದೃಷ್ಟಿ ಕೋನಗಳಲ್ಲಿ ವ್ಯಾಖ್ಯಾನಿಸಿದ್ದಾರೆ. ಪ್ರಮುಖ ಇತಿಹಾಸಕಾರರು ನೀಡಿದ ವ್ಯಾಖ್ಯಾನಗಳು ಈ ಕೆಳಕಂಡಿವೆ.
(1) ಹೆರೊಡೋಟಸ್ ಪ್ರಕಾರ: “ಮುಂದಿನ ಪೀಳಿಗೆಯು
ನೆನಪಿಡಬೇಕಾದ ಮಹಾನ್ ವೀರರ ಅಥವಾ ಮಹತ್ವಪೂರ್ಣವಾದ ಘಟನೆಗಳ ದಾಖಲೆಯೇ ಇತಿಹಾಸ.”

(2) ಸಂತ ಆಗಸೊನ್ : “ಇತಿಹಾಸವು ದೇವರು ಮತ್ತು ಸೈತಾನನ ನಡುವಿನ ಸಂಘರ್ಷದ ಕಥೆಯಾಗಿದ್ದು, ಅಂತಿಮವಾಗಿ, ದೇವರು (ಶಿಷ್ಟ್ಯ), ಸೈತಾನನ (ದುಷ್ಕೃ) ಮೇಲೆ ಸಾಧಿಸುವ ವಿಜಯದಲ್ಲಿ ಪರ್ಯಾವಸನಗೊಳ್ಳುತ್ತದೆ.”
(3) ಕಾರ್ಲ್‌ಮಾರ್ಕ್ಸ್ ಪ್ರಕಾರ : “ಇತಿಹಾಸವೆಂದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವಾಗಿ ಇತಿಹಾಸ.”

(4) ಜೆ.ಬಿ. ಬ್ಯೂರಿಯವರ ವ್ಯಾಖ್ಯಾನ : “ಇತಿಹಾಸವು
ಒಂದು ವಿಜ್ಞಾನ; ಹೆಚ್ಚು ಅಲ್ಲ, ಕಡಿಮೆಯೂ ಅಲ್ಲ.”

(5) ಆರ್ನಾಲ್ಡ್ ಟಾಯಿ ಯವರ ಪ್ರಕಾರ :
ಇತಿಹಾಸವು ನಾಗರಿಕತೆಗಳ ಏಳು – ಬೀಳಿನ ಕಥೆ.”
(6) ಜವಾಹರ್‌ಲಾಲ್ * ನೆಹರು ನೆಹರು ಪ್ರಕಾರ ಪ :
ಅನಾಗರಿಕತೆಯಿಂದ ನಾಗರಿಕತೆಯಡೆಗೆ ಸಾಗಿದ ಮಾನವನ ಕಥೆಯೇ ಇತಿಹಾಸ ಎಂದು ವ್ಯಾಖ್ಯಾನಿಸಿದ್ದಾರೆ. ಅಂತಿಮವಾಗಿ ಹೇಳುವುದಾದರೆ ಇತಿಹಾಸವು ಮಾನವನ ಎಲ್ಲಾ ಮಹತ್ವಪೂರ್ಣ ಚಟುವಟಿಕೆಗಳ, ವಿವಿಧ ಆಯಾಮಗಳ ಅಧ್ಯಯನವಾಗಿದ್ದು ‘ಕಾಲ’ ಮತ್ತು ‘ಸ್ಥಳಗಳಿಂದ ಪ್ರತಿಬಂಧಿತವಾಗಿದೆ.

ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *