ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes

ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes

10th kannada lesson yuddha notes, 10th standard kannada 1st lesson, 10th class kannada yuddha question answer,ಯುದ್ಧ ಪಾಠ,siri kannada text book, 10ನೇ ತರಗತಿ ಯುದ್ಧ ಪಾಠದ ಪ್ರಶ್ನೆ ಉತ್ತರಗಳು, 10th Kannada Yuddha Lesson Question Answer Notes, 10ನೇ ತರಗತಿ ಯುದ್ಧ ಕನ್ನಡ ನೋಟ್ಸ್, 10th Kannada Yuddha Lesson Question Answer Notes 10ನೇ ತರಗತಿ ಯುದ್ಧ ಕನ್ನಡ ನೋಟ್ಸ್, 10th Standard Pata prashn uttar, lesson notes pdf, 10th Class Yuddha Lesson Notes PDF Download

10th Kannada Lesson Yuddha Notes

Spardhavani Telegram

ಅಬೂಬಕ್ಕರ್ ಅವರು ಎಷ್ಟರಲ್ಲಿ ಜನಿಸಿದರು? – ಕ್ರಿ.ಶ. 1936 ರಂದು ಜನಿಸಿದರು.

ಸಾರಾ ಅಬೂಬಕ್ಕರ್ ಅವರು ಯಾವ ಊರಿನಲ್ಲಿ ಜನಿಸಿದರು?- ಕಾಸರಗೋಡು ಎಂಬ ಊರಿನಲ್ಲಿ
ಜನಿಸಿದರು.

ಶ್ರೀಮತಿ ಸಾರಾ ಅಬೂಬಕ್ಕರ್ ಅವರು ಯಾವುದರಲ್ಲಿ ಜನಪ್ರಿಯತೆ ಗಳಿಸಿದ್ದಾರೆ- ಖ್ಯಾತ ಕತೆಗಾರ್ತಿ ಹಾಗೂ ಕಾದಂಬರಿಗಾರ್ತಿಯಾಗಿ
ಜನಪ್ರಿಯತೆ ಗಳಿಸಿದ್ದಾರೆ.

ಶ್ರೀಮತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳು ಯಾವುವು? –

ಸಹನಾ

ಕದನ ವಿರಾಮ

ವಜ್ರಗಳು

ಸುಳಿಯಲ್ಲಿ ಸಿಕ್ಕವರು

ತಳ ಒಡೆದ ದೋಣಿಯಲಿ.

ಸಾರಾ ಅಬೂಬಕ್ಕರ್ ಅವರ ಕಥಾ ಸಂಕಲನಗಳು ಯಾವುವು? –

ಚಪ್ಪಲಿಗಳು

ಖೆಡ್ಡಾ

ಅರ್ಧರಾತ್ರಿಯಲ್ಲಿ
ಹುಟ್ಟಿದ ಕೂಸು

ಪಯಣ ಮುಂತಾದ ಕಥಾ ಸಂಕಲನಗಳನ್ನು ಬರೆದಿದ್ದಾರೆ. 

ಶ್ರೀಮತಿ ಸಾರಾ ಅಬೂಬಕ್ಕರ್ ಅವರ ಸಾಹಿತ್ಯ ಕೃಷಿಗಾಗಿ ಲಭಿಸಿದ ಪ್ರಶಸ್ತಿ ಯಾವುದು? – ಕನ್ನಡ  ಸಾಹಿತ್ಯ ಪರಿಷತ್ತಿನ ‘ನೃಪತುಂಗ ಪ್ರಶಸ್ತಿ’ ಲಭಿಸಿದೆ.

ಬಹು ಆಯ್ಕೆ ಪ್ರಶ್ನೆಗಳು 10th Kannada Lesson Yuddha Notes

10ನೇ ತರಗತಿ ಯುದ್ಧ ಪಾಠದ ಪ್ರಶ್ನೋತ್ತರಗಳು

10th Kannada Lesson Yuddha Notes

ರಾಹಿಲನು ಯಾರು ?

ರಾಹಿಲನು ಒಬ್ಬ ವೈದ್ಯ ಸೈನಿಕ.

ತುರ್ತುಪರಿಸ್ಥಿತಿ ನಿರ್ವಹಣೆಗೆ ರಾಹಿಲನು ಭದ್ರವಾಗಿ ಹಿಡಿದುಕೊಂಡಿದ್ದೇನು ?

ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಬೇಕಾದ ಔಷಧ ಮತ್ತು ಶಾಸ್ತ್ರಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನುಭದ್ರವಾಗಿ ಹಿಡಿದುಕೊಂಡಿದ್ದನು.

ಗಡಿ ಪ್ರದೇಶದಲ್ಲಿ ‘ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ ?

ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ‘ಬ್ಲಾಕ್ ಔಟ್’ ನಿಯಮವನ್ನುಪಾಲಿಸಲಾಗುತ್ತದೆ.

ಮುದುಕಿಯ ಎದುರಿಗೆ ರಾಹಿಲನು ನುಡಿದ ಗಂಭೀರವಾದ ಮಾತು ಯಾವುದು ?

ರಾಹಿಲನು ಮುದುಕಿಯ ಎದುರಿಗೆ “ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ , ಸಂಕಷ್ಟಕ್ಕಿಡಾದ ಮನುಷ್ಯರ ಕಡೆಯವನು”ಎಂದುಗAಭೀರವಾದ ಮಾತನ್ನು ನುಡಿದನು.

ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?

“ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯಮಾಡುವುದೇ ಯುದ್ಧದ ಪರಿ” ಎಂದು ಗೊಣಗಿಕೊಂಡು ಬಾಗಿಲು ತೆರೆದಳು.

ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes
ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes

ಇತರೆ ಹೆಚ್ಚುವರಿ ಪ್ರಶ್ನೋತ್ತರಗಳು 10th Kannada Lesson Yuddha Notes

ಮುದುಕಿ ತನ್ನ ಮಗ ಎಲ್ಲಿಗೆ ಹೋಗಿದ್ದಾನೆಂದು ರಾಹಿಲನಿಗೆ ತಿಳಿಸಿದಳು ?
ಮುದುಕಿ ತನ್ನ ಮಗ ಯುದಕ್ಕೆ ಹೋಗಿದ್ದಾನೆಂದು ರಾಹಿಲನಿಗೆ ತಿಳಿಸಿದಳು

ಮುದುಕೀಯ ಕಣ್ಣುಗಳು ಕ್ಷಣಕಾಲ ರೋಷದಿಂದ ಏಕೆ ಕೆರಳಿದವು?
ತಮ್ಮ ಮನೆಗೆ ಬಂದಿರುವಾಗ ತಮ್ಮವನಲ್ಲ, ತಮಗೆ ,ತಮ್ಮ ದೇಶಕ್ಕೆ ದ್ರೋಹ ಬಗೆಯುವವನು ಎಂದು ಮುದುಕೀಯ
ಕಣ್ಣುಗಳು ಕ್ಷಣಕಾಲ ರೋಗ ದಿಂದ ಕೆರಳಿದವು .

ಹೆಂಗಸಿಗೆ ರಾಹಿಲನು ಏನೆಂದು ಅಂಗಲಾಚಿದನು ?
ರಾಹಿಲನು ಹೆಂಗಸಿಗೆ“ದಯವಿಟ್ಟು ಬಾಗಿಲು ತೆಗೆಯಿರಿ. ನಾನು ಗಾಂಯಗೊಂಡಿದ್ದೇನೆ. ಪ್ಲೀಸ್.”ಎಂದು ಅಂಗಲಾಚಿದನು.

ಬ್ಲಾಕ್ ಔಟ್ ನಿಯಮ ಎಂದರೇನು
ಯುದ್ಧದ ಕಾಲದಲ್ಲಿ ರಾತ್ರಿವೇಳೆ ಶತ್ರು ಸೈನಿಕರು ವೈಮಾನಿಕ ದಾಳಿಮಾಡಲು ಅವಕಾಶವಾಗದಂತೆ ವಿದ್ಯುತ್ ದೀಪ,ಬೆಂಕಿಯನ್ನು ಉರಿಸದೆ ಕತ್ತಲಿನಲ್ಲಿದ್ದು
ರಕ್ಷಿಸಿಕೊಳ್ಳುವುದನ್ನು ‘ಬ್ಲಾಕ್ ಔಟ್ ನಿಯಮ ’ ಎಂದು ಕರೆಯಲಾಗುತ್ತದೆ.

ಯಾರ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆ ಯಾಕೆ ಆಗುತ್ತದೆ ?
ಯುದ್ದ್ಧದ ಹೆಸರಿನಲ್ಲಿ ಮನುಷ್ಯ ಜೀವಿಗಳ ಸಾಮೂಹಿಕ ಕೊಲೆ ಯಾಕೆ ಆಗುತ್ತದೆ.

ಹೆಚ್ಚುವರಿ ಪ್ರಶ್ನೋತ್ತರಗಳು 10th Kannada Lesson Yuddha Notes

ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ. 10th kannada lesson yuddha notes

 1. ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
  ಮಹಿಲೇಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ“ಅಯ್ಯೋ ಆ ಮಹಿಳೆ ಯಾವ ರೀತಿ ಅಪಾಯದಲ್ಲಿ ಸಿಲುಕಿದ್ದಾಳೆ? ಆ ಮನೆಯೊಳಗೆ ಗೆ ಏನು
  ಸಂಭವಿಸುತ್ತಿದೆ ? ನಾನು ಈಗ ಆ ಮನೆಯ ಕದವನ್ನು ತಟ್ಟಿದರೆ ಪರಿಣಾಮ ಏನಾಗಬಹುದು ?ವಿಮಾನ ದಾಳಿಯಿಂದ ತಪ್ಪಿಸಿಕೊಳ್ಳಲು‘ಬ್ಲಾಕ್
  ಔಟ್’ ನಿಯಮ ಪಾಲಿಸಲಾಗುತ್ತಿದೆ. ಇಂತಹ ಈ ಸಂದರ್ಭದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ? ಎಂಬ ಪ್ರಶ್ನೆಗಲು
  ಮೂಡಿದವು.
 2. ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
  ಮುದುಕಿಯು ರಾಹಿಲನ ಬಳಿ“ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ
  ವಧುವಾಗಿ ಈ ಊರನ್ನು ಪ್ರವೇಶಿಸಿದೆ. ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು ಆಸ್ತಿ ನಮಗೆ ಸಾಕಾಗುವಷ್ಟು ಇತ್ತು. ಈಗಲೂ ಇದೆ.
  ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬಿಡಬೇಕಲ್ಲ?ಯುದ್ದವಂತೆ ಯುದ್ಧ , !” ಎಂದು ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ
  ಮಾತುಗಳಾಗಿವೆ.
 3. ನಿರ್ಜೀವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
  ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿ “ಇಷ್ಟು ವರ್ಷಗಳಿಂದ ಹಂಬಲಿಸಿ ಹುಟ್ಟಿದ ಮಗು ಕೊನೆಗೂ ದಕ್ಕಲಿಲ್ಲವಲ್ಲ? ಈ
  ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ
  ಕೊಡುತ್ತೀಯಾ?” ನಿರಾಶೆಯಿಂದ ಹೇಳಿದಳು.
 4. ಡಾಕ್ಟರ್‌ಗೆ ವಿಮಾನದ ಪೈಲಟ್ ಏನು ಹೇಳಿದನು? ಡಾಕ್ಟರ್‌ಗೆ ವಿಮಾನದ ಪೈಲಟ್ “ ಡಾಕ್ಟರ್ ! ರೇಡಿಯೋ ಸಮನಾಗಿ ಕಾರ್ಯನಿರ್ವಹಿಸುತ್ತಿಲ್ಲ. ಭೂಪ್ರದೇಶದೊಂದಿಗೆ ಸಂಪರ್ಕ ಬೆಳೆಸಲು ಸಾಧ್ಯವಾಗುತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣ ಎಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ ”ಎಂದು ಹೇಳಿದನು.

ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ. 10th Kannada Lesson Yuddha Notes

 1. ಮುದುಕಿಯು ತನ್ನ ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ಹೇಗೆ ವಿವರಿಸಿದಳು?
  ರಾಹಿಲನು ಮುದುಕಿಗೆ ನಿಮ್ಮ ಮಗ ಈಗ ಎಲ್ಲಿದ್ದಾನೆಂದು ಕೇಳಿದಾಗ, ಮುದುಕಿಯು “ನನ್ನ ಮಗ ಯುದ್ಧಕೆ ಹೋಗಿದ್ದಾನೆ ! ನನ್ನ ಮಗ ಇನ್ನೂ
  ಚಿಕ್ಕ ಹುಡುಗನಾಗಿದ್ದಾಗ ಅವನ ತಂದೆಯನ್ನುಯುದ್ಧಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಹಿಂತಿರುಗಲಿಲ್ಲ. ಎದೆ ತುಂಬ ಬೂದಿ ಮುಚ್ಚಿದ
  ಕೆಂಡ, ಎದೆಯ ಗಯಾ ಇಂದಿಗೂ ಇದೆ, ನೋಡು. ಎಲ್ಲ ದುಃಖ ನುಂಗಿಕೊ೦ಡು ಮಗನನ್ನು ಸಾಕಿ ಸಲಹಿದೆ. ಮದುವೆಯನ್ನೂ ಮಾಡಿದೆ. ಈಗ
  ಐದಾರು ವರ್ಷಗಳ ಬಳಿಕ ಸೊಸೆ ಗರ್ಭಿಣಿಯಾದಳು . ಮನೆಯಲ್ಲೊಂದು ಪುಟ್ಟ ಮಗುವಿಗೆ ಅಳು ಕೇಳಲು ನನ್ನ ಮಗನು ತುದಿಗಾಲಲ್ಲಿ ನಿಂತು
  ಕಾಯುತ್ತಿದ್ದನು. ಅಷ್ಟರಲ್ಲಿ ಬಂತು ಯುದ್ಧ ! ಅವನೊಮ್ಮೆ ಹಿಂತಿರುಗಿ ಬಂದಿದ್ದರೆ ಸಾಕಾಗಿತ್ತು. ಈ ವಿಷಯ ತಿಳಿದು ಅವನೆಷ್ಟು ಸಂಪುಟ
  ಪಡುತ್ತಾನೋ…” ಎಂದು ಮಗನು ಯುದ್ಧಕ್ಕೆ ಹೋದ ಸಂದರ್ಭವನ್ನು ವಿವರಿಸಿದಳು.
 2. ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯು ರಾಹಿಲನಿಗೂ ಮಾಡಿದ ಸಹಾಯವನ್ನು ಸಂಕ್ಷಿಪ್ತವಾಗಿ ವಿವರಿಸಿ.
  ಯುದ್ಧದಲ್ಲಿ ಗಯಾಗೊಂಡ ರಾಹಿಲನು ಮುದುಕೀಯ ಮನೆಗೆ ಬರುತ್ತಾನೆ. ಆ ¸ ಸಂದರ್ಭದಲ್ಲಿ ಮುದುಕಿಯು ಸೊಸೆ ಹೆರಿಗೆ ಬೇನೆ ತಿನ್ನುತ್ತಿದ್ದಳು.
  ಇದನ್ನು ತಿಳಿದ ರಾಹಿಲ “ಅಮ್ಮ ನಾನೋರ್ವ ಡಾಕ್ಟರ್ ಆಕೆಯನ್ನು ಪರೀಕ್ಷಿಸಲೇ” ಎಂದು ಕೇಳಿದಾಗ ಮುದುಕಿಗೆ ಸಂತೋಷವಾಯಿತು. ನಂತರ
  ಮುದುಕಿ ರಾಹಿಲನ ಒದ್ದೆ ಬಟ್ಟೆಗಳನ್ನು ನೋಡಿ ತನ್ನ ಮಗನ ಬಟ್ಟೆಗಳನ್ನು ತಂದು ಕೊಟ್ಟಳು. ರಾಹಿಲ ಒದ್ದೆಯಾಗಿದೆ ಬಟ್ಟೆ ಬದಲಿಸಿಕೊಂಡು
  ಮುದುಕಿಯು ಸೊಸೆಯನು ಪರೀಕ್ಷೆಮಾಡ ತೊಡಗಿದ. ಬಹಳ ಹೊತ್ತಿನ ಪ್ರಯತ್ನದ ಬಳಿಕ ಮಗುವನ್ನು ಹೊರ ತೆಗೆದು ಸೊಸೆಯ ಜೀವ
  ಉಳಿಸಿದನು. ಆದರೆ ಮಗು ನಿರ್ಜೀವವಾಗಿತ್ತು. ನಂತರ ಮುದುಕಿಯು ಒಂದೆರಡು ಪುಟ್ಟ ಹಲಗೆ ತುಂಡುಗಳನ್ನು ಕೊಟ್ಟಳು. ಅವಗಳಿಂದ
  ನೋವಾಗಿದ್ದ ಕಾಲುಗಳ ಆರೈಕೆ ಮಾಡಿಕೊಂಡನು. ಇದೇ ಸಮಯಕ್ಕೆ ಶತ್ರುದೇಶದ ಸೈನಿಕರು ರಾಹಿಲನನ್ನು ಹುಡುಕಿಕೊಂಡು ಬಂದರು. ಆಗ
  ಮುದುಕಿಯು ರಾಹಿಲನ ಅಸಹಾಯಕತೆಯನ್ನು ದನೀಯವಾದ ನೋಟವನ್ನು ನೋಡಿ ಯುದ್ಧಕ್ಕೆ ಹೋದ ತನ್ನ ಮಗನಂತೆ ಭಾವಿಸಿಕೊಂಡು
  ಸೊಸೆ ಮಲಗಿದ ಕೋಣೆಯ ಮಂಚದಡಿ ಕಳುಹಿಸಿ ಅವರಿಂದ ರಕ್ಷಸಿದಳು. ಶತ್ರುಸೈನಿಕರು ಹೋದ ಮೇಲೆ ರಾಹಿಲನು ರಾತ್ರಿ ಒಂದು ಕೋಣೆಯಲ್ಲಿ
  ಮಲಗುವಂತೆ ಏರ್ಪಾಟು ಮಾಡಿದಳು.ಒಂದೆರಡು ದಿನಗಳಲ್ಲಿ ಪರಸ್ಪರರಲ್ಲಿ ವಿಶ್ವಾಸ ಮೂಡಿತು.ಇಬ್ಬರೂ ಪರಸ್ಪರ ಸುಖ-ದುಃಖಗಳಗಳನ್ನೂ
  ಹಂಚಿಕೊಂಡರು. ಹೀಗೆ ರಾಹಿಲನು ಮುದುಕಿಯ ಕುಟುಂಬಕ್ಕೂ, ಮುದುಕಿಯು ರಾಹಿಲನಿಗೂ ಪರಸ್ಪರ ಸಹಾಯವನ್ನು ಮಾಡಿದರು.
 3. ಯುದ್ಧದಿಂದ ಆಗುವ ಅನಾಹುತಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬರೆಯಿರಿ.
  ಯುದ್ಧದದಲ್ಲಿ ಇತಿಹಾಸದ ಉದ್ದಕ್ಕೂ ಇರುವಂತಹದ್ದೇ ಆಗಿದೆ. ಸಾಮ್ರಾಜ್ಯ ವಿಸ್ತರಣೆ, ಲೋಭ, ಶಕ್ತಿಯ ಪ್ರದರ್ಶನ, ಕೌಟುಂಬಿಕ ಕಲಹಗಳು, ದ್ವೇಷ
  ಸಾಧನೆ ಮುಂತದವು ಯುದ್ಧಕ್ಕೆ ಕಾರಣವಾಗುತ್ತವೆ. ಉದಾಹರಣೆಗೆ ದ್ವೇಷಸಾದನೆಯನ್ನು ಕೌರವರಿಗೂ ಪಾಂಡವರಿಗೂಯುದ್ಧವಾಗಿ ಕೌರವ
  ವಂಶ ನಾಶವಾಯಿತು. ಸಾಮ್ಯಾಜ್ಯ ವಿಸ್ತರಣೆ ಮಾಡಲು ಅಲೆಕ್ಸಾಂಡರ್ಯುದ್ದ ಮಾಡಿದನು. ಭಾರತದ ಸಂಪತ್ತಿನ ಲೋಭದಿಂದ ಘಜ್ನಿ
  ಮಹಮ್ಮದ್ ಭಾರತದ ಮೇಲೆ ದಂಡೆತ್ತಿ ಬಂದ ಭಾರತಕ್ಕೆ ಘಾಸಿಗೊಳಸಿದರು , ಶಕ್ತಿಯನಿ ಪ್ರದರ್ಶನ ಮಾಡಲು ಭರತ ಷಟ್ಮಂಡಲಗಳನ್ನು ಗೆದ್ದು
  ಬಂದನು. ಕೌಟುಂಬಿಕ ಕಲಹದಿಂದ ಎಷ್ಟೋ ರಾಜಮನೆತನಗಲು ನಾಶವಾಗಿವೆ.
  ಈ ಯುದ್ಧದ ಭೀಕರತೆಯನ್ನು ಧರ್ಮ, ದೇಶಗಳ ಭೇದವಿಲ್ಲದೆ ಭಾಗಿಯಾಗಿ ಸೈನಿಕರಿಗೂ ಅವರ ಕುಟುಂಬ ವರ್ಗದವರಿಗೂ ಹಾಗೂ ದೇಶಕ್ಕೂ
  ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡುತ್ತದೆ. ಸಂಕಟಕ್ಕೆ ಗಡಿಯಿಲ್ಲ – ಧರ್ಮವಿಲ್ಲ.ಯುದ್ಧ ಕತೆಯಲ್ಲಿ ಮುದುಕಿಯುದ್ಧಕ್ಕೆ ಹೋದ ತನ್ನ
  ಗಂಡನನ್ನು ಕಳೆದುಕೊಂಡಿದ್ದಳು. ಎಲ್ಲರ ಮನಸ್ಸಿಗೂ, ದೇಹಕ್ಕೂ ಗಯಾ ಮಾಡುವುದೆ ಯುದ್ಧದಲ್ಲಿ ಪರಿ , ಈಯುದ್ಧದಲ್ಲಿ ತನ್ನ ಮೊಮ್ಮಗನನ್ನು
  ಉಳಿಸಲಿಲ್ಲ ಯಾರಿಗಾಗಿ ,ಯಾತಕ್ಕಾಗಿ ಈಯುದ್ಧದಲ್ಲಿ ? ಎಂದು ಮುದುಕಿ ಹೇಳಿದ ಮಾತಿನಿಂದಯುದ್ಧದ ಪರಿಣಾಮವನ್ನು ಅರಿವಾಗಬಹುದು.
  ಆದ್ದರಿಂದ ಯುದ್ಧದಲ್ಲಿ ನೊಂದವರು ಧರ್ಮಭಿನ್ನತೆ, ದೇಶಭಿನ್ನತೆ, ವೈರಿ-ಮಿತ್ರ ಎಂಬುದನ್ನೆಲ್ಲ ಪರಿಗಣಿಸದೆ ಪರಸ್ಪರರು
10th Kannada Lesson Yuddha Notes
ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes

10th Kannada Lesson Yuddha Notes

ಇತರೆ ವಿಷಯಗಳ ಮಾಹಿತಿ ಲಿಂಕ್

1 thoughts on “ಯುದ್ಧ ಪಾಠದ ಪ್ರಶ್ನೆ ಉತ್ತರಗಳು | 10th Kannada Lesson Yuddha Notes

Leave a Reply

Your email address will not be published. Required fields are marked *