ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Vaddaradhane Information In Kannada

Vaddaradhane in Kannada । ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Information

Vaddaradhane in Kannada, ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ, Information, vaddaradhane information in kannada, about vaddaradhane in kannada, essay

Vaddaradhane in Kannada

ಈ ಲೇಖನದಲ್ಲಿ ವಡ್ಡಾರಾಧನೆ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram
Spardhavani.com

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ

ವಡ್ಡಾರಾಧನೆ ಕನ್ನಡದ ಮೊದಲ ಗದ್ಯ ಕೃತಿಯಾಗಿದೆ.ಇದರ ಕತೃ ಶಿವಕೋಟ್ಯಾಚಾರ್ಯರು .

ವಡ್ಡಾರಾಧನೆಗೆ ಆಧಾರ ಹರಿಷೇಣನ ಬೃಹತ್ಕಥಾಕೋಶ

ಅದರಲ್ಲಿರುವ ಕಥೆಗಳಲ್ಲಿ 19 ಕಥೆಗಳನ್ನು ಆರಿಸಿಕೊಂಡು ಮನೋಹರವಾಗಿ ನಿರೂಪಿಸಿದ್ದಾರೆ.

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Vaddaradhane in Kannada Best No1 Information

ಇದರಲ್ಲಿನ 19 ಕಥೆಗಳು ಇಂತಿವೆ:

1. ಸುಕುಮಾರಸ್ವಾಮಿ ಕಥೆ : ಹಿಂದಿನ ಜನ್ಮದ ಅತ್ತಿಗೆ, ಈಗ ನರಿಯಾಗಿ ಮೂರುಹಗಲು ಮೂರು ರಾತ್ರಿ ಕಿತ್ತು ತಿಂದರೂ ವೇದನೆಯನ್ನು ಸಹಿಸಿ ಸಮ್ಯಕ್‍ದರ್ಶನ, ಜ್ಞಾನ, ಚಾರಿತ್ರಗಳನ್ನು ತೋರಿ ದೇವನಾದ ಕಥೆ.
2. ಸುಕೌಶಳಸ್ವಾಮಿ ಕಥೆ : ಪರ್ವತದ ಮೇಲೆ ಹುಲಿ ಕ್ರೋಧದಿಂದ ಕಿತ್ತು ತಿನ್ನುವುದನ್ನು ಸಹಿಸಿ ಮೋಕ್ಷ ಸಾಧಿಸಿದ ಕಥೆ.
3. ಗಜಕುಮಾರನ ಕಥೆ : ಹೊಟ್ಟೆ ಅಡಿಯಾಗಿ ಮಲಗಿಸಿ ಚರ್ಮವನ್ನು ಸುಲಿದು, ಕಾದ ಕಬ್ಬಿಣದ ಮೊಳೆಗಳನ್ನು ಹೊಡೆದುದನ್ನು ಸಹಿಸಿದ ಕಥೆ.
4. ಸನತ್ಕುಮಾರ ಚಕ್ರವರ್ತಿಯ ಕಥೆ : ನೂರಾರು ವರ್ಷ ಕಾಲ ಏಳು ನೂರು ವ್ಯಾಧಿಗಳನ್ನು ಸಹಿಸಿ ಸಮಾಧಿಮರಣ ಪಡೆದ ಕಥೆ.

Vaddaradhane in Kannada
5. ಅಣ್ಣಿಕಾ ಪುತ್ರನ ಕಥೆ : ನದಿಯಲ್ಲಿ ನಾವೆ ಮುಳುಗುವಾಗಲೂ ಧ್ಯಾನಮಾಡಿ ಮೋಕ್ಷ ಪಡೆದ ಕಥೆ.
6. ಭದ್ರಬಾಹು ಭಟ್ಟರರ ಕಥೆ : ಹಸಿವೆಯನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
7. ಲಲಿತಘಟೆಯ ಕಥೆ : ನದಿಯಲ್ಲಿ ಕೊಚ್ಚಿಹೋಗುವಾಗ ಲಲಿತ ಘಟೆ ಎಂಬ ಜನರ ಗುಂಪು ಧ್ಯಾನದಿಂದ ಅಹಮಿಂದ್ರ ಪದವಿ ಪಡೆದ ಕಥೆ.
8. ಧರ್ಮ ಘೋಷ ಭಟ್ಟಾರನ ಕಥೆ : ನದಿಯ ತೀರದಲ್ಲಿ ಉಪವಾಸ ಮಾಡಿ ಬಾಯಾರಿಕೆಯನ್ನು ಗೆದ್ದು ಅಚ್ಚುತೇಂದ್ರನಾದ ಕಥೆ.

Vaddaradhane Information In Kannada


9. ಸಿರಿದಿಣ್ಣ ಭಟ್ಟಾರರ ಕಥೆ : ಶೀತವಾತಗಳನ್ನು ಸಹಿಸಿ ರತ್ನತ್ರಯವನ್ನು ಸಾಧಿಸಿದ ಕಥೆ.
11. ವೃಷಭಸೇನ ಭಟ್ಟಾರರ ಕಥೆ : ಕಾದ ಬಂಡೆಯ ಮೇಲೆ ಕುಳಿತು ಬಿಸಿಲು, ಬಿಸಿಗಾಳಿಗಳನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
13. ಕಾರ್ತಿಕ ಋಷಿಯ ಕಥೆ : ಶಕ್ತಿ ಆಯುಧದ ಇರಿತವನ್ನು ಸಹಿಸಿ ಆರಾಧನೆಯನ್ನು ಸಾಧಿಸಿದ ಕಥೆ.
15. ಅಭಯಘೋಷನೆಂಬ ಮುನಿಯ ಕಥೆ : ಚಕ್ರಾಯುಧದ ಹೊಡೆತವನ್ನು ಸಹಿಸಿ ಇಂದ್ರನಾದ ಕಥೆ.
17. ವಿದ್ಯುಚ್ಚೋರ ರಿಸಿಯ ಕಥೆ : ಭಯಂಕರ ಸೊಳ್ಳೆಗಳನ್ನು ಸಹಿಸಿ ಸದ್ಗತಿ ಪಡೆದ ಕಥೆ.
19. ಗುರುದತ್ತ ಭಟಾರನ ಕಥೆ : ಬೆಂಕಿಯ ವೇದನೆಯನ್ನು ಸಹಿಸಿ ಸದ್ಗತಿ ಸಾಧಿಸಿದ ಕಥೆ.
21. ಚಿಲಾತಪುತ್ರನ ಕಥೆ: ಗಾಯಗಳಿಗೆ ಕಟ್ಟಿರುವೆಗಳು ಮುತ್ತಿ ತಿಂದುದನ್ನು ಸಹಿಸಿ ಅಹಮಿಂದ್ರನಾದ ಕಥೆ.
23. ದಂಡಕ ರಿಸಿಯ ಕಥೆ : ಬಾಣ ನಾಟಿದನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ.
25. ಅಯ್ನೂರು ಋಷಿಗಳ ಕಥೆ : ಗಾಣಕ್ಕೆ ಹಾಕಿ ಹಿಂಸಿಸಿದನ್ನು ಸಹಿಸಿ ಸದ್ಗತಿ ಪಡೆದ ಕಥೆ.
27. ಚಾಣಕ್ಯರಿಸಿಯ ಕಥೆ : ಗೊಬ್ಬರದ ರಾಶಿಯ ನಡುವೆ ಸುಟ್ಟುದನ್ನು ಸಹಿಸಿ ಕ್ಷಮೆ ಮೆರೆದು ಸದ್ಗತಿ ಪಡೆದ ಕಥೆ.
28. ವೃಷಭಸೇನ ರಿಸಿಯ ಕಥೆ : ಸಜೀವ ದಹನವನ್ನು ಸಹಿಸಿ ರತ್ನತ್ರಯ ಸಾಧಿಸಿದ ಕಥೆ.

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Vaddaradhane in Kannada Best No1 Information

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ

ಡಾ || ಹಂಪನಾಗ ರಾಜಯ್ಯನವರು ವಡ್ಡಾರಾಧನೆಯನ್ನು ಶಿವಕೋಟ್ಯಾಚಾರರು ಬರೆದಿಲ್ಲ . ಇದನ್ನು ಬ್ರಾಜಿಷ್ಣು ರಚಿಸಿರುವನೆಂದೂ ಅದರ ಹೆಸರು “ ಆರಾಧನಾ ವಡ್ಡಾರಾಧನೆಗೆ “ ಬೃಹತ್ಕಥಾಕೋಶ ” ಕರ್ನಾಟಿಕಾ ‘ ( ಭಗವತೀ ಆರಾಧನಾ ) ಎಂದು ಸೂಚಿಸಿದ್ದಾರೆ . ಇದು ಇನ್ನು ಚರ್ಚೆಯಾಗಬೇಕಾದ ವಿಷಯವಾಗಿದೆ ) .

ಇದರ ಕಥೆಗಳು ಪ್ರಾರಂಭದಲ್ಲಿರುವ ಗಾಹೆಗಳು ಭಗವತೀ ಆರಾಧನಾ ಗ್ರಂಥದಲ್ಲಿರುವುದೇ ಆಗಿವೆ . ಹರಿಷೇಣನು ಕೋಗಳಿಯ ಶಿವಕೋಟಿಯೂ ಕಥೆಗಳನ್ನು ಸವಿಸ್ತಾ ಸಾಲಂಕಾರವಾಗಿಯೂ ನಿರೂಪಿಸಿದ್ದಾರೆ .

ವಡ್ಡಾರಾಧನೆಗೆ ರವಾಗಿಯೂ ಉಪಸರ್ಗ ಕೇವಲಿಗಳ ಕಥೆಯೆಂಬ ಮತ್ತೊಂದು ಹೆಸರಿದೆ.ವಡ್ಡಾರಧನೆ ಎಂದರೆ ಹಿರಿಯ ಜೈನ ಯತಿಗಳ ಸೇವೆ , ಅಥವಾ ವ್ರತ ಎಂಬರ್ಥವಿದೆ .

ವಡ್ಡಾರಾಧನೆಯನ್ನು ಮೊದಲಿಗೆ ಡಿ.ಎಲ್ ನರಸಿಂಹಚಾರ್ 1949 ರಲ್ಲಿ ಪ್ರಕಟಿಸಿದವರು .

ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Vaddaradhane in Kannada Best No1 Information
ವಡ್ಡಾರಾಧನೆ ಕೃತಿ ಬಗ್ಗೆ ಮಾಹಿತಿ | Vaddaradhane in Kannada Best No1 Information

ಮುಂದೆ ಓದಿರಿ …

FAQ

ವಡ್ಡಾರಾಧನೆ ಕೃತಿಯನ್ನು ರಚಿಸಿದವರು ಯಾರು?

ಶಿವಕೋಟ್ಯಾಚಾರ್ಯ

ವಡ್ಡಾರಾಧನೆ ಕೃತಿಯು ಎಷ್ಟು ಕತೆಯನ್ನು ಒಳಗೊಂಡಿದೆ?

ಹತ್ತೊಂಬತ್ತು ಕಥೆಗಳನ್ನು ಒಳಗೊಂಡಿರುವ ನೀತಿಬೋಧಕ ಕೃತಿಯಾಗಿದೆ ಮತ್ತು ಹರಿಸೇನನ ಬೃಹತ್ಕಥಾಕೋಶವನ್ನು ಆಧರಿಸಿದೆ.

ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *