ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada

2nd puc Kannada Innu Huttadeyirali Nariyarennavolu, ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes, summary, ಸಾರಾಂಶ , ಹಿನ್ನಲೆ , bhavarth, saramsha, innu huttadeyirali nariyarennavolu kannada notes , ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ನೋಟ್ಸ್, ಇನ್ನು ಹುಟ್ಟದೆ ಇರಲಿ ನಾರಿಯರೆನ್ನವೊಲು, ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಭಾವಾರ್ಥ, ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು summary, 2nd puc kannada innu huttadeyirali nariyarennavolu

Innu Huttadeyirali Nariyarennavolu Kannada ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು notes

ಕವಿ ಪರಿಚಯ

ಯುಗಪ್ರವರ್ತಕ ಕವಿಯೆನಿಸಿದ ಕುಮಾರವ್ಯಾಸ ಭಾಗವತ ಭಕ್ತಕವಿಯೂ ಹೌದು .

ಈತನ ಕಾಲ ಕ್ರಿ.ಶ. 1400. ಗದುಗಿನ ಹತ್ತಿರದ ಕೋಳಿವಾಡ ಈತನ ಹುಟ್ಟೂರು .

ನಾರಣಪ್ಪ ಈತನ ನಿಜ ನಾಮಧೇಯ .

ವ್ಯಾಸರ ಮೇಲಿನ ಪ್ರೀತಿ ಗೌರವಾದರಗಳಿಂದಾಗಿ ತನ್ನನ್ನು ಕುವರವ್ಯಾಸ , ಕುಮಾರವ್ಯಾಸ ಎಂಬುದಾಗಿ ಕರೆದು ಕೊಂಡಿದ್ದಾನೆ .

ಸ್ಮಾರ್ಥ ವೈದಿಕ ಬ್ರಾಹ್ಮಣರಾದ ಈತನ ಹಿರಿಯರು ಕೋಳಿವಾಡ ಗ್ರಾಮದ ಶ್ಯಾನುಭೋಗ ವೃತ್ತಿಯಲ್ಲಿದ್ದರು . ಹರಿಭಕ್ತನಾದ ಈತನ ಆರಾಧ್ಯದೈವ ಗದುಗಿನ ವೀರನಾರಾಯಣ .

ಆ ದೈವದ ಸನ್ನಿಧಿಯಲ್ಲಿಯೇ ಕುಳಿತು ಈತ ಕಾವ್ಯ ರಚಿಸಿದನೆಂಬ ಐತಿಹ್ಯವಿದೆ .

ಕುಮಾರವ್ಯಾಸನ ಕೃತಿಯ ಹೆಸರು ‘ ಕರ್ಣಾಟ ಭಾರತ ಕಥಾಮಂಜರಿ ‘ , ಕುಮಾರವ್ಯಾಸ ಭಾರತ , ಗದುಗಿನ ಭಾರತ ಎಂದೆಲ್ಲ ಹೆಸರುವಾಸಿಯಾದ ಈ ಕೃತಿಯು ಪಂಡಿತ – ಪಾಮರರಿಬ್ಬರಿಂದಲೂ ಮೆಚ್ಚುಗೆ ಗಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿದೆ .

ವ್ಯಾಸರ ಮೂಲ ಸಂಸ್ಕೃತ ಭಾರತದ 18 ಪರ್ವಗಳಲ್ಲಿ , ಮೊದಲ 10 ಪರ್ವಗಳನ್ನು ಕುಮಾರವ್ಯಾಸನು ಭಾಮಿನಿ ಷಟ್ನದಿಯಲ್ಲಿ ಅನುವಾದಿಸಿದ್ದಾನೆ .

ಮೂಲಕೃತಿಯನ್ನನುಸರಿಸಿದರೂ ಕವಿಯು ತನ್ನ ಕಾವ್ಯದಲ್ಲಿ ಅಪಾರವಾದ ಪ್ರತಿಭಾಶಕ್ತಿಯನ್ನು ಮೆರೆದಿದ್ದಾನೆ . ಕನ್ನಡ ‘ ದೇಸಿ’ಯ ಸೊಗಡು , ಔಚಿತ್ಯಪೂರ್ಣವಾದ ರೂಪಕಗಳು ಕಾವ್ಯಕ್ಕೆ ಅಪೂರ್ವವಾದ ಕಳೆಯನ್ನು ತಂದುಕೊಟ್ಟಿವೆ .

ರೂಪಕ ಸಾಮ್ರಾಜ್ಯದ ಚಕ್ರವರ್ತಿ ಎನಿಸಿದ ‘ ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು . ಭಾರತ ಕಣ್ಣಲಿ ಕುಣಿಯುವುದು ‘ ಎಂಬುದಾಗಿ ಕುವೆಂಪು ಅವರು ಮೆಚ್ಚುಗೆ ಸೂಚಿಸಿದ್ದರಲ್ಲಿ ಅತಿಶಯೋಕ್ತಿಯಿಲ್ಲ .

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada

02-03 ವಾಕ್ಯದಲ್ಲಿ ಉತ್ತರಿಸಿ Innu Huttadeyirali Nariyarennavolu Kannada

1) ಮಲಗಿರುವ ಭೀಮನನ್ನು ದ್ರೌಪದಿ ಹೇಗೆ ಎಬ್ಬಿಸಿದಳು ?

ದ್ರೌಪದಿಯು ಮಲಗಿರುವ ಭೀಮನ ಬಳಿ ಬಂದು ವಲ್ಲಭನ ಬದಿಗೆ ಸರಿದಳು . ಮೆಲ್ಲಮೆಲ್ಲನೆ ಮುಸುಕನ್ನು ಸಡಿಲಿಸಿ ಗಲ್ಲವನ್ನು ಹಿಡಿದು ಅಲುಗಿಸಿದಳು . ಅಪ್ರತಿಮ ಮಲ್ಲನು ಮೆಲ್ಲನೆ ಕಣ್ಣಿಟ್ಟು ಎದುರಿಗಿದ್ದ ಪಾಂಚಲನಂದನೆಯನ್ನು ಕಂಡನು .

2 ) ತಾನು ಘೋರತರ ವಿಷ ಕುಡಿಯುವುದಾಗಿ ದ್ರೌಪದಿ ಏಕೆ ಹೇಳುತ್ತಾಳೆ ?

ಕೀಚಕನು ಕಾಮಾಂಧನಾಗಿ ದ್ರೌಪದಿಗೆ ಬಹಳಷ್ಟು ಉಪದ್ರವ ಕೊಡುತ್ತಿದ್ದನು . ದ್ರೌಪದಿಗೆ ಸಹಿಸಲು ಅಸಾಧ್ಯವಾಗುತ್ತಿತ್ತು . ಅವಳನ್ನು ರಕ್ಷಿಸಲು ಐವರು ಗಂಡಂದಿರು ಮೌನ ವಹಿಸಿದ್ದರು . ಆದ್ದರಿಂದ ದ್ರೌಪದಿಯು ತಾನು ಘೋರತರ ವಿಷ ಕುಡಿಯುವುದಾಗಿ ಹೇಳುತ್ತಾಳೆ .

3 ) ಉಳಿದ ನಾಲ್ವರು ಪಾಂಡವರ ಬಗ್ಗೆ ದ್ರೌಪದಿಯ ಅಭಿಪ್ರಾಯವೇನು ?

ಧರ್ಮರಾಯನೆಂದೆ ಎನಿಸಿದ ಯುಧಿಷ್ಠಿರನು ಧರ್ಮಕ್ಷಮೆಯ ಗರ ಬಡಿದವಂತಾಡುವನು . ಪಾರ್ಥನು ಮಮತೆ ತೋರಿದರೂ ಅಣ್ಣನ ಆಜ್ಞೆಯ ಭ್ರಮೆಯಲ್ಲಿರುವನು . ಇನ್ನು ನಕುಲ – ಸಹದೇವರು ಕೀಚಕನನ್ನು ಕೊಲ್ಲಲು ಅಸಮರ್ಥರು . ಈ ನಾಲ್ವರು ಕೀಚಕನಿಂದ ರಕ್ಷಿಸಲಾರರು ಎಂಬುದೇ ದ್ರೌಪದಿಯ ಅಭಿಪ್ರಾಯ .

4 ) ಕುಜನರಾದವರು ಏನೆಂದು ನುಡಿಯುತ್ತಾರೆ ?

ಹೆಣ್ಣಿನ ಅಭಿಮಾನಕ್ಕಾಗಿ ಕುಂತಿಯ ಮಗ ಅಣ್ಣನ ಆಜ್ಞೆಯನ್ನು ಮೀರಿ ಬದುಕಿದನೆಂದು ಕುಜನರು ನುಡಿಯುತ್ತಾರೆ

5) ಕೊಲಲಕ್ಷಮರೆಂದು ದ್ರೌಪದಿ ಯಾರನ್ನು ಕುರಿತು ಹೇಳಿದ್ದಾಳೆ ?

ನಕುಲ – ಸಹದೇವರು ಕೊಲಲಕ್ಷಮರೆಂದು ದ್ರೌಪದಿ ಹೇಳಿದ್ದಾಳೆ .

6 ) ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯ ಯಾವುದು ?

ಸೋದರರ ಬಗ್ಗೆ ಭೀಮನು ವ್ಯಕ್ತಪಡಿಸಿದ ಅಭಿಪ್ರಾಯವೆಂದರೆ ಕಲಹಕ್ಕಾದರೆ ನಾವು , ರಮಿಸಲು ಉಳಿದವರು . ಗಾದೆಯ ಬಳಕೆಯಂತೆ ಕೆಲವರು ಗಳಿಸಿದರೆ ಕೆಲವರು ಉಂಡು ಜಾರುತ್ತಾರೆ ನಾನು ಅಳುಕಿ ನಡೆಯುವವನಲ್ಲ ಎಂಬುದಾಗಿ ಹೇಳಿದನು .

7) ಗಂಡವರು , ಮೂರು ಲೋಕದ ಗಂಡರಾರು ? ಹೆಸರಿಸಿ .

ಗಂಡರೈವರು ಎಂದರೆ – ಯುಧಿಷ್ಠರ , ಭೀಮ , ಪಾರ್ಥ ( ಅರ್ಜುನ ) , ನಕುಲ , ಸಹದೇವ , ಮೂರು ಲೋಕದ ಗಂಡ ಅರ್ಜುನ ಮತ್ತು ಭೀಮ .

8 ) ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಏನು ಮಾಡುತ್ತಾನೆ ?

ಹೆಂಡತಿಯ ಹರಿಬಕ್ಕಾಗಿ ಗಂಡುಗೂಸು ಆಕೆಯ ಮಾನರಕ್ಷಣೆ ಮಾಡುತ್ತಾನೆ . ವೈರಿಯನ್ನು ಕರಿಖಂಡ ಮಾಡುತ್ತಾನೆ . ಅಥವಾ ಆ ಪ್ರಯತ್ನದಲ್ಲಿ ತನ್ನೊಡಲನ್ನು ನೀಡುವನೇ ವಿನಃ ಹೆಂಡತಿಯನ್ನು ಏಕಾಂಗಿಯಾಗಿ ಬಿಡುವುದಿಲ್ಲ .

ಒಂದು ವಾಕ್ಯದಲ್ಲಿ ಉತ್ತರಿಸಿ Innu Huttadeyirali Nariyarennavolu Kannada

1 ) ಪಾಂಚಾಲನಂದನೆ ಯಾರು ?
ಪಾಂಚಾಲನಂದನೆ ಎಂದರೆ ‘ ಪಾಂಚಾಲದೇಶದ ಅರಸುಪುತ್ರಿ ‘ ದ್ರೌಪದಿ

2 ) ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?
ಧರ್ಮರಾಯನಿಗೆ ಧರ್ಮಕ್ಷಮೆಯ ಗರ ಹೊಡೆದಿದೆ .

3 ) ಅಣ್ಣನಾಜ್ಞೆಯಲಿ ಭ್ರಮಿತನಾದವನು ಯಾರು ?
ಅಣ್ಣನಾಜ್ಞೆಯಲಿ ಭ್ರಮಿತನಾದವನು ಕಲಿಭೀಮ.

4 ) ದ್ರೌಪದಿ ತನ್ನನ್ನು ತಾನು ಏನೆಂದು ಕರೆದುಕೊಂಡಿದ್ದಾಳೆ ?
ದ್ರೌಪದಿ ತನ್ನನ್ನು ತಾನು ಸೈರೇಂದ್ರಿಯಾಗಿ ಕರೆದುಕೊಂಡಿದ್ದು ಯಾವ ನಾರಿಯು ತನ್ನಂತೆ ಹುಟ್ಟದಿರಲಿ ಎಂದಿದ್ದಾಳೆ .

5) ಕಲಿಭೀಮನು ಎಂತಹ ಗಂಡನೆಂದು ದ್ರೌಪದಿ ಹೇಳಿದ್ದಾಳೆ ?
ಕಲಿಭೀಮನು ಮಿಡುಗುಳ್ಳಗಂಡ ( ಪೌರುಷ ತುಂಬಿದ ಗಂಡ ) ಎಂದು ದ್ರೌಪದಿ ಹೇಳಿದ್ದಾಳೆ .

6 ) ಯಾರನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ ?
ಕೀಚಕನನ್ನು ಯಮಲೋಕಕ್ಕೆ ಕಳಿಸಲು ದ್ರೌಪದಿ ಭೀಮನಿಗೆ ಹೇಳುತ್ತಾಳೆ .

7 ) ಯಾರ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ ?
ಕೀಚಕನ ಬಸುರನ್ನು ಬಗೆಯುವುದಾಗಿ ಭೀಮ ಹೇಳುತ್ತಾನೆ .

8 ) ಧರ್ಮಜನ ಹೊರಗೆ ಭೀತರಾದವರು ಯಾರು ?
ಧರ್ಮಜನ ಹೊರಗೆ ಭೀತರಾದವರು ಭೀಮ ಹಾಗೂ ಅವನ ಸಹೋದರ ( ಅರ್ಜುನ , ನಕುಲ , ಸಹದೇವ )

9 ) ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ಯಾರು ?
ರಾಜಸಭೆಯೊಳಗೆ ದ್ರೌಪದಿಯನ್ನು ಒದೆದವರು ‘ ಕೀಚಕ

10 ) ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದವರಾರು ?
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು ಎಂದು ಹೇಳಿದವರು ದ್ರೌಪದಿ .

11 ) ಗಂಡರೋ ನೀವ್ ಭಂಡರೋ ಎಂದು ಕೇಳಿದವರಾರು ?
ಗಂಡರೋ ನೀವ್ ಭಂಡರೋ ಎಂದು ಕೇಳಿದವರು ದ್ರೌಪದಿ

12 ) ದ್ರೌಪದಿಯ ಮುಂದಲೆಯ ಹಿಡಿದವರಾರು ?
ದ್ರೌಪದಿಯ ಮುಂದಲೆಯನ್ನು ಹಿಡಿದವರು ಕೌರವ .

13 ) ದ್ರೌಪದಿಯ ಮುಖವನ್ನು ಭೀಮ ಯಾವುದರಿಂದ ತೊಳೆದನು ?
ದ್ರೌಪದಿಯ ಮುಖವನ್ನು ಭೀಮನು ಗಿಂಡಿಯ ನೀರಿನಿಂದ ತೊಳೆದನು .

14 ) ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವರಾರು ?
ಅರಣ್ಯವಾಸದಲ್ಲಿದ್ದಾಗ ದ್ರೌಪದಿಯನ್ನು ಎಳೆದೊಯ್ದವನು ಸೈಂಧವ ( ಜಯದ್ರಥ )

15 ) ಮನದೊಳಗೆ ಹಗೆಗಳನ್ನು ಹಿಂಡಿದವರಾರು ?
ಮನದೊಳಗೆ ಹಗೆಗಳನ್ನು ಹಿಂಡಿದವರು ಭೀಮ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada
ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು Notes | Innu Huttadeyirali Nariyarennavolu Kannada

ಪಾಂಚಾಲನಂದನೆ ಯಾರು ?

ಪಾಂಚಾಲನಂದನೆ ಎಂದರೆ ‘ ಪಾಂಚಾಲದೇಶದ ಅರಸುಪುತ್ರಿ ‘ ದ್ರೌಪದಿ

ಧರ್ಮರಾಯನಿಗೆ ಎಂಥ ಗರ ಹೊಡೆದಿದೆ ?

ಧರ್ಮರಾಯನಿಗೆ ಧರ್ಮಕ್ಷಮೆಯ ಗರ ಹೊಡೆದಿದೆ .

2nd puc notes ಇತರೆ ಲಿಂಕ್

ಉರಿಲಿಂಗಪೆದ್ದಿಯ ವಚನಗಳು

ದ್ವಿತೀಯ ಪಿಯುಸಿ ಕನ್ನಡ ನೋಟ್ಸ್

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್‌

ವೆಬ್ಸೈಟ್ ಲಿಂಕ್

Leave a Reply

Your email address will not be published. Required fields are marked *