Ogatu in Kannada, ಒಗಟುಗಳು ಮತ್ತು ಉತ್ತರಗಳು, riddle in kannada, ogatugalu in kannada, pdf, notes, kannada ogatugalu with answer, marriage ogatu
ಪರಿವಿಡಿ
Ogatu in Kannada
ಕಣ್ಣಿಗೆ ಹತ್ತಿರ ಕಾಲಿಗೆ ದೂರ?
ಬೆಟ್ಟ
ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ
ಮಾವು
- ಮುಳ್ಳುಗಳಿವೆ ಅಪಾಯವಿಲ್ಲ, ಸಂಖ್ಯೆಗಳಿವೆ ಲೆಕ್ಕದ ಪುಸ್ತಕವಲ್ಲ, ಗಂಟೆ ಹೊಡೆಯುತ್ತದೆ, ದೇವಾಲಯವಲ್ಲ. – ಗಡಿಯಾರ
- ಗಿರಗಿರ ತಿರುಗುತ್ತೆ, ಸುಸ್ತಾಗಿ ಬೀಳುತ್ತೆ – ಬುಗುರಿ
- ಹುಟ್ಟುತ್ತಲೇ ಹುಡುಗ ತಲೆಯಲ್ಲಿ ಟೋಪಿ ಹಾಕಿರುತ್ತೆ. – ಬದನೇಕಾಯಿ
- ಸಾಗರ ಪುತ್ರ, ಸಾರಿನ ಮಿತ್ರ – ಉಪ್ಪು
- ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು – ನವಿಲು
- ಲಟಪಟ ಲೇಡಿಗೆ ಒಂದೇ ಕಣ್ಣು – ಸೂಜಿ
- ಹಸಿರು ಕೋಲಿಗೆ ಮುತ್ತಿನ ತುರಾಯಿ – ಜೋಳದ ತೆನೆ
- ಕಡ್ಲೆ ಕಾಳಷ್ಟು ಹಿಂಡಿ 32 ಮನೆ ಸಾರಿಸಿ ಬಚ್ಚಲ ಪಾಲು ಆಗುತ್ತೆ – ಹಲ್ಲುಪುಡಿ
- ಕೆಂಪು ಕುದುರೆ ಮೇಲೆ ಒಬ್ಬ ಏರುತ್ತಾನೆ, ಒಬ್ಬ ಇಳಿಯುತ್ತಾನೆ – ರೊಟ್ಟಿ, ದೋಸೆ
- ಚಿಪ್ಪುಂಟು ಅಮೆಯಲ್ಲ, ಜುಟ್ಟುನಂಟು ಪೂಜಾರಿಯಲ್ಲ.ಮೂರು ಕಣ್ಣುನಂಟು ಹರನಲ್ಲ, ಹಾಗಾದರೆ ನಾನು ಯಾರು? – ತೆಂಗಿನಕಾಯಿ
- ಕರಿ ಗುಡ್ಡಬಿಳಿ ನೀರು ಅದ್ರಾಗೆ ಕುಂತವಳೇ ಚಂಪರಾಣಿ – ಗಡಿಗೆ ಮಜ್ಜಿಗೆ
- ಅಪ್ಪಗಿಂತ ಮಗನೇ ಮೊದಲು ಹುಟ್ಟುತ್ತಾನೆ – ಹೋಗೆ
- ಅಗಲವಾದ ಮಾಳಿಗೆಗೆ ಒಂದೇ ಕಂಬ – ಛತ್ರಿ
- ಬಿಳಿ ತೊಟ್ಟಿಯಲ್ಲಿ ಕಪ್ಪು ದ್ರಾಕ್ಷಿ – ಕಣ್ಣು
- ಎರಡು ಗವಿಗಳಿಗೆ ಒಂದೇ ಗೋಡೆ – ಮೂಗು
- ಹಸಿರು ಮರದಲ್ಲಿ ಮೊಸರು ಚೆಲ್ಲಿದೆ – ಮಲ್ಲಿಗೆ
- ಐದು ಮನೆಗೆ ಒಂದೇ ಅಂಗಳ – ಅಂಗ್ಯ
- ಚಿಕ್ಕ ಮನೆಗೆ ಚಿನ್ನದ ಬೀಗ – ಮೂಗುತಿ
- ಹಗ್ಗ ಹಾಸಿದೆ, ಹಸು ಮಲಗಿದೆ – ಕುಂಬಳಕಾಯಿ
- ಹತ್ತಾರು ಮಕ್ಕಳ ತಂದೆ ಅದಕ್ಕೆ ತಲೆಯ ಮೇಲೆ ಜುಟ್ಟು – ಹುಂಜ
- ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು – ನೆನಪು
- ನೀಲಿ ಸಾಗರದಲ್ಲಿ ಬೆಳ್ಳನೇ ಮೀನುಗಳು ನಾನ್ಯಾರು – ತಾರೆಗಳು
- ಬಿಡಿಸಿದರೆ ಹೂವು, ಮಡಚಿದರೆ ಮೊಗ್ಗು – ಛತ್ರಿ
- ಕೂಗಿದರೆ ರಾವಣ, ಹಾರಿದರೆ ಹನುಮಂತ, ಕೂತರೆ ಮುಸಿ – ಕಪ್ಪೆ
- ಅಜ್ಜಿಯ ಸೀರೆ ಮಡಚೋಕೆ ಆಗಲ್ಲ, ಅಜ್ಜನ ರೊಕ್ಕ ಎಣಿಸೋಕೆ ಆಗಲ್ಲ – ಮೋಡ, ನಕ್ಷತ್ರ
ಒಗಟುಗಳು ಮತ್ತು ಉತ್ತರಗಳು
26.ಅಂಕಡೊಂಕಿನ ಬಾವಿ ಹೊಕ್ಕು ನೋಡಿದ್ರೆ ಮುಕ್ಕ ನೀರಿಲ್ಲ-ಕಿವಿ
27.ಕೆಂಪು ಕುದುರೆ ಕರಿ ತಡಿ ಒಬ್ಬ ಏರುತಾನೆ ಒಬ್ಬ ಇಳಿತಾನೆ-ರೊಟ್ಟಿ
28.ಮೂರೂ ಪಕ್ಷಿಗಳು ಗೂಡಿಗೆ ಹೋಗುವಾಗ ಬೇರೆ ಬೇರೆ ಬಣ್ಣ ಬರುವಾಗ ಬಣ್ಣ-ಎಲೆ ಅದಿಕೆ
29.ಆಕಾಶದೊಳಗಿನ ಗಿಣಿ ಊಟದ ಹೊತ್ತಿಗೆ ರಾಣಿ-ಬಾಳೆಲೆ
30.ಎರಡು ಬಾವಿಗಳ ನಡುವೆಯೊಂದು ಸೇತುವೆ-ಮೂಗು
31.ತಲೆ ಇಲ್ಲ , ನಡು ಇಲ್ಲ , ಕೈಗಳಿದ್ದರು ಬೆರಳಿಲ್ಲ-ಕೋಟು ಅಂಗಿ
32.ತಿಂಡಿಗೆ ಕಡಿಮೆ ಇಲ್ಲ ,ತೀರ್ಥ ಕುಡಿದರೆ ಸಾವು –ವಿಷ
33.ಒಬ್ಬಳು ಮುಲುಗಿದಳು, ಒಬ್ಬಳು ಕರಗಿದಳು , ಒಬ್ಬಳು ತೇಲಿದಳು –ಅಡಿಕೆ , ಸುಣ್ಣ
34.ಹೋಗೋದು ಮುಳುಗೋದು ತರೋದು ಏನು?-ಬಿಂದಿಗೆ
35.ಕಿರೀಟ ಇದೆ ರಾಜ ಅಲ್ಲ, ಕಲ ತಿಳಿಸುತ್ತ್ತೆ ಗಡಿಯಾರವಲ್ಲ-ಕೋಳಿ
Ogatu in Kannada
36.ಒಂದು ಹಣ್ಣಿಗೆ ಹನ್ನೆರಡು ತೊಳೆ ಮತ್ತೂ ಮೂವತ್ತು ಬೀಜ-ವರ್ಷ
37.ಗುಂಡಾಕಾರ ಮೈಯೆಲ್ಲಾ ತೂತು-ದೋಸೆ
38.ಬಂಗಾರದ ಗುಬ್ಬಿ ಬಾಲದಲ್ಲೇ ನೀರನ್ನು ಕುಡಿಯುತ್ತೆ-ಚಿಮಿಣಿ
39.ಒಂದು ಮರ , ಮರದಾಗ ಅಲ್ಲ, ಅಲ್ಲಿನಾಗ ಕೊಬ್ರಿ ಗುಂಡ-ಆಕಾಶ ನಕ್ಷತ್ರ ಚಂದ್ರ
40.ಅನ್ನ ಮಾಡಲಿಕ್ಕೆ ಬಾರದಂತಹ ಅಕ್ಕಿ ಯಾವುದು-ಏಲಕ್ಕಿ
41.ಬೆಳ್ಳಿ ಬಟ್ಟಲಲ್ಲಿ ಮುತ್ತಿನ ಬಿಂದು-ತಾರೆ
42.ಲಟಪಟ ಲೇಡಿಗೆ ಒಂದೇ ಕಣ್ಣು-ಸೂಜಿ
43.ಹಸಿರು ಕೋಲಿಗೆ ಮುತ್ತಿನ ತುರಾಯಿ-ಜೋಳದ ತೆನೆ
44.ಬಿಳಿ ಹುಲ್ಲಲ್ಲಿ ಕೆಂಪು ಕುರಿಮರಿ-ನಾಲಿಗೆ
45.ಸೂಜಿ ಸಣ್ಣಕಾಗೆ ಬಣ್ಣ –ಕೂದಲು
46.ಹೋದರು ಇರುತ್ತೆ ಬಂದರೂ ಕಾಡುತ್ತೆ.ಇದು ಏನು?-ನೆನಪು
47.ಆರು ಕಾಲಿನ ಆನೆ, ಆನೆ ತಿನ್ನುತ್ತೆ ನೀರು ಕುಡಿಯಲ್ಲ-ನುಸಿ
48.ಊರಿಗೆಲ್ಲ ಒಂದೇ ಕಂಬಳಿ-ಆಕಾಶ
49.ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ-ಕುಂಕುಮ
50.ಕರಿ ಹೊಲದ ಮದ್ಯದಲ್ಲಿ ಬೇಲಿ ದಾರಿ-ಬೈತಲೆ
51.ಒಂದು ಬತ್ತಿ ಮನೆಯೆಲ್ಲ ಬೆಳಕು-ಸೂರ್ಯ
52.ಕಣ್ಣಿಗೆ ಕಾಣೋದಿಲ್ಲ, ಕೈಗೆ ಸಿಗೋದಿಲ್ಲ –ಗಾಳಿ
53.ಕಣ್ಣಿಗೆ ಹತ್ತಿರ ಕಾಲಿಗೆ ದೂರ-ಬೆಟ್ಟ
54.ಊಟಕ್ಕೆ ಮೊದಲು ನಾನು ಅಂತ ಬರುತ್ತೆ –ಬಾಳೆ ಎಲೆ , ತಟ್ಟೆ
55.ಹಸಿರು ಮೈ ಹಳದಿ ಮೈ ಪೇಟೇಲಿ ಕುಳಿತು ಎಲ್ಲರನ್ನು ಕರೆಯುತ್ತೆ-ಮಾವು
56ಹುಲಿಯ ಚಿಕ್ಕಮ್ಮ , ಇಲಿಯ ಮುಕ್ಕಮ್ಮ-ಬೆಕ್ಕು
ಇನ್ನು ಹೆಚ್ಚು ಓದಿ ……