Chunavana Ayoga Information in Kannada | ಚುನಾವಣಾ ಆಯೋಗ ಮಾಹಿತಿ

Chunavana Ayoga Information in Kannada | ಚುನಾವಣಾ ಆಯೋಗ ಮಾಹಿತಿ

Chunavana Ayoga Information in Kannada, ಚುನಾವಣಾ ಆಯೋಗ ಮಾಹಿತಿ, chunavana ayogada kuritu prabandha,notes, pdf, election commission in kannada

Chunavana Ayoga Information in Kannada

ನಮ್ಮ ಸಂವಿಧಾನದ 15 ನೇ ಭಾಗದಲ್ಲಿನ 324 ನೇ ವಿಧಿಯು ಸ್ವತಂತ್ರ ಮತ್ತು ನಿರ್ಭಿತ ಚುನಾವಣಾ ಆಯೋಗದ ರಚನೆಗೆ ಅವಕಾಶ ನೀಡಿದೆ .

ಭಾರತದ ಮೊದಲ ದಲಿತ ಮುಖ್ಯಮಂತ್ರಿ ಯಾರು?

ಭಾರತದ ಮೊದಲ ದಲಿತ ಮುಖ್ಯಮಂತ್ರಿ ಉತ್ತರ ಪ್ರದೇಶದ ಮಾಯಾವತಿ

ಮೊದಲ ಕನ್ನಡಿಗ ಪ್ರಧಾನಿ ಯಾರು?

ಭಾರತದ ಮೊದಲ ಕನ್ನಡಿಗ ಪ್ರಧಾನಿ H.D. ದೇವೇಗೌಡ

*ಈ ಚುನಾವಣಾ ಆಯೋಗವು ಸಂಸತ್ತಿನ ರಾಜ್ಯ ಶಾಸನ ಸಭೆಗಳ , ರಾಷ್ಟ್ರಾಧ್ಯಕ್ಷರು ಹಾಗೂ ಉಪರಾಷ್ಟ್ರಧ್ಯಕ್ಷರ ಚುನಾವಣಾ ಮೇಲ್ವಿಚಾರಣೆ , ನಿರ್ದೇಶನ ನಿಯಂತ್ರಣ ಅಧಿಕಾರವನ್ನು ಹಾಗೂ ಹೊಂದಿದೆ .

*ಭಾರತದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಒಂದೇ ಚುನಾವಣಾ ಆರೋಗವನ್ನು ಹೊಂದಿವೆ .

*ಭಾರತದ ಚುನಾವಣಾ ಆಯೋಗವು ಸ್ಥಳೀಯ ಸರ್ಕಾರ ಗಳಿಗೆ ಚುನಾವಣೆ ನಡೆಸುವುದಿಲ್ಲ . ಏಕೆಂದರೆ ಪ್ರತ್ಯೇಕ ರಾಜ್ಯ ಚುನಾವಣೆ ಆಯೋಗಗಳು ಸ್ಥಳೀಯ ಸರಕಾರಗಳಿಗೆ ಚುನಾವಣೆ ನಡೆಸುತ್ತದೆ .

ವಿಧಿ -324 ರಚನೆ

* ಸಂವಿಧಾನದ 3245 ವಿಧಿಯು ಚುನಾವಣ ಆಯೋಗದ ರಚನೆಯನ್ನು ವಿವರಿಸುತ್ತದೆ .

* ಚುನಾವಣಾ ಆಯೋಗವು 1950 ರಿಂದ 1989 ರ ವರೆಗೆ ಏಕ ಸದಸ್ಯ ಆಯೋಗವಾಗಿ ಕಾರ್ಯನಿರ್ವಹಿಸಿತು . ಈ ಸಂದರ್ಭದಲ್ಲಿ ಆಯೋಗವು ಮುಖ್ಯ ಚುನಾವಣಾ ಆಯುಕ್ತರನ್ನು ಮಾತ್ರ ಹೊಂದಿತ್ತು .

*ಮೊದಲ ಬಾರಿಗೆ ರಾಷ್ಟ್ರಾಧ್ಯಕ್ಷರು ಅಕ್ಟೋಬರ್ 16 , 1989 ರಂದು ಎಸ್.ಎಸ್ . ನೋವಾ ಮತ್ತು ವಿ.ಎಸ್ . ಸೀಗೆಲ್ ಎಂಬ ಇಬ್ಬರು ವ್ಯಕ್ತಿಗಳನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿದರು .

*ಜನೇವರಿ 11 , 1990 ರಂದು ರಾಷ್ಟ್ರಾಧ್ಯಕ್ಷರು ಹೊಸದಾಗಿ ನೇಮಕವಾಗಿದ್ದ ಇಬ್ಬರು ಆಯುಕ್ತರ ಹುದ್ದೆಗಳನ್ನು ರದ್ದುಪಡಿಸಿದರು .

*ಪ್ರಧಾನಿ ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಕ್ಟೋಬರ್ 1 , 1993 ರಂದು ತ್ರಿಸದಸ್ಯ ಚುನಾವಣಾ ಆಯೋಗ ರಚಿಸಿತು .

*ಚುನಾವಣಾ ಆಯೋಗವು ಮುಖ್ಯ ಆಯುಕ್ತರು ಹಾಗೂ ರಾಷ್ಟ್ರಾಧ್ಯಕ್ಷರು ಕಾಲಕಾಲಕ್ಕೆ ನಿಗದಿಪಡಿಸಬಹುದಾದ ಇತರ ಚುನಾವಣಾ ಆಯುಕ್ತರಗಳನ್ನು ಹೊಂದಿರುತ್ತದೆ .

ಅಧಿಕಾರವಧಿ

* ಚುನಾವಣಾ ಆಯೋಗ ಸದಸ್ಯರ ಅವಧಿ 6 ವರ್ಷ ಆದರೆ ಅವಧಿ ಮುಗಿಯುವುದಕ್ಕೆ ಮೊದಲು 65 ವರ್ಷಗಳು ತುಂಬಿದರೆ ಹುದ್ದೆಯಿಂದ ನಿವೃತ್ತಿಯಾಗಬೇಕಾಗುತ್ತದೆ .

ಸೇವಾ ನಿಯಮಗಳು

* ಚುನಾವಣಾ ಆಯೋಗದ ಸದಸ್ಯರು ಹಾಗೂ ಪ್ರಾದೇಶಿಕ ಆಯುಕ್ತರ ಸೇವಾ ನಿಯಮಗಳನ್ನು ಸಂಸತ್ತು ನಿರ್ಧರಿಸುತ್ತವೆ .

ವೇತನ

* ಚುನಾವಣಾ ಆಯೋಗದ ಸದಸ್ಯರಿಗೆ ಸರ್ವೋಚ್ಚ ಸ್ಥಾನಮಾನವನ್ನು ಆಯೋಗದ ಸದಸ್ಯರು ಸರ್ವೋಚ್ಚ ನೀಡಲಾಗಿದೆ . ಆದ್ದರಿಂದ ಆಯೋಗದ ನ್ಯಾಯಾಧೀಶರಿಗೆ ದೊರೆಯುವ ವೇತನ ಪಿಂಚಣಿ ಮತ್ತು ಇತರೆ ಸೌಲಭ್ಯಗಳನ್ನು ಭಾರತ ಸ ೦ ಚಿತ ನಿಧಿಯಿಂದ ಪಡೆಯುತ್ತಾರೆ .

ಪದಚ್ಯುತಿ

* ಚುನಾವಣಾ ಆಯೋಗದ ಮುಖ್ಯ ಆಯುಕ್ತರನ್ನು ಪದಚ್ಯುತಿಗೊಳಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಪದಚ್ಯುತಿಗೊಳಿಸುವ ಆಧಾರ ಮತ್ತು ವಿಧಾನವನ್ನು ಅನುಸರಿಸಬೇಕು .

ಅಧಿಕಾರ ಮತ್ತು ಕಾರ್ಯಗಳು

ಮತದಾರರ ಪಟ್ಟಿಗಳ ಸಿದ್ಧತೆ ಹಾಗೂ ಪರಿಷ್ಕರಣೆಗಳ ಪರಿಶೀಲನೆ ಮತ್ತು ನಿರ್ದೇಶನ ಮಾಡುವರು .
ಭಾರತೀಯ ಸಂವಿಧಾನ

*ಸಂಸತ್ತು ರಾಜ್ಯಶಾಸಕಾಂಗ , ರಾಷ್ಟ್ರಾಧ್ಯಕ್ಷರು ಮತ್ತು ಉಪರಾಷ್ಟ್ರಾಧ್ಯಕ್ಷರ ಸ್ಥಾನಗಳಿಗೆ ಚುನಾವಣೆಗಳನ್ನು ನಡೆಸುವುದು .

*ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು .

*ಪಕ್ಷಗಳಿಗೆ ನೀಡಲಾಗುವ ಮಾನ್ಯತೆ ಮತ್ತು ಚಿಹ್ನೆಗಳಿಗೆ ಉಂಟಾಗುವ ವಿವಾದಗಳನ್ನು ಸಂಬಂಧಿಸಿದಂತೆ ಇತ್ಯರ್ಥಪಡಿಸುವುದು .

*ಚುನಾವಣಾ ವ್ಯವಸ್ಥೆಗಳಿಗೆ ಸಂಬಂಧಿಸಿದ ವಿವಾದಗಳನ್ನು ವಿಚಾರಣೆ ನಡೆಸಲು ಅಧಿಕಾರಿಗಳನ್ನು ನೇಮಿಸುವುದು *ಚುನಾವಣಾ ನೀತಿ ಸಂಹಿತೆಯನ್ನು ರೂಪಿಸಿ ಅನುಷ್ಠಾನ ಗೊಳಿಸಿ ಸಂಸತ್ ಸದಸ್ಯರ ಅರ್ಹತೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸಲಹೆ ನೀಡುವುದು .

ನಕಲು ಮತದಾನ , ಮತಗಟ್ಟೆಗಳನ್ನು ವಶಪಡಿಸಿ ಕೊಳ್ಳುವುದು ಮುಂತಾದ ಚುನಾವಣಾ ಅಕ್ರಮಗಳು ನಡೆದಾಗ ಚುನಾವಣೆಯನ್ನು ರದ್ದುಪಡಿಸುವುದು .

* ಚುನಾವಣೆ ನಡೆಸಲು ಅಗತ್ಯವಾದ ಸಿಬ್ಬಂದಿಯನ್ನು ಒದಗಿಸುವಂತೆ ರಾಷ್ಟ್ರಾಧ್ಯಕ್ಷರು ಅಥವಾ ರಾಜ್ಯಪಾಲರನ್ನು ವಿನಂತಿಸಿಕೊಳ್ಳುವುದು .

ಚುನಾವಣೆ ಮತ್ತು ಚುನಾವಣಾ ಆಯೋಗದ ಕುರಿತ ಪ್ರಶ್ನೋತ್ತರಗಳು

1. ಚುನಾವಣೆ ಪದದ ಮೂಲ ಪದ ಯಾವುದು?

ಉತ್ತರ : ಚುನಾವಣೆ ಪದದ ಮೂಲ ಪದ ಎಲಿಗೆರೆ

2. ಚುನಾವಣೆ ಎಂದರೇನು?

ಉತ್ತರ :ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು.

3. ಸಾರ್ವತ್ರಿಕ ಚುನಾವಣೆ ಎಂದರೇನು?

ಉತ್ತರ :ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು.

ಉದಾ: 2014ರ ಏಪ್ರಿಲ್ ಹಾಗು ಮೇನಲ್ಲಿ ನಡೆದ ಭಾರತದಲ್ಲಿನ ಚುನಾವಣೆಗಳು.

4. ಉಪ ಚುನಾವಣೆ ಎಂದರೇನು?

ಉತ್ತರ :ಒಬ್ಬ ಚುನಾಯಿತ ಪ್ರತಿನಿಧಿಯ ರಾಜೀನಾಮೆ,ಮರಣ ಅಥವ ಅನರ್ಹತೆಯಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಜರುಗುವ ಚುನಾವಣೆಗೆ ಉಪ ಚುನಾವಣೆ ಎನ್ನುವರು.

5. ಮರು ಚುನಾವಣೆ ಎಂದರೇನು?

ಉತ್ತರ :ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತಗಟ್ಟೆಯ ವಶ, ಮತ ಯಂತ್ರದಲ್ಲಿನ ತೊಂದರೆ, ಮತ ಪಟ್ಟಿಯಲ್ಲಿನ ದೋಷಗಳಿಂದ ನಿರ್ದಿಷ್ಟ ಮತಗಟ್ಟೆಯ ಚುನಾವಣೆಯನ್ನು ಮುಂದೂಡಿ ನಡೆಸಲಾಗುವ ಚುನಾವಣೆಗೆ ಮರು ಚುನಾವಣೆ ಎನ್ನುವರು.

6. ಮಧ್ಯಂತರ ಚುನಾವಣೆ ಎಂದರೇನು?

ಉತ್ತರ :ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕಿಂತ ಮೊದಲೇ ಜರುಗುವ ಚುನಾವಣೆಯಲ್ಲಿ ಮತ ನೀಡುವುದನ್ನು ಮಧ್ಯಂತರ ಚುನಾವಣೆ ಎನ್ನುವರು.

ಉದಾ :2004ರಲ್ಲಿ ಐದು ವರ್ಷ ಅವಧಿ ಮುಗಿಯುವುದಕ್ಕಿಂತ ಮೊದಲೇ ಜರುಗಿದ ಲೋಕಸಭೆಯ ಚುನಾವಣೆಗಳು.

7. ಪ್ರತ್ಯಕ್ಷ ಚುನಾವಣೆ ಎಂದರೇನು?

ಉತ್ತರ : ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.

8. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.

ಉತ್ತರ : ಭಾರತದಲ್ಲಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು.

9. ಪರೋಕ್ಷ ಚುನಾವಣೆ ಎಂದರೇನು?

ಉತ್ತರ : ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.

ಚುನಾವಣಾ ಆಯೋಗ ಮಾಹಿತಿ

10. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.

ಉತ್ತರ: ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ.

11. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎಂದರೇನು?

ಉತ್ತರ : ಜಾತಿ,ಲಿಂಗ,ಧರ್ಮ,ವರ್ಣ ಮುಂತಾದವುಗಳ ಆಧಾರದ ಮೇಲೆ ತಾರತಮ್ಯ ಮಾಡದೇ ನಿರ್ದಿಷ್ಟ ವಯೋಮಿತಿ ದಾಟಿದ ದೇಶದ ಅರ್ಹ ಪ್ರಜೆಗಳಿಗೆಲ್ಲ ಮತ ನೀಡಲು ಅವಕಾಶವಿರುವ ಚುನಾವಣೆಗೆ ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಎನ್ನುವರು.

12. ಭಾರತದಲ್ಲಿ ಮತ ಚಲಾಯಿಸಲು ಕನಿಷ್ಟ ವಯೋಮಿತಿ ಎಷ್ಟು?

ಉತ್ತರ : ಭಾರತದಲ್ಲಿ ಮತ ಚಲಾಯಿಸಲು ಮತದಾರನಿಗೆ ಕನಿಷ್ಟ ವಯೋಮಿತಿ 18 ವರ್ಷಗಳು.

13. ಭಾರತ ಚುನಾವಣಾ ಆಯೋಗದಲ್ಲಿ ಎಷ್ಟು ಸದಸ್ಯರಿದ್ದಾರೆ?

ಉತ್ತರ : ಭಾರತ ಚುನಾವಣಾ ಆಯೋಗದಲ್ಲಿ ಮೂವರು ಸದಸ್ಯರಿದ್ದಾರೆ.

14. ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ಯಾರು ನೇಮಿಸುತ್ತಾರೆ?

ಉತ್ತರ : ಭಾರತ ಚುನಾವಣಾ ಆಯೋಗದ ಆಯುಕ್ತರನ್ನು ರಾಷ್ಟ್ರಪತಿ ನೇಮಿಸುತ್ತಾರೆ

15. ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ ಎಷ್ಟು?

ಉತ್ತರ : ಭಾರತ ಚುನಾವಣಾ ಆಯೋಗದ ಆಯುಕ್ತರ ಅಧಿಕಾರವಧಿ 6 ವರ್ಷಗಳು.

16. EVM ಅನ್ನು ವಿಸ್ತರಿಸಿ.

ಉತ್ತರ : EVM ಅನ್ನು ವಿಸ್ತರಿಸಿದರೆ ವಿದ್ಯುನ್ಮಾನ ಮತ ಯಂತ್ರ [ELECTRONIC VOTING MASSION] ಎಂದಾಗುತ್ತದೆ.

17. EPIC ಅನ್ನು ವಿಸ್ತರಿಸಿ.

ಉತ್ತರ : EPIC ಅನ್ನು ವಿಸ್ತರಿಸಿದರೆ ಮತದಾರರ ಭಾವಚಿತ್ರವುಳ್ಳ ಗುರುತಿನ ಚೀಟಿ [ELECTORS PHOTO IDENTITY CARD] ಎಂದಾಗುತ್ತದೆ.

18. ಮತದಾರನ ಗುರುತಿನ ಚೀಟಿ ಎಂದರೇನು?

ಉತ್ತರ : ಮತದಾರನ ಭಾವಚಿತ್ರ,ವಿಳಾಸ,ಮತಕ್ಷೇತ್ರ ಸಂಖೆ ಇತ್ಯಾದಿಗಳನ್ನುಳ್ಳ ಚುನಾವಣಾ ಆಯೋಗ ಹಂಚಿದ ಪತ್ರವೇ ಮತದಾರನ ಗುರುತಿನ ಚೀಟಿಯಾಗಿದೆ.

19. ವಿದ್ಯುನ್ಮಾನ ಮತ ಯಂತ್ರ ಎಂದರೇನು?

ಉತ್ತರ: ಮತದಾರ ಸುಲಭವಾಗಿ ಮತ ನೀಡಲು ನೆರವಾಗುವ ವಿದ್ಯುತ್ ಚಾಲಿತ ಯಂತ್ರವೇ ವಿದ್ಯುನ್ಮಾನ ಮತ ಯಂತ್ರವಾಗಿದೆ.

20. ರಾಜಕೀಯ ಪಕ್ಷ ಎಂದರೇನು?

ಉತ್ತರ : ರಾಜಕೀಯವಾಗಿ ಏಕಾಭಿಪ್ರಾಯ ಹೊಂದಿದ್ದು,ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಸರ್ಕಾರವನ್ನು ನಿಯಂತ್ರಿಸಲು ಸಂಘಟಿತವಾದ ಜನರ ಗುಂಪಿಗೆ ರಾಜಕೀಯ ಪಕ್ಷ ಎನ್ನಬಹುದು.

21. ಭಾರತದಲ್ಲಿ ಎಂತಹ ಪಕ್ಷಪದ್ಧತಿ ಇದೆ?

ಉತ್ತರ :ಭಾರತದಲ್ಲಿ ಬಹು ಪಕ್ಷಪದ್ಧತಿ ಇದೆ.

22. ರಾಷ್ಟ್ರೀಯ ಪಕ್ಷ ಎಂದರೇನು?

ಉತ್ತರ : ರಾಷ್ಟ್ರದ ಹಿತಾಸಕ್ತಿ ಕಾಪಾಡಲು ರಾಷ್ಟ್ರದಾದ್ಯಂತ ಅಸ್ತಿತ್ವದಲ್ಲಿರುವ ಪಕ್ಷಕ್ಕೆ ರಾಷ್ಟ್ರೀಯ ಪಕ್ಷ ಎನ್ನುವರು.

Chunavana Ayoga in Kannada

23. ಪ್ರಾದೇಶಿಕ ಪಕ್ಷ ಎಂದರೇನು?

ಉತ್ತರ: ನಿರ್ದಿಷ್ಟ ಪ್ರದೇಶದ ನೆಲ.ಜಲ.ಭಾಷೆಯಂತಹ ಹಿತಾಸಕ್ತಿಗಳನ್ನು ಕಾಪಾಡಲು ಬದ್ಧವಾಗಿರುವ ರಾಜಕೀಯ ಪಕ್ಷವೇ ಪ್ರಾದೇಶಿಕ ಪಕ್ಷವಾಗಿದೆ.

24. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು ಯಾರು?

ಉತ್ತರ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಕರು A O ಹ್ಯೂಮ್.

25. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಯಾವಾಗ ಸ್ಥಾಪನೆಯಾಯಿತು?

ಉತ್ತರ : ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1885ರಲ್ಲಿ ಸ್ಥಾಪನೆಯಾಯಿತು.

26. NDA ಅನ್ನು ವಿಸ್ತರಿಸಿ.

ಉತ್ತರ : NDA ಅನ್ನು ವಿಸ್ತರಿಸಿದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ [NATIONAL DEMOCRATIC ALLIANCE] ಎಂದಾಗುತ್ತದೆ.

27. UPA ವಿಸ್ತರಿಸಿ.

ಉತ್ತರ : UPA ವಿಸ್ತರಿಸಿದರೆ ಸಂಯುಕ್ತ ಪ್ರಗತಿಪರ ಒಕ್ಕೂಟ [UNITED PROGRESSIVE ALLIANCE] ಎಂದಾಗುತ್ತದೆ.

28. BJP ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?

ಉತ್ತರ : BJP ಪಕ್ಷ 1980ರಲ್ಲಿ ಅಸ್ಥಿತ್ವಕ್ಕೆ ಬಂದಿತು.

29. ಭಾರತೀಯ ಕಮ್ಯುನಿಷ್ಟ್ ಪಕ್ಷ ಯಾವಾಗ ಅಸ್ಥಿತ್ವಕ್ಕೆ ಬಂದಿತು?

ಉತ್ತರ: ಭಾರತೀಯ ಕಮ್ಯುನಿಷ್ಟ್ ಪಕ್ಷ 1924ರಲ್ಲಿ ಅಸ್ಥಿತ್ವಕ್ಕೆ ಬಂದಿತು.

30. ಪಕ್ಷಾಂತರ ಎಂದರೇನು?

ಉತ್ತರ: ಒಬ್ಬ ಚುನಾಯಿತ ಪ್ರತಿನಿಧಿಯು ತನ್ನ ಪಕ್ಷಕ್ಕೆ ರಾಜೀನಾಮೆ ನೀಡದೇ ಬೇರೊಂದು ಪಕ್ಷ ಸೇರುವುದನ್ನು ಪಕ್ಷಾಂತರ ಎನ್ನುವರು.

31. ಪಕ್ಷಾಂತರ ನಿಷೇಧ ಕಾಯಿದೆಯು ಯಾವಾಗ ಜಾರಿಗೊಂಡಿತು?

ಉತ್ತರ : ಪಕ್ಷಾಂತರ ನಿಷೇಧ ಕಾಯಿದೆಯು 1985ರಲ್ಲಿ ಜಾರಿಗೊಂಡಿತು.

32. ಪಕ್ಷಾಂತರ ನಿಷೇಧ ಕಾಯಿದೆ ಎಂದರೇನು?

ಉತ್ತರ : ಚುನಾಯಿತ ಪ್ರತಿನಿಧಿಗಳ ಪಕ್ಷಾಂತರದ ಚಟುವಟಿಕೆಗಳನ್ನು ತಡೆಯಲು ಜಾರಿಗೊಂಡ ಕಾನೂನೇ ಪಕ್ಷಾಂತರ ನಿಷೇಧ ಕಾಯಿದೆಯಾಗಿದೆ.

33. ಪಕ್ಷಾಂತರಕ್ಕಿರುವ ಇತರ ಹೆಸರುಗಳಾವುವು?

ಉತ್ತರ : ಫ಼್ಲೋರ್ ಕ್ರಾಸಿಂಗ್ ಹಾಗು ಕಾರ್ಪೇಟ್ ಕ್ರಾಸಿಂಗ್ ಎಂಬುವು ಪಕ್ಷಾಂತರಕ್ಕಿರುವ ಇತರ ಹೆಸರುಗಳಾಗಿವೆ.

34. ಪಕ್ಷಾಂತರ ನಿಷೇಧ ಕಾಯಿದೆಯನ್ನು ಯಾರು ಜಾರಿಗೆ ತಂದರು?

ಉತ್ತರ: ಪಕ್ಷಾಂತರ ನಿಷೇಧ ಕಾಯಿದೆಯನ್ನು ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಜಾರಿಗೆ ತಂದರು.

35. NOTA ಅನ್ನು ವಿಸ್ತರಿಸಿ.

ಉತ್ತರ : NOTA ಅನ್ನು ವಿಸ್ತರಿಸಿದರೆ ಮೇಲಿನ ಯಾರೂ ನನ್ನ ಆಯ್ಕೆಯಲ್ಲ [NON OF THE ABOVE] ಎಂದಾಗುತ್ತದೆ.

Chunavana Ayoga Information in Kannada

36. ಭಾರತದ ಮೊದಲ ಪ್ರಧಾನಿ ಯಾರು?

ಉತ್ತರ : ಭಾರತದ ಮೊದಲ ಪ್ರಧಾನಿ ಕಾಂಗ್ರೆಸ್ ಪಕ್ಷದ ಜವಾಹರಲಾಲ್ ನೆಹರು.

37. ಭಾರತದ ಮೊದಲ ಮಹಿಳಾ ಪ್ರಧಾನಿ ಯಾರು?

ಉತ್ತರ : ಭಾರತದ ಮೊದಲ ಮಹಿಳಾ ಪ್ರಧಾನಿ ಇಂದಿರಾಗಾಂಧಿ.

38. ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಯಾರು?

ಉತ್ತರ : ಭಾರತದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಮುರಾರ್ಜಿ ದೇಸಾಯಿ.

ಇತರೆ ವಿಷಯಗಳ ಮಾಹಿತಿ ಲಿಂಕ್ ಈ ಕೆಳಗೆ

ಶಾತವಾಹನರು

ಕರ್ನಾಟಕ ಏಕೀಕರಣ ಇತಿಹಾಸ

ಕರ್ನಾಟಕ ರಾಜ ಮನೆತನಗಳ ವಿಶೇಷಗಳು

ಇತರೆ ವೆಬ್ಸೈಟ್

Leave a Reply

Your email address will not be published. Required fields are marked *