ಕನ್ನಡದ ಪ್ರಮುಖ ವಚನಕಾರರು ಮತ್ತು ಅಂಕಿತನಾಮ | vachanakararu in kannada

ಕನ್ನಡದ ಪ್ರಮುಖ ವಚನಕಾರರು ಮತ್ತು ಅಂಕಿತನಾಮ | vachanakararu in kannada

Vachanakararu in Kannada, ವಚನಕಾರರು ಮತ್ತು ಅಂಕಿತನಾಮಗಳು, kannada vachanakararu names and information list, 10 vachanakararu hesarugalu name

vachanakararu in kannada

ಕನ್ನಡ ಸಾಹಿತ್ಯದ ಪ್ರಮುಖ ರೂಪಗಳಲ್ಲಿ ವಚನವೂ ಒಂದು. ಸಾಮಾನ್ಯವಾಗಿ 12ನೇ ಶತಮಾನವು ಐತಿಹಾಸಿಕವಾಗಿ ಮಹತ್ವದ ಕಾಲಘಟ್ಟವಾದುದಲ್ಲದೆ, ಕನ್ನಡ ಸಾಹಿತ್ಯದ ಇತಿಹಾಸದಲ್ಲು ಒಂದು ಪ್ರಮುಖ ಕಾಲಮಾನವಾಗಿದೆ. ಈ ಕಾಲದಲ್ಲಿನ ಶರಣರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾದುದು ’ವಚನ’.

ಇಂದೊಂದು ಆತ್ಮವಿಮರ್ಶೆಯ ಪ್ರಭಾವಶಾಲಿ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ಕನ್ನಡ ಸಾಹಿತ್ಯದ ಜೊತೆಗೆ ಇತರ ಭಾಷಾ ಸಾಹಿತ್ಯದ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ.

Akka mahaadevi
ಅಕ್ಕಮಹಾದೇವಿ

ವಚನ ಎಂದರೇನು?

ವಚನ ಎಂದರೆ ಮಾತು, ಭಾಷೆ, ಪ್ರಮಾಣ ಎಂಬರ್ಥಗಳಿವೆ. ವಚನವೆಂಬುದು ಓದಿದರೆ ಗದ್ಯವಾಗುವ, ಹಾಡಿದರೆ ಹಾಡಾಗುವ ಕನ್ನಡ ಸಾಹಿತ್ಯದ ವಿಶಿಷ್ಟ ಕಾವ್ಯ ಪ್ರಕಾರ ಎಂದರೆ ತಪ್ಪಾಗಲಾರದು.

ಸಮಾಜ ಸುಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷ ಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

NOವಚನಕಾರರುಅಂಕಿತನಾಮ
1ಬಸವಣ್ಣಕೂಡಲ ಸಂಗಮದೇವ
2ಅಕ್ಕಮಹಾದೇವಿಚೆನ್ನಮಲ್ಲಿಕಾರ್ಜುನ
3ಚೆನ್ನ ಬಸವಣ್ಣಕೂಡಲ ಚೆನ್ನಸಂಗಮದೇವ
4ಆಯ್ದಕ್ಕಿ ಲಕ್ಕಮ್ಮಅಮರೇಶ್ವರ ಲಿಂಗ
5ಹಡಪದ ರೇಚಣ್ಣನಿಷ್ಕಳಂಕ ಕೂಡಲ ಚೆನ್ನಸಂಗಮದೇವಾ
6ಅಮುಗೆ ರಾಯಮ್ಮಅಮುಗೇಶ್ವರ
7ಗುರುಬಸವೇಶ್ವರಗುರುಬಸವೇಶ್ವರ
8ಹಾವಿನಾಳ ಕಲ್ಲಯ್ಯಮಹಾಲಿಂಗಕಲ್ಲೇಶ್ವರ
9ಸಿದ್ದರಾಮಕಪಿಲಸಿದ್ಧ ಮಲ್ಲಿಕಾರ್ಜುನ
10ಒಕ್ಕಲಿಗ ಮುದ್ದಣ್ಣಕಾಮಭೀಮ ಜೀವದೊಡೆಯ
11ಆದಯ್ಯಸೌರಾಷ್ಟ್ರ ಸೋಮೇಶ್ವರ
12ಗೊಗ್ಗಪ್ಪನಾಸ್ತಿನಾಥ
13ಅಲ್ಲಮಪ್ರಭುಗುಹೇಶ್ವರ
14ಮಡಿವಾಳ ಮಾಚಯ್ಯಕಲದೇವರ ದೇವಾ
15ನುಲಿಯ ಚೆಂದಯ್ಯಚಂದೇಶ್ವರಲಿಂಗ
16ಹೆಂಡದ ಮಾರಯ್ಯಧರ್ಮೇಶ್ವರ ಲಿಂಗ
17ಚಿಕ್ಕಣ್ಣಉಳಿಯುವೇಶ್ವರ
18ರಕ್ಕಸದ ಬೊಮ್ಮರ್ಜುನರಕ್ಕಸದೊಡೆಯ
19ಗಾವುದ ಮಾಚಯ್ಯಗಾವುದಮಾಚಯ್ಯ
20ನಗಿಯ ಮಾರಿತಂದೆಆತುರವೈರಿ ಮಾದೇಶ್ವರ
21ಅಮ್ಮಿ ದೇವಯ್ಯಚೆನ್ನ ಬಸವಣ್ಣಪ್ರಿಯ/ ಕಮಳೇಶ್ವರ ಲಿಂಗ
22ಸಕಲೇಶ ಮಾದರಸಸಕಲೇಶ್ವರ ದೇವ
23ಬಾಲ ಸಂಗಣ್ಣಕಮಟೇಶ್ವರ ಲಿಂಗ
24ಅಕ್ಕಮ್ಮಆಚಾರವೇ ಪ್ರಾಣವಾದ ರಾಮೇಶ್ವರ ಲಿಂಗ
25ಮಾದರಚೆನ್ನಯ್ಯನಿಷ್ಕಳಂಕ ಮಲ್ಲಿಕಾರ್ಜುನ
26ಸೂಳೆ ಸಂಕವ್ವನಿರ್ಲಜೇಶ್ವರ
27ಎಲೇಶ್ವರದ ಕೇತಯ್ಯಏಲೇಶ್ವರ ಲಿಂಗ
28ಡಕ್ಕೆಯ ಬೊಮ್ಮಣ್ಣಕಾಲಂತಕ ಭೀಮೇಶ್ವರಲಿಂಗ
29ಸೊಡ್ಡಳ ಬಾಚರಸಸೊಡ್ಡಳ
30ಮನಸಂದಮಾರಿತಂದೆಮನಸಂದ ಮಾರೇಶ್ವರ
31ವೀರಶಂಕರ ದಾಸಯ್ಯಘನಗುರುಶಿವಲಿಂಗ ರಾಮನಾಥ
32ಚಂದಿಮರಸಸಿಮ್ಮಲಿಗೆಯ ಚೆನ್ನರಾಮ
33ಅಂಬಿಗರ ಚೌಡಯ್ಯಅಂಬಿಗ ಚೌಡಯ್ಯ
34ಮುಕ್ತಾಯಕ್ಕಅಜಗಣ್ಣ
35ವೀರಗೊಲ್ಲಾಳವೀರವೀರೇಶ್ವರ ಲಿಂಗ
36ದೇವರ ದಾಸಿಮಯ್ಯರಾಮನಾಥ
37ಡೋಹರ ಕಕ್ಕಯ್ಯಕಾಮಹರ ಪ್ರಿಯ ರಾಮನಾಥ

ವಚನಗಳು

mcms 1
ಚೆನ್ನಬಸವಣ್ಣ

ಓದಿದ ವೇದದಲ್ಲಿ ಏನಹುದಯ್ಯಾ ? ಓದಿಸಬಾರದಂಥ ಲಿಂಗಸ್ಥಲ.
ಸಾಧಿಸಿದ ಶಾಸ್ತ್ರದಲೇನಹುದಯ್ಯಾ ? ಸಾಧ್ಯವಾಗದಂಥ ಜಂಗಮಸ್ಥಲ.
ತರ್ಕಿಸಿದ ತರ್ಕದಲ್ಲಿ ಏನಹುದಯ್ಯಾ ? ತರ್ಕಕ್ಕಗೋಚರವಹಂಥ
ಪ್ರಸಾದಿಸ್ಥಲ.
ಓದು ವೇದಶಾಸ್ತ್ರ ತರ್ಕಕ್ಕಗೋಚರ
ಕೂಡಲಚೆನ್ನಸಂಗಾ ನಿಮ್ಮ ಶರಣ.

ಅಲ್ಲಮಪ್ರಭುದೇವರು

ನಾದಬಿಂದುಗಳಿಲ್ಲದಂದು ನಿರ್ಭಯನೆಂಬ
ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.

ಅಲ್ಲಮ ಪ್ರಭು

ಹೊನ್ನು ಮಾಯೆ ಎಂಬರು
ಹೆಣ್ಣು ಮಾಯೆ ಎಂಬರು
ಮಣ್ಣು ಮಾಯೆ ಎಂಬರು
ಹೊನ್ನು ಮಾಯೆಯಲ್ಲ
ಹೆಣ್ಣು ಮಾಯೆಯಲ್ಲ
ಮಣ್ಣು ಮಾಯೆಯಲ್ಲ
ಮನದ ಮುಂದಣ ಆಶೆಯೇ ಮಾಯೆ ಕಾಣ ಗುಹೇಶ್ವರ ||

ಇತರೆ ಪ್ರಮುಖ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಾಂಧಿ ಯುಗ

ಪ್ರಮುಖ ಆತ್ಮಕಥನಗಳು

ಸಾಮಾನ್ಯ ಜ್ಞಾನ

Leave a Reply

Your email address will not be published.