riddle in kannada,ಒಗಟುಗಳು 25, 20 ಒಗಟುಗಳು,ಹೊಸ ಒಗಟುಗಳು,ಕನ್ನಡ ಜನಪದ ಒಗಟುಗಳು, 20ಒಗಟುಗಳು With answers, ಹಾಸ್ಯ ಒಗಟುಗಳು, kannada ogatugalu with answer pdf, kannada ogatugalu question with answer
Riddle In Kannada Language With Answers
ಈ ಲೇಖನದಲ್ಲಿ 50 ಕ್ಕೂ ಹೆಚ್ಚು ಒಗಟುಗಳು ಮತ್ತು ಉತ್ತರಗಳನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಾಡೆದುಕೊಳ್ಳಬಹುದು ಇದು ಸಂಪೂರ್ಣವಾಗಿ ಉಚಿತವಾಗಿದೆ ಹಾಗು ಇದನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.
50+ ಒಗಟುಗಳು ಮತ್ತು ಉತ್ತರಗಳು
Ogatu Kannada Ogatugalu With Answer
- ಬಾ ಅಂದ್ರೆ ಬರೋಲ್ಲ ಹೋಗು ಅಂದೂ ಹೋಗಲ್ಲ.
- ಅಕ್ಕ-ತಂಗಿಯರು ಚಿಟ್ಟುಳ್ಳಿ ಮರದಲ್ಲಿ ಚಿಗುರು ಕೊಯ್ತಾರ.
- ಅಕ್ಷರಗಳಿದ್ದರೂ ಪುಸ್ತಕವದಲ್ಲ. ದುಂಡಿಗಿದ್ದರು. ಚಿತ್ರವದಲ್ಲ ಮೃಗರಾಜನಿದ್ದರೂ ಅರಣ್ಯವಲ್ಲ ಅದಿಲ್ಲದ್ದರೆ ದಿನಗಳೆಯುವಂತಿಲ್ಲ ಅದ್ಯಾರು.
- ಕೈಯಿಲ್ಲ-ಕಾಲಿಲ್ಲ-ಹೆಸರಿಲ್ಲ-ಕುಲ ಇಲ್ಲ ಅಂದ್ರೂ ಮನೆ ಬಿಟ್ಟು ಓಡ್ತಾನೆ-ಹಿಡಿಯಾಕ ಮಾತ್ರ ಆಗಲ್ಲ.
- ನೀರಿನಲ್ಲೇ ಹುಟ್ಟಿ ನೀರಿನಲ್ಲೇ ಬೆಳೆದು ಊರಿಗೆ ಒಂದು ಗಂಟಲು ಹರಿಯುವಂತೆ ಕೂಗುವ ನಾನು ಯಾರು, – ಶಂಖ
- ಅಕ್ಕ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ.
- ಅಣ್ಣ ತಮ್ಮನ ಮನೆಗೆ ಹೋಗಲ್ಲ ತಮ್ಮ ಅಣ್ಣನ ಮನೆಗೆ ಹೋಗಲ್ಲ ಅಕ್ಕ-ಪಕ್ಕದಲ್ಲೇ ಇರುವ ಸಹೋದರರು ಯಾರು.ಕಣ್ಣು
- ಅಕ್ಕಕ್ಕಾ ಸಿವನ್ ನೋಡೆ, ಸಿವನ ಸುತ್ತ ಪತ್ರೆ ನೋಡೆ, ಸಿವನ ಒಳ್ಳ ಗಂಗೆ ನೋಡೆ, ಮಸಣದ ಬೂದಿ ಮೈಮ್ಯಾಗ ನೋಡೆ, ಕುಂತ ಭಂಗಿ ತಪಸ್ಸು ನೋಡೆ.
- ಬರ್ತಾ ಇಳೀತಾನೆ ಹೋಗ್ತಾ ಏತ್ತಾನೆ.
- ಒಂದು ಕೆರೆಗೆ ನಾಲ್ಕು ತೂಬು ರಾತ್ರಿಯೆಲ್ಲಾ ತುಂಬಿಕೊತವೆ ಬೆಳಗಾಗ್ತಿದ್ದಂಗೆ ಖಾಲಿಯಾಗ್ತವೆ.
- ಕರಿತಲೆಯವನಿಗೆ ಬಿಳಿ ಕಾಲು.
- ಕಲ್ಲಿನ ರೂಪದಲ್ಲಿದ್ದರೆ ಹಾಕುವರು ಹಾಲು ನಿಜಬೂದಿ ಬಂದರೆ ತೆಗೆವರು ಕೋಲು,
- ಕರಿ ಸೀರೆ ಉಟ್ಟವಳೆ ಕಾಲುಂಗುರ ತೊಟ್ಟವಳೆ ಮೇಲೆ ಕೆಳಗೆ ಜಿಗಿದಾಡ್ತಾಳೆ.
- ಊರೆಲ್ಲಾ ಸುತ್ತುತ್ತೆ ಮೂಲೆಲ್ ಬಂದು ನಿಲ್ಲುತ್ತೆ.
- ಗಿರ ಗಿರ ತಿರುಗುತ್ತೆ । ಸುಸ್ತಾಗಿ ಬೀಳುತ್ತೆ.
- ಕಿರೀಟವಿದ್ರೂ ರಾಜನಲ್ಲ ಸಮಯ ತಿಳಿಸಿದ್ರೂ ಗಡಿಯಾರವಲ್ಲ.
- ಗುಂಡಮ್ಮನ್ನ ಸೀಳಿದ್ರೆ ಹೊಟ್ಟೆ ತುಂಬಾ ಮಕ್ಕಳು.
- ಅಂಕು ಡೊಂಕಾದ ಬಾವಿಯಲ್ಲಿ ಅಂಗಲಾಚಿದರೂ ಇಂಕರ ನೀರಿಲ್ಲ.
- ಆನೆ ಬೆಂದರೂ ಆನೆ ತೊಡೆ ಬೇಯೋಲ್ಲ.
- ಊರಲ್ಲೆಲ್ಲಾ ಓಡಾಡತ್ತೆ ಕಾಲಲ್ಲಿ ಎಲ್ಲರನ್ನ ಮುಟ್ಟುತ್ತೆ ಕೈಯಿಲ್ಲ.
- ಗಂಗೆ ಧರಿಸಿರುವ ಗಂಗಾಧರನಲ್ಲ ಮೂರು ಕಣ್ಣುಂಟು ಮುಕ್ಕಣ್ಣನಲ್ಲ ಬೂಧಿ ತೊಡಾದಿರುವ ವಿಭೂತಿ ಪುರುಷನಲ್ಲ ಹಾಗಾದರೆ ನಾನು ಯಾರು.
- ಒಂಬತ್ತು ತಿಂಗಳು ಒಳಗಡೆ ವಾಸ ಹೊರ ಕುಡಿಯಲು ಎರಡು ಬಂದವನು ಒಬ್ಬ ಬಂದಾಗ ಕುಡಿಯುವುದು
ಯಾವುದು. - ನಾಟ್ಯದವನಿಗೆ ಮೈಯೆಲ್ಲಾ ಕಣ್ಣು.
- ನೋಡಿದರೆ ತರತರದ ಬಣ್ಣ ಉಜ್ಜಿದರೆ ಒಂದೇ ಬಣ್ಣ.
- ಕ್ಷಮೆಗೆ ಮತ್ತೊಂದು ಹೆಸರೇ
- ಕರವುಂಟು ಕಾಲಿಲ್ಲ | ಶಿರಹರಿದಮುಂಡಾವದು ನರದಿ ಬಿಗಿದಾರು ತುಂಡದಕೆ ಕವಿಗಳಿಗೆ ಅರಿದರಿದ ಪೇಳಿ ಸರ್ವಜ್ಞ
- ಅಮ್ಮನ ಸೀರೆ ಭಾರಿ ಸೀರೆ ನೆರಿಗೆ ಎಣಿಸೋಕೆ ನಾರಾಯಣನಿಗೂ ಸಾಧ್ಯವಿಲ್ಲ.
- ತಾಯಿಗೆ ಮೂರು ಬಣ್ಣ-ಮಗಳಿಗೆ ಎರಡು ಬಣ್ಣ ಇದೆಂತಹ ವಿಚಿತ್ರ ತಾಯಿಗೇ ಬಣ್ಣ ಹೆಚ್ಚು ದೇಶಭಕ್ತರೆ ಉತ್ತರ ಹೇಳಿ.
- ಚಂದ್ರ ಬಿಂಬವ ಹೋಲುವುದು ಎಲ್ಲರ ಮನ ಸೆಳೆಯುವುದು ಕಂಡರೆ ಬಾಯಲ್ಲಿ ನೀರೂರುವುದು ಸುಟ್ಟರೆ ಬಲು ರುಚಿಯೆನಿಸುವುದು.
- ಅಣ್ಣ ಮನೆ ಕಾಯ್ತಾನೆ ತಮ್ಮ ಬೀದಿ ತಿರುಗ್ತಾನೆ.
- ಎಲ್ಲರಿಗೂ ಬೇಕಾಗಿರೋ ಅಜ್ಜಿ ಅವಳ ಮೈ ತುಂಬಾ ಬರಿಕಜ್ಜಿ.
- ಮುಟ್ಟಬಾರದವಳು ಅಂತ ಮೆಟ್ಟೋಕೆ ಹೋದ್ರೆ ಹೆಟ್ಟಾಕ ಬಾಳೆ.
- ಊರೆಲ್ಲಾ ಅಲೆಯೋದು ಬಾಗಿಲ ಸಂದೀಲಿ ಕೂರೋದು ಯಾರಿದು.
- ಹಿಮಾಲಯ ಪರ್ವತದಿಂದ ಬಿಳಿಮೇಕೆ ಇಳಿಯುತ್ತಿದೆ.
- ಮಾತನಾಡುವಾಗ ಮೂವತ್ತೆರಡು ಕವಡಿ ಕಾಣಿಸುತ್ತಾವಾ ತಗೋಬೇಕೆಂದರೆ ಬರೋಲ್ಲ.
- ನೋಡುವುದು ಮುಂಗೈ ನುಂಗುವುದು ಹಸ್ತ.
- ಎರೆಮಣ್ಣು ಎರೆಮಣ್ಣು ಹೆಂಟ್ಯಾಡ ಹೂ ಜೋತಾಡ ಕಾಯಿ ನೇತಾಡ.
- ಆಕಾರದಲ್ಲಿ ಚಂದ್ರ ಹೊಳಪಿನಲ್ಲಿ ಸೂರ್ಯ ಈ ಜಗತ್ತಿನಲ್ಲಿ ನನ್ನನ್ನು ಬಯಸದಿರುವವರೇ ಇಲ್ಲ ನಾನ್ಯಾರು?
- ಮೂರಕ್ಷರದಿಂದ ಕಾಯಿ ಯಾವ ಕಾಯಿ.
- ಆರು ಕಾಲ ಅಪ್ಪಣ್ಣ ಕುಂತು ಮೀಸೆ ತಿರುವಣ್ಣ ಅಲ್ಲಿಂದಲ್ಲಿಗೆ ಹಾರಣ್ಣ.
- ಅಕ್ಕ ಹೊಟ್ಟೆ ಬಿರಿಯ ಉಂಡರೆ, ತಂಗಿ ಮಾಡ್ಕೊತಾಳೆ ವಾಂತಿ.
- ಒಂದು ಗುಂಡೀಲಿ ಒಂದೇ ಮೀನು.
- ಮುಳ್ಳಂದಿ ಹೊಟ್ಟೇಲಿ ಮುತ್ತಿನ ಮೋಟ್ಟೆ
- ಕಾಲಿಲ್ಲದ ಪೋರಿಗೆ ಮಾರುದ್ದದ ಮೂಗುದಾರ.
- ಮುಳ್ಳು ಮುಳ್ಳಿನ ಮರದಲ್ಲಿ ಮುತ್ತು ಮುತ್ತಿನಂಥಾ ಕಾಯಿ.
- ಮಿಣಿ ಮಿಣಿ ಪೋರರಿಗೆ ಮಣ್ಣಿನೊಳಗೇ ಕೆಲಸ.
- ಗಿಡದಲ್ಲಿ ಹುಟ್ಟುತ್ತೆ ಗಿಡದಲ್ಲಿ ಬೆಳೆಯುತ್ತೆ ಶಾಸ್ತ್ರಕ್ಕೆ ಮೊದಲಾಗಿ ಬರುತ್ತೆ.
- ಸಕ್ಕರೆ ಕಾರ್ಖಾನೆಯಾದ್ರೂ ಸರಕ್ಕನೆ ಕೈ ಹಾಕೋಕಾಗ್ದು.
- ನೋಡ್ಲಿಕೆ ಈಟುದ್ದ ಹುಡುಗ ಎಲ್ಲೆಲ್ಲೋ ಸುದ್ದಿ ಮುಟ್ಟಿಸ್ತಾನೆ.
- ಕಾಲುಂಟು ಕೈಯಿಲ್ಲ ನಡುವುಂಟು ತಲೆಯಿಲ್ಲ ನೂರಾರು ಜನರು ನನ್ನ ಧರಿಸಿರುವುದುಂಟು.
- ಕರಿಸ್ಯಾಲೆ ಗರತಿ ಕರೆದ್ರೂ ಮಾತಾಡೋಲ್ಲ ಹಿಡಿದ್ರೂ ಸಿಗೋಲ್ಲ.
- ಮನೆ ಮುಂದೆ ಮಂಡಲ ಹಾವು ನೇತಾಕ್ಕೊಂಡೈತೆ.
- ಚಿಕ್ಕ ಮನೆ ತುಂಬಾ ಬೆಳ್ಳಿ ಚಕ್ಕೆ ತುಂಬಿದ್ದಾರೆ.
- ಒಂದೇ ಕೆರೆಯ ಎರಡು ತೂಗು.
- ನೀರನ್ನೇ ಸೇರುತ್ತೆ ನೀರಿನಲ್ಲಿ ಬೆಳೆಯುತ್ತೆ ನೀರು ಕಂಡರೆ ಹೆದರುತ್ತೆ ಕಣ್ಣಿಗೆ ಕಾಣದೆ ಹೋಗುತ್ತೆ.
- ಆಕಾಶ ಮಾವಿನ ಕಾಯಂಗೆ, ತಿರುವು ಬಂದುಲ್ಲಿನ ಗರಿಯಗಲ, ಒಂದು ಬೆಟ್ಟಿಗೂ, ನೂರಾರು ಮಕ್ಕಳಿಗೆ ಒಂದೇ ಉಡಿದಾರ.
- ಕಚ್ಚಿದಡುರಿವುದು | ಕಿಚ್ಚಲ್ಲ ಕಾಣರೇ ಅಚ್ಚರಿಯಲ್ಲ ಅರಿದಲ್ಲ ಈ ಮಾತು ನಿಶ್ಚಯಂ ಬಲ್ಲೆ! ಸರ್ವಜ್ಞ!.
- ಆಟಸಾಗರದಂಥ ಮರ, ಎಲೆನಾದ್ರೂ ಎಣಿಸಬಹುದು, ಕಾಯಿ ಎಣಿಸೋಕಾಗಲ್ಲ, ಫಲ ನೋಡಿದ್ರೆ ನಿಂಬೆಹಣ್ಣಿನ ಗಾತ್ರ, ಒಳಗೆ ಕೂತದೆ ಕೆಂಬೂತ
Riddle In Kannada Ogatugalu
ಉತ್ತರಗಳು
- ಮಳೆ
- ಮೇಕೆ
- ನಾಣ್ಯ
- ಸಾವು
- ಶಂಖ
- ಮೂಗು
- ಕಣ್ಣು
- ಬೂದುಗುಂಬಳ
- ನೆರಳುಕಾಯಿ
- ಹಸುವಿನ ಕೆಚ್ಚಲು
- ಬೆಂಕಿ ಕಡ್ಡಿ
- ಹಾವು
- ಒನಕೆ
- ಕುಡುಗೋಲು
- ಬುಗುರಿ
- ಕೋಳಿಹುಂಜ
- ಕಿತ್ತಲೆ
- ಕಿವಿ
- ತೆಂಗಿನ ಕಾಯಿ
- ಗಾಳಿ
- ತೆಂಗಿನಕಾಯಿ
- ಗರ್ಭ, ಹೆರಿಗೆ, ಮಗು, ಮೊಲೆ
- ನವಿಲು
- ಸಾಬೂನು
- ತಾಯಿ
- ಹೊಲಿದ ಅಂಗಿ,ಕೋಟು
- ಸಮುದ್ರ
- ನಮ್ಮರಾಷ್ಟ್ರ ಧ್ವಜ
- ಹಪ್ಪಳ
- ಬೀಗ ಕೀಲ
- ಹಾಗಲಕಾಯಿ
- ಜ್ವಾಲಿ ಮುಳ್ಳು
- ಪಾದರಕ್ಷೆ
- ಹಿಮಪಾತ
- ಹಲ್ಲು
- ಬಳೆ
- ಕಡಲೆಕಾಯಿ ಗಿಡ
- ನಾಣ್ಯ
- ಜಾಯ್ಕಾಯಿ
- ಜಿರಲೆ
- ಕೊಡೋಲೆ
- ಹುತ್ತ
- ಹಲಸಿನ ಹಣ್ಣು
- ಸೂಜಿ
- ನಿಂಬೆಹಣ್ಣು
- ಗೆದ್ದಲು ಹುಳುಗಳು
- ಸೀಗೆ
- ಜೇನುಗೂಡು
- ಪೋಸ್ಟ್‌ಕಾರ್ಡ್
- ಪ್ಯಾಂಟು
- ಹೇನು
- ಪಡುವಲಕಾಯಿ
- ಬಾಯಿಯಲ್ಲಿನ ಹೊಳೆಯುವ ಹಲ್ಲುಗಳು
- ಮೂಗು
- ಉಪ್ಪು
- ಪೊರಕೆಗೆ ಕಟ್ಟಿದ ದಾರ
- ಮೆಣಸು
- ಕಲ್ಲತ್ತಿ ಕಾಯಿ ಸೀಬೆ
50 ಒಗಟುಗಳು ಮತ್ತು ಉತ್ತರಗಳು
FAQ
ಅಕ್ಕ ತಂಗಿಯರಿಬ್ಬರ ಮನೆಗೂ ಒಂದೇ ಗೋಡೆ.
ಮೂಗು
ಮುಳ್ಳಂದಿ ಹೊಟ್ಟೇಲಿ ಮುತ್ತಿನ ಮೋಟ್ಟೆ
ಹಲಸಿನ ಹಣ್ಣು