Namma Karnataka 6th Standard Question Answer | ಆರನೇ ತರಗತಿ ಸಮಾಜ ವಿಜ್ಞಾನ ನಮ್ಮ ಕರ್ನಾಟಕ

Namma Karnataka 6th Standard Question Answer | ಆರನೇ ತರಗತಿ ಸಮಾಜ ವಿಜ್ಞಾನ ನಮ್ಮ ಕರ್ನಾಟಕ

Namma Karnataka 6th Standard Question Answer, Science History Chapter 2 Namma Karnataka Questions and Answers, Karnataka State Board, pdf

Namma Karnataka 6th Standard Question Answer

ಅಧ್ಯಾಯ 2 :

ನಮ್ಮ ಕರ್ನಾಟಕ ಬೆಂಗಳೂರು ವಿಭಾಗ

Namma Karnataka 6th Standard Question Answer | ಆರನೇ ತರಗತಿ ಸಮಾಜ ವಿಜ್ಞಾನ ನಮ್ಮ ಕರ್ನಾಟಕ

ಪ್ರಶ್ನೆಗಳು ಮತ್ತು ಉತ್ತರಗಳು :

 1. ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ ಮೂರು ರಾಜ ಮನೆತನಗಳು ಯಾವುವು ? ಉತ್ತರ : ಗಂಗರು , ಹೊಯ್ಸಳರು , ವಿಜಯ ನಗರ ಸಾಮ್ರಾಜ್ಯ ಪ್ರಾಚೀನ ಕಾಲದಲ್ಲಿ ಕರ್ನಾಟಕವನ್ನು ಆಳಿದ ಮೂರು ರಾಜ ಮನೆತನಗಳು.
 2. ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ ?
  ಉತ್ತರ : ಬೆಂಗಳೂರು ವಿಭಾಗದಲ್ಲಿ 9 ಜಿಲ್ಲೆಗಳಿವೆ
 3. ಬೆಂಗಳೂರು ವಿಭಾಗವನ್ನು ಆಳಿದ ಎರಡು ಪಾಳೆಪಟ್ಟುಗಳ ಹೆಸರನ್ನು ಬರೆಯಿರಿ .
  ಉತ್ತರ : 1.ಕೆಳದಿ ನಾಯಕ 2. ಚಿತ್ರದುರ್ಗ ಪಾಳೆಪಟ್ಟು , 3.ಯಲಹಂಕ ಪಾಳೆಪಟ್ಟು , 4.ಚಿಕ್ಕಬಳ್ಳಾಪುರ
 4. ಪ್ರಾಕೃತಿಕ ಸಂಪನ್ಮೂಲ ಎಂದರೇನು ?
  ಉದಾಹರಣೆ ನೀಡಿ ಉತ್ತರ ; ಪ್ರಕೃತಿಯಿಂದ ದತ್ತವಾದ ಸಂಗತಿಗಳನ್ನು ಪ್ರಾಕೃತಿಕ ಸಂಪನ್ಮೂಲ ಎಂದು ಕರೆಯುತ್ತೇವೆ . ಉದಾಹರಣೆ : ನದಿ , ಕಾಡು , ಕಣಿವೆ , ಜಲಪಾತಗಳು , ಖನಿಜ ಗಣಿಗಳು , ವನ್ಯಮೃಗಗಳು , ಮಣ್ಣು
 5. ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ ಯಾವುದು ?
  ಉತ್ತರ : ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆ ಶಿವಮೊಗ್ಗ
 6. ಬೆಂಗಳೂರು ವಿಭಾಗದಲ್ಲಿ ಕುಡಿಯುವ ನೀರಿಗೆ ಅಭಾವ ಉಂಟಾಗಲು ಕಾರಣಗಳೇನು ? ಉತ್ತರ : ಬೆಂಗಳೂರು ನಗರ ಜಿಲ್ಲೆಯ ಅನೇಕ ನದಿಗಳು ನಾಶದ ಅಂಚನ್ನು ತಲುಪಿವೆ . ಅನೇಕ ಕೆರೆಗಳು ಭೂ ಆಕ್ರಮಣದಿಂದ ನಾಶವಾಗುತ್ತಿವೆ . ಇದರಿಂದಾಗಿ ನೀರಿನ ತೀವ್ರ ಅಭಾವ ಉಂಟಾಗುತ್ತಿದೆ .
 7. ಬೆಂಗಳೂರು ವಿಭಾಗದ ಎರಡು ಜಲಪಾತಗಳ ಹೆಸರನ್ನು ಬರೆಯಿರಿ . ಉತ್ತರ : ಬೆಂಗಳೂರು ವಿಭಾಗದ ಎರಡು ಜಲಪಾತ ಜೋಗಜಲಪಾತ ಮುತ್ಯಾಲಮಡು
ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ ?

ಉತ್ತರ : ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬೆಂಗಳೂರು

ಬೆಂಗಳೂರು ವಿಭಾಗದಲ್ಲಿರುವ ಅತಿ ಎತ್ತರದ ಗುಡ್ಡದ ಹೆಸರನ್ನು ಬರೆಯಿರಿ . ಉತ್ತರ : ಬೆಂಗಳೂರು ವಿಭಾಗದಲ್ಲಿರುವ ಅತಿ ಎತ್ತರದ ಗುಡ್ಡದ ಹೆಸರೇನೆಂದರೆ ಹಾಲುರಾಮೇಶ್ವರ ಗುಡ್ಡ .

ಬೆಂಗಳೂರು ವಿಭಾಗದಲ್ಲಿರುವ ಎರಡು ಪಕ್ಷಿಧಾಮಗಳ ಹೆಸರನ್ನು ತಿಳಿಸಿ . ಉತ್ತರ : ಗುಡವಿ ಪಕ್ಷಿಧಾಮ , ಮಂಡಗದ್ದೆ ಪಕ್ಷಿಧಾಮ ಬೆಂಗಳೂರು ವಿಭಾಗದಲ್ಲಿರುವ ಎರಡು ಪಕ್ಷಿಧಾಮಗಳಾಗಿವೆ .

ರಾಮನಗರ ಜಿಲ್ಲೆಯಲ್ಲಿರುವ ಪಕ್ಷಿಧಾಮದಲ್ಲಿ ಯಾವ ಪಕ್ಷಿಯನ್ನು ರಕ್ಷಿಸಲಾಗುತ್ತಿದೆ ? ಉತ್ತರ : ರಾಮನಗರ ಜಿಲ್ಲೆಯಲ್ಲಿರುವ ಪಕ್ಷಿಧಾಮದಲ್ಲಿ ರಣಹದ್ದು ಪಕ್ಷಿಯನ್ನು ರಕ್ಷಿಸಲಾಗುತ್ತಿದೆ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .

ಬೆಂಗಳೂರು ವಿಭಾಗದಲ್ಲಿನ ಪ್ರಮುಖ ಆಹಾರ ಬೆಳೆಗಳು ಯಾವುವು ? ಉತ್ತರ : ಬೆಂಗಳೂರು ವಿಭಾಗದಲ್ಲಿನ ಪ್ರಮುಖ ಆಹಾರ ಬೆಳೆಗಳು ರಾಗಿ , ಮೆಕ್ಕೆ ಜೋಳ , ಭತ್ತ , ಕಡಲೆಕಾಯಿ , ಬೇಳೆಕಾಳು

ಹಿಪ್ಪುನೇರಳೆ ಎಲೆಯು ಯಾವ ಉದ್ದಿಮೆಗೆ ಕಚ್ಚಾ ಸಾಮಗ್ರಿಯಾಗಿದೆ .
ಉತ್ತರ : ಹಿಪ್ಪುನೇರಳೆ ಎಲೆಯು ರೇಷ್ಮೆ ಉದ್ದಿಮೆಗೆ ಕಚ್ಚಾ ಸಾಮಗ್ರಿಯಾಗಿದೆ .

ಭದ್ರಾವತಿಯಲ್ಲಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಯಾವ ವರ್ಷ ಆರಂಭಿಸಲಾಯಿತು ?
ಉತ್ತರ : ಭದ್ರಾವತಿಯಲ್ಲಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು 1923 ರಲ್ಲಿ ಆರಂಭಿಸಲಾಯಿತು .

ಬೆಂಗಳೂರು ವಿಭಾಗದಲ್ಲಿ ಯಾವ ಸ್ಥಳಗಳಲ್ಲಿ ಸಿದ್ಧ ಉಡುಪು ಪಾರ್ಕುಗಳನ್ನು ಸ್ಥಾಪಿಸಲಾಗಿದೆ ?
ಉತ್ತರ : ಬೆಂಗಳೂರು ವಿಭಾಗದಲ್ಲಿ ದೊಡ್ಡಬಳ್ಳಾಪುರ , ಆನೇಕಲ್ ಮುಂತಾದ ನಗರಗಳಲ್ಲಿ ಸರ್ಕಾರ ಸಿದ್ಧ ಉಡುಪಿನ ಪಾರ್ಕುಗಳನ್ನು ಸ್ಥಾಪಿಸಿದೆ .

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ ,
 1. ಜ್ಞಾನಪೀಠ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗಕ್ಕೆ ಸೇರಿದ ಮೂವರು ಸಾಹಿತಿಗಳ ಹೆಸರುಗಳನ್ನು ಬರೆಯಿರಿ .

ಉತ್ತರ : ರಾಷ್ಟ್ರಕವಿ ಕುವೆಂಪು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಮತ್ತು ಡಾ . ಯು.ಆರ್ . ಅನಂತಮೂರ್ತಿ ,

 1. ಪ್ರಸಿದ್ಧ ಜಾನಪದ ಮ್ಯೂಸಿಯಂ ‘ ಜಾನಪದ ಲೋಕ’ವನ್ನು ಸ್ಥಾಪಿಸಿದವರಾರು ?
  ಉತ್ತರ : ಎಚ್.ಎಲ್ . ನಾಗೇಗೌಡ
 2. ಬೆಂಗಳೂರು ನಗರದಲ್ಲಿ ಪ್ರತಿ ವರ್ಷ ನಡೆಯುವ ಪ್ರಸಿದ್ಧ ಉತ್ಸವ ಯಾವುದು ?
  ಉತ್ತರ : ಕರಗ
 3. ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿದ್ದ ರೋಗದ ಹೆಸರೇನು ?
  ಉತ್ತರ : ಶಿವಮೊಗ್ಗ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿದ್ದ ರೋಗದ ಹೆಸರು ಮಂಗನ ಕಾಯಿಲೆ
 4. ಭಾರತರತ್ನ ಪ್ರಶಸ್ತಿ ಪಡೆದ ಬೆಂಗಳೂರು ವಿಭಾಗದ ಇಬ್ಬರ ಹೆಸರನ್ನು ಬರೆಯಿರಿ .
  ಉತ್ತರ : ಸರ್ . ಎಂ . ವಿಶ್ವೇಶ್ವರಯ್ಯ ಮತ್ತು ಸಿ.ಎನ್.ಆರ್.ರಾವ್ .
 5. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರ ಸ್ಥಾಪಿಸುವ ಆಸ್ಪತ್ರೆ ಕೇಂದ್ರಗಳನ್ನು ಏನೆಂದು ಕರೆಯಲಾಗುತ್ತದೆ ?
  ಉತ್ತರ : ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಕೇಂದ್ರಗಳು ಮತ್ತು ಆರೋಗ್ಯ ಉಪಕೇಂದ್ರಗಳು ಎಂದು ಕರೆಯಲಾಗುತ್ತದೆ .
 6. ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿಯ ಹೆಸರನ್ನು ಬರೆಯಿರಿ .
  ಉತ್ತರ : ಮೈಸೂರು ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ . ಸಿ . ರೆಡ್ಡಿ
 7. ಇಬ್ಬರು ಕರ್ನಾಟಕ ಏಕೀಕರಣದ ರೂವಾರಿಗಳ ಹೆಸರನ್ನು ಬರೆಯಿರಿ .
  ಉತ್ತರ : ಕೆಂಗಲ್ ಹನುಮಂತಯ್ಯ ಮತ್ತು ಎಸ್ ನಿಜಲಿಂಗಪ್ಪ
ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ .
 1. ಬೆಂಗಳೂರು ವಿಭಾಗದಲ್ಲಿ ಎಷ್ಟು ಜಿಲ್ಲೆಗಳಿವೆ ?
  ಉತ್ತರ : ಬೆಂಗಳೂರು ವಿಭಾಗದಲ್ಲಿ 9 ಜಿಲ್ಲೆಗಳಿವೆ .
 2. ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಶಾಂತಿಸಾಗರ ಯಾವ ಜಿಲ್ಲೆಯಲ್ಲಿದೆ ?

ಉತ್ತರ : ದಕ್ಷಿಣ ಭಾರತದ ಅತಿ ದೊಡ್ಡ ಕೆರೆ ಶಾಂತಿಸಾಗರ ದಾವಣಗೆರೆ ಚನ್ನಗಿರಿಯಲ್ಲಿದೆ .

 1. ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ ಯಾವುದು ?
  ಉತ್ತರ : ಬೆಂಗಳೂರು ವಿಭಾಗದಲ್ಲಿ ಅತಿ ಹೆಚ್ಚು ಕಾಡು ಇರುವ ಜಿಲ್ಲೆ ಶಿವಮೊಗ್ಗ
 2. ರಾಷ್ಟ್ರಕವಿ ಕುವೆಂಪು ಹೆಸರಿನ ವಿಶ್ವವಿದ್ಯಾಲಯ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿದೆ ? ಉತ್ತರ : ಕರ್ನಾಟಕ ರಾಜ್ಯ , ಶಿವಮೊಗ್ಗ ಜಿಲ್ಲೆಯ ಶಂಕರಘಟದಲ್ಲಿದೆ .

ಮೈಸೂರು ವಿಭಾಗ

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

ಮೈಸೂರು ವಿಭಾಗದಲ್ಲಿರುವ ಎರಡು ರಾಷ್ಟ್ರೀಯ ಉದ್ಯಾನಗಳನ್ನು ಹೆಸರಿಸಿ .
ಉತ್ತರ : ರಾಜೀವ ಗಾಂಧಿ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನ ಈ ವಿಭಾಗದಲ್ಲಿರುವ ಎರಡು ರಾಷ್ಟ್ರೀಯ ಉದ್ಯಾನಗಳಾಗಿವೆ .

ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ

ಮೈಸೂರು ವಿಭಾಗದ ಆಯ್ದ ಆರು ಮುಖ್ಯ ಬೆಳೆಗಳನ್ನು ತಿಳಿಸಿ .
ಉತ್ತರ : ಮುಖ್ಯ ಬೆಳೆಗಳೆಂದರೆ ಭತ್ತ , ರಾಗಿ , ಜೋಳ , ಅವರೆ , ಹೆಸರು , ಉದ್ದು ಮುಂತಾದವು .

ಮೈಸೂರು ವಿಭಾಗದಲ್ಲಿ ಕೃಷಿಗೆ ನೀರಾವರಿ ಒದಗಿಸುವ ಎರಡು ನೀರಾವರಿ ಯೋಜನೆಗಳಾವುವು ?
ಉತ್ತರ : ಅವುಗಳಾವುವೆಂದರೆ ಕೃಷ್ಣರಾಜಸಾಗರ , ಹಾರಂಗಿ , ಹೇಮಾವತಿ ಮತ್ತು ಕಬಿನಿ ನೀರಾವರಿ ಯೋಜನೆಗಳು .

ಮೈಸೂರು ವಿಭಾಗದಲ್ಲಿರುವ ಮೂರು ಮುಖ್ಯ ಉದ್ದಿಮೆಗಳನ್ನು ಹೆಸರಿಸಿ .
ಉತ್ತರ : ಔಷಧಿ ಕಾರ್ಖಾನೆಗಳು , ಕಾಫಿ ಕ್ಯೂರಿಂಗ್ ಉದ್ದಿಮೆಗಳು , ಆಹಾರ ಸಂಸ್ಕರಣಾ ಘಟಕಗಳು ,

II . ಖಾಲಿ ಜಾಗವನ್ನು ಭರ್ತಿ ಮಾಡಿ .

 1. ಮೈಸೂರು ವಿಭಾಗದ ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಕಾಫಿ ಬೆಳೆಯುತ್ತಾರೆ .
  ಉತ್ತರ : ಚಿಕ್ಕಮಗಳೂರು ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ .
 2. ಕೊಡವರು ಆಚರಿಸುವ ಸುಗ್ಗಿ ಹಬ್ಬದ ಹೆಸರೇನು ?
  ಉತ್ತರ : ಕೊಡವರು ಆಚರಿಸುವ ಸುಗ್ಗಿ ಹಬ್ಬ ಹುತ್ತರಿ ಹಬ್ಬ
 3. ಕರ್ನಾಟಕ ಸರ್ಕಾರದ ನಾಟಕ ಸಂಸ್ಥೆ ರಂಗಾಯಣದ ಕೇಂದ್ರ ಸ್ಥಾನ ಯಾವ ನಗರದಲ್ಲಿದೆ ? ಉತ್ತರ : ಕರ್ನಾಟಕ ಸರ್ಕಾರದ ನಾಟಕ ಸಂಸ್ಥೆ ರಂಗಾಯಣದ ಕೇಂದ್ರ ಸ್ಥಾನ ಮೈಯ್ಸೂರು ನಗರದಲ್ಲಿದೆ .
 4. ಮೈಸೂರು ವಿಭಾಗದ ಇಬ್ಬರು ಇಂಗ್ಲೀಷ್ ಕಾದಂಬರಿಕಾರರ ಹೆಸರನ್ನು ಬರೆಯಿರಿ .
  ಉತ್ತರ : ಹಾಸನದ ರಾಜಾರಾವ್ , ಆರ್ . ಕೆ . ನಾರಾಯಣ್ ಪ್ರಸಿದ್ಧ
 5. ಕನ್ನಡದ ಇಬ್ಬರು ಪ್ರಸಿದ್ಧ ಕಾದಂಬರಿಕಾರರ ಹೆಸರನ್ನು ಬರೆಯಿರಿ .
  ಉತ್ತರ : ಶಿವರಾಮ ಕಾರಂತ , ಡಾ . ಎಸ್ . ಎಲ್ ಭೈರಪ್ಪ ಪೂರ್ಣಚಂದ್ರ ತೇಜಸ್ವಿಯವರು ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬರೆಯಿರಿ .
 6. ಮೈಸೂರಿನಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ವಿಶ್ವವಿದ್ಯಾಲಯದ ಹೆಸರನ್ನು ಬರೆಯಿರಿ .
  ಉತ್ತರ : ಮೈಸೂರು ವಿಶ್ವವಿದ್ಯಾಲಯ
 7. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕೇಂದ್ರಗಳ ಹೆಸರೇನು ? ಉತ್ತರ : ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ಕೇಂದ್ರಗಳ ಹೆಸರು ಜಿಲ್ಲಾ ಆಸ್ಪತ್ರೆ ಮತ್ತು ಆರೋಗ್ಯ ಉಪಕೇಂದ್ರ
 8. ಎರಡು ಆರೋಗ್ಯ ಸೂಚಿಗಳನ್ನು ಹೆಸರಿಸಿ .
  ಉತ್ತರ : ಶಿಶು ಮರಣ ಪ್ರಮಾಣ ಕೆಳಮಟ್ಟದಲ್ಲಿದೆ . ಜನರ ಜೀವನ ಆಯುಷ್ಯ ಉತ್ತಮವಾಗಿದೆ . ತಾಯಂದಿರ ಮರಣ ಪೆಮಾಣ ಕೆಳಮಟ್ಟದಲ್ಲಿದೆ . ಇವೆಲ್ಲಾ ಜನರ ಆರೋಗ್ಯ ಸೂಚಿಗಳಾಗಿವೆ .
 9. ಮೈಸೂರು ವಿಭಾಗಕ್ಕೆ ಸೇರಿದ ಇಬ್ಬರು ಪ್ರಸಿದ್ಧ ಇಂಗ್ಲೀಷ್ ಕಾದಂಬರಿಕಾರರ ಹೆಸರನ್ನು ಬರೆಯಿರಿ .
  ಉತ್ತರ : ರಾಜಾರಾವ್ ಮತ್ತು ಆರ್ .ಕೆ ನಾರಾಯಣ್‌
 10. ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಅಸ್ಪೃಶ್ಯತಾ ನಿವಾರಣೆ ಚಳುವಳಿಯಲ್ಲಿ ತೊಡಗಿದ್ದ ಇಬ್ಬರು ಸಮಾಜ ಸುಧಾರಕರ ಹೆಸರು ಬರೆಯಿರಿ .
  ಉತ್ತರ : ಕುದ್ಮಲ್ ರಂಗರಾವ್ ಮತ್ತು ತಗಡೂರು ರಾಮಚಂದ್ರರಾವ್
 11. ಶ್ರವಣಬೆಳಗೊಳವು ಯಾವುದಕ್ಕೆ ಪ್ರಸಿದ್ಧಿಯಾಗಿದೆ ?
  ಉತ್ತರ : ಶ್ರವಣಬೆಳಗೊಳವು ಏಕಶಿಲಾ ಬಾಹುಬಲಿ ಮೂರ್ತಿಗೆ ಪ್ರಸಿದ್ಧವಾಗಿದೆ
 12. ಮೈಸೂರು ಜಿಲ್ಲೆಗೆ ಸೇರಿದ ನಾಲ್ವರು ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ಬರೆಯಿರಿ . ಉತ್ತರ : ಎಸ್ . ಸಿ ದಾಸಪ್ಪ , ಕಾರ್ನಾಡ್ ಸದಾಶಿವರಾವ್ , ಎಚ್‌.ಕೆ . ವೀರಣ್ಣಗೌಡ , ಸಿ . ಎನ್ . ಪೂರ್ಣಚ್ಚ II .

ಖಾಲಿ ಜಾಗ ಭರ್ತಿ ಮಾಡಿ .

 1. ಕೊಡಗು ಜಿಲ್ಲೆಯ…… ನಲ್ಲಿ ಕಾವೇರಿ ನದಿ ಹುಟ್ಟುತ್ತದೆ .

ಉತ್ತರ : ತಲಕಾವೇರಿ

 1. ಕುದ್ಮಲ್ ರಂಗರಾವ್ ಅವರು ನಿವಾರಣೆಗಾಗಿ……. ಹೋರಾಟ ಮಾಡಿದರು .

ಉತ್ತರ : ಅಸ್ಪೃಶ್ಯತೆಯ

 1. ಮೈಸೂರಿನಲ್ಲಿ ನಡೆಯುವ ವಿಶ್ವವಿಖ್ಯಾತ ಉತ್ಸವದ………. ಹೆಸರು ಉತ್ತರ : ದಸರಾ ಉತ್ಸವ
 2. ಮೈಸೂರು ವಿಭಾಗದ ಮತ್ತು ಜಿಲ್ಲೆಗಳಲ್ಲಿ………….. ಬಂದರುಗಳಿವೆ .

ಉತ್ತರ : ಪಣಂಬೂರು ಮತ್ತು ನವಮಂಗಳೂರು

ಮೈಸೂರು ವಿಭಾಗದ ಜಿಲ್ಲೆಗಳಲ್ಲಿ ಬೆಳೆಯುವ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿ . ಉತ್ತರ : ತಂಬಾಕು , ಕಾಫಿ , ಗೋಡಂಬಿ , ಅಡಕೆ , ಆಲೂಗಡ್ಡೆ , ಕಬ್ಬು , ಹತ್ತಿ , ಕಿತ್ತಳೆ , ತೆಂಗು

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿರುವ ಎರಡು ಬಂದರುಗಳನ್ನು ಹೆಸರಿಸಿ . ಉತ್ತರ :. ಬಸರೂರು , ಮಲ್ಪೆ

ಮೈಸೂರು ವಿಭಾಗದ ಯಾವ ಯಾವ ಸ್ಥಳಗಳಲ್ಲಿ ಗೊಮ್ಮಟೇಶ್ವರ ವಿಗ್ರಹಗಳಿವೆ ? ಉತ್ತರ : ಶ್ರವಣಬೆಳಗೊಳ , ಕಾರ್ಕಳ ಮತ್ತು ವೇಣೂರಿನಲ್ಲಿ ಗೊಮ್ಮಟೇಶ್ವರ ವಿಗ್ರಹಗಳಿವೆ .

ಮೊದಲ ಅದ್ಯಾಯ ಓದಿ : ಇತಿಹಾಸ ಪರಿಚಯ 6ನೇ ತರಗತಿ ಪ್ರಶ್ನೆ ಉತ್ತರ

ಮೈಸೂರು ವಿಭಾಗದ ಮತ್ತು ಜಿಲ್ಲೆಗಳಲ್ಲಿ………….. ಬಂದರುಗಳಿವೆ .

ಪಣಂಬೂರು ಮತ್ತು ನವಮಂಗಳೂರು

ಕೊಡಗು ಜಿಲ್ಲೆಯ…… ನಲ್ಲಿ ಕಾವೇರಿ ನದಿ ಹುಟ್ಟುತ್ತದೆ .

ತಲಕಾವೇರಿ

6th standard social science notes

Leave a Reply

Your email address will not be published. Required fields are marked *