ಹಣದ ಅರ್ಥ ವಿವರಣೆ ನೋಟ್ಸ್ । Money Meaning in Kannada

ಹಣದ ಅರ್ಥ ವಿವರಣೆ | Money Meaning in Kannada Economics Best No1 Information

Money Meaning in Kannada , ಹಣದ ಅರ್ಥ ವಿವರಣೆ , ಹಣದ ವ್ಯಾಖ್ಯೆಗಳು notes , money kannada meaning, money in kannada meaning , monetary economics in kannada pdf download

Money Meaning in Kannada ( Meaning and definition of money )

Spardhavani Telegram

ಹಣದ ಅರ್ಥವಿವರಣೆ

ನಾವು ಹಣವನ್ನು ನಿತ್ಯ ನೋಡುತ್ತೇವೆ . ಅದನ್ನು ನೂರಾರು ವರ್ಷಗಳಿಂದ ಬಳಸುತ್ತಾ ಬಂದಿದ್ದೇವೆ . ಆದಾಗ್ಯೂ ಹಣ ಎಂದರೇನು ಎಂಬ ಸರಳ ಪ್ರಶ್ನೆಗೆ ತೃಪ್ತಿಕರವಾದ ಉತ್ತರ ನೀಡುವುದು ಕಷ್ಟಕರ . ಹಣ ಎಂಬ ಪರಿಕಲ್ಪನೆಯನ್ನು ವಿವಿಧ ಅರ್ಥಶಾಸ್ತ್ರಜ್ಞರು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ . ಅವುಗಳಲ್ಲಿ ಪ್ರಮುಖವಾದ ವ್ಯಾಖ್ಯಾನಗಳು ಈ ಮುಂದಿನಂತಿವೆ .

images 4 1
ಹಣದ ವ್ಯಾಖ್ಯೆಗಳು

ಎಫ್.ಎ. ವಾಕರ್ ಅವರ ಪ್ರಕಾರ ‘ ಹಣವು ಏನನ್ನು ಮಾಡುವುದೋ ಅದೇ ಹಣ ‘ , ಅಂದರೆ ವಾಕರ್‌ ಪ್ರಕಾರ ಹಣದ ಕಾರ್ಯಗಳನ್ನು ಮಾಡುವ ವಸ್ತುವು ಹಣವಾಗುತ್ತದೆ .

ಡಿ.ಎಚ್ . ರಾಬರ್ಟ್‌ಸನ್ ಅವರ ಪ್ರಕಾರ , “ ಸರಕುಗಳಿಗೆ ಮೌಲ್ಯ ಕೊಡಲು ಮತ್ತು ಇತರೆ ರೀತಿಯ ವ್ಯವಹಾರ ಜವಾಬ್ದಾರಿಗಳನ್ನು ಪೂರೈಸಲು ಬಳಸಲಾಗುವ ಸರ್ವರಿಂದ ಮನ್ನಿಸಲ್ಪಟ್ಟ ಎಂಥಹುದೇ ಆದರೂ ಹಣವಾಗುತ್ತದೆ.

ಜಿ . ಕೌಥರ್ ಅವರು “ ವಿನಿಮಯ ಸಾಧನವಾಗಿ ಸಾರ್ವತ್ರಿಕವಾಗಿ ಮನ್ನಿಸಲ್ಪಟ್ಟ ಯಾವುದೇ ಆದರೂ , ಅಂದರೆ ಸಾಲಗಳನ್ನು ಪಾವತಿಸಲು ಮತ್ತು ಇದೇ ವೇಳೆ ಮೌಲ್ಯಮಾಪನ ಮತ್ತು ಮೌಲ್ಯ ಸಂಗ್ರಹ ಸಾಧನವಾಗಿ ವರ್ತಿಸುವ ಸಾಧನ ” ಎಂದು ಹಣವನ್ನು ವ್ಯಾಖ್ಯಾನಿಸಿದ್ದಾರೆ .

ಹಣದ ಅರ್ಥ ವಿವರಣೆ | Money Meaning in Kannada Economics Best No1 Information

ಜಾನ್ ಮೇನಾರ್ಡ್ ಕೇನ್ಸ್ ಹಣವನ್ನು “ ಬಟವಾಡೆಯ ಮೂಲಕ ಸಾಲದ ಒಪ್ಪಂದಗಳು ಮತ್ತು ಬೆಲೆಯ ಒಪ್ಪಂದಗಳನ್ನು ಪೂರೈಸಲಾಗುವ , ಮತ್ತು ಅದರ ರೂಪದಲ್ಲಿ ಸಾರ್ವತ್ರಿಕ ಕೊಳ್ಳುವ ಶಕ್ತಿಯನ್ನು ಹೊಂದಲಾಗುವ ಅಂಶ ” ಎಂದು ವ್ಯಾಖ್ಯಾನಿಸಿದ್ದಾರೆ .

ರೇಮಂಡ್ ಪಿ . ಕೆಂಟ್ ‘ ಅವರ ಪ್ರಕಾರ , “ ವಿನಿಮಯ ಸಾಧನವಾಗಿ ಅಥವಾ ಮೌಲ್ಯಮಾಪನ ಸಾಧನವಾಗಿ ಸಾಮಾನ್ಯವಾಗಿ ಬಳಸಲಾಗುವ ಮತ್ತು ಸಾರ್ವತ್ರಿಕವಾಗಿ ಮನ್ನಿಸಲ್ಪಡುವ ಏನೇ ಆದರೂ ಹಣವಾಗುತ್ತದೆ ” .

ಹಣದ ಅರ್ಥ ವಿವರಣೆ | Money Meaning in Kannada Economics Best No1 Information

ಮೇಲಿನ ವ್ಯಾಖ್ಯಾನಗಳಲ್ಲಿ ಸ್ಪಷ್ಟವಾದಂತೆ , ವಿನಿಮಯ ಸಾಧನ ಮತ್ತು ಮೌಲ್ಯಮಾಪನ ಸಾಧನವಾಗಿ ಕಾರ್ಯನಿರ್ವಹಿಸುವ ಸರ್ವರಿಂದ ಮನ್ನಿಸಲ್ಪಟ್ಟ ಯಾವುದೇ ವಸ್ತು ಹಣವಾಗುತ್ತದೆ . ಸಾಮಾನ್ಯವಾಗಿ ಹಣವನ್ನು ಅದರ ಕಾರ್ಯಗಳ ಆಧಾರದ ಮೇಲೆ ವ್ಯಾಖ್ಯಾನಿಸಲಾಗುತ್ತದೆ .

ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *