London Nagara Notes in Kannada, ಲಂಡನ್ ನಗರ ಪಾಠದ ಪ್ರಶ್ನೆ ಉತ್ತರಗಳು, question answer, text book, pdf text book pdf download, ಲಂಡನ್ ನಗರ ನೋಟ್ಸ್ , london nagara mcq questions and answers , london nagara question answer in kannada
London Nagara Notes in Kannada
ಅ . ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ .
1. ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?
ಉ . ಭೂಗರ್ಭದಲ್ಲಿ ಸಂಚಾರ ನಿರ್ಮಿಸಿದ್ದಾರೆ .
2. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು ?
ಉ . ಟಾಫಲ್ಟಾರ್ ಸ್ಪೇರ್ ‘ ಎಂಬುದು .
3. ವೆಸ್ಟ್ ಮಿನ್ಸ್ಟರ್ ಅಬೆ ಯಾರ ಸ್ಮಾರಕವಾಗಿದೆ ?
ಉ . ಸಂತರು , ಸಾರ್ವಭೌಮರು , ಕವಿಗಳ ಸ್ಮಾರಕವಾಗಿದೆ .
4. ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು ?
ಉ . ಚೇರಿಂಗ್ ಕಾಸ್ ‘ ಎಂಬ ಓಣಿ ,
London Nagara Notes in Kannada Question Answer in Kannada
ಆ . ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿರಿ .
1. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು ?
ಉ . ಬೂಟು , ಕಾಲುಚೀಲ , ಚಣ್ಣ , ಸಾಬೂನು , ಔಷಧ , ಪುಸ್ತಕ , ಅಡಿಗೆಯ ಪಾತ್ರೆ , ಇಲೆಕ್ಟಿಕ್ ದೀಪ ಸಾಮಾನು , ಫೋಟೋ , ಅಡವಿಯ ಹೂವು , ಯುದ್ಧ ಸಾಮಗ್ರಿ ಈ ಎಲ್ಲವೂ ದೊರೆಯುತ್ತವೆ .
London Nagara Notes in Kannada
2. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ ?
ಉ . ಅಂಗಡಿಗಳಲ್ಲಿ , ಉಪಾಹಾರ ಗೃಹಗಳಲ್ಲಿ ಮಾಣಿಯಾಗಿ ಟೈಪಿಸ್ಟ್ ಆಗಿ , ಕಾರಕೂನರಾಗಿ ಸಿನಿಮಾ ಗೃಹಗಳಲ್ಲಿ ಜಾಗತೋರಿಸುವವರಾಗಿ ಕಾಲೇಜಿನಲ್ಲಿ ಸಿಪಾಯಿಣಿಯರಾಗಿ ಕೆಲಸ ಮಾಡುತ್ತಾರೆ .
3. ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ ?
ಉ . ಇಲ್ಲಿಯ ಹೆಣ್ಣುಮಕ್ಕಳ ಟೊಪ್ಪಿಗೆಯನ್ನು ಕುತೂಹಲದಿಂದ ನೋಡಿದಾಗ ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ . ಸಿಕ್ಕಬಿದ್ದ ಪುಚ್ಚವಾದರೂ ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ . ಕೊಟ್ಟಾವಧಿ ಟೊಪ್ಪಿಗೆಗಳನ್ನು ಪರೀಕ್ಷಿಸಿದರೆ ಮನಗಾಣಬಹುದು . ಮನುಷ್ಯರಂತೆ ಟೊಪ್ಪಿಗೆಯೂ ಬಂದಂತೆ ಮತ್ತೊಂದು ಇಲ್ಲ ಎಂದಿದ್ದಾರೆ .
4. ಪೋಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ ?
ಉ . ಕಿಪ್ಲಿಂಗ್ , ಜಾನ್‌ಸನ್ , ಗೋಲ್ಡಸ್ಮಿತ್ , ಡಾಯ್ಸನ್ , ಮಾಕಾಲೆ , ಡಿಸೇಲಿ , ಬೆನ್‌ಜಾನ್ಸನ್ , ಹಾರ್ಡಿ ವೆರ್ಡ್ಸ್‌ವರ್ತ ಮುಂತಾದವರ ಸಮಾಧಿಗಳಿವೆ .
5. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲು ಪಾಟಿಯ ವಿಶೇಷತೆಯೇನು
ಉ . ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ . ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡ ಬೇಕು .
2 ನೇ ಎಡ್ವರ್ಡನು ಸ್ಕಾಟ್‌ಲೆಂಡಿನ ಅರಸರಿಂದ ಇದನ್ನು ಕಿತ್ತುಕೊಂಡು ಬಂದನಂತೆ . ಅಂದಿನಿಂದ ಎಲ್ಲ ಸಾಮಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ .
ಇ . ಈ ಪ್ರಶ್ನೆಗಳಿಗೆ ಎಂಟು ಹತ್ತು ವಾಕ್ಯಗಳಲ್ಲಿ ಉತ್ತರಿಸಿ . London Nagara Notes in Kannada SSLC
1. ಲಂಡನ್ ನಗರ ವೀಕ್ಷಣೆಯಲ್ಲಿ ಲೇಖಕರು ಗುರುತಿಸಿರುವ ವಿಶೇಷತೆಗಳೇನು ?
ಉ . ಲೇಖಕರು ಲಂಡನ್‌ನಗರಕ್ಕೆ ಪ್ರವಾಸ ಹೋದಾಗ ಅಲ್ಲಿನ ಅನುಭವಗಳನ್ನು ಕುರಿತು ಹೀಗೆ ಹೇಳಿದ್ದಾರೆ . ಅಲ್ಲಿ ಪ್ರಯಾಣ ದಟ್ಟಣೆಯನ್ನು ಕಡಿಮೆ ಮಾಡಲು ಭೂಗರ್ಭದಲ್ಲಿ ಟ್ರಾಮ್ ಬಸ್ಸುಗಳನ್ನು ಬಳಸುತ್ತಾರೆ . ವೊಲವರ್ಥ ಎಂಬ ಸ್ಟೇಷನರಿ ಅಂಗಡಿಗೆ ಹೋಗಿದ್ದರು . ಅಲ್ಲಿ ಅಗತ್ಯಕ್ಕೆ ಬೇಕಾದ ಎಲ್ಲಾ ವಸ್ತುಗಳೂ ದೊರೆಯುತ್ತವೆ ಎಂದು ಹೇಳಿದ್ದಾರೆ . ಸ್ಟಾಂಡ್‌ದಲ್ಲಿನ ಸ್ಯಾವೋಯ್ ಸಿಂಪಿಗಳಲ್ಲಿಗೆ ಭೇಟಿ ನೀಡಿದ್ದರು . ಲಂಡನ್ ನಗರದಲ್ಲಿ ಎಲ್ಲಾ ಕಡೆ ಅಂದರೆ ಅಂಗಡಿ , ಹೋಟೆಲ್ , ಟೈಪಿಸ್ಟ್ , ಕಾರಕೂನ , ಸಿನಿಮಾ ಗೃಹ ಹೀಗೆ ಎಲ್ಲಾ ಕಡೆಯಲ್ಲೂ ಹೆಣ್ಣು ಮಗಳೇ ಕೆಲಸ ಮಾಡುತ್ತಿರುವರೆಂದಿದ್ದಾರೆ . ಅಲ್ಲಿರುವ ಇಂಡಿಯಾ ಆಫೀಸ್ ತುಂಬಾ ಚೆನ್ನಾಗಿದೆ . ಹಾಗೆ ಆಂಗ್ಲರ
London Nagara Notes in Kannada
ಸಾಮ್ರಾಜ್ಯದ ವೈಭವ ನೋಡಲು ಚೇರಿಂಗ್ ಕ್ರಾಸ್ ಎಂಬ ಓಣಿಗೆ ಹೋಗಿದ್ದರು . ಅಲ್ಲಿನ ಬೀದಿಬೀದಿಗಳಲ್ಲಿ ಮೂಲೆ ಮೂಲೆಗಳಲ್ಲಿ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಕೆತ್ತನೆ ಇದೆ . ಟ್ರಾಫಾರ್ ಸೈರ್ ಎಂಬಲ್ಲಿ ನೆಲ್ಸನ್ ಮೂರ್ತಿ ನೋಡಿದರು . ಹೆಣ್ಣುಮಕ್ಕಳು ಹಾಕಿಕೊಳ್ಳುವ ವೈವಿಧ್ಯಮಯ ಟೋಪಿ ಬಗ್ಗೆ ತಿಳಿಸಿದ್ದಾರೆ . ವೆಸ್ಟ್ ಮಿನ್ಸ್ಟರ್ ಅಬೆ ಪ್ರಾರ್ಥನಾ ಮಂದಿರ ಪೊಯೆಟ್ಸ್ ಕಾರ್ನ‌್ರನಲ್ಲಿನ ಪ್ರಸಿದ್ಧ ಕವಿ , ಲೇಖಕರ ಮೂರ್ತಿಗಳನ್ನು ಕಂಡರು . ಹಾಗೇ ವಿಜ್ಞಾನಿಗಳ ಪರಿಚಯ , ಅರಮನೆ , ಸಿಂಹಾಸನದ ವೈಶಿಷ್ಟ್ಯ ಹೀಗೆ ಇದ್ದ ಕೆಲವು ದಿನಗಳಲ್ಲಿ ಅಪಾರ ಜ್ಞಾನ ಅನುಭವ ಪಡೆದನೆಂದು ಹೇಳಿದ್ದಾರೆ .
2. ವೆಸ್ಟ್ ಮಿನ್ಸ್ಟರ್ ಅಬೆ ! ಪ್ರಾರ್ಥನಾ ಮಂದಿರ ಒಂದು ವಿಶೇಷ ಸ್ಮಾರಕ ವಿವರಿಸಿ .
ಉ , ವೆಸ್ಟ್ ಮಿನ್ಸ್ಟರ್ ಅಬೆ ! ಇದೊಂದು ಪ್ರಾರ್ಥನಾ ಮಂದಿರ . ಒಂದು ಸಾವಿರದ ವರ್ಷದಷ್ಟು ಹಳೆಯ ಕಟ್ಟಡ ಇಂದಿಗೂ ಅಚ್ಚಳಿಯದೆ ಉಳಿದಿದೆ . ಇಲ್ಲಿ ಸಂತರು , ಸಾರ್ವಭೌಮರು , ಕವಿ ಮುಂಗವರು ಹೀಗೆ ಸತ್ತವರ ಸ್ಮಾರಕವಾಗಿದೆ . ಇಂಥ ಮಂದಿರ ಜಗತ್ತಿನಲ್ಲೆಲ್ಲೂ ಇಲ್ಲ . ( ಮರ್ತೃತ್ವವೇ ಎಷ್ಟು ಗೋರಿಗುಂಪುಗಳು ಇಲ್ಲಿವೆ ನೋಡಿ ಅಂಜು ) ಎಂದು 300 ವರ್ಷಗಳ ಹಿಂದೆ ಬ್ಯೂಮಾಂಟ್ ಎಂಬ ಕವಿ ಹಾಡಿದ್ದಾನೆ . ಗೋಲ್ಡ್ ಸ್ಟಿಕ್ ಹಾಗೂ ಎಡಿಸನ್ ಎಂಬ ಪ್ರಖ್ಯಾತ ಸಾಹಿತಿಗಳು ( ವೆಸ್ಟ್ ಮಿನ್ಸ್ಟರ್ ಅಭಿಯ ಸಂದರ್ಶನ ) ಎಂಬ ವಿಷಯದ ಬಗ್ಗೆ ಉತ್ತಮವಾದ ನಿಬಂಧಗಳನ್ನು ಬರೆದಿದ್ದಾರೆ . ಇಂದಿಗೂ ಇದು ಕಣ್ಣಿಗರ ಸ್ಪೂರ್ತಿಯ ತವರು ಮನೆಯಾಗಿದೆ .
ಸಂದರ್ಭದೊಡನೆ ಸ್ವಾರಸ್ಯವನ್ನು ವಿವರಿಸಿ . London Nagara Notes in Kannada Sandarbadodane Vivarisi
1. “ ನಿಮ್ಮ ದೇಶದ ಗೌರವವನ್ನು ಕಾಯಿರಿ ! ಇದು ದೊಡ್ಡದಾದ ರಾಷ್ಟ್ರ
ಉ . ಈ ವಾಕ್ಯವನ್ನು ವಿ.ಕೃ ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಟ್ರಾಫಲಾರ್ ಸೇರ್‌ನ ಬೀದಿ ಬೀದಿಗಳಲ್ಲಿ ಮೂಲೆ ಮೂಲೆಗಳಲ್ಲಿ ದೇಶಕ್ಕಾಗಿ ದುಡಿದ ಮಹಾಪುರುಷರ ಮೂರ್ತಿಗಳಿರುವುದನ್ನು ಕಂಡು ಈ ಮಾತನ್ನು ಹೇಳಿದ್ದಾರೆ .
2. ” ಹೊತ್ತು ! ಹೊತ್ತು ! ಹೊತ್ತೇ ಹಣ . “
ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಲಂಡನ್‌ನಲ್ಲಿ ಎಲ್ಲರೂ ಒಂದಲ್ಲ ಒಂದು ಕಾರ್ಯದಲ್ಲಿ ನಿರತರಾಗಿರುತ್ತಾರೆ . ಅದರಲ್ಲೂ ಮಕ್ಕಳೇ ಎಲ್ಲಾ ಕಡೆ ಕೆಲಸ ಮಾಡುತ್ತಿರುವುದನ್ನು ನೋಡಿ ಅಲ್ಲಿ ಹೊತ್ತಿಗೆ ಎಲ್ಲಾ ಮಹತ್ವ ಅದಕ್ಕೆ ತಕ್ಕಂತೆ ದುಡಿಯಬೇಕು . ಆದ್ದರಿಂದ ಹೊತ್ತೇ ಹಣ ಎಂದು ಹೇಳಿದ್ದಾರೆ .
3. ಯಾರನ್ನೂ ತುಳಿದರೇನು , ಎಲ್ಲಿ ಹೆಜ್ಜೆ ಹಾಕಿದರೇನು ?
ಎಲ್ಲವೂ ಅಷ್ಟೇ ! ಮಣ್ಣು , ಮಣ್ಣು
ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಈ ಮಾತನ್ನು ಲೇಖಕರು , ಪೊಯಟ್ಸ್ ಕಾರ್ನ‌್ರಗೆ ಭೇಟಿ ನೀಡಿದ್ದಾಗ ಅಲ್ಲಿ ಕವಿಗಳ ಹೆಸರು ಸ್ಮರಣೆಯನ್ನು ಕೆಳಗೆ ಹಾಸುಗಲ್ಲಿನಲ್ಲಿ ಹಾಕಿದ್ದರಂತೆ ಅದನ್ನು ತುಳಿದು ಹೋಗಬೇಕಾಗಿದ್ದಾಗ ಲೇಖಕರು ಈ ಮಾತನ್ನು ಹೇಳಿದ್ದಾರೆ .
4. “ ಪ್ರವಾಸವು ಶಿಕ್ಷಣದ ಒಂದು ಭಾಗವಾಗಿದೆ .
” ಉ . ಈ ವಾಕ್ಯವನ್ನು ವಿ.ಕೃ. ಗೋಕಾಕ್ ಬರೆದಿರುವ ಲಂಡನ್ ನಗರ ಎಂಬ ಪಾಠದಿಂದ ಆರಿಸಿದೆ . ಲೇಖಕರು ಲಂಡನ್ ನಗರಕ್ಕೆ ಪ್ರವಾಸ ಹೋಗಿ ಅಲ್ಲಿನ ಅನೇಕ ಸ್ಥಳಗಳಿಗೆ ಭೇಟಿ ನೀಡಿ ಜ್ಞಾನ ಮತ್ತು ಅನುಭವವನ್ನು ಹೆಚ್ಚಿಸಿಕೊಂಡು ಹಿಂದಿರುಗಿದಾಗ ಬೇಕನ್ನು ಹೇಳಿರುವ ಈ ಮೇಲಿನ ಮಾತನು ನೆನಪು ಮಾಡಿಕೊಳ್ಳುತ್ತಾರೆ .
ಉ . ಇಲ್ಲಿ ಬಿಟ್ಟಿರುವ ಪದಗಳನ್ನು ಸರಿಯಾದ ಪದಗಳಿಂದ ತುಂಬಿರಿ London Nagara Notes in Kannada Bitta Sthala Thumbiri
ಲಂಡನ್ ಪಟ್ಟಣವೆಂದರೆ ಒಂದು ……….ಜಗತ್ತು
ಉ . ಸ್ವತಂತ್ರ್ಯ
2. ವೂಲವರ್ಥ ಎಂಬುದು ……………. ಅಂಗಡಿ
ಸ್ಟೇಷನರಿ
3. ಮನೆ ಹಿಡಿದು ಇರುವ …………..ಬುದ್ದಿ ಮನೆಯಮಟ್ಟದ್ದೇ
ತರುಣ
4. ಆಬೆಯಲ್ಲಿರುವ ಸಂಹಾಸನಕ್ಕೆ …………..ಎಂದು ಹೆಸರು
ಉ . ಸ್ಟೋನ್ ಆಫ್ ಸ್ಟೋನ್
5. ವೆಸ್ಟ್ ಮಿನ್ ಸ್ಟರ್ ಅಬೆ ಎಂಬುದು
ಉ . ಪಾರ್ಥನಾ ಮಂದಿರ
London Nagara Notes in Kannada
ಊ ಈ ಪದಗಳನ್ನು ಬಿಡಿಸಿ ಸಂಧಿಯ ಹೆಸರನ್ನು ಬರೆಯಿರಿ . London Nagara Notes in Kannada Sandi Hesarisi
ಒಮೊಮ್ಮೆ = ಒಮೆ + ಒಮ್ಮೆ = ಲೋಪಸಂಧಿ
ಜಾಗವನ್ನು = ಜಾಗ + ಅನ್ನು = ಆಗಮಸಂಧಿ
ಅತ್ಯಾದರ = ಅತಿ + ಆದರ = ಯಣ್ ಸಂಧಿ
ವಾಚನಾಲಯ = ವಾಚನ + ಆಲಯ = ಸವರ್ಣದೀರ್ಘಸಂಧಿ
ಸಂಗ್ರಹಾಲಯ = ಸಂಗ್ರಹ + ಆಲಯ = ಸವರ್ಣದೀರ್ಘಸಂಧಿ
ಓಣಿಯಲ್ಲಿ = ಓಣಿ + ಅಲ್ಲಿ = ಆಗಮಸಂಧಿ
ಈ ಪದಗಳ ಅರ್ಥ ಬರೆದು ಅವುಗಳನ್ನು ನಿಮ್ಮ ಸ್ವಂತ ವಾಕ್ಯಗಳಲ್ಲಿ ಪ್ರಯೋಗಿಸಿ .
1. ದಂಗುಬಡಿ = ದಿಗ್ಬ್ರಮೆ
ಉ . ಹೆದ್ದಾರಿಯಲ್ಲಿ ನಡೆದ ಭೀಕರ ಅಪಘಾತವನ್ನು ನೋಡಿ ಜನ ದಂಗು ಬಡಿದವರಂತಾಗಿದ್ದರು .
2. ಮನಗಾಣು = ತಿಳಿಯುವುದು
ಉ . ಕೆಲವರು ಜಾಹೀರಾತುಗಳನ್ನು ನಂಬಿ ಮೋಸ ಹೋಗುವುದನ್ನು ಮನಗಾಣಬಹುದು .
3. ಅಚ್ಚಳಿ = ನಾಶವಾಗದೆ
ಉ . ಬೇಲೂರಿನ ಶಿಲ್ಪಕಲೆ ಅಚ್ಚಳಿಯದೆ ನಿಂತಿದೆ .
4. ದುರಸ್ತಿ = ಸರಿಪಡಿಸುವುದು
ಉ . ಭಗ್ನಾವಸ್ಥೆಯಲ್ಲಿದ್ದ ದೇವಾಲಯವನ್ನು ದುರಸ್ತಿ ಮಾಡಲಾಗಿದೆ .
5. ಘನತರ = ಹೆಚ್ಚುಗಾರಿಕೆ
ಉ . ಕುತುಬಿನಾರ್ ಘನತರವಾದ ಸ್ಮಾರಕವಾಗಿದೆ .
6. ನಿಟ್ಟಿಸಿ ನೋಡು = ದಿಟ್ಟಿಸಿ , ದೀರ್ಘವಾಗಿ ನೋಡು
ಉ . ಮಕ್ಕಳು ತಪ್ಪು ಮಾಡಿದಾಗ ಪೋಷಕರು ನಿಟ್ಟಿಸಿ ನೋಡುತ್ತಾರೆ .
7. ಮೂಲೆಗೊತ್ತು = ಕಡೆಗಣಿಸಿ
ಉ . ಕೆಲವು ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದ ನಂತರ ಜನರನ್ನು ಮೂಲೆಗೊತ್ತುತ್ತಾರೆ .
8. ದಿಕ್ಕು ತಪ್ಪು = ದಾರಿ ತಪ್ಪು
ಉ . ಕೆಲವು ಉಗ್ರಗಾಮಿಗಳು ಯುವಕರ ದಿಕ್ಕು ತಪ್ಪಿಸುತ್ತಾರೆ .
9. ವಶೀಲಿ = ಪ್ರಭಾವ , ವರ್ಚಸ್ಸು
ಉ . ಮೂಢ ನಂಬಿಕೆಗೊಳಗಾದವರು ಯಂತ್ರ , ಮಂತ್ರಗಳಿಗೆ ವಶೀಲರಾಗುತ್ತಾರೆ.
FAQ
ಲಂಡನ್ನಿನ ರಸ್ತೆಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಮಾಡಿರುವ ವ್ಯವಸ್ಥೆಯೇನು ?
ಭೂಗರ್ಭದಲ್ಲಿ ಸಂಚಾರ ನಿರ್ಮಿಸಿದ್ದಾರೆ .
ಆಂಗ್ಲ ಸಾಮ್ರಾಜ್ಯದ ವೈಭವ ಕಂಡು ಬರುವ ಓಣಿ ಯಾವುದು ?
ಚೇರಿಂಗ್ ಕಾಸ್ ‘ ಎಂಬ ಓಣಿ
ಎಸ್ ಎಸ್ ಎಲ್ ಸಿ ಇತರ ವಿಷಯಗಳ ನೋಟ್ಸ್ ಓದಿರಿ …
ಎಸ್ ಎಸ್ ಎಲ್ ಸಿ ಮಾದರಿ ಪ್ರಶ್ನೆ ಪತ್ರಿಕೆಗಳು 2022
ಎಸ್ ಎಸ್ ಎಲ್ ಸಿ ಇಂಗ್ಲಿಷ್ ಮಾದರಿ ಪ್ರಶ್ನೆಪತ್ರಿಕೆ
ಪ್ರಬಂಧಗಳ ಪಟ್ಟಿ
- ಭೂ ಮಾಲಿನ್ಯ ಕುರಿತು ಪ್ರಬಂಧ
- ಆರ್ಟಿಕಲ್ 370 ಕುರಿತು ಪ್ರಬಂಧ
- ರೈತರ ಆತ್ಮಹತ್ಯೆ ಕುರಿತು ಪ್ರಬಂಧ
- ಜಲ ಮಾಲಿನ್ಯ ಬಗ್ಗೆ ಪ್ರಬಂಧ
ಇತರೆ ವಿಷಯಗಳನ್ನು ಓದಲು ಈ ಕೆಳಗೆ ಕಾಣಿಸುವ ವಿಷಯದಮೇಲೆ ಕ್ಲಿಕ್ ಮಾಡಿ
- ಕನ್ನಡ
- ಇತಿಹಾಸ
- ಭೂಗೋಳಶಾಸ್ತ್ರ
- ಭಾರತದ ಸಂವಿಧಾನ
- ವಿಜ್ಞಾನ
- ಅರ್ಥಶಾಸ್ತ್ರ
- ಮಾನಸಿಕ ಸಾಮರ್ಥ್ಯ
- ಇಂಗ್ಲೀಷ್ ವ್ಯಾಕರಣ
- ಪ್ರಚಲಿತ ವಿದ್ಯಮಾನ
- ಸಾಮಾನ್ಯ ಜ್ಞಾನ