ಕನಕದಾಸರ ಕಥೆ | Kanakadasa Story in Kannada

ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada

Kanakadasa Life Story in Kannada , kanakadasa story in kannada , ಕನಕದಾಸರ ಕಥೆ , bhakta kanakadasa story in kannada , ಕನಕದಾಸರ ಬಗ್ಗೆ ಕಥೆ ಕನ್ನಡ, life story of kanakdas in kannada

Kanakadasa Life Story in Kannada

ಈ ಲೇಖನದಲ್ಲಿ ಕನಕದಾಸರ ಬಗ್ಗೆ ಕಥೆಯನ್ನು ನೀಡಲಾಗಿದೆ ಇದು ಸಂಪೂರ್ಣವಾಗಿ ಉಚಿತವಾಗಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

Bhakta Kanakadasa Story in Kannada

ಕನಕದಾಸರ ಬಗ್ಗೆ ಕಥೆ ಕನ್ನಡ

ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada
ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada

ಜೀವನ ಅಂದ್ರೆನೆ ಹಾಗೆ ಅಲ್ಲಿ ನಾವು ಅಂದುಕೊಂಡ ಹಾಗೆ ಸಾಕಷ್ಟು ಬಾರಿ ಏನೂ ಆಗೋದಿಲ್ಲ. ಜೀವನದ ಯಾವುದೋ ಒಂದು ಕಾಲಘಟ್ಟದಲ್ಲಿ ಸಂಭವಿಸುವ ಒಂದಷ್ಟು ಘಟನೆಗಳು ಮನುಷ್ಯನ ಜೀವನದ ಪಥವನ್ನು ಬದಲಿಸಿ ಬಿಡುತ್ತವೆ. ಹೀಗೆ ಅದೊಂದು ದಿನ ನಡೆದ ಘಟನೆ. ಈ ಜಗತ್ತಿಗೆ ದಾಸವರೇಣ್ಯ ನೊಬ್ಬನ ಕೊಡುಗೆಯಾಗಿ ಕೊಟ್ಟು ಬಿಟ್ಟಿತು ಜಾತಿಯ ವಾಸನೆಯನ್ನ ಬಿಟ್ಟು ಮನುಷ್ಯರಂತೆ ಬದುಕಿ ಅಂತ ಮನುಕುಲಕ್ಕೆ ಉಪದೇಶ ಕೊಟ್ಟ ಆ ಮಹಾನ್ ಸಂತನ ನಾವು ಮರೆಯೋದಕ್ಕೆ ಯಾವತ್ತಿಗೂ ಸಾಧ್ಯವಾಗೋದಿಲ್ಲ.

ಆ ಮಹಾನ್ ಸಂತ ಬೇರೆ ಯಾರು ಅಲ್ಲ ಅವರೇ ದಾಸ ಶ್ರೇಷ್ಠ ಕನಕದಾಸರು ನಿಮ್ಮ ಕುಲದ ನೆಲೆಯನ್ನು ನೀವು ಬಲ್ಲಿರಾ ಅಂತ ಕೇಳುವ ಮೂಲಕ ಇಡೀ ಮನುಕುಲವನ್ನ ಜಾತಿ ಮತಗಳ ಕೊಳಕಿನಿಂದ ಹೊರ ತರೋದಿಕ್ಕೆ ಪ್ರಯತ್ನ ಮಾಡಿದ ಕನಕದಾಸರ ಅಂತಹ ಮಹಾಪುರುಷರನ್ನ ಕೂಡ ನಮ್ಮ ರಾಜಕಾರಣಿಗಳು ಇವತ್ತು ಜಾತಿ ರಾಜಕೀಯದ ವಸ್ತುವನ್ನಾಗಿ ಬಳಸಿಕೊಳ್ಳ ಅದಕ್ಕೆ ಹೋಗ್ತಿದ್ದಾರೆ ಅನ್ನೋದು ನಿಜಕ್ಕೂ ದುರಂತ. ಗೆಳೆಯರೆ 16 ನೇ ಶತಮಾನದ ಸಂತ ಶ್ರೇಷ್ಠ ಬಗ್ಗೆ ಒಂದಷ್ಟು ಮಾಹಿತಿಯನ್ನ ಇಲ್ಲಿ ತಿಳ್ಕೊಳೋ ಪ್ರಯತ್ನ ಮಾಡೋಣ.

Kanakadasa Life Story in Kannada history In Kannada

ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada
ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada

ಕನಕದಾಸರ ತಂದೆ ತಾಯಿ ಬಗ್ಗೆ

ಹಾವೇರಿ ಜಿಲ್ಲೆಯ ಬಾಡ ಅನ್ನೋದ ಗ್ರಾಮ. ಅಲ್ಲಿ ಬಚ್ಚಮ್ಮ ಹಾಗೂ ಬೀರಪ್ಪ ಅನ್ನೋ ದಂಪತಿ ನೆಲೆ ಕಂಡುಕೊಂಡಿದ್ದರು. ಬೀರಪ್ಪ ಸಮಾಜದ ಪ್ರಮುಖ ನಾಗಿದ್ದ ಸಮುದಾಯದಲ್ಲಿ ಹೆಸರು ಸ್ಥಾನಮಾನಗಳಿದ್ದವು. ಆದರೆ ಆತನ ಪತ್ನಿ ಬೀಚಮ್ಮ ಗೆ ಒಂದೇ ಕೊರಗು ಮಕ್ಕಳಾಗಲಿಲ್ಲ ಅನ್ನೋದು. ಹೀಗಾಗಿ ತಮ್ಮ ಇಷ್ಟ ದೈವ ತಿರುಪತಿ ತಿಮ್ಮಪ್ಪನಿಗೆ ಪುತ್ರ ಸಂತಾನವನ್ನು ಕರುಣಿ ಸೋದಿಕ್ಕೆ ಹರಕೆ ಹೊತ್ತುಕೊಂಡಳು ಆ ತಾಯಿ.

ಒಂದು ವೇಳೆ ಮಗು ಆದರೆ ಆ ಮಗುವನ್ನ ನಿನ್ನ ದಾಸನಾಗಿ ಮಾಡ್ತೀನಿ. ನನಗೊಂದು ಮಗು ಕೊಡು ಅಂತ ಕೇಳ್ಕೊಂಡು. ಹೀಗೆ ಆಕೆ ತಿರುಪತಿ ತಿಮ್ಮಪ್ಪನ ಬಳಿ ತನ್ನ ಬೇಡಿಕೆಯನ್ನ ಇಟ್ಟ ಕೆಲವೇ ದಿನಗಳಲ್ಲಿ ಆ ಹರಕೆಯ ಫಲವೇನು ಅನ್ನೋ ಹಾಗೆ 1509ರಲ್ಲಿ ಬೀಚಮ್ಮ ಬೀರಪ್ಪ ದಂಪತಿಗೆ ಗಂಡು ಮಗು ಹುಟ್ಟಿತು.

ವಿಶೇಷ ಏನು ಗೊತ್ತಾ? ಅದೇ ಸಂದರ್ಭದಲ್ಲೇ ವಿಜಯನಗರ ಸಾಮ್ರಾಜ್ಯದ ಸಿಂಹಾಸನದ ಮೇಲೆ ಶ್ರೀ ಕೃಷ್ಣ ದೇವರಾಯ ಪಟ್ಟಾಭಿಷಿಕ್ತ ನಾದ ಒಂದು ಕಡೆ ಧರ್ಮ ಉದ್ಧಾರಕನ ಆಡಳಿತ ಶುರು ವಾದ್ರೆ ಮತ್ತೊಂದು ಕಡೆ ಮಹಾ ನ್ ಸಂತನ ಜನನ ಆಗಿತ್ತು. ಅವತ್ತು ತಿಮ್ಮಪ್ಪನ ಕೃಪೆಯಿಂದ ಹುಟ್ಟಿದ ಆ ಮಗುವಿಗೆ ಮುಂದೆ ತಿಮ್ಮಪ್ಪ ನಾಯಕ ಅಂತ ನಾಮಕರಣ ಮಾಡಲಾಯಿತು.

ಕನಕದಾಸರ ಬಾಲ್ಯ

ಬೀರ ಪ್ಪನಿಗೆ ಮಗನ ತನ್ನಂತೆಯೇ ಪರಾಕ್ರಮಿ ಮಾಡಬೇಕು ಅನ್ನೋ ಆಸೆ. ಆದ್ರೆ ತಾಯಿ ಬೀಚಮ್ಮನಿಗೆ ಮಗ ಶಸ್ತ್ರ ಜೊತೆಗೆ ಒಂದ ಷ್ಟು ಶಾಸ್ತ್ರ ಅಭ್ಯಾಸವನ್ನು ಮಾಡಬೇಕು ಅನ್ನೋ ಆಸೆ ಹೀಗೆ ಮಗು ಶಸ್ತ್ರ ಶಾಸ್ತ್ರ ಎರಡನ್ನು ಕಲಿತಾ ಇತ್ತು. ಹೀಗಿರುವಾಗಲೇ ಅದೊಂದು ದಿನ ತಂದೆ ಬೀರಪ್ಪ ಅಕಾಲ ಮೃತ್ಯುವಿಗೆ ತುತ್ತಾದರು. ಆನಂತರ ಬೀಚಮ್ಮನಿಗೆ ದಿಕ್ಕೂತೋಚಲಿಲ್ಲ. ಬೀರಪ್ಪ ನಂತರ ಅವರ ಮಗ ತಿಮ್ಮಪ್ಪ ಸಣ್ಣ ವಯಸ್ಸಲ್ಲೇ ಜನಾಂಗದ ನಾಯಕನಾಗಿ ಅಧಿಕಾರ ವಹಿಸಿಕೊಂಡ. ಹೀಗೆ ನಾಯಕನಾದ ತಿಮ್ಮಪ್ಪನಿಗೆ.

ಕನಕದಾಸರಿಗೆ ತಿರುಪತಿ ತಿಮ್ಮಪ್ಪ ಪ್ರತ್ಯಕ್ಷ

ಅದೊಂದು ದಿನ ಕನಸಲ್ಲಿ ತಿರುಪತಿ ತಿಮ್ಮಪ್ಪ ಪ್ರತ್ಯಕ್ಷನಾಗಿ ತನಗೊಂದು ಗುಡಿ ಕಟ್ಟಿಸಿ ಕೊಡುವಂತೆ ಕೇಳಿದಂತೆ ತನಗೆ ಬಿದ್ದ ಕನಸಿನ ಬಗ್ಗೆ ಅಚ್ಚರಿ ಗೊಂಡ ತಿಮ್ಮಪ್ಪ ನಾಯಕ ಮುಂದೆ ದೇವರ ಅಣತಿಯಂತೆ ದೇವಾಲಯವೊಂದನ್ನ ಕಟ್ಟೋದಕ್ಕೆ ಮುಂದಾಗುತ್ತಾನೆ. ದೇವಾಲಯ ಕಟ್ಟಿಸುವ ಕಾರ್ಯಭರ ದಿಂದ ಸಾಗ್ತಾ ಇತ್ತು.

ಅಡಿಪಾಯ ಹಾಕುವುದಕ್ಕೆ ಭೂಮಿ ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಗಡಿಗೆಗಳಷ್ಟು ಚಿನ್ನದ ನಾಣ್ಯಗಳು ಹಾಗು ಒಂದು ದೇವರ ವಿಗ್ರಹ ಕೂಡ ಅಲ್ಲಿ ಸಿಕ್ತು. ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ತಿಮ್ಮಪ್ಪ ಮುಂದೆ ಸಿಕ್ಕಿದ ಹಣವನ್ನೆಲ್ಲ ಜನರ ಶ್ರೇಯಸ್ಸು ಹಾಗೂ ಧಾರ್ಮಿಕ ಕಾರ್ಯ ಗಳಿಗಾಗಿ ವಿನಿಯೋಗಿಸೊದಕ್ಕೆ ಶುರು ಮಾಡಿದ ಭೂಮಿಯಲ್ಲಿ ಬಂಗಾರ ಸಿಕ್ಕಿದ ಕಾರಣ ಈತ ಮುಂದೆ ಕನಕ ನಾಯಕ ಅಂತ ಪ್ರಸಿದ್ಧಿ ಹೊಂದುತ್ತಾನೆ.

ಕನಕದಾಸ ಹೋರಾಟ

ಹೀಗೆ ತಿಮ್ಮಪ್ಪನಿಗೆ ಕನಕ ಅಂದ್ರೆ ಚಿನ್ನ ಎನ್ನುವ ಹೆಸರು ಬಂತು. ಹೀಗಿರೋ ಹೊತ್ತಲ್ಲೇ ಬಾಡದ ಮೇಲೆ ಶತ್ರು ಪಡೆ ದಂಡೆತ್ತಿ ಬಂತು. ಆ ಯುದ್ಧದಲ್ಲಿ ಪರಾಕ್ರಮಿ ಕನಕ ನಾಯಕ ಗಂಭೀರವಾಗಿ ಗಾಯಗೊಂಡ ಇನ್ನು ಬದುಕುಳಿಯುವುದೇ ಕಷ್ಟ ಅನ್ನೋ ಪರಿಸ್ಥಿತಿ ಇರುವಾಗ ಅಲ್ಲಿ ಪವಾಡ ವೊಂದು ನಡೆದು ಹೋಗುತ್ತೆ. ತಿರುಪತಿಯ ತಿಮ್ಮಪ್ಪ ಈ ಬಾಡದ ತಿಮ್ಮಪ್ಪ ನಾಯಕನಿಗೆ ಪ್ರತ್ಯಕ್ಷನಾಗಿ ತಾಯಿ ಬಚ್ಚಮ್ಮ ಹೊತ್ತ ಹರಕೆಯ ಬಗ್ಗೆ ಈ ಕನಕ ನಾಯಕನಿಗೆ ನೆನಪಿಸುತ್ತಾನೆ.

Kanakadasa Life Story in Kannada Essay

ಮುಂದೆ ಕನಸಲ್ಲಿ ಕಂಡ ವೆಂಕಟರಮಣನಿಗೆ ನಿನ್ನ ದಾಸನ ಆಗ್ತೀನಿ ಅಂತ ಕನಕ ಹೇಳಿದ ಮೇಲೆ ಕನಕ ನಾಯಕ ಚೇತರಿಸಿ ಕೊಳ್ತಾನೆ ಅಲ್ಲಿಂದಾಚೆಗೆ ಕನಕ ನಾಯಕನಿಗೆ ತನ್ನ ಯುದ್ಧ ಅಥವಾ ಆಡಳಿತ ನಡೆಸುವುದಕ್ಕಾಗಿ ಆದ ಜನ್ಮ ಅಲ್ಲ ಬದಲಾಗಿ ಭಕ್ತಿಯ ಪಥದಲ್ಲಿ ಮೋಕ್ಷದ ಹಾದಿಯನ್ನು ಕಂಡುಕೊಳ್ಳದಕ್ಕಾಗಿ ತಾನು ಜನ್ಮ ಪಡೆದಿದ್ದೇನೆ ಅನ್ನೋದರ ಅರಿವಾಗುತ್ತೆ.

ಮನೆಯನ್ನು ತೊರೆದು ಗುರುವನ್ನು ಅರಸಿ ಹೊರಟ ಕನಕದಾಸರು

ಹೀಗಾಗಿನೇ ಕನಕರು ಮನೆಯನ್ನು ತೊರೆದು ಗುರುವನ್ನು ಅರಸಿ ಹೊರಡುತ್ತಾರೆ. ಅಲ್ಲಿಂದ ಹೊರಟವರು ಸೀದಾ ಬಂದು ನಿಂತಿದ್ದು ವಿಜಯನಗರಕ್ಕೆ ಗೆಳೆಯರೇ ವಿಜಯನಗರದಲ್ಲಿ ಕನಕರಿಗೆ ಸಿಕ್ಕಿದ್ದು ವ್ಯಾಸ ತೀರ್ಥರು ತತ್ವಶಾಸ್ತ್ರದಲ್ಲಿ ನಿಸ್ಸೀಮ ರಾಗಿದ್ದ ವ್ಯಾಸ ತೀರ್ಥರು.

ವೇದ ಶಾಸ್ತ್ರ, ಉಪನಿಷತ್ತುಗಳನ್ನ ಕರತಲಾಮಲಕ ಮಾಡಿಕೊಂಡಿದ್ದ ಯತಿವರೇಣ್ಯ ರಾಗಿದ್ರು ಅಂತ ವ್ಯಾಸ ತೀರ್ಥರ ಬಳಿಗೆ ಕನಕರು ಬರ್ತಾರೆ. ಆದ್ರೆ ಅವನ ಶಿಷ್ಯರನ್ನಾಗಿ ಸ್ವೀಕರಿಸಿ ಅದಕ್ಕೆ ವ್ಯಾಸ ತೀರ್ಥರಿಗೆ ಸಾಕಷ್ಟು ವಿರೋಧಗಳು ಎದುರಾದವು. ಆದರೆ ಅದೆಲ್ಲವನ್ನೂ ಮೀರಿ ವ್ಯಾಸ ತೀರ್ಥರು ಕನಕರಿಗೆ ದೀಕ್ಷೆ ಕೊಟ್ಟರು. ಮುಂದೆ ವ್ಯಾಸರ ಮಾರ್ಗದರ್ಶನ ದಲ್ಲಿ ತಯಾರಾದ ಕನಕರು ವೇದ ಉಪನಿಷತ್ತುಗಳನ್ನು ಅಭ್ಯಾಸ ಮಾಡುತ್ತಾರೆ. ಅದು ಎಂತ ಪಂಡಿತೋತ್ತಮನೆ ಆದರು.

ಕನಕರ ಜ್ಞಾನದ ಮುಂದೆ ಕುಬ್ಜ ಅನಿಸುವಷ್ಟು ಸಾಧನೆಯನ್ನು ಮಾಡುತ್ತಾರೆ. ಕನಕ ಶಬ್ದ ಭಂಡಾರ ಅದೆಷ್ಟು ಅಗಾಧವಾಗಿತ್ತು ಅಂದ್ರೆ ಉಗ್ರ ಗೊಂಡ ನರಸಿಂಹ ದೇವರು ಹಿರಣ್ಯಕಷ್ಯಪುವಿನ ಸಂಹಾರ ಮಾಡಿದ ಬಗೆಯನ್ನು ಬಣ್ಣಿಸಿದ ಕೀರ್ತನೆಯ ಅವರ ಶಬ್ದ ಸಾಗರಕ್ಕೆ ಸಾಕ್ಷಿ. ಇನ್ನು ಗುರು ವ್ಯಾಸ ತೀರ್ಥರ ರೀತಿಯ ಲ್ಲೇ ಕನಕರಿಗೆ ಕೂಡ ದೇವರ ಹಾಡು ಹಾಗು ಸಂಕೀರ್ತನೆಗಳು ಅಂದ್ರೆ ಅಚ್ಚುಮೆಚ್ಚು.

Kanakadasa Life Story in Kannada PDF

ಕನಕದಾಸರು ತಾವು ಪೂರ್ವಾಶ್ರಮದಲ್ಲಿ ದಂಡನಾಯಕನಾಗಿದ್ದಾಗ ವಿಜಯನಗರ ಸಾಮ್ರಾಜ್ಯಕ್ಕೆ ಹೋಗ್ತಾ ಇದ್ರು. ಅಲ್ಲಿಯ ರಾಜ ವೈಭವ ಹಾಗು ಸಾಮ್ರಾಜ್ಯದ ಆಗುಹೋಗುಗಳ ಅನುಭವನ್ನ ಬರಹ ರೂಪಕ್ಕೆ ತಂದರು ಅದುವೇ ಮೋಹನ ತರಂಗಿಣಿ ಆಯಿತು. ಕನಕದಾಸರು ತಮಗೂ ಹಾಗೂ ದೇವರಿಗೂ ಇರುವ ಸಂಬಂಧದ ಬಗ್ಗೆ ಅನೇಕ ಸಂದರ್ಭಗಳಲ್ಲಿ ಹೇಳಿದ್ದುಂಟು.

ಕನಕದಾಸರ ಬಗ್ಗೆ ಕಥೆ ಕನ್ನಡ

ಶ್ರೀ ಹರಿಯನ್ನು ತಮ್ಮ ಒಡೆಯನಾಗಿ ಇನಿಯನಾಗಿ ಹೀಗೆ ಅನೇಕ ವಿಧಗಳಲ್ಲಿ ಸಂಬೋಧಿ ಸುತ್ತಿದ್ದರು. ಎಲ್ಲದಕ್ಕಿಂತ ಕನಕರ ಕೀರ್ತನೆ ಯಲ್ಲಿ ಮನಸ್ಸಿಗೆ ತಟ್ಟುವಂಥದು ಅಂದ್ರೆ ದಾಸನಾಗು ವಿಶೇಷ ನಾಗುನ್ನು ಕೀರ್ತನೆ, ಅದರ ಉದ್ದಕ್ಕೂ ಭಗವಂತನನ್ನು ಒಲಿಸಿ ಕೊಳ್ಳೋದಕ್ಕೆ ಆಶಾ ಕ್ಲೇಶ ಹಾಗು ದೋಷ ಅನ್ನೋ ಮೂರು ಗುಣಗಳನ್ನ ತ್ಯಜಿಸಿದರೆ ಸಾಕು. ಯಾವ ಪುಣ್ಯಕ್ಷೇತ್ರ ಪವಿತ್ರ, ಸ್ನಾನ, ಜಪ ತಪ ಗಳ ಅಗತ್ಯ ಇಲ್ಲ ಅಂತ ತೀರಾ ಸರಳ ವಾದ ಪದಗಳಲ್ಲಿ ಭಕ್ತಿ ಮಾರ್ಗದ ಕಡೆಗೆ ಸಾಗುವ ಬಗೆಯನ್ನು ತಿಳಿಸುತ್ತಾರೆ ಕನಕದಾಸರು.

ಕನಕದಾಸರಿಗೆ ಉಡುಪಿಯಲ್ಲಿ ನಡೆದ ರೋಚಕ ಕಥೆ

ಹೀಗೆ ವಿಶೇಷ ಕೀರ್ತನೆಗಳನ್ನು ರಚಿಸಿದ ಕನಕರಿಗೆ ಉಡುಪಿಯಲ್ಲಿ ನಡೀತು ಅಂತ ಹೇಳಲಾಗುವ ಒಂದು ಅವಮಾನದ ಬಗ್ಗೆ ಇವತ್ತಿಗೂ ಸಾಕಷ್ಟು ರೋಚಕ ಕಥೆ. ಒಂದು ಚಾಲ್ತಿಯಲ್ಲಿದೆ ಅವತ್ತಿಗೂ ವ್ಯಾಸತೀರ್ಥರುಗೂ ಉಡುಪಿಗೂ ಒಂದು ಬಾಂಧವ್ಯ ಇತ್ತು. ಅದೇ ಗೌರವದ ಮೇರೆಗೆ ಅವರನ್ನು ಉಡುಪಿಗೆ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ವ್ಯಾಸ ತೀರ್ಥರು ಕನಕನನನ್ನು ಕೂಡ ತಮ್ಮ ಜೊತೆಗೆ ಕರ್ಕೊಂಡು ಉಡುಪಿಗೆ ಬರ್ತಾರೆ.

ಅಲ್ಲಿ ಕನಕರ ಮೂಲಕ ಸಮಾಜದ ಡೊಂಕು ತಿದ್ದುವ ಕಾರ್ಯ ಕ್ಕೆ ವ್ಯಾಸ ತೀರ್ಥರು ನಿರ್ಧರಿಸಿದರು. ಉಡುಪಿಗೆ ಕನಕದಾಸರು ಬರೋದರ ಬಗ್ಗೆ ಸಿಡಿಮಿಡಿ ಗೊಂಡಿದ್ದ ಕೆಲ ಕರ್ಮಠರು ಯಾವುದೇ ಕಾರಣಕ್ಕೂ ಕನಕನ ದೇವಾಲಯದ ಒಳಗೆ ಬಿಡ ಬಾರ್ದು ಅನ್ನೋ ನಿರ್ಧಾರಕ್ಕೆ ಬಂದರು. ಹೀಗಾಗಿ ಕನಕದಾಸರು ದೇವಾಲಯದ ಪ್ರಾಂಗಣದಲ್ಲಿ ನಿಂತು ದೇವರನ್ನು ಪ್ರಾರ್ಥಿಸಿ ಬೇಕಾಗುತ್ತೆ.

ಉಡುಪಿಯ ಕನಕನ ಕಿಂಡಿಯ ಕಥೆ

Kanakadasa Life Story in Kannada Kanakana Kindi Story

ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada
ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada

ಸುಮಾರು ನಾಲ್ಕು ವಾರಗಳು ಉರುಳಿದವು ಕನಕದಾಸರನ್ನ ಮಾತ್ರ ಕೃಷ್ಣನ ದರ್ಶನಕ್ಕೆ ಒಳಗೆ ಬರೋದಕ್ಕೆ ದೇವಾಲಯದ ಆಡಳಿತ ಬಿಡಲಿಲ್ಲ. ಕನಕದಾಸರು ಕೂಡ ಕೃಷ್ಣನ ನೋಡಿದೆ. ನಾನು ಇಲ್ಲಿಂದ ಹೋಗೋದಿಲ್ಲ ಅನ್ನೋ ನಿರ್ಧಾರಕ್ಕೆ ಬಂದರು.

ಕೊನೆಗೊಂದಿನ ಪಶ್ಚಿಮ ಅಭಿಮುಖವಾಗಿ ಕೂತಿದ್ದ ಕನಕರಿಗೆ ಅಲ್ಲೇ ದೇವರು ತಿರುಗಿ ದರ್ಶನ ಕೊಟ್ಟ ಅಂತ ಹೇಳಲಾಗುತ್ತೆ. ಆದ್ರೆ ಉಡುಪಿಯ ಕನಕನ ಕಿಂಡಿಯ ಬಗ್ಗೆ ಸ್ವತಃ ಕನಕದಾಸರ ಕೃತಿಗಳಲ್ಲಾಗಲಿ ಮಠದ ದಾಖಲೆಗಳಲ್ಲಿ ಎಲ್ಲೂ ಉಲ್ಲೇಖ ಸಿಗೋದಿಲ್ಲ. ಉಡುಪಿಯ ಕೃಷ್ಣ ವಿಗ್ರಹವನ್ನ ಮಧ್ವಾಚಾರ್ಯ ರು ಕೃಷಿಕ 1238 ರಲ್ಲಿ ಪಶ್ಚಿಮ ಅಭಿಮುಖವಾಗಿ ಪ್ರತಿಷ್ಠಾಪನೆ ಮಾಡಿದ್ರು ಅಂತ ಕೂಡ ಹೇಳಲಾಗುತ್ತೆ. ಅವರಿಗೆ ಕೃಷ್ಣನ ವಿಗ್ರಹ ಪಶ್ಚಿಮದಲ್ಲಿ ಸಿಕ್ಕಿದ್ದರಿಂದ ಅದನ್ನ ಪಶ್ಚಿಮಕ್ಕೆ ಪ್ರತಿಷ್ಠಾಪಿಸಿದರು ಅನ್ನೋದು ದಾಖಲೆಗಳಿಂದ ನಮಗೆ ಸಿಗುವ ಮಾಹಿತಿ.

ಅದೇನೇ ಆದರೂ ಮುಂದೆ ಪಶ್ಚಿಮದ ಕಿಂಡಿ ಕನಕನ ಕಿಂಡಿ ಅಂತ ಪ್ರಸಿದ್ಧಿಯನ್ನು ಪಡೆಯಿತು. ಕನಕದಾಸರ ಆರಾಧ್ಯದೈವ ಕಾಗಿನೆಲೆ ಯಲ್ಲಿರುವ ಆದಿಕೇಶ್ವರ. ಹೀಗಾಗಿ ಅವರ ಅಂಕಿತನಾಮ ಕೂಡ ಕಾಗಿನೆಲೆಯ ಆದಿಕೇಶವ ಅಂತ ಲಾಗಿತ್ತು. ಕರ್ನಾಟಕ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ಅವರು ನಿರಂತರವಾಗಿ ಸಂಚರಿಸುತ್ತ ಭಕ್ತಿ ಮಾರ್ಗದ ಉಪದೇಶ ಮಾಡ್ತಾರೆ.

ಆ ಸಂದರ್ಭದಲ್ಲಿ ಅವರು ಅನೇಕ ಧಾರ್ಮಿಕ ಮುಖಂಡರನ್ನ ಭೇಟಿ ಮಾಡಿ ಚಿಂತನ ಮಂಥನಗಳನ್ನ ಮಾಡ್ತಾ ಇದ್ರು. ಅವರ ಸಾಹಸ ತರ್ಕ ಅವರಿಗಾದ ಬೇಸರದ ಸಂಗತಿಗಳನ್ನ ಕೀರ್ತನೆಗಳ ವಸ್ತುವನ್ನಾಗಿ ಬಳಸಿಕೊಂಡರು.

ತಮ್ಮ ಸಮಕಾಲೀನರು ಹಾಗು ಗುರುಗಳಾದ ವ್ಯಾಸ ತೀರ್ಥರು, ಪುರಂದರದಾಸರ ಅಗಾಧ ಜ್ಞಾನ ಸಂಪತ್ತು ಪರಮಾತ್ಮನೆಡೆಗೆ ಅವರಿಗಿದ್ದ ನಿಷ್ಕಲ್ಮಶ ಪ್ರೇಮದ ಕುರಿತಾಗಿ ಕೂಡ ಕನಕರು ಹಾಡಿ ಹೊಗಳಿದ್ದಾರೆ. ಕನಕದಾಸರು ಮುಂದೆ ಶ್ರೀ ವೈಷ್ಣವ ಸಿದ್ಧಾಂತದತ್ತ ಒಲವನ್ನ ಹೊಂದಿದ್ದರು. ಉಲ್ಲೇಖ ಕೂಡ ಸಿಗುತ್ತೆ. ಜೊತೆ ಗೆ ತಮಗೆ ದಾರಿ ತೋರಿದ ವ್ಯಾಸ ತೀರ್ಥರ ಚಿಂತನೆಗಳ ಸೆಳೆತ ದಿಂದಾಗಿ ತಾತ್ವಿಕತೆಯ ಆಕರ್ಷಣೆ ಗೊಳಗಾದ ಅವರ ಕೀರ್ತನೆಗಳಲ್ಲಿ ಆ ಪ್ರಭಾವ ಎದ್ದು ಕಾಣುತ್ತೆ. ಹೀಗಾಗಿ ಕನಕರ ಅನೇಕ ಕೃತಿಗಳು, ಕೀರ್ತನೆಗಳು ಧರ್ಮದ ಚೌಕಟ್ಟಲಿವೆ.

ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada
ಕನಕದಾಸರ ಬಗ್ಗೆ ಕಥೆ ಕನ್ನಡ | Kanakadasa Life Story in Kannada Best No1 Story In Kannada

ಇನ್ನು ಕರ್ಮಠ ಬ್ರಾಹ್ಮಣರು ಕನಕನ ಅವಮಾನಿಸಿದರು ಅನ್ನೋದು ಕೊಳಕು ಮನಸ್ಸುಗಳು ಎಲ್ಲಿ ಇರೋದಿಲ್ಲ. ಕನಕ ರಿಗೆ ಕೃಷ್ಣ ಮಂದಿರ ಪ್ರವೇಶವನ್ನು ನಿರಾಕರಿಸಿದ ಅವರು ಬ್ರಾಹ್ಮಣರೇ ಅವರಿಗೆ ದೀಕ್ಷೆ ಕೊಟ್ಟ ಗುರು ವ್ಯಾಸತೀರ್ಥರು ಬ್ರಾಹ್ಮಣರೇ ಅದು ಸಮುದಾಯಗಳ ಜಗಳ ಅಲ್ಲ.

ಕೇವಲ ಸಣ್ಣ ಮನಸ್ಸುಗಳ ಕುಕೃತ್ಯ ಅಷ್ಟೇ. ಇದು ಗೊತ್ತಿದ್ದರಿಂದಲೇ ಕನಕರು ಅದು ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ. ತಮ್ಮ ಸಾಧನೆಯನ್ನು ಮುಂದುವರಿಸಿದರು. ಅವತ್ತಿನ ಮೌಢ್ಯಗಳ ವಿರುದ್ಧ ತಮ್ಮ ಕೀರ್ತನೆ ಗಳಲ್ಲಿ ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಿದರು.

ಕನಕದಾಸರು ತಮ್ಮ ಜೀವಿತಾವಧಿಯಲ್ಲಿ ಮೋಹನ ತರಂಗಿಣಿ, ನಳ ಚರಿತ್ರೆ ಅನ್ನೋ ಎರಡು ಮಹಾನ್ ಕೃತಿ ಗಳನ್ನು ರಚಿಸುತ್ತಾರೆ. ಹರಿ ಭಕ್ತಿ ಸಾರ ಹಾಗೂ ರಾಮ ಧ್ಯಾನ ಚರಿತ್ರೆ ಗಳು ಕೂಡ ಅವರ ಸಮಾಜದ ಬಗೆಗಿನ ನಿಲುವಿಗೆ ಸಾಕ್ಷಿ ಅನಿಸಿ ಕೊಳ್ಳುತ್ತವೆ. ಆರೋಗ್ಯಪೂರ್ಣ ಸಮಾಜದ ಕನಸು ಕಂಡಿದ್ದ ಸಂತ ಕನಕದಾಸರು ಕ್ರಿಸ್ತ ಶಕ 1609 ರಲ್ಲಿ ಆದಿಕೇಶವನನ್ನು ಸೇರಿ ಕೊಳ್ತಾರೆ. ಇವತ್ತಿಗೂ ಕೂಡ ಕನಕ ಅನೇಕ ಹಾಡು, ಸಂಕೀರ್ತನೆಗಳು ಜನರ ಬಾಯಲ್ಲಿ ನಲಿದಾಡುವ ಮೂಲಕ ಅವರನ್ನು ಇನ್ನೂ ನಮ್ಮ ನಡುವೆ ಜೀವಂತವಾಗಿಸಿವೆ.

FAQ

ಕನಕದಾಸರು ರಚಿಸಿದ ಕೃತಿಗಳು?

ಮೋಹನ ತರಂಗಿಣಿ, ನಳ ಚರಿತ್ರೆ

ಕನಕದಾಸರು ಎಲ್ಲಿ ಜನಿಸಿದರು?

ಬಾಡ, ಶಿಗ್ಗಾಂವ

ಇವುಗಳನ್ನು ಓದಿ

Leave a Reply

Your email address will not be published. Required fields are marked *