Jeeva Kriyegalu In Kannada Notes, ಜೀವಕ್ರಿಯೆಗಳು ನೋಟ್ಸ್, 10ನೇ ತರಗತಿ ವಿಜ್ಞಾನ ಅಧ್ಯಾಯ-6 ಜೀವಕ್ರಿಯೆಗಳು ನೋಟ್ಸ್, , 10ನೇ ತರಗತಿ ವಿಜ್ಞಾನ ಅಧ್ಯಾಯ-6 ಜೀವಕ್ರಿಯೆಗಳು ನೋಟ್ಸ್ ಪ್ರಶ್ನೋತ್ತರ, Class 10 Science Chapter 6 Notes 10th Standard Science Chapter 6 Question Answer 10th Class jeeva kriyegalu question answer in kannada Kseeb Solution For Class 10 Science Chapter 6 Notes Life Processes Class 10th Notes class 10th science life process Jeeva Kriyegalu Questions and Answers Notes Pdf,10th Standard Science Chapter 6 Notes in Kannada,
Jeeva Kriyegalu In Kannada Notes
ಮನುಷ್ಯರಂಥ ಬಹುಕೋಶೀಯ ಜೀವಿಗಳ ಆಕ್ಸಿಜನ್ ಅವಶ್ಯಕತೆಯನ್ನು ಪೂರೈಸಲು ವಿಸರಣೆಯು ಸಾಕಾಗು ವುದಿಲ್ಲಏಕೆ?
ಬಹುಕೋಶೀಯ ಜೀವಿಗಳಲ್ಲಿ ಎಲ್ಲಾ ಜೀವಕೋಶಗಳೂ ಸುತ್ತಲಿನ ಪರಿಸರದೊಂದಿಗೆ ಸಂಪರ್ಕ ಬಹುಶಃ ಸಾಧ್ಯವಿಲ್ಲ. ಆದ್ದರಿಂದ ವಿಸರಣೆ ಎ ಜೀವಕೋಶಗಳ ಅಗತ್ಯವನ್ನು ಪೂರೈಸಲು ಸಾಲಲ್ಲಿರಲು
ಕೆಲವೊಂದಕ್ಕೆ ಜೀವವಿದೆ ಎಂದು ನಿರ್ಧರಿಸಲು ನಾವು ಬಳಸುವ ಮಾನ ಂಡಗಳೇನು?
ಜೀವಂತ ಇರುವುದರ ಸಾಮಾನ್ಯ ಆಧಾರವೆಂದರೆ ಕೆಲವೊಂದು ವಿಧದ ಚಲನೆ. ಅದು ಬೆಳವಣಿಗೆಗೆ ಸಂಬಂಧಿಸಿದ್ದಿರಬಹುದು ಅಥವಾ ಇಲ್ಲದಿರಬಹುದು.
ಒಂದು ಜೀವಿಯು ಬೆಳವಣಿಗೆಗಾಗಿ ಬಳಸುವ ಹೊರಗಿನ ಕಚ್ಚಾ ವಸ್ತುಗಳು ಯಾವುವು?
ನೀರು, ಆಮ್ಲಜನಕ ಮತ್ತು ಇಂಗಾಲ – ಇವು ಜೀವಿಯ ಬೆಳವಣಿಗೆಗಾಗಿ ಬಳಸುವ ಕಚ್ಚಾ ವಸ್ತುಗಳಾಗಿವೆ.
ಯಾವ ಪಕ್ರಿಯೆಗಳು ಜೀವವನ್ನು ನಿರ್ವಹಿಸಲು ಅಗತ್ಯವಾಗಿದೆ ಎಂದು ನೀವು ಪರಿಗಣಿಸುವಿರಿ?
ಪೋಪಣೆ, ಉಸಿರಾಟ, ದೇಹದಲ್ಲಿ ವಸ್ತುಗಳ ಸಾಗಾಣಿಕೆ ಮತ್ತು ತ್ಯಾಜ್ಯ ಪದಾರ್ಥಗಳ ವಿಸರ್ಜನೆಯಂಥ ಪ್ರಕ್ರಿಯೆಗಳು ಜೀವವನ್ನು ನಿರ್ವಹಿಸಲು
10th Standard Science Chapter 6 Question Answer
- ಸ್ವಪೋಷಕಗಳ ಪೋಷಣೆ ಮತ್ತು ಪರಪೋಷಕಗಳ ಪೋಷಣೆಗಳ ನಡುವಿನ ವ್ಯತ್ಯಾಸಗಳೇನು?
ಸ್ವಪೋಷಕಗಳ ಪೋಷಣೆ
i) ನಿರವಯವ ಮೂಲಗಳಿಂದ ಸರಳವಾದ ಆಹಾರ ವಸ್ತುಗಳನ್ನು ಕಾರ್ಬನ್ ಡೈಆಕ್ಸೆಡ್ ಮತ್ತು ನೀರಿನರೂಪದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಸೌರಬೆಳಕು ಮತ್ತು ಕ್ಲೋರೋಫಿಲ್ ಉಪಸ್ಥಿತಿ ಯಲ್ಲಿ ಕಾರ್ಬೊಹೈಡ್ರೆಟ್ಗಳಾಗಿ ಪರಿವರ್ತಿಸಲಾಗುತ್ತದೆ.
ii) ಹರಿತ್ತು ಅವಶ್ಯ ಇರುತ್ತದೆ.
ಪರಪೋಷಕಗಳ ಪೋಷಣೆ
i) ಪರಪೋಷಕಗಳ ಬದುಕು ನೇರವಾಗಿ ಅಥವಾ ಪರೋಕ್ಷವಾಗಿ ಮೇಲೆ
ಸ್ವಪೋಷಕಗಳ ಅವಲಂಬಿಸಿದೆ.
ii)ಹರಿತ್ತು ಇರುವುದಿಲ್ಲ
ಅನಿಲಗಳ ವಿನಿಮಯವನ್ನು ಗರಿಷ್ಠಗೊಳಿಸಲು ಗಾಳಿಗೂಡುಗಳು ಹೇಗೆ ವಿನ್ಯಾಸಗೊಳಿಸಲ್ಪಟ್ಟಿವೆ ?
ಗಾಳಿಗೂಡುಗಳು ಶ್ವಾಸಕೋಶದಲ್ಲಿರುವ ಬಲೂನಿನಂತಹ ರಚನೆಗಳು.ಗಾಳಿಗೂಡುಗಳ ಗೋಡೆಯು ಒಂದು ವಿಶಾಲ ವ್ಯಾಪ್ತಿಯ ರಕ್ತನಾಳಗಳ ಜಾಲವನ್ನು ಹೊಂದಿವೆ.ಪ್ರತಿಯೊಂದು ಶ್ವಾಸಕೋಶವು 300 350 ಮಿಲಿಯನ್ ಗಾಳಿಗೂಡುಗಳನ್ನು ಹೊಂದಿರುತ್ತವೆ . ಗಾಳಿಗೂಡುಗಳ ಮೇಲೆ ವಿಸ್ತರಿಸಿದಾಗ ಸುಮಾರು 80m ನಷ್ಟು ವಿಸ್ತೀರ್ಣವನ್ನು ಹೊಂದಿರುತ್ತದೆ.ಇಷ್ಟು ದೊಡ್ಡ ಪ್ರಮಾಣದ ಮೇಲೆ ವಿಸ್ತೀರ್ಣವು ಅನಿಲಗಳ ವಿನಿಮಯ ಕ್ರಿಯೆ ಗರಿಷ್ಟವಾಗಲು ಸಹಕಾರಿಯಾಗಿದೆ .
ವಾಯುವಿಕ ಮತ್ತು ಅವಾಯುವಿಕ ಉಸಿರಾಟಗಳ ನಡುವಿನ ವ್ಯತ್ಯಾಸಗಳೇನು ? ಅವಾಯುವಿಕ ಉಸಿರಾಟ ನಡೆಸುವ ಕೆಲವು ಜೀವಿಗಳನ್ನು ಹೆಸರಿಸಿ .
ವಾಯುವಿಕ ಉಸಿರಾಟ
ಆಮ್ಲಜನಕದ ಸಹಾಯದಿಂದ ನಡೆಯುತ್ತದೆ .
ಇದು ವಾತಾವರಣ ಮತ್ತು ಜೀವಿಯ ನಡುವೆ ಅನಿಲಗಳವಿನಿಮಯವನ್ನು ಒಳಗೊಂಡಿದೆ .
ಇದು ಜೀವಕೋಶದ ಕೋಶರಸ ಇದು ಕೇವಲ ಕೋಶರಸ
ಮತ್ತು ಮೈಟೋಕಾಂಡ್ರಿಯಾದಲ್ಲಿ ನಡೆಯುತ್ತದೆ .
ಯಾವಾಗಲೂ ಇಂಗಾಲದ ಡೈ ಆಕ್ಸೆಡ್ ಮತ್ತು ನೀರು ಬಿಡುಗಡೆಯಾಗುತ್ತದೆ .
36 ATP ಅಣುಗಳನ್ನು ಉತ್ಪತ್ತಿಮಾಡುತ್ತದೆ .
ಅವಾಯುವಿಕ ಉಸಿರಾಟ
ಆಮ್ಲಜನಕದ ಸಹಾಯವಿಲ್ಲದೆ ನಡೆಯುತ್ತದೆ .
ಅನಿಲಗಳ ವಿನಿಮಯ ಇರುವುದಿಲ್ಲ .
ಇದು ಕೇವಲ ಕೋಶರಸದಲ್ಲಿ ನಡೆಯುತ್ತದೆ
ಉತ್ಪನ್ನಗಳು ಬದಲಾಗುತ್ತವೆ .
ಕೇವಲ 2 ATP ಅಣುಗಳನ್ನು ಉತ್ಪತ್ತಿ ಮಾಡುತ್ತದೆ .
ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಕೊರತೆಯಿಂದ ಉಂಟಾಗಬಹುದಾದ ಸಮಸ್ಯೆಗಳೇನು ?
ಹಿಮೋಗ್ಲೋಬಿನ್ ಕೊರತೆಯಿಂದ ರಕ್ತದ ಮೂಲಕ ಆಮ್ಲಜನಕದ ಸಾಗಾಣಿಕೆ ಕುಂಠಿತವಾಗುತ್ತದೆ.ಜೀವಕೋಶಗಳಿಗೆ ಆಮ್ಲಜನಕದ ಕೊರೆಯುಂಟಾಗಿ ಶಕ್ತಿಉತ್ಪಾದನ ಕ್ರಿಯೆ ನಿಧಾನವಾಗುತ್ತದೆ.ಇದರಿಂದ ರಕ್ತ ಹೀನತೆ ಉಂಟಾಗುತ್ತದೆ .