ಬೆಳ್ಳಗಿರುವುದೆಲ್ಲ ಹಾಲಲ್ಲ ಗಾದೆ ಮಾತು ವಿವರಣೆ | Bellagiruvudella Halalla In Kannada

ಬೆಳ್ಳಗಿರುವುದೆಲ್ಲ ಹಾಲಲ್ಲ ಗಾದೆ ಮಾತು ವಿವರಣೆ | Bellagiruvudella Halalla In Kannada

bellagiruvudella halalla in kannada, bellagiruvudella halalla gade in kannada, bellagiruvudella halalla explanation in kannada, bellagiruvudella halalla meaning in kannada, bellagiruvudella halalla kannada gade mathu, bellagiruvudella halalla explain in kannada, bellagiruvudella halalla essay writing in kannada. ಬೆಳ್ಳಗಿರುವುದೆಲ್ಲ ಹಾಲಲ್ಲ ಗಾದೆ ಮಾತು ವಿವರಣೆ

Bellagiruvudella Halalla In Kannada

ನಮ್ಮ ಟೆಲಿಗ್ರಾಮ್ ಗ್ರೂಪ್ ಗೆ ಈಗಲೇ ಜಾಯಿನ್ ಆಗಿ

Spardhavani Telegram


ವಸ್ತುವಿನ ಮತ್ತು ವ್ಯಕ್ತಿಯ ಹೊರ ಬಣ್ಣವನ್ನು ನೋಡಿ ಬೆಲೆ ಕೊಡುವುದು, ಗೌರವಿಸುವುದು ಅಪಾಯಕರವೆಂದು ಈ ಗಾದೆ ಹೇಳುತ್ತಿದೆ. ಬುದ್ದಿವಂತಿಕೆ, ಎಚ್ಚರಿಕೆ, ವಿಮರ್ಶೆಯ ಪ್ರಜ್ಞೆಯನ್ನು ಯಾರು ಬೆಳೆಸಿಕೊಳ್ಳುತ್ತಾರೋ ಅವರಿಗೆ ಮಾತ್ರ ಬದುಕಿನಲ್ಲಿ ಪರಾಭವವಾಗುವುದಿಲ್ಲ. ಗುಣವನ್ನು ತಿಳಿಯದೆ ವ್ಯಕ್ತಿಯನ್ನಾಗಲೀ, ವಸ್ತುವನ್ನಾಗಲೀ ನಂಬಿ ವ್ಯವಹರಿಸಿದರೆ ಯಾರಾರು ಎಂತೆಂತಹ ದುಃಖವನ್ನು ಎದುರಿಸಬಹುದೆಂದು ಯಾರೂ ಹೇಳಲಾಗದು. ಆದುದರಿಂದ ಪರೀಕ್ಷೆಯಾಗದ ಹೊರತು ವ್ಯವಹಾರವನ್ನು ಮುಂದುವರೆಸುವುದು ಒಳ್ಳಯದೇನ್ನಬಹುದು.

ಹಾಲು ಬೆಳ್ಳಗಿರುತ್ತದೆ. ಇದರಂತೆ ಸುಣ್ಣದ ನೀರೂ ಸಹ ಬೆಳ್ಳಗಿರುತ್ತದೆ. ಸೂಕ್ಷ್ಮವಾಗಿ ಗಮನಿಸದೆ ಹೋದರೆ ಹಾಲು ಯಾವುದು? ಸುಣ್ಣದ ನೀರು ಯಾವುದು? ಎಂದು ತಿಳಿಯುವುದಿಲ್ಲ. ಸುಣ್ಯದ ನೀರನ್ನು ಹಾಲೆಂದು ಭ್ರಮಿಸಿ ಕುಡಿದರೆ ಕುಡಿದವರ ಸ್ಥಿತಿ ಚಿಂತಾಜನಕವಾಗುವುದಾದರೆ, ಹಾಲನ್ನು ಸುಣ್ಣದ ನೀರೆಂದು ಭಾವಿಸಿ ಉಪಯೋಗಿಸಿದರೆ ಹಣ ಹಾಳಾಗುತ್ತದೆ. ಆದುದರಿಂದ ವಸ್ತುಪುಜ್ಞೆ ಅವಶ್ಯಕ. ಆದರೆ ಜಡವಸ್ತುವಿನ ಪರಿಣಾಮಕ್ಕಿಂತ ವ್ಯಕ್ತಿಗಳಿಂದ ಆಗಬಹುದಾದ ದುಷ್ಪರಿಣಾಮ ಹೇಳಲಸಾಧ್ಯ.


ಪಪಂಚದಲ್ಲಿ ‘ಗೋಮುಖವ್ಯಾಘ್ರ’ಗಳುಂಟು! ಅತಿಯಾದ ವಿನಯ, ಗಾಂಭೀರಗಳನ್ನು ತೋರಿಸಿ, ಆಗಬೇಕಾದ ಕೆಲಸ ಆಗುವತನಕ ಹೊಗಳಿ, ಅನಂತರ ಕೈಕೊಟ್ಟು ಹೋಗಬಹುದು. ಈ ಬಗೆಯಾದ ನಡೆವಳಿಕೆಯಿಂದ ಮಾನಸಿಕ ಆಘಾತ ಉಂಟಾಗಿ ನಾಲ್ಕು ದಿನವಾದ ಮೇಲೆ ಉಪಶಮನವಾಗಬಹುದು. ಆದರೆ ಹಲವರು ವ್ಯಕ್ತಿಯ ನಾಶಕ್ಕೂ ಹೇಸದೆ ತಮ್ಮಐಶ್ವರಾಭಿವೃದ್ಧಿಗೆ ಮೂರನೆಯ ವ್ಯಕ್ತಿಯನ್ನು ಬಳಸಿಕೊಳ್ಳುವ ಸಂದರ್ಭ ಉಂಟಾದಾಗ ಮಾತ್ರ ಚೇತರಿಸಿಕೊಳ್ಳಲಾರದಂತಹ ನಮ್ಮ ಉಂಟಾಗುತ್ತದೆ.


ಆದುದರಿಂದ ಯಾವ ವ್ಯಕ್ತಿಯೊಡನೇ ಆಗಲಿ ಬಾಂಧವ್ಯ ಸ್ನೇಹ ಅಥವಾ ಯಾವುದೇ ವ್ಯಾವಹಾರಿಕ ಸಂಬಂಧವನ್ನು ಬೆಳೆಸಿಕೊಳ್ಳುವ ಮೊದಲು ವ್ಯಕ್ತಿಯ ಯೋಗ್ಯತೆಯನ್ನರಿಯಬೇಕು. ಇದು ಪ್ರಾಜ್ಞರ ಲಕ್ಷಣವೆಂದು ಈ ಗಾದೆ ಸೂಚಿಸುತ್ತಿದೆ.

ಬೆಳ್ಳಗಿರುವುದೆಲ್ಲ ಹಾಲಲ್ಲ ಗಾದೆ ಮಾತು ವಿವರಣೆ | Bellagiruvudella Halalla In Kannada
ಬೆಳ್ಳಗಿರುವುದೆಲ್ಲ ಹಾಲಲ್ಲ ಗಾದೆ ಮಾತು ವಿವರಣೆ | Bellagiruvudella Halalla In Kannada

ಇತರೆ ಸಂಬಂದಿಸಿದ ವಿಷಯಗಳು

ಗಾದೆ ಮಾತುಗಳು ಕನ್ನಡದಲ್ಲಿ ವಿಸ್ತರಣೆ

ತಾಳಿದವನು ಬಾಳಿಯಾನು ಗಾದೆ ಮಾತು

ಮನಸ್ಸಿದ್ದರೆ ಮಾರ್ಗ ಗಾದೆ ಮಾತು ವಿವರಣೆ

ಕನ್ನಡ ಗಾದೆ ಮಾತುಗಳು

ಕೃಷಿ ಹಾಗೂ ಮಳೆಗೆ ಸಂಬಂಧಿಸಿದ ಗಾದೆ ಮಾತುಗಳು

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಗಾದೆ

ಶಕ್ತಿಗಿಂತ ಯುಕ್ತಿ ಮೇಲು ಅರ್ಥ

Leave a Reply

Your email address will not be published. Required fields are marked *