ಬಲಿಪಾಡ್ಯಮಿ ಆಚರೆಣೆಯ ಹಿಂದಿನ ಕಥೆ Balipadyami Information in Kannada

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

Balipadyami Story in Kannada , ಬಲಿಪಾಡ್ಯಮಿ ಆಚರಣೆ ಏಕೆ ಮತ್ತು ಹೇಗೆ? , ಬಲಿಪಾಡ್ಯಮಿ ಶುಭಾಶಯಗಳು , balipadyami wishes in kannada , balipadyami information in kannada

Balipadyami Story in Kannada

ಈ ಲೇಖನದಲ್ಲಿ ಬಲಿಪಾಡ್ಯಮಿ ಹಬ್ಬದ ಆಚರಣೆಯ ಕಥೆಯನ್ನು ನೀಡಲಾಗಿದೆ. ಬಲಿಪಾಡ್ಯಮಿ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಮಾಹಿತಿ ಇದಾಗಿದೆ.

Spardhavani Telegram

ದೀಪಾವಳಿಯ ಬಲಿಪಾಡ್ಯಮಿ ಹಬ್ಬದ ಕುರಿತು ಕಥೆ

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ಮೂರನೆಯ ದಿನ ಆಚರಿಸುವ ಹಬ್ಬ ವಾದ ಬಲಿ ಪಾಡ್ಯಮಿಯಂದು ದಾನವ ಅಸುರನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಬಲಿಪಾಡ್ಯಮಿ ಚಕ್ರವರ್ತಿ ಬಲೀಂದ್ರ ಭೂಲೋಕಕ್ಕೆ ಬರುವ ದಿನ ಅಂಧಕಾರವನ್ನು ಕಲಿಯುವ ಕಾರ್ತಿಕ ಮಾಸ ಆರಂಭವಾಗುವುದೇ ಪಾಡ್ಯದಂದು ಬೆಳಗುವ ದೀಪದ ಬೆಳಕಿನಿಂದ ಬಹುತೇಕ ದೀಪಾವಳಿಯನ್ನು ಸಾಮಾನ್ಯವಾಗಿ 3 ದಿನ ಆಚರಿಸುತ್ತಾರೆ. ನರಕ ಚತುರ್ದಶಿ ಅಮಾವಾಸ್ಯೆ ಹಾಗು ಮೂರನೇ ದಿನವೇ ಬಲಿಪಾಡ್ಯಮಿ.

ಇದನ್ನು ಓದಿರಿ :- ದೀಪಾವಳಿ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ಮಾಹಿತಿ

ಈ ಬಲಿಪಾಡ್ಯಮಿಯಿಂದ ಆರಂಭ ಗೊಳ್ಳುವ ಕಾರ್ತಿಕ ಮಾಸ ಲಕ್ಷದೀಪೋತ್ಸವ ಕೊನೆಗೊಳ್ಳುವವರೆಗೂ ಬೆಳಗುವಂತಹ ಮಾಸವಾಗಿದೆ. ಮೂರನೆಯ ದಿನ ಆಚರಿಸುವ ಹಬ್ಬವಾದ ಬಲಿ ಪಾಡ್ಯಮಿಯಂದು ದಾನವ ಅಸುರನಾದ ಬಲೀಂದ್ರನ ಪೂಜೆಯನ್ನು ಮಾಡುತ್ತಾರೆ. ಹಾಗಾಗಿ ಈ ದಿನವನ್ನು ಬಲಿಪಾಡ್ಯಮಿ ಎಂದೇ ಕರೆಯುತ್ತಾರೆ. ಹಿರಣ್ಯ ಕಶ್ಯಪುವಿನ ವಂಶಸ್ಥನಾದ ಇವನು ದಾನವನಾದರೂ ಈ ದಿನ ಬಲೀಂದ್ರ ನನ್ನು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.

balipadyami information in kannada

ಇದನ್ನು ಓದಿ :- ದೀಪಾವಳಿ ಹಬ್ಬದ ಪ್ರಬಂಧ 2022

ಪುರಾಣ ಕಥೆ ನರಸಿಂಹನ ಅವತಾರ ದಲ್ಲಿ ಶ್ರೀ ವಿಷ್ಣುವಿನಿಂದ ಹತನಾದ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ ಅಸುರ ಕುಲದಲ್ಲಿ ಹುಟ್ಟಿದ ವಿಷ್ಣು ಭಕ್ತ ಪ್ರಹ್ಲಾದ ನಂತೆ ಮಹಾಬಲಿಯು ಕೂಡ ವಿಷ್ಣುಭಕ್ತನೇ ದೇವಾನುದೇವತೆ ಗಳನ್ನು ಸೋಲಿಸಿ ಮೂರೂ ಲೋಕಗಳನ್ನು ಆಳ ತೊಡಗುತ್ತಾನೆ. ಆ ಸಂದರ್ಭದಲ್ಲಿ ದೇವತೆಗಳು ಮಹಾ ವಿಷ್ಣುವಿನ ಮೊರೆ ಹೋಗುತ್ತಾರೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿ ಚಕ್ರವರ್ತಿಯು.

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ತನ್ನ ಪ್ರಜೆಗಳಿಗೆ ಲ್ಲರಿಗೂ ಒಳ್ಳೆಯ ಕೆಲಸ ಗಳನ್ನು ಮಾಡುತ್ತಿದ್ದಾನೆ. ಆತನು ಸುರನಾಗಲು ಎಲ್ಲಾ ಅರ್ಹತೆಗಳನ್ನು ಪಡೆಯುತ್ತಾನೆ ಎಂದು ತಿಳಿಸುತ್ತಾನೆ.

ಮೂರು ಲೋಕ ಗಳನ್ನು ಜಯಿಸಿದ ಮಹಾಬಲಿಯು ಮಹಾಯಾಗ ವೊಂದನ್ನು ಮಾಡುತ್ತಾನೆ. ಯಾಗ ದಲ್ಲಿ ಕೇಳಿದ ವಸ್ತುಗಳೆಲ್ಲವನ್ನೂ ಬಂದ ವರಿಗೆ ದಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾ ಬಲಿಯ ಭಕ್ತಿಯನ್ನು ಪರೀಕ್ಷಿಸ ಲು ಪುಟ್ಟ ಬಾಲಕ ವಾಮನ ಅವತಾರ ದಲ್ಲಿ ಬಲಿ ಚಕ್ರವರ್ತಿಯ ಯಾಗ ಕ್ಕೆ ಬರುತ್ತಾನೆ. ಚಕ್ರವರ್ತಿಯು ಬಾಲಕ ವಾಮನನಿಗೆ ನೀನು ಕೇಳಿದ್ದನ್ನೆಲ್ಲವನ್ನು ಕೊಡುತ್ತೇನೆ. ನಿನಗೇನು ಬೇಕು ಎಂದು ಕೇಳಿದಾಗ ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗ ವನ್ನು ನೀಡು ಎಂದು ಕೇಳುತ್ತಾನೆ.

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ಬಲಿ ಚಕ್ರವರ್ತಿಯು ಬಾಲಕನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ. ಆಗ ಬಂದಿರುವುದು ಮಹಾವಿಷ್ಣು ವೆಂದು ತಿಳಿದ ಶುಕ್ರಾಚಾರ್ಯರು ದಾನ ವನ್ನು ಜಲ ಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕ ಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ ನೀರು ಹೊರಬರ ದಂತೆ ಅಡ್ಡವಾದರು. ಆಗ ಬಾಲಕ ವಾಮನನು ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ ಅವರು ಒಂದು ಕಣ್ಣನ್ನು ಕಳೆದುಕೊಂಡರು.

ವಾಮನ ರೂಪ ದಲ್ಲಿರುವ ಮಹಾವಿಷ್ಣು ವು ಸ್ವರ್ಗಲೋಕ ಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ. ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗ ವನ್ನು ಅಳೆದು ಪಡೆಯುತ್ತಾನೆ. ಮೂರನೇ ಹೆಜ್ಜೆ ಇಡಲು ಮಹಾಬಲಿಯು ಜಾಗವನ್ನು ಕೊಡಬೇಕಾದಾಗ ಚಕ್ರವರ್ತಿ ಯು ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿ ಡುವಂತೆ ವಾಮನನನ್ನು ಬೇಡಿ ಕೊಳ್ಳುತ್ತಾನೆ. ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿ ಡುತ್ತಿದ್ದಂತೆ ಬಲಿ ಚಕ್ರವರ್ತಿಯು ಪಾತಾಳ ಕ್ಕೆ ತಳ್ಳಲ್ಪಡುತ್ತಾನೆ.

ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣು ವು ಪಾತಾಳ ವನ್ನು ಆಳುವಂತೆ ಆಶೀರ್ವದಿಸುತ್ತಾನೆ. ವಿಷ್ಣು ಭಕ್ತನಾದ ಬಲೀಂದ್ರ ನಿಗೆ ಆಶ್ವಿಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರ ವನ್ನು ನೀಡಿದ. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರ ನಿಗೆ ಪೂಜೆಯನ್ನು ನಡೆಸ ಲಾಗುತ್ತದೆ

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ಬಲೀಂದ್ರ ಪೂಜಾ ವಿಧಾನ.

ದೀಪಾವಳಿಯ ಮೂರನೇ ದಿನ ಪಾಡ್ಯದಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯ ಕೋಟೆ ಯನ್ನು ಕಟ್ಟ ಲಾಗುತ್ತದೆ. ತುಳಸಿ ಕಟ್ಟೆಯ ಸಮೀಪ ಗೋಮಯದಿಂದ ಏಳು ಸುತ್ತಿನ ಕೋಟೆ ಯನ್ನು ಕಟ್ಟಿ ಈ ಕೋಟೆ ಗೆ ಗಣಪತಿಯ ನ್ನು ಕಾವಲಿ ಗೆ ನಿಲ್ಲಿಸ ಲಾಗುತ್ತದೆ. ಮನೆ ಬಾಗಿಲ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿ ಗಳು ಒಳ ಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳ ನ್ನು ಇಡ ಲಾಗುತ್ತದೆ. ಸಂಜೆ ಗೋಧೋಳಿ ಲಗ್ನದ ಸಮಯ ದಲ್ಲಿ ಮನೆಯ ಸದಸ್ಯರಲ್ಲ ಬಲೀಂದ್ರ ನಿಗೆ ಪೂಜೆ ಮಾಡುತ್ತಾರೆ.

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ಬಲಿಚಕ್ರವರ್ತಿಯು ತುಳುನಾಡನ್ನು ಆಳುತ್ತಿದ್ದ ಚಕ್ರವರ್ತಿ ವರ್ಷಕ್ಕೊಮ್ಮೆ ಬರುವ ಬಲಿ ಯನ್ನು ಕರೆಯುವ ಆಚರಣೆಯೇ ಬಲೀಂದ್ರ ಲೆಪ್ಪು ಕತ್ತಲಾ ಗುತ್ತಿದ್ದಂತೆ ಅಂಗಳದ ಸುತ್ತಲು ತೆಂಗಿನ ಗೆರಟೆ ಗೆ ಎಣ್ಣೆ ಹಾಕಿ ದೀಪವನ್ನು ಬೆಳಗಲಾಗುತ್ತದೆ. ಮನೆಯ ಗಂಡಸರು ಗದ್ದೆಯ ಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸುತ್ತಿ ಎಣ್ಣೆಯ ನ್ನು ಹಚ್ಚಿದ ದೊಂದಿಯನ್ನು ಉರಿಸುತ್ತಾರೆ. ನಂತರ ಬಲಕಿ ಮರದ ಅಡಿಯ ಲ್ಲಿ ಗೆರಸೆಯಲ್ಲಿ ತೆಂಗಿನಕಾಯಿ ಅವಲಕ್ಕಿ ಕಟ್ಟಿ ಹಾಕಿ ಬಲೀಂದ್ರ ಕೂ ಕು ಕು ಎಂದು ಮೂರು ಬಾರಿ ಬಲೀಂದ್ರ ನನ್ನು ಕರೆಯುತ್ತಾರೆ.

ಇದನ್ನು ಓದಿ :- ದೀಪಾವಳಿ ಹಬ್ಬದ ಇತಿಹಾಸ 2022

ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ ಬೇಸಾಯ ಕ್ಕೆ ಬಳಸುವ ಪರಿಕರಗಳಿಗೆ ಪೂಜೆ ಯನ್ನು ಮಾಡುತ್ತಾರೆ. ಗೋವಿಗೆ ಅಕ್ಕಿ ಯಲ್ಲಿ ತಯಾರಿಸಿದ ದೋಸೆ ಅಥವಾ ಗಟ್ಟಿಯನ್ನು ನೀಡ ಲಾಗುತ್ತದೆ. ಗೋವರ್ಧನ ಗಿರಿ ಎತ್ತಿದ ದಿನ . ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲ ಪಾಡ್ಯಮಿ ಶ್ರೀಕೃಷ್ಣನು ಇಂದ್ರ ನನ್ನು ಸೋಲಿಸಿದ ದಿನವೂ ಹೌದು.

ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸ ಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆ ಯನ್ನು ಆಚರಿಸ ಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿ ಹಬ್ಬ ವೆಂದು ಆಚರಿಸುತ್ತಾರೆ. ಅಯೋಧ್ಯೆ ಗೆ ಮರಳಿದ ಶ್ರೀರಾಮ. ರಾಮಾಯಣದ ಪ್ರಕಾರ ತ್ರೇತಾಯುಗ ದಲ್ಲಿ ಶ್ರೀರಾಮ ವಿಜಯದಶಮಿಯಂದು ರಾವಣನ ನ್ನು ಕೊಂದು 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆ ಗೆ ಮರಳಿದಾಗ ಜನರು ಸಾಲು ದೀಪ ಗಳನ್ನು ಹಚ್ಚಿ ಸ್ವಾಗತಿಸಿ, ದೀಪಾವಳಿಯನ್ನು ಆಚರಿಸಿದರಂತೆ.

ಜೈನ ಪುರಾಣದ ಪ್ರಕಾರ ಭಗವಾನ್ ಮಹಾವೀರ ನಿರ್ವಾಣ ಹೊಂದಿದ್ದು, ದೀಪಾವಳಿಯ ದಿನದಂದೇ ಸಿಖ್ ಸಂಪ್ರದಾಯದಂತೆ ಗುರುಹರಗೋವಿಂದ್ ಜೀ ಮತ್ತು ಇತರ ಇಪ್ಪತೈದು ಹಿಂದೂ ಮಹಾರಾಜರುಗಳು ಮೊಘಲರಿಂದ ಬಂಧಮುಕ್ತಿ ಹೊಂದಿದ ದಿನ ಕೂಡ ದೀಪಾವಳಿ ದೀಪಾವಳಿಯ ಉದ್ದೇಶ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ತತ್ವ ಮಾತ್ರ ಮನಸ್ಸಿನಲ್ಲಿರುವ ಅಜ್ಞಾನ ವೆಂಬ ಕತ್ತಲ ನ್ನು ದೂರ ಸರಿಸಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಚೆಲ್ಲುವ ಹಬ್ಬ.

ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information
ಬಲಿಪಾಡ್ಯಮಿ ಬಗ್ಗೆ ಮಾಹಿತಿ | Balipadyami Story in Kannada Best No1 Information

ಮನದ ಅಂಧಕಾರ ವನ್ನು ಕಳೆಯುವ ಹಬ್ಬವಾಗಿ ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ, ಸಮೃದ್ಧಿಯ ನ್ನು ತರಲಿ. ಎಲ್ಲರಿಗೂ ಬಲಿಪಾಡ್ಯಮಿ ಹಬ್ಬದ ಶುಭಾಶಯಗಳು.

ಸಂಬಂದಿಸಿದ ವಿಷಯ

Leave a Reply

Your email address will not be published. Required fields are marked *