ಕದಂಬರು( ಕ್ರಿ.ಶ. 325 – 540 )
kadamba dynasty ad-325-540 , kadamba history in kannada , ಕದಂಬರು ಇತಿಹಾಸ , ಕದಂಬರ ಇತಿಹಾಸ , ಕದಂಬರ ಕಲೆ ಮತ್ತು ವಾಸ್ತುಶಿಲ್ಪ , ಕದಂಬ ರಾಜವಂಶ , banavasi kadambaru in kannada , pdf
Kadamba Dynasty ad-325-540
- ಮೂಲ ಪುರುಷ – ಮಯೂರ ವರ್ಮ ( ತಾಳಗುಂದ ಶಾಸನದ ಪ್ರಕಾರ )
- ಕದಂಬರ ಮೂಲ
- ದೈವಾಂಶ ಸಿದ್ದಾಂತ
- ನಾಗ ಸಿದ್ದಾಂತ
- ಜೈನ ಸಿದ್ದಾಂತ
- ನಂದಾ ಮೂಲ
- ತಮಿಳು ಮೂಲ
- ಕನ್ನಡ ಮೂಲ
- ಕದಂಬರು ಆಳಿದ್ದ ಕ್ರಿ.ಶ.4 ನೇ ಶತಮಾನದಿಂದ 6 ನೇ ಶತಮಾನದವರೆಗೆ
- ರಾಜಧಾನಿ – ಬನವಾಸಿ / ವನವಾಸಿ / ವೈಜಯಂತಿಪುರ ( ಉತ್ತರ ಕನ್ನಡ )
- ಟಾಲೆಮಿಯು ತನ್ನ ಕೃತಿ Geography ಯಲ್ಲಿ ಬನವಾಸಿಯನ್ನು ಈ ಹೆಸರಿನಿಂದ ಕರೆದಿದ್ದಾನೆ – ಬೈಜಾಂಟಿಯನ್ .
- ಲಾಂಛನ – ಸಿಂಹ ಮತ್ತು ಧ್ವಜ – ವಾನರ / ಪಿಂಚದ್ವಜ
- ಕರ್ನಾಟಕವನ್ನಾಳಿದ ಪ್ರಥಮ ಕನ್ನಡ ರಾಜಮನೆತನ .
- ಚಂದ್ರವಳ್ಳಿ ಶಾಸನದಲ್ಲಿ ಮಯೂರ ವರ್ಮನು ಚಿತ್ರದುರ್ಗದಲ್ಲಿ ಕೆರೆಯನ್ನು ನಿರ್ಮಿಸಿದರ ಬಗ್ಗೆ ತಿಳಿಸುತ್ತದೆ . ಇದು ಸಂಸ್ಕೃತದಲ್ಲಿದ್ದು A.D. 350 ರಲ್ಲಿ ನಿರ್ಮಾಣಗೊಂಡಿದೆ ,
- ತಾಳಗುಂದ ಶಾಸನವು ಕರ್ನಾಟಕದಲ್ಲಿ ದೊರೆತಿರುವ ಮೊದಲ ಸಂಸ್ಕೃತ ಶಾಸನವಾಗಿದೆ .
- ರಾಜಧಾನಿ ಬನವಾಸಿ ಇದು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ವರದಾ ನದಿಯ ಎಡದಂಡೆ ಮೇಲಿದೆ .
- ಕನ್ನಡದ ಪ್ರಥಮ ರಾಜ – ಮಯೂರ ವರ್ಮ .
- ಕದಂಬರ ಕೂಟ ಯುದ್ದವನ್ನು ಈ ಹೆಸರಿನಿಂದ ಕರೆಯುತ್ತಿದ್ದರು – ಗೆರಿಲ್ಲಾ .
- ಪ್ರಧಾನ ಮಂತ್ರಿ – ಪ್ರಧಾನ
- ಅರಮನೆಯ ವ್ಯವಹಾರಗಳ ಮಂತ್ರಿ – ಮನೆಸೇರ್ಗಡೆ .
- ವಿದೇಶಾಂಗ ವ್ಯವಹಾರಗಳ ಮಂತ್ರಿ – ತಂತ್ರ ಪಾಲ .
- ತಾಂಬೂಲ ಪಾರು ಪತ್ಯಗಾರ – ಕ್ರಮುಖ ಪಾಲ .
- ಮಂತ್ರಿಮಂಡಲದ ಪ್ರಧಾನ ಕಾರ್ಯ ದರ್ಶಿ – ಸಭಾಕಾರ್ಯ ಸಚಿವ .
- ಹಲ್ಮಡಿ ಶಾಸನ ( ಕ್ರಿ . ಶ . 450 ) – ಕನ್ನಡದಲ್ಲಿ ದೊರೆತ ಮೊದಲ ಶಾಸನವಾಗಿದ್ದು ಹಾಸನ ಜಿಲ್ಲೆಯ ಬೇಲೂರಿನ ಹಲ್ಮಡಿ ಎಂಬಲ್ಲಿ ದೊರೆತಿದೆ . ಇದು ಕದಂಬ ದೊರೆ ಕಾಕುತ್ಸವರ್ಮನ ಬಗ್ಗೆ ಹೇಳುತ್ತದೆ .
- ಕದಂಬರ ರಾಜ್ಯಾಡಳಿತದಲ್ಲಿ ರಾಜನಿಗೆ ಆಡಳಿತದಲ್ಲಿ ಸಹಾಯ ಮಾಡುತ್ತಿದ್ದ ಮಂತ್ರಿಮಂಡಳವನ್ನು ಈ ಹೆಸರಿನಿಂದ ಕರೆಯುವರು – ಪಂಚಪ್ರಧಾನರು .
- ಪ್ರಮುಖ ಬೌದ್ಧ ಕೇಂದ್ರಗಳು – ಅಜಂತ ಮತ್ತು ಬನವಾಸಿ
- ಮೊದಲ ಐತಿಹಾಸಿಕ ವ್ಯಕ್ತಿ ಮಾನವ್ಯಗೋತ್ರ , ಹಾರತಿಪುತ್ರ ವಂಶಕ್ಕೆ ಸೇರಿದ ವೀರಶರ್ಮ
- ವಾಸ್ತು ಶೈಲಿ – ಕದಂಬ ನಾಗರ ಶೈಲಿ
- ಕದಂಬರ ಮತ್ತೊಬ್ಬ ಪ್ರಖ್ಯಾತ ರಾಜ – ಕಾಕುತ್ಸ ವರ್ಮ
- ಕದಂಬರ ಮುಖ್ಯ ವೃತ್ತಿ – ವ್ಯವಸಾಯ .
- ಕದಂಬರ ಕಾಲದ ಭೂ ಕಂದಾಯ ಪದ್ದತಿ – ಸರ್ವ ನಮಸ್ಯ , ತ್ರೀಬೋಗ , ಹಾಗೂ ತಾಳವೃತ್ತಿ.
- ಕದಂಬರ ರೇವು ಪಟ್ಟಣ್ಣಗಳು – ಗೋವಾ , ಮಂಗಳೂರು , ಹೊನ್ನವರ , ಅಂಕೋಲ ಹಾಗೂ ಭಟ್ಕಳ
- ಕದಂಬರ ವಿಶಿಷ್ಠ ಕೊಡುಗೆಗಳು – ನಾಣ್ಯ ಪದ್ದತಿ .
- ಕದಂಬರು ಬಿಡುಗಡೆ ಮಾಡಿದ ಬೆಳ್ಳಿ ನಾಣ್ಯದ ಹೆಸರು – ಪದ್ಮಟಂಕ .
- ಕದಂಬರ ಪ್ರಮುಖ ನಾಣ್ಯಗಳು – ಗದ್ಯಾಣ , ದ್ರುಮ್ಮ , ಪಮ , ಸುವರ್ಣ ,
- ಕದಂಬರ ಕಾಲದ ಶಿಕ್ಷಣ ಪದ್ದತಿ – ಗುರುಕುಲ ಶಿಕ್ಷಮ ಪದ್ದತಿ , “ ಘಟಿಕ ಸಾಹಸಿ ” ಎಂಬ ಬಿರಿದನ್ನು ಪಡೆಯುತ್ತಿದ್ದವರು – ಘಟಕದಲ್ಲಿ ಓದಿದ ವಿಧ್ಯಾರ್ಥಿಗಳಿಗೆ . ಇಲ್ಲಿ ಉಚಿತ ಊಟೋಪಚಾರದ ವ್ಯವಸ್ಥೆ ಇತ್ತು – ಬಳ್ಳಿಗಾಮೆ , ತಾಳಗುಂದ , ಬನವಾಸಿ ಹಾಗೂ ಅಗ್ರಹಾರ . ಕದಂಬರ ಕಾಲದ ಪ್ರಸಿದ್ದ ವಿದ್ಯಾ ಕೇಂದ್ರ – ಕಂಚಿ . ಕದಂಬರ ಆರಂಭದ ಶಾಸನಗಳು ಈ ಭಾಷೆಯಲ್ಲಿದೆ – ಪ್ರಾಕೃತ .
- ಕದಂಬರ ಸಮಕಾಲೀನ ರಾಜಮನೆತನ ಗಂಗರು ( ಕದಂಬರು ರಾಜ್ಯದ ಪಶ್ಚಿಮದಲ್ಲಿ ಆಳಿದರೆ , ಗಂಗರು ಪೂರ್ವದಲ್ಲಿ ಆಳಿದರು )
- ಕರ್ನಾಟಕವನ್ನಾಳಿದ ಪ್ರಥಮ ಶುದ್ಧ ಕನ್ನಡ ರಾಜಮನೆತನ .
ಮಯೂರಶರ್ಮ / ಮಯೂರವರ್ಮ ( ಕ್ರಿ.ಶ. 345-365 )
- ತಾಳಗುಂದದ ಶಾಸನದ ಪ್ರಕಾರ ಮಯೂರಶರ್ಮ ಕದಂಬ ವಂಶದ ಸ್ಥಾಪಕ .
- ಮಯೂರವರ್ಮನ ತಂದೆಯ ಹೆಸರು – ವೀರಶರ್ಮ
- ಚಿತ್ರದುರ್ಗದ ಚಂದ್ರವಳ್ಳಿಯಲ್ಲಿ ದೊರಕಿರುವ ಇವನ ಶಾಸನದ ಪ್ರಕಾರ ಉತ್ತರದ ತ್ರಿಕೂಟರು , ಅಭೀರರು , ಪಾರಿಯಾತ್ರಿಕರು , ಶಕರು ಮತ್ತು ಮೌಖರಿಯರನ್ನು ದಕ್ಷಿಣದ ಪಲ್ಲವರು , ಪುನ್ನಾಟರು ಮತ್ತು ಸೇಂದ್ರಕರನ್ನು ಸೋಲಿಸಿದನೆಂದು ತಿಳಿದುಬರುತ್ತದೆ . ತಾಳಗುಂದ ಬ್ರಾಹ್ಮಣರಿಗೆ 144 ರ ಗ್ರಾಮಗಳನ್ನು ದತ್ತಿಯಾಗಿ ನೀಡಿದ
- ಮಯೂರವರ್ಮನ ಸೈನಿಕ ಸಾಧನೆಯನ್ನು ತಿಳಿಸುವ ಶಾಸನ – ಚಂದ್ರವಳ್ಳಿ ಶಾಸನ .
- ಇವನ ತಂದೆ ಬಂಧುಷೇಣ – ತಾತ ವೀರಶರ್ಮ .
- ತಾಳಗುಂದ ಶಾಸನದ ಪ್ರಕಾರ ಇವನು 18 ಅಶ್ವಮೇಧಯಾಗ ಆಚರಿಸಿದ .
- ತನ್ನ ತಾತನೊಂದಿಗೆ ಕಂಚಿ ವಿದ್ಯಾಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆ ಹೋಗಿದ್ದಾಗ ಕಂಚಿಯ ಪಲ್ಲವ ದೊರೆ ಶಿವಸ್ಕಂದವರ್ಮನ ಸೈನ್ಯದಿಂದ ಅವಮಾನಿತಗೊಂಡು , ಪಲ್ಲವರನ್ನು ನಿರ್ಮೂಲನೆ ಮಾಡುವ ಪಣ ತೊಟ್ಟು , ಬ್ರಾಹ್ಮಣತ್ವ ತೊರೆದು ಕ್ಷಾತ್ರ ಧರ್ಮವನ್ನು ಸ್ವೀಕರಿಸಿದ , ಬಾಣರನ್ನು ಸೋಲಿಸಿ , ಬನವಾಸಿಯನ್ನು ರಾಜಧಾನಿಯಾಗಿ ಮಾಡಿ ರಾಜ್ಯ ಕಟ್ಟಿದ
- ಮಯೂರವರ್ಮನ ನಂತರ ಕದಂಬ ವಂಶವನ್ನು ಆಳಿದವರು – ಕಂಗವರ್ಮ .
ಭಗೀರಥವರ್ಮ ( ಕ್ರಿ.ಶ. 390415 )
ಮಯೂರವರ್ಮನ ಮೊಮ್ಮಗ .
- ಶಾಸನಗಳಲ್ಲಿ ಇವನನ್ನು ಕುಂತಳಾಧೀಶ್ವರನೆಂದು ಮತ್ತು ಕದಂಬ ಕುಲದ ಸಗರನೆಂದು ವರ್ಣಿಸಿವೆ .
- ( ಆದರೆ ಕೌಂತಳೇಶ್ವರ ದೌತ್ಯ ಕೃತಿ ರಚಿಸಿದ ಕಾಳಿದಾಸನ ಬೇರೆ ಎಂಬ ಅಭಿಪ್ರಾಯವಿದ್ದು – ಇವನ ರಾಯಭಾರಿಯಾಗಿ ಬಂದಿದ್ದನೆಂದೂ ಸಹ ಹೇಳಲಾಗುತ್ತದೆ )
- ಭೋಜನ ಶೃಂಗಾರ ಪ್ರಕಾಶರ ಪ್ರಕಾರ – ಗುಪ್ತ ದೊರೆಯಾದ 2 ನೇ ಚಂದ್ರಗುಪ್ತ ವಿಕ್ರಮಾದಿತ್ಯನು ಇವನ ಆಸ್ಥಾನಕ್ಕೆ ಕಾಳಿದಾಸರನ್ನು ಕಾರ್ಯಭಾರಿಯಾಗಿ ಕಳಹಿಸಿದ ಎಂದು ಉಲ್ಲೇಖಿಸಿದೆ .
- ” ಭನಿ ” ಎಂಬ ನಾಮಾಂಕಿತದ ನಾಣ್ಯಗಳನ್ನು ಇವನು ಚಲಾವಣೆಗೆ ತಂದರು .
ಕಾಕುಸ್ಥವರ್ಮ : ( ಕ್ರಿ.ಶ. 405-430 ) ಅಥವಾ 435-455 ) .
- ಕದಂಬರಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಉದಾರವಾದಿ ದೊರೆ .
- ಶಾಂತಿವರ್ಮನ ತಾಳಗುಂದ ಶಾಸನವು ಇವನನ್ನು ಕದಂಬ ಕುಲಶಿರೋಮಣಿ , ಕೀರ್ತಿಸೂರ್ಯ ಆನರ್ಘ್ಯ ರತ್ನ ಎಂದು ವರ್ಣಿಸುತ್ತದೆ .
- ಅನ್ಯ ರಾಜ್ಯಗಳೊಂದಿಗೆ ತನ್ನ ಹೆಣ್ಣು ಮಕ್ಕಳನ್ನು ನೀಡಿ ವೈವಾಹಿಕ ಸಂಬಂಧಗಳನ್ನು ಬೆಳಸಿಕೊಂಡ ಅವರುಗಳೆಂದರೆ
- ಗುಪ್ಪದೊರೆ 2 ನೇ ಚಂದ್ರಗುಪ್ತನ ಮಗ ಕುಮಾರಗುಪ್ತ
- ಅಳುಪ ದೊರೆ – ಪಶುಪತಿ
- ಗಂಗದೊರೆ – 2 ನೇ ಮಾಧವ
- ವಾಕಟಕ ದೊರೆ – ನರೇಂದ್ರ ಸೇನ
- ತಾಳಗುಂದ ( ಶಿವಮೊಗ್ಗ ಜಿಲ್ಲೆ ) ದಲ್ಲಿ ಪ್ರಣವೇಶ್ವರ ಕೆರೆ ನಿರ್ಮಿಸಿ , ಅಲ್ಲಿ ಶಾಸನ ಕೆತ್ತಿಸಿದ .
- ಹಲಸಿ ಮತ್ತು ಹಲ್ಮಡಿ ಶಾಸನಗಳು ಇವನ ಸಾಧನೆಯನ್ನು ತಿಳಿಸುತ್ತವೆ .
- ಧರ್ಮರಾಜ , ಧರ್ಮ ಮಹಾರಾಜ ಎಂಬ ಬಿರುದುಗಳನ್ನು ಧರಿಸಿದ್ದ .
- ಕನ್ನಡದ ಮೊದಲ ಶಾಸನ ಹಲ್ಮಡಿ ಶಾಸನವು ( ಹಾಸನ ಜಿಲ್ಲೆಯಲ್ಲಿದೆ ) ಇವರ ಕಾಲದ್ದು ( ಕ್ರಿ.ಶ. 450 ) ಇದು 17 ಸಾಲುಗಳ ವಾಕ್ಯ ರಚನೆಯಿಂದ ಕೂಡಿದೆ
- ಕ್ರಿ.ಶ 425 ರಲ್ಲಿ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಿದ .
- ಇವನ ಮಗನಾದ ಶಾಂತಿವರ್ಮನು ಪ್ರಸಿದ್ದ ತಾಳಗುಂದ ಶಾಸನವನ್ನು ತನ್ನ ಆಸ್ಥಾನದ ಕುಬ್ಬಕವಿಯಿಂದ ಬರೆದ
- ಕಾಕುಸ್ಕ ವರ್ಮನ ಮೊಮ್ಮಗ ಅಂದರೆ – ಶಾಂತಿವರ್ಮನ ಮಗ , ಮೃಗೇಶವರ್ಮನ ಕಾಲದಲ್ಲಿ ಕದಂಬ ಸಾಮ್ರಾಜ್ಯ 3 ಭಾಗಗಳಾಗಿ ಒಡೆದು ಹೋಯಿತು . ಬನವಾಸಿಯಲ್ಲಿ ಮೃಗೇಶವರ್ಮ ಆಳಿದರೆ , ಶ್ರೀಪರ್ವತದಲ್ಲಿ ಕಾಕುಸ್ಥವರ್ಮನ ಮತ್ತೊಬ್ಬ ಮಗ , ಕೃಷ್ಣವರ್ಮ ಹಾಗೂ ಉಚ್ಚಂಗಿಯಿಂದ ಮತ್ತೊಬ್ಬ ಮಗ – ಕುಮಾರವರ್ಮ ಆಳಿದರು
- ರವಿವರ್ಮನ ಸಾವಿನ ನಂತರ ಈತನ ರಾಣಿ ಸಹಗಮನ ಅನುಸರಿಸಿದಳು . ಇದು ರಾಜ್ಯದಲ್ಲಿನ ಪ್ರಥಮ ಮಾಸ್ತಿ ಮರಣ ಉಲ್ಲೇಖವಾಗಿದೆ ( ಮಾಸ್ತಿಕಲ್ಲು )
- ಮೃಗೇಶವರ್ಮನ ಕಾಲದಲ್ಲಿ ಹಲಸಿಯು ಕದಂಬರ 2 ನೇ ರಾಜಧಾನಿಯಾಯಿತು
- ರವಿವರ್ಮ ( ಕ್ರಿ.ಶ. 483-530 ) ಕದಂಬರ ಕೊನೆಯ ಪ್ರಸಿದ್ಧಿ ರಾಜ
- ಮೃಗೇಶವರ್ಮ – ನ್ಯಾಯ ವಿತರಣೆಯಲ್ಲಿ ಯುಧಿಷ್ಠ ರನೆಂಬ ಹೆಸರು ಪೃಡೆದಿದ್ದಾನೆ .
ಕದಂಬರ ಕಾಣಿಕೆಗಳು
- ಆಡಳಿತದಲ್ಲಿ ಶಾತವಾಹನರ ಅನುಕರಣೆ
- ಪಂಚಪ್ರಧಾನರೆಂಬ ಮಂಪರಿಷತ್ತು ರಾಜನ ಸಹಾಯಕ್ಕೆ ಇತ್ತು
- ಅವರುಗಳೆಂದರೆ :
-
- ತಂತ್ರಪಾಲ ( ವಿದೇಶಿ ವ್ಯವಹಾರ )
- ಮನೆವರ್ಗಡೆ ( ಅರಮನೆ ವ್ಯವಹಾರ ನೋಡಿಕೊಳ್ಳುವ ಮಂತ್ರಿ )
- ಪ್ರಧಾನ ( ಖಜಾನೆ ಅಧಿಕಾರಿ )
- ಕಾರ್ಯದರ್ಶಿ
- ಪ್ರಮುಕಪಾಲ ತಾಂಬೂಲ ಪಾರುಪತ್ಯಗಾರ ( ಆಸ್ಥಾನದ ನಿಯಂತ್ರಣ )
- ಕದಂಬರ ಪ್ರಾಂತ್ಯಗಳ ಸಣ್ಣ ವಿಭಾಗಗಳ ಮೇಲ್ವಿಚಾರಕರು – ಮನ್ನೆಯರು .
- ಚಾತುರ್ವಣ್ರ ವ್ಯವಸ್ಥೆ , ಅವಿಭಕ್ತ ಕುಟುಂಬ , ಪಿತೃಪ್ರಧಾನ ಕುಟುಂಬ , ಸ್ತ್ರೀಯರಿಗೆ ಸಾಕಷ್ಟು ಸ್ವಾತಂತ್ರ್ಯ ಸಮಾಜದ ಪ್ರಯೋಜನವಿತ್ತು ,
ಪ್ರಮುಖ ಲಕ್ಷಣಗಳು
- ಸರ್ವನಾಮಸ್ಯ , ತ್ರೀಭೋಗ , ತಾಳವೃತ್ತಿ ಇವು ಭೂಕಂದಾಯ 3 ವಿಧಗಳು .
- ಪ್ರಮುಖ ಬಂದರುಗಳು – ಮಂಗಳೂರು , ಹೊನ್ನಾವರ ಅಂಕೋಲ , ಚಾಲ್ , ಗೋವಾ
- ಇವರು ವೈದಿಕ ಧರ್ಮ ಪರಿಪಾಲಕರು – ಜೈನ , ಬೌದ್ಧ ಧರ್ಮಕ್ಕೂ ಸಹ ಪ್ರೋತ್ಸಾಹ ನೀಡುತ್ತಿದ್ದರು .
- ಮಠಗಳು , ಅಗ್ರಹಾರ , ಘಟಿಕಸ್ಥಾನಗಳು ಪ್ರಮುಖ ವಿದ್ಯಾಕೇಂದ್ರಗಳು
- ತಾಳಗುಂದ ಅಗ್ರಹಾರಕ್ಕೆ ಪ್ರಸಿದ್ದಿಯಾಗಿತ್ತು ಹಾಗೆಯೇ ಬಳ್ಳಿಗಾವೆ , ಭಾಂಡನಪುರ , ಕುಪ್ಪಟೂರು ಮಠಗಳು ಪ್ರಸಿದ್ಧಿಯಾಗಿದ್ದವು . ಘಟಿಕಸ್ಥಾನಗಳು ಉನ್ನತ ವಿದ್ಯಾಭ್ಯಾಸ ಕೇಂದ್ರಗಳಾಗಿದ್ದವು
- ಚಾಲುಕ್ಯರ ಕಾಲದಲ್ಲಿ ಭೇಟಿ ನೀಡಿದ್ದ ಚೀನಾದ ಹ್ಯುಯೆನ್ ತ್ಸಾಂಗ್ ಬನವಾಸಿಯಲ್ಲಿ 10,000 ಬೌದ್ಧ ಭಿಕ್ಷುಗಳು ಇದ್ದರೆಂದು ತಿಳಿಸಿದ್ದಾನೆ .
ಕಲೆ ಮತ್ತು ವಾಸ್ತುಶಿಲ್ಪ
- ತಮ್ಮದೇ ಆದ ಕದಂಬ ಕಲಾಶೈಲಿಯನ್ನು ಸೃಷ್ಟಿಸಿದರು . ಮೆಟ್ಟಲಿನ ಆಕೃತಿಯ ಗೋಪುರಗಳು , ಚತುಷೋನಾಕಾರದ ದೇವಾಲಯಗಳು , ಸ್ತಂಭಗಳಿಂದ ಕೂಡಿದ ದೇವಾಲಯಗಳು , ಪ್ರತ್ಯೇಕವಾಗಿರುವ ಗರ್ಭಗುಡಿ ಸುಖನಾಸಿ ಇವರ ವಾಸ್ತುಶೈಲಿ ಲಕ್ಷಣಗಳು .
ಪ್ರಮುಖ ದೇವಾಲಯಗಳು
- ತಾಳಗುಂದ ಪ್ರಣವೇಶ್ವರ ಕದಂಬರ ಕುಲದೇವರು .
- ಬನವಾಸಿಯ ಮಧುಕೇಶ್ವರ ಮತ್ತು ವರಾಹನರಸಿಂಹ ದೇವಾಲಯ
- ಬನವಾಸಿಯ ಮಧುಕೇಶ್ವರ ಕದಂಬರ ಮನೆದೇವರು .
- ದೊಡ್ಡಗದ್ದನವಳ್ಳಿಯ – ಲಕ್ಷ್ಮೀ ದೇವಾಲಯ
- ಮಿಡ್ನಾಪುರದ ಜೈನಬಸದಿ
- ಹಲಸಿಯ ಜೈನಬಸದಿ ಮತ್ತು ಕಲ್ಲೇಶ್ವರ ( ತ್ರಿಕೂಟ ) ಸುವಣೇಶ್ವರ ರಾಮೇಶ್ವರ , ಹತ್ತಿಕೇಶ್ವರ .
- ತಾಳಗುಂದದ ಪ್ರಣವೇಶ್ವರ
ಇತರೆ ವಿಷಯಗಳನ್ನು ಓದಿ :-
- ಕರ್ನಾಟಕ ಏಕೀಕರಣ ಇತಿಹಾಸ
- ಆಧುನಿಕ ಕರ್ನಾಟಕ ಇತಿಹಾಸ
- ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ
- ಮಧ್ಯ ಶಿಲಾಯುಗ 8,000-4000 BC
- ಶಿಲಾಯುಗ ಇತಿಹಾಸ
- ಪ್ರಾಚೀನ ಭಾರತದ ಇತಿಹಾಸ
- ಶಾತವಾಹನರು
- ಗಾಂಧಿ ಯುಗ
- ಬಾದಾಮಿ ಚಾಲುಕ್ಯರು
- ಗಂಗರು ಕರ್ನಾಟಕ ಆಳಿದ ರಾಜಮನೆತನ
- ಕದಂಬರು ಕ್ರಿ.ಶ. 325 – 540
- ನವಶಿಲಾಯುಗ (Neolithic Age ) ಕ್ರಿ.ಪೂ. 4000-1,800