ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes

ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes

2 PUC Belagu Java Kannada Notes, belagu java kannada notes ,ಬೆಳಗು ಜಾವ ಕನ್ನಡ ನೋಟ್ಸ್‌ Belagu Java Questions and Answers Pdf, Notes, Summary, 2nd PUC Kannada Textbook Answers, Karnataka State Board , belagu jaava padyada notes , ಬೆಳಗು ಜಾವ notes

2 PUC Belagu Java Kannada Notes

Spardhavani Telegram

2 PUC Belagu Java Kannada Notes

ಒಂದು ಅಂಕದ ತ ಗಳು (ಒಂದು ವಾಕ್ಯದಲ್ಲಿ ಉತ್ತರಿಸಿ: 2 PUC Belagu Java Kannada Notes

ಯಾವುದಕ್ಕೆ ಸೆಳವಿದೆಯೇ
ಕವಿ ಹೇಳುತ್ತಾರೆ? ಜೀವನದ ನದಿಗೆ ಸೆಳವಿದೆಯೆಂದು ಕವಿ ಹೇಳಿದ್ದಾರೆ.

ಕವಿಯ ಪ್ರಕಾರ ಯಾವುದು ಮತ್ತೆ ಚಿಗುರುತ್ತದೆ?
ಕವಿಯ ಪ್ರಕಾರ ಮರವು ಮತ್ತೆ ಚಿಗುರುತ್ತದೆ.

ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವರು ಯಾರು?
ಜೇನ್ನೊಣದ ಹೆದೆಗೆ ಹೂಬಾಣ ಹೂಡಿದವನು ಬೆಳಕಿನ ಬೇಟೆಗಾರ.

ಬೇಟೆಗಾರ ಯಾರು?
ಬೆಳಕೇ ಬೇಟೆಗಾರ,

ಹುಸಿನಿದ್ದೆ ಸಾಕು ಎಂದು ಕವಿ ಯಾರಿಗೆ ಹೇಳುತ್ತಾರೆ?
ಎಚ್ಚರಿದ್ದು ಮಲಗಿ ನಿದ್ರಿಸುತ್ತಿರುವ ಎಳೆಯರಿಗೆ ಎಂದಿರುವರು. ಹುಸಿನಿದ್ದೆಗಿದ್ದೆ ಸಾಕು

2 PUC Belagu Java Kannada Notes

ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes
ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes

ಎರಡು – ಮೂರು ವಾಕ್ಯಗಳಲ್ಲಿ ಉತ್ತರಿಸಿ : ( ಎರಡು ಅಂಕದ ಪ್ರಶ್ನೆಗಳು )

ಕವಿಯ ಪ್ರಕಾರ ಮುಪ್ಪು ಮತ್ತು ಹರೆಯದ ನಡುವಿನ ವ್ಯತ್ಯಾಸವೇನು ?

ಕವಿಯ ಪ್ರಕಾರ ಮುಪ್ಪು ಅನುಭವಶಾಲಿಯಾದರೂ ಚಿಂತನದಲ್ಲಿ ಮುಳುಗಿರುತ್ತದೆ ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ . ಹರೆಯ ಎಂಬುದು ಮಾನವ ಜೀವನದ ಬೆಳಗು ಜಾವ . ಈ ಅವಧಿಯಲ್ಲಿ ನಿರಂತರವಾಗಿ , ಕ್ರಿಯಾಶೀಲರಾಗಿ , ದುಡಿದು , ದಣಿದ ಜೀವನದಲ್ಲಿ ಸಫಲತೆಯನ್ನು ಸಾರ್ಥಕತೆಯನ್ನು ಪಡೆಯಬೇಕೆಂಬ ಮಾರ್ಗದರ್ಶನವನ್ನು ಕವಿ ನೀಡಿದ್ದಾರೆ .

ಬೆಳಕು – ಬೇಟೆಗಾರ ಹೇಗೆ ಬರುತ್ತಾನೆ ?

ಗುಡಿಗೋಪುರಕ್ಕೂ ಬಲೆ ಬೀಸುತ್ತಾ ಬೆಳೆದು ಬೇಟೆಗಾರ ಬರುತ್ತಾನೆ .

ಕವಿ ಬೇಂದ್ರೆ ಮಕ್ಕಳಿಗೆ ಬಾಳಿನ ಬಗ್ಗೆ ಕೊಡುವ ಸಂದೇಶವೇನು ?

ಕವಿ ಬೇಂದ್ರೆಯವರು ಮಕ್ಕಳಿಗೆ ಬಾಳಿನ ಬಗ್ಗೆ ಜೀವನದ ನವರಸವನ್ನು ಕುಡಿದು ಚೈತನ್ಯ ಪೂರ್ಣವಾಗಿ ಬಾಳಬೇಕು , ಸೋಮಾರಿಗಳಂತೆ ಹುಸಿನಿದ್ದೆ ಬಿಟ್ಟು ಕ್ರಿಯಾಶೀಲರಾದ ನಾವು ಜೀವನದಲ್ಲಿ ಯಶಸ್ಸನ್ನು ಕಾಣಬಲ್ಲೆವು ಎಂಬುದಾಗಿ ಕವಿ ಸಂದೇಶವನ್ನು ನೀಡಿದ್ದಾರೆ .

ಹುಸಿನಿದ್ದೆ ಸಾಕು , ಎದ್ದೇಳಿ ಎಂದು ಕವಿ ಮಕ್ಕಳಿಗೆ ಹೇಳಲು ಕಾರಣವೇನು ?

ಹುಸಿನಿದ್ದೆ ಎಂದರೆ , ಎಚ್ಚರವಾಗಿದ್ದು ನಿದ್ದೆ ಬಾರದಿದ್ದರು ಸೋಮಾರಿಗಳಾಗಿ ಹಾಸಿಗೆಯಲ್ಲಿ ಹೊರಳಾಡುವ ಸ್ಥಿತಿ . ಇದು ಸೋಮಾರಿಗಳ ಸಂಕೇತವು ಹೌದು . ಸೋಮಾರಿತನವು ನಮ್ಮ ಜೀವನವನ್ನು ನಿಷ್ಪಲಗೊಳಿಸುತ್ತದೆ . ನಿಷ್ಕ್ರಿಯೆಗೊಳಿಸುತ್ತದೆ . ಆದ್ದರಿಂದ ಜೀವನದಲ್ಲಿ ಸಫಲತೆಯನ್ನು ಪಡೆಯಲು ನಾವು ಹುಸಿ ನಿದ್ದೆ ಬಿಟ್ಟು ಎದ್ದು ಎಚ್ಚರಗೊಂಡು ಕ್ರಿಯಾಶೀಲರಾಗಿ ಜೀವನದ ಸಾರ್ಥಕತೆಯನ್ನು ಪಡೆಯಬೇಕು ಎಂಬುದಾಗಿ ಕವಿ ‘ ಹುಸಿ ನಿದ್ದೆ ಸಾಕು , ಎದ್ದೇಳಿ ‘ ಎಂದು ಕವಿ ಹೇಳಿದ್ದಾರೆ .

ಬಾನು ಮತ್ತು ಮರದ ನಿತ್ಯನೂತನತೆಯ ಬಗ್ಗೆ ಕವಿ ಏನು ಹೇಳಿದ್ದಾರೆ ?

ಬಾನು ತಿಳಿಯಾದ ವಿಸ್ತಾರವಾದ ಸ್ವಚ್ಚ ಆಕಾಶ , ಇಲ್ಲಿ ಆಗಾಗ ಮಳೆ ಮೋಡಗಳು ತುಂಬಿದ್ದು ಧರೆಗೆ ಮಳೆ ಸುರಿಸುತ್ತವೆ . ಧರೆಯನ್ನು ಸುಭಿಕ್ಷವನ್ನಾಗಿಸುತ್ತವೆ . ಮೋಡ ಕರಗಿದ ಮೇಲೆ ಸ್ವಚ್ಛ ತಿಳಿಯಾದ ನೀಲಾಕಾಶ ಆಹ್ಲಾದತೆಯನ್ನು ನೀಡುತ್ತದೆ . ಬಾನು ಬೆಳಕು – ಬೆಳಗು ಎರಡನ್ನು ಕೂಡುತ್ತದೆ . ಮರದಲ್ಲಿಯೂ ಇದೇ ರೀತಿಯ ನಿತ್ಯ ನೂತನತೆ ಇರುತ್ತದೆ . ಪ್ರತಿದಿನ ಹೊಸ ಮೊಗ್ಗು ಹೂಗಳಿಂದ ಕಂಗೊಳಿಸುತ್ತವೆ . ಸುಗಂಧವನ್ನು ಬೀರುತ್ತವೆ . ಕಾಲಕ್ಕನುಗುಣವಾಗಿ ರುಚಿಯಾದ ಹಣ್ಣುಗಳನ್ನು ನೀಡುತ್ತವೆ . ಹಸಿರಿನಿಂದ ಕಂಗೊಳಿಸುತ್ತ ನೂತನ ಕಾಂತಿಯನ್ನು ಚಿಮ್ಮಿಸುತ್ತದೆ .

ನಾಲ್ಕು ಅಂಕಗಳ ಪ್ರಶ್ನೆಗಳು : 2 PUC Belagu Java Kannada Notes

‘ ಬೆಳಗು ಜಾವ ‘ ಕವನದ ಮೂಲಕ ಕವಿ ಬೇಂದ್ರೆ ಹೇಳಿರುವ ವಿಚಾರಗಳಾವುವು ?

‘ ಬೆಳಗು ಜಾವ ‘ ಕವನದ ಮೂಲಕ ಕವಿ ನಮ್ಮ ಬದುಕಿನ ಮಹತ್ವದ ವಿಚಾರಗಳ ಕಡೆಗೆ ಗಮನ ಸೆಳೆದಿದ್ದಾರೆ . ಬೆಳಕು ಮತ್ತು ಬೆಳಗು ಎರಡೂ ಅಭಿನ್ನವಾದಂತೆ ಅದು ಕ್ರಿಯಾಶೀಲತೆಯ ಸಂಕೇತವೂ ಹೌದು . ಬೆಳಗು ಹೊಸ ಹುರುಪನ್ನು ಚೈತನ್ಯವನ್ನು ತಂದಿರುವಾಗ ಅದನ್ನು ಸಾರ್ಥಕಪಡಿಸಿಕೊಳ್ಳಬೇಕು . ಯೌವನವು ನಮ್ಮ ಬದುಕಿನ ಬೆಳಕು . ಯೌವನದಲ್ಲಿ ದುಡಿದುಗಳಿಸುವ ಶಕ್ತಿ ದೇಹಕ್ಕಿರುತ್ತದೆ . ಆದ್ದರಿಂದ ನಿದ್ದೆಯಿಂದ ಮೇಲೆದ್ದು ದುಡಿಯಬೇಕಾಗಿದೆ . ಮುಪ್ಪು ಬಂದೇ ಬರುತ್ತದೆ . ಅದನ್ನು ತಪ್ಪಿಸಲಾಗದು . ಬೆಳಗು – ಕತ್ತಲು , ಒಣಗುವುದು – ಚಿಗುರುವುದು ಇವೆಲ್ಲವೂ ಪ್ರಕೃತಿಯಲ್ಲಿ ಸಹಜ . ಆದರೆ ಮನುಷ್ಯನ ಜೀವನ ಬಾಲ್ಯ , ಯೌವನ , ಮುಪ್ಪು ಎಂಬ ಮುಮ್ಮುಖ ಚಲನೆ ಯಲ್ಲಿ ಸಾಗುವುದೇ ವಿನಹ ಹಿಮ್ಮುಖವಾಗಿ ಚಲಿಸಲಾರದು . ಆದ್ದರಿಂದ ಜೀವನ ನದಿಯ ಪವಾಹ ಬಂದು ಅಪ್ಪಳಿಸುವ ಮುನ್ನ , ಮರಣ ಬರುವ ಮುನ್ನ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಬೇಕೆಂದು ಬೇಂದ್ರೆ ತಿಳಿಸಿದ್ದಾರೆ .

ಬಾಳಿನ ಅಶಾಶ್ವತೆ ಮತ್ತು ಪ್ರಕೃತಿಯ ನಿತ್ಯನೂತನತೆಯ ಗುಣವನ್ನು ‘ ಬೆಳಗು ಜಾವ ‘ ಕವನದಲ್ಲಿ ಕವಿ ಹೇಗೆ ವಿವರಿಸಿದ್ದಾರೆ ?

ದ.ರಾ. ಬೇಂದ್ರೆಯವರ ‘ ಬೆಳಗು ಜಾವ ‘ ಕವಿತೆಯು ಪ್ರಕೃತಿಯ ನಿತ್ಯನೂತನತೆ ಯನ್ನು ಸಾರುವುದರ ಜೊತೆಜೊತೆಗೆ ಮನುಷ್ಯನ ಬಾಳಿನ ಅಶಾಶ್ವತತೆಯನ್ನು ವಿವರಿಸು ತ್ತದೆ . ಬೆಳಗಾಗುವುದು , ಕತ್ತಲಾಗುವುದು , ಋತುವಿಗೆ ತಕ್ಕಂತೆ ಮರ ಹಣ್ಣಾಗುವುದು , ಉದುರುವುದು , ಚಿಗುರುವುದು ಇವೆಲ್ಲವೂ ಪ್ರಕೃತಿಯ ನಿತ್ಯ ವ್ಯಾಪಾರಗಳು . ಮತ್ತೆ ಮತ್ತೆ ಹೊಸತನದಿಂದ ಮೈತುಂಬಿಕೊಳ್ಳುವುದು ಪ್ರಕೃತಿಯ ಲಕ್ಷಣ . ಕವಿ ಇದನ್ನು ಮರದ ಉದಾಹರಣೆಯ ಮೂಲಕ ದೃಢಪಡಿಸಿದ್ದಾರೆ . ಆದರೆ ಮನುಷ್ಯನ ಬದುಕು ಶಾಶ್ವತವಾದುದಲ್ಲ . ಜೀವನದ ನದಿಯಲ್ಲಿ ಯಾವಾಗ ಬೇಕಾದರೂ ಪ್ರವಾಹದ ಅಲೆ ಬಂದು ಅಪ್ಪಳಿಸಬಹುದು , ಏರುಪೇರುಗಳಾಗಬಹುದು . ಅದರಂತೆಯೇ ಯಾವ ಗಳಿಗೆಯಲ್ಲಿ ಬೇಕಾದರೂ ಸಾವು ಬಂದು ಮೇಲೆರಗಬಹುದು . ಮನುಷ್ಯನ ಜೀವನ ಅಶಾಶ್ವತ , ಪ್ರಕೃತಿ ಮಾತ್ರವೇ ಶಾಶ್ವತ – ನಿತ್ಯನೂತನ ಎಂದು ಕವಿ ಬೇಂದ್ರೆಯವರು ವಿವರಿಸಿ ಹೇಳಿದ್ದಾರೆ .

ಮಾನವನ ಜೀವನದ ಸಾರ್ಥಕತೆ ಎಲ್ಲಿದೆಯೆಂದು ಕವಿ ಬೇಂದ್ರೆ ಹೇಳಿದ್ದಾರೆ ?

‘ ಬೆಳಗು ಜಾವ ‘ ಕವಿತೆಯಲ್ಲಿ ಕವಿ ಬೇಂದ್ರೆಯವರು ಬದುಕನ್ನು ಸಾರ್ಥಕಪಡಿಸಿ ಕೊಳ್ಳಬೇಕೆಂದು ಕರೆಕೊಟ್ಟಿದ್ದಾರೆ . ಮನುಷ್ಯನ ಜೀವನದಲ್ಲಿ ಬಾಲ , ಯೌವನ , ಮುತ್ತು ಗಳೆಲ್ಲವೂ ಹಂತಹಂತವಾಗಿ ಬರುವ ಸಂಗತಿಗಳು . ಬಾಲ್ಯದಲ್ಲಿ ಬೆರಗಿನಿಂದ ಸುತ್ತಮುತ್ತಲ ವಿಸ್ಮಯವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಬೆಳೆಯುತ್ತೇವೆ . ಯೌವನವೆಂದರೆ ಅದುಮೋಜಿನ ಸಮಯವಲ್ಲ , ಕವಿಯ ಪ್ರಕಾರ ದುಡಿಯುವ , ದಣಿಯುವ ಸಮಯ ಇಂತಹ ಹೊತ್ತಿನಲ್ಲಿ ನಿದ್ದೆ ಮಾಡುತ್ತಾ ಕನಸುಕಾಣುತ್ತಾ ಕುಳಿತುಕೊಳ್ಳುವುದು ತರವಲ್ಲ . ಮುಪ್ಪು ಬರುವ ಮುನ್ನ ದುಡಿಮೆಯಲ್ಲಿ ಸಾರ್ಥಕ್ಯವನ್ನು ಕಾಣಬೇಕು . ಬಂದನಂತರ ಹಿಂದಿನ ದಿನಗಳ ಕನವರಿಕೆ ಮಾತ್ರ ಉಳಿಯುತ್ತದೆ . ಸಾವಿನ ಚಿಂತ ಆವರಿಸುತ್ತದೆ . ಆದ್ದರಿಂದ ಯೌವನವು ಬಹು ಅಮೂಲ್ಯ ಕ್ಷಣವಾದ್ದರಿಂದ ಅದನ್ನು ವ್ಯರ್ಥಗೊಳಿಸದೆ ಸಾರ್ಥಕವಾಗಿ ಬಳಸಿಕೊಳ್ಳುವಂತೆ ಕವಿ ಕರೆಯುತ್ತಿದ್ದಾರೆ .

ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಹೇಗೆ ಸಫಲಗೊಳಿಸಿಕೊಳ್ಳಬೇಕ ಎಂದು ಬೇಂದ್ರೆ ಕರೆಕೊಡುತ್ತಾರೆ ?

ಬೇಂದ್ರೆಯವರ ‘ ಬೆಳಗು ಜಾವ ‘ ಕವಿತೆಯು ಜೀವನದ ಉದ್ದೇಶ ಮತ್ತು ಆದರ್ಶಗಳನ್ನು ಸಫಲಗೊಳಿಸಿಕೊಳ್ಳಬೇಕೆಂಬ ಕರೆಯನ್ನು ಎಳೆಯರಿಗೆ ಇತ್ತಿದೆ . ಕವಿತೆಯ ಆರಂಭದ ಚರಣವು ಬೆಳಕಿನ ಆಗಮನದ ವರ್ಣನೆಗೆ ಮೀಸಲಾಗಿದೆ . ಉಳಿದ ಭಾಗ ದಲ್ಲಿ ಕವಿ ಮಲಗಿ ನಿದ್ರಿಸುತ್ತಿರುವವರನ್ನು ಎಚ್ಚರಗೊಳಿಸಿದ್ದಾರೆ . ಬೆಳಗು ಕ್ರಿಯಾಶೀಲತೆಯ ಸಂಕೇತ , ರಾತ್ರಿಯೆಲ್ಲಾ ನಿದ್ದೆಯ ವಿಶ್ರಾಂತಿಯಲ್ಲಿ ಮೈಮರೆತವರಿಗೆ ಹೊಸ ಚೈತನ್ಯವನ್ನು ತುಂಬಿ ದೈನಂದಿನ ಕ್ರಿಯೆಗೆ ಪ್ರೋತ್ಸಾಹಿಸುತ್ತದೆ . ಆದ್ದರಿಂದ ಬೆಳಕಿನಲ್ಲಿ ಎದ್ದು ಕತ್ತಲಾಗುವ ಮುನ್ನ ದುಡಿಮೆಯ ಉದ್ದೇಶವನ್ನು ಸಾರ್ಥಕ್ಯದಿಂದ ಪೂರೈಸಿಕೊಳ್ಳಿರೆಂದು ಕವಿ ಕರೆಯಿತ್ತಿದ್ದಾರೆ . ಇಲ್ಲಿ ಬೆಳಗು ಯೌವನದ , ಆದರ್ಶಗಳ ಸಂಕೇತವಾದರೆ , ಇರುಳು ಮುಪ್ಪಿನ ಸಂಕೇತವಾಗಿದೆ . ಇರುವ ಯೌವನವನ್ನು ಕನಸುಕಾಣುತ್ತಾ ಹಾಳು ಮಾಡಿ ಕೊಳ್ಳದೆ ದುಡಿದು ಗಳಿಸುವುದರ ಮುಖೇನ ಸಫಲಗೊಳಿಸಿಕೊಳ್ಳಿರೆಂದು ಕವಿಯು ಇಲ್ಲಿ ಎಚ್ಚರಿಸಿದ್ದಾರೆ .

2 PUC Belagu Java Kannada Notes

ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes
ಬೆಳಗು ಜಾವ ಕನ್ನಡ ನೋಟ್ಸ್‌ ದ್ವಿತೀಯ ಪಿ.ಯು.ಸಿ | 2 PUC Belagu Java Kannada Notes

ಸಂದರ್ಭ ಸೂಚಿಸಿ , ಸ್ವಾರಸ್ಯವನ್ನು ಸೂಚಿಸಿ : 2 PUC Belagu Java Kannada Notes

“ ಬಲೆಬೀಸಿ ಬಂದ , ಅಗೋ ಬೆಳಕು – ಬೇಟೆಗಾರ “

ʼದ.ರಾ. ಬೇಂದ್ರೆಯವರು ರಚಿಸಿರುವ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ಬೆಳಕಿನ ಆಗಮನವನ್ನು ಕುರಿತು ಕವಿ ಈ ಮೇಲಿನಂತೆ ವರ್ಣಿಸಿದ್ದಾರೆ . ಮೂಡಲದ ಕಣ್ಣು ತೆರೆಯುವಾಗ ಬಾನೆಲ್ಲ ಕೆಂಪೇರುವುದು. ಬಾನು ಮೊದಲಿಗೆ ಕೆಂಪಾಗಿ ಅರುಣೋದಯವಾಗುವುದನ್ನು ಸೂಚಿಸಿದ ನಂತರ ನಿಧಾನವಾಗಿ ಆಕಾಶ ಬೆಳಕು ಕಾಣುವುದು . ಇದನ್ನು ಕವಿಯು ಬೆಳಕಿನ ಬೇಟೆಗಾರನು ಗುಡಿಗೋಪುರದ ಮೇಲೆಲ್ಲಾ ಬಲೆಬೀಸಿ ಬರುವುದಕ್ಕೆ ಸಮೀಕರಿಸಿ , ಬೆಳಗುಜಾವದ ಆರಂಭವನ್ನು ಈ ಮೇಲಿನ ವಾಕ್ಯದಲ್ಲಿ ವರ್ಣಿಸಿದ್ದಾರೆ . ಬೆಳಕಿನ – ಬೇಟೆಗಾರ ‘ ಎಂಬ ಹೋಲಿಕೆ ವಿಶೇಷ ಪ್ರಯೋಗವಾಗಿರುವುದನ್ನು ಗಮನಿಸಬಹುದು .

“ ಮುಳುಗಿರಲಿ ಮುಪ್ಪು ಚಿಂತನದಿ ”

ಅಂಬಿಕಾತನಯದತ್ತರು ಬರೆದಿರುವ ‘ ಬೆಳಗು ಜಾವ ‘ ಕವಿತೆಯ ಅಂತ್ಯದಲ್ಲಿ ಈ ಮೇಲಿನ ವಾಕ್ಯವನ್ನು ಕಾಣಬಹುದಾಗಿದೆ . ಮರಣ – ಮುಪ್ಪಿನ ಚಿಂತೆಯ ಅಗತ್ಯವಿಲ್ಲ . ಏಕೆಂದರೆ ಇದು ಹರೆಯ ತುಂಬಿರುವ ಹೊತ್ತು . ಹೀಗಿರುವ ಹರೆಯ ಪುನಃ ಸಿಗಲಾರದು . ಮುಪ್ಪು ಬರುವ ಕಾಲಕ್ಕೆ ಬಂದೇ ಬರುತ್ತದೆ . ಈಗಲೇ ಏಕೆ ಅದರ ಚಿಂತೆ ? ಮುಪ್ಪು ಬಂದೇ ಬರುತ್ತದೆ , ಅದನ್ನು ತಪ್ಪಿಸಲು ಯಾರಿಂದಲೂ ಅಸಾಧ್ಯ . ಆದ್ದರಿಂದ ‘ ಮುಪ್ಪು ಮುಳುಗಿರಲಿ ಚಿಂತನದಿ ‘ ಎಂದು ಹೇಳುವುದರ ಮೂಲಕ ಬದುಕನ್ನು ಸ್ವೀಕರಿಸಬೇಕಾದ , ಅನುಭವಿಸ ಬೇಕಾದ ಬಗೆಯನ್ನು ಕವಿ ಇಲ್ಲಿ ತಿಳಿಸಿಕೊಟ್ಟಿರುತ್ತಾರೆ .

“ ಮರಣ ಬಂದೀತು ಕ್ಷಣವು ಉರುಳಿ ”

ಗಾರುಡಿಗ ಕವಿ ದ.ರಾ. ಬೇಂದ್ರೆಯವರ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಬೆಳಗು ಮೂಡಿರುವಾಗ ಹುಸಿನಿದ್ದೆ ಬಿಟ್ಟು ದುಡಿಮೆಯಲ್ಲಿ ಕ್ರಿಯಾಶೀಲರಾಗ ಬೇಕೆಂದು ಹೇಳಿರುವ ಕವಿಯು , ಯೌವನ ಉತ್ಸಾಹ – ಹುರುಪುಗಳೆಲ್ಲವೂ ಸ್ವಲ್ಪಕಾಲ ಮಾತ್ರ ಇರುವುದು . ಅವುಗಳಿದ್ದಾಗ ದುಡಿದು ಸಂಪಾದಿಸಬೇಕು , ಬದುಕನ್ನು ಸಂಪೂರ್ಣ ವಾಗಿ ಆಸ್ವಾದಿಸಬೇಕು . ಜೀವನ ಒಂದು ನದಿಯ ರೀತಿ ಅಲ್ಲಿ ಪ್ರವಾಹದ ಏರುಪೇರು ಆಘಾತಗಳಿರುವುದು ಸಹಜ , ಯಾವಾಗ ಮರಣ ಬಂದು ಅಮರಿಕೊಳ್ಳುವುದೋ ಯಾರಿಗೂ ತಿಳಿಯದು . ಈಗ ಇದ್ದವರು ಇನ್ನೊಂದು ಕ್ಷಣದಲ್ಲಿ ಇಲ್ಲವಾಗಬಹುದು . ಆದುದರಿಂದ ಸಾವು ಬರುವ ಮುನ್ನ ಈ ಬದುಕಿನ ಸುಂದರ ಸಂಗತಿಗಳನ್ನು ಅನುಭವಿಸಿ ಆನಂದಿಸಬೇಕೆಂದು ಕವಿ ಕಿವಿಮಾತು ಹೇಳಿದ್ದಾರೆ .

“ ಬರಲುಂಟೆ ಸುಗ್ಗಿ ಮತ್ತೆ ? ”

ದ.ರಾ. ಬೇಂದ್ರೆಯವರು ಬರೆದಿರುವ ‘ ಬೆಳಗು ಜಾವ ‘ ಕವಿತೆಯ ವಾಕ್ಯವಿದು . ಜೀವನದಲ್ಲಿ ಸುಗ್ಗಿ ಸಂತಸದ ಕಾಲ ಮತ್ತೆ ಬರಬಹುದೇ ? ಎಂದು ಕವಿಯು ಪ್ರಶ್ನಿಸಿರುವ ಸಂದರ್ಭವಿದಾಗಿದೆ . ಮುಪ್ಪು – ಮರಣಗಳು ಆವರಿಸಿದ ನಂತರ ಮನಃ ಯೌವನ ತಿರುಗಿ ಬರಲಾರದು . ಋತು ಬದಲಾಗಬಹುದು , ಆಕಾಶ ಮತ್ತೆ ಬೆಳಕಿನಿಂದ ಪ್ರಜ್ವಲಿಸಬಹುದು , ಮರಗಳು ಮತ್ತೆ ಚಿಗುರಿ ಹಸಿರು ಹೊತ್ತು ಮೆರೆಯಬಹುದು ಇವೆಲ್ಲವೂ ಋತುನಿಯಮದ ಸಾಮಾನ್ಯ ಸಂಗತಿಗಳು , ಪ್ರಕೃತಿಯಲ್ಲಿ ಸುಗ್ಗಿ ಮತ್ತೆ ಬರಬಹುದು , ಆದರೆ ಬದುಕಿನಲ್ಲಿ ಯೌವನದ ಸುಗ್ಗಿ ಒಮ್ಮೆ ಮಾತ್ರವೇ ಬಂದು ಹೋಗುವಂತದ್ದು . ಹೋದ ಮೇಲೆ ತಿರುಗಿ ಬರಲಾರದು .

ತುಂಬಿರುವ ತನಕ ತುಂತುಂಬಿ ಕುಡಿಯಬೇಕು “

ಅಂಬಿಕಾತನಯದತ್ತ ಕಾವ್ಯನಾಮದ ವರಕವಿ ದ.ರಾ. ಬೇಂದ್ರೆಯವರು ರಚಿಸಿರುವ ‘ ಬೆಳಗು ಜಾವ ‘ ಎಂಬ ಕವಿತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸ ಲಾಗಿದೆ . ಮಲಗಿ ಹುಸಿನಿದ್ದೆಗೈಯುತ್ತಿರುವ ಯುವ ಮನಸ್ಸುಗಳನ್ನು ಎಚ್ಚರಿಸಿದ ಕವಿಯು ‘ ಈ ತುಂಬಿ ಬಾಳು ‘ ಎಂದರೆ ದುಂಬಿಯಂತೆ ಅಲ್ಲಿಂದಿಲ್ಲಿಗೆ ಹಾರುವ ಜೀವನದ ಮಜಲಿಗೆ ಹೋಲಿಸಿ , ಅದನ್ನು ಸಿಕ್ಕಾಗ ಸಿಕ್ಕಟ್ಟನ್ನು ತುಂಬಿತುಂಬಿ ಕುಡಿಯುವಂತೆ ಬುದ್ಧಿಮಾತು ಹೇಳಿದ್ದಾರೆ . ನಾಳೆ ಹೇಗೋ ಏನೋ ಎಂಬುದು ಯಾರಿಗೂ ಅರಿವಿರದು . ಇರುವಾಗ ಕೈಗೆ ಸಿಕ್ಕಷ್ಟನ್ನು ಮೊಗೆಮೊಗೆದು ಅನುಭವಿಸಿ , ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂಬ ಸಂದೇಶವನ್ನು ಕವಿಯು ಈ ಮೇಲಿನ ವಾಕ್ಯದಲ್ಲಿ ಕಾಣಿಸಿದ್ದಾರೆ .

2 PUC Belagu Java Kannada Notes

ಇತರೆ ಮಾಹಿತಿ

ಇನ್ನು ಹುಟ್ಟದೆಯಿರಲಿ ನಾರಿಯರೆನ್ನವೊಲು

ಬಸವಣ್ಣನವರ ವಚನಗಳು ಕನ್ನಡ ನೋಟ್ಸ್‌

ಕದಡಿದ ಸಲಿಲಂ ತಿಳಿವಂದದೆ ಕನ್ನಡ ನೋಟ್ಸ್‌

ಜಾಲಿಯ ಮರದಂತೆ ಕನ್ನಡ ನೋಟ್ಸ್‌

ಹಬ್ಬಲಿ ಅವರ ರಸಬಳ್ಳಿ ಕನ್ನಡ ನೋಟ್ಸ್‌

Leave a Reply

Your email address will not be published. Required fields are marked *