ಕನ್ನಡದಲ್ಲಿ ಮಹಿಳಾ ಸಬಲೀಕರಣ ಪ್ರಬಂಧ ಬರೆಯಿರಿ | Mahila Sabalikaran Prabandha in Kannada

ಕನ್ನಡದಲ್ಲಿ ಮಹಿಳಾ ಸಬಲೀಕರಣ ಪ್ರಬಂಧ ಬರೆಯಿರಿ | Mahila Sabalikaran Prabandha in Kannada

ಮಹಿಳಾ ಸಬಲೀಕರಣ ಕುರಿತು ಪ್ರಬಂಧ ಬರೆಯಿರಿ, Mahila Sabalikaran Prabandha in Kannada, Mahila Sabalikaran Essay in Kannada, Essay ಮಹಿಳಾ ಸಬಲೀಕರಣ ಪ್ರಬಂಧ

Women Empowerment Essay in Kannada

“ ಅಭಿವೃದ್ಧಿಗೆ ಮಹಿಳಾ ಸಬಲೀಕರಣಕ್ಕಿಂತ ಹೆಚ್ಚು ಪರಿಣಾಮಕಾರಿಯಾದ ಸಾಧನವಿಲ್ಲ . – ಕೋಫಿ ಅನ್ನಾನ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ವಿರುದ್ಧ ಅನೇಕ ದೌರ್ಜನ್ಯಗಳು ನಡೆಯುತ್ತಿವೆ . ಅದರಲ್ಲಿ ಲೈಂಗಿಕ ದೌರ್ಜನ್ಯವು ಕೂಡಾ ಒಂದಾಗಿದೆ .

ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ , ಮನೆಯಲ್ಲಿ , ಚಲಿಸುವ ವಾಹನಗಳಲ್ಲಿ , ಮಂದಿರ , ಮಸೀದಿ , ಚರ್ಚ್‌ಗಳ ಹೆಸರಿನಲ್ಲಿ , ಪಾಠ ಕಲಿಸುವ ಶಾಲೆಗಳಲ್ಲಿ , ಹೀಗೆ ಪ್ರತಿಯೊಂದು ಸ್ಥಳದಲ್ಲಿಯೂ ಕೂಡ ಮಹಿಳೆಯ ವಿರುದ್ಧ ದೌರ್ಜನ್ಯಗಳು ಕಂಡು ಬರುತ್ತವೆ .

‘ ಯಾವಾಗ ಈ ದೇಶದ ನಾರಿಯು ಮಧ್ಯ ರಾತ್ರಿ ನಿರ್ಭಯವಾಗಿ ಗಾಂಧೀಜಿ ಕನಸ್ಸು ಅವರು ದೇಶದ ಹಿತದೃಷ್ಟಿಯಿಂದ , ಅಲೆದಾಡುವಳ್ಳೋ ಆಗ ಈ ದೇಶ ರಾಮರಾಜ್ಯವಾಗುವುದು ‘ ಎಂದು ಹೇಳಿದ ಹೋದ ಎಂಬತ್ತು ವರ್ಷದ ನಂತರವು ಕನಸ್ಸಾಗಿಯೇ ಮಾನವೀಯತೆಯ ದೃಷ್ಟಕೋನದಿಂದ ಮಹಿಳಾ ಉಳಿದಿದೆ .

ನಮ್ಮ ಸಬಲೀಕರಣ ಸಾಧಿಸುವುದು ಹಾಗೂ ಮಹಿಳೆಯ ಮೇಲಿನ ದೌರ್ಜನ್ಯವನ್ನು ತಡೆಯುವುದು ಅತಿ ಅವಶ್ಯಕವಾಗಿದೆ .

ಮಹಿಳಾ ಸಬಲೀಕರಣದ ಅರ್ಥ :

ಗತಿಸಿ ಸಮಸ್ತ ಮಹಿಳೆಯರನ್ನು ಸಾಮಾಜಿಕ , ಆರ್ಥಿಕ , ರಾಜಕೀಯ ಕ್ಷೇತ್ರಗಳಲ್ಲಿ , ಜಾತಿ ಹಾಗೂ ಲಿಂಗ ತಾರತಮ್ಯ ಎಂಬ ವಿಷಯ ಹಿಡಿತದಿಂದ ಮುಕ್ತಗೊಳಿಸುವುದೇ ಮಹಿಳಾ ಸಬಲೀಕರಣವಾಗಿದೆ .

ಮಹಿಳಾ ಸಬಲೀಕರಣದ ಬೇಡಿಕೆಗಳು :

1. ಗೌರವ ಮತ್ತು ಘನತೆಯನ್ನು ಕಾಪಾಡಬೇಕು ಮಹಿಳೆಯರನ್ನು ಪುರುಷರಂತೆಯೆ ಸಮಾನ ಗೌರವ ಮತ್ತು ಘನತೆಯಿಂದ ಕಾಣುವಂತಾಗಬೇಕು . ಮಹಿಳೆಯರ ವ್ಯಕ್ತಿತ್ವವನ್ನು ಅವರ ಶಕ್ತಿಯನ್ನು ಹಿಯಾಳಿಸುವಂತಾಗಬಾರದು .

ಮಹಿಳೆಯು ಯಾವಾಗಲೂ ಪುರುಷರಿಗಿಂತ ಕೆಳಗಿನವಳು ಎಂಬ ಭಾವ ಹೋಗಬೇಕೆಂಬುದು ಮಹಿಳಾ ಸಬಲೀಕರಣದ ಪ್ರಮುಖ ಬೇಡಿಕೆಯಾಗಿದೆ .

2. ಮಾನವ ಹಕ್ಕು ಮತ್ತು ವಯಕ್ತಿಕ ಹಕ್ಕುಗಳನ್ನು ಒದಗಿಸಬೇಕು ತಮ್ಮ ಜೀವನವನ್ನು ಸ್ವತಂತ್ರವಾಗಿ , ಯಾವುದೇ ಭಯವಿಲ್ಲದೆ , ಜೀವನಕ್ಕೆ ಅವಶ್ಯಕವಾದ ಅವಕಾಶಗಳನ್ನು ಹೊಂದುತ್ತಾ ಬದುಕುವ ವಯಕ್ತಿಕ ಹಕ್ಕುಗಳನ್ನು ಮಹಿಳೆಯರಿಗೆ ನೀಡಬೇಕು .

ವಯಕ್ತಿಕ ಹಕ್ಕುಗಳನ್ನು ಹೊಂದಿರದ ಹೊರತು ಮಹಿಳೆಯ ವಿರುದ್ಧದ ದೌರ್ಜನ್ಯ ನಿಲ್ಲಲೂ ಸಾಧ್ಯವಿಲ್ಲ .

3. ಲಿಂಗ ಸಮಾನತೆ – ಪ್ರತಿ ಹಂತದಲ್ಲೂ ಕಂಡುಬರುವ ಲಿಂಗ ತಾರತಮ್ಯವನ್ನು ಕಡಿಮೆ ಮಾಡಬೇಕು . ಕೇವಲ ಲಿಂಗದ ಆಧಾರದ ಮೇಲೆಯೆ ಎಲ್ಲವನ್ನು ನಿರ್ಧರಿಸಬಾರದು . ಮಗುವಿನ ಹುಟ್ಟಿನಿಂದಲೆ ಅವುಗಳ ಲಿಂಗದ ಆಧಾರದ ಮೇಲೆ ಜೀವನವನ್ನು ನಿರ್ಧರಿಸಬಾರದು .

ಗಂಡು ಮಗುವಿಗೆ ನೀಡುವ ಸಮಾನ ಪ್ರಾತಿನಿಧ್ಯವನ್ನು ಹೆಣ್ಣು ಮಗುವಿಗೂ ನೀಡಬೇಕು . ಅದಕ್ಕಾಗಿ ಲಿಂಗ ಸಮಾನತೆಯನ್ನು ಜಾರಿಗೆ ತರಬೇಕು .

ಆಸ್ತಿಯಲ್ಲಿ ಸಮಾನ ಅವಕಾಶ , ಕೆಲಸ – ಕಾರ್ಯ , ಸಂಬಳ , ಉದ್ಯೋಗ , ಭಾಗವಹಿಸುವಿಕೆ , ನಿರ್ಧಾರ ತೆಗೆದುಕೊಳ್ಳುವಿಕೆ , ಮುಂತಾದ ಕ್ಷೇತ್ರಗಳಲ್ಲಿ ಲಿಂಗ ಸಮಾನತೆಯನ್ನು ಕಾಪಾಡಬೇಕು .

ಇದರಿಂದ ಮಾತ್ರವೇ ಮಹಿಳಾ ಸಬಲೀಕರಣದ ಸಾಧ್ಯವಾಗುವುದು ಎಂಬುದು ಮುಖ್ಯ ಬೇಡಿಕೆಯಾಗಿದೆ .

4.ಶಿಕ್ಷಣ ಒದಗಿಸುವುದು

ಮಹಿಳೆಯರು ಇಂದು ಅತ್ಯಂತ ದಯನೀಯ ಸ್ಥಿತಿಯಲ್ಲಿ ಇರುವುದಕ್ಕೆ ಮುಖ್ಯ ಸೂಕ್ತವಾದ ಶಿಕ್ಷಣ ದೊರೆಯದಿರುವುದು , ಮಹಿಳಾ ಸಬಲೀಕರಣ ಸಾಧಿಸಲು ಕಾರಣವೇ ಅವರಿಗೆ ಮುಖ್ಯವಾಗಿ ಬೇಕಾದ ಅಸ್ತ್ರವೆಂದರೆ ಅದು ಶಿಕ್ಷಣ , ಸುಶಿಕ್ಷಿತ ನಾರಿಯು ಕೇವಲ ತನ್ನ ಜೀವನವನ್ನಷ್ಟೇ ಅಲ್ಲ , ತನ್ನ ಮಕ್ಕಳ , ಸಂಬಂಧಿಕರ , ಜೊತೆಗೆ ಎಲ್ಲರ ಕಲ್ಯಾಣಕ್ಕೂ ಕಾರಣೀಭೂತವಾಗುತ್ತಾಳೆ .

ಮಹಿಳೆಯೊಬ್ಬಳು ಕಲಿತರೆ ಗ್ರಾಮವೊಂದು ಕಲಿತಂತೆ ಎಂಬ ಮಾತು ಅಕ್ಷರಶಃ ಸತ್ಯ ಶಿಕ್ಷಣದಿಂದ ಮಹಿಳೆಯು ಸಶಕ್ತಳಾಗುವಳು . ತನ್ನ ವಿರುದ್ಧದ ದೌರ್ಜನ್ಯವನ್ನು ಎದುರಿಸುವಳು , ತನ್ನ ಕುಟುಂಬದ ನಿರ್ಮಾಣದಲ್ಲಿ , ದೇಶದ ಅಭಿವೃದ್ಧಿಯಲ್ಲಿ ಕೊಡುಗೆ ನೀಡಬಲ್ಲಳು . ಅದಕ್ಕಾಗಿ ಮಹಿಳೆಯರಿಗೆ ಮೊದಲ ಆದ್ಯತೆಯಾಗಿ ಶಿಕ್ಷಣ ನೀಡಬೇಕು .

ಶಿಕ್ಷಣ ಪಡೆದ ಮಹಿಳೆಯು ತನ್ನ ವಿರುದ್ಧದ ದೌರ್ಜನ್ಯವನ್ನು ಎದುರಿಸಬಲ್ಲಳು , ಮಹಿಳೆ ಸುಶಿಕ್ಷಿತಳಾದಷ್ಟು ಅವಳ ಮೇಲಿನ ದೌರ್ಜನ್ಯಗಳು ಕಡಿಮೆಯಾಗುತ್ತವೆ

5. ಆರ್ಥಿಕ ಮತ್ತು ಔದ್ಯೋಗಿಕ ಸಬಲೀಕರಣ

ಮಹಿಳೆಯರಿಗೆ ಸಮಾನ ಔದ್ಯೋಗಿಕ ಅವಕಾಶಗಳನ್ನು ನೀಡಬೇಕು . ತಮ್ಮ ಜೀವನಕ್ಕೆ ಬೇಕಾದ ಸಾಧನಗಳನ್ನು ಹೊಂದುವ , ಆರ್ಥಿಕವಾಗಿ ಸ್ವಾವಲಂಬಿಯಾಗಲು ಬೇಕಾದ ಅವಕಾಶಗಳನ್ನು ಮಹಿಳೆಯರಿಗೆ ನೀಡಬೇಕು .

ಖಾಸಗಿ ಉದ್ಯೋಗವೇ ಇರಲಿ , ಇಲ್ಲ ಸರ್ಕಾರದ ಸೌಲಭ್ಯಗಳೆ ಇರಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಬೇಕು .

ಆರ್ಥಿಕವಾಗಿ ಸ್ವಾಲಂಬಿಯಾಗಲು ಸ್ವ – ಉದ್ಯೋಗ ಕೈಗೊಳ್ಳಲು ಅವಕಾಶ ನೀಡಬೇಕು . ಅಂದಾಗ ಮಾತ್ರ ಮಹಿಳಾ ಸಬಲೀಕರಣ ಸಾಧ್ಯವಾಗುವುದು .

ಆರ್ಥಿಕವಾಗಿ ಔದ್ಯೋಗಿಕವಾಗಿ ಸಬಲೀಕರಣಗೊಂಡ ಮಹಿಳೆಯು ದೌರ್ಜನ್ಯದಿಂದ ಮುಕ್ತಗೊಳ್ಳುತ್ತಾಳೆ . ಎಂತಹ ಪರಿಸ್ಥಿತಿಯಲ್ಲಿಯೂ ಧೈರ್ಯದಿಂದ ಮುನ್ನುಗಲು ಔದ್ಯೋಗಿಕ ಸಬಲೀಕರಣ ಅತಿ ಅವಶ್ಯಕವಾಗಿದೆ .

6. ಕಾನೂನಾತ್ಮಕ ಬೆಂಬಲ

ಮಹಿಳೆಯರು ಹಿಂದುಳಿಯಲು ಮುಖ್ಯ ಕಾರಣ ಅವರಿಗೆ ಕಾನೂನಿನ ಸೂಕ್ತ ಬೆಂಬಲ ಇಲ್ಲದಿರುವುದು . ತಮಗಿರುವ ಹಕ್ಕುಗಳನ್ನು ಬಳಸಿಕೊಳ್ಳಲು , ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು , ಅವರ ವಿರುದ್ಧ ದೌರ್ಜನ್ಯವನ್ನು ತಡೆಯಲು ಕಾನೂನಿನಾತ್ಮಕ ಬೆಂಬಲ ಅತಿ ಅವಶ್ಯಕವಾಗಿದೆ .

ಕಾನೂನಿನಾತ್ಮಕ ಬೆಂಬಲ ಇಲ್ಲದೆ ಮಹಿಳಾ ಸಬಲೀಕರಣ ಸಾಧ್ಯವಿಲ್ಲ . ನಿರಂತರವಾಗಿ ಹೆಚ್ಚುತ್ತಿರುವ ದೌರ್ಜನ್ಯ ತಡೆಯಲು ಮಹಿಳೆಯರಿಗೆ ಕಾನೂನಾತ್ಮಕ ಬೆಂಬಲ ಅತಿ ಅವಶ್ಯಕ .

7. ರಾಜಕೀಯ ಸಬಲೀಕರಣ

ದೇಶದ ಮುಖ್ಯ ಸ್ಥಾನದಲ್ಲಿ ಮಹಿಳೆಯರಿದ್ದರೆ ಮಾತ್ರ ಅವರ ಸಬಲೀಕರಣ – ಸಾಧ್ಯ . ರಾಜಕೀಯವಾಗಿ ಮಹಿಳೆಯರು ಸಶಕ್ತರಾದರೆ ಅವರೂ ಎಲ್ಲ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ – ಹೊಂದಲು ಸಾಧ್ಯ . ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ .

ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಸಮಾನ ಪ್ರಾತಿನಿಧ್ಯ ನೀಡಬೇಕು . ಅಂದಾಗ ಮಾತ್ರ ಸಬಲೀಕರಣಕ್ಕೆ ಬೆಂಬಲ ದೊರೆಯುತ್ತದೆ , ಆಸರೆ ದೊರೆಯುತ್ತದೆ .

ನಿರಂತರವಾಗಿ ಹೆಚ್ಚುತ್ತಿರುವ ದೌರ್ಜನ್ಯ ತಡೆಯಲು ರಾಜಕೀಯದ ಬೆಂಬಲ ಅತಿ ಅವಶ್ಯಕ , ರಾಜಕೀಯ ಇಚ್ಛಾಶಕ್ತಿಯಿಂದ ಏನನ್ನಾದರೂ ಕೂಡ ಸಾಧಿಸಬಹುದು .

8. ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸಬೇಕು

ಮಹಿಳೆಯರಿಗೆ ಭದ್ರತೆ ಮುಖ್ಯವಾದ ಸಮಸ್ಯೆಯಾಗಿದೆ . ಕೂಲಿ ಕೆಲಸದಿಂದ ಹಿಡಿದು ರಾಜಕೀಯ ನೇತಾರರಾಗಿರುವಂತಹ ಮಹಿಳೆಯರು ಕೂಡ ತಮ್ಮ ಕೆಲಸದ ಸ್ಥಳದಲ್ಲಿ ವಿವಿಧ ರೀತಿಯ ದೌರ್ಜನ್ಯ ಎದುರಿಸುತ್ತಿದ್ದಾರೆ .

ರಕ್ಷಣೆ ಒದಗಿಸಬೇಕಾದ ಪೊಲೀಸ್ ಇಲಾಖೆಯಲ್ಲಿಯೇ ದೌರ್ಜನ್ಯ ಇರುವುದಾದರೆ ಇನ್ನೂ ಸಾಮಾನ್ಯ ಕ್ಷೇತ್ರದಲ್ಲಿ ಆ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ . ಆದ್ದರಿಂದ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸೂಕ್ತ ಭದ್ರತೆಯನ್ನು ಒದಗಿಸಿಕೊಡಬೇಕು .

Mahila Sabalikaran Prabandha in Kannada

ಮಹಿಳಾ ಸಬಲೀಕರಣದಿಂದ ಉಂಟಾಗುವ ಪ್ರಯೋಜನಗಳು :

1. ವೈಯಕ್ತಿಕ ನೆಲೆಗಟ್ಟಿನಲ್ಲಿ ಮಹಿಳಾ ಸಬಲೀಕರಣದಿಂದ ಕುಟುಂಬದ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ . ಮನೆಯಲ್ಲಿ ಮಕ್ಕಳಿಗೆ ಸೂಕ್ತ ಶಿಕ್ಷಣ ದೊರೆಯುತ್ತದೆ .

ಸಶಕ್ತ ಮಹಿಳೆ ಇತರ ಮಹಿಳೆಯರನ್ನು ಬೆಳೆಸುತ್ತಾಳೆ . ಕುಟುಂಬವನ್ನು ಮುನ್ನಡೆಸುತ್ತಾಳೆ . ಕುಟುಂಬದ ಆಗು ಹೋಗುಗಳಲ್ಲಿ ಸಮಾನ ಪಾತ್ರ ವಹಿಸುತ್ತಾಳೆ .

2.ದೌರ್ಜನ್ಯ ಕಡಿಮೆಯಾಗುತ್ತವೆ

ಮಹಿಳಾ ಸಬಲೀಕರಣದ ಅತ್ಯಂತ ಪ್ರಮುಖ ಉಪಯುಕ್ತತತೆ ಎಂದರೆ ಮಹಿಳೆಯರ ವಿರುದ್ಧ ಉಂಟಾಗುವ ದೌರ್ಜನ್ಯದಲ್ಲಿ ಕಡಿಮೆಯಾಗುವುದು

ಇತ್ತೀಚಿನ “ ಮೀ – ಟೂ ” ಅಭಿಯಾನ ಇದಕ್ಕೊಂದು ಸಾಕ್ಷಿ , ಸಬಲೀಕರಣಗೊಂಡ ಮಹಿಳೆ ಮಾತ್ರ ತನ್ನ ವಿರುದ್ಧದ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸಲು ಸಾಧ್ಯ .

ಸಮಾಜದಲ್ಲಿ ತನ್ನ ಧ್ವನಿಯನ್ನು ಎತ್ತಿ ತನ್ನ ಹಕ್ಕುಗಳನ್ನು ಪಡೆಯಲು ಸಾಧ್ಯ . ಲೈಂಗಿಕ ದೌರ್ಜನ್ಯವೇ ಇರಲಿ , ಕೌಟುಂಬಿಕ ದೌರ್ಜನ್ಯವೇ ಇರಲಿ ,

ಕೆಲಸದ ಸ್ಥಳದಲ್ಲಿನ ದೌರ್ಜನ್ಯವೇ , ಇರಲಿ ಎಲ್ಲ ರೀತಿಯ ದೌರ್ಜನ್ಯವನ್ನು ಎದುರಿಸುವಂತಹ ಶಕ್ತಿಯು ಮಹಿಳಾ ಸಬಲೀಕರಣದಿಂದ ಮಾತ್ರ ಬರುತ್ತದೆ .

ಯಾವಾಗ ಮಹಿಳೆ ಸಶಕ್ತಳಾಗುವಳೋ ಆಗ ಮಾತ್ರ ಅವಳ ವಿರುದ್ಧದ ದೌರ್ಜನ್ಯಗಳು ಕಡಿಮೆಯಾಗಲು ಸಾಧ್ಯವಿದೆ .

3.ಭ್ರಷ್ಟಾಚಾರದ ನಿಯಂತ್ರಣ – ಮಹಿಳೆಯು ತನ್ನ ನಿಷ್ಠೆಗೆ , ಕರ್ತವ್ಯ ಪ್ರಜ್ಞೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾಳೆ .

ಯಾವ ಕ್ಷೇತ್ರದಲ್ಲಿ ಮಹಿಳೆ ಕೆಲಸ ಮಾಡುವಳೋ ಆ ಕ್ಷೇತ್ರದಲ್ಲಿ ದಕ್ಷತೆ ಹೆಚ್ಚಾಗಿ ಕಂಡುಬರುತ್ತದೆ . ಮಹಿಳೆಯರು ಇರುವ ಕ್ಷೇತ್ರದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆ ಆಗುತ್ತದೆ .

4.ಬಡತನದ ನಿವಾರಣೆಗೆ ಸಹಕಾರಿ – ಈ ದೇಶದಲ್ಲಿ ಇಂದಿಗೂ ಕೂಡ 26 % ಜನರು ಬಡತನ ರೇಖೆಗಿಂತ ಕೆಳೆಗೆ ವಾಸಿಸುತ್ತಿದ್ದಾರೆ .

ಇದಕ್ಕೆ ಮುಖ್ಯ ಕಾರಣ ಮಹಿಳೆಯರು ಕೆಲಸದಲ್ಲಿ ಪಾಲ್ಗೊಳ್ಳದೆ ಇರುವುದು . ದೇಶದ ಅರ್ಧದಷ್ಟು ಮಹಿಳೆಯರು ಕೇವಲ ತಮ್ಮ ಕುಟುಂಬದ ನಿರ್ವಹಣೆಯಲ್ಲಿಯೇ ಕಾಲ ಕಳೆಯುತ್ತಾರೆ . ಹೀಗಾದಾಗ ದೇಶದಲ್ಲಿನ ಬಡತನ ನಿವಾರಣೆಯಾಗುವುದು ಸಾಧ್ಯವಿಲ್ಲ .

Mahila Sabalikaran Prabandha in Kannada

ಮಹಿಳೆಯರ – ಸಬಲೀಕರಣದಿಂದ ಬಡತನದ ನಿವಾರಣೆಯಾಗುತ್ತದೆ . ಸಬಲೀಕರಣಗೊಂಡ ಮಹಿಳೆಯು ಸ್ವತಂತ್ರವಾದ ಉದ್ಯೋಗ ಕೈಗೊಂಡು ತನ್ನ ಕೌಟುಂಬಿಕ ನಿರ್ವಹಣೆಯಲ್ಲಿ ಸಮರ್ಥ ಕೊಡುಗೆ ನೀಡುತ್ತಾಳೆ . ಇದರಿಂದ ದೇಶದ ಬಡತನವು ಕಡಿಮೆಯಾಗುತ್ತದೆ

5.ಅಭಿವೃದ್ಧಿ ಅಭಿವೃದ್ಧಿ” A country cannot grow without the contribution of other half dow ಮಹಾತ್ಮಾ ಗಾಂಧೀಜಿಯವರ ಮಾತು ಅಕ್ಷರಶಃ ನಿಜ .

ದೇಶದಲ್ಲಿ ಅರ್ಧದಷ್ಟಿರುವ ಮಹಿಳೆಯರು ಕೇವಲ ಕುಟುಂಬದ ಕಾರ್ಯಗಳನ್ನು ನೋಡಿಕೊಳ್ಳುತ್ತಾ ಮನೆಯಲ್ಲಿ ಕುಳಿತರೆ ಈ ದೇಶವು ಅಭಿವೃದ್ಧಿಯಾಗುವುದಾದರೂ ಹೇಗೆ ? ಮಹಿಳೆಯರ ಸಬಲೀಕರಣವಾಗದ ಹೊರತು c ಸಮಸ ಅಭಿವೃದ್ಧಿ ಸಾಧ್ಯವಿಲ್ಲ .

ಶಿಕ್ಷಣ ಕ್ಷೇತ್ರ , ರಾಜಕೀಯ ಕ್ಷೇತ್ರ , ತಾಂತ್ರಿಕ ಕ್ಷೇತ್ರ , ಸಂಶೋಧನಾ ಕ್ಷೇತ್ರ ಮುಂತಾದ ಕ್ಷೇತ್ರಗಳಲ್ಲಿ ಪರಿಣೀತಿ ಹೊಂದಿರುವ ಮಹಿಳೆಯರು ಸಾಕಷ್ಟು ಕೊಡುಗೆ ನೀಡಿದ್ದಾರೆ .

ಒಂದು ವೇಳೆ ದೇಶದ ಎಲ್ಲ ಮಹಿಳೆಯರ ಸಬಲೀಕರಣವಾದರೆ ಇಡೀ ದೇಶವು ಶರವೇಗದಲ್ಲಿ ಅಭಿವೃದ್ಧಿ ಹೊಂದುತ್ತದೆ .

ಒಂದು ರಾಷ್ಟ್ರದ ಪರಿಸ್ಥಿಯನ್ನು ಆ ರಾಷ್ಟ್ರದ ಮಹಿಳೆಯರ ಪರಿಸ್ಥಿತಿಯನ್ನು ನೋಡಿ ನಿರ್ಧರಿಸಬಹುದು ” ಎಂಬ ಅಂಬೇಡ್ಕರ್‌ರವರ ನುಡಿಗಳು ಪ್ರಸ್ತುತವಾಗಿವೆ .

6.ಪ್ರಜಾಪ್ರಭುತ್ವದ ಉಳಿವಿಗೆ

ಪ್ರಜಾಪ್ರಭುತ್ವದ ನಿಜವಾದ ಯಶಸ್ಸು ಸಾಧ್ಯವಾಗಲು ಮಹಿಳಾ ಸಬಲೀಕರಣವು ಸಹಾಯ ಮಾಡುತ್ತದೆ . – . ಜಾಗತಿಕವಾಗಿ ದೇಶವು ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ,

7.ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ಸಮಾನ ಸ್ಥಾನದಲ್ಲಿ ನಿಲ್ಲಲು ಮಹಿಳಾ ಸಬಲೀಕರಣ ಸಹಾಯ ಮಾಡುತ್ತದೆ .

8.ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಸ್ಥಿರ ಬದ್ಧ ನಿರ್ಧಾರಗಳು ದೇಶವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯುತ್ತವೆ .

9.ಅಂತರ್‌ರಾಷ್ಟ್ರೀಯ ಆಟೋಟ ಸ್ಪರ್ಧೆಗಳಲ್ಲಿ , ಸಂಶೋಧನಾ ಕ್ಷೇತ್ರಗಳಲ್ಲಿ , ಶಿಕ್ಷಣ ಕ್ಷೇತ್ರದಲ್ಲಿ , ವ್ಯಾಪಾರ ಕ್ಷೇತ್ರದಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಮಹಿಳಾ ಸಬಲೀಕರಣ ಸಹಾಯ ಮಾಡುತ್ತದೆ.

ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರದ ಪ್ರಯತ್ನಗಳು :

ಸರ್ಕಾರವು ಮಹಿಳಾ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ .

2015 ರಲ್ಲಿ ಭೇಟಿ ಬಚಾವ್ ಭೇಟಿ ಪಡಾವ್ ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯ ಹಾಗೂ ಮದುವೆಗಾಗಿ ‘ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರಲಾಗಿದೆ . ಇದರಲ್ಲಿ ಅಧಿಕ ಪ್ರಮಾಣದ ಬಡ್ಡಿಯನ್ನು ನೀಡಲಾಗುತ್ತದೆ .

ಮದರ್ ಅಂಡ್ ಚೈಲ್ಡ್ ಟ್ರಾಪಿಕಿಂಗ್ ಸಿಸ್ಟಮ್ ( ಎಮ್.ಸಿ.ಟಿ.ಎಸ್ ) ಎಂಬ ಕಾರ್ಯಕ್ರಮವನ್ನು 2009 ರಲ್ಲಿ ಕಾಣೆಯಾದ ಮಹಿಳೆಯರನ್ನು ಪತ್ತೆ ಹಚ್ಚಲು ಜಾರಿಗೆ ತರಲಾಗಿದೆ .

ಮಹಿಳಾ ಸಬಲೀಕರಣದ ಮುಖ್ಯ ಉದ್ದೇಶದಿಂದಲೇ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ 33 % ಮೀಸಲಾತಿಯನ್ನು ಒದಗಿಸಲಾಗಿದೆ .

ಮಹಿಳೆಯರನ್ನು ಕಾಪಾಡಲು ಹಾಗೂ ಕಾಣೆಯಾದ ಮಹಿಳೆಯರ ಪತ್ತೆಗಾಗಿ ‘ ಉಜ್ವಲಾ ‘ ಯೋಜನೆಯನ್ನು , ಕೆಲಸ ಮಾಡುವ ಮಹಿಳೆಯರಿಗೆ ಹಾಸ್ಟೆಲ್‌ಗಳನ್ನು ತೆರೆಯುವುದು .

ಮಗುವಿನ ಆರೈಕೆಗಾಗಿ ತಾಯಿಯಂದಿರಿಗೆ 6 ತಿಂಗಳ ವೇತನ ಸಹಿತ ರಜೆಯನ್ನು ಸರ್ಕಾರ ನೀಡುತ್ತದೆ . ನಗು ಮಗು , ಸ್ವಧಾರ್‌ ಯೋಜನೆ , ವಿಧವಾ ಪಿಂಚಣಿ ಯೋಜನೆ , ಮಹಿಳಾ ಇ ಹಾತ್ ಪೋರ್ಟಲ್ ( ಆನ್‌ಲೈನ್ ಮಾರುಕಟ್ಟೆ ) ಮುಂತಾದ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ .

ಇಂದಿರಾಗಾಂಧಿ ಮಾತೃತ್ವ ಸಹಯೋಗ ಯೋಜನೆ ಮೂಲಕ ಮಹಿಳೆಯರಿಗೆ ಮತ್ತು ಹಾಲುಣಿಸುವ …. ತಾಯಂದಿರಿಗೆ ಆರ್ಥಿಕವಾಗಿ ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ .

ಸಬಲಾ ಯೋಜನೆ ಮೂಲಕ 10 ರಿಂದ 19 ವರ್ಷದ ಹೆಣ್ಣು ಮಕ್ಕಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಹಾಯ * ಹಾಗೂ ತರಬೇತಿ ನೀಡಲಾಗುವುದು .

ಪ್ರಿಯದರ್ಶಿಣಿ ಕಾರ್ಯಕ್ರಮದಲ್ಲಿ ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಸ್ವ ಸಹಾಯ ಮಾಡುವುದು .

ಕರ್ನಾಟಕದಲ್ಲಿ ಭಾಗ್ಯಲಕ್ಷ್ಮೀ ಯೋಜನೆ , ಮನಸ್ವಿನಿ ಯೋಜನೆ , ಸಾಂತ್ವಾನ ಯೋಜನೆ , ಸುರಕ್ಷಾ 20 ಯೋಜನೆಯಂತಹ ಹಲವು ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ .

ಸರ್ಕಾರವು ಇದರೊಂದಿಗೆ “ ನಿರ್ಭಯ ನಿಧಿ ” ಯನ್ನು ಸ್ಥಾಪಿಸುವ ಮೂಲಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಗೆ ಅಗತ್ಯವಾದ ಕಾನೂನಾತ್ಮಕ , ವೈದ್ಯಕೀಯ , ಪೊಲೀಸ್ ಸೇವೆಯನ್ನು ಒದಗಿಸುತ್ತಿದೆ .

ಅದರಂತೆ ಮಹಿಳಾ ಪಡೆಗಳನ್ನು ಸಹ ನಿರ್ಮಿಸುತ್ತಿದೆ . ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಿಕೊಡಲಾಗುತ್ತಿದೆ .

Women Empowerment Essay in Kannada

ಇತರೆ ಪ್ರಬಂಧಗಳನ್ನು ಓದಿ

ಗ್ರಂಥಾಲಯ ಮಹತ್ವ ಪ್ರಬಂಧ

ಹವ್ಯಾಸಗಳು ಬಗ್ಗೆ ಪ್ರಬಂಧ

ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ

ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

Leave a Reply

Your email address will not be published.