ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು ಅರ್ಥ ವಿವರಣೆ | Tumbida Koda Tulukuvudilla Gade Mathu in Kannada

Thumbida Koda Thulukuvudilla Essay in Kannada, ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು

Thumbida Koda Thulukuvudilla Essay in Kannada, ತುಂಬಿದ ಕೊಡ ತುಳುಕುವುದಿಲ್ಲ ಗಾದೆ ಮಾತು, tumbida koda tulukuvudilla in kannada

Tumbida Koda Tulukuvudilla Gade Vistarane in Kannada

Telegram Group

ನೀರು ತೆಗೆದುಕೊಂಡು ಸಾಮಾನ್ಯವಾಗಿ ಕೊಡ ದಲ್ಲಿ ಹೋಗುವವರು ಮಹಿಳೆಯರು ಕೊಡದ ತುಂಬಾ ನೀರು ತುಂಬಿದ್ದರೆ ಸಪ್ಪಳ ಉಂಟಾಗುವುದಿಲ್ಲ.

ಆದರೆ ಕೊಡದಲ್ಲಿ ಕಡಿಮೆ ನೀರಿದ್ದರೆ ಅದು ಶಬ್ದ ಮಾಡುತ್ತದೆ . ಅದೇ ರೀತಿ ಎಲ್ಲಾ ವಿಚಾರಗಳನ್ನು ತಿಳಿದಿದ್ದರೂ ಇತರರ ಬಗ್ಗೆ ಗೌರವ ನೀಡಿ ಮರ್ಯಾದೆಯಿಂದ ವರ್ತಿಸುವುದು ಕೆಲವರ ಅಭ್ಯಾಸ.

ಅವರಿಗೆ ಯಾವುದೇ ದುರಹಂಕಾರ ಇರುವುದಿಲ್ಲ ಅಂತಹ ವ್ಯಕ್ತಿಗಳು ಎಲ್ಲರ ಗೌರವ ಮನ್ನಣೆಗೆ ಪಾತ್ರರಾಗುತ್ತಾರೆ .

ಜ್ಞಾನ ತುಂಬಿದ್ದರೂ ಯಾವುದೇ ರೀತಿಯ ಅಹಂಕಾರ ಅವರಲ್ಲಿ ಕಂಡುಬರುವುದಿಲ್ಲ ಎಂಬುದೇ ಈ ಗಾದೆಯ ಸಾಮಾನ್ಯ ಅರ್ಥ. ಕೆಲವರಂತೂ ಏನೂ ತಿಳಿಯದಿದ್ದರೂ ತಮಗೆ ಎಲ್ಲಾ ತಿಳಿದಿದೆ ಎಂದು ತಾವೇ ವಿದ್ಯಾವಂತರೆಂದು ಬೀಗಿ ದುರಹಂಕಾರದಿಂದ ಮೆರೆಯುತ್ತಾರೆ.

ಗಾದೆ ಮಾತು ತುಂಬಿದ ಕೊಡ ತುಳುಕುವುದಿಲ್ಲ ಪ್ರಬಂಧ

ಇರುವ ಒಂದೇ ಜೀವನದಲ್ಲಿ ಒಳ್ಳೇಯದಷ್ಟೆ ಮಾಡುವುದು ಕಾಯಕವಾಗಿರಬೇಕು. ಪ್ರಪಂಚದಲ್ಲಿ ಅರಿತವನು ಕ್ಷಮೆ, ಸದ್ಗುಣಗಳನ್ನು ಕಲಿತು ನೆಮ್ಮದಿಯಿಂದ ಬಾಳಲು ಪ್ರಯತ್ನಿಸುತ್ತಾನೆ.

ಅರೆಬರೆ ಜ್ಷಾನವು ತುಂಬಾ ಅಪಾಯಕಾರಿಯಾದದು. ಪೂರ್ತಿ ಜ್ಞಾನವನ್ನು ಪಡೆವನು ತನ್ನನ್ನು ಬಣ್ಣಿಸದೆ ಪರರಿಗೆ ಉಪಕಾರಿಯಾಗಿ ಬದುಕುತ್ತಾನೆ.

Thumbida Koda Thulukuvudilla Essay in Kannada

ಈ ಗಾದೆಮಾತಿನ ಅರ್ಥವು ಯಾವುದೇ ಒಬ್ಬ ಮನುಷ್ಯರಿಗೆ ಅನ್ವಯಿಸಿದರೆ ಯಾವುದೇ ವಿಚಾರ ಪೂರ್ತಿ ತಿಳಿದುಕೊಂಡಿರುವವರು ತುಂಬಿದ ಕೊಡದಂತೆ ತುಳುಕದೆ ಶಬ್ದ ಮಾಡದೇ ಸಮಾಧಾನದಿಂದ ವಿಷಯವನ್ನು ತಿಳಿಸುತ್ತಾನೆ.

ಅಹಂಕಾರವೇ ಅವರ ಪಾಲಿಗೆ ಮುಖ್ಯ ಅಂದರೆ ಸ್ವಲ್ಪ ಅರಿವಿದ್ದರೂ ತನಗೆ ಎಲ್ಲಾ ಗೊತ್ತಿದೆ ನಾನೇ ಹೆಚ್ಚು ಎಂಬ ಅಹಂಕಾರ ಅವರಲ್ಲಿ ಮನೆ ಮಾಡಿಕೊಂಡಿರುತ್ತದೆ.

ಅಂದರೆ ಸಂಪೂರ್ಣ ತಿಳಿದವನು ಯಾವುದೇ ರೀತಿಯ ನಾನೇ ಎಂಬುದನ್ನು ತೋರಿಸಿ ದುರಹಂಕಾರಕ್ಕೆ ಬಲಿಯಾಗದೆ ಕೊಳ್ಳುವುದಿಲ್ಲ.

ವಿಚಾರ ಜ್ಞಾನ ಎಷ್ಟೇ ಇದ್ದರೂ ಅಹಂಕಾರಪಡದೇ ಬಾಳುವುದು ಉತ್ತಮರ ಲಕ್ಷಣ. ಇದು ಎಲ್ಲಾ ವ್ಯಕ್ತಿಗಳ ಮನ್ನಣೆಗೆ ಪಾತ್ರವಾಗುತ್ತದೆ ಸಮಾಜದಲ್ಲಿ ಕೀರ್ತಿಯೂ ದೊರೆಯುತ್ತದೆ .

ಇತರೆ ಪ್ರಬಂಧಗಳು

ಯೋಗ ಅಭ್ಯಾಸ ಪ್ರಬಂಧ

ಒಂದು ರಾಷ್ಟ್ರ-ಒಂದು ಭಾಷೆ ಪ್ರಬಂಧ

ಧಾರ್ಮಿಕ ಹಬ್ಬಗಳು ಪ್ರಬಂಧ

ಬರಗಾಲದ ಕುರಿತು ಪ್ರಬಂಧ

ಜೀವ ವೈವಿಧ್ಯತೆ ಪ್ರಬಂಧ ಕನ್ನಡ

ಶಬ್ದ ಮಾಲಿನ್ಯ ಕುರಿತು ಪ್ರಬಂಧ

Telegram Group

Leave a Reply

Your email address will not be published. Required fields are marked *