ಸಾಮಾಜಿಕ ಪಿಡುಗುಗಳು ಪ್ರಬಂಧ | Samajika Pidugu Galu Prabandha

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

Samajika Pidugu Galu Essay In Kannada, samajika pidugu galu prabandha , ಸಾಮಾಜಿಕ ಪಿಡುಗುಗಳ ಪ್ರಬಂಧ , samajika pidugu galu essay in kannada

Samajika Pidugu Galu Essay In Kannada

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧವನ್ನು ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುವುದು.

Samajika Pidugu Galu Prabandha

Spardhavani Telegram

Samajika Pidugu Galu Essay In Kannada

ನಾವೆಲ್ಲರೂ ಸಮಾಜ ಜೀವಿಗಳೇ , ಸಮಾಜವನ್ನು ತೊರೆದು , ನಾವು ಯಾರೂ ಜೀವಿಸಲಾರವು . ಸಮಾಜವು ಜನರೆಲ್ಲರ ಹಿತರಕ್ಷಣೆಗಾಗಿ ಸಾಕಷ್ಟು ಕಟ್ಟಳೆಗಳನ್ನು ಮಾಡಿದೆ . ಅದರಿಂದ ಸಮಾಜ ಸಂರಕ್ಷಣೆಯು ಆಗುವುದು . ಆಂದರೆ ನಮ್ಮೆಲ್ಲರ ಸಂರಕ್ಷಣೆಯು ಸತತವೂ ಆಗುವುದು .

ಎಲ್ಲೆಲ್ಲೂ ಒಳ್ಳೆಯದು , ಕೆಟ್ಟದ್ದು ಇರುವಂತೆ ನಮ್ಮಲ್ಲಿಯೂ ಒಳ್ಳೆ ಯವರು , ಕೆಟ್ಟವರು ಇರುವುದು ಸಹಜ . ಕೆಟ್ಟವರ ಅತಿಸ್ವಾರ್ಥ , ಕುಹಕಗುಣ , ಕುಕನಡೆ ನುಡಿಯ ಕಾರಣ ಜನಸಮುದಾಯದಲ್ಲಿ ಮುಗ್ಧರು , ತಿಳಿವಳಿಕೆ ಕಡಿಮೆ ಇರುವವರು ಇಂತಹವರು ಇಲ್ಲದ ತೊಂದರೆಗಳಿಗೆ ಒಳಗಾಗುತ್ತಾರೆ .

ಜೀವನ ನಿರ್ವಹಣೆಯಲ್ಲಿ ಇಲ್ಲ ಸಲ್ಲದ ಸಮಸ್ಯೆಗಳು ಇಂತಹ ಜನರನ್ನೇ ಕಾಡುತ್ತಿರುತ್ತವೆ . ಇವುಗಳೇ ಪಿಡುಗುಗಳು ಎನ್ನಬಹುದು . ಈ ಪಿಡುಗುಗಳು ಜನಸಮುದಾಯದಲ್ಲಿ ಅಂದರೆ ಸಮಾಜದಲ್ಲಿ ಹರಡುವುದರಿಂದ , ಹರಡು ವಿಕೆಯ ಮೂಲಕ ರಾಷ್ಟ್ರಕ್ಯತೆ , ಭಾವೈಕ್ಯತೆಗೆ ಧಕ್ಕೆ ತರುವುದರಿಂದ ಇವನ್ನು ಸಾಮಾಜಿಕ ಪಿಡುಗುಗಳು ಎನ್ನುವರು .

ಈ ಸಾಮಾಜಿಕ ಪಿಡುಗುಗಳು ಒಂದೆರಡು ತರದವುಗಳಲ್ಲಿ ಹಲವಾರು ತರದವುಗಳು . ಇವುಗಳಲ್ಲಿ ಮುಖ್ಯವಾದುದು ಅಂದರೆ

ಅಸ್ಪೃಶ್ಯತೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha
ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

ಇದು ಜಾತೀಯತೆಯ ಪಿಡುಗು . ಭಾರತದಲ್ಲಿರುವಷ್ಟು ಜಾತಿ – ಉವ ರೂ ಜಾತಿಗಳ ವಿಂಗಡಣೆ ವಿಶ್ವದಲ್ಲಿಯೇ ಬೇರೆಲ್ಲೂ ಇರುವಂತೆ ಕಂಡು ಬಂದಿಲ್ಲ . ಸರ್ಕಾರ ಹಾಗೂ ಸಾರ್ವಜನಿಕರು ಈ ಬಗ್ಗೆ ಎಚ್ಚತ್ತಿದ್ದರೂ ಇನ್ನೂ ಇದರ ತಾಯಿಬೇರನ್ನು ಕಿತ್ತುಹಾಕಲು ಸಾಧ್ಯವಾಗಿಲ್ಲ . ಈ ಪಿಡುಗು ಅಂದಿನ ದಿನದ್ದಲ್ಲ .

Samajika Pidugu Galu Prabandha in Kannada

ಅನಾದಿಕಾಲದಿಂದಲೂ ಬೆಳೆದು ಬಂದಿರುವ ಪಿಡುಗು . ವೇದಗಳ ಕಾಲದಲ್ಲಿ ವ್ಯಕ್ತಿಗಳಿಗನುಸಾರವಾಗಿ ಬ್ರಾಹ್ಮಣ , ಕ್ಷತ್ರಿಯ , ವೈಶ್ಯ ಹಾಗೂ ಶೂದ್ರ ಎಂಬ ನಾಲ್ಕು ಪಂಗಡಗಳು ಉದ್ಭವವಾದ ವಿಷಯ ವಿದಿತಗೊಂಡಿದ್ದರೂ ಮುಂದುವರಿದ ಸ್ವಾರ್ಥಾಂಧ ಪಂಗಡದವರು ಈ ಪಂಗಡಗಳನ್ನು ತಮ್ಮ ಮೂಗಿಗೆ ನೇರವಾಗಿ ಜಾತಿ – ಉಪಜಾತಿಗಳ ರೂಪದಲ್ಲಿ ಪರಿಗಣಿಸತೊಡಗಿದರು.

ಮೇಲುಜಾತಿ – ಕೀಳುಜಾತಿ ಎಂಬ ಸಂಕುಚಿತ , ಸಂಕೀರ್ಣ ಭಾವಗಳಿಗೆ ಜನತೆಯಲ್ಲಿ ಎಡೆಮಾಡಿಕೊಟ್ಟರು . ಮುಂದೆ ಈ ಹೀನ ಭಾವನೆಯೇ ಪರ್ಮರವಾಗಿ ಬೆಳೆದು , ಇಂದು ಸಮಸ್ಯೆಯನ್ನು ಬಿಡಿಸಿದಷ್ಟೂ ಕಗ್ಗಂಟು ಆಗುತ್ತಲೇ ಇದೆ . ಇಂದು ಪ್ರಾಂತೀಯತೆ , ವರ್ಣೀಯತೆ , ಭಾಷಾವಾರು ಸಮಸ್ಯೆಗಳಿಗೂ ಜಾತೀಯತೆಯೇ ಹಿನ್ನಲೆಯ ಪ್ರೇರಣ ರೂಪ ಎನಿಸಿದೆ.

ವರದಕ್ಷಿಣೆ ಒಂದು ಸಾಮಾಜಿಕ ಪಿಡುಗು ಪ್ರಬಂಧ

ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha
ಸಾಮಾಜಿಕ ಪಿಡುಗುಗಳು ಕುರಿತು ಪ್ರಬಂಧ | Samajika Pidugu Galu Essay In Kannada Best No1 Prabandha

ಇದೊಂದು ಪ್ರಸ್ತುತ ಸ್ಥಿತಿಯಲ್ಲಿ ಪೆಡಂಭೂತದ ಆಕಾರವನ್ನು ಪಡೆದು , ಮಧ್ಯಮಸ್ತರದ ಹಾಗೂ , ಇನ್ನೂ ಕೆಳಮಟ್ಟದ ಕುಟುಂಬಗಳನ್ನು ಕಾಡುತ್ತಿದೆ . ಪ್ರಾರಂಭದಲ್ಲಿ ವರದಕ್ಷಿಣೆಯು ಒತ್ತಾಯವೆನಿಸಿರಲಿಲ್ಲ . ಇದರ ಆಸೆಯಂತೂ ವರನಿಗಾಗಲಿ , ವರನ ಕಡೆಯವರಿಗಾಗಲಿ ಎಳ್ಳಷ್ಟೂ ಇರಲಿಲ್ಲ .

ಆದರೆ ಹೆಣ್ಣಿನ ತಾಯ್ತಂದೆಯರು ಮಗಳ ಭಾವೀಜೀವನದ ಅಭ್ಯುದಯಕ್ಕೆಂದು ನಗ – ನಾಣ್ಯಗಳ ರೂಪದಲ್ಲಿ ಒಂದಿಷ್ಟು ಉಡುಗೊರೆಗಳನ್ನು ತಮ್ಮ ತಮ್ಮ ಶಕ್ಟ್ರಾನುಸಾರ ನೀಡುತ್ತಿದ್ದರು . ನೀಡದಿದ್ದರೂ ಯಾರ ನಿಂದೆಗಾಗಲಿ , ಇಂದಿನಂತೆ ಯಾವ ಚಿತ್ರ ಹಿಂಸೆಗಾಗಲಿ ,

ಸಾಮಾಜಿಕ ಪಿಡುಗುಗಳು ಪ್ರಬಂಧ

ಹೆಣ್ಣಾಗಲಿ , ಹೆಣ್ಣಿನ ಕಡೆಯವರಾಗಲಿ ಎಂದೂ ಗುರಿಯಾಗಿರ ಲಿಲ್ಲ . ದಿನಕ್ರಮೇಣ ವರನಿಗೆ , ವರನ ಕಡೆಯವರಿಗೆ ಇದು ಸಂಪ್ರದಾಯದ ರೂಪದಲ್ಲಿ ಬೆಳೆದು ಬಂದಿರಬೇಕು . ಹೆಣ್ಣುಮಕ್ಕಳು ಕಪ್ಪಾಗಿದ್ದರೆ , ಗುಣವಂತೆ ಯರಾಗಿದ್ದರೂ ಮದುವೆ ಆಗಲು ಮುಂದೆ ಬರುತ್ತಿರಲಿಲ್ಲ.

ಈ ಸಂದರ್ಭದಲ್ಲಿ ಅಂತಹವರಿಗೆ ಹಣದ ಆಸೆ , ಭೂಮಿ – ಕಾಣಿಕೆ ಯಥೇಚ್ಛವಾಗಿ ನೀಡುವ ಆಸೆ ತೋರಿಸಿದುದು ತಪ್ಪೇ ಸರಿ . ಇಂತಹ ತಪ್ಪು ಹಿರಿಯ ಮನೆತನದವರಿಂದ ನಡೆಯುತಿತ್ತು . ಆದರೆ ಬಲ್ಲಿದವರಂತೆ ಬಡಕುಟುಂಬದವರು ಹೇಗೆತಾನೇ ಇಷ್ಟೆಲ್ಲಾ ನಿಭಾಯಿಸಿಯಾರು ? ಆದರೆ ಬಾಲ್ಯದಲ್ಲಿಯೇ ಮದುವೆ ಮಾಡಿಕೊಡ ದಿದ್ದರೆ ಕುಲದಲ್ಲಿ ಸಮಾಜ ಬಹಿಷ್ಕಾರ ಹಾಕುತ್ತಿದ್ದುದೂ ಉಂಟು .

ಈ ಭಯಕ್ಕಾಗಿ ಇದ್ದಬದ್ದ ಚರ – ಸ್ಥಿರ ಆಸ್ತಿಗಳನ್ನು ಮಾರಿ , ಬಂದ ಹಣದಿಂದ ಹೆಣ್ಣುಮಕ್ಕಳ ಮದುವೆಯನ್ನು ಮಾಡಿ ಮುಗಿಸತೊಡಗಿದರು.

ಸಾಮಾಜಿಕ ಪಿಡುಗುಗಳು ಪ್ರಬಂಧ ಕನ್ನಡ

ಇಂದಿನಂತೆ ಹಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಅಂದು ಪ್ರೋತ್ಸಾಹ ಇರಲಿಲ್ಲ . ಹಿರಿಯರಾಗುತ್ತಿದ್ದಂತೆ ಶಾಲೆಯನ್ನು ಬಿಡಿಸಿ ಮನೆಯಲ್ಲಿಯೇ ಮನೆಗೆಲಸಗಳಿಗೆ ಹಾಕಿಬಿಡುತ್ತಿದ್ದರು . ಇದರಿಂದ ಜನತೆಯಲ್ಲಿ ಹೆಣ್ಣು ಮಕ್ಕಳು ಎಷ್ಟೇ ಓದಿದ್ದರೂ ಮುಸುರೆ ತೊಳೆಯುವುದು ತಪ್ಪದು ” ಎಂಬ ಭಾವನೆ ಬೇರೂರಿತು .

ಅಂತಹವರನ್ನು ವಿದ್ಯಾವಂತ ಗಂಡುಗಳು ಮದುವೆ ಆಗಲು ಬಯಸುತ್ತಿರಲಿಲ್ಲ . ಇವರ ತೃಪ್ತಿಗಾಗಿ ಹೆಣ್ಣಿನ ಕಡೆಯವರು ಅಷ್ಟಿಷ್ಟು ಹಣವನ್ನು ವರೋಪಚಾರದ ಹೆಸರಿನಲ್ಲಿ ನೀಡಿ , ಮದುವೆಯ ಕಾರ್ಯವನ್ನು ಮುಗಿಸುತ್ತಿದ್ದರು.

ಇದರಿಂದ ವರದಕ್ಷಿಣೆಯ ಪಿಡುಗಿನೊಂದಿಗೆ ವರವಿಕ್ರಯದ ಸಂಪ್ರದಾಯವೂ ಬೆಳೆಯುತ್ತಾ ಬಂತು . ಈಗಂತೂ ಇದರ ದುಷ್ಪರಿಣಾಮವಾಗಿ ಹೆಣ್ಣು ಮಕ್ಕಳ ಬಾಳುವೆಯೇ ನರಕ ಸಾದೃಶ ಎನಿಸುತ್ತಿದೆ .

ಈ ವರದಕ್ಷಿಣೆಯ ಪೆಡಂಭೂತದ ಕೈಗೆ ಸಿಕ್ಕಿದ ನವವಿವಾಹಿತ ನವಕಿಶೋರಿಯರು ಇಂದು ಜೀವನದಲ್ಲಿ ಬೇಸತ್ತು , ವಿಷಸೇವನೆ , ಆತ್ಮಹತ್ಯೆ ಮೊದಲಾದ ದಾರುಣ ಪಾಶಗಳಿಂದ ಬಿಗಿಯಲ್ಪಟ್ಟು , ತಮ್ಮ ಜೀವನವನ್ನೇ ಕಡೆಗಾಣಿಸಿಕೊಳ್ಳುತ್ತಿದ್ದಾರೆ.

ಅನಕ್ಷರತೆ ಬಗ್ಗೆ ಪ್ರಬಂಧ

images 2 5

ಈ ಪಿಡುಗಿನಿಂದಲೂ ಸಮಾಜದ ಏಳಿಗೆಯೇ ಇಲ್ಲದೆ , ವಿಶ್ವಮಟ್ಟದಲ್ಲಿ ಭಾರತ ನಿಮ್ನಸ್ತರದ ದುಸ್ಥಿತಿಯಲ್ಲೇ ಇದೆ . ವ್ಯಕ್ತಿಯ ವಿಕಾಸ ಸಾಕ್ಷರತೆಯಿಂದಲೇ20 ಸಾಧ್ಯ . ಆದರೆ ಇಂದಿಗೂ ಭಾರತ ಸಂಪೂರ್ಣವಾಗಿ ಈ ನಿಟ್ಟಿನಲ್ಲಿ ಯ ಯಾಗಿಲ್ಲ . ಶಾಲೆ ಕಾಲೇಜುಗಳು ಹೆಚ್ಚುತ್ತಿವೆ .

ಆದರೆ ಅಲ್ಲಿನ ಶಿಕ್ಷಣ ಕೇ ಮುಂದುವರೆದಿರುವ ಜನರ ಮಕ್ಕಳಿಗೆ ಮಾತ್ರ ಸಫಲದಾಯಕ ರೀತಿಯ ಪ್ರಾಪ್ತವಾಗುತ್ತಿದೆ . ಇದರ ಕಾರಣ ಭಾರತೀಯರಲ್ಲಿ ಬಹುಮಂದಿ ಬಡತನ ಬೀಸುಗಲ್ಲಿನಲ್ಲಿ ಸಿಕ್ಕಿ , ಹಿಟ್ಟಾಗಿ ಹೋಗುತ್ತಿದ್ದಾರೆ . “ ಓದು ” ಎಂಬುದು ಇವ “ ಹೊಟ್ಟೆಗೆ ಹಿಟ್ಟಿಲ್ಲ , ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತಾಗಿದೆ .

ಇದರಿ ಇಂತಹ ಯೋಗ್ಯ ಶಿಕ್ಷಣಕ್ಕೇ ಇಂತಹ ಅತಿಸಂಖ್ಯೆಯ ಮಕ್ಕಳ ಗಮನ ಹರಿಯ ಹೊಟ್ಟೆಪಾಡಿಗಾಗಿ ಬಾಲಕಾರ್ಮಿಕರಾಗುತ್ತಿದ್ದಾರೆ . ಇದರಲ್ಲೂ ಬಹುಮಂ ಮಕ್ಕಳು ಬಾಲ್ಯದಲ್ಲಿಯೇ ಸಮಾಜ ಘಾತಕ ಕಾರ್ಯಗಳಲ್ಲಿ ತೊಡಗಿರುವುದ ಸಹ ಕಂಡುಬಂದಿದೆ.

ಸರ್ಕಾರ ಈ ಬಗ್ಗೆ ಹೆಚ್ಚಿನ ಮುತುರ್ವಜಿ ವಹಿಸುತ್ತಿದ್ದರು ಸಾರ್ವಜನಿಕ ಸಹಕಾರ ಅಷ್ಟಾಗಿ ಜಯಪ್ರದರೀತಿಯಲ್ಲಿ ಸಿಕ್ಕುತ್ತಿಲ್ಲ . ಇದರಿಂ ಸರ್ಕಾರ ಈ ನಿಟ್ಟಿನಲ್ಲಿ ಖರ್ಚು ಮಾಡುತ್ತಿರುವ ಬಹಳಷ್ಟು ಹಣ ವೃತ್ತ ಪೋಲಾಗುತ್ತಿದೆ .

ಮದ್ಯಪಾನ ಪ್ರಬಂಧ

download 10 4

ಇದೊಂದು ಪರಿವಾರ – ಕಂಟಕರೂಪದ ಪಿಡುಗು , ಬಡವ – ಬಲ್ಲಿದರೆ ರಲ್ಲಿಯೂ ಈ ಪಿಡುಗು ಸಾಂಕ್ರಾಮಿಕ ರೋಗದಂತೆ ಒಬ್ಬರಿಗೊಬ್ಬರಿಗೆ ಅಂಟುತ್ತಿದೆ . ಈಗಂತೂ ಸ್ತ್ರೀಯರು – ಪುರುಷ , ಮುದುಕರು – ಮಕ್ಕಳು ಎಲ್ಲ ರಲ್ಲಿಯೂ ಇದರ ಸೇವನೆ ಸರ್ವೆ ಸಾಮಾನ್ಯವೆನಿಸಿದೆ .

ಇದರಲ್ಲಿ ಅಶಿಕ್ಷಿತರಿ ಗಿಂತಲೂ ಶಿಕ್ಷಿತರ ಸಂಖ್ಯೆಯೇ ಹೆಚ್ಚಿರುವಂತೆ ಕಂಡುಬರುತ್ತಿದೆ . ಮದ್ಯಪಾ ಬಡ ಜನರಿಗೆ ತಮ್ಮ ದೈನಿಕ ದಣಿವಿನ ಪರಿಹಾರದ ಸಾಮಗ್ರಿ ಆಗಿದ್ದರೆ , ಶಿಕ್ಷಿತರಿಗೆ ಇದು ಸಂಸ್ಕೃತಿ – ಸಭ್ಯತೆಯ ರೂಪದಲ್ಲಿ ರೂಢಿಗೆ ಬರುತ್ತಿದೆ .

ಇದರಿಂದ ಕುಟುಂಬ ಗಳ ಸರ್ವನಾಶ , ವಂಶದ ಏಳಿಗೆ ಇಲ್ಲ , ಮಕ್ಕಳ ಹೊಟ್ಟೆ – ಬಟ್ಟೆ , ವಿದ್ಯಾಭ್ಯಾಸ ಗಳಿಗೆ ಧಕ್ಕೆ , ಇಷ್ಟೇ ಏಕೆ ಕುಡುಕನ ಆರೋಗ್ಯಕ್ಕೂ ಕುಂದು . ಇದು ತಿಳಿದಿದ್ರೂ ಸಹ ನಮ್ಮ ಸಭ್ಯ ಜನರೇ ಇದನ್ನು ರೂಡಿಸಿಕೊಳ್ಳುತ್ತಿರು ವುದನ್ನು ಕಂಡಾಗ ಅಳುವುದೋ ನಗುವುದೋ ತಿಳಿಯದಾಗಿದೆ . ಇದೇನೇ ಇರಲಿ ಈ ನಮ್ಮ ರಾಷ್ಟ್ರವನ್ನೇ ಆರ್ಥಿಕ ಹಾಗೂ ಆರೋಗ್ಯ ದೃಷ್ಟಿಯಿಂದ ಜನತೆಯನ್ನು ಅಧೋಗತಿಗೆ ತರುತ್ತಿದೆ .

ಇವೆಲ್ಲಾ ಪಿಡುಗುಗಳ ಮೂಲಕಾರಣ ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯೇ ಇಲ್ಲದಿರುವುದು . ಶಿಕ್ಷಣದ ಮೂಲಕ ಈ ಪಿಡುಗುಗಳ ನಿವಾರಣೆ ಸಾಧ್ಯ . ಚಲನಚಿತ್ರಗಳು , ರೇಡಿಯೋ , ದೂರದರ್ಶನಗಳಲ್ಲೂ ಇದರ ದುಷ್ಪರಿಣಾಮನ್ನು ಪ್ರದರ್ಶಿಸಿದಾಗ ಜನರಲ್ಲಿ ತಮ್ಮ ಅಕ್ಷಮ್ಯ ಅಪರಾಧದ ಅರಿವು ಮೂಡದಿರದು .

ಶಿಕ್ಷಕರು ಗ್ರಾಮಗಳಿಗೆ ಹೋಗಿ , ಅಲ್ಲಿನ ಅವಿದ್ಯಾವಂತರಿಗೆ ತಿಳಿಸಬೇಕು . ಮಕ್ಕಳ ಮುಂದೆ ಸುಶಿಕ್ಷಿತರೂ ಸಹ ತುಂಬಾ ಜಾಗೃತರಾಗಿ ವರ್ತಿಸುವುದು ಸಹ ಅನಿವಾರ್ಯ .ಇನ್ನೊಂದು ದಾರುಣ ಪಿಡುಗು ನಿರುದ್ಯೋಗ , ಇದರಿಂದ ದೇಶದ ಬಡತನ ಇನ್ನಷ್ಟು ಉಲ್ಬಣಸ್ಥಿತಿಗೇ ಬರುತ್ತಿದೆ .

ಇದರ ಕಾರಣ ಶಿಕ್ಷಿತರೆನಿಸಿದ್ದರೂ , ಇವರಿಗೆ ಸ್ವಾವಲಬಂನೆಗೆ ಅನುಕೂಲವಾದ ಶಿಕ್ಷಣ ದೊರೆಯುತ್ತಿಲ್ಲ . ಜೊತೆಗೆ ಜನಸಂಖ್ಯೆ ಗುಣಾಕಾರ ರೀತಿಯಲ್ಲಿ ಬೆಳೆಯುತ್ತಿರುವುದರಿಂದ , ಅವರು ಸುಶಿಕ್ಷಿತರೇ ಅಲ್ಲದುದರಿಂದ , ಇನ್ನು ಅನಕ್ಷರಸ್ಥರ ಸಂಖ್ಯೆಯೇ ಪೂರ್ಣತಃ ಕಡಿಮೆ ಆಗದಿರುವುದರಿಂದ ಈ ನಿರುದ್ಯೋಗ ಸಮಸ್ಯೆ ಸಮಸ್ಯೆಯಾಗಿಯೇ ಇಂದಿಗೂ ಉಳಿದಿದೆ .

768 512 11748110 thumbnail 3x2 unem

ಸಮಾಜ ಸರ್ಕಾರದೊಂದಿಗೆ , ಸರ್ಕಾರ ಸಮಾಜದೊಂದಿಗೆ ಬೆರೆತು , ಸಹಕರಿಸಿ ಕಾರ್ಯಕೃತರಾದಾಗ ಮಾತ್ರ ಈ ಪಿಡುಗಳನ್ನು ಬಡಿದೋಡಿಸಲು ಸಾಧ್ಯ ಆದೀತು .

ಯಾವುದಾದರೂ ನಾಲ್ಕು ಸಾಮಾಜಿಕ ಪಿಡುಗುಗಳನ್ನು ಹೆಸರಿಸಿ

  • ಅನಕ್ಷರತೆ
  • ಬಾಲ್ಯವಿವಾಹ
  • ಜಾತೀಯತೆ
  • ವರದಕ್ಷಣೆ
  • ಅಸ್ಪೃಶ್ಯತೆ.

ಮುಂದೆ ಓದಿ…

FAQ

ಸಾಮಾಜಿಕ ಪಿಡುಗು ಎಂದರೇನು ?

ಸಮಾಜದ ಅಭಿವೃದ್ದಿಗೆ ತೊಡಕನ್ನುಂಟು ಮಾಡುವ ಪದ್ದತಿಗಳನ್ನು ಸಾಮಾಜಿ ಪಿಡುಗು ಎಂದು ಕರೆಯುವರು.

ಜಾತಿ ವ್ಯವಸ್ಥೆಯ ನಾಲ್ಕು ವರ್ಗಗಳು ಯಾವುವು?

1.ಬ್ರಾಹ್ಮಣರು 2.ಕ್ಷತ್ರಿಯರು 3.ವೈಶ್ಯರು 4.ಶೂದ್ರರು

ಇತರೆ ಮಾಹಿತಿ

Leave a Reply

Your email address will not be published. Required fields are marked *