ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

ಚತುರನ ಚಾತುರ್ಯ ಗದ್ಯ ಸಾರಾಂಶ | Chaturana Chaturya in Kannada Notes

ಚತುರನ ಚಾತುರ್ಯ ಗದ್ಯ ಸಾರಾಂಶ, Chaturana Chaturya in Kannada Notes & Questions and Answers Pdf, Notes, Summary, 1st PUC Kannada Textbook Answers

ಚತುರನ ಚಾತುರ್ಯ ಗದ್ಯ ಸಾರಾಂಶ

ಕವಿ ಪರಿಚಯ
ಯಾದವ ಕವಿ ಜನನ : ದೊಡ್ಡಬಳ್ಳಾಪುರ

ಬಿರುದುಗಳು:

  • ಉಭಯಕವಿ ವಿಚಕ್ಷಣ
  • ಉಭಯ ಕವಿತಾವಿಶಾರದ

ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ಕಾವ್ಯ ರಚನಾ ಕೌಶಲ್ಯವನ್ನು ಹೊಂದಿದ್ದನು ಎಂಬ ವಿಚಾರ ಇದರಿಂದ ತಿಳಿದುಬರುತ್ತದೆ. ಪ್ರಸ್ತುತ ‘ ಕಲಾವತೀ ಪರಿಣಯ ‘ ಗ್ರಂಥವನ್ನು ಈತ ರಚಿಸಿದ್ದಾನೆ.

ಈತನ ಕಾಲ ಕ್ರಿ.ಶ. 1800 ಆಗಿದ್ದರೂ ರಾಜನ ಆಸ್ಥಾನದಲ್ಲಿ ಆಶ್ರಯಪಡೆದವನಾಗಿದ್ದುದರಿಂದಲೂ ಕಾವ್ಯ ಭಾಷೆಯಲ್ಲಿ ಹಳಗನ್ನಡದ ಸೊಗಡು ಯಥೇಚ್ಛವಾಗಿ ಕಂಡುಬರುತ್ತದೆ.

ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು ?

 ಕಾಡಿನಲ್ಲಿ ಹುಲಿಯು ವಾಪಿತ / ಕ್ಷೌರಿಕನಿಗೆ ಎದುರಾಗಿ ಬಂದಿತು .

 ಹುಲಿ ಕನ್ನಡಿಯಲ್ಲಿ ಕಂಡಿದ್ದೇನು ?

 ಹುಲಿಯು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡಿತು .

ವಾಕ್ಯದಲ್ಲಿ ಉತ್ತರಿಸಿ

ಹುಲಿ ಕಾಡಿನಲ್ಲಿ ಯಾರಿಗೆ ಎದುರಾಗಿ ಬಂದಿತು ?

 ಕಾಡಿನಲ್ಲಿ ಹುಲಿಯು ವಾಪಿತ / ಕ್ಷೌರಿಕನಿಗೆ ಎದುರಾಗಿ ಬಂದಿತು .

ಮಹೇಂದ್ರನು ಯಾವ ಯಜ್ಞವನ್ನು ಕೈಗೊಂಡಿದ್ದನು ?

 ಮಹೇಂದ್ರನು ವ್ಯಾಘ್ರಯಜ್ಞವನ್ನು ಕೈಗೊಂಡಿದ್ದನು ,

 ಹುಲಿ ಕನ್ನಡಿಯಲ್ಲಿ ಕಂಡಿದ್ದೇನು ?

 ಹುಲಿಯು ಕನ್ನಡಿಯಲ್ಲಿ ತನ್ನದೇ ಪ್ರತಿಬಿಂಬವನ್ನು ಕಂಡಿತು .

 ಹುಲಿಯು ನಾಪಿತನಿಗೆ ಏನನ್ನು ನೀಡುತ್ತೇನೆಂದಿತು ?

ಕಲಿಯು ನಾಪಿತನಿಗೆ ಮುತ್ತುರತ್ನ ಆಭರಣಗಳನ್ನು ನೀಡುತ್ತೇನೆಂದಿತು .

ನಾಪಿತನು ತಂದ ದ್ರವ್ಯದಲ್ಲಿ ವಿಪ್ರನಿಗೆ ಎಷ್ಟು ಕೊಟ್ಟನು ?

ನಾಪಿತನು ತಂದ ದ್ರವ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ಕೊಟ್ಟನು .

ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಎಲ್ಲಿ ಅಡಗಿಕೊಂಡರು ?

 ಹುಲಿಯ ಹಿಂಡನ್ನು ಕಂಡು ಹೆದರಿದ ನಾಪಿತ ಮತ್ತು ವಿಪ್ರರು ಮರದ ಮೇಲೆ ಅಡಗಿಕೊಂಡರು .

ವಿಪ್ರನು ಮರದಿಂದ ಎಲ್ಲಿಗೆ ಬಿದ್ದನು ?

ವಿಪ್ರನು ಮರದಿಂದ ಹುಲಿಗಳ ಹಿಂಡಿನ ಮಧ್ಯೆ ಬಿದ್ದನು .

ನರಿಗೆ ಏಕೆ ಆಶ್ಚರ್ಯವುಂಟಾಯಿತು ?

ಭೀತಿಯಿಂದ ಮೈ ಮರೆತು ಹುಲಿಯು ಓಡುತ್ತಿರುವುದನ್ನು ಕಂಡು ನರಿಗೆ ಆಶ್ಚರ್ಯವಾಯಿತು .

 ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ಯಾವುದು ?

ಅರಣ್ಯ ಜಂತುಗಳಲ್ಲಿ ಬುದ್ಧಿಶಾಲಿಯಾದ ಪ್ರಾಣಿ ನರಿ ,

 ನರಿಯು ಯಾವ ಹೊಡೆತಕ್ಕೆ ಪ್ರಾಣ ಬಿಟ್ಟಿತು ?

 ನರಿಯು ಪಾಪಿತನ ಕಲ್ಲಿನ ಹೊಡೆತಕ್ಕೆ ಸಿಕ್ಕು ಪ್ರಾಣಬಿಟ್ಟಿತು .

2-3  ವಾಕ್ಯಗಳಲ್ಲಿ ಉತ್ತರಿಸಿ

 ಮಹಾದೇವನ ಉತ್ಸವಕ್ಕೆ ನಾಪಿತನು ತೆರಳಿದ ಉದ್ದೇಶವೇನು ?

 ಮಹಾದೇವನ ಉತ್ಸವದಲ್ಲಿ ತಾನು ವಾದ್ಯವನ್ನು ನುಡಿಸಿದರೆ ದೇವರ ಸೇವೆಯೂ , ಹಣ ಸಂಪಾದನೆಯೂ ಆಗುವುದೆಂದು ನಾಪಿತನು ಉತ್ಸವಕ್ಕೆ ತೆರಳಲು ಉದ್ದೇಶಿಸಿದನು .

ಹುಲಿಯ ಗುಹೆಯಲ್ಲಿ ಸ್ಥಾಪಿತ ಏನೇನನ್ನು ಕಂಡನು ?

ನಾಪಿತನು ಹುಲಿಯ ಗುಹೆಯಲ್ಲಿ ಮನುಷ್ಯರ ಆಸ್ಥಿಪಂಜರ ಹಾಗೂ ತಲೆಬುರುಡೆಗಳನ್ನು ಕಂಡನು . ಆ ಗುಹೆಯು ರಕ್ತದ ವಾಸನೆಯಿಂದ ಅಸಹ್ಯಕರವಾಗಿದ್ದು ಅಲ್ಲಿಯೇ ಮುತ್ತು ರತ್ನ , ಆಭರಣಗಳ ರಾಶಿಯನ್ನು ಕಂಡನು .

ಎರಡನೆಯ ಬಾರಿ ಮಹಾದೇವನ ಉತ್ಸವಕ್ಕೆ ನಾಪಿತ ತೆರಳಿದ್ದೇಕೆ ?

ಕ ವರ್ಷದ ಉತ್ಸವದಲ್ಲಿ ವಾದ್ಯನುಡಿಸಿ ದೇವರ ದರ್ಶನ ಪಡೆವ ತನ್ನ ಉದ್ದೇಶ ಈಡೇರದ ಕಷ್ಟಕ್ಕೀಡಾದುದರಿಂದ , ಈ ಬಾರಿಯಾದರೂ ಹೋಗಿ ದೇವರ ಸೇವೆ ಮಾಡಿ , ಮಹಾದೇವನ ದರ್ಶನ ಪಡೆದು ಬರಲು ನಾಪಿತನು ಎರಡನೇ ಭಾರಿ ತೆರಳಿದನು

ಕಾಡಿನಲ್ಲಿ ಹುಲಿಗಳೆಲ್ಲಾ ದಿಕ್ಕಾಪಾಲಾಗಿ ಏಕೆ ಓಡಿದವು ?

 ಗಂಧರ್ವರು ತಮ್ಮನ್ನು ಹಿಡಿದುಕೊಂಡು ಹೋಗಿ ಮಹೇಂದ್ರನ ವ್ಯಾಘ್ರಯಜ್ಞ’ದಲ್ಲಿ ಬಲಿಕೊಡಬಹುದೆಂದು ಯೋಚಿಸಿ ಹುಲಿಗಳೆಲ್ಲಾ ಭಯದಿಂದ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡಿದವು

 ನರಿಯೊಡನೆ ಬರುತ್ತಿರುವ ಹುಲಿಯನ್ನು ಕಂಡ ನಾಪಿತನು ಏನೆಂದುಕೊಂಡನು ?

ನಾಪಿತನು ಹುಲಿಯನ್ನು ನೋಡಿ ಅರಣ್ಯ ಜಂತುಗಳಲ್ಲಿ ಮಹಾಬುದ್ಧಿಶಾಲಿಯಾದ ಈ ನರಿಯು , ಸರ್ವತ ಮಹಾಬಲವಾದ ಹುಲಿಯೊಡನೆ ಒಂದಾಗಿ ಬರುತ್ತಿದೆಯಲ್ಲಾ . ಇನ್ನು ನಾವು ಬದುಕುಳಿಯುವುದು ಹೇಗೆ ? ಶಿವ ಶಿವ ಎ೦ದುಕೊಂಡನು .

ನರಿಯನ್ನು ನಾತ ಹೇಗೆ ಗದರಿದನು ?

ನಾಪಿತನು ನರಿಯನ್ನು ಉದ್ದೇಶಿಸಿ ‘ ಎಲವೋ ರಂಡಾಪುತ್ರ ದುರ್ಜಂತುವೇ , ಮೂರು ದಿನದೊಳಗಾಗಿ ಐದು ಹುಲಿಗಳ ಹಿಡಿದು ತಂದು ಒಪ್ಪಿಸುವುದಾಗಿ ಶಪಥ ಮಾಡಿ ಹೋಗಿದ್ದವನು ,

ಈಗ ಐದು ದಿನಗಳಾದ ಮೇಲೆ ಒಂದೇ ಹುಲಿಯನ್ನು ಹಿಡಿದ ತಂದಿರುವೆಯಾ ? ” ಎಂದು ಗದರಿ , ಕಲ್ಲಿನಿಂದ ನರಿಗೆ ಹೊಡೆದನು .

5-6 ವಾಕ್ಯಗಳಲ್ಲಿ ಉತ್ತರಿಸಿ

ಹುಲಿಯಿಂದ ಪಾರಾಗಲು ನಾಪಿತೆ ಕಲ್ಪಿಸಿದ ಕತೆ ಯಾವುದು ?

 ನಾಪಿತನು ಕಾಡಿನಲ್ಲಿ ಮಹಾದೇವನ ಉತ್ಸವಕ್ಕೆಂದು ತೆರಳುತ್ತಿರುವಾಗ ಭಯಂಕರ ಹುಲಿಯೊಂದು ಘರ್ಜಿಸುತ್ತಾ ಎದುರಾಯಿತು ಜೀವಭಯದಿಂದ ನಾಪಿತನು ಇನ್ನು ನನ್ನ ಹೆಂಡತಿ ಮಕ್ಕಳು ಅನಾಥರಾದಂತನ್ನಿಸಿ , ಉಪಾಯ ಮಾಡಿದನು .ಹಗ್ಗದಿಂದ ಹುಲಿಯನ್ನು ಬಂಧಿಸುವಂತೆ ನಟಿಸಿದನು .

ತನ್ನನ್ನು ಕಂಡು ಹೆದರದ ನಾಪಿತನನ್ನು ಕಂಡು ಹುಲಿಗೆ ಅಚ್ಚರಿಯಾಯಿತು . ಅದು ಅವನ ಧೈರ್ಯವನ್ನು ಪ್ರಶ್ನಿಸಲು , ಅವನು ಹೆದರಲು ತಾನು ಮನುಷ್ಯನಲ್ಲ , ಗಂಧರ್ವನೆಂದೂ ತಾನು ದೇವೇಂದ್ರನ ಸ್ವಾಘ್ರಯಜ್ಞಕ್ಕೆ ಹುಲಿ ಹಿಡಿಯಲು ಬಂದಿರುವೆನೆಂದು ಕತೆಯನ್ನು ಕಲ್ಪಿಸುವನು .

ಅಲ್ಲದೆ ನಿನ್ನೆ ಒಂದು ಹುಲಿ ಹಿಡಿದಾಗಿದೆಯೆಂದು ತನ್ನ ಬಳಿಯಿದ್ದ ಕನ್ನಡಿಯಲ್ಲಿ ಅದರದೇ ಪ್ರತಿಬಿಂಬವನ್ನು ತೋರಿಸುವನು . ಹುಲಿಯು ಜೀವ ಉಳಿಸಿದರೆ ಐಶ್ವರ್ಯ ಕೊಡುವುದಾಗಿ ಹೇಳಲು , ಅದನ್ನು ಪಡೆದ ನಾಪಿತನು ಮತ್ತೊಮ್ಮೆ ತಾಯ ಗರ್ಭದಿಂದ ಜನಿಸಿ ಬಂದನೆಂದು ಊರಿಗೆ ಮರಳಿದನು . 

 ಹುಲಿಯು ನಾಪಿತನಿಂದ ತಪ್ಪಿಸಿಕೊಂಡ ರೀತಿಯನ್ನು ನಿರೂಪಿಸಿ ,

 ನಾಪಿತನು ಹೇಳಿದ ಮಹೇಂದ್ರನ ವ್ಯಾಘ್ರಯಜ್ಞದ ಕಲ್ಪಿತ ಕಥೆಯನ್ನು ನಂಬಿದ ಹುಲಿಯು ಜೀವಭಯದಿಂದ ತಲ್ಲಣಿಸಿತು . ಅದು ನಾಪಿತನು ಮಹಾಶಕ್ತಿಶಾಲಿ ಗಂಧರ್ವನಿರಬೇಕೆಂದು ಯೋಚಿಸಿತು . ನಾಪಿತನ ಕನ್ನಡಿಯಲ್ಲಿ ಕಂಡದ್ದು ತನ್ನದೇ ಪ್ರತಿಬಿಂಬವೆಂದು ತಿಳಿಯದ ಹುಲಿಯು ನಾಪಿತನಿಗೆ “ ನಿನ್ನ ದಮ್ಮಯ್ಯಾ , ನನ್ನನ್ನು ಬದುಕಿಸು .

ನಾನು ಬಹುಮಂದಿ ಮನುಷ್ಯರನ್ನು ಕೊಂದು ತಿಂದಾದ ಮೇಲೆ ಅವರ ಆಭರಣಗಳನ್ನೆಲ್ಲಾ ನನ್ನ ಗುಹೆಯಲ್ಲಿ ಇಟ್ಟಿದ್ದೇನೆ .

ಅದನ್ನೆಲ್ಲಾ ನಿನಗೆ ಒಪ್ಪಿಸುತ್ತೇನೆ . ನನ್ನನ್ನು ಹಿಡಿದುಕೊಂಡು ಹೋಗಬೇಡ ‘ ಎಂದು ಬೇಡಿತು .ಮನುಷ್ಯನನ್ನು ತಿನ್ನುವ ಸಿಲುಕಿಕೊಂಡೆವಲ್ಲಾ ಎಂದು ಹುಲಿಯು ಪರಿತಪಿಸಿತು . ಮನುಷ್ಯನಿಗೆ ಆಭರಣದ ಆಸೆ ತೋರಿಸಿ , ತನ್ನ ಜೀವ ಉಳಿಸಿಕೊಂಡ ಹುಲಿಯ ನಡತೆ ಜೀವವುಳಿಸಿಕೊಳ್ಳಲು ಆಪತ್ಕಾಲದಲ್ಲಿ ಯೋಚಿಸುವ ರೀತಿ ಸರಿಯಾಗಿದೆ .

ವ್ಯಾಘ್ರಗಳ ಮಧ್ಯೆಬಿದ್ದ ವಿಪ್ರನನ್ನು ಉಳಿಸಿಕೊಳ್ಳಲು ನಾಪಿತನು ಮಾಡಿದ ಉಪಾಯವೇನು ?

ಚತುರನ ಚಾತುರ್ಯ ಗದ್ಯ ಸಾರಾಂಶ

ಹುಲಿಗಳ ಭೀಕರ ಘರ್ಜನೆಗೆ ಹೆದರಿದ ವಿಪ್ರನು ಹುಲಿಗಳ ಮಧ್ಯೆ ಬಿದ್ದುದನ್ನು ನೋಡಿದ ನಾಪಿತನಿಗೆ ಸರಿವಾಯಿತು . ಕ್ಷೌರಿಕನು ವಿಪ್ರನ ಬಗ್ಗೆ ಚಿಂತಿಸಿ ‘ ‘ ಅಯ್ಯೋ ಈ ಪಾಪಿಯು ಅನ್ಯಾಯವಾಗಿ ಜೀವ ಕಳೆದುಕೊಳ್ಳುವವಲ್ಲಾ , ಇದು ಒಂದು ಬಾರಿ ಪ್ರಯತ್ನ ಮಾಡಿ ನೋಡುತ್ತೇನೆ ” ಎಂದು ಯೋಚಿಸಿದನು . ಹುಲಿಗಳ ಮಧ್ಯೆ ಬಿದ್ದಿದ್ದ ವಿಪ್ರವನ್ನು ಉದ್ದೇಶಿಸಿ ಎ ಗಂಧರ್ವನೇ ನೀನು ಬಿದುದು ಒಳ್ಳೆಯದೇ ಆಯಿತು .

ಮೊದಲು ಆಗಡದ ಹಿರಿಯ ಹುಲಿಯನ್ನು ಹಿಡಿ ಹಿಡಿ ‘ ಎಂದು ಜೋರಾಗಿ ಕಿರುಚಿದಳು .ಸ್ವಲ್ಪ ಮೊದಲು ಗಂಧರ್ವರು ಹುಲಿ ಹಿಡಿಯಲು ಬಂದಿರುವರೆಂಬ ವಿಚಾರ ತಿಳಿದಿದ್ದ ಹುಲಿಗಳೆಲ್ಲಾ ಕ್ಷೌರಿಕನು ‘ ಹಿಡಿ ಹಿಡಿ ‘ ಎಂದು ಕೂಗಿಕೊಳ್ಳಲು ಹೆದರಿಹೋದವು

.ಅವೆಲ್ಲಾ ಕಂಗಾಲಾಗಿ ಕಾಡಿನಲ್ಲಿ ದಿಕ್ಕಾಪಾಲಾಗಿ ಓಡತೊಡಗಿದವು . ಆಗ ಕ್ಷೌರಿಕನು ಮರದಿಂದ ಇಳಿದು ಬಂದು ಮೂರ್ಛ ಹೋಗಿದ್ದ ವಿಪ್ರನನ್ನು ಎಚ್ಚರಿಸಿ , ಹುಲಿಗಳಿಂದ ಪಾರುಮಾಡಿದನು .

 ಪಲಾಯನ ಮಾಡುತ್ತಿದ್ದ ಹುಲಿಯನ್ನು ಸರಿ ಹೇಗೆ ಸಮಾಧಾನಪಡಿಸಿ ಹಿಂದಕ್ಕೆ ಕರೆತಂದಿತು ?

 ಹುಲಿಯು ಕಾಡಿನಲ್ಲಿ ಮೈ ಮರೆತು ಪಲಾಯನ ಮಾಡುತ್ತಿರುವುದನ್ನು ಒಂದು ನರಿಗೆ ತುಂಬಾ ಆಶ್ಚರ್ಯವಾಯಿತು . ಅದು ಹುಲಿಯನ್ನು ” ಎಲೈ ಹುಲಿಯ , ಕಾಡಿನ ಸಮಸ್ತ ಪ್ರಾಣಿಗಳೂ ನಿನ್ನನ್ನು ನೋಡಿ ಪಲಾಯನ ಮಾಡುವುವು , ನೀನು ಈ ರೀತಿ ಓಡುತ್ತಿರುವುದು ಪಲಾಯನ ಮಾಡುವುದೆ ? ‘ ‘ ಎಂದು ಕೇಳಿತಲ್ಲದೆ ಹುಲಿಯಿಂದ ಎಲ್ಲ ಕತೆಯನ್ನು ತಿಳಿದುಕೊಂಡಿತು . ನಂತರ ನರಿಯು ಹುಲಿಯನ್ನು ಸಮಾಧಾನಪಡಿಸುತ್ತಾ ನಿನ್ನನ್ನು ಹಿಡಿಯಲು ಬಂದವನು ಗಂಧರ್ವನಲ್ಲ .

ಆ ಮಾನವ ತುಂಬಾ ಚತುರತೆಯಿಂದ ಹೀಗೆ ಮಾಡಿದ್ದಾನೆ . ಮರದ ಮೇಲಿಂದ ಬಿದ್ದವನನ್ನು ರಕ್ಷಿಸಲು , ಮರದ ಮೇಲಿದ್ದ ಮತ್ತೊಬ್ಬನು ಚಮತ್ಕಾರದ ಮಾತುಗಳನ್ನಾಡಿದ್ದಾನೆ . ಅಷ್ಟಕ್ಕೆ ನೀನು ಹೆದರಿ ಓಡುವುದೆ ? ‘ ‘ ಎಂದಿತು .

ಹುಲಿಯ ಅಧೈರ್ಯವನ್ನು ನಿಂದಿಸುತ್ತಾ ನಿನ್ನ ಕೈಯಿಂದ ಆ ಅಧಮನಾದ ಮನುಷ್ಯನನ್ನು ಕೊಲ್ಲಿಸುತ್ತೇನೆ .ನಡೆ , ನಿನ್ನ ಆ ಜಾಗವನ್ನು ನನಗೆ ತೋರಿಸು ” ಎಂದಿತು . ಹುಲಿಯು ಪುನಃ ಅಧೈರ್ಯವನ್ನು ತೋರಿಸಿತು . ಆಗ ನರಿಯು ನಾನಾ ಬಗೆಯ ಉಪಾಯದಿಂದ ಹುಲಿಗೆ ಧೈರ್ಯ ನೀಡಿ , ತಾನು ಮುಂದೆ ಹೋಗುವುದಾಗಿಯೂ , ಹುಲಿಯು ತನ್ನನ್ನು ಹಿಂಬಾಲಿಸಬೇಕೆಂದೂ ಹೇಳಿ ಹುಲಿಯನ್ನು ನಾಪಿತನ ಬಳಿಗೆ , ಹಿಂದಕ್ಕೆ ಕರೆತಂದಿತು .

Chaturana Chaturya in Kannada Notes

 ಮೂರ್ಛ ಹೋದ ವಿಪ್ರನನ್ನು ನಾಪಿತನು ಹೇಗೆ ಸಂತೈಸುತ್ತಾನೆ ?

ಹುಲಿಗಳೆಲ್ಲಾ ಪಲಾಯನಗೈದ ಮೇಲೆ ನಾಪಿತನು ಮರದ ಮೇಲಿಂದ ಕೆಳಗಿಳಿದು ಮೂರ್ಛ ಹೋಗಿದ್ದ ವಿಪ್ರನನ್ನು ಆರೈಕೆ ಮಾಡಿ ಎಚ್ಚರಗೊಳಿಸಿದನು ಮತ್ತು ಅವನನ್ನು ಸಂತೈಸುತ್ತಾ “ ಅಯ್ಯಾ , ಮೊದಲೇ ಈ ದಾರಿಯು ಒಳ್ಳೆಯ ದಾರಿಯಲ್ಲ .ನೀವು ಬರಬೇಡಿ ಎಂದರೆ ಅದನ್ನು ಉಪೇಕ್ಷೆ ಮಾಡಿ ನನ್ನೊಡನೆ ಹೊರಟರಿ , ಕಾಡಿನಲ್ಲಿ ಸಾಗುವಾಗ ಸ್ವಲ್ಪವಾದರೂ ಧೈರ್ಯವಿರ ಬೇಡವೆ ? ಇಷ್ಟು ಧೈರ್ಯಗೆಟ್ಟರೆ ಮುಂದೇನು ಗತಿ ? ಶಿವಶಿವಾ ! ” ಎಂದನು .

ಜೊತೆಗೆ ವಿಪ್ರನು ಮೃದುವಾದ ಹುಲ್ಲು ಬೆಳೆದ ನೆಲದ ಮೇಲೆ ಬಿದ್ದುದರಿಂದಾಗಿ ಕೈ – ಕಾಲುಗಳು ಮುರಿದಿಲ್ಲ . ಅವು ಮುರಿಯದೆ ಚೆನ್ನಾಗಿರುವುದೇ ಪುಣ್ಯ ದೇವರ ಸೇವೆ ಮಾಡಿದ್ದು ಸಾಕು , ಇನ್ನು ಕ್ಷೇಮವಾಗಿ ಊರಿಗೆ ಹಿಂದಿರುಗಿ ಜೀವ ಉಳಿಸಿಕೊಳ್ಳೋಣ ಬನ್ನಿ ಎಂದು ಸಮಾಧಾನಪಡಿಸಿ ತನ್ನೊಂದಿಗೆ ಊರಿಗೆ ಕರೆದೊಯ್ಯಲು ಮುಂದಾದನು .

ಸಂದರ್ಭಸೂಚಿಸಿ , ಸ್ವಾರಸ್ಯವನ್ನು ವಿವರಿಸಿ

 “ ಪಪುತ್ರರನಾಥರಾದವರಿಗಿನ್ನೇನುಗತಿ . “

 ಯಾದವ ಕವಿಯು ರಚಿಸಿರುವ ‘ ಚತುರನ ಚಾತುರ್ಯ ‘ ಎಂಬ ಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಮಹಾದೇವನ ಉತ್ಸವಕ್ಕೆ ತೆರಳಲು ನಾಪಿತನು ಕಾಡಿನಲ್ಲಿ ಬರುತ್ತಿರುವಾಗ ಅವನಿಗೆ ಎದುರಾಗಿ ಬಂದು ಹುಲಿಯೊಂದು ಭಯಂಕರವಾಗಿ ಘರ್ಜಿಸಿತು .

ಅದನ್ನು ಕಂಡು ತಾನು ಮೃತ್ಯುವಿನ ಬಾಗಿಲಿನಲ್ಲಿ ನಿಂತಿರುವೆನೆಂಬುದು ಕ್ಷೌರಿಕನಿಗೆ ಅರಿವಾಯಿತು .ಆಗ ಅವನು “ ನಾನು ಸತ್ತರೆ ನನ್ನ ಹೆಂಡತಿ ಮತ್ತು ಮಕ್ಕಳು ಅನಾಥರಾಗುವರು , ಇನ್ನೇನು ಗತಿ ? ‘ ಎಂದು ಮನದಲ್ಲಿ ಚಿಂತಿಸಿ , ಅದರಿಂದ ಪಾರಾಗುವುದು ಹೇಗೆಂದು ಯೋಚಿಸಿದ ಸಂದರ್ಭವಿದಾಗಿದೆ .

 “ ಇನ್ನು ಮೂರೊಂದು ದೊರೆಯ ತಾ ಕೃತಕೃತ್ಯನೆಂದು . ”

ಯಾದವ ಕವಿಯು ಬರೆದಿರುವ ‘ ಚತುರನ ಚಾತುರ್ಯ ‘ ಎಂಬ ಕಥೆಯಲ್ಲಿನ ಈ ಮೇಲಿನ ವಾಕ್ಯವನ್ನು ಕ್ಷೌರಿಕನ ಹುಲಿಯನ್ನುದ್ದೇಶಿಸಿ ಹೇಳುವನು .ಕ್ಷೌರಿಕನು ಹುಲಿಯ ಬಾಯಿಂದ ಪಾರಾಗಲು ತಾನು ಗಂಧರ್ವನೆಂದೂ , ದೇವೇಂದ್ರನ ಯಜ್ಞಕ್ಕೆ ಹುಲಿಗಳನ್ನು ಹಿಡಿಯಲು ಮಾನವ ರೂಪ ಧರಿಸಿರುವವನೆಂದೂ ಹೇಳಿದನು , ದೇವೇಂದ್ರನ ಯಜ್ಞಕ್ಕೆ ಈಗಾಗಲೇ ತೊಂಬತ್ನಾಲ್ಕು ಹುಲಿಗಳನ್ನು ಸೆರೆ ಹಿಡಿದು ಕೊಟ್ಟಾಗಿದೆ .

ನಿನ್ನ ಒಂದನ್ನು ಹಿಡಿದಾಯಿತು , ಈಗ ನೀನು ಸಿಕ್ಕಿರುವೆ . ಇನ್ನುಳಿದ ಮೂರು ಮತ್ತೊಂದು ( ನಾಲ್ಕು ಹುಲಿಗಳು ಸಿಕ್ಕರೆ , ತಾನು ಕೃತಕೃತ್ಯನಾದಂತೆ ಎಂದು ಹೇಳಿ ಹುಲಿಯನ್ನು ನಂಬಿಸಲು ಮಾಡುವ ಪ್ರಯತ್ನವಿದಾಗಿದೆ . ಅವನ ಮಾತನ್ನು ವ್ಯಾಘ್ರುವು ನ೦ಬುತ್ತದೆ . “

ಜನನಿಯುದರದಿಂ ಬಂದನೆಂದು ಜವಳಲ್ಲಿಂತರಲ್ಲ .

‘ ಚತುರನ ಚಾತುರ್ಯ ‘ ಎಂಬ ನಾಪಿತನ ಕತೆಯಿಂದ ಈ ಮೇಲಿನ ವಾಕ್ಯವನ್ನು ಸ್ವೀಕರಿಸಲಾಗಿದೆ . ಹುಲಿಯ ಬಾಯಿಂದ ಪಾಲಾದ ಕ್ಷೌರಿಕನು ಮನದಲ್ಲಿ ಈ ಮೇಲಿನಂತೆ ಚಿಂತಿಸಿದನು .

1st PUC Kannada

ಚತುರನಾದ ಕ್ಷೌರಿಕನು ಹುಲಿಗೆ ತಾನು ಗಂಧರ್ವನು , ದೇವೇಂದ್ರನ ಯಜ್ಞಕ್ಕೆ ಹುಲಿಯನ್ನು ಹಿಡಿಯಲು ಬಂದವನು . ಸಿಕ್ಕಿರುವ ನಿನ್ನನ್ನು ಸೆರೆಹಿಡಿಯುವುದಾಗಿ ಹೆದರಿಸಿದನು .ಹುಲಿಯು ತನ್ನ ಜೀವ ಉಳಿಸಿದರೆ ಮುತ್ತುರತ್ನಗಳನ್ನು ನೀಡುವುದಾಗಿ ವಿನಂತಿಸಿತು . ಅದರಂತೆ ತನ್ನ ಗುಹೆಗೆ ಕರೆದೊಯ್ದು ಕ್ಷೌರಿಕನಿಗೆ ಐಶ್ವರ್ಯವನ್ನು ಕೊಟ್ಟಿತು .

ಅದನ್ನೆಲ್ಲಾ ಗಂಟುಕಟ್ಟಿಕೊಂಡ ಕ್ಷೌರಿಕನು ಹುಲಿಗೆ ‘ ‘ ಇನ್ನಾದರೂ ಧರ್ಮದಿಂದ ಜೀವಿಸು , ಉಳಿದ ಗಂಧರ್ವರ ಕಣ್ಣಿಗೆ ಬೀಳಬೇಡ ‘ ಎಂದು ಕಿವಿಮಾತು ಹೇಳಿದವನೆ , ತನ್ನ ಜೀವ ಉಳಿದುದನ್ನು ನೆನೆದು ತಾನು ಮತ್ತೊಮ್ಮೆ ತಾಯಿಯ ಗರ್ಭದಿಂದ ಜನಿಸಿ ಬಂದೆನೆಂದು ಬಗೆದು , ವೇಗವಾಗಿ ಅಲ್ಲಿಂದ ತೆರಳಿ ತನ್ನ ಮನೆಯನ್ನು ಸೇರಿಕೊಂಡನು .

ಮೊದಲು ತನಗಂತಿತ್ತ ಇವನೆಂತು ತಂದನೋ ? “

ಯಾದವ ಕವಿಯು ರಚಿಸಿರುವ ಚತುರನ ಚಾತುರ್ಯ ‘ ಎಂಬ ಕತೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ . ವಿಪ್ರನು ತನ್ನ ಮನದಲ್ಲಿ ಈ ಮೇಲಿನಂತೆ ಯೋಚಿಸಿದನು . ಕ್ಷೌರಿಕನು ಕಾಡಿನಲ್ಲಿ ಹುಲಿಯಿಂದ ಮುತ್ತು ರತ್ನಗಳನ್ನು ಪಡೆದು , ಜೀವವುಳಿಸಿಕೊಂಡು ಊರಿಗೆ ಹಿಂದಿರುಗಿದವನು , ತನಗೆ ಹುಲಿ ಕೊಟ್ಟಿದ್ದ ಐಶ್ವರ್ಯದಲ್ಲಿ ಅರ್ಧಭಾಗವನ್ನು ವಿಪ್ರನಿಗೆ ತಂದೊಪ್ಪಿಸಿದ್ದನು .

ಮಗದೊಮ್ಮೆ ಅವನು ಮಹದೇವನುತ್ಸವಕ್ಕೆ ವಿಪ್ರನ ಬಳಿ ಮುಹೂರ್ತ ಕೇಳಲು ಬಂದಾಗ , ವಿಪ್ರನು ಕ್ಷೌರಿಕನು ಪುನಃ ಐಶ್ವರ್ಯ ತರಲು ಹೋಗುತ್ತಿರುವನೆಂದೇ ಭಾವಿಸಿದನು . ಮೊದಲ ಬಾರಿ ಅಷ್ಟೊಂದು ಒಡವೆಗಳನ್ನು ತನಗೆ ಇತ್ತ ಈತ , ಅವುಗಳನ್ನು ಹೇಗೆ ತಂದಿರಬಹುದೆಂದು ಯೋಚಿಸಿದನು .

ಮರುದಿವಸ ತಾನೂ ಕ್ಷೌರಿಕನ ಜೊತೆ ತೆರಳಿ ಅದನ್ನು ಪರೀಕ್ಷಿಸಬೇಕೆಂದು ಮನಸ್ಸಿನಲ್ಲಿಯೇ ನಿರ್ಧಾರ ಮಾಡಿದನು .

ಎಲವೋ ಗಂಧರ್ವ , ನೀಂ ಧುಮುಕಿದುದು ಲೇಸಾಯ್ತು .

 ಯಾದವ ಕವಿಯು ರಚಿಸಿರುವ ಚತುರನ ಚಾತುರ್ಯ ‘ ಎಂಬ ಕಥೆಯಿಂದ ಈ ಮೇಲಿನ ವಾಕ್ಯವನ್ನು ಆಯ್ದುಕೊಳ್ಳಲಾಗಿದೆ .ಕ್ಷೌರಿಕನು ಏಪ್ರವನ್ನು ಉದ್ದೇಶಿಸಿ ಈ ಮಾತನ್ನಾಡುವನು . ಕ್ಷೌರಿಕ ಮತ್ತು ವಿಪ್ರರು ನೂರಾರು ಹುಲಿಗಳನ್ನು ಕಂಡು ಬಳಿಯಲ್ಲಿದ್ದ ಮರವೇರಿ ಕುಳಿತುಕೊಳ್ಳುತ್ತಾರೆ .

ದಿವ್ಯಭೋಜನ ನಾದ ನಂತರ ನೂರಾರು ಹುಲಿಗಳು ಸಂತೋಷದಿಂದ ಒಟ್ಟಾಗಿ ಘರ್ಜಿಸಲು ಇಡೀ ಕಾಡೆಲ್ಲಾ ನಡುಗಿ ಹೋಗುತ್ತದೆ , ಭಯ ಮತ್ತು ಗಾಬರಿಗೊಂಡ ವಿಪ್ರನು ಆಯತಪ್ಪಿ ಹುಲಿಗಳ ಮಧ್ಯೆ ಬಿದ್ದುಬಿಟ್ಟನು .ಅಚಾತುರ್ಯದಿಂದಾದ ಈ ಘಟನೆಯನ್ನು ಚತುರನಾದ ಕ್ಷೌರಿಕನು ಉಪಾಯವಾಗಿ ತನ್ನ ಅನುಕೂಲಕ್ಕೆ ಬಳಿಸಿಕೊಂಡು , ನೆರೆದಿದ್ದ ಹುಲಿಗಳನ್ನೆದುರಿಸಲು ಎಲೈ ಗಂಧರ್ವನೇ , ನೀನು ಧುಮುಕಿದ್ದು ಒಳ್ಳೆಯದಾಯಿತು .ಆ ಹಿರಿಯ ಹುಲಿಯನ್ನು ಹಿಡಿ ‘ ‘ ಎಂದು ಆಜ್ಞಾಪಿಸುವನು .

ಇದನ್ನು ಕೇಳಿದ ಹುಲಿಗಳೆಲ್ಲವೂ ದಿಕ್ಕಾಪಾಲಾಗಿ ಓಡುವುವು , ಚತುರನಾದ ಕ್ಷೌರಿಕನು ತನ್ನ ಬುದ್ಧಿವಂತಿಕೆಯಿಂದ ಮತ್ತೊಮ್ಮೆ ತನ್ನ ಜೀವವನ್ನೂ ಜೊತೆಯಲ್ಲಿದ್ದ ವಿಪನ ಜೀವವನ್ನೂ ಉಳಿಸಿಕೊಳ್ಳುವ ಜಾಣೆಯನ್ನು ತೋರುವ ಸಂದರ್ಭವಿದು .

 “ ಇವೆರಡೊಂದಾಗಿ ನಡೆತಂದ ಬಳಿಕ ತಾವು ಉಳಿಯುವುದಂತು . “

 ‘ ಚತುರನ ಚಾತುರ್ಯ’ವೆಂಬ ಯಾದವ ಕವಿಯ ಸಣ್ಣಕಥೆಯಲ್ಲಿ ಈ ಮೇಲಿನ ವಾಕ್ಯವಿದೆ .ಕ್ಷೌರಿಕ ಮತ್ತು ವಿಪ್ರರಿಬ್ಬರೂ ಹುಲಿಗಳಿಂದ ಜೀವವುಳಿಸಿಕೊಂಡವೆಂದು ಊರಿಗೆ ಹಿಂತಿರುಗುತ್ತಿರುವಾಗ , ಪಲಾಯನ ಮಾಡುತ್ತಿದ್ದ ಹುಲಿಯೊಡಗೊಂಡು ನರಿಯೂ ಬರುವುದನ್ನು ಕಂಡರು .

ಮಹಾ ಚಾಣಾಕ್ಷನಾದ ನರಿ ಹಾಗೂ ಘೋರವ್ಯಾಘ್ರ ಗಳೆರಡೂ ಒಟ್ಟಾಗಿ ಬರುತ್ತಿರುವುದನ್ನು ನೋಡಿದ ಕ್ಷೌರಿಕ ಮತ್ತು ವಿಪ್ರದಿಬ್ಬರೂ ಇವೆರಡೂ ಒಂದಾಗಿ ನಡೆದು ಬರುವಾಗ ನಾವು ಬದುಕುಳಿಯುವುದು ಹೇಗೆ ? ‘ ಎಂದು ಚಿಂತಿಸಿದರು . ಆದರೆ ಕ್ಷೌರಿಕನು ಮತ್ತೊಮ್ಮೆ ತನ್ನ ಚತುರತೆಯಿಂದ ಪಾರಾಗುತ್ತಾನೆ .

ಇತರೆ ಪ್ರಮುಖ ಮಾಹಿತಿ ಲಿಂಕ್

ಕೃಷಿ ಸಂಸ್ಕೃತಿ ಮತ್ತು ಜಾಗತೀಕರಣ

ಕದಡಿದ ಸಲಿಲಂ ತಿಳಿವಂದದೆ

Leave a Reply

Your email address will not be published. Required fields are marked *