ಕದಡಿದ ಸಲಿಲಂ ತಿಳಿವಂದದೆ notes, 2nd puc kannada notes 1st chapter with Pdf, Notes, Summary, saramsha, kadadida salilam tilivandade poem notes
ಪರಿವಿಡಿ
ರಾವಣನು ಯಾವ ರೀತಿ ಚಲಿಸದೆ ಇದ್ದನು ?
ರಾವಣನು ಧ್ರುವಮಂಡಲದಂತೆ ಚಲಿಸದೆ ಇದ್ದನು .
ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?
ಬಹುರೂಪಿಣಿ ವಿದ್ಯೆ ಎಂಬ ದೇವತೆಯು ರಾವಣನ ಎದುರು ಪ್ರತ್ಯಕ್ಷವಾಯಿತು .
ಕದಡಿದ ಸಲಿಲಂ ತಿಳಿವಂದದೆ notes
ಒಂದು ಅಂಕದ ಪ್ರಶ್ನೆಗಳು
ರಾವಣನು ಯಾವ ರೀತಿ ಚಲಿಸದೆ ಇದ್ದನು ?
ರಾವಣನು ಧ್ರುವಮಂಡಲದಂತೆ ಚಲಿಸದೆ ಇದ್ದನು .
ರಾವಣನ ಎದುರು ಪ್ರತ್ಯಕ್ಷವಾದ ವಿದ್ಯಾದೇವತೆ ಯಾರು ?
ಬಹುರೂಪಿಣಿ ವಿದ್ಯೆ ಎಂಬ ದೇವತೆಯು ರಾವಣನ ಎದುರು ಪ್ರತ್ಯಕ್ಷವಾಯಿತು .
ಯಾರನ್ನು ಕೊಲ್ಲುವುದಿಲ್ಲವೆಂದು ವಿದ್ಯಾದೇವತೆ ಹೇಳಿತು ?
ವಿದ್ಯಾದೇವತೆಯು ರಾಮಲಕ್ಷ್ಮಣರನ್ನು ತಾನು ಕೊಲ್ಲುವುದಿಲ್ಲವೆಂದು ಹೇಳಿತು .
ಮಯತನೂಜೆ ಎಂದರೆ ಯಾರು ?
ಮಯನ ಮಗಳಾದ ಮಂಡೋದರಿಯನ್ನು ‘ ಮಯತನೂಜೆ ‘ ಎನ್ನುವರು .
ರಾವಣನು ಮಹಾಪೂಜೆಯನ್ನು ಎಲ್ಲಿ ಸಲ್ಲಿಸಿದನು ?
ರಾವಣನು ಶಾಂತಿಜಿನಭವನದೊಳಗೆ ಮಹಾಪೂಜೆಯನ್ನು ಸಲ್ಲಿಸಿದನು .
ಸೀತೆಯನ್ನು ರಾವಣ ಎಲ್ಲಿರಿಸಿದ್ದನು ?
ರಾವಣನು ಪ್ರಮದವನದಲ್ಲಿ ಸೀತೆಯನ್ನು ಇರಿಸಿದ್ದನು .
ರಾವಣನ ಆಗಮನವನ್ನು ಸೀತೆಗೆ ತೋರಿದವರು ಯಾರು ?
ಪ್ರಮದವನದಲ್ಲಿದ್ದ ರಾಕ್ಷಸ ಸ್ತ್ರೀಯರು ಸೀತೆಗೆ ರಾವಣನ ಆಗಮನವನ್ನು ತೋರಿದರು .
ಸೀತೆ ಯಾವುದನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು ?
ಸೀತೆಯು ರಾವಣನ ರೂಪವನ್ನು ಹುಲ್ಲಿಗೆ ಸಮಾನವೆಂದು ಭಾವಿಸಿದಳು .
ಸೀತೆ ರಾವಣನನ್ನು ಏನೆಂದು ಬೇಡಿಕೊಂಡಳು ?
ಸೀತೆಯು “ ಶ್ರೀರಾಮನ ಆಯುಃಪ್ರಾಣ ಇರುವವರೆಗೂ ಇತ್ತ ದೆಂದು ” ರಾವಣನನ್ನು ಬೇಡಿದಳು .
ರಾವಣನಿಗೆ ಯಾರ ಬಗ್ಗೆ ವೈರಾಗ್ಯ ಮೂಡಿತು ?
ಸೀತೆಯ ಬಗ್ಗೆ ರಾವಣನಿಗೆ ವೈರಾಗ್ಯ ಮೂಡಿತು .
ವಿಭೀಷಣ ಯಾರು ?
ವಿಭೀಷಣ ರಾವಣನ ಕಿರಿಯ ಸಹೋದರ .
ಸೌಮಿತ್ರಿ ಎಂದರೆ ಯಾರು ?
ಸುಮಿತ್ರೆಯ ಮಗನಾದ ಲಕ್ಷ್ಮಣನನ್ನೇ ಸೌಮಿತ್ರಿ ಎನ್ನುವರು .
ಯಾವಾಗ ಸೀತೆಯನ್ನು ರಾಮನಿಗೆ ಕೊಡುವೆನೆಂದು ರಾವಣನು ಯೋಚಿಸುತ್ತಾನೆ ?
ಯುದ್ಧದಲ್ಲಿ ಶ್ರೀರಾಮನನ್ನು ಸೆರೆಹಿಡಿದು ತಂದು ಆನಂತರ ಅವನಿಗೆ ಸೀತೆ ಯನ್ನು ಕೊಡುವೆನೆಂದು ರಾವಣ ಯೋಚಿಸುತ್ತಾನೆ.
ಎರಡು ಅಂಕಗಳ ಪ್ರಶ್ನೆಗಳು
ಬಹುರೂಪಿಣಿ ವಿದ್ಯೆಯು ರಾವಣನಿಗೆ ಏನೆಂದು ಆಶ್ವಾಸನೆಯಿತ್ತಿತು ?
ಬಹುರೂಪಿಣಿ ವಿದ್ಯೆಯು “ ಚಕ್ರಧಾರಿಯಾದ ಲಕ್ಷ್ಮಣ ಹಾಗೂ ಚರಮದೇಹ ಧಾರಿಯಾದ ರಾಮಸ್ವಾಮಿ ಇವರಿಬ್ಬರನ್ನುಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ ” ಎಂದು ಆಶ್ವಾಸನೆಯಿತ್ತಿತು .
ರಾವಣ ತನ್ನ ಅಂತಃಪುರದ ಸ್ತ್ರೀಯರನ್ನು ಹೇಗೆ ಸಂತೈಸಿದನು ?
ರಾವಣನು “ ಮಂಡೋದರಿ ಮತ್ತು ಇತರ ಸ್ತ್ರೀಯರಿಗೆ ಭಂಗವನ್ನು ಮಾಡಿದ ಅಂಗದಾದಿಗಳನ್ನು ಭೂಭಂಗ ಮಾತ್ರದಲ್ಲಿ ಸೆರೆಗೈದು ತರುತ್ತೇನೆ ” ಎಂದು ತನ್ನ ಅಂತಃಪುರದ ಸ್ತ್ರೀಯರನ್ನು ಸಂತೈಸಿದನು .
ಸೀತೆಯ ತಲ್ಲಣಕ್ಕೆ ಕಾರಣವೇನು ?
ರಾವಣನ ಆಗಮನದ ಸುದ್ದಿ ತಿಳಿದ ಸೀತೆಯು , ರಾಮ – ಲಕ್ಷ್ಮಣರಿಗೆ ಸಂಬಂಧಿಸಿ ದಂತೆ ಇನ್ನೇನು ಕೆಟ್ಟವಾರ್ತೆಯನ್ನು ಕೇಳಬೇಕಾಗಿದೆಯೋ ಎಂದು ತಲ್ಲಣಗೊಂಡಳು .
ರಾವಣನು ಸೊಕ್ಕಿನಿಂದ ಸೀತೆಯನ್ನುದ್ದೇಶಿಸಿ ಆಡಿದ ಮಾತುಗಳಾವುವು ?
ರಾವಣನು ಸೀತೆಯನ್ನುದ್ದೇಶಿಸಿ “ ಬಹುರೂಪಿಣಿ ವಿದ್ಯೆಯು ವಶವಾಗಿರುವುದ ರಿಂದ ತನಗೆ ಸಮಬಲರಾದವರು ಮೂರುಲೋಕದಲ್ಲಿ ಯಾರೂ ಇಲ್ಲ . ಯುದ್ಧದಲ್ಲಿ ತನಗೆ ಅಸಾಧ್ಯವಾದ ಪ್ರತಿಪಕ್ಷವಿಲ್ಲ . ಇನ್ನಾದರೂ ಸೀತೆ ರಾಮ ವ್ಯಾಮೋಹವನ್ನು ಬಿಟ್ಟು , ತನಗೆ ಒಲಿದು ಸಾಮ್ರಾಜ್ಯ ಸುಖವನ್ನು ಅನುಭವಿಸಬೇಕೆಂದು ” ಸೊಕ್ಕಿನಿಂದ ನುಡಿದನು .
ರಾವಣನಿಗೆ ಸೀತೆಯ ಬಗ್ಗೆ ವೈರಾಗ್ಯ ಮೂಡಿದ ಸಂದರ್ಭವನ್ನು ವಿವರಿಸಿ ,
ಸೀತೆಯು ರಾವಣನ ಕಣ್ಣೆದುರಲ್ಲೇ ಮೂರ್ಛತಪ್ಪಿ ನೆಲಕ್ಕೆ ಒರಗಿದಾಗ ರಾವಣನಿಗೆ ಸೀತೆಯಲ್ಲಿ ವೈರಾಗ್ಯ ಮೂಡಿತು . ಕದಡಿಹೋದ ನೀರು ತನಗೆ ತಾನೆ ತಿಳಿಯಾಗುವಂತೆ , ರಾವಣನಲ್ಲಿ ಸೀತೆಯ ಮೇಲಿನ ವ್ಯಾಮೋಹ ದೂರಾಗಿ ವೈರಾಗ್ಯ ಮೂಡಿತು .
ರಾವಣನು ತನ್ನ ಆಪ್ತರನ್ನು ಕುರಿತು ಏನೆಂದು ಹೇಳಿದನು ?
ರಾವಣನು ತನ್ನ ಆಪ್ತರಿಗೆ “ ತನ್ನ ನಿಶ್ಚಲಗುಣದಿಂದ ಸೀತೆಯು ನನ್ನ ಬಗ್ಗೆ ಗಮನಹರಿಸಲಿಲ್ಲ . ನನ್ನ ದಿವ್ಯಭೂಷಣ ವಸನಗಳನ್ನಾಗಲೀ , ಖೇಚರ ರಾಜ್ಯವನ್ನಾಗಲೀ ಬಯಸದೆ ಅವನ್ನು ತೃಣ ಸಮಾನವಾಗಿ ಕಂಡಳು . ಹೀಗಾಗಿ ಪೌರುಷಪ್ರಣಯಿಯಾದ ನಾನು ಪಾಪಗೈದು ಇವಳನ್ನು ಬಯಸುತ್ತೇನೆಯೇ ? ” ಎಂದು ಹೇಳಿದನು .
ಈಗಲೇ ಸೀತೆಯನ್ನು ರಾಮನಿಗೊಪ್ಪಿಸಲು ರಾವಣ ಬಯಸಲಿಲ್ಲವೇಕೆ ?
ಈಗಲೇ ಸೀತೆಯನ್ನು ರಾವಣನಿಗೊಪ್ಪಿಸಿಬಿಟ್ಟರೆ , ಇದುವರೆಗೆ ತಾನು ತೋರಿದ ಕಡುಮ – ಕಟ್ಟಾಯ ಬೀರಬಿರುದುಗಳು ವ್ಯರ್ಥಗೊಳ್ಳುತ್ತವೆ . ಹಾಗಾಗಬಾರದೆಂದು ರಾವಣನು ಬಯಸಿದನು .
ರಾವಣನು ಅಂತಿಮವಾಗಿ ಯಾವ ನಿರ್ಧಾರಕ್ಕೆ ಬರುತ್ತಾನೆ ?
ರಾವಣನು ಅಂತಿಮವಾಗಿ ಎರಡೂ ಕಡೆಯ ಸೇನೆಗಳು ತನ್ನ ತೋಳಲವನ್ನು ಕಂಡು ಹೊಗಳುವಂತೆ ಯುದ್ಧಗೈದು , ಸೌಮಿತ್ರಿ ರಾಘವರನ್ನು ವಿರಥರನ್ನಾಗಿಸಿ ಸೆರೆಗೈದು ತಂದು ಆನಂತರ ಸೀತೆಯನ್ನು ರಾಮನಿಗೆ ಒಪ್ಪಿಸುತ್ತೇನೆ ಎಂಬ ನಿರ್ಧಾರಕ್ಕೆ ಬಂದನು .
4 ಅಂಕಗಳ ಪಶ್ನೆಗಳು
೧. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಂಡ ಸಂದರ್ಭವನ್ನು ವಿವರವಾಗಿ ಬರೆಯಿರಿ
ರಾವಣನು ಶಾಂತಿಜಿನಭವನದೊಳಗೆ ಬಹುರೂಪಿಣೀ ವಿದ್ಯೆಯನ್ನು ಒಲಿಸಿ ಕೊಳ್ಳಲು ಧ್ಯಾನ ಮಾಡುತ್ತಿದ್ದಾಗ ಅಂಗದಾದಿಗಳು ಅವನ ಅಂತಃಪುರಕ್ಕೆ ಬಂದು ಮಂಡೋದರಿ ಮತ್ತಿತರ ಸ್ತ್ರೀಯರಿಗೆ ಅನೇಕ ಬಗೆಯ ತೊಂದರೆ ನೀಡಿದರು .
ರಕ್ಷಣೆಗಾಗಿ ಅಂತಃಮರದ ಸ್ತ್ರೀಯರು ಕಿರುಚಿದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಚಿತ್ತನಿರೋಧಗೈದು , ಬಹುರೂಪಿಣೀ ವಿದ್ಯೆಯನ್ನು ಕೈವಶಮಾಡಿಕೊಂಡನು . ಮುಂಗಾರಿನ ಸಿಡಿಲಿನಂತೆ ಪ್ರತ್ಯಕ್ಷವಾದ ದೇವತೆಯು ರಾವಣನೆದುರು ಪ್ರತ್ಯಕ್ಷವಾಗಿ ಯಮನ ನಾಲಗೆಯೇ ನುಡಿಯುತ್ತಿರುವಂತೆ ‘ ಬೆಸಸು ಬೆಸಸು ‘ ಎಂದು ಕೇಳಿತು .
ರಾವಣನ ಮನೋಭಿಲಾಶೆಯನ್ನು ಅರಿತ ಅನಂತರ “ ಚಕ್ರಧಾರಿಯಾದ ಲಕ್ಷಣ ಹಾಗೂ ಚರುಮದೇಹಧಾರಿಯಾದ ರಾಮಸ್ವಾಮಿ ಇವರಿಬ್ಬರನ್ನು ಉಳಿದು ಮಿಕ್ಕೆಲ್ಲರನ್ನು ನಾಶಗೊಳಿಸುತ್ತೇನೆ ‘ ಎಂದು ಆಶ್ವಾಸನೆಯಿತ್ತಿತು . ಆಗ ರಾವಣನು “ ಮಿಕ್ಕೆಲ್ಲರ ಸಾವಿನಿಂದ ನನಗೇನು ಪ್ರಯೋಜನ ? ” ಎನ್ನುತ್ತಾ ದೇವತೆಗೆ ನಮಸ್ಕರಿಸಿ , ಶಾಂತಿಜಿನಭವನವನ್ನು ಮೂರುಭಾರಿ ಪ್ರದಕ್ಷಿಣೆ ಬಂದು ಅಲ್ಲಿಂದ ಹೊರಬರುವನು .
ರಾಮ – ಲಕ್ಷ್ಮಣರನ್ನು ತಾನು ಕೊಲ್ಲಲಾಗದೆಂದು ದೇವತೆ ಹೇಳಿದ ನಂತರವೂ ರಾವಣ ಯುದ್ಧ ಸನ್ನದನಾಗುವುದು ಅವನ ವಿನಾಶಬುದ್ಧಿಮತ್ತೆಯನ್ನು ಸಂಕೇತಿಸಿದಂತಿದೆ .
೨. ಪ್ರಮದವನದಲ್ಲಿ ರಾವಣ – ಸೀತೆಯರ ನಡುವೆ ನಡೆದ ಸಂಭಾಷಣೆಯನ್ನು ವಿವರಿಸಿ
ಪ್ರಮದವನಕ್ಕೆ ಬಂದ ರಾವಣನನ್ನು ನೋಡಿದ ಸೀತೆಗೆ ಅವನ ರೂಪವು ತೃಣಸಮಾನವೆನಿಸಿತು . ರಾಮ – ಲಕ್ಷ್ಮಣರ ಬಗ್ಗೆ ಏನು ಕೆಟ್ಟ ಸುದ್ದಿ ತಂದಿರುವನೋ
ಎಂದಾಕೆ ತಲ್ಲಣಗೊಂಡಳು . ಅವಳ ಸಮೀಪಕ್ಕೆ ಬಂದ ರಾವಣನು “ ಬಹುರೂಪಿಣಿ ವಿದ್ಯೆಯು ನನಗೆ ಸಿದ್ಧಿಸಿದೆ . ಆದ್ದರಿಂದ ಈಗ ನನಗೆ ಅಸಾಧ್ಯವಾದ ಕೆಲಸವಾವುದೂ ಇಲ್ಲ . ಹಾಗಾಗಿ ನೀನು ರಾಮನ ಗೊಡವೆ ಬಿಟ್ಟು ನನ್ನನ್ನು ಒಪ್ಪಿಕೊಂಡು , ಸಾಮಾಜ್ಯ ಸುಖವನ್ನು ಅನುಭವಿಸು ” ಎಂದು ಸೊಕ್ಕಿನಿಂದ ನುಡಿದನು , ವಿಹ್ವಲಚಿತ್ತೆಯಾದ ಸೀತೆಯು , “ ನನ್ನ ಮೇಲೆ ಕರುಣೆ ತೋರುವುದಾದರೆ ದಶಕಂದರನೇ , ರಘುತನೂಜನ ಆಯುಸ್ಸು ಇರುವವರೆಗೂ ಈ ಕಡೆ ಸುಳಿಯಬೇಡ ” ಎಂದು ಹೇಳಿ , ಮೂರ್ಛತಪ್ಪಿ ಧರೆಗುರುಳಿದಳು . ಇವನ್ನು ಕಂಡ ರಾವಣನಿಗೆ ಸೀತೆಯ ಬಗ್ಗೆ ವ್ಯಾಮೋಹ ದೂರಾಗಿ , ಅನುಕಂಪ ಮೂಡಿತು .
ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಕವಿ ಹೇಗೆ ಚಿತ್ರಿಸಿದ್ದಾನೆ ? ವಿವರಿಸಿ ,
ರಾವಣನ ಮನಃಪರಿವರ್ತನೆಯು ಈ ಕಾವ್ಯಭಾಗದ ಅತ್ಯಂತ ಪ್ರಮುಖ ಘಟ್ಟವೆನ್ನಬಹುದು . ಸೀತೆಯು ಮೂರ್ಛತಪ್ಪಿ ನೆಲಕ್ಕುರುಳಿದಾಗ , ಅದನ್ನು ಕಂಡ ರಾವಣನಿಗೆ ಅವಳ ಬಗ್ಗೆ ಅನುಕಂಪ ಮೂಡಿತು .
ಮಾತ್ರವಲ್ಲ , ಸೀತೆಯ ಈ ಸ್ಥಿತಿಗೆ ತಾನೇ ಕಾರಣವೆಂದು ತನ್ನನ್ನು ತಾನೇ ಹಳಿದುಕೊಂಡನು . ಕದಡಿಹೋಗಿ ಬಗ್ಗಡಗೊಂಡಿದ್ದ ನೀರು ತನಗೆ ತಾನೇ ತಿಳಿಯಾಗಿ ನಿರ್ಮಲಗೊಳ್ಳುವಂತೆ ರಾವಣನ ಮನಸ್ಪೂ ತಿಳಿಯಾಯಿತು . ಸೀತೆಯ ಬಗೆಗೆ ಅವನಲ್ಲಿ ವೈರಾಗ್ಯ ಮೂಡಿತು . ರಾವಣನು ತನ್ನ ಉದಾತ್ತಗುಣವನ್ನು ತೋರಿದನು .
ತನಗೆ ಹತ್ತಿದ ಸಂಧ್ಯಾರಾಗವನ್ನು ಸೂರ್ಯನು ಕಳೆದುಕೊಳ್ಳುವಂತೆ , ರಾವಣನಲ್ಲಿ ಮೂಡಿದ ಕಾರುಣ್ಯರಸವು ಸೀತೆಯ ಮೇಲಿನ ಅನುರಕ್ತಿಯನ್ನು ತೊಳೆದು ಬಿಟ್ಟಿತೆಂದು ಹೇಳಿರುವ ಕವಿಯು ರಾವಣನ ಮನಃಪರಿವರ್ತನೆಯ ಸಂದರ್ಭವನ್ನು ಸೊಗಸಾಗಿ ಚಿತ್ರಿಸಿದ್ದಾನೆನ್ನಬಹುದು .
2nd puc kannada notes 1st chapter
೪. ರಾವಣನಲ್ಲಿ ಕಂಡುಬರುವ ಪಶ್ಚಾತ್ತಾಪವನ್ನು ಕವಿ ಹೇಗೆ ನಿರೂಪಿಸಿದ್ದಾನೆ ?
ಸೀತೆಯ ಬಗ್ಗೆ ರಾವಣನಲ್ಲಿ ವ್ಯಾಮೋಹ ಅಳಿದು ಕರುಣೆ ಅನುಕಂಪಗಳು ನೆಲೆಸಿದ ಮೇಲೆ ರಾವಣನ ಮನಸ್ಸು ಪರಿವರ್ತನೆಗೊಂಡು ತಾನು ಮಾಡಿದ ಸೀತಾಪಹರಣದಂತಹ ಅಕಾರ್ಯಕ್ಕಾಗಿ ಪಶ್ಚಾತ್ತಾಪ ಹೊಂದುವುದನ್ನು ಕವಿಯು ಇಲ್ಲಿ ಸೊಗಸಾಗಿ ಚಿತ್ರಿಸಿದ್ದಾನೆ .
ಪ್ರಾಣಪ್ರಿಯರಾದ ರಾಮ – ಸೀತೆಯರನ್ನು ಕರ್ಮ ವಶದ ನವದಿಂದ ಕಾಮಮೋಹಿತನಾದ ತಾನು ಅಗಲಿಸಿದೆ ಎಂದು ಆತ ಯೋಚಿಸುತ್ತಾನೆ . ಅಲ್ಲದೆ , ಅವಿವೇಕಿಯಾದ ತನ್ನಿಂದ ಕುಲದ ಪೆಂಪು ಅಳಿಯಿತೆಂದು ಪರಿತಾಪಗೊಳ್ಳು ತಾನೆ . ಕಾಮಪೀಡಿತನಾಗಿ ರಾಮನಿಂದ ಸೀತೆಯನ್ನು ಬೇರ್ಪಡಿಸಿ ಅವಳಿಗೆ ದುಃಖ ವನ್ನುಂಟುಮಾಡಿದೆನೆಂದು ಪರಿತಪಿಸುತ್ತಾನೆ .
ಕದಡಿದ ಸಲಿಲಂ ತಿಳಿವಂದದೆ notes
ತನ್ನ ಈ ಕೆಲಸದಿಂದಾಗಿ ದುರ್ಯಶಪಟಹರವ ಎಲ್ಲೆಡೆ ತುಂಬಿಕೊಂಡಿತಲ್ಲ ಎಂಬ ಪಶ್ಚಾತ್ತಾಪ ಅವನನ್ನು ಸುಡುತ್ತದೆ . ವಿಭೀಷಣ ಹಿತವನ್ನೇ ನುಡಿದರೂ ಅದಕ್ಕೆ ಕಿವಿಗೊಡದೆ , ವಿನಯವಂತನಾದ ಅವನನ್ನು ಗದರಿಸಿ ದೂರಸರಿಸಿದ ದುರ್ವ್ಯಸ ತಾನು ಎಂಬ ಪಾಪಪ್ರಜ್ಞೆಯಲ್ಲಿ ರಾವಣ ನರಳುವುದನ್ನು ನಾವು ಗಮನಿಸಬಹುದಾಗಿದೆ .
ಕದಡಿದ ಸಲಿಲಂ ತಿಳಿವಂದದೆ ‘ ಕಾವ್ಯಭಾಗದಲ್ಲಿ ಕಂಡುಬರುವ ರಾವಣನ ವ್ಯಕ್ತಿತ್ವವನ್ನು ವಿಮರ್ಶಿಸಿ ,
ನಿಮ್ಮ ಮಾತುಗಳಲ್ಲಿ ಉತ್ತರಿಸಿರಿ . ಪ್ರಸ್ತುತ ಕಾವ್ಯಭಾಗದಲ್ಲಿ ರಾವಣನು ಆರಂಭದಲ್ಲಿ ರಾಮ – ಲಕ್ಷ್ಮಣರ ವಿರುದ್ಧದ ಯುದ್ಧದಲ್ಲಿ ಗೆಲುವನ್ನು ಹೊಂದಲು ಬಹುರೂಪಿಣೀ ವಿದ್ಯೆಯನ್ನು ಒಲಿಸಿಕೊಳ್ಳುವು ದನ್ನು ನೋಡುತ್ತೇವೆ .
ರಾಮ – ಲಕ್ಷ್ಮಣರನ್ನು ತಾನು ಕೊಲ್ಲಲಾಗದೆಂದು ವಿದ್ಯಾದೇವತೆ ಹೇಳಿದ ನಂತರವೂ ಯುದ್ಧೋತ್ಸಾಹದಿಂದ ವರ್ತಿಸುವ ರಾವಣನ ವ್ಯಕ್ತಿತ್ವದ ಚಿತ್ರಣ ಈ ಭಾಗದಲ್ಲಿದೆ . ಸೀತೆಯಿದ್ದ ಪ್ರಮದವನಕ್ಕೆ ಬಂದಾಗಲೂ ಆತ ಸೀತೆಗೆ ರಾಮನನ್ನು ಮರೆತು ತನ್ನ ಸಾಮ್ರಾಜ್ಯ ಸುಖವನ್ನನುಭವಿಸಿಕೊಂಡಿರಬೇಕೆಂದೇ ಹೇಳುತ್ತಾನೆ .
ಬಹುರೂಪಿಣಿ ವಿದ್ಯೆಯ ಬಲವಿರುವುದರಿಂದ ಮೂರುಲೋಕದಲ್ಲಿಯೇ ತನಗೆ ಸರಿಸಾಟ ಯಾದ ವೀರರಿಲ್ಲ , ಪ್ರತಿಪಕ್ಷವಿಲ್ಲವೆಂದು ಆತ ಬೀಗುತ್ತಾನೆ . ಆದರೆ ಸೀತೆ ಮೂರ್ಛಗೆ ಸಂದಾಗ ಮಾತ್ರ ವ್ಯಾಮೋಹ ದೂರಾಗಿ , ಅವಳ ವಿಚಾರದಲ್ಲಿ ಅನುಕಂಪ – ಕರುಣೆಗಳು ಉಕ್ಕಿಹರಿಯುತ್ತವೆ .
ಅವನ ಉದಾತ್ತಗುಣ ಅನಾವರಣಗೊಂಡಿರುವುದು ಈ ಸಂದರ್ಭ ದಲ್ಲಿಯೇ , ತನ್ನ ತಪ್ಪಿಗಾಗಿ ಪಶ್ಚಾತ್ತಾಪದಿಂದ ಬೇಗುದಿಗೊಳ್ಳುವ ರಾವಣನ ವ್ಯಕ್ತಿತ್ವವನ್ನು ಇಲ್ಲಿ ಕವಿ ಸುಂದರವಾಗಿ ಚಿತ್ರಿಸಿದ್ದಾನೆ .
ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುವನಾದರೂ ತಕ್ಷಣವೇ ಒಪ್ಪಿಸದೆ ಯುದ್ಧದಲ್ಲಿ ರಾಮ – ಲಕ್ಷ್ಮಣರನ್ನು ಸೆರೆಹಿಡಿದು ತಂದು ವಿರಥರನ್ನಾಗಿಸಿ , ಆನಂತರವೇ ಸೀತೆಯನ್ನು ಒಪ್ಪಿಸಬೇಕೆಂದು ಆತ ಯೋಚಿಸುವಲ್ಲಿ ಅವನ ಸಾಹಸಪ್ರಿಯ ಶೌರ್ಯದ ವ್ಯಕ್ತಿತ್ವವನ್ನು ನಾವು ಮನಗಾಣಬಹುದು
ಇತರೆ ಪ್ರಮುಖ ವಿಷಯಗಳು