ಚುನಾವಣೆ ಎಂದರೇನು ಕನ್ನಡ । Chunavane Endarenu in Kannada

Chunavane in Kannada । ಚುನಾವಣೆಗಳು ಪ್ರಶ್ನೋತ್ತರಗಳು

Chunavane in Kannada, ಚುನಾವಣೆ ರಸಪ್ರಶ್ನೆ, ಚುನಾವಣೆ ಮಹತ್ವ ಪ್ರಬಂಧ, chunavana mahatva prabandha in kannada, chunavana mahatva essay in kannada, the importance of election essay in kannada, chunavane in kannada prabandha

Chunavane in Kannada

Spardhavani Telegram

ಚುನಾವಣೆ ಎಂದರೆ ಜನರು ತಮ್ಮ ರಾಜಕೀಯ ಅಭಿಪ್ರಾಯವನ್ನು ವ್ಯಕ್ತಪಡಿಸುವ ಪ್ರಕ್ರಿಯೆ. ರಾಜಕೀಯ ನಾಯಕನನ್ನು ಆಯ್ಕೆ ಮಾಡಲು ಸಾರ್ವಜನಿಕ ಮತದಾನದ ಮೂಲಕ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ .

ಚುನಾವಣೆಗಳು ಪ್ರಶ್ನೋತ್ತರಗಳು

  • ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ ಪರಿಷ್ಕರಿಸುವುದು . ಚುನಾವಣಾ ಆಯೋಗವು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಆಯುಕ್ತರನ್ನು ಒಳಗೊಂಡಿದೆ .
  • ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ .
  • ಚುನಾವಣಾ ಮುಖ್ಯ ಆಯುಕ್ತರ ಅಧಿಕಾರವಧಿಯು ಆರು ವರ್ಷಗಳು ಅಥವಾ 65 ವರ್ಷ ವಯಸ್ಸು .
  • ಚುನಾವಣಾ ಆಯುಕ್ತರ ಅಧಿಕಾರವಧಿಯು ಆರು ವರ್ಷಗಳು ಅಥವಾ 62 ವರ್ಷಗಳು .
  • ಭಾರತದ ಮೊಟ್ಟ ಮೊದಲ ಚುನಾವಣಾ ಮುಖ್ಯ ಆಯುಕ್ತರಾಗಿ ಸುಕುಮಾರ್ ಸೇನ್ ಕಾರ್ಯ ನಿರ್ವಹಿಸಿದ್ದಾರೆ.
  • ಚುನಾವಣಾ ಕ್ಷೇತ್ರಗಳ ವ್ಯಾಪ್ತಿ ಮತ್ತು ಚುನವಣಾ ಕ್ಷೇತ್ರಗಳ ಸ್ಥಾನಗಳ ಹಂಚಿಕೆಗೆ ಸಂಬಂಧಿಸಿದಂತೆ ಸಂಸತ್ ಹಾಗೂ ರಾಜ್ಯ ವಿಧಾನ ಮಂಡಲವು ಮಾಡಿದ ಕಾನೂನನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ .
  • ಭಾರತದ ಸಂವಿಧಾನದ 15 ನೇ ಭಾಗದ 324 ನೇ ವಿಧಿ ಯಿಂದ 329 ನೇ ವಿಧಿವರೆಗೆ ಚುನಾವಣೆಗಳ ಬಗ್ಗೆ ವಿವರಿಸಲಾಗಿದೆ .
  • ಭಾರತದ ಸಂವಿಧಾನ 15 ನೇ ಭಾಗದ 324 ನೇ ವಿಧಿಯಲ್ಲಿ ಕೇಂದ್ರ ಚುನಾವಣಾ ಆಯೋಗವನ್ನು ರಚಿಸಲು ಅವಕಾಶ ಕಲ್ಪಿಸಿದೆ .
  • ಚುನಾವಣಾ ಆಯೋಗವನ್ನು ಜನವರಿ .25 , 1950 ರಲ್ಲಿ ಸ್ಥಾಪಿಸಲಾಯಿತು .
  • ಕೇಂದ್ರ ಚುನಾವಣಾ ಆಯೋಗದ ಕೇಂದ್ರ ಕಛೇರಿ ನವದೆಹಲಿಯಲ್ಲಿದೆ .
  • ಕೇಂದ್ರ ಚುನಾವಣಾ ಆಯೋಗದ ಕೇಂದ್ರ ಕಛೇರಿ ಹೆಸರು “ ನಿರ್ವಾಚನ ಸದನ ”
  • ಕೇಂದ್ರ ಚುನಾವಣಾ ಆಯೋಗವು ಸಂಸತ್ತಿಗೆ , ರಾಜ್ಯಶಾಸಕಾಂಗಗಳಿಗೆ , ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳಿಗೆ ಚುನಾವಣೆ ನಡೆಸುವುದು
  • ಚುನಾವಣಾ ಆಯೋಗವು 2010 ರಂದು 60 ವರ್ಷಗಳನ್ನು ಪೂರೈಸಿ ವಜ್ರ ಮಹೋತ್ಸವವನ್ನು ಆಚರಿಸಿಕೊಂಡಿತು .
  • ಚುನಾವಣಾ ಆಯೋಗವು ವಜ್ರ ಮಹೋತ್ಸವ ಸಂದರ್ಭದಲ್ಲಿ ಚುನಾವಣ ಆಯೋಗದ ಸವಿನೆನಪಿಗಾಗಿ ಅಂ ಚೀಟಿಯನ್ನು ಹೊರ ತಂದಿತು . ಈ ಸಂದರ್ಭದಲ್ಲಿ “ Lok sabha Election- 2009 – Reinforcing indian Democracy ಎಂಬ ಗ್ರಂಥವನ್ನು ಬಿಡುಗಡೆ ಮಾಡಿತು .
Chunavane in Kannada । ಚುನಾವಣೆಗಳು ಪ್ರಶ್ನೋತ್ತರಗಳು
Chunavane Endarenu in Kannada
  • ರಾಜ್ಯಗಳಲ್ಲಿ ಲೋಕಸಭೆ ಮತ್ತು ವಿಧಾನ ಸಭೆ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಲು ರಾಷ್ಟ್ರಪತಿಗಳು ಚುನಾವಣಾ ಆಯೋಗದೊಂದಿಗೆ ಸಮಾಲೋಚಿಸಿ ಪ್ರಾದೇಶಿಕ ಕಮೀಷನರ್‌ನ್ನು ನೇಮಕ ಮಾಡುತ್ತಾರೆ.
  • ಚುನಾವಣಾ ಆಯೋಗವು ಸಂಸತ್ ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆಗಳನ್ನು 1950-1951ನೇ ಪ್ರಜಾಪ್ರತಿನಿಧಿ ಕಾಯ್ದೆಯನ್ನು ಆಧರಿಸಿ ನಡೆಸುತ್ತದೆ .
  • ಚುನಾವಣೆಗಳಲ್ಲಿ ಸೋತ ವ್ಯಕ್ತಿಯು ಠೇವಣಿ ಪಡೆಯಬೇಕಾದರೆ ಯೋಗ್ಯ ಮತಗಳ 1 / 6 ಗಿಂತ ಹೆಚ್ಚು ಮತ ಪಡೆದಿರಬೇಕು .
  • ಚುನಾವಣಾ ಆಯುಕ್ತರು ಸುಪ್ರೀಂಕೋರ್ಟಿನ ನ್ಯಾಯಾಧೀಶರ ಸಮಾನವಾದ ವೇತನ ಮತ್ತು ಸವಲತ್ತುಗಳನ್ನು ಪಡೆಯುತ್ತಾರೆ .
  • ಚುನಾವಣಾ ಮುಖ್ಯ ಆಯುಕ್ತರನ್ನು ಹುದ್ದೆಯಿಂದ ಕೆಳಗಿಳಿಸಲು ಸುಪ್ರೀಂಕೋರ್ಟಿನ ನ್ಯಾಯಾಧೀಶರನ್ನು ಕೆಳಗಿಳಿಸುವ ವಿಧಾನವನ್ನು ಅನುಸರಿಸುತ್ತಾರೆ .

Chunavane Endarenu in Kannada

FAQ

ಸಾರ್ವತ್ರಿಕ ಚುನಾವಣೆ ಎಂದರೇನು?

ಚುನಾವಣೆ ಎಂದರೆ “ಮತದಾರರು ತಮ್ಮನ್ನಾಳುವ ಪ್ರತಿನಿಧಿಯನ್ನು ತಾವೇ ಆಯ್ಕೆ ಮಾಡುವ ವಿಧಾನವನ್ನೆ ಚುನಾವಣೆ” ಎನ್ನುತ್ತೇವೆ.

ಚುನಾವಣೆ ಪದದ ಮೂಲ ಪದ ಯಾವುದು?

ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}

ಚುನಾವಣೆ ಮಹತ್ವ ಪ್ರಬಂಧ

ಇತರೆ ಪ್ರಶ್ನೋತ್ತರಗಳು
  1. ಚುನಾವಣೆ ಪದದ ಮೂಲ ಪದ ಯಾವುದು?
    ಉ: ಚುನಾವಣೆ ಪದದ ಮೂಲ ಪದ ಎಲಿಗೆರೆ{eligere}
  2. ಚುನಾವಣೆ ಎಂದರೇನು?
    ಉ: ಮತದಾರರು ಮತ ನೀಡುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಗೆ ಚುನಾವಣೆ ಎನ್ನುವರು.
  3. ಸಾರ್ವತ್ರಿಕ ಚುನಾವಣೆ ಎಂದರೇನು?
    ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕೆ ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ಸಾರ್ವತ್ರಿಕ ಚುನಾವಣೆ ಎನ್ನುವರು.
  4. ಉಪ ಚುನಾವಣೆ ಎಂದರೇನು?ಉದಾಹರಣೆ ನೀಡಿ?
    ಉ: ಒಬ್ಬ ಚುನಾಯಿತ ಪ್ರತಿನಿಧಿಯ ರಾಜೀನಾಮೆ,ಮರಣ ಅಥವ ಅನರ್ಹತೆಯಿಂದ ತೆರವಾಗುವ ಸ್ಥಾನಕ್ಕೆ ಆರು ತಿಂಗಳೊಳಗೆ ಜರುಗುವ ಚುನಾವಣೆಗೆ ಉಪ ಚುನಾವಣೆ ಎನ್ನುವರು.
  5. ಮರು ಚುನಾವಣೆ ಎಂದರೇನು?
    ಉ: ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತಗಟ್ಟೆಯ ವಶ, ಮತ ಯಂತ್ರದಲ್ಲಿನ ತೊಂದರೆ, ಮತ ಪಟ್ಟಿಯಲ್ಲಿನ ದೋಷಗಳಿಂದ ನಿರ್ದಿಷ್ಟ ಮತಗಟ್ಟೆಯ ಚುನಾವಣೆಯನ್ನು ಮುಂದೂಡಿ ನಡೆಸಲಾಗುವ ಚುನಾವಣೆಗೆ ಮರು ಚುನಾವಣೆ ಎನ್ನುವರು.
  6. ಮಧ್ಯಂತರ ಚುನಾವಣೆ ಎಂದರೇನು?
    ಉ: ದೇಶದ ಅರ್ಹ ಪ್ರಜೆಗಳು ಯಾವುದೇ ತಾರತಮ್ಯವಿಲ್ಲದೆ ನಿಗದಿತ ಕಾಲಕ್ಕಿಂತ ಮೊದಲೇ ಜರುಗುವ ಚುನಾವಣೆಯಲ್ಲಿ ಮತ ನೀಡುವುದನ್ನು ಮಧ್ಯಂತರ ಚುನಾವಣೆ ಎನ್ನುವರು.ಉದಾ:2004ರಲ್ಲಿ ಐದು ವರ್ಷ ಅವಧಿ ಮುಗಿಯುವುದಕ್ಕಿಂತ ಮೊದಲೇ ಜರುಗಿದ ಲೋಕಸಭೆಯ ಚುನಾವಣೆಗಳು.

Chunavane Endarenu in Kannada

ಚುನಾವಣೆ ಮಹತ್ವ ಪ್ರಬಂಧ
ಚುನಾವಣೆ ಮಹತ್ವ ಪ್ರಬಂಧ
  1. ಪ್ರತ್ಯಕ್ಷ ಚುನಾವಣೆ ಎಂದರೇನು?
    ಉ: ಮತದಾರರು ಮಧ್ಯವರ್ತಿಗಳ ನೆರವಿಲ್ಲದೆ ತಾವೇ ನೇರವಾಗಿ ಮತ ನೀಡುವ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದಕ್ಕೆ ಪ್ರತ್ಯಕ್ಷ ಚುನಾವಣೆ ಎನ್ನುವರು.
  2. ಪ್ರತ್ಯಕ್ಷ ಚುನಾವಣೆಗೆ ಉದಾಹರಣೆ ಕೊಡಿ.
    ಉ: ಭಾರತದಲ್ಲಿನ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳು.
  3. ಪರೋಕ್ಷ ಚುನಾವಣೆ ಎಂದರೇನು?
    ಉ: ದ್ದೇಶದ ಮುಖ್ಯಸ್ಥ ಜನರಿಂದ ನೇರವಾಗಿ ಮತ ಪಡೆಯದೇ ಜನರ ಪ್ರತಿನಿಧಿಗಳಿಂದ ಮತ ಪಡೆಯುವುದನ್ನು ಪರೋಕ್ಷ ಚುನಾವಣೆ ಎನ್ನುವರು.
  4. ಪರೋಕ್ಷ ಚುನಾವಣೆಗೆ ಉದಾಹರಣೆ ಕೊಡಿ.
    ಉ: ರಾಷ್ಟ್ರಪತಿ ಚುನಾವಣೆ ಮತ್ತು ವಿಧಾನ ಪರಿಷತ್ ಚುನಾವಣೆ.

ಇತರೆ ವಿಷಯಗಳು

Related Tags:

Chunavane Endarenu in Kannada, ಚುನಾವಣೆ ಎಂದರೇನು, ಮತದಾನದ ಹಕ್ಕನ್ನು ಚಲಾಯಿಸುವ ಬಗ್ಗೆ ಜಾಗೃತಿ, Chunavana information in kannada, ಚುನಾವಣೆ ಮಹತ್ವ ಪ್ರಬಂಧ, chunavana mahatva essay in kannada, the importance of election essay in kannada, chunavana mahatva prabandha in kannada

Leave a Reply

Your email address will not be published. Required fields are marked *