National Anthem in Kannada | ಭಾರತದ ರಾಷ್ಟ್ರಗೀತೆ

national anthem in kannada | ಭಾರತದ ರಾಷ್ಟ್ರಗೀತೆ

National Anthem in Kannada, Rashtrageethe in Kannada, ಭಾರತದ ರಾಷ್ಟ್ರಗೀತೆ, Rashtrageethe in Kannada, indian national anthem lyrics in kannada

National Anthem in Kannada

Spardhavani Telegram

ರಾಷ್ಟ್ರಗೀತೆಯನ್ನು ಬರೆದವರು ಯಾರು ?

ನೊಬೆಲ್ ಪ್ರಶಸ್ತಿ ವಿಜೇತ ಕವಿ ರವೀಂದ್ರನಾಥ ಠಾಗೋರ್

ರಾಷ್ಟ್ರಗೀತೆಯನ್ನು ಅಂಗೀಕರಿಸಿದ್ದು ಯಾವಾಗ ?

ರಾಷ್ಟ್ರಗೀತೆಯನ್ನು ಜನವರಿ 24, 1950 ರಲ್ಲಿ ಭಾರತ ಸರಕಾರವು ರಾಷ್ಟ್ರಗೀತೆ ಎಂದು ಘೋಷಿಸಿತು.

ರಾಷ್ಟ್ರಗೀತೆ ಯಾವ ಭಾಷೆಯಲ್ಲಿದೆ?

ಸಂಸ್ಕೃತ ಮಿಶ್ರಿತ ಬಂಗಾಳಿಯಲ್ಲಿ ಬರೆದ ಬ್ರಹ್ಮೋ ಮಂತ್ರದ ಮೊದಲ 5 ಪ್ಯಾರಾಗಳನ್ನೇ ನಾವೀಗ ಹಾಡುತ್ತಿರುವುದು.

ರಾಷ್ಟ್ರಗೀತೆಯನ್ನು ಎಷ್ಟು ಸೆಕೆಂಡ್ ಒಳಗೆ ಹಾಡಿ ಮುಗಿಸಬೇಕು ?

ರಾಷ್ಟ್ರಗೀತೆಯನ್ನು ರಾಷ್ಟ್ರ ದ್ವಜ ವನ್ನು ಹಾರಿಸಿದ ನಂತರ ೫೨ ಸೆಕೆಂಡುಗಳಿಗೆ ಮೀರದಂತೆ ಹಾಡಿ ಮುಗಿಸಬೇಕು

National Anthem in Kannada | ಭಾರತದ ರಾಷ್ಟ್ರಗೀತೆ
Kannada National Anthem

ಕನ್ನಡದಲ್ಲಿ “ಜನ ಗಣ ಮನ”
ಜನಗಣಮನ-ಅಧಿನಾಯಕ ಜಯ ಹೇ
ಭಾರತ ಭಾಗ್ಯ ವಿಧಾತಾ!

ಪಂಜಾಬ ಸಿಂಧು ಗುಜರಾತ ಮರಾಠಾ

ದ್ರಾವಿಡ ಉತ್ಕಲ ಬಂಗ

ವಿಂಧ್ಯ ಹಿಮಾಚಲ ಯಮುನಾ ಗಂಗಾ

ಉಚ್ಛಲ ಜಲಧಿತರಂಗ

ತವ ಶುಭ ನಾಮೇ ಜಾಗೇ,

ತವ ಶುಭ ಆಶಿಷ ಮಾಗೇ,

ಗಾಹೇ ತವ ಜಯಗಾಥಾ.

ಜನಗಣಮಂಗಳದಾಯಕ ಜಯ ಹೇ

ಭಾರತ ಭಾಗ್ಯ ವಿಧಾತಾ!

ಜಯ ಹೇ, ಜಯ ಹೇ, ಜಯ ಹೇ, ಜಯ ಜಯ ಜಯ ಜಯ ಹೇ

national anthem in kannada | ಭಾರತದ ರಾಷ್ಟ್ರಗೀತೆ
national anthem in kannada

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶದಲ್ಲಿರುವ ವಿವರ

ರವೀಂದ್ರನಾಥ ಠಾಕೂರ್ ಅವರು ೧೯೧೧ ರಲ್ಲಿ ಬಂಗಾಲಿ ಭಾಷೆಯಲ್ಲಿ ರಚಿಸಿದ ದೀರ್ಘಗೀತೆಯ ಐದುಪದ್ಯಗಳಲ್ಲಿ ಮೊದಲ ಪದ್ಯದ ಸಾಲುಗಳನ್ನು ಮಾತ್ರ ಆಯ್ದಕೊಂಡು ಈ ರಾಷ್ಟ್ರಗೀತೆಯನ್ನು ರೂಪಿಸಲಾಯಿತು.

ಸ್ವತಂತ್ರ ಭಾರತದ ಸಂವಿಧಾನ ರಚನಾಸಭೆ ೧೯೫೦ ಜನವರಿ ೨೪ರಂದು ಇದನ್ನು ರಾಷ್ಟ್ರಗೀತೆ ಎಂದು ಅಂಗೀಕರಿಸಿತು.

ರವೀಂದ್ರನಾಥ್ ಠಾಕೂರ್ ಸಂಪಾದಕರಾಗಿದ್ದ ತತ್ತ್ವಬೋಧಿನಿ ಪತ್ರಿಕಾ ಎಂಬ ಪತ್ರಿಕೆಯಲ್ಲಿ ಇದು ೧೯೧೨ ರಲ್ಲಿ ಮೊದಲಿಗೆ ಪ್ರಕಟವಾಗಿತ್ತು. ಪ್ರಕಟಣೆಗೆ ಮೊದಲು ಈ ಗೀತೆಯನ್ನು ೨೭ ಡಿಸೆಂಬರ್ ೧೯೧೧ ರಂದು ಕಲ್ಕತ್ತದಲ್ಲಿ ನೆರೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗಿತ್ತು. ಠಾಕೂರ್ ಅವರು ಇದನ್ನು ‘ಮಾರ್ನಿಂಗ್ ಸಾಂಗ್ ಆಫ್ ಇಂಡಿಯಾ ಎಂಬ ಹೆಸರಿನಲ್ಲಿ ೧೯೧೯ ರಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದರು.

ಇದು ಭಾರತ ಇಬ್ಬಾಗವಾಗುವುದಕ್ಕೆ ಮೊದಲು ಬರೆದ ಗೀತೆಯಾದರೂ ಇದರಲ್ಲಿ ಬರುವ ರಾಷ್ಟ್ರದ ವಿವಿಧ ಪ್ರದೇಶಗಳ ಹೆಸರುಗಳನ್ನು ಬದಲಾಯಿಸಿಲ್ಲ; ಈ ಹೆಸರುಗಳು ವಿವಿಧ ಭಾರತೀಯ ಜನಾಂಗಗಳನ್ನು ಸೂಚಿಸುತ್ತವೆ.

ಹಾಗಾಗಿ ಈ ಗೀತೆಯನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಿದಾಗ ಮೂಲಗೀತೆಯಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಯಥಾವತ್ತಾಗಿ ಉಳಿಸಿಕೊಳ್ಳಲಾಯಿತು. ರಾಷ್ಟ್ರಗೀತೆಗೆ ಗೌರವಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

ಅಗೌರವ ಸೂಚಿಸುವುದು, ಅದರ ಹಾಡುವಿಕೆಗೆ ಅಡ್ಡಿಪಡಿಸುವುದು ಶಾಸನದ ಪ್ರಕಾರ ಶಿಕ್ಷಾರ್ಹ ಅಪರಾಧ. ವೈವಿಧ್ಯದಲ್ಲಿ ಏಕತೆ ಭಾರತೀಯ ಸಂಸ್ಕ್ರತಿಯ ವೈಶಿಷ್ಟ್ಯ ಎಂಬುದಕ್ಕೆ ಈ ಗೀತೆ ಸಂಕೇತವಾಗಿದೆ. ಗೀತೆಯನ್ನು ಹಾಡಲು ಬೇಕಾಗುವ ಕಾಲಾವಧಿ ಸುಮಾರು 52 ಸೆಕೆಂಡುಗಳು.

ಇವುಗಳನ್ನು ಓದಿ

ನಮ್ಮ ದೇಶ ಭಾರತ

ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಹೀಗಿರಲಿ

ಸ್ವಾತಂತ್ರ್ಯ ದಿನಾಚರಣೆಗೆ ಸಂಬಂದಿಸಿದ ಪ್ರಶ್ನೋತ್ತರಗಳು

Leave a Reply

Your email address will not be published. Required fields are marked *