shatpadi in kannada | ಷಟ್ಪದಿ – ಕನ್ನಡ ವ್ಯಾಕರಣ

shatpadi in kannada

shatpadi in kannada

shatpadi in kannada | ಷಟ್ಪದಿ – ಕನ್ನಡ ವ್ಯಾಕರಣ, ಷಟ್ಪದಿ ಎಂದರೇನು?, ಷಟ್ಪದಿ ಪ್ರಕಾರಗಳು ಎಷ್ಟು, kannada shatpadi, ಷಟ್ಪದಿಗಳು – ಕನ್ನಡ ವ್ಯಾಕರಣ, FDA,SDA

ಕನ್ನಡ ವ್ಯಾಕರಣ

ಷಟ್ಪದಿ ಎಂಬುದು ಛಂದಸ್ಸಿನ ಒಂದು ಪ್ರಕಾರ. ಪದ್ಯವೊಂದರಲ್ಲಿ ಆರು ಪಾದಗಳಿದ್ದರೆ ಅದು ಷಟ್ಪದಿ ಎನಿಸುತ್ತದೆ. ಪಾದಗಳ ಗಣ/ಮಾತ್ರಾ/ಅಕ್ಷರ ವಿನ್ಯಾಸಗಳನ್ನು ಹಿಡಿದು ಬೇರೆ ಬೇರೆ ರೀತಿಯ ಷಟ್ಪದಿಗಳಿವೆ.
ಆರು ಪಾದಗಳುಳ್ಳ ಪದ್ಯವು ಷಟ್ಪದಿಯೆನಿಸಿಕೊಳ್ಳುತ್ತದೆ. ಇದರ ೧, ೨, ೪ ಮತ್ತು ೫ನೇ ಪಾದಗಳು ಪರಸ್ಪರ ಸಮನಾಗಿರುತ್ತದೆ. ೩ನೆಯ ಮತ್ತು ೬ನೆಯ ಪಾದಗಳು ಪರಸ್ಪರ ಸಮನಾಗಿರುತ್ತವೆ. ೩ನೆಯ ಪಾದವು ೧ನೆಯ ಪಾದದ ಒಂದೂವರೆಯಷ್ಟಿದ್ದು, ಕೊನೆಯಲ್ಲಿ ಒಂದು ಗುರುವಿನಿಂದ ಕೂಡಿರುತ್ತದೆ. ಉದ್ದಂಡ ಷಟ್ಪದಿ ಎಲ್ಲಾ ಷಟ್ಪದಿಗಳಿಂದ ಬೇರೆಯಾಗಿದೆ.
ಷಟ್ಟದಿ ಮೊಟ್ಟಮೊದಲು ಕಾಣಬರುವುದು ಚಂದ್ರರಾಜನ ‘ ಮದನ ತಿಲಕದಲ್ಲಿ ” ( ಕಾಲ 11 ನೇ ಶತಮಾನ ) ಅನಂತರ ಬೇರೆ ಬೇರೆ ಶಾಸನಗಳಲ್ಲಿ ಷಟ್ಟದಿ ಕಾಣಬರುತ್ತದೆ .
ಶಾಸನ , ಚಡಚಣ ಶಾಸನ , ಅಮ್ಮಿನಭಾವಿ ಶಾಸನ , ಉದಾ : ಚಿತ್ರದುರ್ಗ ಗಂಗಾಪುರ ಶಾಸನ , ಇತ್ಯಾದಿ .
ಷಟ್ಟದಿಯು ಕರ್ನಾಟಕ ವಿಷಯ ಜಾತಿಯ  ಛಂದಸ್ಸು ಗಳಲ್ಲೆಲ್ಲಾ ಅತ್ಯಂತ ಪ್ರಸಿದ್ಧವಾದದ್ದು .  ಇದರ ಲಕ್ಷಣವನ್ನು ಮೊದಲು ನಾಗವರ್ಮನು ತನ್ನ ಗ್ರಂಥವಾದ ಛಂದೋಬುದಿ ಯಲ್ಲಿ   ಹೇಳುತ್ತಾನೆ .
ಇವನಲ್ಲದೆ ಜಯಕೀರ್ತಿ , ಶಾರ್ಙ್ಗದೇವ ಮೊದಲಾದವರು ಷಟ್ನದಿಯ ಪ್ರಸ್ತಾಪ ಮಾಡುತ್ತಾರೆ .
ಷಟ್ನದಿಯ ಮೂಲದಲ್ಲಿ ಇದ್ದದ್ದು ಒಂದೇ ಒಂದು . ಅಂಶಗಳ ಆಧಾರದ ಮೇಲೆ ರಚನೆಯಾದಂಥದ್ದು .

ಅಂಶ ಷಟ್ಟದಿ : –

ಇದರಲ್ಲಿ ಒಟ್ಟು 6 ಚರಣಗಳಿ ರುತ್ತವೆ . ಪೂರ್ವಾಧದಂತೆಯೇ ಉತ್ತಾರಾರ್ಧವೂ ಇರುತ್ತವೆ . ಮೊದಲ ಅರ್ಧದ ಚರಣಗಳಲ್ಲಿ ಮೊದಲಿಂದ ಕ್ರಮವಾಗಿ 6 ಚರಣಗಳು ಇದ್ದು 3 ನೇ ಚರಣದಲ್ಲಿ ಕೊನೆಯಲ್ಲಿ ಒಂದು ರುದ್ರ ಗಣವೂ ಸೇರಿ ಒಟ್ಟು ಏಳು ಗಣಗಳಿರುತ್ತವೆ.ಇದೇ ನಿಯಮ ಉಳಿದ ಅರ್ಧಪದ್ಯಕ್ಕೂ ಅನ್ವಯವಾಗುತ್ತದೆ .
shatpadi in kannada
shatpadi in kannada

ಉದಾ :

ಅದುಪರ ಮಾಸ್ಪದ = ವಿವಿ
ಮದುಮುಣ್ಯ ಸಂಪದ = ವಿವಿ
ಮದು ಮಹಾಭ್ಯುದಯ ವಿಲಾಸವಾಸಂ = ವಿವಿರು
ಅದು ದಿವ್ಯಮದು ಸೇವ್ಯ = ವಿವಿ
ಮದು ಸಾಮ್ಯ ಮದು ರಮ್ಯ = ವಿವಿ
ಮದು ಸುಖಾಧಾರ ಸಂಸಾರ ಸಾರಂ = ವಿವಿರು
ಅಂಶಗಣಾನ್ವಿತವಾದ ಮೂಲ ಷಟ್ಟದಿ 12 ನೇಯ ಶತಮಾನದಲ್ಲಿ ಮಾತ್ರಾಗಣಗಳಾಗಿ ಪರಿವರ್ತಿತವಾದುದೇ ಅಲ್ಲದೆ ಆರು ಷಟ್ಟದಿಗಳಾಗಿ ಕವಲೊಡೆಯಿತು .
ಈ ಆರು ಷಟ್ಟದಿಗಳ ಲ್ಲದೆ ರಾಘವಾಂಕನು ತನ್ನ ‘ ವೀರೇಶ ಚರಿತೆ’ಯಲ್ಲಿ ‘ ಉದ್ದಂಡ ಷಟ್ಟದಿ’ಯೊಂದನ್ನು ಬಳಸಿದ್ದಾನೆ .

ಆರು ಷಟ್ಟದಿಗಳೆಂದರೆ :

1 ) ಶರ ಷಟ್ನದಿ
2 ) ಕುಸುಮ ಷಟ್ಟದಿ
3 ) ಭೋಗ ಷಟ್ಟದಿ
4 ) ಭಾಮಿನೀ ಷಟ್ಟದಿ
5 ) ಪರಿವರ್ಧಿನಿ ಷಟ್ನದಿ
6 ) ವಾರ್ಧಕ ಷಟ್ನದಿ

Leave a Reply

Your email address will not be published.