ರಾಷ್ಟ್ರೀಯ ಭಾವೈಕ್ಯತೆ | Rashtriya Bhavaikyate Essay in Kannada

Rashtriya Bhavaikyate prabandha in Kannada Best No1 information

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ , rashtriya bhavaikyate prabandha in kannada , rashtriya bhavaikyate essay in kannada , rashtriya bhavaikyate in kannada language

ರಾಷ್ಟ್ರೀಯ ಭಾವೈಕ್ಯತೆ Rashtriya Bhavaikyate

Spardhavani Telegram

ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಭಾವೈಕ್ಯತೆ ನಮ್ಮ ಭಾರತದಲ್ಲಿ ರಾಷ್ಟ್ರೀಯ ಭಾವೈಕ್ಯತೆ ಎಂಬುದು ಇಂದು ಹಿಂದೆಂದಿಗಿಂತಲೂ ಹೆಚ್ಚು ಹೆಚ್ಚಾಗಿ ಪ್ರಸ್ತಾಪವಾಗುತ್ತಿರುವ ಸಂಗತಿಯಾಗಿರುವುದು .

ಅದಕ್ಕೆ ಮುಖ್ಯ ಕಾರಣ ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಭಾವೈಕ್ಯತೆ ಕುಂಠಿತಗೊಳ್ಳುತ್ತಿದೆಯೇನೋ ಎಂಬ ರೀತಿಯಲ್ಲಿ ಪರಿಸ್ಥಿತಿ ಕಂಡುಬರುತ್ತಿರುವುದೇ ಆಗಿದೆ .

ಅಲ್ಲಲ್ಲಿ ಆಗಾಗ್ಯೆ ಕೋಮು ಗಲಭೆಗಳು , ಜಾತಿ , ಮತ , ಪಂಥ , ಪಂಗಡ , ಪಕ್ಷ ಭಾಷೆ , ಪ್ರಾಂತ್ಯ , ಪ್ರತ್ಯೇಕ ರಾಜ್ಯ , ರಾಷ್ಟ್ರಗಳ ಹೆಸರಿನಲ್ಲಿ ಸಮಾಜ ಘಾತುಕ ಕುಕೃತ್ಯಗಳು , ರಾಷ್ಟ್ರದ್ರೋಹಿ ಚಟುವಟಿಕೆಗಳು , ಹಿಂಸೆ , ಕ್ರೌರ್ಯ , ನಕ್ಸಲೈಟ್ ಚಟುವಟಿಕೆಗಳು , ಭಯೋತ್ಪಾದಕ ಚಟುವಟಿಕೆಗಳು ಮುಂತಾದವು ಸಂಭವಿಸಿರುವುದೇ ಕಾರಣವಾಗಿರುವುದು .

ಸಾಮಾನ್ಯವಾಗಿ ಒಂದು ರಾಷ್ಟ್ರವು ಭಾವನಾತ್ಮಕವಾಗಿ ಐಕ್ಯತೆಯಿಂದಿರುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

ಒಂದು ರಾಷ್ಟ್ರವು ಅನೇಕತೆಯಲ್ಲಿ ಏಕತೆಯನ್ನು ಸಾಧಿ ಸುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

ಒಂದು ರಾಷ್ಟ್ರವು ಸಾಮಜಿಕವಾಗಿ , ರಾಜಕೀಯವಾಗಿ , ಆರ್ಥಿಕವಾಗಿ , ಸಾಂಸ್ಕೃತಿಕವಾಗಿ ಏಕತೆಯನ್ನು ಸಾಧಿಸುವುದನ್ನು ರಾಷ್ಟ್ರೀಯ ಭಾವೈಕ್ಯತೆ ಎನ್ನುತ್ತೇವೆ .

file7ecpk970qkpyiuwgkor1612427283
ರಾಷ್ಟ್ರೀಯ ಭಾವೈಕ್ಯತೆ

ರಾಷ್ಟ್ರೀಯ ಭಾವೈಕ್ಯತೆಯ ಅರ್ಥ

ವಿವಿಧತೆಯಲ್ಲಿ ಏಕತೆ ಕಂಡ ದೇಶ ನಮ್ಮ ಭಾರತ , ವಿವಿಧ ತರಹದ ಸಂಸ್ಕೃತಿ ಗಳಿದ್ದು ಮತಗಳಿಂದ ಆದರೆ ಆ ಸ್ಥಳ ವಿವಿಧತೆಯಲ್ಲಿ ಏಕತೆ ; ನಾವೆಲ್ಲ ಭಾರತಿಯರು , ಭಾರತ ಮಕ್ಕಳೆಂಬ ಒಂದು ಬಾಂಧವ್ಯ ನಮ್ಮಲ್ಲಿ ಇದೆ.ಇದು ನಮ್ಮ ರಾಷ್ಟ್ರದ ರಾಷ್ಟ್ರೀಯ ಭಾವೈಕ್ಯತೆಯಾಗಿದೆ .

ಭಾರತ ವಿಶಾಲವಾದ ರಾಷ್ಟ್ರವಾಗಿದೆ ಮತ್ತು ವಿಶಿಷ್ಟ ಸಂವಿಧಾನ ಹೊಂದಿದೆ ಈ ಸಂವಿಧಾನದ ದೃಷ್ಟಿಯಲ್ಲಿ ಬಡವ – ಬಲ್ಲಿದ ಎಲ್ಲರೂ ಸಮಾನರು.

ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಲಿಂಗ , ಜಾತಿ , ಭಾಷೆ , ಪ್ರಾಂತ , ಧರ್ಮ ಆಹಾರ , ಉಡುಗೆ – ತೊಡುಗೆ , ರೀತಿ – ನೀತಿ , ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ತಿಳಿಸುವುದೇ ರಾಷ್ಟ್ರೀಯ ಭಾವೈಕ್ಯತೆಯಾಗಿದೆ .

ವಿಷಯ ನಿರೂಪಣೆ:-

ಭಾರತವು ವಿವಿಧ ಧರ್ಮ , ಭಾಷೆ ಬುಡಕಟ್ಟು ಜನಾಂಗಗಳನ್ನು ಹೊಂದಿದ್ದು ದೇಶದ ಯಾವುದೇ ಮೂಲೆಗೆಹೋದರೂ ಅಲ್ಲಿ ವೈವಿಧ್ಯತೆಯನ್ನು ಕಾಣುತ್ತೇವೆ .

ಏಕೆಂದರೆ ಭಾರತೀಯ ನಾಗರಿಕತೆಯು ಯಾವಾಗಲು ಧಾರ್ಮಿಕ ಹಾಗೂ ನೈತಿಕ ತಳಹದಿಯ ಮೇಲೆ ಚಲಿಸುತ್ತದೆ.

ದೇಶದ ಎಲ್ಲ ಭಾಗಗಳಲ್ಲಿಯೂ ಸಾಂಸ್ಕೃತಿಕ ಮತ್ತು ಜೀವನ ಮಾರ್ಗದ ಒಗ್ಗಟ್ಟು ಹಾಗೂ ದೃಷ್ಟಿಕೋನವು ಧರ್ಮ , ನಂಬಿಕೆ ಮತ್ತು ಆಚರಣೆಗಳಲ್ಲಿ ವಿಶಾಲ ವೈವಿಧ್ಯತೆಯನ್ನು ಹೊಂದಿದೆ.

ಆದರೂ ನಮ್ಮಲ್ಲಿ ನಾವು ಭಾರತಿಯರು ಎಂಬ ಬಲವಾದ ಬೇರಿದೆ .

ನಮ್ಮ ದೇಶದ ರಾಷ್ಟ್ರಗೀತೆ ರಾಷ್ಟ್ರ ಭಾಷೆ , ರಾಷ್ಟ್ರಮುದ್ರೆ ಇವು ನಮ್ಮ ಏಕತೆಯ ಸಂಕೇತಗಳಾಗಿದೆ.

ಅಲ್ಲದೇ ವಂದೇ ಮಾತರಂ , ಸಾರೇ ಜಹಾಂಸೆ ಅಚ್ಚಾ , ಜನಗಣಮನ ಅಧಿನಾಯಕ ದಂತಹ ದೇಶ ಭಕ್ತಿಗೀತೆಗಳು ನಮ್ಮಲ್ಲಿ ದೇಶಪ್ರೇಮ , ದೇಶಾಭಿಮಾನವನ್ನು ಹುಟ್ಟಿಸುತ್ತವೆ .

ಇಡೀ ದೇಶವೇ ವೈವಿದ್ಯಮಯದ ಸಂಸ್ಕೃತಿಕ ಆಚರಣೆಯಲ್ಲಿರುವಾಗ ನಾವು ಒಂದೇ ಮನೆಯವರಂತೆ ಕೂಡಿ ಬಾಳುತ್ತಿರುವುದು ಇಡೀ ಜಗತ್ತಿಗೆ ಮಾದರಿಯಾಗಿದೆ ಎಂದು ಹೇಳಬಹುದು .

download 2 2

ರಾಷ್ಟ್ರೀಯ ಬಾವೈಕ್ಯತೆ ಮೂಡಿಸುವ ಅಂಶಗಳು

ರಾಷ್ಟ್ರೀಯ ಭಾವೈಕ್ಯತೆ ಮೂಡಿಸುವ ಹಬ್ಬಗಳು :

೧ ) ಸ್ವತಂತ್ರ ದಿನಾಚರಣೆ .

೨ ) ಗಾಂಧಿ ಜಯಂತಿ

೩ ) ಗಣರಾಜ್ಯೋತ್ಸವ್ವ

೪ ) ಕರ್ನಾಟಕ ರಾಜ್ಯೋತ್ಸವ

೫ ) ಮಕ್ಕಳ ದಿನಾಚರಣೆ

೬ ) ಶಿಕ್ಷಕರ ದಿನಾಚರಣೆ

ಸಾಂಸ್ಕೃತಿಕ ಕಾರ್ಯಕ್ರಮಗಳು :

೧ ) ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳು

೨ ) ಭಾರತೀಯ ಸಾಂಸ್ಕೃತಿಕ ಉತ್ಸವ

೩ ) ರಾಷ್ಟ್ರೀಯ ವಿಕಾಸ ಕಾರ್ಯಕ್ರಮಗಳು

೪ ) ಪುಥಳಿ ಸ್ಥಾಪನೆ ಮತ್ತು ಜಯಂತಿ ಆಚರಣೆಗಳು

೫ ) ಜನಜಾಗೃತಿ ಸಮ್ಮೇಳನಗಳು

೬ ) ರಾಷ್ಟ್ರಪ್ರೇಮ ಬೆಳೆಸುವ ಕಾರ್ಯಕ್ರಮಗಳು

ರಾಷ್ಟ್ರೀಯ ಕ್ರೀಡೆಗಳು :

ಹಾಕಿ ನಮ್ಮ ದೇಶದ ರಾಷ್ಟ್ರೀಯ ಕ್ರೀಡೆಯಾಗಿದೆ .

ಭಾರತದ ಹಾಕಿ ಮಾಂತ್ರಿಕ ಧ್ಯಾನಚಂದ , ಇವರ ಹುಟ್ಟಿದ್ದು ಆಗಸ್ಟ್ ೨೯ ಪ್ರತಿ ವರ್ಷ ಭಾರತದಲ್ಲಿ ಈ ದಿನವನ್ನು ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುವುದು.

ಸಾಮರಸ್ಯ ಮೂಡಿಸುವ ಇತಿಹಾಸದ ದಾಖಲೆಗಳು :

1 ) ರಾಜ್ಯ ನಿರ್ಮಾಣ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಮಾಹಾ ಗುಜರಾತ ಚಳುವಳಿಯ ಐತಿಹಾಸಿಕ ದಾಖಲೆ

2 ) ಕಾಸರಗೋಡಿನ ಇತಿಹಾಸವನ್ನು ಅನ್ವಲೋಕಿಸುವ ಶಾಸನಗಳ ಚಾರಿತ್ರಿಕ ದಾಖಲೆಗಳು

3 ) ಕೇಂದ್ರ ಮತ್ತು ರಾಜ್ಯಗಳ ಸಹಕಾರ ಸಾಮರಸ್ಯದ ಅಗತ್ಯತೆಯನ್ನು ಎತ್ತಿ ತೋರಿಸುವ ಮೈಸೂರು ರಾಜ್ಯದ ಇತಿಹಾಸದ ದಾಖಲೆಗಳು

4 ) ಭಾರತದ ಸಾಮರಸ್ಯ ಸಮಾನತೆ , ಸಹಬಾಳ್ವೆ ಮಾನವೀಯತೆ ಪ್ರಗತಿ , ಪ್ರೀತಿಯ ಪರಿಕಲ್ಪನೆಗಳು ಮೂಡಿಸುವ ಭಾರತದ ಭವ್ಯಇತಿಹಾಸದ ದಾಖಲೆಗಳು ,

ಉಪಸಂಹಾರ

ಎಲ್ಲರೂ ಎಲ್ಲರಿಗಾಗಿ ಎಂಬ ಮಂತ್ರದಿಂದ ಕಣ್ಣು ಬೇರೆಯಾದರೂ ನೋಟ ಒಂದೇ ಭಾಷೆ ಬೇರೆಯಾದರೂ ಜಾತಿ ಒಂದೇ ಜಾತಿ , ಕುಲ , ಧರ್ಮ ಬೇರೆಯಾದರೂ ದೇಶ ಒಂದೇಯಾಗಿದೆ . ನಾವೆಲ್ಲ ಒಂದೇ ತೊಟ್ಟಿಲಿನ ಮಕ್ಕಳು ನಾವು ಭಾರತಿಯರು ಎಂಬ ಐಕ್ಯತೆಯ ಮಂತ್ರ , ರಾಗ ವಾಗಬೇಕೆಂಬುದು ನಮ್ಮೆಲ್ಲರ ಆಶಯವಾಗಿದೆ .

FAQ

ಭಾವೈಕ್ಯತೆ ಎಂದರೇನು?

ಸರಳವಾಗಿ ಹೇಳುವುದಾದರೆ ವಿವಿಧತೆಯಲ್ಲೂ ಏಕತೆಯನ್ನು ಕಾಣುವುದೇ ಭಾವೈಕ್ಯತೆ.

ರಾಷ್ಟ್ರೀಯ ಭಾವೈಕ್ಯತೆ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಅಕ್ಟೋಬರ್ 31 ರಂದು ರಾಷ್ಟೀಯ ಐಕ್ಯತಾ ದಿನವನ್ನು ಆಚರಿಸಲಾಗುತ್ತದೆ.

ಇತರೆ ಪ್ರಬಂಧಗಳನ್ನು ಓದಿ

Leave a Reply

Your email address will not be published. Required fields are marked *