ಭಾರತ ದೇಶದಲ್ಲಿನ ಸರೋವರಗಳು

ಭಾರತ ದೇಶದಲ್ಲಿನ ಸರೋವರಗಳು

 • ಅಷ್ಟಮುಡಿ ಸರೋವರ :-  ಕೇರಳದ ಕೊಲ್ಲಂ ಜಿಲ್ಲೆಯಲ್ಲಿದೆ .

 

 • ಚಂಬರಬಾಕ್ಕಂ ಸರೋವರ :- ಚೆನ್ನೈನಿಂದ 40 ಕಿ.ಮೀ. ದೂರದ ಚಂಗಲ್ಪಟ್ಟು ಜಿಲ್ಲೆಯಲ್ಲಿದೆ . ಇದರ ಉಗಮಸ್ಥಾನ ಅಡಯಾರ್ ನದಿ . ಚೆನ್ನೈ ಮಹಾನಗರಕ್ಕೆ ಕುಡಿಯುವ ನೀರು ಇಲ್ಲಿಂದಲೇ ಸರಬರಾಜಾಗುತ್ತದೆ .

 

 • ಬಿಲ್ಕಾ ಸರೋವರ :- ಮಹಾನದಿ ದಕ್ಷಿಣ ಮುಖದ ಬಳಿಯಿರುವ ಸರೋವರ , ಒಡಿಶಾ ರಾಜ್ಯದಲ್ಲಿದೆ . ದೇಶದಲ್ಲಿ ಅತಿದೊಡ್ಡ ತೀರ ಪ್ರದೇಶದ ಸರೋವರ , ಬಂಗಾಳ ಕೊಲ್ಲಿ ಮತ್ತು ಈ ಸರೋವರದ ಮಧ್ಯೆ ಒಂದು ಮರಳು ದಿಬ್ಬ ಮಾತ್ರ ಅಡ್ಡ ಇದೆ .

 

 • ದೇಬರ್ ಸರೋವರ :- ಇದನ್ನೇ ಜೈನಮಂದ ಸರೋವರ ಎಂದು ಕೂಡ ಕರೆಯುತ್ತಾರೆ . ರಾಜಸ್ಥಾನದಲ್ಲಿನ ಉದಯಪುರ ಜಿಲ್ಲೆಯಲ್ಲಿದೆ . ಗೋಮತಿ ನದಿಯ ಮೇಲೆ ಗ್ರಾನೈಟ್ ಕಲ್ಲಿನ ಸೇತುವೆ ನಿರ್ಮಿಸಬೇಕಾದರೆ ಅಂದಿನ ಉದಯಪುರದ ರಾಜ ರಾಣಾ ಜೈಸಿಂಗ್ ಈ ಸರೋವರವನ್ನು ತೆಗೆಸಿದನು .

 

 • ಗುರು ದೋoಗ್ಮರ್ ಸರೋವರ :- ಇದು ಹಿಮಾಲಯಗಳಲ್ಲಿನ ಕಾಂಚನಗಂಗಾ ಶ್ರೇಣಿಗೆ ಉತ್ತರದ ಕಡೆಯಿದೆ . ಭಾರತ- ಚೀನಾ ಸರಹದ್ದಿನಲ್ಲಿದೆ . ತೀಸ್ತಾನದಿಗೆ ಆಧಾರಗಳಾದ ನಾಲ್ಕು ಪ್ರವಾಹಗಳ ಪೈಕಿ ಇದೂ ಒಂದು . ಇದು ಸಿಕ್ಕಿಂ ರಾಜ್ಯದ ಚೋಕ್ರ ಕಣಿವೆಯಲ್ಲಿದೆ . ವಿಶ್ವದಲ್ಲಿನ ಎತ್ತರವಾದ ಸರೋವರಗಳಲ್ಲಿ ಇದೂ ಒಂದು . ಇದು ಸಮುದ್ರ ಮಟ್ಟಕ್ಕೆ 5210 ಮೀಟರ್‌ಗಳ ಎತ್ತರದಲ್ಲಿದೆ .

 

 • ಕಲಿಬೇಲಿ ಸರೋವರ :- ಇದು ತಮಿಳುನಾಡಿನ ವಿಲುಪ್ಪುರಂ ಜಿಲ್ಲೆಯಲ್ಲಿದೆ

 

 • ಕಂಕಾರಿಯಾ :- ಗುಜರಾತ್‌ನ ಅಹ್ಮದಾಬಾದ್‌ನಲ್ಲಿದೆ . ಇದನ್ನು ರಾಜಾ ಅಹಮ್ಮದ್ ಷಾ ನಿರ್ಮಿಸಿದನು .

 

 • ಖೇಚಿಯೋ ಪಾಲ್ರಿ ಸರೋವರ :- ಸಿಕ್ಕಿನಲ್ಲಿನ ಕಲ್ಲಿಂಗ್ ನಗರದ ಸಮೀಪದಲ್ಲಿದೆ . ಈ ಸರೋವರವನ್ನು ಹಿಂದೂಗಳು ಮತ್ತು ಬೌದ್ಧರು ಪವಿತ್ರವೆಂಬುದಾಗಿ ಭಾವಿಸುತ್ತಾರೆ .

 

 • ಕೊಲ್ಲೇರು ಸರೋವರ :- ಆಂಧ್ರರಾಜ್ಯದ ಗೋದಾಮ – ಕೃಷ್ಣಾನದಿ ಮುಖಜ ಭೂಮಿಗಳ ಮಧ್ಯೆ ವಿಸ್ತರಿಸಿದೆ .

 

 • ಮೆನ್ಮೇಚೊ ಸರೋವರ :- ಜೆಲೆಪ್ಪಾ ಕಣಿವೆಗಳಿಗೆ ಹೋಗುವ ದಾರಿಯಲ್ಲಿ ಸಿಕ್ಕಿಂನ ಪೂರ್ವಕ್ಕಿದೆ . ತೀಸ್ತಾ ನದಿಗೆ ಉಪನದಿಯಾದ ಕಾಂಗ್ರೋಚು ನದಿಗೆ ಈ ಸರೋವರ ಉಗಮಸ್ಥಾನ .

 

 • ಲೋಕ್ ತಕ್ ಸರೋವರ :- ಈಶಾನ್ಯ ಭಾರತದಲ್ಲಿ ಅತಿ ದೊಡ್ಡ ಕುಡಿಯುವ ನೀರಿನ ಸರೋವರ . ಮಣಿಪುರ್‌ನಲ್ಲಿನ ಮೊಯರಾಂಗ್ ಬಳಿಯಿದೆ .

 

 • ಪಾಂಗಾಂಗ್ ತೊ :- ಭಾರತದಿಂದ ಟಿಬೆಟ್‌ವರೆಗೆ ವಿಸ್ತರಿಸಿರುವ ಸರೋವರ . ಇದರ ಉದ್ದ 134 ಕಿ.ಮೀ.ಗಳಷ್ಟಿದ್ದು , ಮೂರನೇ ಎರಡು ಪಾಲು ಟಿಬೆಟ್ ನಲ್ಲೇ ಇರುತ್ತದೆ . ಉಪ್ಪು ನೀರಿನ  ಸರೋವರವಿದು . ಆದರೂ ಚಳಿಗಾಲದಲ್ಲಿ ಸಂಪೂರ್ಣವಾಗಿ ಗಡ್ಡೆ ಕಟ್ಟುತ್ತದೆ . ವಿಶ್ವದಲ್ಲಿ ಮೂರನೇ ಅತ್ಯಂತ ಎತ್ತರವಾದ ಕಣಿವೆ ಚಾಂಗ್ಲಾಗೆ ಹೋಗುವ ದಾರಿಯಲ್ಲಿ ಈ ಸರೋವರ ಇದೆ .

 

 • ಪುಲಿಕಾಟ್ ಸರೋವರ :- ತಮಿಳುನಾಡು , ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ಕೋರಮಂಡಲ ತೀರದಲ್ಲಿದೆ . ಇದರ ಆಸ್ಥಾನ ನೆಲ್ಲೂರು ಜಿಲ್ಲೆಯಲ್ಲಿನ ಶ್ರೀಹರಿಕೋಟಾ , ಬಂಗಾಳಕೊಲ್ಲಿಯಿಂದ ಈ ಸರೋವರವನ್ನು ಶ್ರೀಹರಿಕೋಟಾ ಬೇರ್ಪಡಿಸುತ್ತದೆ . ಇದು ಉಪ್ಪು ನೀರಿನ ಸರೋವರ .

 

 • ಪುಷ್ಕರ ಸರೋವರ :- ಇದು ರಾಜಸ್ಥಾನದಲ್ಲಿನ ಕೃತಕ ಸರೋವರ . ಅಜ್ಮಿರ್ ಜಿಲ್ಲೆಯಲ್ಲಿನ ಪುಷ್ಕರ ನಗರದ ಬಳಿಯಿದೆ . ಲುನಿ ನದಿ ಸೇತುವೆ ನಿರ್ಮಾಣ ಸಂದರ್ಭದಲ್ಲಿ 12 ನೇ ಶತಮಾನದಲ್ಲಿ ನಿರ್ಮಿಸಿದರು .

 

 • ರಾಂಕಾಲಾ ಸರೋವರ :- ಇದು ಮಹಾರಾಷ್ಟ್ರದ ಕೊಲ್ಹಪೂರ್  ಜಿಲ್ಲೆಯಲ್ಲಿದೆ .

 

 •  ರೆಡ್ ಹೀಲ್ಸ್ ಸರೋವರ :- ಇದನ್ನೇ ಪುಜ್ವಾಲ್ ಸರೋವರ ಎಂತಲೂ ಕರೆಯುತ್ತಾರೆ . ತಮಿಳುನಾಡಿನ ತಿರುವಳರ್ ಜಿಲ್ಲೆ ಅಂಬಟ್ಟೂರ್ ತಾಲ್ಲೂಕಿನಲ್ಲಿದೆ .

 

 • ಸಾಂಬಾರ್ ಸರೋವರ :- ಇದು ದೇಶದಲ್ಲೇ ಅತಿ ದೊಡ್ಡ ಉಪ್ಪು ನೀರಿನ ಸರೋವರ , ರಾಜಸ್ಥಾನ್ ರಾಜಧಾನಿ ಜೈಪೂರ್‌ಗೆ  ಪಶ್ಚಿಮ ದಲ್ಲಿದೆ

 

 • ಸೈಲಿಟನ್ ಸರೋವರ :- ಉತ್ತರಾಖಂಡ್ ರಾಜ್ಯ ರೂಪ್ ಖಂಡ್ ನಲ್ಲಿರುವ ಹಿಮಾಲಯ ಸರೋವರ , ಇದು ಸಮುದ್ರಮಟ್ಟಕ್ಕೆ 5,029 ಮೀ.ಗಳಷ್ಟು ಎತ್ತರದಲ್ಲಿದೆ . ಇಲ್ಲಿ 1942 ರಲ್ಲಿ 600 ಅಸ್ಥಿಪಂಜರಗಳನ್ನು ಪತ್ತೆ ಹಚ್ಚಲಾಯಿತು .

 

 • ಸುಕ್ನ ಸರೋವರ :- ಇದು ಶಿವಾಲಿಕ್ ಪರ್ವತಗಳ  ಕೆಳಭಾಗದಲ್ಲಿದೆ . ಈ ಸರೋವರ ಚಂಡೀಘರ್ ರಾಜ್ಯದಲ್ಲಿದೆ .

 

 • ತುಳಸಿ ಸರೋವರ :- ಮುಂಬೈ ನಗರದಲ್ಲಿನ ಎರಡನೇ ಅತಿದೊಡ್ಡ ಸರೋವರ . ಇದು ಉತ್ತರ ಮುಂಬೈನಲ್ಲಿನ ಬೋರಿವಿಲ್ಲಿ ರಾಷ್ಟ್ರೀಯ ಉದ್ಯಾನವನದಲ್ಲಿದೆ .

 

 • ವೀರಣಂ ಸರೋವರ :– ಈ ಸರೋವರವು ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿದೆ .

 

 • ವೆಂಬನಾಡು ಸರೋವರ :- ತಮಿಳುನಾಡಿನಲ್ಲಿರುವ ಈ ಸರೋವರವನ್ನು ಒಂದು ಸಣ್ಣ ಮರಳು ದಿಬ್ಬ ಅರಬ್ಬಿ ಸಮುದ್ರದಿಂದ ಬೇರ್ಪಡಿಸುತ್ತದೆ .

 

 • ವಿಹಾರ್ ಸರೋವರ :- ಮುಂಬೈ ನಗರದಲ್ಲಿರುವ ಅತಿ ದೊಡ್ಡ ಸರೋವರ ಉತ್ತರ ಮುಂಬೈನಲ್ಲಿನ ಬೋರಿವಿಲ್ಲಿ ನ್ಯಾಷನಲ್ ಪಾರ್ಕ್‌ನಲ್ಲಿದೆ .

 

 • ಪುಲಾರ್ ಸರೋವರ :- ದೇಶದಲ್ಲೇ ಅತಿ ದೊಡ್ಡ ಕುಡಿಯುವ  ನೀರಿನ ಸರೋವರ ಇದು ಜಮ್ಮು – ಕಾಶ್ಮೀರದಲ್ಲಿದೆ

ಭಾರತ ದೇಶದಲ್ಲಿನ ಸರೋವರಗಳು

ಭಾರತದ ಇತಿಹಾಸ ಕನ್ನಡ ಅಣಕು ಪರೀಕ್ಷೆ ಭಾಗ-4

en badge web generic download tl
Website-01 :- www.spardhavani.com
————————————————————————
————————————————————————
YouTube-01:-:- samagratv 
————————————————————————
YouTube-02:- Malnadcareer
————————————————————————
Telegram:- spardhavani quiz
“ಸ್ಪರ್ಧಾವಾಣಿ” ಕ್ವಿಜ್
Bharatada Samvidhana Sarakara Mattu Rajakiya

Police Sub Inspector Competitive Exam Book

51NIrObgciL. SX345 BO1,204,203,200 51Wmo9bHT3L. SX365 BO1,204,203,200
GH1U GH1U
Economic Survey & Budget Kannada Vyakarana Darpana
61O 41EKjIBf8VL. SX320 BO1,204,203,200
GH1U GH1U
Kannadakkondu kaipidi

Lucent’s General Knowledge

41eg4MRy3vL. SX356 BO1,204,203,200
GH1U GH1U

ಇತಿಹಾಸದ ಬಹುಆಯ್ಕೆ ಪ್ರಶ್ನೋತ್ತರ ಭಾಗ-01

IC
SHOP NOW

Leave a Reply

Your email address will not be published. Required fields are marked *