Lekana Chinne in Kannada | ಲೇಖನ ಚಿಹ್ನೆ ಕನ್ನಡ ಮಾಹಿತಿ

Lekana Chinne in Kannada | ಲೇಖನ ಚಿಹ್ನೆ ಕನ್ನಡ ಮಾಹಿತಿ

Lekana Chinne in Kannada, ಲೇಖನ ಚಿಹ್ನೆ ಕನ್ನಡ ಮಾಹಿತಿ,ಲೇಖನ ಚಿಹ್ನೆಗಳು,lekhana chinhegalu kannada, chart, grammar, information, examples, pdf

Lekana Chinne in Kannada

ಭಾವನೆ ಅಥವಾ ವಿಷಯಗಳನ್ನು ಭಾಷೆಯಲ್ಲಿ ಸ್ಪಷ್ಟವಾಗಿ ತೆರೆದಿಡಲು ಲೇಖನ ಚಿಹ್ನೆಗಳು ಸಹಕರಿಸುತ್ತವೆ . ಅರ್ಥಸ್ಪಷ್ಟತೆ ಹಾಗೂ ಭಾಷೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ದೃಷ್ಟಿಯಿಂದ ಲೇಖನ ಚಿಹ್ನೆಗಳು ಸಾಧ್ಯತೆಗಳ ಸಾಮರ್ಥ್ಯವನ್ನು ವೃದ್ಧಿಸುತ್ತವೆ . ಸಂದೇಹ , ಗೊಂದಲಗಳನ್ನು ನಿವಾರಿಸುತ್ತವೆ .

ಆದ್ದರಿಂದಲೇ ಬರವಣಿಗೆಯಲ್ಲಿ ಉಚಿತ ಸ್ಥಳಗಳಲ್ಲಿ ಚಿಹ್ನೆಗಳನ್ನು ಲೇಖನ ಬಳಸುವುದು ಅನಿವಾರ್ಯವಾಗಿದೆ . ಹೀಗಾಗಿ ಲೇಖನ ಚಿಹ್ನೆಗಳು ಬರವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ .

lekhana chinhegalu endarenu in kannada

ಬರವಣಿಗೆಯಲ್ಲಿ ಲೇಖನ ಚಿಹ್ನೆಗಳ ಪಾತ್ರ ಅತ್ಯಂತ ಪ್ರಮುಖವಾದುದು. ಲೇಖನ ಚಿಹ್ನೆಗಳಿಲ್ಲದ ಬರವಣಿಗೆಯು ಸ್ಪಷ್ಟಾರ್ಥವನ್ನು ಕೊಡದೆ ಅನೇಕ ತೊಡಕುಗಳಿಗೆ ಕಾರಣವಾಗುತ್ತದೆ. ಆದುದರಿಂದ ಲೇಖನ ಚಿಹ್ನೆಗಳ ಕಡೆಗೆ ಗಮನಕೊಡುವುದು ಆವಶ್ಯಕ.

ಪೂರ್ಣ ವಿರಾಮ ಚಿಹ್ನೆ ಎಂದರೇನು?

ಒಂದು ಪೂರ್ಣಕ್ರಿಯೆಯಿಂದ ಕೂಡಿದ ವಾಕ್ಯದ ಕೊನೆಯಲ್ಲಿ ‘.’ ಈ ಚಿಹ್ನೆಯನ್ನು ಉಪಯೋಗಿಸಬೇಕು.

1. ಅಲ್ಪವಿರಾಮ ( , )

ಸಾಮಾನ್ಯವಾಗಿ ವಾಕ್ಯಗಳಲ್ಲಿ ಹಲವು ವಿಶೇಷಣ ಹಾಗೂ ನಾಮಪದಗಳು ಬಂದಾಗ ವಾಕ್ಯದಲ್ಲಿನ ಅಭಿಪ್ರಾಯವು ಕೆಡದಂತೆ ಇರಲು ಅಲ್ಲಲ್ಲಿ ನಿಲ್ಲಿಸಬೇಕಾಗಿ ಬಂದ ಸ್ಥಳಗಳಲ್ಲಿ ಈ ಚಿಹ್ನೆಯನ್ನು ಬಳಸಲಾಗುತ್ತದೆ .

ಉದಾ : ಸಂಗೀತ , ಸಾಹಿತ್ಯ , ಕಲೆ ಇತ್ಯಾದಿಗಳು , ಮಾನವನ ಮೂಲಭೂತ ಲಕ್ಷಣವಾದ ಸೃಜನಶೀಲತೆಯ ಅಭಿವ್ಯಕ್ತಿ ಮಾಧ್ಯಮಗಳಾಗಿವೆ .

2. ಅರ್ಧವಿರಾಮ ( ; )

ಒಂದು ವಾಕ್ಯವು ಮುಗಿದಿದ್ದರೂ ಅದೇ ಅಭಿಪ್ರಾಯವು ಮುಂದುವರಿಯು ವಂತಿದ್ದರೆ ಅರ್ಧವಿರಾಮ ಚಿಹ್ನೆಯು ಬಳಕೆಯಾಗುತ್ತದೆ . ಉಪವಾಕ್ಯಗಳ ಕೊನೆಯಲ್ಲಿ ಈ ಚಿಹ್ನೆ ಬರುತ್ತದೆ .

ಉದಾ . : ನಮ್ಮ ಜೀವನಕ್ಕೆ ಹುಟ್ಟು ಸಾವುಗಳೆಂಬ ಎರಡು ಕೊನೆಗಳುಂಟು ; ನಡುವೆ ಅಪಾರ ಜೀವ ಸಮೃದ್ಧಿಯೂ ಉಂಟು ; ಸುಖದುಃಖಗಳೂ ಉಂಟು ; ಎಂಬ ಅರಿವಿರಬೇಕು .

lekhana chinhegalu information in kannada

3 . ವಿರಾಮ ( . )

ವಾಕ್ಯ ಪೂರ್ಣ ಪೂರ್ಣಗೊಂಡಾಗ ಅಥವಾ ಅದ್ಯಕ್ಷರಗಳ ನಡುವೆ ಬಳಸುವ ಚಿಹ್ನೆ .

ಉದಾ . : ನಾವು ಊಟ ಮಾಡಿ ಮಲಗಿದೆವು . ಲ.ರಾ. ಇಂದಿರಾ , ಎಂ.ಎನ್ . ಪ್ರಕಾಶ್ ಇತ್ಯಾದಿ .

lekhana chinhegalu examples in kannada

4. ವಿವರಣಾತ್ಮಕ ಚಿಹ್ನೆ (:)

ವಾಕ್ಯದಲ್ಲಿ ಒಂದು ಅಭಿಪ್ರಾಯ , ಅನ್ಯರ ಹೇಳಿಕೆ

ಉದಾಹರಣೆ : ವಿಷಯ ವಿಸ್ತರಣೆ ಇತ್ಯಾದಿಗಳಿಗೆ ಮುನ್ನ ಈ ಚಿಹ್ನೆ ಬಳಕೆಯಾಗುತ್ತದೆ .

ಉದಾ : ವಿವೇಕಾನಂದರು ಕರೆ ಕೊಟ್ಟರು : ಏಳು ಎದ್ದೇಳು ನಿನ್ನ ಗುರಿ ಮುಟ್ಟುವ ತನಕ ನಿಲ್ಲದಿರು .

ಉದಾಹರಣೆ : ಗಾಂಧೀಜಿ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದು .

5. ಪ್ರಶ್ನಾರ್ಥಕ ಚಿಹ್ನೆ ?


ಪ್ರಶ್ನಾರ್ಥಕ ವಾಕ್ಯದ ಅಂತ್ಯದಲ್ಲಿ ಪೂರ್ಣವಿರಾಮದ ಪ್ರಶ್ನಾರ್ಥಕ ಚಿಹ್ನೆ ಬಳಕೆಯಾಗುತ್ತದೆ .

ಉದಾ . : ನೀನು ಯಾವ ಊರಿಗೆ ಹೋಗಿದ್ದೆ ? ಮಾನವನಿಗೆ ಸಿಟ್ಟಾದರೂ ಏಕೆ ಬರಬೇಕು ?

6. ಭಾವಸೂಚಕ ಚಿಹ್ನೆ ( ! )

ಆಶ್ಚರ್ಯ , ದುಃಖ , ಸಂತೋಷ , ಇತ್ಯಾದಿ ಭಾವನೆಗಳನ್ನು ಅಭಿವ್ಯಕ್ತಿಸುವ ವಾಕ್ಯದ ಕೊನೆಯಲ್ಲಿ ಭಾವಸೂಚಕ ಚಿಹ್ನೆ ಬಳಕೆಯಾಗುತ್ತದೆ .

ಉದಾ . : ಅಯ್ಯೋ ! ಇದೆಂತಹ ದುರ್ವಿಧೀ ?

ಓಹ್ , ಅದ್ಭುತವಾದ ತಾಣ ! ಇತ್ಯಾದಿ .

7. ಆವರಣ ಚಿಹ್ನೆ ( )

ವಾಕ್ಯದಲ್ಲಿ ಯಾವುದಾದರೂ ಪದದ ವಿವರಣೆ , ಅರ್ಥ ಅಥವಾ ವಿಷಯವನ್ನು ವಿವರಿಸಬೇಕಾಗಿ ಬಂದಲ್ಲಿ ಈ ಚಿಹ್ನೆಯನ್ನು ಬಳಸುತ್ತಾರೆ .

ಉದಾ : ಮಯನ್ಮಾರ್ ( ಬರ್ಮಾ ) ಪ್ರಸ್ತುತ ಮಿಲಿಟರಿ ಆಡಳಿತದ ಹಿಡಿತದಲ್ಲಿದೆ .

ಲಾಡ್ ಇರ್ವಿನ್ ( ವೈಸ್‌ರಾಯಿ ) ಮಹಾತ್ಮಗಾಂಧಿ ಯವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದನು .

8. ಸಂಭಾಷಣಾ ಚಿಹ್ನೆ ( “……. ” )

ವಾಕ್ಯದಲ್ಲಿ ನೇರ ಸಂಭಾಷಣೆಯ ಸಂದರ್ಭದಲ್ಲಿ ಈ ಚಿಹ್ನೆಯ ಬಳಕೆಯಿದೆ .

ಉದಾ . ಕೃಷ್ಣನು “ ಧರ್ಮಸಂಸ್ಥಾಪನೆಗಾಗಿ ಮತ್ತೆ ಮತ್ತೆ ಅವತರಿಸಿ ಬರುತ್ತೇನೆ ‘ ‘ ಎಂದನು .

ರಮೇಶನು ತನ್ನ ತಂದೆಯನ್ನು ಕುರಿತು ಇದರಲ್ಲಿ ನನ್ನ ತಪ್ಪೇನೂ ಇಲ್ಲ . ಇದೊಂದು ಕಟ್ಟುಕಥೆ ‘ ‘ ಎಂದನು .

4. ಉದ್ಧರಣ ಚಿಹ್ನೆ ( )

ವಾಕ್ಯದಲ್ಲಿ ಒಬ್ಬರ ಮಾತನ್ನು ಮತ್ತೊಬ್ಬರು ಹಾಗೆಯೇ ಹೇಳುವಾಗ , ವಿಶಿಷ್ಟ ಪದಗಳನ್ನು ಗಮನಕ್ಕೆ ತರುವಾಗ ಈ ಚಿಹ್ನೆಯನ್ನು ಬಳಸುತ್ತಾರೆ .

ಉದಾ . : ಭೈರಪ್ಪನ ‘ ಆವರಣ ‘ ಕಾದಂಬರಿಯನ್ನು ಬರೆದಿದ್ದಾರೆ .

ಗಾಂಧೀಜಿಯನ್ನು ‘ ರಾಷ್ಟ್ರಪಿತ ‘ ಎಂದು ಕರೆಯುತ್ತಾರೆ .

ಇತರೆ ವಿಷಯಗಳ ಮಾಹಿತಿ ಲಿಂಕ್

ಯು ಆರ್ ಅನಂತಮೂರ್ತಿ ಜೀವನ ಚರಿತ್ರೆ

ವಿ ಕೃ ಗೋಕಾಕ ಕವಿ ಪರಿಚಯ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಚರಿತ್ರೆ

Leave a Reply

Your email address will not be published. Required fields are marked *