Hetta Tayi Hotta Nadu Swargakintalu Migilu Gadegalu in Kannada, ಜನನಿ ಜನ್ಮಭೂಮಿ ಹಾಗು ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲುkannada gadegalu
Hetta Tayi Hotta Nadu Swargakintalu Migilu Gadegalu in Kannada
ಹೆತ್ತ ತಾಯಿ , ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಈ ಗಾದೆ ಅತ್ಯಂತ ಅರ್ಥಗರ್ಭಿತವಾಗಿದೆ . ಗಾದೆಗಳನ್ನು ಒಮ್ಮೆ ಅವಲೋಕಿಸಿದಾಗ , ಅವುಗಳಲ್ಲಿ ವಿಶೇಷತೆಗಳು ನಿಗೂಢವಾಗಿ ಅಡಗಿಕೊಂಡಿರುತ್ತವೆ .
ಸಾಮಾನ್ಯವಾಗಿ ಗಾದೆಗಳು ಜನಸಾಮಾನ್ಯರ ಆಡು ನುಡಿಗಳಲ್ಲಿ ಒಂದಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ .
ಅರ್ಥಸಹಿತ ಗಾದೆಗಳು 41 ರಾಮಾಯಣದ ಒಂದು ಪ್ರಸಂಗ ಈ ಗಾದೆಯ ನೆಪದಲ್ಲಿ ನೆನಪಿಗೆ ಬರುತ್ತದೆ .
ಶ್ರೀರಾಮನು ರಾವಣನನ್ನು ಕೊಂದು , ಲಂಕೆಯನ್ನು ಗೆದ್ದು ಅದನ್ನು ವಿಭೀಷಣನಿಗೆ ಮರಳಿ ಕೊಟ್ಟು ಪತ್ನಿ ಸೀತಾಮಾತೆಯೊಂದಿಗೆ ಆಯೋಧ್ಯೆಗೆ ಹೊರಟಾಗ- “ ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ” ಎಂಬ ವಾಕ್ಯವು ಮೇಲಿನ ಗಾದೆಯಲ್ಲಿ ಅಡಗಿರುವ ಅರ್ಥ .
ಹೆತ್ತ ತಾಯಿ , ಜನ್ಮ ಕೊಟ್ಟ ನಾಡು , ಸ್ವರ್ಗಕ್ಕಿಂತಲೂ ಶ್ರೇಷ್ಠವಾದುವು . ಅವುಗಳನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವೂ ಹೌದು ! ಹೆತ್ತ ತಾಯಿಯ ಮಡಿಲಲ್ಲಿ ದೊರೆಯುವ ಆನಂದ ಮತ್ತೆಲ್ಲೂ ಸಿಗಲಾರದು . ತಾಯಿಯಾದವಳು ಎಷ್ಟೇ ಕಷ್ಟ ಬಂದರೂ , ತೊಂದರೆಗಳು ಎದುರಾದರೂ ತನ್ನ ಸುಖವನ್ನು ಮರೆತು ಮಕ್ಕಳನ್ನು ಕಾಪಾಡುತ್ತಾಳೆ .
ಉತ್ತಮ ಹುದ್ದೆಗಳು ದೊರೆತರು ಸದಾ ತಾಯ್ಯಾಡಿನ ನೆನಪು ಮರುಕಳಿಸುತ್ತಿರುತ್ತದೆ . ಮಾತೃಭೂಮಿಯ ಕುರಿತಾದ ಗೌರವ , ಆದರಗಳು ಮನಸ್ಸನ್ನು ಬಾಧಿಸುತ್ತಿರುತ್ತದೆ .
ಒಟ್ಟಾರೆ ತಾಯಿ – ತಾಯ್ಯಾಡು ಇವೆರಡನ್ನು ರಕ್ಷಿಸುವುದು , ಗೌರವಿಸುವುದು ಎಲ್ಲರ ಕರ್ತವ್ಯವೂ ಹೌದು !
ಹೆತ್ತ ತಾಯಿ ಹೊತ್ತನಾಡು ಸ್ವರ್ಗಕ್ಕಿಂತಲೂ ಮಿಗಿಲು.. ಗಾದೆಯ ಸಾರಾಂಶ-02
ಗಾದೆ ವೇದಕ್ಕೆ ಸಮಾನ , ಗಾದೆ ಸುಳ್ಳಾದರೂ ವೇದ ಸುಳ್ಳಾಗುವುದಿಲ್ಲ . ಗಾದೆ ಹಿರಿಯರು ಹೇಳಿದ ಅನುಭವದ ನುಡಿಮುತ್ತುಗಳು .
ಗಾದೆಗಳು ಆಕಾರದಲ್ಲಿ ವಾಮನನಾದರೂ ಅರ್ಥದಲ್ಲಿ ತ್ರಿವಿಕ್ರಮನಂತೆ.ಈ ಮೇಲಿನ ಗಾದೆಯು ಪ್ರಸಿದ್ಧವಾಗಿದೆ . ಇದು ವಾಲ್ಮೀಕಿ ಮೇಲಿನ ಹೇಳಿಕೆ .
ಇದನ್ನು ಓದಿ :- ಸಜಾತಿ ಮತ್ತು ವಿಜಾತಿ ಪದಗಳು
‘ ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸೀ ‘ ರಾಮಾಯಣದಲ್ಲಿ ಬರುವ ಒಂದು ಮಾತು . ಇದರ ಅನುವಾದವೇ ಇದರಲ್ಲಿ ತಾಯಿ ಮತ್ತು ನಾಡಿನ ಮಹತ್ವ ಅಡಗಿದೆ .
ಹೆತ್ತ ತಾಯಿ ಹೊತ್ತ ನಾಡು ಎರಡು ಒಂದೇ ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯ ಮಡಿಲು ಸ್ವರ್ಗಕ್ಕಿಂತಲೂ ಮಿಗಿಲಾದ ಸುಖವನ್ನು ನೀಡುತ್ತದೆ ಎನ್ನುವುದು ಅನುಭವಿಗಳ ಹೇಳಿಕೆ .
ಅಂತೆಂಯೇ ಹೊತ್ತನಾಡು ನಮ್ಮನ್ನು ಜೀವನ ಪೂರ್ತಿ ತನ್ನ ಮಡಿಲಲ್ಲಿಟ್ಟು ಪೋಷಿಸುತ್ತದೆ .
ನಮ್ಮ ಜೀವನಕ್ಕೆ ಅಗತ್ಯವಾದಂತಹ ಅನ್ನ , ನೀರು , ಬಟ್ಟೆ , ವಸತಿ , ಹಾಗೂ ಇನ್ನಿತರ ಎಲ್ಲಾ ಅವಶ್ಯಕತೆಗಳನ್ನು ಪೂರೈಸುವಂತಹ ಜನ್ಮ ಭೂಮಿಯನ್ನು ತಾಯಿಗೆ ಹೋಲಿಸಿರುವುದು ಶ್ರೇಷ್ಠವಾಗಿದೆ .
ಮಕ್ಕಳ ಪಾಲನೆಗಾಗಿ ತಾಯಿ ತನ್ನ ಸುಖವನ್ನೆಲ್ಲ ಮರೆತು ಆಹಾರ ನಿದ್ರೆಗಳನ್ನು ತೊರೆದು ಮಗುವಿನ ಲಾಲನೆ ಪೋಷಣೆಗಳಲ್ಲಿಯೇ ಸುಖವನ್ನು ಕಾಣುತ್ತಾಳೆ .
ತಾಯಿಯಂತೆಯೇ ನಾವು ಹುಟ್ಟಿದ ನಾಡು ಕೂಡ ಆ ನೆಲದಲ್ಲಿ ಆಡುತ್ತೇವೆ . ಅಗೆಯುತ್ತೇವೆ . ಬೆಳೆಯನ್ನು ಬೆಳೆಯುತ್ತೇವೆ . ಬೆಳೆದುದನ್ನು ತಿಂದು ಬದುಕುತ್ತೇವೆ .
ತಾಯಿಯಂತೆ ನಾಡು ನಮ್ಮನ್ನು ಪೋಷಿಸುತ್ತದೆ . ಆದ್ದರಿಂದ ಜನ್ಮಭೂಮಿಯನ್ನು ಮರೆತವರು ತಾಯಿಯನ್ನು ಮರೆತಂತೆಯೇ ಸರಿ.ಆದುದರಿಂದ ಹೆತ್ತತಾಯಿ ಹೊತ್ತನಾಡಿನ ಋಣವನ್ನು ಮರೆಯದೇ ಅವರ ಹಿರಿಮೆಯನ್ನು ಎತ್ತಿಹಿಡಿಯಬೇಕಾದದ್ದು ಪ್ರತಿಯೊಬ್ಬನ ಆದ್ಯಕರ್ತವ್ಯವಾಗಿದೆ .
ಇತರೆ ವಿಷಯಗಳನ್ನು ಒಡಲುಇ ಕೆಳಗೆ ಕ್ಲಿಕ್ ಮಾಡಿ
Super