ಗೌತಮ ಬುದ್ಧ ಜೀವನ ಚರಿತ್ರೆ | Gautam Buddha Information in Kannada

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

Gautama Buddha Information in Kannada, ಗೌತಮ ಬುದ್ಧನ ಜೀವನ ಚರಿತ್ರೆ , information about buddha in kannada, gautama buddha jeevana charitre in kannada , buddha information in kannada

Gautama Buddha Information in Kannada

ಗೌತಮ ಬುದ್ಧನ ಜೀವನ ಚರಿತ್ರೆ ಮತ್ತು ಸಂಪೂರ್ಣ ಇತಿಹಾಸದ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದ್ದು ಇದು ಸಂಪೂರ್ಣವಾಗಿ ಉಚಿತವಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

Spardhavani Telegram

Gautama Buddha Jeevana Charitre in Kannada

ಕಪಿಲ ವಸ್ತುವಿನ ಸಿಂಹನು ಎಂಬ ರಾಜನ ಮಗ ಶುದ್ದೋಧನ ಸಿಂಹನು ತನ್ನ ಮಗ ಶುದ್ದೋಧನನಿಗೆ ನೆರೆಯ ರಾಜ್ಯದ ದೊರೆ ಸುಪ್ರ ಬುದ್ಧನ ಮಕ್ಕಳಾದ ಪ್ರಜಾಪತಿ ದೇವಿ ಮತ್ತು ಮಾಯಾ ದೇವಿ ಎಂಬ ಇಬ್ಬರು ಹೆಣ್ಣು ಮಕ್ಕಳನ್ನು ತಂದು ಮದುವೆ ಮಾಡಿದರು.

gautama buddha life story in kannada

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay
ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಅದರಂತೆ ಗೌತಮ ಬುದ್ದರು ಲುಂಬಿನಿವನದಲ್ಲಿ ವೈಶಾಖ ಶುದ್ಧ ಪೂರ್ಣಿಮೆಎಂದು ಶುದ್ಧೋದನ ಮತ್ತು ಮಾಯಾ ದೇವಿಯ ಮಗನಾಗಿ ಕ್ರಿಸ್ತ ಪೂರ್ವ 563 ರಂದು ಜನಿಸುತ್ತಾರೆ. ಗೌತಮ ಬುದ್ಧರ ಮೊದಲ ಹೆಸರು ಸಿದ್ಧಾರ್ಥ.

ಮಗುವಿಗೆ 7 ದಿನ ವಾದಾಗ ತಾಯಿ ಮಾಯಾ ದೇವಿ ಅಸುನೀಗಿದಳು. ನಂತರ ಮಗುವನ್ನು ಎರಡನೆ ತಾಯಿ ಪ್ರಜಾಪತಿ ದೇವಿ ಸಾಕಿ ಸಲಹುತ್ತಾಳೆ. ಸಿದ್ಧಾರ್ಥ ಜನಿಸುವುದಕ್ಕೂ ಮುನ್ನ ಮಾಯಾ ದೇವಿ ಕನಸೊಂದನ್ನು ಕಂಡಿರುತ್ತಾರೆ.

ಅದರಲ್ಲಿ ದೇವತೆಗಳು ಮಾಯಾ ದೇವಿಯನ್ನು ಹಿಮಾಲಯದ ಮೇಲಕ್ಕೆ ಕರೆದುಕೊಂಡು ಹೋಗಿ ಮಹಾ ಸರೋವರದಲ್ಲಿ ಸ್ನಾನ ಮಾಡಿಸಿ ಬೆಳ್ಳಿ ಬೆಟ್ಟದ ಮೇಲಿದ್ದ ಬಂಗಾರದ ತೊಟ್ಟಿಲಿನಲ್ಲಿ ಅವಳನ್ನು ಮಲಗಿಸಿದರು. ಆಗ ಬಿಳಿಯ ಆನೆಯೊಂದು ತನ್ನ ಸೊಂಡಿಲಿನಿಂದ ಕಮಲ ಪುಷ್ಪವನ್ನು ಹಿಡಿದು ಉತ್ತರ ದಿಕ್ಕಿನಿಂದ ಬಂದು ಮಾಯಾ ದೇವಿಯ ಬಲ ಪಾರ್ಶ್ವ ದಿಂದ ಉದರವನ್ನು ಪ್ರವೇಶಿಸಿತಂತೆ.

ಈ ಸ್ವಪ್ನದ ಸಂಕೇತವನ್ನು ಕುರಿತು ಜ್ಯೋತಿಷ್ಕರು ಮಾಯಾ ದೇವಿ ಗಂಡು ಮಗುವಿಗೆ ಜನ್ಮ ನೀಡಿದಳು. ಶಿಶು ಒಂದು ವೇಳೆ ರಾಜ್ಯಬಿ ಶಕ್ತನಾದರೆ ಚಕ್ರಧೀಶ್ವರನು ಸಂಪದ್ಭರಿತನೂ ಆಗುವನು. ಅದರಂತೆ ಇನ್ನೊಂದು ರೀತಿಯಲ್ಲಿ ಈತ ರಾಜ್ಯ ಕೋಶಗಳ ಅಧಿಕಾರ ತೊರೆದು ಮಹಾಯೋಗಿ ಎನಿಸಿ ಜಗದ್ವಿಖ್ಯಾತ ವ್ಯಕ್ತಿಯಾಗುವ ಸೂಚನೆಯೂ ಇದೆ ಎಂದು ಹೇಳುತ್ತಾರೆ.

ಆದರೆ ರಾಜ ಶುದ್ಧೋದನಗೆ ತನ್ನ ಮಗ ಸಿದ್ದಾರ್ಥನ ಉದ್ಯೋಗಿಯಾಗುವ ಬದಲು ಚಕ್ರವರ್ತಿ ಯಾಗಬೇಕೆಂಬ ಆಸೆ ಇರುತ್ತದೆ.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay
ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಗೌತಮ ಬುದ್ಧನ ಶಿಕ್ಷಣ

ಆದ ಕಾರಣ ಬಹಳ ವಾತ್ಸಲ್ಯ ದಿಂದ ಸಿದ್ದಾರ್ಥನ ಶಿಕ್ಷಣದ ಬೆಳವಣಿಗೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಸಿದ್ಧಾರ್ಥನು ಸರ್ವ ವಿದ್ಯಾ ಪಾರಂಗತ ನಾಗುವಂತೆ ಕುಲ ಗುರು ಗಳಲ್ಲಿ ವಿದ್ವಾಂಸರಲ್ಲಿ ಶಿಕ್ಷಣ ಕೊಡಿಸುತ್ತಾರೆ. ಹೀಗೆ ರಾಜ ಶುದ್ಧೋಧನನು ಮಗನು ವಿರಕ್ತನಾಗದಂತೆ ನೋಡಿಕೊಳ್ಳಲು ಸರ್ವ ಪ್ರಯತ್ನಗಳನ್ನು ಮಾಡುತ್ತಾರೆ.

ಗೌತಮ ಬುದ್ಧನ ಸ್ವಯಂವರ

ಹರೆಯದಲ್ಲಿ ಮದುವೆ ಮಾಡಿದರೆ ಅವನು ಸುಖ ಸಂಸಾರ ದಲ್ಲಿ ಮಗ್ನ ನಾಗಿರುತ್ತಾನೆ ಎಂದು ತಿಳಿದು ಮಗನಿಗೊಂದು ಸ್ವಯಂವರವನ್ನ ಏರ್ಪಡಿಸುತ್ತಾರೆ. ಅವನು ಒಪ್ಪುವ ಕನ್ಯೆ ಅವನಿಗೆ ಸಿಕ್ಕಲಿ ಎಂಬ ಉದ್ದೇಶವಿತ್ತು.

ಒಂದು ದಿನ ಊರಿನ ಎಲ್ಲಾ ಕನ್ಯೆಯರು ಬಂದು ರಾಜಕುಮಾರನಿಂದ ಆಭರಣಗಳನ್ನು ದಾನ ಪಡೆಯುವಂತೆ ಸಮಾರಂಭ ಏರ್ಪಡಿಸ ಲಾಗುತ್ತದೆ. ಅಂತೆಯೇ ಊರಿನ ಎಲ್ಲಾ ಕನ್ಯೆಯರು ಬಂದು ಸಿದ್ಧಾರ್ಥನ ಕೈಯಿಂದ ಆಭರಣಗಳ ನ್ನು ಪಡೆಯುತ್ತಾರೆ.

ಆದರೆ ಶುದ್ಧೋಧನನ ಸಚಿವನಾದ ದಂಡ ಪಾಳ್ಯ ಮಗಳು ಯಶೋಮತಿ ಎಂಬುವವಳು ಅತಿ ಸುಂದರ ಸುಸಂಸ್ಕೃತಳು ಆಗಿದ್ದು ಕಟ್ಟ ಕಡೆಯಲ್ಲಿ ಬರುತ್ತಾಳೆ. ಆಕೆಯ ಗಾಂಭಿರ್ಯ, ಘನತೆಗಳು, ಸಿದ್ಧಾರ್ಥನ ಮಂತ್ರಮುಗ್ಧ ಗೊಳಿಸುತ್ತವೆ.

ದಾನ ಮಾಡುತ್ತಿದ್ದ ಒಡವೆಗಳೆಲ್ಲ ಮುಗಿದು ಹೋಗಿದ್ದವು. ಆಗ ಸಿದ್ಧಾರ್ಥನು ತನ್ನ ಬೆರಳಿನಲ್ಲಿದ್ದ ಉಂಗುರವನ್ನೇ ತೆಗೆದು ಕೊಡಲು ಹೋಗುತ್ತಾನೆ. ಆದರೆ ಅವಳು ನಿಮ್ಮ ವಾತ್ಸಲ್ಯ ಮಯ ನೋಟವೇ ನನಗೊಂದು ಆಭರಣ. ಅದೇ ಸಾಕೆಂದು ಮುಂದೆ ಸಾಗುತ್ತಾಳೆ. ಹೀಗೆ ಸಿದ್ದಾರ್ಥನಿಗೆ ಯಶೋಧೆಯಲ್ಲಿ ಮಮಕರ ಉಂಟಾಗಿದ್ದು, ಇದಲ್ಲದೆ ಯಶೋಧರೆಯನ್ನು ವರಿಸಲು ಸಮ್ಮತಿಸಿದನು.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay
ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಯಶೋಧರೆ ಗಂಡು ಮಗುವಿಗೆ ತಾಯಿ

ಸಿದ್ಧಾರ್ಥ ಅವನ ರಾಣಿಯ ಸಂಘ ದಿಂದ ಅವನ ಜ್ಞಾನದ ಮಟ್ಟದಲ್ಲಿ ಹೊಸ ಹೊಸ ಅನುಭವಗಳನ್ನು ತಂದುಕೊಡುತ್ತಿದ್ದವು. ಪತ್ನಿಯ ಮನನೊಯ್ಯದಂತೆ ವರ್ತಿಸುತ್ತಿದ್ದನು. ಹೀಗಿರುವಾಗ ಯಶೋಧರೆ ಗಂಡು ಮಗುವಿಗೆ ತಾಯಿಯಾದಳು.

ಪುತ್ರನಿಗೆ ಸಿದ್ಧಾರ್ಥನೇ ರಾಹುಲ ನೆಂದು ನಾಮಕರಣ ಮಾಡಿದನು ರಾಜ ಶುದ್ಧೋಧನನು ಪುತ್ರೋತ್ಸವ ಸಮಾರಂಭವನ್ನು ಅತ್ಯಂತ ವೈಭವವನ್ನು ನೆರವೇರಿಸಿದನು. ಬಡಬಗ್ಗರಿಗೆ ಅಪಾರ ದಾನ ಧರ್ಮಗಳನ್ನು ಮಾಡಿದನು.

ಸಾರಥಿ ಚೆನ್ನ ನೊಂದಿಗೆ ನಗರ ಸಂಚಾರಕ್ಕೆ ಹೊರಟ ಸಿದ್ದಾರ್ಥ

ಹೀಗಿರುವಾಗ ಒಮ್ಮೆ ಸಿದ್ದಾರ್ಥ ಪೂರ್ವ ಸೂಚನೆಯನ್ನು ಕೊಡದೆ. ತನ್ನ ಸಾರಥಿ ಚೆನ್ನ ನೊಂದಿಗೆ ನಗರ ಸಂಚಾರಕ್ಕೆ ಹೊರಟು ಹಾದಿಯಲ್ಲಿ

  • ವಯಸಾದ ಮುದುಕನು,
  • ರೋಗಿಯನ್ನು ಮತ್ತು
  • ಒಂದು ಸಾವನ್ನು

ಕಂಡು ವ್ಯಾಕುಲ ಗೊಳ್ಳುತ್ತಾನೆ. ಕಿನ್ನ ಮನಸ್ಕನಾಗಿ ದುಃಖ ದಿಂದ ಕಂಗೆಟ್ಟು ಮನದಲ್ಲಿ ವಿರಕ್ತಿ ಹೊಂದುತ್ತಾನೆ. ಚಿಂತಾಕ್ರಾಂತ ನಾಗಿ ಕುಳಿತು ಆಲೋಚಿಸುವಾಗ ಅವನ ಮುಂದೆ ಸನ್ಯಾಸಿಯೊಬ್ಬ ಬರುತ್ತಾನೆ. ಅದುವರೆಗೂ ಅಂತ ಸನ್ಯಾಸಿಯನ್ನು ಕಾಣದಿದ್ದ ಸಿದ್ದಾರ್ಥ ಆ ಸನ್ಯಾಸಿ ನೀನಾರೆಂದು ಪ್ರಶ್ನಿಸಿದಾಗ ಅವನು ಜನನ ಮರಣಗಳುಳ್ಳ.

ಪ್ರಪಂಚ ದಲ್ಲಿರುವ ಮಾನವನೂ ತಿಳಿದೂ ತಿಳಿದೂ ಕ್ಷಣಿಕ ಸುಖಕ್ಕಾಗಿ ಆಸೆ ಪಟ್ಟು ಸಾಗರದಷ್ಟು ದುಃಖ ಪಡುತ್ತಿರುವುದನ್ನು ನೋಡಿ ಬೇಸರಗೊಂಡು ಕಾಡು ಮೇಡು ಅಲೆಯುತ್ತ ನೆಮ್ಮದಿಯಾಗಿದ್ದೇನೆ.

ನಾನು ಬಂದು ಬಾಂಧವರು ಸುಖ, ಸಂಪತ್ತು ಗಳೆಂಬ ಕೋಟಲೆ ಯಿಂದ ದೂರವಾದವನು ನನಗೆ ಕಷ್ಟ ಬರುವುದೆಂಬ ಭಯವಿಲ್ಲ. ಸುಖ ಬೇಕೆಂಬ ಆಸೆ ಇಲ್ಲ. ಉರಿ ಬರಲಿ ಸಿರಿ ಬರಲಿ ಬೇಕು ಬೇಡ ಎಂಬ ಗೊಂದಲಕ್ಕೆ ಒಳಗಾಗ ದವನು.

ಆತ್ಮ ಸ್ವತಂತ್ರನು ನಾನು ಭೂಮಿಯ ನನ್ನ ಮನೆ ಆಕಾಶ ವೇ ನನಗೆ ಹುಡುಕಿ. ಅನ್ಯರ ಹಂಗಿಲ್ಲದೆ ಈ ಅರಣ್ಯ ನನ್ನ ವಿಹಾರ ತಾಣ ಎನ್ನುತ್ತಾನೆ. ಆ ಸನ್ಯಾಸಿಯ ಮಾತು ಸಿದ್ದಾರ್ಥನ ಮನವನ್ನು ಸೂರೆ ಗೊಂಡವು. ಅವನ ಮನಸ್ಸು ಒಮ್ಮೆಲೆ ಶಾಂತವಾಗಿ ಒಂದು ದೃಢ ನಿರ್ಧಾರ ಕ್ಕೆ ಬಂದಿತ್ತು.

ಜನನ ಮರಣ ಗಳಿಗೆ, ದುಃಖ ಗಳಿಗೆ ಕಾರಣವನ್ನು ನಿರ್ಧರಿಸಿದ ಸಿದ್ದಾರ್ಥ

ವೃದ್ಧ ರೋಗಿ ಮೃತದೇಹ ಮತ್ತು ಸನ್ಯಾಸಿಯ ದರ್ಶನ ದಿಂದ ಸಿದ್ದಾರ್ಥನ ಜೀವನದಲ್ಲಿ ಅಗಾಧ ಮಾರ್ಪಾಡು ಆಗುತ್ತದೆ. ಜನನ ಮರಣ ಗಳಿಗೆ, ದುಃಖ ಗಳಿಗೆ ಕಾರಣವನ್ನು ಹುಡುಕ ಬೇಕೆಂಬ ಹಂಬಲ ತೀವ್ರ ವಾಗುತ್ತದೆ. ತನ್ನ ಸಂಕಲ್ಪ ಸಿದ್ಧಿಗೆ ಇದುವರೆಗೂ ನಡೆಸಿದ ಜೀವನ ಸಲ್ಲ ಎಂದು ತೀರ್ಮಾನಿಸುತ್ತಾನೆ. ಈ ಬಂಧನದ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಕಾಡಿನತ್ತ ಹೋಗುವುದೇ ಸರಿಯಾದ ಧರ್ಮ ಎಂದು ನಿರ್ಧರಿಸುತ್ತಾನೆ. ಆದರೆ ಒಂದು ಕ್ಷಣ ಸಿದ್ದಾರ್ಥನು ಗೊಂದಲಕ್ಕೆ ಈಡಾಗುತ್ತಾನೆ.

ತನ್ನನ್ನು ನಂಬಿದವರಿಗೆ ತನ್ನ ಅಗಲುವಿಕೆ ಯಿಂದ ಎಷ್ಟೊಂದು ನೋವಾಗುವುದು ಎಂದು ಯೋಚಿಸುತ್ತಾನೆ. ನಂತರ ಸಿದ್ಧಾರ್ಥನು ತನ್ನ ತಂದೆ ಶುದ್ದೋಧನನ ಬಳಿಗೆ ಹೋಗಿ ತಾನು ಸನ್ಯಾಸಿ ಯಾಗಲಿರುವ ವಿಷಯವನ್ನು ತಿಳಿಸಿ ಅನುಮತಿ ಬೇಡುತ್ತಾನೆ.

ಆದರೆ ಶುದ್ಧೋಧನನು ತನ್ನ ಮಗ ಸಿದ್ಧಾರ್ಥ ಸನ್ಯಾಸಿಯಾಗಲು ಅನುಮತಿಯನ್ನೂ ನೀಡುವುದಿಲ್ಲ. ಆಗ ಸಿದ್ಧಾರ್ಥ ತಂದೆ ತನಗೆ ಬೇಕಾದ ವಸ್ತುವನ್ನು ಕೊಡಿಸುವುದಾದರೆ ತಾನು ಸಂಸಾರ ತ್ಯಾಗ ಮಾಡುವುದಿಲ್ಲ ಎಂದು ಹೇಳಿ ತನ್ನ ಬೇಡಿಕೆಯನ್ನು ತಂದೆಯ ಮುಂದಿಡುತ್ತಾನೆ.

ಆ ಬೇಡಿಕೆ ಏನೆಂದರೆ

  • ತನಗೆ ಎಂದು ವೃದ್ದಾಪ್ಯ ಬಾರದಂತಿರಬೇಕು
  • ನಿತ್ಯವೂ ತಾನು ದುಃಖ ರಹಿತ ನಾಗಿರಬೇಕು.
  • ತನಗೆ ಮರಣವೇ ಸಂಭವಿಸದೇ ಅಮರ ಜೀವಿಯಾಗಿರಬೇಕು.
  • ಯಾವ ರೋಗ ರುಜಿನಗಳು ತನ್ನನ್ನು ಸ್ಪರ್ಶಿಸಬಾರದು.

ಇವುಗಳನ್ನು ತಂದೆ ಖರೀದಿಸುವುದಾದರೆ ತಾನು ಅರಣ್ಯ ಗಮನ ವನ್ನು ಬಯಸುವುದಿಲ್ಲ ಎಂದಾಗ ಶುದ್ಧೋಧನ ಮಾತುಗಳಿಲ್ಲದೆ ಮುಖ ನಾಗುತ್ತಾನೆ.

ಕಡೆಗೆ ಸಿದ್ದಾರ್ಥ ತನ್ನ ಪ್ರಯಾಣದ ವಾರ್ತೆ ಯನ್ನು ಯಾವ ಬಂಧು ಬಾಂಧವರಿಗೂ ತಿಳಿಸಲು ಇಷ್ಟಪಡದೆ ಮಧ್ಯರಾತ್ರಿಯಲ್ಲಿ ಎದ್ದು ಅರಮನೆಯಿಂದ ಹೊರಡಲು ಉತ್ಸುಕನಾಗಿ ಕೊನೆಯ ಸಲ ಒಂದೇ ಒಂದು ಬಾರಿ ತನ್ನ ಮಗನ ಮುದ್ದು ಮುಖವನ್ನು ನೋಡಲು ತೆರಳುತ್ತಾನೆ. ಅಲ್ಲಿ ಸುಖ ನಿದ್ರೆಯಲ್ಲಿ ಮಲಗಿದ್ದ ಪತ್ನಿ ಮತ್ತು ಮಗನನ್ನು ಕಣ್ತುಂಬಿಕೊಂಡು ಹೊರ ನಡೆಯುತ್ತಾನೆ.

ಕಂದಕ ವೆಂಬ ಕುದುರೆಯೊಂದಿಗೆ ಅರಣ್ಯದಗೆ ಪಯಣ

ಅರಮನೆಯಿಂದ ಹೊರಬಂದು ತನ್ನ ನೆಚ್ಚಿನ ಸೇವಕನಾದ ಚಂದಕ ಅಥವಾ ಚೆನ್ನ ನನ್ನು ಎಬ್ಬಿ ಸಿಕೊಂಡು ಕಂದಕ ವೆಂಬ ಕುದುರೆಯೊಂದಿಗೆ ರಾಜ್ಯ ತ್ಯಾಗ ಮಾಡಿ ಅರಣ್ಯದಗೆ ಪಯಣ ಬೆಳೆಸುತ್ತಾನೆ.

ಕಾಡಿನ ಮಧ್ಯಭಾಗಕ್ಕೆ ಬಂದು ಕುದುರೆಯಿಂದ ಕೆಳಗಿಳಿದು ಚಂದನ ಲ್ಲಿ ಕ್ಷಮೆ ಕೇಳಿ ಅವನನ್ನು ಸಾಂತ್ವನ ಗೊಳಿಸಿ ಸಾಧನೆಯ ಸಿದ್ಧಿಗಾಗಿ ಹೊರಡುತ್ತಾನೆ.

ಹೀಗೆ ಸಿದ್ಧಾರ್ಥನು ಭಾರ್ಗವ ಆಶ್ರಮಕ್ಕೆ ಬಂದು ಅಲ್ಲಿನ ಸಾಧಕರಿಂದ ತಪೋ ನಿಯಮ ಗಳನ್ನು ತಿಳಿಯಲು ಯತ್ನಿಸುತ್ತಾನೆ. ನಂತರ ಮಗದ ದೇಶಗಳಿಗೆ ಪ್ರಯಾಣವನ್ನು ಆರಂಭಿಸುತ್ತಾನೆ.

ರಾಜ ವೈಭವ ವನ್ನು ಅನುಭವಿಸಿದ್ದ ಸಿದ್ಧಾರ್ಥನು ಆನೆ ಸಂಚಾರ ಕ್ಕೆ ಹೆದರದೆ ಹಸಿವು ತೃಷೆ ಗಳ ಪರಿವೆ ಇಲ್ಲದೆ ರಾಜಗೃಹಕ್ಕೆ ಬಂದು ದಿನ ಮನೆಯಲ್ಲಿ ಭಿಕ್ಷೆ ಎತ್ತಿ ತನ್ನ ಜೀವನ ದಲ್ಲಿ ಮೊದಲ ಬಾರಿಗೆ ಭಿಕ್ಷಾನ್ನ ವನ್ನು ಸ್ವೀಕರಿಸುತ್ತಾನೆ.

ಸ್ವಲ್ಪ ಕಾಲ ಮಗಧ ರಾಜ್ಯದ ಆರಾಡಕಾಲ ಎಂಬ ತಪಸ್ವಿಯ ಬಳಿ ಶಿಷ್ಯನಾಗಿ ಸೇರಿದನು ಸಿದ್ದಾರ್ಥನು ತನ್ನ ರಾಜ್ಯವನ್ನು ಬಿಟ್ಟು ಬಂದಾಗ ಅವನಿಗೆ ಕೇವಲ 29 ವರ್ಷ ವಯಸ್ಸಾಗಿತ್ತು.

ಉರುವೇಲಾ ಅವನ ತಪಸ್ಸಗೆ ಉತ್ತಮ ಸ್ಥಳ ವಾಗಿತ್ತು. ಸಿದ್ಧಾರ್ಥನು ಯಾವ ಸಾಧನೆಯಿಂದಲೂ ತೃಪ್ತ ನಾಗದೆ ಕೊನೆ ಗೆ ನಿರಾಹಾರ ನಾಗಿ ತಪಸ್ಸನ್ನು ಆಚರಿಸುತ್ತಾನೆ. ನಿರಾಹಾರ ವ್ರತ ದಿಂದ ದೇಹ ಕೃಶ ವಾಗಿ ಅವನ ಚೈತನ್ಯವೇ ಉಡುಗಿ ಹೋಗಿ ಪ್ರಜ್ಞೆ ತಪ್ಪುತ್ತಾನೆ.

ಕಾಯ ಕ್ಲೇಶ ನಿರಾಹಾರ ನಿಯಮಗಳು ಸಾಧನೆಗೆ ಸಹಾಯವಲ್ಲ ಎಂದು ಅರಿಯುತ್ತಾನೆ. ಆಗ ಸುಜಾತ ಎಂಬ ಮಹಿಳೆ ತಂದು ಕೊಟ್ಟ ಪಾಯಸವನ್ನು ಸೇವಿಸಿ ತಡೆಯಲಾಗದ ಹಸಿವಿನಿಂದ ಮುಕ್ತಿ ಹೊಂದಿ ಸಮಾಧಾನ ಚಿತ್ತ ದಿಂದ ಬೋಧಿವೃಕ್ಷದ ಕೆಳಗೆ ಪೂರ್ವಾಭಿಮುಖವಾಗಿ ಪದ್ಮಾಸನ ಹಾಕಿ ಧ್ಯಾನಾಸಕ್ತ ನಾಗುತ್ತಾನೆ. ಸಿದ್ಧಾರ್ಥನ ಸುಮಾರು ಏಳು ವಾರಗಳ ಕಾಲ ಧ್ಯಾನಾಸಕ್ತನಾಗಿ ಕುಳಿತಿದ್ದನು.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay
ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ ಸಿದ್ಧಿ

ವೈಶಾಖ ಹುಣ್ಣಿಮೆಯ ದಿನ ಸಿದ್ದಾರ್ಥನಿಗೆ ಸಂಕಲ್ಪ ಸಿದ್ಧಿ ಆಯಿತು. ಸೂರ್ಯೋದಯ ವಾಗುವುದರೊಳಗೆ ಬೋಧಿ ವೃಕ್ಷದ ಕೆಳಗೆ ಸಿದ್ಧಾರ್ಥ ನಾಲ್ಕು ಜಾವದ ಅನುಭವ ಪಡೆದು ಜ್ಞಾನ ಯೋಗಿ ಯಾಗುತ್ತಾನೆ.

ಹೀಗೆ ಸಿದ್ಧಾರ್ಥನು ಜ್ಞಾನೋದಯ ಪಡೆದ ಸ್ಥಳವೇ ಬೋಧಗಯ ಇದು, ಈಗಿನ ಬಿಹಾರ ರಾಜ್ಯದ ಗಯಾ ಎಂಬ ಜಿಲ್ಲೆಯಲ್ಲಿದೆ ಆ ನಾಲ್ಕು ಜಾವ ದಲ್ಲಿನ ಅನುಭವಗಳೆಂದರೆ.

ಸಿದ್ಧಾರ್ಥನು ಅನುಭವಗಳೆಂದರೆ

  • ಜನ್ಮಾಂತರ ಗಳ ಅರಿಯುವಿಕೆ.
  • ನಿತ್ಯ ನಿತ್ಯ ವಸ್ತುಗಳ ವಿವೇಕೋದಯ
  • ಜರಾ ಮರಣ ಗಳ ದುಃಖ ಕ್ಕೆ ಕ್ಷಣಿಕ ವಸ್ತುಗಳ ತೃಷೆ ಕಾರಣ.
  • ಅಧ್ಯಾತ್ಮ ತತ್ತ್ವದ ಸಾಕ್ಷಾತ್ಕಾರ.

ಹೀಗೆ ತಾವು ಪಡೆದಂತ ಅನುಭವಗಳನ್ನು ಗೌತಮ ಬುದ್ಧರು ತಾವು ಹಾಗೂ ತಮ್ಮ ಶಿಷ್ಯರ ಮೂಲಕ ಇತರರಿಗೂ ಬೋಧಿಸುತ್ತಾರೆ.

ಇದುವೇ ಬುದ್ಧ ಧರ್ಮ

  • ಸಂಶೋಧನೆ
  • ತಿಳುವಳಿಕೆ
  • ಅನುಭವಿಸುವಿಕೆ
  • ಮತ್ತು ಅದನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುವುದು.

ಇದುವೇ ಬುದ್ಧ ಧರ್ಮ. ಅವರು ಬೋಧಿಸಿದ್ದು ದುಃಖ ದಿಂದ ಹೊರಬರುವ ಮಾರ್ಗ ವನ್ನು ಮಾತ್ರ.

ಇದನ್ನು ಅವರ ಪಾಲಿ ಭಾಷೆಯಲ್ಲಿ ಧಮ್ಮ ಎಂದು ಕರೆದರು.

ತಾನು ಬೋಧಿಸುತ್ತಿರುವದಲ್ಲಿ ಹೊಸದೇನೂ ಇಲ್ಲವೆಂದೂ ಹಾಗೂ ಈ ಸತ್ಯವನ್ನು ಕಂಡುಕೊಂಡ ವರಲ್ಲಿ ತಾನು ಮೊದಲನೆಯ ವನೂ ಅಲ್ಲ. ಕೊನೆಯವನೂ ಅಲ್ಲವೆಂದು ಸಾರಿದರು.

ಯಾರು ಬೇಕಾದರೂ ಈ ಮಾರ್ಗ ವನ್ನು ಅನುಸರಿಸಿ, ದುಃಖ ದಿಂದ ಮುಕ್ತರಾಗ ಬಹುದು ಮತ್ತು ತನ್ನಂತೆ ಎಚ್ಚರದ ಸ್ಥಿತಿಯನ್ನು ಹೊಂದ ಬಹುದು. ಆದರೆ ಈ ಸಿದ್ಧಿಗೆ ಸ್ವಂತ ಪ್ರಯತ್ನ ಸಾಧನೆ ಮಾತ್ರ ಕಾರಣ ಎಂದು ಹೇಳಿದರು. ಸತತ ಎಚ್ಚರದ ಸ್ಥಿತಿಯನ್ನು ಸಾಧಿಸಿದ ಯಾರನ್ನು ಬೇಕಾದರೂ ಬುದ್ಧನೆಂದು ಕರೆಯಬಹುದು. ತಾನು ಅಂತಹ ಅರಿವಿನ ಸ್ಥಿತಿಯಲ್ಲಿ ರುವುದರಿಂದ ತನ್ನನ್ನು ಬುದ್ಧನೆಂದು ಸಂಬೋಧಿ ಸಲು ಅವರು ತನ್ನ ಶಿಷ್ಯರಿಗೆ ಸೂಚಿಸಿದರು.

ಬುದ್ಧನ ಮೊದಲ ಶಿಷ್ಯ ಆನಂದ

ಬುದ್ಧ ಎಂದರೆ ನಿದ್ದೆಯಿಂದ ಎದ್ದವನು ಜಾಗೃತ ನಾದವನು ಜ್ಞಾನಿ ವಿಕಸಿತ ಎಲ್ಲವನ್ನು ತಿಳಿದವನು ಎಂದರ್ಥ. ಅವನು ಎಲ್ಲರಿಗೂ ಸಂಜೀವಿನಿ ಯಂಥ ಮಾಹಿತಿ ನೀಡಿದ ಮಹಾತ್ಮ.

ಅದರಲ್ಲೂ ಆಸೆಯೇ ದುಃಖಕ್ಕೆ ಮೂಲ ಆಸೆಯನ್ನು ತ್ಯಜಿಸಿ ದವನು ದುಃಖ ದಿಂದ ದೂರವಾಗುವನು ಎಂಬ ಮಾತು ಈಗ ಲೂ ಅಜರಾಮರ. ಇದು ಅವರ ಪ್ರಸಿದ್ಧ ತತ್ವ.

ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay
ಗೌತಮ ಬುದ್ಧನ ಜೀವನ ಚರಿತ್ರೆ | Gautama Buddha Information in Kannada Best No1 Essay

ಗೌತಮ ಬುದ್ಧ ಕೊನೆಯ ದಿನಗಳು

ಹೀಗೆ ಗೌತಮ ಬುದ್ಧ ರು ತಮ್ಮ ಬೋಧನೆ ಗಳನ್ನು ಮಾಡುತ್ತ ತಮ್ಮ 80 ನೇ ವಯಸ್ಸಿನಲ್ಲಿ ಖುಷಿ ನಗರ ಎಂಬಲ್ಲಿ ತಮ್ಮ ಕೊನೆಯುಸಿರೆಳೆಯುತ್ತಾರೆ. ಖುಷಿ ನಗರ ಈಗಿನ ಉತ್ತರ ಪ್ರದೇಶದಲ್ಲಿದೆ ಹೀಗೆ ಎಷ್ಟೇ 1000 ವರ್ಷಗಳು ಕಳೆದರು. ಗೌತಮ ಬುದ್ಧರ ತತ್ವ ಗಳು ಈಗಲೂ ಕೂಡ ಅಜರಾಮರ ಬಹಳಷ್ಟು ಜನರು ಗೌತಮ ಬುದ್ಧರ ತತ್ವ ಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.

FAQ

ಬುದ್ಧನಿಗೆ ಜ್ಞಾನೋದಯವಾದ ಸ್ಥಳ?

ಬೋಧಗಯ

ಗೌತಮ ಬುದ್ಧನ ಮೊದಲ ಹೆಸರು

ಸಿದ್ಧಾರ್ಥ

ಇತರೆ ಪ್ರಬಂಧಗಳನ್ನು ಓದಿ

1 thoughts on “ಗೌತಮ ಬುದ್ಧ ಜೀವನ ಚರಿತ್ರೆ | Gautam Buddha Information in Kannada

Leave a Reply

Your email address will not be published. Required fields are marked *