gangavva tayi kannada notes |ಗಂಗವ್ವ ತಾಯಿ ಕನ್ನಡ ನೋಟ್ಸ್

Gangavva Tayi Kannada Notes | ಗಂಗವ್ವ ತಾಯಿ ಕನ್ನಡ ನೋಟ್ಸ್

gangavva tayi kannada notes, ಗಂಗವ್ವ ತಾಯಿ ಕನ್ನಡ ನೋಟ್ಸ್, 6th standard kannada pdf, 6th class kannada 1st lesson question answer, poem, padya

Gangavva Tayi Kannada Notes

ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ ?

ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ

ಗಂಗವ್ವ ತಾಯಿ ಕವನವನ್ನು ಬರೆದವರು ಯಾರು ?

ಸಿದ್ಧಲಿಂಗ ಪಟ್ಟಣಶೆಟ್ಟಿ

ಕವಿ ಪರಿಚಯ

ಸಿದ್ಧಲಿಂಗ ಪಟ್ಟಣಶೆಟ್ಟಿ ಯವರು ಕನ್ನಡದ ಪ್ರಮುಖ ಕವಿ , ವಿಮರ್ಶಕ ಅಂಕಣಕಾರ ಹಾಗೂ ಅನುವಾದಕರು.

ಧಾರವಾಡ ಸನಿಹದ ಯಾದವಾಡದಲ್ಲಿ 3-11-1929 ಬಸೆಟ್ಟಪ್ಪ ಹಾಗೂ ಗಿರಿಜಾದೇವಿಯವರ ಮಗನಾಗಿ ಜನಿಸಿದರು.

ಧಾರವಾಡದ ವಿದ್ಯಾಗಿರಿಯ ಹೂಮನೆ’ಯಲ್ಲಿ ನೆಲೆಗೊಂಡಿರುವ ಡಾ . ಪಟ್ಟಣಶೆಟ್ಟಿಯವರು 30 ಕ್ಕಿಂತ ಹೆಚ್ಚು ಕನ್ನಡ ಮತ್ತು 10 ರಷ್ಟು ಹಿಂದೀ ಪುಸ್ತಕಗಳನ್ನು ರಚಿಸಿದ್ದಾರೆ.

ಕವನ ಸಂಗ್ರಹಗಳು

  • ನೀನಾ
  • ಔರಂಗಜೇಬ
  • ಪರದೇಸಿ ಹಾಡುಗಳು
  • ಅಯಸ್ಕಾಂತ
  • ಇಷ್ಟು ಹೇಳಿದ ಮೇಲೆ
  • ಅಪರಂಪಾರ

ಕಥಾಸಂಗ್ರಹಗಳು

  • ಮಾವ
  • ಹಕ್ಕಿಗಳು

ವಿಮರ್ಶಾಕೃತಿಗಳು

  • ಅನುಶೀಲನ
  • ರಂಗಾಯಣ
  • ಪರಿಭಾವನ
  • ವಿವೇಚನ

ಅನುವಾದ ನಾಟಕಗಳು ಮುಖ್ಯವಾದವುಗಳು

  • ಆಷಾಢದ ಒಂದು ವಿನ
  • ಆದೇಅದೂರೇ
  • ಅಂಧಯುಗ
  • ಮುದ್ರಾರಾಕ್ಷಸ
  • ಶಸ್ತ್ರಸಂತಾನ
  • ಕೋರ್ ಮಾರ್ಷಲ್
  • ಚೋರ ಚರಣದಾಸ
  • ಆಕಾಶಬೇರಿ
  • ಕಾಲ ಕೆಳಗಿನ ನೆಲ

ಪ್ರಶಸ್ತಿಗಳು

1996 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ‘ ಗೌರವ ಫೆಲೊಶಿಪ್ ”

1998 ರಲ್ಲ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ

ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಅನೇಕ ಪ್ರಶಸ್ತಿಗಳು ಇವರಿಗೆ ಸಂದಿವೆ .

ಇತರೆ

ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕನ್ನಡ ಸಲಹಾ ಮಂಡಳಿಯ ಸಂಚಾಲಕರಾಗಿದ್ದರು .

ಪ್ರಸ್ತುತ ‘ ಗಂಗವ್ವ ತಾಯಿ ‘ ಕವನವನ್ನು ಇವರ ‘ ನಿನ್ನ ಮರೆಯೂ ಮಾತು ‘ ಎಂಬ ಸಂಕಲನದಿಂದ ಆರಿಸಿಕೊಳ್ಳಲಾಗಿದೆ .

ಎರಡು – ಮೂರು ವಾಕ್ಯದಲ್ಲಿ ಉತ್ತರಿಸಿರಿ

  1. ಗಂಗವ್ವ ಇದ್ದರೆ ಎಲ್ಲೆಲ್ಲಿ , ಏನೇನು ಆಗುವುದೆಂದು ಕವಿ ಹೇಳಿದ್ದಾರೆ ?
    ಉತ್ತರ : ಗಂಗವ್ವ ಇದ್ದರೆ ಒಣಗಿದ ನೆಲದಲ್ಲಿ ಹಸಿರು ಅಲಂಕರಿಸುವುದು , ಹಸಿರು ಹಸಿರಾಗಿ ಬೆಳೆದು

ಎಲ್ಲರ ಉಸಿರು ಉಳಿಸುವುದು , ಗಂಗವ್ವ ಬಂದರೆ ಜನರ ಮೈ ಮನಸ್ಸಿನ ಕೊಳೆಯೆಲ್ಲಾ ತೊಳೆಯಲ್ಪಟ್ಟು

ಅವರು ಪರಿಶುದ್ಧರಾಗುವರು . ನದಿಯಾಗಿ ಹರಿದಾಗ ಹನಿ ಹನಿ ಕಣ ಕಣವೆಲ್ಲಾ ಜಗಿಸಿ ಎಲ್ಲೆಲ್ಲೂ ಸಂತೋಷ , ನಗು ನಲಿವು ಕಂಡುಬರುತ್ತದೆ .

2. ನೀರು ಯಾವ ಯಾವ ಕೆಲಸಕ್ಕೆ ಬೇಕು ಎಂದು ಕವಿ ಹೇಳಿದ್ದಾರೆ ?
ಉತ್ತರ :
ನೀರು ಜನರ ಉಪಯೋಗಕ್ಕೆ ಪ್ರಾಣವಾಯುವಿನಷ್ಟೆ ಅಗತ್ಯವಾಗಿ ಮನುಷ್ಯನಿಗೆ ಕುಡಿಯಲು ಬೇಕು ,

ಮಳೆಯಾಗಿ ಸುರಿದರೆ ಮಾತ್ರ ನೆಲ ಹಸಿರಾಗುತ್ತದೆ . ಹಸಿರು ನೆಡಲು ಸಾಧ್ಯವಾಗುತ್ತದೆ . ಹಸಿರು ಎಲ್ಲರಿಗೂ ಬೇಕಾದ

ಆಹಾರ ಕೊಟ್ಟು ಜೀವಿಗಳ ಉಸಿರನ್ನು ಉಳಿಸುತ್ತದೆ ನೀರು ಇಲ್ಲದೆ ಜನರ ಮೈಗಳು ಕೊಳಕಾಗಿದ್ದರೆ , ಅದನ್ನು ಸ್ವಚ್ಛಗೊಳಿಸಲು

ನೀರು ಅಗತ್ಯವಾಗಿ ಬೇಕು , ನೀರು ಇಲ್ಲದೆ ಬರಗಾಲ ಬಂದಲ್ಲಿ ಜನರು ಮನಸ್ಸು ತೊಡಗಿಸುತ್ತಾರೆ . ಅದರ ಬದಲು ಎಲ್ಲರಿಗೂ

ತೃಪ್ತಿಯಾಗಿ ಊಟ – ಬಟ್ಟೆ ಸಿಕ್ಕಲ್ಲಿ ಅವರ ಮನಸ್ಸು ಇಂಥಹ ಕೆಲಸಗಳಿಗೆ ಎಡೆ ಮಾಡುವುದಿಲ್ಲ.

ಒಂದು ವಾಕ್ಯದಲ್ಲಿ ಉತ್ತರಿಸಿ

1.ನೀರು ಎಲ್ಲೆಲ್ಲಿ ತುಂಬಬೇಕು ಎಂದು ಕವಿ ಹೇಳುತ್ತಾರೆ ?

ಉತ್ತರ : ನೀರು ನೆಲದ ಕಣ ಕಣದಾಗ ಹಾಗೂ ಮನದ ಪದಪದರಾಗದಾಗ ತುಂಬಬೇಕು ಎಂದು ಕವಿ ಹೇಳುತ್ತಾರೆ .

2.ನೀರು ಹೇಗೆಲ್ಲ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ ?
ಉತ್ತರ :
ನೀರು ನೆಲದ ಒಳ ಹೊರಹೆಲ್ಲ , ಪಾಣದ ತುಂಬೆಲ್ಲಾ ನಗುನಗುತ , ನಲಿಯುತ , ಪುಟಿಯುತ್ತ , ಕುಣಿಯುತ್ತ , ಚಿಮ್ಮುತ್ತಾ , ಜಿಗುಯುತ್ತಾ , ಹರಿಯುತ್ತಾ , ಸುರುಯುತ್ತಾ ಹರಿದು ಬರಬೇಕೆಂದು ಕವಿ ವಿನಂತಿಸಿಕೊಂಡಿದ್ದಾರೆ .

3. ಒಣಗಿದ ನೆಲದಲ್ಲಿ ನೀರು ಹೇಗೆ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ ?
ಉತ್ತರ : ಒಣಗಿದ ನೆಲದಲ್ಲಿ ಹಸುರಾಗಿ ಹೊಳೆಯಬೇಕು ಎಂದು ಕವಿ ಹೇಳುತ್ತಾರೆ .

4. ಈ ಕವನವನ್ನು ಬರೆದವರು ಯಾರು ?
ಉತ್ತರ : ಈ ಕವನವನ್ನು ಬರೆದವರು ಡಾ || ಸಿದ್ದಲಿಂಗ ಪಟ್ಟಣಶೆಟ್ಟಿಯವರು .

ಕೊಟ್ಟಿರುವ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು

1.ನೆಲದ ಕಣಕಣದಾಗ ಮನದ ಪದಪದರಾಗ
ಉತ್ತರ :
ಮಳೆ ಬಾರದೆ ಇದ್ದಾಗ ರೈತರು ಗಂಗವ್ವನನ್ನು ಕವಿಯ ಮೂಲಕ ಕರೆದಿದ್ದಾರೆ .

2.ಹರಿಯುತ್ತ ಸುರಿಯುತ್ತ ಧೋಧೋ ಬಾರವ್ವ
ಉತರ :
ಜನತೆ ಗಂಗವ್ವನನ್ನು ಮಳೆಯಾಗಿ ಸುರಿಯುವಂತೆ ಹೇಳಿರುವುದನ್ನು ಕವಿ ಕವಿತೆಯ ಮೂಲಕ ಕರೆದಿದ್ದಾರೆ .

3.ಒಣಗೀದ ನೆಲದಾಗ ಹಸಿರುಸಿರು ಉಳಿಸಾಕ

ಉತ್ತರ : ಗಂಗವ್ವ ಮಳೆಯಾಗಿ ಏಕೆ ಸುರಿಯಬೇಕೆನ್ನುವ ಪ್ರಶ್ನೆಗೆ ಉತ್ತರವಾಗಿ ಕಎ ಗಂಗವ್ವ ಒಣಗಿರುವ

ನೆಲಕ್ಕೆ ಹಸಿರು ಬೆಳೆಯುವಂತೆ ಮಾಡಲು ಬರಬೇಕೆಂದು ರೈತರ ಪ್ರತಿನಿಧಿಯಾಗಿ ಕವಿ ಗಂಗವ್ವನನ್ನು ಕರೆಯುತ್ತಿದ್ದಾರೆ .

4.ಜೀವದಾ ತುಣಕಾಗಿ ಮೈಮನಸ ಹೊಲಸೆಲ್ಲ .
ಉತ್ತರ :
ಜೀವನದಲ್ಲಿ ಉಂಟಾಗಿರುವ ಎಲ್ಲಾ ರೀತಿಯ ಮೈ ಮನಸ್ಸಿನ ಕೊಳೆಯೆಲ್ಲ ತೆಗೆಯಲು

ಗಂಗವ್ವ ಧರೆಗೆ ಇಳಿದು ಬಾ ಎಂದು ಕಏ ಗಂಗವ್ವನಿಗೆ ಕರೆದಿದ್ದಾರೆ .

ಬಿಟಸ್ಥಳಗಳನ್ನೂ ಈ ಕೆಳಗೆ ನೀಡಲಾದ ಸೂಕ್ತ ಪದಗಳಿಂದ ಭರ್ತಿಮಾಡಿ

ಬಾರವ್ವ ತಾಯಿ ಗಂಗವ್ವ ತಾಯಿ
ಹೊಳೆಯವ್ವ ತಾಯಿ ನೀರವ್ವ ತಾಯಿ
ಮೈಮನಸ ಹೊಲಸೆಲ್ಲ ತೊಳೆಯನ್ನ ತಾಯಿ
ನೀರವ್ವ ಗಂಗವ್ವ ಮಳೆಯಾಗಿ ಬಾರವ್ವ
ಒಣಗೀದ ನೆಲದಾಗ ಹಸುರಾಗಿ ಹೊಳೆಯವ್ವ

ಕೊಟ್ಟಿರುವ ಪದ್ಯದಲ್ಲಿ ಪ್ರಾಸಪದಗಳನ್ನು ಗುರುತಿಸಿ ಬರೆಯಿರಿ

ಬೆಳ್ಳಾನ ಎರಡೆತ್ತು ಬೆಳ್ಳಿಯ ಬಾರುಕೋಲು

ಹಳ್ಳಾದ ಮಾಗಿ ಹೊಡೆದಾವು | ಎತ್ತಿನ

ತೆಜ್ಞಾನ ಹೊಟ್ಟಿ ಹಸಿದಾವು.

ಮೊದಲು ಮತ್ತು ಎರಡನೇ ಹಾಗೂ ಮೂರನೇ ಸಾಲಿನ ಎರಡನೇ ಅಕ್ಷರ ‘ ಳ್ಳಾ ‘ ಪುನರಾವರ್ತನೆ ಆಗಿರುವುದರಿಂದ ಇದು ‘ ಆದಿ ಪ್ರಾಸ ‘ ವಾಗಿದೆ.

ಸಮಾನಾರ್ಥಕ ಪದಗಳನ್ನು ಬರೆಯಿರಿ

ತಾಯಿ : ಅಮ್ಮ, ಅವ್ವ ,ಮಾತೆ
ನೀರು : ಜಲ , ಗಂಗೆ
ಕುಣಿ : ಹೊಂಡ, ನೃತ್ಯ ಮಾಡು
ನಭ : ಆಕಾಶ , ಆಗಸ , ಬಾನು

ಪದಗಳ ಅರ್ಥ

ದುಸ್ತರ– ಕಠಿಣ, ಕಷ್ಟಸಾಧ್ಯ

ಕಣ– ಅತ್ಯಂತ ಸೂಕ್ಷ್ಮವಾದ ಅಂಶ , ಪ್ರಾಣ ಜೀವ , ಜೀವ ಉಳಿಯಲು ಕಾರಣವಾದ ಒಂದು ವಾಯು

ನಭ – ಆಕಾಶ , ಗಗನ , ಅಂಬರ , ಹೊಳೆ ನದಿ , ಮಿನುಗು

ಕುಣಿ – ಕುಳಿ , ಹೊಂಡ , ನರ್ತಿಸು , ಕೊಳೆ ಕಲ್ಮಷ , ಹೊಲಸು

ಚಿಮ್ಮು – ಹಾರು , ಜಿಗಿ , ನೆಗೆ

ತೊಳೆ – ನೀರಿನಿಂದ ಸ್ವಚ್ಛಗೊಳಿಸು

ಮಾಯ – ಇದ್ದಕ್ಕಿದ್ದಂತೆ ಕಾಣೆಯಾಗುವುದು , ಮರೆಯಾಗಿರುವುದು

ಹರಿ – ಓಡು , ಪ್ರವಹಿಸು ಹೋಗು , ತುಣುಕು ಚೂರು , ತುಂಡು ವಿವರ ತಿಳಿಯಿರಿ

ಇತರೆ ಪ್ರಮುಖ ಮಾಹಿತಿ

ಚಂದ್ರಶೇಖರ ಕಂಬಾರ ಅವರ ಜೀವನ ಚರಿತ್ರೆ

9ನೇ ತರಗತಿ ಕನ್ನಡ

ಕರ್ನಾಟಕ ಏಕೀಕರಣ ಇತಿಹಾಸ

ಇತರೆ ವೆಬ್ಸೈಟ್ ಲಿಂಕ್

ಗಂಗವ್ವ ತಾಯಿ ಕನ್ನಡ ನೋಟ್ಸ್ PDF DOWNLOAD NOW

Leave a Reply

Your email address will not be published. Required fields are marked *