Micro Economics in Kannada, ಸೂಕ್ಷ್ಮ ಅರ್ಥಶಾಸ್ತ್ರ ಪರಿಚಯ, Economics Chapter 1 Introduction Questions and Answers, Notes Pdf, Question Bank
Micro Economics in Kannada ಸೂಕ್ಷ್ಮ ಅರ್ಥಶಾಸ್ತ್ರ ಪರಿಚಯ
ಸರಿಯಾದ ಉತ್ತರಗಳನ್ನು ಆರಿಸಿ ಬರೆಯಿರಿ . ( ಒಂದು ಅಂಕದ ಪ್ರಶ್ನೆಗಳು ) :
1 ) ಒಂದು ಆರ್ಥಿಕತೆಯ ಕೊರತೆ ಸಂಪನ್ಮೂಲಗಳು ……….
- ಎ ) ಸರ್ಧಾತ್ಮಕ ಬಳಕೆಯನ್ನು ಹೊಂದಿವೆ
- ಬಿ ) ಅಪರಿಮಿತ ಬಳಕೆಯನ್ನು ಹೊಂದಿದೆ
- ಸಿ ) ಏಕ ಬಳಕೆಯನ್ನು ಹೊಂದಿವೆ .
- ಡಿ ) ಮೇಲಿನ ಯಾವುದೂ ಅಲ್ಲ
2 ) ಈ ಕೆಳಗಿನ ಯಾವುದು ಸೂಕ್ಷ್ಮ ಅರ್ಥಶಾಸ್ತ್ರದ ಉದಾಹರಣೆಯಾಗಿದೆ?
- ಎ ) ರಾಷ್ಟ್ರೀಯ ವರಮಾನ
- ಬಿ ) ಅನುಭೋಗಿಯ ವರ್ತನ
- ಸಿ ) ನಿರುದ್ಯೋಗ ಈ ಕೆಳಗಿನ ಯಾವುದು ಸಮಗ್ರ ಆರ್ಥಿಕತೆಯ
- ಎ ) ವೈಯಕ್ತಿಕ ಬೇಡಿಕೆ
4 ) ಒಂದು ಆರ್ಥಿಕತೆಯು ಒಳಗೊಂಡಿರುವ ಕೇಂದ್ರೀಯ ಸಮಸ್ಯೆಗಳು?
- ಎ ) ಏನನ್ನು ಉತ್ಪಾದಿಸಬೇಕು
- ಬಿ ) ಹೇಗೆ ಉತ್ಪಾದಿಸಬೇಕು .
- ಸಿ ) ಯಾರಿಗಾಗಿ ಉತ್ಪಾದಿಸಬೇಕು
- ಡಿ ) ಮೇಲಿನ ಎಲ್ಲವೂ ಹೌದು
Micro Economics in Kannada
5 ) ಸಾಂಪ್ರದಾಯಿಕವಾಗಿ ಅರ್ಥಶಾಸ್ತ್ರದ ವಿಷಯ ವಸ್ತುವನ್ನು ಈ ಎರಡು ವಿಭಾಗಗಳಲ್ಲಿ ಆಧ್ಯಯನ ಮಾಡಲಾಗಿದೆ ..
- ಎ ) ಸೂಕ್ಷ್ಮ ಮತ್ತು ಸಮಗ್ರ ಅರ್ಥಶಾಸ್ತ್ರ
- ಬಿ ) ವಾಸ್ತವಿಕ ಮತ್ತು ಮಾದರಿ ಅರ್ಥಶಾಸ್ತ್ರ
- ಸಿ ) ನಿಗಮನ ಮತ್ತು ಅನುಗಮನ ಉತ್ತರಗಳು
- ಡಿ ) ಮೇಲಿನ ಯಾವುದೂ ಅಲ್ಲ
ಉತ್ತರಗಳು : 1.ಬಿ 2.ಬಿ 3.ಬಿ 4.ಡಿ 5.ಎ
ಖಾಲಿ ಬಿಟ್ಟ ಸ್ಥಳವನ್ನು ಭರ್ತಿ ಮಾಡಿ ( ಪ್ರತಿಯೊಂದಕ್ಕೂ ಒಂದು ಅಂಕ ಮಾತ್ರ )
- 1 ) ಸಂಪನ್ಮೂಲಗಳ ಕೊರತೆಯು …….ಸಮಸ್ಯೆಯನ್ನು ಹುಟ್ಟು ಹಾಕುತ್ತದೆ .
- 2 ) ಕೇಂದ್ರೀಯ ಯೋಜಿತ ಆರ್ಥಿಕತೆಯಲ್ಲಿ ಎಲ್ಲಾ ಪ್ರಮುಖ ನಿರ್ಧಾರಗಳನ್ನು ………..ತೆಗೆದುಕೊಳ್ಳುತ್ತವೆ .
- 3 ) ವಾಸ್ತವವಾಗಿ ಎಲ್ಲಾ ಆರ್ಥಿಕತೆಗಳು …………ಆರ್ಥಿಕತೆಗಳಾಗಿವೆ .
ಉತ್ತರಗಳು : – 1 ) ಆಯ್ಕೆ 2 ) ಸರ್ಕಾರ 3)ಮಿಶ್ರ
ಹೊಂದಿಸಿ ಬರೆಯಿರಿ , ( ಪ್ರತಿಯೊಂದಕ್ಕೂ ಒಂದು ಅಂಕ ಮಾತ್ರ
- 1 ) ಮಾರುಕಟ್ಟೆ ಅರ್ಥವ್ಯವಸ್ಥೆ ಎ ) ಸರ್ಕಾರ
- 2 ) ಶಿಕ್ಷಕರ ಸೇವೆ ಬಿ ) ಖಾಸಗಿ ಒಡೆತನ
- 3 ) ಕೇಂದ್ರೀಯ ಯೋಜಿತ ಆರ್ಥಿಕತೆ ಸಿ )ಕೌಶಲ್ಯ
- 4 ) ವಾಸ್ತವಿಕ ಅರ್ಥಶಾಸ್ತ್ರ ಡಿ ) ಕಾರ್ಯತಂತ್ರಗಳ ಮೌಲ್ಯಮಾಪನ
- 5 ) ಮಾದರಿ ಅರ್ಥಶಾಸ್ತ್ರ ಸಿ ) ಕಾರ್ಯತಂತ್ರಗಳು ಕಾರ್ಯ ನಿರ್ವಹಣೆ
IV . ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯ ಅಥವಾ ಪದಗಳಲ್ಲಿ ಉತ್ತರಿಸಿ . ( ಪ್ರತಿಯೊಂದಕ್ಕೂ ೧ ಅಂಕ ಮಾತ್ರ )
1 ) ಆಯ್ಕೆಯ ಸಮಸ್ಯೆ ಏಕೆ ಉದ್ಭವಿಸುತ್ತದೆ ?
ಅಪರಿಮಿತ ಬಯಕೆಗಳು ಮತ್ತು ಮಿತ ಸಂಪನ್ಮೂಲಗಳಿಂದ ಆಯ್ಕೆಯ ಸಮಸ್ಯೆ ಉಂಟಾಗುತ್ತದೆ .
2 ) .ಮಾರುಕಟ್ಟೆ ಆರ್ಥಿಕತೆ ಎಂದರೇನು ?
ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ಮಾರುಕಟ್ಟೆಯ ಮೂಲಕ ನಿರ್ಣಯಿಸುವುದು ಮಾರುಕಟ್ಟೆ ಆರ್ಥಿಕತೆಯಾಗಿದೆ
3 ) ಕೇಂದ್ರೀಯ ಯೋಜಿತ , ಆರ್ಥಿಕತೆ ಎಂದರೆ ಏನೆಂದು ಅರ್ಥೈಸುವಿರಿ ?
ಸರ್ಕಾರ ಅಥವಾ ಕೇಂದ್ರೀಯ ಪ್ರಾಧಿಕಾರವು ಆರ್ಥಿಕತೆಯ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದೇ ಕೇಂದ್ರೀಯ ಯೋಜಿತ ಆ ೦೯ ಕತೆಯಾಗಿದೆ .
4 ) ಸೂಕ್ಷ್ಮ ರ್ಸಶಾಸ್ತ್ರ ಎಂದರೇನು ?
ವೈಯಕ್ತಿಕ ಆರ್ಥಿಕ ಪ್ರತಿನಿಧಿ ಅಥವಾ ಆರ್ಥಿಕತೆಯ ಸಣ್ಣ ಸಣ್ಣ ಭಾಗಗಳನ್ನು ಅಧ್ಯಯನ ಮಾಡುವುದು ಸೂಕ್ಷ ಅರ್ಥಶಾಸ್ತ್ರವಾಗಿದೆ . ಉದಾಹರಣೆ : ಒಬ್ಬ ಅನುಭೋಗಿ , ಒಬ್ಬ ಉತ್ಪಾದಕ , ಒಂದು ಉದ್ಯಮ
5 ).ವಾಸ್ತವಿಕ ಅರ್ಥಶಾಸ ವಿಶ್ಲೇಷಣೆ ಎಂದರೇನು
ಒಂದು ನಿರ್ದಿಷ್ಟ ವಿಷಯ ಅಥವಾ ಪರಿಸ್ಥಿತಿಯಲ್ಲಿ ಹೇಗಿದೆ ಹಾಗೆಯೇ ಅಧ್ಯಯನ ಮಾಡುವುದು ಆಗಿದೆ .
6) ಮಾದರಿ ಅರ್ಥಶಾಸ್ತ್ರ ವಿಶ್ಲೇಷಣೆ ಎಂದರೇನು ?
ಮಾದರಿ ಅರ್ಥಶಾಸ್ತ್ರ ನಿರ್ದಿಷ್ಟ ವಿಷಯ ಅಥವಾ ಪರಿಸ್ಥಿತಿ ಏನಾಗಿರಬೇಕು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದೆ .
ಕೆಳಗಿನ ಪ್ರಶ್ನೆಗಳಿಗೆ 4 ವಾಕ್ಯಗಳಲ್ಲಿ ಉತ್ತರಿಸಿ . ( ಪ್ರತಿಯೊಂದಕ್ಕೂ ಎರಡು ಅಂಕ ಮಾತ್ರ )
ಸೂಕ್ಷ್ಮ ಅರ್ಥಶಾಸ್ತ್ರ ಪರಿಚಯ
1)ಒಂದು ಆರ್ಥಿಕತೆಯ ಕೇಂದ್ರೀಯ ಸಮಸ್ಯೆಗಳನ್ನು ತಿಳಿಸಿ ,
ಪ್ರತಿಯೊಂದು ಆರ್ಥಿಕತೆ ಕೃಷಿ , ಕೈಗಾರಿಕ ಮತ್ತು ಸೇವಾ ವಲಯಗಳಿಂದ ಸಂಯೋಜನೆಗೊಂಡಿದೆ , ಈ ವಲಯಗಳಲ್ಲಿ ಉತ್ಪಾದನೆಗೆ ಸಂಬಂಧಿಸಿದ ಸಮಸ್ಯೆಗಳ ಕೇಂದ್ರೀಯ ಸಮಸ್ಯೆಗಳಾಗಿರುತ್ತದೆ .
- ಎ ) ಏನನ್ನು ಉತ್ಪಾದಿಸಬೇಕು ಮತ್ತು ಎಷ್ಟು ಪ್ರಮಾಣದಲ್ಲಿ
- ಬಿ ) ಸರಕುಗಳನ್ನು ಹೇಗೆ ಉತ್ಪಾದಿಸಬೇಕು .
- ಇ ಯಾರಿಗಾಗಿ ಈ ಸರಕುಗಳನ್ನು ಉತ್ಪಾದಿಸಬೇಕು ?
Micro Economics in Kannada
2 ) ಸೂಕ್ಷ್ಮ ಮತ್ತು ಸಮಗ್ರ ಅರ್ಥಶಾಸ್ತ್ರದ ನಡುವಿನ ವ್ಯತ್ಯಾಸ ತಿಳಿಸಿ .
- ಎ ) ವೈಯಕ್ತಿಕ ಆರ್ಥಿಕ ಪ್ರತಿನಿಧಿಗಳ ವರ್ತನೆಯನ್ನು ಸೂಕ್ಷ್ಮ ಅರ್ಥಶಾಸ್ತ್ರ ಅಧ್ಯಯನ ಮಾಡಿದರೆ ಇಡೀ ಆರ್ಥಿಕತೆಯ ಬಗ್ಗೆ ಅಧ್ಯಯನವನ್ನು ಸಮಗ್ರ ಅರ್ಥಶಾಸ್ತ್ರ ಮಾಡುತ್ತದೆ .
- ಬಿ ) ವ್ಯಕ್ತಿಗಳ ಪರಸ್ಪರ ಸಂವಹನದ ಬಗ್ಗೆ ಸೂಕ್ಷ್ಮ ಅರ್ಥಶಾಸ್ತ್ರ ಅಭ್ಯಸಿಸಿದರೆ ಸಮಗ್ರ ಅರ್ಥಶಾಸ್ತ್ರ ಸಮಗ್ರ ಉತ್ಪಾದನೆ , ಉದ್ಯೋಗ ಮತ್ತು ಸಮಸ್ಯೆ ಬೆಲೆಗಳ ಮಟ್ಟದ ಬಗ್ಗೆ ಅಭ್ಯಾಸಿಸುತ್ತದೆ .
3 ) .ವಾಸ್ತವಿಕ ಮತ್ತು ಮಾದರಿ ಅರ್ಥಶಾಸ್ಪದ ನಡುವಿನ ವ್ಯತ್ಯಾಸಗಳನ್ನು ತಿಳಿಸಿದ
ಒಂದು ನಿರ್ದಿಷ್ಟ ವಿಷಯ ಅಥವಾ ಪರಿಸ್ಥಿತಿಯಲ್ಲಿ ಹೇಗಿದೆ ಹಾಗೆ ಅಧ್ಯಯನ ಮಾಡುವುದು ವಾಸ್ತವಿಕ ಅರ್ಥಶಾಸ್ತ್ರವಾಗಿದೆ . ಮಾದರಿ ಅರ್ಥಶಾಸ್ತ್ರವು ಏನಾಗಿರಬೇಕು . ಹೀಗೆ ಕಾರ್ಯ ನಿರ್ವಹಿಸಬೇಕು ಎಂಬುದಕ್ಕೆ ಸಂಬಂಧಿಸಿದೆ .
4 ) ಉತ್ಪಾದನಾ ಸಾಧ್ಯತಾ ಗಣವನ್ನು ಏನೆಂದು ಅರ್ಥೈಸುವಿರಿ .
ಲಭ್ಯವಿರುವ ಒಟ್ಟು ಸಂಪನ್ಮೂಲಗಳ ಮೊತ್ತ ಮತ್ತು ತಾಂತಿಕ ಜ್ಞಾನದಿಂದ ಉತ್ಪಾದಿಸಲಾಗುವ ಎಲ್ಲಾ ಸರಕು ಮತ್ತು ಸೇವೆಗಳ ಸಾಧ್ಯತೆಗಳ ಸಂಯೋಜನೆಗಳ ಸಂಗ್ರಹವನ್ನು ಉತ್ಪಾದನಾ ಸಾಧ್ಯವಾಗಣ ಎನ್ನುತ್ತಾರೆ .
5 ) ಸದಾವಕಾಶ ವೆಚ್ಚ ಎಂದರೇನು ?
ಒಂದು ಸರಕನ್ನು ಸ್ವಲ್ಪ ಅಧಿಕ ಪ್ರಮಾಣದಲ್ಲಿ ಪಡೆಯಲು ಬಯಸಿದರೆ ಅದರ ಬದಲಾಗಿ ಎರಡನೇ ಉತ್ತಮ ಸರಕಿನ ಪ್ರಮಾಣವನ್ನು ಬಿಟ್ಟು ಕೊಡುವುದೇ ಸದಾವಕಾಶ ವೆಚ್ಚ ಎನ್ನುವರು .
6 ) ಉತ್ಪಾದನಾ ಸಾಧ್ಯತಾ ಗಡಿ ಎಂದರೇನು ?
ಒಂದು ಆರ್ಥಿಕತೆಯು ತನ್ನ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಬಳಸಿಕೊಂಡು ಉತ್ಪಾದಿಸಬಹುದಾದ ಸರಕುಗಳ ಸಂಯೋಜನೆಯ ಗಡಿಯನ್ನು ಉತ್ಪಾದನಾ ಸಾಧ್ಯತಾ ಗಡಿ ಎನ್ನುವರು .
Micro Economics in Kannada
ಇತಿಹಾಸ ನೋಟ್ಸ್ ಓದಲು ಈ ಕೆಳಗೆ ಕ್ಲಿಕ್ ಮಾಡಿ
- ಶಿಲಾಯುಗ ಇತಿಹಾಸ
- ಪ್ರಾಚೀನ ಭಾರತದ ಇತಿಹಾಸ
- ಶಾತವಾಹನರು
- ಗಾಂಧಿ ಯುಗ
- ಕರ್ನಾಟಕ ಏಕೀಕರಣ ಇತಿಹಾಸ
- ಆಧುನಿಕ ಕರ್ನಾಟಕ ಇತಿಹಾಸ
- ಶಾಸನಗಳು ಹಾಗೂ ಅದರ ಬಗ್ಗೆ ಮಾಹಿತಿ
Good