ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು
Natural vegetation of Karnataka, ಕರ್ನಾಟಕದ ನೈಸರ್ಗಿಕ ಸಸ್ಯವರ್ಗ , ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು , karnatakada swabhavika vargagalu in kannada , natural vegetation of karnataka information
Natural Vegetation of Karnataka In Kannada
- ಕರ್ನಾಟಕದ ಅರಣ್ಯ ಗಳು ವೈವಿಧ್ಯಮಯ ಹಾಗೂ ಸಂಪದ್ಭರಿತವಾಗಿದ್ದು , ಹಿಮಾಲಯದ ಅರಣ್ಯಗಳನ್ನು ಹೊರತುಪಡಿಸಿ , ಉಳಿದೆಲ್ಲಾ ಪ್ರಕಾರದ ಅರಣ್ಯಗಳನ್ನು ಹೊಂದಿವೆ .
- ಕರ್ನಾಟಕವು ಸುಮಾರು 19049836 | ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು , ಇದರಲ್ಲಿ 3070941 ಹೆಕ್ಟೇರ್ ಪ್ರದೇಶವು ಅರಣ್ಯಗಳಿಂದ ಕೂಡಿದೆ . ಇವು | ಭೌಗೋಳಿಕವಾಗಿ ಕ್ಷೇತ್ರದ ಶೇ 16.12 ರಷ್ಟನ್ನು ಹೊಂದಿದೆ
- ರಾಷ್ಟ್ರದ ಸರಾಸರಿ ಅರಣ್ಯ ಕ್ಷೇತ್ರದ ಪ್ರಮಾಣವು ಶೇ . 20.55 ರಷ್ಟಿದ್ದು , ಇದು ಉಷ್ಣ ಹವಾಮಾನವನ್ನು ಹೊಂದಿರುವ ಭಾರತದಂತಹ ರಾಷ್ಟ್ರಗಳಲ್ಲಿ ಶೇ . 33 ರಷ್ಟಿರಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ .
ಅರಣ್ಯದ ಪ್ರಕಾರಗಳು
ಅರಣ್ಯದ ವಿವಿಧ ಪ್ರಕಾರದ ಬಗ್ಗೆ ಈ ಕೆಳಗೆ ತಿಳಿಯೋಣ
1)ನಿತ್ಯ ಹರಿದ್ವರ್ಣದ ಅರಣ್ಯಗಳು
- ಈ ಮಾದರಿಯ ಅರಣ್ಯಗಳು ವಾರ್ಷಿಕ 250 ಸೆಂ . ಮೀ . ಗಿಂತ ಹೆಚ್ಚು ಮಳೆ ಮತ್ತು ವಾರ್ಷಿಕ ಸರಾಸರಿ 25 ಸೆಲ್ಸಿಯಸ್‌ನಿಂದ 27 ಸೆಲ್ಸಿಯಸ್ ಗಳವರೆಗೆ ಉಾಂಶವಿರುವ ಹಾಗೂ 900 ಮೀಟರ್‌ಗಳಿಗಿಂತ ಕಡಿಮೆ ಎತ್ತರವುಳ್ಳ ಪ್ರದೇಶಗಳಲ್ಲಿ ಕಂಡು ಬರುತ್ತವೆ .
- ಈ ಅರಣ್ಯಗಳು ಬೇರೆ ಬೇರೆ ಋತುಮಾನಗಳಲ್ಲಿ ಎಲೆ ಉದುರಿಸುವ ಮತ್ತು ಎಲೆ ಚಿಗುರಿಸುವ ವಿಧಾನಗಳನ್ನು ಹೊಂದಿವೆ . ಆದ್ದರಿಂದಲೇ ಈ ಪರಿಸರವು ಸದಾ ಹಚ್ಚ ಹಸಿರಾಗಿರುತ್ತದೆ ,
- ಈ ಅರಣ್ಯಗಳು ಮಹಾಗನಿ , ಶ್ರೀಗಂಧ , ತೇಗ , ಬೀಟೆ ಮುಂತಾದ ಬೆಲೆಬಾಳುವ ಗಿಡಮರಗಳನ್ನು ಹೊಂದಿರುತ್ತವೆ .
- ಅತಿ ಹೆಚ್ಚು ಮಳೆ ಬೀಳುವ ಪಶ್ಚಿಮ ಘಟ್ಟಗಳ ಇಳಿಜಾರು ಪ್ರದೇಶಗಳಲ್ಲಿ ಈ ಅರಣ್ಯಗಳು ಕಂಡುಬರುತ್ತವೆ .
- ಕರ್ನಾಟಕದ ಉತ್ತರ ಕನ್ನಡ , ದಕ್ಷಿಣಕನ್ನಡ , ಉಡುಪಿ , ಶಿವಮೊಗ್ಗ , ಚಿಕ್ಕಮಗಳೂರು , ಹಾಸನದ ಪಶ್ಚಿಮ ಭಾಗ , ಕೊಡಗು , ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಈ ಅರಣ್ಯಗಳು ಹಂಚಿಕೆಯಾಗಿವೆ .
2) ಮಿಶ್ರ ಅರಣ್ಯಗಳು
- ಈ ಅರಣ್ಯಗಳು 120-150 ಸೆಂ.ಮೀ. ಮಳೆಯಾಗುವ ಪ್ರದೇಶಗಳಲ್ಲಿ ನಿತ್ಯಹರಿದ್ವರ್ಣ ಮತ್ತು ಪರ್ಣಪಾತಿ ಅರಣ್ಯಗಳು ಮಿಶ್ರಣಗೊಂಡು ಬೆಳೆಯುತ್ತವೆ .
- ಈ ಅರಣ್ಯಗಳಲ್ಲಿರುವ ಗಿಡ – ಮರಗಳು ಹೆಚ್ಚು ಎತ್ತರ ವಾಗಿರುವುದಿಲ್ಲ ಮತ್ತು ಇವು ದಟ್ಟವಾಗಿ ಹರಡಿರದೆ , ಮರಗಳ ಮಧ್ಯೆ ಹೆಚ್ಚು ಸ್ಥಳಾವಕಾಶವಿರುತ್ತದೆ .
- ಮಿಶ್ರ ಅರಣ್ಯಗಳಲ್ಲಿನ ಸಸ್ಯವರ್ಗ ವೈವಿಧ್ಯ ಪೂರ್ಣವಾಗಿದ್ದು ತೇಗ, ಬೀಟೆ ,ಹೊನ್ನೆ, ನಂದಿ, ಶ್ರೀಗಂಧ, ಬಿಲ್ವಾರ ಮತ್ತು ಜಂಬೆ ಮುಂತಾದ ಬೆಲೆ ಬಾಳುವ ಮರಗಳಿಂದ ಕೂಡಿದೆ
- ಈ ರೀತಿಯ ಅರಣ್ಯಗಳು ಕರ್ನಾಟಕದ ಚಿಕ್ಕಮಗಳೂರು ,ಶಿವಮೊಗ್ಗ , ಮೈಸೂರು , ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಮಧ್ಯಭಾಗಗಳಲ್ಲಿ ಕಂಡುಬರುತ್ತವೆ .
3) ಎಲೆ ಉದುರಿದವ ಅರಣ್ಯಗಳು
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು
- ನಿತ್ಯ ಹರಿದ್ರರ್ಣ ಅರಣ್ಯಗಳಿಂದ ಪ್ರಣರ್ವಕ್ಕೆ ಹೋದಂತೆ ಕಡಿಮೆ ಪ್ರಮಾಣದ ಮಳೆಯನ್ನು ಅನುಸರಿಸಿ ಎಲೆ ಉದುರುವ ಅರಣ್ಯಗಳು ಕಂಡುಬರುತ್ತವೆ .
- ಈ ಅರಣ್ಯಗಳು ವಾರ್ಷಿಕವಾಗಿ 60 ರಿಂದ 120 ಸೆಂ.ಮೀ.ಗಳವ ರೆಗೆ ಮಳೆಯಾಗುವ ಪ್ರದೇಶಗಳಲ್ಲಿ ಕಂಡುಬರುತ್ತವೆ .
- ಈ ಅರಣ್ಯಗಳ ಮರಗಳ ನಡುವೆ ಬಿದಿರು ಮುಳ್ಳಿನ ಮರಗಳು , ಪೊದೆಗಳು ಮತ್ತು ಒರಟು ಜಾತಿಯ ಹುಲ್ಲು ಬಳ್ಳಿಗಳು ಒತ್ತೊತ್ತಾಗಿ ಬೆಳೆದಿರುತ್ತವೆ
- ಈ ಅರಣ್ಯಗಳಲ್ಲಿನ ಗಿಡಮರಗಳು ಅಗಲವಾದ ಎಲೆಗಳನ್ನು ಹೊಂದಿದ್ದು ಅವುಗಳು ನೀರು ಹೆಚ್ಚಾಗಿ ಆವಿಯಾಗುವುದನ್ನು ತಡೆಗಟ್ಟುವರರೊಂದಿಗೆ ಬೇಸಿಗೆಯಲ್ಲಿ ನೀರಾವಿಯಾಗುವುದನ್ನು ತಡೆಗಟ್ಟಲು ಎಲೆಗಳನ್ನು ಉದುರಿಸಿಕೊಳ್ಳುವವು . ಎಲೆಗಳು ವಸಂತ ಕಾಲದಲ್ಲಿ ಪುನಃ ಚಿಗುರುತ್ತವೆ .
- ಈ ಅರಣ್ಯಗಳು ಕರ್ನಾಟಕದ ಹಾಸನ , ಮೈಸೂರು , ಚಾಮರಾಜ ನಗರ , ತುಮಕೂರು , ಮಂಡ್ಯ , ಕೋಲಾರ , ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡುಬರುತ್ತವೆ .
- ವಾರ್ಷಿಕವಾಗಿ 60 ಸೆಂ . ಮೀ.ಗಿಂತ ಕಡಿಮೆ ಮಳೆಯಾಗುವ ಪ್ರದೇಶಗಳಲ್ಲಿ ಈ ಅರಣ್ಯಗಳು ಕಂಡು ಬರುತ್ತವೆ .
- ಅತಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗುವುದರಿಂದ ಇಲ್ಲಿ ಬೆಳೆಯುವ ಸಸ್ಯಗಳು ಅರಣ್ಯಗಳಂತೆ ಕಂಡುಬರುವುದಿಲ್ಲ
- ಕರ್ನಾಟಕ ರಾಜ್ಯದ ಅರಣ್ಯಗಳ ವಿಸ್ತೀರ್ಣದಲ್ಲಿ ಕುರುಚಲು ಅರಣ್ಯಗಳ ಪ್ರಮಾಣ ಹೆಚ್ಚಾಗಿರುತ್ತದೆ .
- ಈ ಅರಣ್ಯಗಳ ಪ್ರದೇಶಗಳಲ್ಲಿ ಮಳೆ ಕಡಿಮೆಯಾದಂತಲ್ಲ ಪೂರ್ವದ ಒಳನಾಡಿನಲ್ಲಿ ಬೊಂಬು , ಜಾಲಿ , ಈಚಲ ಮರಗಳು , ಪಾಪಸ್‌ಕಳ್ಳಿ , ಕರಿಜಾಲಿ , ಕತ್ತಾಳೆ ಮತ್ತು ವಿವಿಧ ಬಗೆಯ ಹುಲ್ಲು ಗಳನ್ನೊಳಗೊಂಡ ಗಿಡ – ಮರಗಳು , ಬಳ್ಳಿಗಳು ಬೆಳೆದಿರುತ್ತವೆ .
- ಈ ಅರಣ್ಯಗಳಲ್ಲಿನ ಉತ್ಪನ್ನಗಳು ಉರುವಲಿಗೆ ಮತ್ತು ವ್ಯವಸಾಯ ಉಪಕರಣಗಳ ತಯಾರಿಕೆಗೆ ಹೆಚ್ಚು ಉಪಯುಕ್ತವಾಗಿರುತ್ತವೆ .
- ಈ ಅರಣ್ಯಗಳು ಕರ್ನಾಟಕದ ಚಿತ್ರದುರ್ಗ , ಬಳ್ಳಾರಿ , ರಾಯ ಚೂರು , ಕೊಪ್ಪಳ , ಗುಲ್ಬರ್ಗ , ಬಿಜಾಪುರ , ಗದಗ , ಬೆಳಗಾವಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ
4) ಕುರುಚುಲು ಸಸ್ಯ
ವಾರ್ಷಿಕ ಸರಾಸರಿ ಮಳೆ 50 ಸೆ0. ಮೀ. ಕ್ಕಿ0ತ ಕಡಿಮೆ ಈ ಸಸ್ಯಗಳು ಕುಬ್ಜವಾಗಿರುತ್ತವೆ. ಬೇರುಗಳು ಆಳವಾಗಿರುತ್ತವೆ. ಎಲೆಗಳು ಮುಳ್ಳುಗಳಿ0ದ ಕೂಡಿರುತ್ತವೆ.ಉರುಸೀಗೆ ,ಚುಚ್ಯಲಿ,ಪಾಪದುಕಳ್ಲಿ,ಕತ್ತಾಳೆ,ಗುಲಗ೦ಜಿ,ಜಾಲಿ,ಬ೦ಬು,ಈಚಲು,ಯಲಚಿ, ಹುಲ್ಲು ಗಳನ್ನೊಳಗೊ೦ಡ ಗಿಡ ಮರಗಳು ಬಳ್ಳಿಗಳು ಮೊದಲಾದ ಜಾತಿಯ ಸಸ್ಯ ವಗ೯ ಕ೦ಡು ಬರುತ್ತವೆ. ಬಳ್ಳಾರಿ,ಗುಲ್ಬಗಾ೯,ಚಿತ್ರದುಗ೯,ಬೀದರ್ ಗದಗ,ರಾಯಚೂರು,ಬಾಗಲಕೋಟೆ,ಕೊಪ್ಪಳ,ಶಿವಮೂಗ್ಗ,ಧಾರವಾಡ,ಬಿಜಾಪೂರು.ಹಾವೇರಿ ಹಾಸನ. ಮು೦ತಾದ ಜಿಲ್ಲೆಯ ಕೆಲ ಭಾಗಗಳಲ್ಲಿ ಕ೦ಡು ಬರುತ್ತವೆ. ಸಸ್ಯವರ್ಗದಲ್ಲಿ, ಬೆರುಗಳು ಆಳವಾಗಿ ಮತ್ತು ಗಿಡಗಳು, ಕುಬ್ಜವಾಗಿರುತ್ತವೆ. ಎಲೆಗಳು ಮಂದವಾಗಿದ್ದು ಮುಳ್ಳುಗಳಿಂದ ಕೂಡಿರುತ್ತವೆ.
ಕರ್ನಾಟಕದ ಸ್ವಾಭಾವಿಕ ಸಸ್ಯವರ್ಗಗಳು