2nd puc political science chapter 6 question answer in kannada, 2nd puc political science chapter 6 notes in kannada, Download Political Science Chapter 6 Emerging Trends of Indian Politics Questions and Answers, Notes Pdf, 2nd PUC Political
2nd PUC Political Science Chapter 6 Notes in Kannada
ಈ ಲೇಖನದಲ್ಲಿ ದ್ವಿತೀಯ ಪಿಯುಸಿ ಗೆ ಸಂಬಂದಿಸಿದ ರಾಜ್ಯಶಾಸ್ತ್ರ ಪಠ್ಯದ ೬ ನೇ ಅಧ್ಯಾಯದ ಪ್ರಶ್ನೋತ್ತರಗಳನ್ನು ನೀಡಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಇತರ ವಿದ್ಯಾರ್ಥಿಗಳಿಗೂ ಈ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಅವರಿಗೂ ಉಪಯುಕ್ತ ಆಗುವಂತೆ ಸಹಕರಿಸಿ.
ಒಂದು ಅಂಕದ ಪ್ರಶ್ನೆಗಳು
1. ಕೊಯಲಿಶನ್’ನ ಮೂಲಪದ ಯಾವುದು ?
ಕೊಯಲಿಶನ್ ಲ್ಯಾಟಿನ್ ಪದವಾದ ‘ ಕೊಯಲಿಷಿಯ ಎಂಬುದರಿಂದ ಬಂದಿದೆ . ಕೊಯಿಲೆಷನ್ ಎಂದರೆ ಒಟ್ಟಿಗೆ ಅಟಿಸಿಯರ್ ಎಂದರೆ ಬೆಳೆಯುವುದು ಎಂದರ್ಥ .
2. CMP ಯನ್ನು ವಿಸ್ತರಿಸಿ .
Common Minimum Programme [ಸಮಾನ ಕನಿಷ್ಠ ಕಾರ್ಯಯೋಜನೆ ]
3. ಸಮ್ಮಿಶ್ರ ಸರ್ಕಾರದ ಅರ್ಥವೇನು ?
ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ .
4.ಚುನಾವಣಾ ಪೂರ್ವ ಮೈತ್ರಿ ಎಂದರೇನು ?
ಯಾವ ನಿರ್ದಿಷ್ಟ ರಾಜಕೀಯ ಪಕ್ಷವೂ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಪಡೆಯದಿದ್ದಾಗ ವಿವಿಧ ರಾಜಕೀಯ ಪಕ್ಷಗಳು ಬಂದಾಗಿ ಸರ್ಕಾರ ರಚನೆ ಮಾಡುತ್ತದೆ . ಇಂತಹ ಮೈತ್ರಿಗೆ ಚುನಾವಣಾ ಪೂರ್ವ ಮೈತ್ರಿ ಎನ್ನುವರು .
2nd PUC Political Science Chapter 6 Notes in Kannada
5. ಚುನಾವಣೋತ್ತರ ಮೈತ್ರಿ ಎಂದರೇನು ?
ಯಾವುದೇ ಪ್ರಬಲ ರಾಜಕೀಯ ಪಕ್ಷವು ಇನ್ನೊಂದು ಪ್ರಬಲ ರಾಜಕೀಯ ಪಕ್ಷದ ಜೊತೆ ಮೈತ್ರಿಯನ್ನು ಬಯಸುವುದಿಲ್ಲ . ಬದಲಾಗಿ ಚಿಕ್ಕ ಪುಟ್ಟ ರಾಜಕೀಯ ಪಕ್ಷಗಳ ಜೊತೆ ಮೈತ್ರಿಗೆ ಮುಂದಾಗುವುದಕ್ಕೆ ಚುನಾವಣೋತ್ತರ ಮೈತ್ರಿ ಎನ್ನುವರು .
6. ಅಸ್ಮಿತೆ ರಾಜಕಾರಣದ ಜನಕ ಯಾರು ?
ಅಸ್ಮಿತೆ ರಾಜಕಾರಣದ ಜನಕ ಎಲ್.ಎ. ಕಾಫ್‌ಮಾನ್ .
7.ಯಾವ ಚಳುವಳಿ ಮೂಲಕ ಅಸ್ಮಿತೆ ಯಾವ ಚಳುವಳಿಯ ಶಾಸನಬದ್ಧವಾಯಿತು ?
ಸಲಿಂಗಿಗಳ ಹಕ್ಕುಗಳ ಚಳುವಳಿಯ ಮೂಲಕ ಅಸ್ಮಿತೆ ರಾಜಕಾರಣ ಶಾಸನಬದ್ಧವಾಯಿತು.
8. LGBT ಯನ್ನು ವಿಸ್ತರಿಸಿ .
Lesbian Gay Bisexual Transgender . ಸಲಿಂಗಗಳ ಹಕ್ಕುಗಳ ಚಳುವಳಿ .
9 . ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸುಧಾರಕರನ್ನು ಹೆಸರಿಸಿ .
ಜಾತಿ ತಾರತಮ್ಯದ ವಿರುದ್ಧ ಹೋರಾಡಿದ ಸುಧಾರಕರೆಂದರೆ ಬುದ್ದ , ಬಸವಣ್ಣ , ಕನಕದಾಸ , ಕಬೀರದಾಸ , ರಾಮದಾಸ , ತುಕಾರಾಮ್ , ರಾಮಕೃಷ್ಣ ಪರಮಹಂಸ , ಸ್ವಾಮಿ ವಿವೇಕಾನಂದ ಮತ್ತಿತರು .
10. ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಒಂದು ಹೋರಾಟವನ್ನು ಹೆಸರಿಸಿ .
ಅಸ್ಸಾಂನ ಬೋಡೋಲ್ಯಾಂಡ್ ಬೇಡಿಕೆಗಳ ಹೋರಾಟಗಳು ಪ್ರಾದೇಶಿಕ ಅಸ್ಮಿತೆಗಾಗಿ ನಡೆದ ಒಂದು ಹೋರಾಟವಾಗಿದೆ .
11. ಯಾವ ದಿನವನ್ನು ಮತದಾರರ ದಿನವೆಂದು ಆಚರಿಸಲಾಗುತ್ತಿದೆ ?
ಜನವರಿ 25 , 1950 ನ್ನು ಮತದಾರರ ಮತದಾರರ ದಿನವೆಂದು ಆಚರಿಸಲಾಗುತ್ತಿದೆ .
12 , AASU ವನ್ನು ವಿಸ್ತರಿಸಿ .
All Assam Students Union .
13. ನೀವು ಗುರ್ತಿಸಿದ ಒಂದು ರಾಷ್ಟ್ರೀಯ ಸಮಸ್ಯೆಯನ್ನು ತಿಳಿಸಿ?
ಭ್ರಷ್ಟಾಚಾರ ರಾಷ್ಟ್ರೀಯ ಸಮಸ್ಯೆಗಳಲ್ಲಿ ಒಂದಾಗಿದೆ .
14. ಆಯಾತ ಮತ್ತು ನಿರ್ಯಾತ | ಆಮದು ರಫ್ತು ಮೇಲೆ ರಾಜ್ಯ ತೆರಿಗೆ ವಿಧಿಸಬಹುದೇ ?
ಆಯಾತ ಮತ್ತು ನಿರ್ಯಾತ / ಅಮದು , ರಫ್ತು ಮೇಲೆ ರಾಜ್ಯ ತೆರಿಗೆ ವಿಧಿಸಬಹುದು .
15. ಹಣಕಾಸು ಆಯೋಗವನ್ನು ಯಾರು ರಚಿಸುತ್ತಾರೆ ?
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಣಕಾಸು ಆಯೋಗವನ್ನು ರಚಿಸುತ್ತಾರೆ .
16. ಅಂತರರಾಜ್ಯ ವ್ಯಾಪಾರ ಮತ್ತು ವಾಣೀಜ್ಯ ಯಾರ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ ?
ಅಂತರರಾಜ್ಯ ವ್ಯಾಪಾರ ಮತ್ತು ವಾಣಿಜ್ಯ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಬರುತ್ತದೆ .
17. ಭಾರತದಲ್ಲಿ ಎಷ್ಟು ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ ?
ಭಾರತದಲ್ಲಿ 3 ಬಾರಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಹೇರಲಾಗಿದೆ .
2nd PUC Political Science Chapter 6 Notes in Kannada
18. ರಾಜ್ಯಪಾಲರ ಆಳ್ವಿಕೆಯ ಸಂಧರ್ಭದಲ್ಲಿ ರಾಜ್ಯಪಟ್ಟಿಯ ಮೇಲಿನ ಶಾಸನಾಧಿಕಾರವನ್ನು ಯಾರು ಚಲಾಯಿಸುತ್ತಾರೆ ?
ರಾಜ್ಯಪಾಲರ ಆಳ್ವಿಕೆಯ ಸಂಧರ್ಭದಲ್ಲಿ ರಾಜ್ಯಪಟ್ಟಿಯ ಮೇಲಿನ ಶಾಸನಾಧಿಕಾರವನ್ನು ರಾಷ್ಟ್ರಪತಿ ಚಲಾಯಿಸುತ್ತಾರೆ .
19. ರಾಜ್ಯ ಪಟ್ಟಿಯಲ್ಲಿನ ವಿಷಯಗಳನ್ನು ಒಂದು ವರ್ಷದ ಮಟ್ಟಿಗೆ ಕೇಂದ್ರಪಟ್ಟಿಗೆ ವರ್ಗಾಯಿಸುವ ಅಧಿಕಾರ ಯಾರಿಗಿದೆ ?
ಕೇಂದ್ರ ಸ ೦ ಸತ್ತು ಮಾತ್ರ ರಾಜ್ಯ ಪಟ್ಟಿಯಲ್ಲಿನ ವಿಷಯಗಳನ್ನು ಒಂದು ವರ್ಷದ ಮಟ್ಟಿಗೆ ಕೇಂದ್ರಪಟ್ಟಿಗೆ ವರ್ಗಾಯಿಸುವ ಅಧಿಕಾರವಿದೆ .
20. ಸಮವರ್ತಿ ಪಟ್ಟಿಯಲ್ಲಿನ ಒಂದು ವಿಷಯವನ್ನು ತಿಳಿಸಿ .
ಶಿಕ್ಷಣವು ಸಮವರ್ತಿ ಪಟ್ಟಿಯಲ್ಲಿನ ಒಂದು ಶಿಷಯವಾಗಿದೆ .
21. ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣಕಾಸಿನ ಅಧಿಕಾರಗಳು ಯಾರಲ್ಲಿರುತ್ತದೆ ?
ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಮಯದಲ್ಲಿ ಹಣಕಾಸಿನ ಅಧಿಕಾರಗಳು ರಾಷ್ಟ್ರಪತಿಗಳ ಕೈಯಲ್ಲಿರುತ್ತದೆ .
22 . ಭಯೋತ್ಪಾದನೆಯ ಮೂಲಪದ ಯಾವುದು ?
ಭಯೋತ್ಪಾದನೆಯ ಮೂಲಪದ ವಿಶೇಷ ರೀತಿಯ ರಾಜಕೀಯ ಹಿಂಸೆಯಾಗಿದೆ .
23 , ಭ್ರಷ್ಟಾಚಾರದ ಮೂಲಪದ ಯಾವುದು ?
ಭ್ರಷ್ಟಾಚಾರ ಅಥವಾ ” ಕರ ‘ ಎಂಬ ಪದ ಲ್ಯಾಟೀನ್ ಭಾಷೆಯ ” ಹಪಿಯರ್ ” ಎಂಬ ಮೂಲಪದದಿಂದ ಬಂದಿದ್ದು ‘ ಬೈಕ್ ‘ ಅಥವಾ ಛಿದ್ರಗೊಳಿಸು ಎಂಬ ಅರ್ಥವಾಗಿದೆ .
24. IAC ಯನ್ನು ವಿಸ್ತರಿಸಿ .
India Against Corruption ಭ್ರಷ್ಟಾಚಾರದ ವಿರುದ್ಧ ಭಾರತ .
25. ‘ ಈ ಭೂಮಿಯಲ್ಲಿ ಪ್ರತಿಯೊಬ್ಬರ ಅಗತ್ಯತೆಗೂ ಸಾಲುವಷ್ಟು ಇದೆಯೇ ಹೊರತು ದುರಾಸೆಗಲ್ಲ ‘ ಎಂದು ಹೇಳಿದವರು ಯಾರು ?
ಗಾಂಧೀಜಿಯವರು .
2nd PUC Political Science Chapter 6 Notes in Kannada
ಎರಡು ಅಂಕದ ಪ್ರಶ್ನೆಗಳು
1. ಜಗತ್ತಿನಲ್ಲಿ ಅಸ್ಥಿತ ಹೋರಾಟಕ್ಕೆ ಮುಖ್ಯ ಕಾರಣವೇನು ?
- ದುರಾಡಳಿತವೆಂಬುದು ಒಂದು ಪ್ರದೇಶದ ಆರ್ಥಿಕ , ಹಿಂದುಳಿದಿರುವಿಕೆಗೆ ಕಾರಣವಾಗಿ ಆ ಜನರ ಮತ್ತು ಪ್ರದೇಶದ ಆಧಾರದ ಅಸ್ಥಿತಿಯ ಉಗಮಕ್ಕೆ ಅವಕಾಶವಾಗುತ್ತದೆ .
- ಪ್ರಾದೇಶಿಕ ಪಕ್ಷಗಳ ಉಗಮ ಭಾಷೆ ಮತ್ತು ಪ್ರದೇಶಾದ್ಯಂತ ಸ್ಥಳೀಯ ಅರಿವನ್ನು ಮೂಡಿಸುತ್ತದೆ .
- ಅತಿಯಾದ ಬಡತನ , ಶೋಷಣೆ , ಅವಕಾಶಗಳ ವಂಚನೆ ಮತ್ತು ಕೆಲವು ಜನಾಂಗಗಳಿಗೆ ಇರುವ ಸೌಲಭ್ಯಗಳನ್ನು ಮೊಟಕುಗೊಳಿಸುವ ಪ್ರಯತ್ನ .
- ಜನಾ ೦ ಗಗಳ ಸಾಂಸ್ಕೃತಿಕ ನೆಲೆಗಟ್ಟನ್ನು ಹಾಳುಮಾಡಬಹುದೆಂಬ ಭೀತಿ
- ಸಾಕ್ಷರತೆ ಮತ್ತು ಆಸೆಗಳು , ಸಾಮಾಜಿಕ , ರಾಜಕೀಯ , ಜಾಗೃತಿ , ಅಸ್ಮಿತೆ ರಾಜಕೀಯಕ್ಕೆ ದಾರಿಮಾಡಿಕೊಡುತ್ತವೆ .
- ನೈಸರ್ಗಿಕ ಸ ೦ ಪತ್ತಿನ ಅಸಮಾನ ಹಂಚಿಕೆ , ಭೂಮಿಯನ್ನು ಕಳೆದುಕೊಳ್ಳುವ ಭೀತಿ , ರಾಜಕೀಯ ಶಕ್ತಿ ಮತ್ತು ಆರ್ಥಿಕ ಬೆಳವಣಿಗೆಗಳ ಕೊರತೆ ,
- ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾಮುಖ್ಯತೆ ಕಳೆದುಕೊಳ್ಳುವ ಭೀತಿ .
- ಭಾಷೆ , ಸಂಸ್ಕೃತಿಯನ್ನಾಧರಿಸಿದ ಅಸ್ಮಿತೆಯನ್ನು ಕಳೆದುಕೊಳ್ಳುವ ಭೀತಿ .
2nd PUC Political Science Chapter 6 Notes in Kannada
2. ಅಸ್ಮಿತೆ ರಾಜಕಾರಣದ ಅರ್ಥವನ್ನು ಬರೆಯಿರಿ .
ಅಸ್ಮಿತ ರಾಜಕೀಯವೆಂಬುದು ಒಂದು ರೀತಿಯಲ್ಲಿ ಸ್ವಂತಿಕೆ ವಿಧಾನ , ಸೌಖ್ಯದ ಹುಡುಕಾಟ , ಸಮುದಾಯವನ್ನು ತಲುಪುವುದು ಎನ್ನಲಾಗಿದೆ . ಇದು ಬಲಶಾಲಿಯಾಗಲು , ಪ್ರಾತಿನಿಧ್ಯ ಪಡೆಯಲು ಮತ್ತು ಸಾಮಾಜಿಕ ಗುಂಪನ್ನು ಗುರುತಿಸಲು ಸದಾ ಪ್ರಯತ್ನಿಸುತ್ತಿರುತ್ತದೆ .
ಅಸ್ಥಿತ ರಾಜಕೀಯವೆಂಬುದು ಜನಾಂಗ , ಭಾಷೆ , ಧರ್ಮ , ಅಂಶವನ್ನು ಆಧರಿಸಿದ ಒಬ್ಬ ವ್ಯಕ್ತಿಯ ವೈಯಕ್ತಿಕ ಅರ್ಥ ನೀಡುತ್ತದೆ . ಇದೊಂದು ಗುರುತಿಸಿಕೊಳ್ಳುವಿಕೆಯ ರಾಜಕೀಯವಾಗಿದ್ದು ಅದಕ್ಕಾಗಿ ಪ್ರಯತ್ನಿಸಲಾಗುತ್ತಿರುತ್ತದೆ .
3. ಸಮ್ಮಿಶ್ರ ಸರ್ಕಾರ ಎಂದರೇನು ?
ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ ,
ಎಫ್.ಎ.ಆಗ್ ರವರ ಅಭಿಪ್ರಾಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದುಗೂಡಿ ಸರ್ಕಾರ ಅಥವಾ
ಮಂತ್ರಿಮಂಡಲವನ್ನು ರಚಿಸುವ ಒಂದು ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ ಎನ್ನುವರು .
2nd PUC Political Science Chapter 6 Notes in Kannada
4. ಸಮ್ಮಿಶ್ರ ಸರ್ಕಾರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ಉದಾಹರಣೆ ಕೊಡಿ .
ಭಾರತ , ಫ್ರಾನ್ಸ್ .
5.ಸಾಮೂಹಿಕ ನಾಯಕತ್ವ ಎಂದರೇನು ?
ಒಂದು ರಾಷ್ಟ್ರದ ಆಡಳಿತಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವಾಗ ಆಡಳಿತದ ಎಲ್ಲಾ ಮುಖ್ಯಸ್ಥರ ಜೊತೆ ವಿಚಾರ ವಿನಿಮಯ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ . ಇದನ್ನು ಸಾಮೂಹಿಕ ನಾಯಕತ್ವ ಎನ್ನುವರು .
6. ಸಮ್ಮಿಶ್ರ ಸರ್ಕಾರ ರಚನೆಯಾಗುವ ಎರಡು ಸಂದರ್ಭಗಳಾವುವು ?
- ಸಮ್ಮಿಶ್ರ ಸರ್ಕಾರ ರಚನೆಯಾಗುವ ಈ ವ್ಯವಸ್ಥೆ ಚುನಾವಣಾ ಪೂರ್ವ ಅಥವಾ ಚುನಾವಣೋತ್ತರ ಮೈತ್ರಿಯ ಫಲ ಯಾವ ನಿರ್ದಿಷ್ಟ ರಾಜಕೀಯ ಪಕ್ಷವೂ ಸ್ವಂತ ಬಲದಿಂದ ಸ್ಪಷ್ಟ ಬಹುಮತ ಪಡೆಯದಿದ್ದಾಗ ವಿವಿಧ ರಾಜಕೀಯ ಪಕ್ಷಗಳು ಒಂದಾಗಿ ಸರ್ಕಾರ ರಚನೆ ಮಾಡುತ್ತದೆ .
- ಯಾವುದೇ ಪ್ರಬಲ ರಾಜಕೀಯ ಪಕ್ಷವು ಇನ್ನೊಂದು ಪ್ರಬಲ ರಾಜಕೀಯ ಪಕ್ಷದ ಜೊತೆ ಮೈತ್ರಿಗೆ ಮುಂದಾಗುತ್ತದೆ
2nd PUC Political Science Chapter 6 Notes in Kannada
7. ಸಮ್ಮಿಶ್ರ ಸರ್ಕಾರವನ್ನು ವ್ಯಾಖ್ಯಾನಿಸಿ .
- ಪಕ್ಷಗಳ ಒ೦ದುಗೂಡುವಿಕೆ ಅಥವಾ ಪಕ್ಷಗಳ ಒಕ್ಕೂಟವಾಗಿದೆ . ವಿವಿಧ ರಾಜಕೀಯ ಶಕ್ತಿಗಳು ಒಂದುಗೂಡಿದಾಗ ಸಮ್ಮಿಶ್ರ ಸರ್ಕಾರ ರಚನೆಯಾಗುತ್ತದೆ .
- ಎಫ್ . ಎ . ಆಗ್ ರವರ ಅಭಿಪ್ರಾಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಸದಸ್ಯರು ಒಂದುಗೂಡಿ ಸರ್ಕಾರ ಅಥವಾ ಮಂತ್ರಿಮಂಡಲವನ್ನು ರಚಿಸುವ ಒಂದು ವ್ಯವಸ್ಥೆ ,
- ವಿವಿಧ ರಾಜಕೀಯ ಪಕ್ಷಗಳು ಒಂದುಗೂಡಿ ಆಳ್ವಿಕೆ ನಡೆಸುವ ವ್ಯವಸ್ಥೆಯೇ ಸಮ್ಮಿಶ್ರ ಸರ್ಕಾರ .
8. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎಂದರೇನು ?
ಸುಗಮ ಹಾಗೂ ದಕ್ಷ ಆಡಳಿತಕ್ಕೆ ಅಂಗ ಪಕ್ಷಗಳು ಸಾಮಾನ್ಯ ಕಾರ್ಯಕ್ರಮವನ್ನು ರೂಪಿಸುವುದು ಸಾಮಾನ್ಯವಾಗಿದೆ . 2004 ರಲ್ಲಿ ಯು.ಪಿ.ಎ ಮೈತ್ರಿಕೂಟ “ ನ್ಯಾಷನಲ್ ಕಾಮನ್ ಮಿನಿಮಮ್ ಪ್ರೋಗ್ರಾಮ್ ” ನ್ನು ಅಂಗೀಕರಿಸುವುದಕ್ಕೆ ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎನ್ನುವರು .
ಸಾಮಾಜಿಕ ಸಾಮರಸ್ಯ , ರಕ್ಷಣೆ , ಕಾನೂನು ಅನುಷ್ಠಾನ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವವರಿಗೆ ಶಿಕ್ಷೆ ನೀಡುವ ಕಾರ್ಯಕ್ರಮವನ್ನು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಎನ್ನುವರು .
9 . NDA ಯ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ
- ಶಿವಸೇನಾ ಪಕ್ಷ
- ತೆಲುಗು ದೇಶಂ
10. UPA ಯ ಎರಡು ಮಿತ್ರ ಪಕ್ಷಗಳನ್ನು ಹೆಸರಿಸಿ.
- ಉತ್ತರ ಪ್ರದೇಶದ B.S.P ( ಪಕ್ಷ )
- ಬಿಹಾರದ R.J.D ( ಪಕ್ಷ
2nd PUC Political Science Chapter 6 Notes in Kannada
11. ರಾಜ್ಯ ಪ್ರೇರಿತ ಭಯೋತ್ಪಾದನೆ ಎಂದರೇನು ?
ರಾಜ್ಯ ಪ್ರೇರಿತ ಬಯೋತ್ಪಾದನೆ ಎಂದರೆ ಪ್ರಪಂಚದಾದ್ಯಂತ , ಭಯೋತ್ಪಾದನೆ ಸಂಘಟನೆಗಳಿಗೆ ತರಬೇತಿ ಕೇಂದ್ರಗಳಿಗೆ ಆಶ್ರಯ ನೀಡಿದೆ . ಇಲ್ಲಿನ ಆತಂಕವಾದಿಗಳನ್ನು ಸಮರ ಸೇನಾನಿಗಳೆಂದು ಬಿಂಬಿಸಲಾಗುತ್ತದೆ . ಬಡತನ , ನಿರುದ್ಯೋಗ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರನ್ನು ವಿವಿಧ ಆಸೆ ಆಮಿಷಗಳನ್ನು ತೋರಿಸಿ ತಲೆಕೆನ್ನು ಬಳಸಿಕೊಳ್ಳುತ್ತಿರುವುದು ಈ ಭಯೋತ್ಪಾದನೆಯ ಬೆಳವಣಿಗೆ ಪ್ರಮುಖ ಕಾರಣವಾಗಿದೆ .
12. ಸಾಮಾನ್ಯ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಯಾವ ವಿಷಯದಲ್ಲಿ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಬಹುದು.
ರಾಷ್ಟ್ರದ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ , ರಾಜ್ಯಗ ರೈಲ್ವೆ , ಆಸ್ತಿ , ಸಂಪರ್ಕ ಮತ್ತು ಸಾರಿಗೆ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಬಹುದು .
2nd PUC Political Science Chapter 6 Notes in Kannada
13. ಭ್ರಷ್ಟಾಚಾರ ಎಂದರೇನು ?
ಸ್ಪಷ್ಟ ಮತ್ತು ಉದ್ದೇಶಪೂರ್ವಕವಾಗಿ ಒಬ್ಬನ ಸ್ಥಾನವನ್ನು ಅಧಿಕಾರವನ್ನು ಅಥವಾ ಸಂಪನ್ಮೂಲಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವೈಯಕ್ತಿಕ ಉಪಯುಕ್ತತೆಗೆ ಶೋಷಣೆ ಮಾಡುವುದೇ ಭ್ರಷ್ಟಾಚಾರ ಎಂದು ಕರೆಯುವರು .
14. ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಇರುವ ಎರಡು ಅಡಚಣೆಗಳಾವುವು ?
ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡು ಇರುವ ಎರಡು ಅಡಚಣೆಗಳೆಂದರೆ ಆಡಳಿತದಲ್ಲಿ ಅದಕ್ಷತೆ ಪ್ರಜಾತಂತ್ರದ ಮೌಲ್ಯಗಳ ಕುಸಿತ .
15. ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ನಡೆದ ಒಂದು ಆಂದೋಲನವನ್ನು ಹೆಸರಿಸಿ .
ಆಂದೋಲನವೆಂದರೆ ಅಣ್ಣಾ ಹಜಾರೆ ನೇತೃತ್ವದಲ್ಲಿ ಪ್ರಬಲವಾದ ಭ್ರಷ್ಟಾಚಾರ ನಿರ್ಮೂಲನೆಗೊಳಿಸಲು ನಡೆದ ಒಂದು ಜನಾಂದೋಲನ ಭ್ರಷ್ಟಾಚಾರದ ವಿರುದ್ಧ ಭಾರತ .
2nd PUC Political Science Chapter 6 Notes in Kannada
ದ್ವಿತೀಯ ಪಿ ಯು ಸಿ ರಾಜ್ಯಶಾಸ್ತ್ರ ನೋಟ್ಸ್
ಅದ್ಯಾಯ :- 02- ಚುನಾವಣೆಗಳು ಮತ್ತು ಭಾರತದಲ್ಲಿ ಪಕ್ಷ ಪದ್ಧತಿ
ಅದ್ಯಾಯ :- 03- ಭಾರತದಲ್ಲಿ ಆಡಳಿತ ಯಂತ್ರ
ಅದ್ಯಾಯ :- 04- ಸಾಮಾಜಿಕ ಚಳುವಳಿಗಳು ಮತ್ತು ಅವುಗಳ ರಾಜಕೀಯ ಪರಿಣಾಮಗಳು notes
ಅದ್ಯಾಯ :- 03 –ರಾಷ್ಟ್ರನಿರ್ಮಾಣ ಮತ್ತು ಪ್ರಜಾಸತ್ತೆ ಎದುರಿಸುತ್ತಿರುವ ಸವಾಲುಗಳು
2nd puc political science 5th chapter notes in kannada